ಬೆಂಗಳೂರು:ಸಿ ಟಿ ರವಿ ವಿಚಾರವಾಗಿ ಛಲವಾದಿ ನಾರಾಯಣಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.ಈ ಪ್ರಕರಣದಲ್ಲಿ ಏನಾಗ್ತಿದೆ ಅಂತ ಗೃಹ ಸಚಿವರು ಯಾವಾಗ್ಲೂ ತಮ್ಮ ಬಳಿ ಮಾಹಿತಿ ಇಲ್ಲ ಅಂತಾರೆ.ಗೃಹ ಸಚಿವರಿಗೆ ಸರಿಯಾದ ಮಾಹಿತಿಯನ್ನೇ ಈ ಸರ್ಕಾರ ಕೊಡ್ತಿಲ್ಲ.ಗೃಹ ಮಂತ್ರಿಯವರನ್ನೇ ಈ ಸರ್ಕಾರ ಕತ್ತಲೆಯಲ್ಲಿ ಇಟ್ಟಿದೆ, ಗೃಹ ಸಚಿವರನ್ನೇ ಮೂಲೆಗೆ ತಳ್ಳಿದೆ ಎಂದರು . https://ainlivenews.com/cancel-the-press-conference-called-for-our-metro-fare-increase/ ಇನ್ನೂ ಆರೆಸೆಸ್, ಬಿಜೆಪಿ ಸಂವಿಧಾನ ವಿರೋಧಿಗಳು ಎಂಬ ಹರಿಪ್ರಸಾದ್ ಹೇಳಿಕೆ ವಿಚಾರವಾಗಿ ಎಲ್ಲಾದರೂ ಸಂವಿಧಾನಕ್ಕೆ ವಿರುದ್ಧವಾಗಿ ಬಿಜೆಪಿ ನಡೆದುಕೊಂಡ ಒಂದೇ ಒಂದು ಘಟನೆ ತೋರಿಸಲಿ. ಮೀಸಲಾತಿ ಪರ, ಸಂವಿಧಾನ ಪರ ಇರೋದು ಬಿಜೆಪಿ.ಕಾಂಗ್ರೆಸ್ ಸಂವಿಧಾನ ವಿರೋಧಿ ಪಕ್ಷ.ರಾಹುಲ್ ಗಾಂಧಿ ಭಾರತದ ವಿರುದ್ಧ ಹೋರಾಟ ಮಾಡ್ತಿದ್ದೇವೆ ಅಂದ್ರು ಹಾಗಾದ್ರೆ ರಾಹುಲ್ ಗಾಂಧಿಯವರನ್ನು ಉಚ್ಛಾಟಿಸಿ ನೋಡೋಣ.ರಾಹುಲ್ ಮಾನಸಿಕ ಸ್ಥಿಮಿತ ಸರಿ ಇದೆಯೇ ಅಂತ ಪ್ರಶ್ನೆ ಮಾಡಿ ನೋಡೋಣ ಎಂದು ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
Author: AIN Author
ಬೆಂಗಳೂರು:- ಮೆಟ್ರೋ ದರ ಏರಿಕೆ ಸಂಬಂಧ ಕರೆಯಲಾಗಿದ್ದ ಸುದ್ದಿಗೋಷ್ಠಿ ರದ್ದಾಗಿದೆ. ಮೆಟ್ರೋ ದರ ಏರಿಕೆ ಸಂಬಂಧ ಇಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ ಕರೆದಿದ್ದ ಸುದ್ದಿಗೋಷ್ಠಿಯನ್ನು ರದ್ದು ಮಾಡಲಾಗಿದೆ. https://ainlivenews.com/important-news-for-bengaluru-commuters-variation-in-our-metro-traffic-tomorrow/ ಸಭೆಯಲ್ಲಿ ದರ ಏರಿಕೆ ಸಂಬಂಧ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇಂದು ಮಧ್ಯಾಹ್ನ 3 ಗಂಟೆಗೆ ಬಿಎಂಆರ್‌ಸಿಎಲ್ ಸುದ್ದಿಗೋಷ್ಠಿ ನಡೆಸಿ ದರ ಏರಿಕೆಯ ಬಗ್ಗೆ ವಿವರಣೆ ನೀಡಬೇಕಿತ್ತು. ಆದರೆ ಬಿಎಂಆರ್‌ಸಿಎಲ್ ಕರೆದಿದ್ದ ಸುದ್ದಿಗೋಷ್ಠಿಯನ್ನು ದಿಢೀರ್ ರದ್ದು ಮಾಡಿದೆ. ಸುದ್ದಿಗೋಷ್ಠಿ ರದ್ದಿಗೆ ಕಾರಣ ನೀಡಿಲ್ಲ. ದರ ಏರಿಕೆ ಖಚಿತವಾಗಿದ್ದರೂ ಕನಿಷ್ಠ, ಗರಿಷ್ಠದ ಜೊತೆ ಮಧ್ಯದಲ್ಲಿ ಬರುವ ನಿಲ್ದಾಣಗಳಿಗೆ ಎಷ್ಟು ದರ ನಿಗದಿ ಮಾಡಬೇಕು ಎನ್ನುವುದರ ಬಗ್ಗೆ ಗೊಂದಲ ಇರುವ ಕಾರಣ ಸುದ್ದಿಗೋಷ್ಠಿಯನ್ನು ರದ್ದು ಮಾಡಲಾಗಿದೆ ಎನ್ನಲಾಗುತ್ತಿದೆ.
ಬೆಂಗಳೂರು:- ಬೆಂಗಳೂರು ಪ್ರಯಾಣಿಕರಿಗೆ ಮಹತ್ವದ ಸುದ್ದಿ ಇದ್ದು, ನಾಳೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. https://ainlivenews.com/j-bangalore-aero-show-2025-from-23rd-meat-sale-banned-at-yalahanka/ ನಾಳೆ ನೇರಳೆ ಮಾರ್ಗದಲ್ಲಿನ ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ, ಮೆಟ್ರೋ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ಬೆಳಗ್ಗೆ 07:00 ರಿಂದ 10.00 ರವರೆಗೆ ಮೂರು ಗಂಟೆಗಳ ಕಾಲ ಮೆಟ್ರೋ ರೈಲು ಸೇವೆ ಇರುವುದಿಲ್ಲ. ನೇರಳೆ ಮಾರ್ಗದ ಇತರ ವಿಭಾಗಗಳಲ್ಲಿ ಬರುವ, ಚಲ್ಲಘಟ್ಟ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್ ಹಾಗೂ ವೈಟ್ ಫೀಲ್ಡ್ (ಕಾಡುಗೋಡಿ) ಮತ್ತು ಇಂದಿರಾನಗರ ಮೆಟ್ರೋ ನಿಲ್ದಾಣಗಳ ನಡುವೆ ನಿಗದಿತ ವೇಳಾಪಟ್ಟಿಯಂತೆ ರೈಲು ಸೇವೆಗಳು ಎಂದಿನಂತೆ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗುತ್ತವೆ. ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ, ಮೆಟ್ರೋ ನಿಲ್ದಾಣಗಳ ನಡುವೆ ವಾಣಿಜ್ಯ ಸೇವೆ ಭಾಗಶಃ ಸ್ಥಗಿತ ಆಗಲಿದೆ. ಹಸಿರು ಮಾರ್ಗದ ರೈಲು ಸಮಯಗಳಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಮತ್ತು ಎಂದಿನಂತೆ ಮೆಟ್ರೋ ರೈಲುಗಳ…
ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಏರೋ ಶೋ 2025 ನಡೆಯಲಿರುವ ಹಿನ್ನೆಲೆ, ಜ. 23 ರಿಂದ ಯಲಹಂಕ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ನಿಷೇಧ ಮಾಡಲಾಗಿದ್ದು, ಕ್ರೇನ್ ಸ್ಥಗಿತಕ್ಕೆ ಸೂಚನೆ ಕೊಡಲಾಗಿದೆ. https://ainlivenews.com/muda-case-should-be-handed-over-to-cbi-before-siddaramaiah-resigns/ ಯಲಹಂಕ ವ್ಯಾಪ್ತಿಯ ವಾಯುಸೇನಾ ನೆಲೆಯಲ್ಲಿ ಫೆ.2 ರಿಂದ 14ರವರೆಗೆ ಅಂತರಾಷ್ಟ್ರೀಯ ಮಟ್ಟದ ‘ಏರೋ ಇಂಡಿಯಾ-2025’ ನಡೆಯಲಿದೆ. ಈ ನಿಟ್ಟಿನಲ್ಲಿ ಜನವರಿ 23 ರಿಂದ ಫೆಬ್ರವರಿ 17 ರವರೆಗೂ ಮಾಂಸ ಮಾರಾಟಕ್ಕೆ ಬಿಬಿಎಂಪಿ ನಿಷೇಧಿಸಿದ್ದು, ಕ್ರೇನ್ಗಳನ್ನು ಬಳಸದಂತೆ ಸೂಚಿಸಲಾಗಿದೆ. ಯಲಹಂಕದ 13 ಕಿ.ಮಿ ಸುತ್ತಮುತ್ತ ಮಾಂಸ ಮಾರಾಟ ಹಾಗೂ ಉದ್ದಿಮೆಗಳನ್ನು ಬಂದ್ ಮಾಡಲು ಸೂಚನೆ ನೀಡಲಾಗಿದೆ. ಒಂದು ವೇಳೆ ನಿಮಯ ಉಲ್ಲಂಘನೆ ಮಾಡಿದರೆ ಬಿಬಿಎಂಪಿ ಕಾಯ್ದೆ 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ 1937 ಪ್ರಕಾರ ಕಾನೂನು ಕ್ರಮಕ್ಕೆ ಯಲಹಂಕ ವಲಯ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಏಷ್ಯಾದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವಾದ ಏರೋ ಇಂಡಿಯಾ 2025, ಫೆಬ್ರವರಿ 10 ರಿಂದ 14 ರವರೆಗೆ ಬೆಂಗಳೂರಿನ ಯಲಹಂಕ ವಾಯುಪಡೆ…
ಬೆಂಗಳೂರು:- ಸಿದ್ದರಾಮಯ್ಯ ರಾಜೀನಾಮೆ ಕೊಡೋ ಮುಂಚಿತವಾಗಿ ಮುಡಾ ಪ್ರಕರಣ ಸಿಬಿಐಗೆ ಹಸ್ತಾಂತರಿಸಲಿ ಎಂದು ಬಿವೈ ವಿಜಯೇಂದ್ರ ಹೇಳಿದ್ದಾರೆ. https://ainlivenews.com/its-wrong-to-say-bachcha-to-vijayendra-prahlad-joshi/ ಈ ಸಂಬಂಧ ಮಾತನಾಡಿದ ಅವರು, ಮೈಸೂರು ಮುಡಾ ಹಗರಣ ಸಂಬಂಧ ಸಿಎಂ ಭಂಡತನ ಬಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಡುವ ಮುಂಚಿತವಾಗಿ ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡಬೇಕು ಎಂದರು. ಮುಡಾ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸ್ನೇಹಮಯಿ ಕೃಷ್ಣ ಅವರು ಬಯಲಿಗೆಳೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಇದರ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತಾ ಬಂದಿದ್ದೇವೆ. ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳನ್ನು ತುದಿಗಾಲಲ್ಲಿ ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ. ಹಗರಣದಿಂದ ಮುಡಾಕ್ಕೆ ಕೋಟಿಗಟ್ಟಲೆ ನಷ್ಟವಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಡವರಿಗೆ ಮಂಜೂರಾಗಬೇಕಿದ್ದ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು, ದಲ್ಲಾಳಿಗಳಿಗೆ ನೀಡಿದ್ದು ಸ್ಪಷ್ಟವಾಗಿದೆ. ಇದರಿಂದ ಸರ್ಕಾರ ಮತ್ತು ಮುಡಾಕ್ಕೆ ಸಾವಿರಾರು ಕೋಟಿ ನಷ್ಟವಾದುದು ಮತ್ತೊಮ್ಮೆ ಋಜುವಾತಾಗಿದೆ ಎಂದು ವಿಶ್ಲೇಷಿಸಿದರು.
ಬೆಂಗಳೂರು:-ವಿಜಯೇಂದ್ರಗೆ ಬಚ್ಚಾ ಎಂದಿದ್ದು ತಪ್ಪು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. https://ainlivenews.com/marriage-with-minor-for-non-payment-of-loan-pocso-case-against-both/ ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡಿತ್ತು, ಆದರೆ ಸಿದ್ದರಾಮಯ್ಯ ಸರ್ಕಾರದಲ್ಲಿ ಕಮೀಶನ್ ಪ್ರಮಾಣ ಶೇಕಡ 50 ದಾಟಿದೆ ಎಂದರು. ರಮೇಶ್ ಜಾರಕಿಹೊಳಿ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ಬಚ್ಚಾ ಎಂಬ ಪದ ಬಳಸಿದ್ದು ತಪ್ಪು, ಶಾಸಕ ಹಾಗೆಲ್ಲ ಮಾತಾಡಬಾರದು, ವಿಜಯೇಂದ್ರರನ್ನು ರಾಜ್ಯಾಧ್ಯಕ್ಷನಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಯ್ಕೆ ಮಾಡಿದ್ದಾರೆ, ಅದನ್ನು ಯಾರೂ ಮರೆಯಬಾರದು ಎಂದು ಜೋಶಿ ಹೇಳಿದರು.
ಬೆಂಗಳೂರು : ಇಲ್ಲಿಯವರೆಗೆ ಯಾವುದೇ ಸ್ಥಾನವನ್ನು ಹುಡುಕಿಕೊಂಡು ಹೋಗುವನಲ್ಲ, ಹುಡುಕಿಕೊಂಡು ಹೋದರೂ ಸಿಗುವ ಸ್ಥಾನ ಅಲ್ಲ ಎಂದು ಡಿಕೆಶಿ ಬೇಸರ ವ್ಯಕ್ತಪಡಿಸಿದರು. https://ainlivenews.com/back-to-back-defeats-no-family-travel-allowed-during-tour-bcci-brings-new-rules/ ಈ ಬಗ್ಗೆ ಮಾತನಾಡಿದ ಅವರು, ಇಲ್ಲಿಯ ನನ್ನ ಕೆಲಸ ಗುಣ ,ಸಂಘಟನೆ ನೋಡಿ ಪಾರ್ಟಿಯಿಂದ ಆಫರ್ ಮಾಡುತ್ತಿದ್ದರು, ನನಗೆಯೇ ಹುಡುಕಿ ಹೋಗಿಲ್ಲ, ಹುಡುಕಿಕೊಂಡು ಹೋದರು ಸಿಗುವ ಸ್ಥಾನವಿಲ್ಲ, ಯಾರಿಗೇ ಆದ್ರೂ ಆಫರ್ ಮಾಡಬೇಕು ನಾವಾಗೆ ಹೋದರೆ ಸಿಗಲ್ಲ ಎಂದು ಟೀಕಿಸಿದರು. ನಮ್ಮ ಪಕ್ಷದಲ್ಲಿ ಆಕಾಂಕ್ಷಿಯಾರಲ್ಲಿ ನಾಯಕತ್ವ ಗುಣ ,ಸಂಘಟನೆ ನೋಡಿ ಪಾರ್ಟಿಯಲ್ಲಿ ಆಫರ್ ಮಾಡ್ತಾರೆ, ಬೇರೆ ಪಾರ್ಟಿಗಳಲ್ಲಿ ಗೊತ್ತಿಲ್ಲ, ಒಂದು ವೇಳೆ ಸ್ಥಾನ ಸಿಗದಿದ್ದರೆ ಆತನಲ್ಲಿ ಏನೋ ಸಮಸ್ಯೆ ಇದೇ ಎಂದರ್ಥ, ಹೀಗಾಗಿ ನಾವಾಗೆ ಅಧಿಕಾರ ಕೇಳಿಕೊಂಡು ಹೋಗಬಾರದು ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು. ಪಕ್ಷದಲ್ಲಿ ಏನೇ ತೀರ್ಮಾನ ತೆಗೆದುಕೊಳ್ಳಲು ಗಾಂಧಿ,ನೆಹರೂ, ಇಂದಿರಾ ಗಾಂಧಿ ಕುಳಿತ ಜಾಗದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಕುಳಿತಿದ್ದಾರೆ. ಅವರಿಗೆ ಕಣ್ಣು,ಕಿವಿ ಇದೆ, ಎಲ್ಲ ವಿಚಾರ ಗೊತ್ತಿದೆ ಜೊತೆಗೆ ಬ್ಲಾಕ್ ಅಧ್ಯಕ್ಷರಿಂದ ಹಿಡಿದು ರಾಷ್ಟ್ರದ…
ಆನೇಕಲ್:-ಆನೇಕಲ್ ಪಟ್ಟಣದ ರಾಘವೇಂದ್ರ ಭವನ ರಸ್ತೆಯಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಬೈಕ್ ಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. https://ainlivenews.com/this-is-the-2nd-contestant-to-make-it-to-the-finals-everyone-is-shocked-by-hanumanthus-surprising-decision/ ಮೃತ ಮಹಿಳೆಯನ್ನು 40 ವರ್ಷದ ಸೀಮಾಭಾನು.ಮಹಿಳೆಯು, ತನ್ನ ಪತಿ ಶಹಬಾಜ್ ಜೊತೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಅತಿವೇಗವಾಗಿ ಬಂದ ಟಿಪ್ಪರ್ ಚಾಲಕ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ರಭಸಕ್ಕೆ ಬೈಕ್ನಿಂದ ನಿಯಂತ್ರಣ ತಪ್ಪಿ ಸೀಮಾಭಾನು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಮಹಿಳೆ ತಲೆ ಮೇಲೆ ಟಿಪ್ಪರ್ ಲಾರಿ ಚಕ್ರ ಹರಿದ ಹಿನ್ನೆಲೆ ತೀವ್ರ ರಕ್ತಸ್ರಾವವಾಗಿ ಮಹಿಳೆ ಸೀಮಾಭಾನು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯಿಂದ ಪತಿ ಶಹಬ್ಬಾಜ್ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರು:- ಕೇಂದ್ರ ರೈಲ್ವೆ ಇಲಾಖೆಯಿಂದ ಬೆಂಗಳೂರಿಗರಿಗೆ ಗುಡ್ ನ್ಯೂಸ್ ಸಿಕ್ಕಿದೆ. ನಗರದಲ್ಲಿ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರಿಂದ, ನಗರದ ರೈಲ್ವೆ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚುತ್ತಿದೆ. ಹೀಗಾಗಿ, ಬೆಂಗಳೂರು ಹೊರವಲಯದಲ್ಲಿ ಎರಡು ರೈಲ್ವೆ ಟರ್ಮಿನಲ್ಗಳನ್ನು ತೆರೆಯಲು ಕೇಂದ್ರ ರೈಲ್ವೆ ಇಲಾಖೆ ಮುಂದಾಗಿದೆ. https://ainlivenews.com/rs-21000-subsidy-for-pregnant-women-rs-500-subsidy-for-lpg-cylinder-bjp-announces/ ಈ ಸಂಬಂಧ ಮಾತನಾಡಿದ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮಾದರಿಯಲ್ಲಿ ಎರಡು ಹೊಸ ರೈಲ್ವೆ ಟರ್ಮಿನಲ್ಗಳನ್ನು ನಿರ್ಮಾಣ ಮಾಡಲಾಗುವುದು. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ನೆಲಮಂಗಲ, ಚಿಕ್ಕಬಳ್ಳಾಪುರ ಜಿಲ್ಲೆಯ ದೇವನಹಳ್ಳಿಯಲ್ಲಿ ಹೊಸದಾಗಿ ರೈಲ್ವೆ ನಿಲ್ದಾಣ ನಿರ್ಮಣ ಮಾಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಹೊಸ ರೈಲ್ವೆ ನಿಲ್ದಾಣ ಕಾಮಗಾರಿಗೆ ತಯಾರಿ ಆರಂಭವಾಗಿದೆ. 800 ಎಕರೆ ಪ್ರದೇಶದಲ್ಲಿ ರೈಲ್ವೆ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುವುದು. ಸದ್ಯ ಅಧಿಕಾರಿಗಳಿಂದ ಜಾಗ ಗುರುತಿಸುವ ಕೆಲಸ ಆಗಿದೆ. ಶೀಘ್ರದಲ್ಲೇ ಕೇಂದ್ರ ಸರ್ಕಾರ ಕೂಡ ಇದಕ್ಕೆ ಒಪ್ಪಿಗೆ ಸೂಚಿಸುವ ಸಾಧ್ಯತೆಯಿದೆ. ಜನ ದಟ್ಟಣೆ ತಪ್ಪಿಸುವಲ್ಲಿ ಈ ಟರ್ಮಿನಲ್ಗಳು ಸಹಕಾರಿಯಾಗಲಿವೆ…
ಮೈಸೂರು:- ಎಟಿಎಂಗೆ ಹಣ ತುಂಬದೇ ವಂಚಿಸಿದ ಇಬ್ಬರ ವಿರುದ್ಧ FIR ದಾಖಲಾಗಿದೆ. ಎಟಿಎಂಗೆ ಹಣ ತುಂಬದೇ ತೆಗೆದುಕೊಂಡ ಹೋದ ಆರೋಪದಲ್ಲಿ ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ವಿರುದ್ಧ ಮೈಸೂರು ಜಿಲ್ಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ. https://ainlivenews.com/crop-nutrient-supplementation-technology-development-of-mycorrhiza-biofertilizer/ ಟಿಎಲ್ ಎಂಟರ್‌ಪ್ರೈಸಸ್‌ನಲ್ಲಿ ಅಕ್ಷಯ್ ಕೆಲಸ ಮಾಡುತ್ತಿದ್ದ. ಟಿಎಲ್ ಎಂಟರ್‌ಪ್ರೈಸಸ್, ಎಟಿಎಂಗೆ ಹಣ ತುಂಬುವ ಏಜೆನ್ಸಿ ಪಡೆದಿತ್ತು. ಮೈಸೂರು ಜಿಲ್ಲೆಯ ಒಟ್ಟು 16 ಎಟಿಎಂಗಳಿಗೆ ಅಕ್ಷಯ್ ಹಣ ತುಂಬುತ್ತಿದ್ದ. ಕಂಪನಿ ಪರವಾಗಿ ಹೋಗಿ ಹಣ ತುಂಬುವ ಕೆಲಸ ಮಾಡಿದ್ದ. ಕಂಪನಿ ಆಡಿಟ್ ಮಾಡಿದಾಗ ಹಣದಲ್ಲಿ ವ್ಯತ್ಯಾಸ ಕಂಡುಬಂದಿದೆ. ಕ್ಯಾಶ್ ಲೋಡಿಂಗ್ ಎಟಿಎಂ ಸಿಸಿ ಕ್ಯಾಮೆರಾ ಪರಿಶೀಲನೆ ಮಾಡಿದಾಗ, ಆಕ್ಷಯ್ ಎಟಿಎಂಗೆ ಹಣ ಹಾಕದೆ ಬ್ಯಾಗ್‌ನಲ್ಲಿ ತುಂಬಿಕೊಂಡು ಹೋದ ದೃಶ್ಯ ಸೆರೆಯಾಗಿದೆ. ಗದ್ದಿಗೆ ಗ್ರಾಮದ ಎಟಿಎಂನಲ್ಲಿ 5.80 ಲಕ್ಷ ಹಣ ಲೋಡ್ ಮಾಡಿಲ್ಲ. ಈ ಕೃತ್ಯಕ್ಕೆ ಆತನ ಪರಿಚಯದ ತೇಜಸ್ವಿನಿ ಎಂಬಾಕೆಯ ಕುಮ್ಮಕ್ಕು ಆರೋಪ ಕೇಳಿಬಂದಿದೆ. ಇಬ್ಬರೂ ಈ ಹಣದಿಂದ ಚಿನ್ನ ಖರೀದಿಸಿರುವ ಬಗ್ಗೆ ಮಾಹಿತಿ ಸಿಕ್ಕಿದೆ