Author: AIN Author

ಸೋಮಶೇಖರ್B.Sc ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ರಾಶಿ ಹರಳು ಪರಿಣಿತರು. Mob.9353488403 ಸರ್ಕಾರಿ ಕೆಲಸ ಅವುಗಳಲ್ಲಿ ನೂರಾರು ಇಲಾಖೆಗಳಿವೆ. ತುಂಬಾ ಜನ ಪ್ರಯತ್ನ ಮಾಡುತ್ತಾರೆ ಆದರೆ ದುರ್ದೈವ ಯಶಸ್ವಿನಿ ದಾರಿ ದೊರೆಯುವುದಿಲ್ಲ.ಆದ್ದರಿಂದ ಅವನು ಜೀವನದಲ್ಲಿ ತುಂಬಾ ಹತಾಶನಾಗುತ್ತಾನೆ. ಅದಕ್ಕಾಗಿ ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ ಬನ್ನಿ ತಿಳಿಯೋಣ. ಜಾತಕದ ಕುಂಡಲಿಯಲ್ಲಿ ಲಗ್ನ ಹಾಗೂ ದಶಮ ಸ್ಥಾನದಲ್ಲಿ ಮಂಗಳ, ರಾಹು ಹಾಗೂ ಶನಿ ಗ್ರಹಗಳು ಇದ್ದರೆ ಸರಕಾರಿ ಕೆಲಸ ಸಿಗುತ್ತದೆ. ಮೇಷ ಲಗ್ನವಾಗಿ ದಶಮ ಸ್ಥಾನದಲ್ಲಿ ಶನಿ ಮಂಗಳ ಗ್ರಹ ಇದ್ದರೆ ಸರಕಾರಿ ಇಲಾಖೆಯಲ್ಲಿ ಮೇಲಾಧಿಕಾರಿ ಆಗುತ್ತಾನೆ. ಮೇಷ ಲಗ್ನದಲ್ಲಿ ಶುಕ್ರ ಯೋಗ ಇದ್ದರೆ ನೌಕರಿ ಸಿಗಲು ಅವಕಾಶ ತುಂಬಾ ಇದೆ. ದಶಮ ಸ್ಥಾನ ಚರರಾಶಿ ಆಗಿ ಅಂದರೆ ಮೇಷ, ಕರ್ಕ ತುಲಾ ಹಾಗೂ ಮಕರವಾದರೆ ಜಾತಕ ಹೊಂದಿದವರಿಗೆ ಸರ್ಕಾರಿ ಯಾವುದಾದರೂ ಇಲಾಖೆಯಲ್ಲಿ ಕೆಲಸ ದೊರೆಯುತ್ತದೆ. ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ…

Read More

ಸೋಮಶೇಖರ್B.Sc ಜಾತಕ ಬರಹಗಾರರು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು,ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403 ಎಲ್ಲರ ಜೀವನದ ಒಂದು ಪ್ರಮುಖ ಅಂಶ ಮದುವೆ. ವಿವಾಹ ತಡವಾಗಲು ಜನ್ಮಜಾತಕದಲ್ಲಿ ಜನ್ಮ ಲಗ್ನ ಅಥವಾ ಜನ್ಮ ರಾಶಿಯಿಂದ ಎಳನೇ ಮನೆಯಲ್ಲಿ ಶನಿ ಇರುವುದು ಅಥವಾ ಏಳನೇ ಮನೆಯ ಅಧಿಪತಿ ಶನಿ ಆಗಿರುವುದು. ಇಂಥ ಪರಿಸ್ಥಿತಿಗಳಲ್ಲಿ ವಯಸ್ಸು ಮೂವತ್ತು ದಾಟುವ ತನಕ ವಿವಾಹ ಕಷ್ಟಸಾಧ್ಯ ಇಲ್ಲಿ ನಾವು ಶನಿಗ್ರಹ ದೋಷಪರಿಹಾರ ಹೊರತುಪಡಿಸಿ ಇನ್ಯಾವ ಪರಿಹಾರಗಳನ್ನು ಮಾಡಿದರೂ ಫಲ ದುರ್ಲಭ. ಶನೈಶ್ಚರ ದೋಷ ಪರಿಹಾರಕ್ಕಾಗಿ ಶಮೀಸಮಿತ್ತು ಹಾಗು ಕೃಸರಾನ್ನ ದ್ರವ್ಯದಲ್ಲಿ ಶನಿವಾರದಂದು ಶನಿ ಶಾಂತಿ ಹವನ ಮಾಡಿಸುವುದು. ಆದರೆ ಯಾವುದೇ ಕಾರಣಕ್ಕೂ ಸಪ್ತಮಾಧಿಪತಿಮ ರತ್ನವನ್ನು ಧರಿಸಬಾರದು. ಇನ್ನೂ ವಿವಾಹಕ್ಕೆ ವಿಘ್ನ ಮಾಡುವ ಇನ್ನೊಂದು ಪ್ರಮುಖ ಕಾರಣ ಜಾತಕದಲ್ಲಿ ಬರುವ ಸರ್ಪದೋಷ ಸರ್ಪದೋಷಗಳಲ್ಲಿ ಹತ್ತು ಹಲವು ವಿಧಿಗಳಿವೆ. ಆದರೆ ಅವುಗಳಲ್ಲಿ ವಿವಾಹಕ್ಕೆ ವಿಘ್ನ ಮಾಡುವ ಸರ್ಪದೋಷವೇ ಕಾಳ ಸರ್ಪದೋಷ. ಇಲ್ಲಿ ಗಮನಿಸಲೇ ಬೇಕಾದ ಅಂಶ ಎಂದರೆ ಆಶ್ಲೇಷಾ…

Read More

ಮದುವೆ ಮಾತುಕತೆಗೆ ಯಾರು ಬರುತ್ತಿಲ್ಲವೇ? ಜ್ಯೋತಿಷ್ಯಶಾಸ್ತ್ರ ಏನು ತಿಳಿಸುತ್ತದೆ? ಇಲ್ಲಿದೆ ತಮಗೆ ಮಾಹಿತಿ… ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು. ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.93534 88403 ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವಾಗಿ ಬಾಳಬೇಕಾದರೆ ಅವರ ಜನ್ಮ ಕುಂಡಲಿಯಲ್ಲಿ ಇರುವ ಗ್ರಹಗಳೇ ಕಾರಣ. ನಿಮ್ಮ ಜನ್ಮ ಕುಂಡಲಿಯಲ್ಲಿ 2 ನೇ ಮನೆ, 7ನೇ ಮನೆ ಮತ್ತು 11ನೇ ಮನೆ ಪರೀಕ್ಷಿಸಬೇಕು. ಈ ಸ್ಥಾನದಲ್ಲಿ ಏನಾದರೂ ಶುಭಗ್ರಹಗಳಿದ್ದರೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಚಂದ್ರ, ಬುಧ, ಗುರು…

Read More

ಸೂರ್ಯೋದಯ: 06.16 AM, ಸೂರ್ಯಾಸ್ತ : 05.51 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಶ್ವಯುಜ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ತ್ರಯೋದಶಿ 01:57 PM ತನಕ ನಂತರ ಚತುರ್ದಶಿ ನಕ್ಷತ್ರ: ಇವತ್ತು ಹಸ್ತ 12:08 AM ತನಕ ನಂತರ ಚಿತ್ತ ಯೋಗ: ಇವತ್ತು ಪ್ರೀತಿ 04:59 PM ತನಕ ನಂತರ ಆಯುಷ್ಮಾನ್ ಕರಣ: ಇವತ್ತು ಗರಜ 01:20 AM ತನಕ ನಂತರ ವಣಿಜ 01:57 PM ತನಕ ನಂತರ ವಿಷ್ಟಿ ರಾಹು ಕಾಲ: 09:00 ನಿಂದ 10:30 ವರೆಗೂ ಯಮಗಂಡ: 01:30 ನಿಂದ 03:00 ವರೆಗೂ ಗುಳಿಕ ಕಾಲ: 06:00 ನಿಂದ 07:30 ವರೆಗೂ ಅಮೃತಕಾಲ: 06.57 PM to 08.39 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:37 ನಿಂದ ಮ.12:22 ವರೆಗೂ ಮೇಷ ರಾಶಿ: ಹೃದಯ ಬಂಧುಗಳಿಂದ ಧನಲಾಭ,ಆತ್ಮೀಯ ವ್ಯಕ್ತಿ ಏಕಾಏಕಿ ದೂರ,ವಿವಾಹ ಕಾರ್ಯ ನಿರೀಕ್ಷೆಯಲ್ಲಿರುವವರಿಗೆ ಶುಭ, ಪ್ರೇಮಿಗಳ ಬಾಂಧವ್ಯ ವೃದ್ಧಿ,…

Read More

ಬೆಂಗಳೂರು:- ಸಾರಿಗೆ ನೌಕರರಿಗಾಗಿ ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುತ್ತದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಅನುಕೂಲಕ್ಕಾಗಿ ಯಲಹಂಕ ವ್ಯಾಪ್ತಿಯಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗುವುದು. ಬಿಎಂಟಿಸಿ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರು ಯಾವುದಾದರೂ ಶುಭ ಕಾರ್ಯ ಮಾಡಲು ಕಲ್ಯಾಣ ಮಂಟಪಕ್ಕೆ ಲಕ್ಷಾಂತರ ರೂ. ಖರ್ಚು ಮಾಡಬೇಕಿದೆ. ಅದಕ್ಕೆ ಪರಿಹಾರ ಎನ್ನುವಂತೆ ಬಿಎಂಟಿಸಿಯಿಂದಲೇ ಕಲ್ಯಾಣ ಮಂಟಪ ನಿರ್ಮಿಸುವ ಪ್ರಸ್ತಾವನೆಯಿದೆ. ಯಲಹಂಕ ಘಟಕ ವ್ಯಾಪ್ತಿಯಲ್ಲಿ ನಿಗಮಕ್ಕೆ ಸೇರಿದ ೧ ಎಕರೆ ಜಾಗವಿದ್ದು, ಅಲ್ಲಿ ಕಲ್ಯಾಣ ಮಂಟಪ ಸ್ಥಾಪನೆ ಮಾಡಲಾಗುವುದು. ಮುಂದಿನ ಒಂದು ವರ್ಷದಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು. ಬಿಎಂಟಿಸಿಯ ಟಿಟಿಎಂಸಿಗಳಲ್ಲಿ ನಿರ್ವಹಣೆ ಕೊರತೆಯಿದೆ. ೧೨ ವರ್ಷಗಳ ಹಿಂದೆ ನಿರ್ಮಿಸಲಾದ ಟಿಟಿಎಂಸಿಗಳಿಗೆ ಬಣ್ಣ ಬಳಿದಿಲ್ಲ. ಹೀಗಾಗಿ ಟಿಟಿಎಂಸಿಗಳು ಕಳೆಗುಂದಿದಂತೆ ಕಾಣುತ್ತಿವೆ. ಹೀಗಾಗಿ ಬಿಎಂಟಿಸಿಯ ಎಲ್ಲ ಟಿಟಿಎಂಸಿಗಳಿಗೂ ಬಣ್ಣ ಬಳಿಯಲು ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಜತೆಗೆ…

Read More

ಬೆಂಗಳೂರು:- ರಾಜ್ಯಾಧ್ಯಕ್ಷರ ಸ್ಥಾನಕ್ಕೆ ವಿಜಯೇಂದ್ರರ ಆಯ್ಕೆ ಪಕ್ಷಕ್ಕೆ ಶಕ್ತಿ ತುಂಬಿದೆ ಎಂದು MP ರೇಣುಕಾಚಾರ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ವಿಜಯೇಂದ್ರರನ್ನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡುವುದಕ್ಕೆ ರೇಣುಕಾಚಾರ್ಯರ ಕೂಗಲ್ಲ. ಈ ನಾಡಿನ ಪ್ರಜ್ಞಾವಂತರ ಅಪೇಕ್ಷೆಯಾಗಿತ್ತು. ಜನರ ಅಪೇಕ್ಷೆ ಈಡೇರಿಸಿದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಪ್ರಧಾನಿ ಮೋದಿ, ‌ಅಮಿತ್ ಶಾ ಅವರಿಗೆ ಬಿಜೆಪಿ ಮಾಜಿ ಸಚಿವ ಎಂಪಿ ರೇಣುಕಾರ್ಯ ಅಭಿವಂದನೆಗಳು ತಿಳಿಸಿದರು. ವಿಜಯೇಂದ್ರರ ಪಕ್ಷ ಸಂಘಟನೆ ಸಾಮರ್ಥ್ಯ ನೋಡಿ ಈ ಹುದ್ದೆ ಸಿಕ್ಕಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಿಜಯೇಂದ್ರರ ಆಯ್ಕೆ ಪಕ್ಷಕ್ಕೆ ಶಕ್ತಿ ತುಂಬಿದೆ. ಇದು ಮಾಸ್ಟರ್‌ ಸ್ಟ್ರೋಕ್ ಎಂದರು. ಯಡಿಯುರಪ್ಪ ಅವರನ್ನ ಬೆಳಗ್ಗೆ ಭೇಟಿ ಮಾಡಿ ದೀಪಾವಳಿ ಶುಭಾಶಯ ಕೋರಿ ಹೊರಟಿದ್ದೆ. ಇಂದು ಬಿವೈ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾಗ್ತಿದ್ದಂತೆ ರಾಜ್ಯಾದ್ಯಂತ ಪಕ್ಷದ ಕಾರ್ಯಕರ್ತರು ದೀಪಾವಳಿ ಹಬ್ಬದಲ್ಲಿ ಪಟಾಕಿ ಹಚ್ಚುವ ಮೂಲಕ ಸಂಭ್ರಮಾಚರಣೆ ಮಾಡ್ತಿದ್ದಾರೆ ಎಂದರು. ಮುಂದೆ ಲೋಕಸಭಾ ಚುನಾವಣೆ ಬರ್ತಿದೆ. ಸಂಘಟನೆ ಚತುರ ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರರ ಸಂಘಟನೆ ನೋಡಿ…

Read More

ಹುಣಸಗಿ:- ರೈತರಿಗೆ ಬರ ಪರಿಹಾರ ನೀಡಲು ಮುಂದಾಗಿ ಎಂದು ಶಾಸಕ ಅರವಿಂದ ಬೆಲ್ಲದ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ತಾಲೂಕಿನ ಕರಿಭಾವಿ ಗ್ರಾಮದಲ್ಲಿ ಬರಗಾಲದಿಂದ ಹಾನಿಗೀಡಾಗಿರುವ ಬೆಳೆಗಳನ್ನು ವೀಕ್ಷಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ಬರಗಾಲ ಪರಿಹಾರಕ್ಕಾಗಿ ಯಾವುದೇ ಖರ್ಚು ಮಾಡದೇ ಎಲ್ಲದಕ್ಕೂ ಕೇಂದ್ರ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಅನಗತ್ಯವಾಗಿ ಗೂಬೆ ಕೂಡಿಸುತ್ತಿದ್ದಾರೆ ಎಂದು ಹರಿಹಾಯ್ದರು. 324 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೂ ರೈತರಿಗೆ ಪರಿಹಾರ ಹಣ ಹಾಕಲು ವಿಳಂಬ ಮಾಡುತ್ತಿದ್ದಾರೆ. ಪ್ರತಿ ಎಕರೆಗೆ 25 ಸಾವಿರ ಹಣ ಪರಿಹಾರ ನೀಡಲಿ ಎಂದು ಆಗ್ರಹಿಸಿದರು. ಮಾಜಿ ಸಚಿವ ನರಸಿಂಹನಾಯಕ (ರಾಜುಗೌಡ) ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲ ಬಿದ್ದಾಗಲೂ ರೈತರ ಸಮಸ್ಯೆ ಬಗ್ಗೆ ತೀವ್ರ ನಿರ್ಲಕ್ಷÂ ವಹಿಸಿದ್ದು, ರೈತರ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಕಾಳಜಿಯೇ ಇಲ್ಲ. ಈ ಹಿಂದೆ ಬಿಜೆಪಿ ಅ ಧಿಕಾರದಲ್ಲಿದ್ದಾಗ ನೆರೆ ಹಾವಳಿ ಬಂದಾಗ ರಾಜ್ಯದ ಎಲ್ಲ ಕಡೆಗೂ ನೆರವಿಗೆ ಧಾವಿಸಿತ್ತು. ಆದರೆ ಇದೀಗ ಸಿಎಂ-ಡಿಸಿಎಂ ಅವರಿಗೆ…

Read More

ಕಲಬುರಗಿ:- ಇಲ್ಲಿ ನಡೆದ KEA ಪರೀಕ್ಷೆ ಅಕ್ರಮದ ಪ್ರಕರಣದಲ್ಲಿ ಮಹಾರಾಷ್ಟ್ರ ಗಡಿಯಲ್ಲಿ ಸೆರೆಸಿಕ್ಕ ಕಿಂಗ್ ಪಿನ್ RD ಪಾಟೀಲನನ್ನ ಇದೀಗ ಕಲಬುರಗಿಗೆ ಕರೆತರಲಾಯಿತು. ಕಳೆದ ಮೂರು ದಿನದ ಹಿಂದೆ ಅಪಾರ್ಟ್‌ಮೆಂಟಿನ ಗೇಟ್ ಜಿಗಿದು ಎಸ್ಕೇಪ್ ಆಗಿದ್ದ RD ಅರೆಸ್ಟ್ ಮಾಡಲು ನಾಲ್ಕು ತಂಡಗಳನ್ನ ರಚಿಸಲಾಗಿತ್ತು. ಸತತ ಹುಡುಕಾಟದ ನಂತ್ರ ಅಂದ್ರೆ 12 ದಿನಗಳ ಬಳಿಕ ಸಂಭಂಧಿಕರ ಮನೆಯಲ್ಲಿಯೇ ಲಾಕ್ ಆಗಿದ್ದ. ಬಂಧಿಸಿದ ನಂತ್ರ ಬಿಗಿ ಬಂದೋಬಸ್ತಲ್ಲಿ ಸೀದಾ ಅಶೋಕ ನಗರ ಠಾಣೆಗೆ ಕರೆತರಲಾಯಿತು.

Read More

ಗದಗ:- ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ ವೈ ವಿಜಯೇಂದ್ರ ನೇಮಕ ಹಿನ್ನೆಲೆ ಗದಗನಲ್ಲಿ‌ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಗದಗ ನಗರದ ಹುಯಿಲಗೋಳ ನಾರಾಯಣರಾಯರ ವೃತ್ತದಲ್ಲಿ ವಿಜಯೋತ್ಸವ ಆಚರಣೆ ನಡೆದಿದೆ. ಮಿನಿ ರಾಜಾಹುಲಿ ಮುಂದಿನ ಮುಖ್ಯಮಂತ್ರಿ ಬಿ ವೈ ವಿಜಯೇಂದ್ರಗೆ ಜಯವಾಗಲಿ ಅಂತಾ ಘೋಷಣೆ ಕೂಗಿದ್ದಾರೆ. ಪಟಾಕಿ‌ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

Read More

ಬೆಂಗಳೂರು:- ಮುಂದಿನ ವಾರ ಪ್ರತಿಪಕ್ಷ ನಾಯಕನ ಆಯ್ಕೆ ಆಗಲಿದೆ ಎಂದು ಬಿಜೆಪಿ ನೂತನ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶಾಸಕಾಂಗ ಪಕ್ಷದ ಸಭೆಗೆ ಕೇಂದ್ರದ ವೀಕ್ಷಕರು ಕೂಡ ಆಗಮಿಸುತ್ತಿದ್ದಾರೆ. ಅವರ ಸಮ್ಮುಖದಲ್ಲೇ ಪ್ರತಿ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ. ಮುಂದಿನ ಶುಕ್ರವಾರ ವಿಪಕ್ಷ ನಾಯಕನ ಆಯ್ಕೆಯಾಗಲಿದೆ ಎಂದು ತಿಳಿಸಿದರು. ಇನ್ನು, ರಾಜ್ಯಾಧ್ಯಕ್ಷ ಹುದ್ದೆಗೆ ಆಯ್ಕೆಯಾದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ಮಗ ಎನ್ನುವ ಕಾರಣಕ್ಕೆ ನನಗೆ ಹುದ್ದೆ ಕೊಟ್ಟಿಲ್ಲ. ಅವರ ಮಗ ಎನ್ನುವ ಹೆಮ್ಮೆ ಇದೆ. ಪಕ್ಷ ಬಿಡುವ ಯೋಚನೆಯಲ್ಲಿ ಇರುವವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದರು. ಮಾಜಿ ಸಚಿವ ವಿ. ಸೋಮಣ್ಣ, ಆರ್ ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಅವರು ಹೇಳಿದರು.

Read More