ಕಲಬುರಗಿ:- ಇಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಕಿಂಗ್ ಪಿನ್ ಬಂಧಿಸಿದ್ದೂ ಆಯ್ತು ಮಹಾರಾಷ್ಟ್ರದಿಂದ ಕಲಬುರಗಿಗೆ ಕರೆತಂದಿದ್ದೂ ಆಯ್ತು.. ಇದೀಗ ಕಾನೂನು ಪ್ರಕ್ರಿಯೆ ಕೈಗೊಳ್ಳಲು ಅಶೋಕ ನಗರ ಪೋಲೀಸರು ಸಿದ್ಧತೆ ನಡೆಸಿದ್ದಾರೆ. ಇದೆಲ್ಲದರ ಜೊತೆಗೆ ಸ್ಪಾಟ್ ಮಹಜರು ಮತ್ತು ಮೆಡಿಕಲ್ ಚಕಪ್ ಮಾಡಿಸಲು ತಯಾರು ಮಾಡಿಕೊಂಡಿದ್ದಾರೆ. ಹೀಗೆ ಹಂತ ಹಂತವಾಗಿ ಎಲ್ಲವೂ ಅಂದುಕೊಂಡಂತೆ ಆದ್ರೆ ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಬಲೆಗೆ ಬೀಳುವ ಸಾಧ್ಯತೆಗಳಿವೆ..
Author: AIN Author
ಬೆಂಗಳೂರು:- ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ ಶಿಕಾರಿಪುರ ಕ್ಷೇತ್ರದ ಶಾಸಕ ವಿಜಯೇಂದ್ರ ಅವರಿಗೆ ರಾಜ್ಯ ಕಾಂಗ್ರೆಸ್ ಘಟಕ ವ್ಯಂಗ್ಯಭರಿತವಾಗಿ ಶುಭಾಶಯ ಕೋರಿದೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ ಎಂಬ ಸುಳ್ಳನ್ನು ನಂಬಬೇಕು ಎಂದು ಟೀಕಿಸಿದೆ. ಯಡಿಯೂರಪ್ಪನವರ ಮಗ ಎಂಬ ಅರ್ಹತೆಯಲ್ಲಿ ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ವಿಜಯೇಂದ್ರ ಅವರಿಗೆ ಅಭಿನಂದನೆಗಳು. ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ ಎಂಬ ಸುಳ್ಳನ್ನು ನಂಬಬೇಕು ಎಂದು ರಾಜ್ಯದ ಜನರಲ್ಲಿ ಮನವಿ ಮಾಡುತ್ತೇವೆ ಎಂದು ವ್ಯಂಗ್ಯಭರಿತವಾಗಿ ಶುಭಾಶಯ ಕೋರಿದೆ. ಇತ್ತ ರಾಜ್ಯ ಕಾಂಗ್ರೆಸ್ ಘಟಕದ ಟ್ವೀಟ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದ್ದು, ದಶಕಗಳಿಂದ ಒಂದು ಕುಟುಂಬಕ್ಕೆ ಜೀತ ಮಾಡುತ್ತಿರುವ ಪಕ್ಷದ ರಾಜ್ಯ ಘಟಕವೊಂದು ಈ ಮಾತು ಆಡುತ್ತಿರುವುದನ್ನೂ ನಂಬಬೇಕು ಎಂದು ನೆಟ್ಟಿಗರು ತಿರುಗೇಟು ನೀಡಿದ್ದಾರೆ.
ಶಿವಮೊಗ್ಗ: ಮಳೆ ಕೊರತೆಯಾಗಿ ಬೆಳೆ ಹಾನಿ ಆಗಿರುವುದಕ್ಕೆ ಎನ್‌ಡಿಆರ್‌ಎಫ್ ನಿಯಮದಂತೆ ಕೇಂದ್ರ ಸರಕಾರ ಪರಿಹಾರ ನೀಡುತ್ತಿದೆ. ಅದಕ್ಕೆ ರಾಜ್ಯದ ಪಾಲು ನೀಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ಕೇಂದ್ರದ ವಿರುದ್ಧ ಸಿಎಂ ಮಾಡುತ್ತಿರುವ ಆರೋಪ ನಿರಾಧಾರ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು. ಶಿಕಾರಿಪುರ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಬಿ. ವೈ. ರಾಘವೇಂದ್ರ, ಸಿಎಂ ಸಿದ್ದರಾಮಯ್ಯ ಸಾರಥ್ಯದ ರಾಜ್ಯ ಸರ್ಕಾರ ರೈತ ವಿರೋಧ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಎಷ್ಟು ಅನುದಾನ ನೀಡಲಾಗಿತ್ತು. ಎನ್‌ಡಿಎ ಸರ್ಕಾರ ಎಷ್ಟು ಅನುದಾನ ನೀಡಿದೆ ಎಂದು ವಿವರಿಸಿದ ಬಿ. ವೈ. ರಾಘವೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಎಷ್ಟು ಹಣ ರೈತರಿಗೆ ತಲುಪಿತ್ತು ಹಾಗೂ ಈಗಿನ ಕಾಂಗ್ರೆಸ್ ಸರ್ಕಾರ ಎಷ್ಟು ಅನುದಾನ ನೀಡ್ತಿದೆ ಎಂದು ಅಂಕಿ ಅಂಶ ಸಮೇತ ವಿವರಿಸಿದ್ದಾರೆ. https://ainlivenews.com/knee-pain-treatment-joint-pain-treatment/ ಶಿವಮೊಗ್ಗ ಜಿಲ್ಲೆಯಲ್ಲಿ ಬರದಿಂದ ಅಂದಾಜು 80 ಸಾವಿರ ಹೆಕ್ಟೆರ್ ಬೆಳೆ ಹಾನಿ ಆಗಿದ್ದು ಎನ್‌ಡಿಆರ್‌ಎಫ್ ನಿಯಮದಂತೆ 80…
ಕೋಲಾರ:- ಹೃದಯಾಘಾತದಿಂದ ಕಾಂಗ್ರೆಸ್ ನ ಮಾಜಿ ಶಾಸಕ ಸಿ.ವೆಂಕಟೇಶಪ್ಪ ನಿಧನ ಹೊಂದಿದ್ದಾರೆ. ಕಳೆದ ವೆಂಕಟೇಶಪ್ಪ ಅವರಿಗೆ ರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೋಲಾರ ನಗರದ ಆರ್.ಎಲ್.ಜಾಲಪ್ಪಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸಲದೆ ವೆಂಕಟೇಶಪ್ಪ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಸಿ.ವೆಂಕಟೇಶಪ್ಪ ಅವರು 1978,1983, 1999 ರಲ್ಲಿ ಶಾಸಕರಾಗಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿದ್ದರು. ಸಿ.ವೆಂಕಟೇಶಪ್ಪ ಅವರು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬುವನಹಳ್ಳಿ ಗ್ರಾಮದವರಾಗಿದ್ದಾರೆ. ಮೃತರ ಪಾರ್ಥೀವ ಶರೀರ ಸ್ವಗ್ರಾಮ ರವಾನೆ ಮಾಡಲಾಗಿದೆ. ಸಿ.ವೆಂಕಟೇಶಪ್ಪ ಅವರು ಆಗಿನ ಬೇತಮಂಗಲ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ವೆಂಕಟೇಶಪ್ಪ ಅಪಾರ ಅಭಿಮಾನಿಗಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.
ಬೆಂಗಳೂರು:- ನಾಡಿನಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಪಟಾಕಿ ಮಾರಾಟ ಮಾಡಲು ರೂಲ್ಸ್ ಮೇಲೆ ರೂಲ್ಸ್ ಜಾರಿಗೆ ತರಲಾಗುತ್ತಿದೆ. ನಗರದ 63 ಮೈದಾನಗಳಲ್ಲಿ ಮಾತ್ರ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಅನಧಿಕೃತವಾಗಿ ಪಟಾಕಿ ಮಾರಾಟ ಮಾಡಿದ್ರೆ ಕೇಸ್ ಬೀಳಲಿದೆ. ಪಟಾಕಿ ಮಳಿಗೆಗೆ ಒಟ್ಡು 912 ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಸದ್ಯ 63 ಮೈದಾನಗಳಲ್ಲಿ ಮಾತ್ರ ಮಾರಾಟ ಮಾಡಬೇಕು. ಪಟಾಕಿ ಮಾರಲು ಕೆಳಕಂಡ ರೂಲ್ಸ್ ಅನ್ವಯ: -ಹಸಿರು ಪಟಾಕಿ ಮಾರುವುದು ಕಡ್ಡಾಯ, -ಹಸಿರು ಪ್ಯಾಕೆಟ್‌ಗಳ ಮೇಲೆ ಹಸಿರು ಪಟಾಕಿ ಚಿಕ್ಕ ಕ್ಯೂಆರ್ ಕೋಡ್ ಕಡ್ಡಾಯ -ಮಳಿಗೆಗಳ ವಿಸ್ತೀರ್ಣ 10×10 ಅಡಿ ಸೀಮಿತ -ನಿಗದಿಗಿಂತ ಹೆಚ್ಚು ಪ್ರಮಾಣದ ಪಟಾಕಿ ದಾಸ್ತಾನು ಮಾಡುವಂತಿಲ್ಲ -ಸಾಧ್ಯವಾದಷ್ಟೂ ಬೆಂಕಿ ತಡೆಯುವ ಉಪಕರಣಗಳನ್ನೇ ಬಳಸಿ ಮಳಿಗೆ ನಿರ್ಮಿಸಬೇಕು -ಮಳಿಗೆ ಮುಂಭಾಗ ಹಾಗೂ ಹಿಂಭಾಗ ಪ್ರವೇಶಿಸುವ ಅವಕಾಶ ಇರಬೇಕು -ಪ್ರತಿ ಮಾರಾಟ ಮಳಿಗೆಗೆ 3 ಮೀಟರ್ ಅಂತರ ಕಡ್ಡಾಯ -ಪರವಾನಗಿ ಪತ್ರ ಮಳಿಗೆಯಲ್ಲಿ ಪ್ರದರ್ಶಿಸಬೇಕು -ಪರವಾನಗಿದಾರರು ಮಳಿಗೆಯಲ್ಲಿ ಕಡ್ಡಾಯವಾಗಿ ಇರಬೇಕು.…
ನವದೆಹಲಿ: ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳು ಮಾಲಿನ್ಯ ನಿಯಂತ್ರಣಕ್ಕೆ ಪ್ರಾಯೋಗಿಕ ಪರಿಹಾರಗಳೊಂದಿಗೆ ಮುಂದಿನ ವಿಚಾರಣೆಗೆ ಬರಬೇಕು. ಇಲ್ಲಿಯ ಜನರನ್ನು ಸಾಯಲು ನಾವು ಅನುಮತಿಸುವುದಿಲ್ಲ. ಮುಖ್ಯ ಕಾರ್ಯದರ್ಶಿಗಳು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಅವರನ್ನು ಕೋರ್ಟಿಗೆ ಕರೆಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ (Supreme Court) ಎಚ್ಚರಿಕೆ ನೀಡಿದೆ. ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅರ್ಜಿ ವಿಚಾರಣೆ ಮುಂದುವರಿಸಿದ ಸುಪ್ರೀಂಕೋರ್ಟ್, ಮಾಲಿನ್ಯ ನಿಯಂತ್ರಣಕ್ಕೆ ನೀವು ಬೇಕಾದುದನ್ನು ಮಾಡಿ, ನಾವು ಏನನ್ನೂ ಹೇಳುತ್ತಿಲ್ಲ ಅಥವಾ ಯಾವುದೇ ನಿರ್ದೇಶನವನ್ನು ನೀಡುತ್ತಿಲ್ಲ. ನೀವೂ ಏನು ಮಾಡದಿದ್ದರೆ ನಾವು ಏನಾದರೂ ಮಾಡಬೇಕಾಗುತ್ತದೆ ಎಂದು ಸರ್ಕಾರಗಳ ವಿರುದ್ಧ ಛೀಮಾರಿ ಹಾಕಿತು. ಕೃಷಿ ತಾಜ್ಯ ಸುಡುವುದು ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ. ಅದು ಕೂಡಲೇ ನಿಲ್ಲಬೇಕು. https://ainlivenews.com/knee-pain-treatment-joint-pain-treatment/ ನಾವು ಮಧ್ಯಪ್ರವೇಶಿಸಿದ ನಂತರವೇ ಕೆಲಸಗಳು ಏಕೆ ನಡೆಯುತ್ತವೆ? ಸೂಕ್ತ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಬಿಡುವುದಾಗಿ ನ್ಯಾಯಾಲಯ ಹೇಳಿದೆ. ವಿಚಾರಣೆ ವೇಳೆ ದೆಹಲಿಯಲ್ಲಿ (New Delhi) ಜಾರಿ ಮಾಡಿದ್ದ ಸಮ ಬೆಸ ಯೋಜನೆ ಯಶಸ್ವಿಯಾಗಿದೆ ಎಂದು ಸರ್ಕಾರ ಹೇಳಿದೆ. ಬೆಸ-ಸಮ ಯೋಜನೆಯು ರಸ್ತೆ…
ಕನ್ನಡದ ‘ಕಿಸ್’ ಬ್ಯೂಟಿ ಶ್ರೀಲೀಲಾ, ಟಾಲಿವುಡ್ ಅಂಗಳದಲ್ಲಿ ಮ್ಯಾಜಿಕ್ ಮಾಡ್ತಿರೋದು ಗೊತ್ತೇ ಇದೆ. ಸಾಲು ಸಾಲು ಸಿನಿಮಾಗಳಿಗೆ ಹೀರೋಯಿನ್ ಆಗಿ ಮೆರೆಯುತ್ತಿರುವ ಶ್ರೀಲೀಲಾ(Sreeleela) ‘ಗುಂಟೂರು ಖಾರಂ’ ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು (Mahesh Babu) ಜೊತೆ ಲುಂಗಿ ಡ್ಯಾನ್ಸ್ ಮಾಡೋದ್ದಕ್ಕೆ ನಟಿ ರೆಡಿಯಾಗಿದ್ದಾರೆ. ತ್ರಿವಿಕ್ರಮ್- ಮಹೇಶ್ ಬಾಬು ಜೊತೆ ಶ್ರೀಲೀಲಾ (Sreeleela) ಮೊದಲ ಬಾರಿಗೆ ಜೊತೆಯಾಗಿ ಸಿನಿಮಾ ಮಾಡಿದ್ದಾರೆ. ಇಬ್ಬರ ಜುಗಲ್‌ಬಂದಿ ಸವಿಯೋಕೆ ಪ್ರೇಕ್ಷಕರು ಕೂಡ ಕಾಯ್ತಿದ್ದಾರೆ. ಸಿನಿಮಾ ಕೂಡ ಕೊನೆಯ ಹಂತಕ್ಕೆ ಬಂದಿದೆ. ಬಾಕಿ ಉಳಿದಿರೋ ಸಾಂಗ್ ಶೂಟ್‌ಗೆ ತಯಾರಿ ನಡೆಯುತ್ತಿದೆ. ಪ್ರಿನ್ಸ್ ಹೀರೋ ಜೊತೆ ಡ್ಯಾನ್ಸ್ ಕ್ವೀನ್ ಶ್ರೀಲೀಲಾ ಲುಂಗಿ ಡ್ಯಾನ್ಸ್ ಮಾಡೋಕೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಮಸ್ತ್ ಆಗಿ ಸಾಂಗ್ ಶೂಟ್ ಮಾಡಲು ಚಿತ್ರತಂಡ ಕೂಡ ಪ್ಲ್ಯಾನ್ ಮಾಡಿದೆ.
ಬೆಂಗಳೂರು:- ನೂತನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆ ಹಿನ್ನೆಲೆ ಮಾಜಿ ಶಾಸಕ ಸಿಟಿ ರವಿ ಅವರು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಮಧ್ಯಪ್ರದೇಶದಿಂದ ಕೆಂಪೇಗೌಡ ಏರ್ಪೋಟ್ ನಲ್ಲಿ ಬಂದಿಳಿದ ಬಳಿಕ ಮಾತನಾಡಿದ ಅವರು, ಪಕ್ಷ ನೇಮಕ ಮಾಡಿದೆ ವೈಚಾರಿಕ ಭದ್ರತೆ ಜೊತೆಗೆ ಪಕ್ಷ ಕಟ್ಟುವ ಬೆಳೆಸುವ ಕೆಲಸ ಮಾಡಬೇಕಿದೆ. ಜೊತೆಗೆ 28 ಕ್ಕೆ 28 ಸ್ಥಾನ ಗೆಲ್ಲಿಸುವ ಹೊಣೆಗಾರಿಕೆ ಇದೆ ಯಶಸ್ವಿಯಾಗಲಿ. ಬದಲಾಗದೆ ಇರೋದು ಕಾರ್ಯಕರ್ತ ಅನ್ನೂದು ನಾನೊಬ್ಬ ಈಗ ಸಾಮಾನ್ಯ ಕಾರ್ಯಕರ್ತ ಎಂದರು. ಇನ್ನೂ ನೂತನ ಅಧ್ಯಕ್ಷನ ಆಯ್ಕೆ ಬಗ್ಗೆ ಕಾಂಗ್ರೇಸ್ ಟ್ವಿಟ್ ವಿಚಾರವಾಗಿ ಮಾತನಾಡಿ, ಅಸಮಧಾನದ ಬಗ್ಗೆ ಈಗ ನಾನು ಏನು ಮಾತನಾಡಲ್ಲ ಈಗಾಗಲೆ ಬಹಳಷ್ಟು ಮಾತನಾಡಿದ್ದೇನೆ. 35 ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದೀನಿ. ಬೂತ್ ಅಧ್ಯಕ್ಷನಿಂದ ರಾಷ್ಟ್ರಿಯಾ ಪ್ರಧಾನ ಕಾರ್ಯದರ್ಶಿ ವರೆಗೂ ಜವಬ್ದಾರಿ ನಿರ್ವಹಿಸಿದ್ದೀನಿ. ಈಗಾಗಲೆ ಬಹಳ ವಿಷಯ ಮಾತನಾಡಿ ಬಿಟ್ಟಿದ್ದೇನೆ. ಈಗ ಏನಾದ್ರು ಮಾತನಾಡಿದ್ರೆ ನಮ್ಮ ಮಾತೆ ನಮಗೆ ತಿರುಗುಬಾಣವಾಗುತ್ತೆ ಎಂದು ಅಸಮಧಾನ ಹೊರ ಹಾಕಿ ತಲೆ…
ನಾಲ್ಕನೇ ಅಲೆಯ ಭೀತಿಯ ನಡುವೆ ಹೊಸ ಜ್ವರವೊಂದು ಕಾಣಿಸಿಕೊಂಡಿದ್ದು. ವಿಶೇಷವಾಗಿ ಚಿಕ್ಕಮಕ್ಕಳ ಪೋಷಕರಲ್ಲಿ ಆತಂಕ ಮೂಡಿಸಿದೆ. ಕೇರಳದಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80ಕ್ಕೂ ಹೆಚ್ಚು ಮಕ್ಕಳು ವೈರಸ್ನಿಂದ ಸೋಂಕಿಗೆ ಒಳಗಾಗಿದ್ದಾರೆ. ಕೇರಳ ರಾಜ್ಯವು ನಿಗೂಢ ಕಾಯಿಲೆ ಟೊಮ್ಯಾಟೋ ಜ್ವರದಿಂದ ಬೆಚ್ಚಿಬಿದ್ದಿದೆ. ಹೀಗಾಗಿ ಕರ್ನಾಟಕ ರಾಜ್ಯಕ್ಕೂ ಅಪ್ಪಳಿಸಿಬಿಡ್ತಾ ಈ ಕಾಯಿಲೆ ಎಂಬ ಆತಂಕದಿಂದಲೇ ರಾಜ್ಯ ಆರೋಗ್ಯ ಇಲಾಖೆಗೆ ಕೊರೊನಾ ನಾಲ್ಕನೇ ಅಲೆ ಜೊತೆಗೆ ಟೊಮ್ಯಾಟೋ ಟೆನ್ಷನ್ ಕೂಡ ಜಾಸ್ತಿಯಾಗಿದೆ. ಇದರಿಂದಾಗಿ ಕರುನಾಡಿಗೆ ಸಾಂಕ್ರಾಮಿಕ ಜ್ವರ ಕಾಲಿಡದಂತೆ ಮಕ್ಕಳ ಆರೋಗ್ಯ ಸ್ಥಿತಿಗತಿ ಮೇಲೆ ಆರೋಗ್ಯ ಇಲಾಖೆ ಎಚ್ಚರಿಕೆ ವಹಿಸಲಾಗಿದೆ. ಟೊಮೆಟೊ ಜ್ವರದ ಲಕ್ಷಣಗಳೇನು? ಅಧಿಕ ಜ್ವರ, ಮೈಕೈ ನೋವು, ಕೀಲು ಊತ ಮತ್ತು ಸುಸ್ತು ಇತರ ಕೆಲವು ಲಕ್ಷಣ ಟೊಮೆಟೊ ಜ್ವರ ಪೀಡಿತ ಮಕ್ಕಳಲ್ಲಿ ಟೊಮೇಟೋ ಗಾತ್ರದ ಕೆಂಪು ದದ್ದುಗಳು ಕಂಡು ಬಂದಿವೆ. ಸೋಂಕಿತ ಮಗು ನಿರ್ಜಲೀಕರಣದ ಕಾರಣದಿಂದಾಗಿ ಬಾಯಿಯಲ್ಲಿ ಕಿರಿಕಿರಿ ಉಂಟಾಗುತ್ತದೆ ದದ್ದುಗಳ ಮೇಲೆ ಉಂಟಾಗುವ ಹುಣ್ಣುಗಳಿಂದ ಹುಳುಗಳು ಹೊರಬರುತ್ತವೆ ಮೈಮೇಲೆ…
ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಅವರು ಸಿನಿಮಾ, ಜಾಹೀರಾತುಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ‘ಕಾಫಿ ವಿತ್ ಕರಣ್’ ಸೀಸನ್ 8ರಲ್ಲಿ (Koffe With Karan 8) ಅನನ್ಯಾ ಪಾಂಡೆ (Ananya Panday) ಜೊತೆ ಸಾರಾ ಅತಿಥಿಯಾಗಿ ಭಾಗವಹಿಸಿದ್ದಾರೆ. ಈ ವೇಳೆ, ಕಾರ್ತಿಕ್ ಆರ್ಯನ್ ಜೊತೆಗಿನ ಬ್ರೇಕಪ್ ಬಗ್ಗೆ ನಟಿ ಮೌನ ಮುರಿದಿದ್ದಾರೆ. ಅನನ್ಯಾ ಪಾಂಡೆ ಜೊತೆ ಸಾರಾ ಅಲಿ ಖಾನ್, ಕರಣ್ ಜೋಹರ್ (Karan Johar) ಶೋನಲ್ಲಿ ಮುಖ್ಯ ಅತಿಥಿಯಾಗಿ ಬಂದಿದ್ದಾರೆ. ಕಾರ್ತಿಕ್ ಜೊತೆಗಿನ ಲವ್ ಬ್ರೇಕಪ್ ಕೇಳಿದ ಕರಣ್ ಪ್ರಶ್ನೆಗೆ ನಟಿ ತಬ್ಬಿಬ್ಬಾಗಿದ್ದಾರೆ. ಬಳಿಕ ಹೌದು.. ನಾನು ಕಾರ್ತಿಕ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದೇನೆ. ನಾವಿಬ್ಬರೂ ಈಗ ಬೆಸ್ಟ್ ಫ್ರೆಂಡ್ಸ್, ಪ್ರೇಮಿಗಳಲ್ಲ ಎಂದಿದ್ದಾರೆ ಸಾರಾ. ಮತ್ತೆ ಕರಣ್, ಬ್ರೇಕಪ್ ಆದ ಮೇಲೆ ನಿಮಗೆ ಬೇಸರ ಆಗಿಲ್ವಾ? ಎಂದು ಕೇಳಿದ್ದಾರೆ. ಹೌದು ಆಗಿತ್ತು. ತುಂಬಾನೇ ನೋವು ಆಗಿತ್ತು. ಈಗ ಎಲ್ಲವನ್ನೂ ಮರೆಯುತ್ತಿದ್ದೇನೆ. ಯಾವುದೇ ಸಂಬಂಧವಾಗಿರಲಿ ಅವರ ಜೊತೆ ಸಾಕಷ್ಟು…