ಮೊಟ್ಟೆಗಳನ್ನ ಪ್ರೋಟೀನ್ ಗಳ ನಿಧಿ ಎಂದು ಹೇಳಲಾಗುತ್ತದೆ. ವಿಶ್ವದಾದ್ಯಂತ ಮೊಟ್ಟೆಗಳನ್ನು ಪ್ರೋಟೀನ್‌ಗಳ ನಿಧಿ ಎಂದು ಹೇಳಲಾಗುತ್ತದೆ. ಪ್ರಪಂಚದಾದ್ಯಂತ ಜನರು ಬೆಳಗಿನ ಉಪಾಹಾರದಲ್ಲಿ ಮೊಟ್ಟೆಗಳನ್ನು ತಿನ್ನಲು ಇಷ್ಟಪಡುತ್ತಾರೆ. ಜನರು ತಮ್ಮ ಇಚ್ಛೆಯಂತೆ ವಿವಿಧ ರೀತಿಯಲ್ಲಿ ಮೊಟ್ಟೆಗಳನ್ನು ತಿನ್ನಬಹುದಾದರೂ ನೀವು ಮೊಟ್ಟೆಗಳನ್ನು ಹೇಗೆ ತಿನ್ನುತ್ತೀರಿ ಎಂಬುದು ಮುಖ್ಯವಲ್ಲ, ಆದರೆ ಕೆಲವು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ, ಖಂಡಿತವಾಗಿಯೂ ಅದನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಮೊಟ್ಟೆ ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ ಎಂದು ಪೌಷ್ಟಿಕತಜ್ಞರು ಹೇಳುತ್ತಿದ್ದರೂ, ನೀವು ಅದನ್ನು ಹೇಗೆ ತಯಾರಿಸುತ್ತೀರಿ ಎಂಬುದರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿರುತ್ತದೆ. ಮೊಟ್ಟೆಯಿಂದ ಶಕ್ತಿ ಸಂಪೂರ್ಣ ಪೋಷಕಾಂಶ ಸಿಗುತ್ತದೆ ಎನ್ನುತ್ತಾರಾದರೂ ಬಹುತೇಕ ಮಂದಿ ಮೊಟ್ಟೆಯ ಹಳದಿ ಭಾಗವನ್ನು ತ್ಯಜಿಸುತ್ತಾರೆ. ಆದರೆ ನಿಮಗೆ ಮೊಟ್ಟೆಯಿಂದ ಹೆಚ್ಚಿನ ಪೋಷಕಾಂಶ ಬೇಕು ಅನ್ನೋದಾದರೆ ಮೊಟ್ಟೆಯ ಹಳದಿಭಾಗವನ್ನೂ ತಿನ್ನಬೇಕು. ಏಕೆಂದರೆ ಮೊಟ್ಟೆಯಲ್ಲಿರುವ ಹೆಚ್ಚಿನ ಪೋಷಕಾಂಶಗಳು ಅದರ ಹಳದಿ ಲೋಳೆಯಲ್ಲಿಯೇ ಹೆಚ್ಚಾಗಿರುತ್ತವೆ. ಸಂಪೂರ್ಣ ಮೊಟ್ಟೆ ಸಂಪೂರ್ಣ ಪೋಷಕಾಂಶ. ಬಿಳಿ ಪದರ ಮತ್ತು ಹಳದಿ ಭಾಗ ಎರಡೂ ತಿನ್ನೋದು…
Author: AIN Author
ತಮ್ಮ ಜನ್ಮ ಜಾತಕದಲ್ಲಿ( ಕುಂಡಲಿ) ಸಂತಾನಯೋಗ ಫಲ ಮತ್ತು ಪರಿಹಾರ” ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403 ಜೀವನದಲ್ಲಿ ಒಂದೇ ಒಂದು ಸಾರಿ ಮದುವೆ ಆಗುತ್ತದೆ. ಮದುವೆ ಕ್ಷಣದಿಂದ ತುಂಬಾ ಉಲ್ಲಾಸ ಜೀವನ ಮಾಡುತ್ತೀರಿ, ನಂತರ ಎರಡು ವರ್ಷ ,ಮೂರು ವರ್ಷ ಕಳೆದು ಹೋಗುತ್ತದೆ. ನಂತರ ನಿಮಗೆ ಮಕ್ಕಳಿಲ್ಲದ ಸಂಕಟ ಪ್ರಾರಂಭವಾಗುತ್ತದೆ. ಆಗ ನೀವು ಆ ದೇವರು ದರ್ಶನ, ವೈದ್ಯರ ಭೇಟಿ ಮಾಡಲು ಪ್ರಾರಂಭಿಸುತ್ತೀರಿ. ವೈದ್ಯರು ಕೆಲವು ವೈದ್ಯಕೀಯ ಪರೀಕ್ಷೆಗಳು ನಡೆಸುತ್ತಾರೆ . ಅದರಲ್ಲಿ ಯಾವುದೇ ತರಹದ ನ್ಯೂನ್ಯತೆ ಕಾಣುವುದಿಲ್ಲ . ಎಲ್ಲ ನಿಮ್ಮ ಆರೋಗ್ಯ ಚೆನ್ನಾಗಿದೆ ಹೌಷಧಿ ತಗೊಳ್ಳಿ ಅಂತ ಸಲಹೆ ನೀಡುತ್ತಾರೆ. ಆದ್ರೂ ನಿರಾಶೆ ಆಗುವ ಸಾಧ್ಯತೆ. ಆಗ ತಮಗೆ ಸಹಾಯಸ್ತ ನೀಡುವುದು ದೈವ ಭಾಗ್ಯ ಅದೇ ಜನ್ಮಜಾತಕ ಅಥವಾ ಜನ್ಮ ಕುಂಡಲಿ. ತಮ್ಮ ಜನ್ಮಕುಂಡಲಿ ಪರೀಕ್ಷಿಸಬೇಕು. ಅದರಲ್ಲಿ ಲಗ್ನದಿಂದ ಪಂಚಮ ಸ್ಥಾನ ನೋಡಿ ಸರಿಯಾಗಿ ಪರೀಕ್ಷಿಸಬೇಕು.ಪಂಚಮ ಸ್ಥಾನಕ್ಕೆ ಯಾರು ಅಧಿಪತಿ ಇದ್ದಾನೆ ,ಶುಭಗ್ರಹಗಳು…
ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವಾಗಿ ಬಾಳಬೇಕಾದರೆ ಅವರ ಜನ್ಮ ಕುಂಡಲಿಯಲ್ಲಿ ಇರುವ ಗ್ರಹಗಳೇ ಕಾರಣ. ನಿಮ್ಮ ಜನ್ಮ ಕುಂಡಲಿಯಲ್ಲಿ 2 ನೇ ಮನೆ, 7ನೇ ಮನೆ ಮತ್ತು 11ನೇ ಮನೆ ಪರೀಕ್ಷಿಸಬೇಕು. ಈ ಸ್ಥಾನದಲ್ಲಿ ಏನಾದರೂ ಶುಭಗ್ರಹಗಳಿದ್ದರೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಚಂದ್ರ, ಬುಧ, ಗುರು ಮತ್ತು ಶುಕ್ರ ಗಳಿಂದ ಉತ್ತಮ ಫಲ ದೊರಕುವುದು. ನಿಮ್ಮ ಕುಂಡಲಿಯಲ್ಲಿ 2 ನೇ ಮನೆ ,7 ನೇ ಮನೆ 11ನೇ ಮನೆ ಗ್ರಹಗಳೊಂದಿಗೆ ಶುಭಗ್ರಹಗಳಿದ್ದರೆ ತುಂಬಾ ಒಳ್ಳೆಯದು ಫಲ ನಿರೀಕ್ಷಣೆ ಮಾಡುವಿರಿ. ನಿಮ್ಮ ಲಗ್ನ ಕುಂಡಲಿದಲ್ಲಿ ಈ ಕೆಳಗಿನಂತೆ ಲಕ್ಷಣಗಳು ಕಂಡರೆ, 7ನೇ ಮನೆಯಲ್ಲಿ ಚಂದ್ರ ಇದ್ದರೆ, ದಾಂಪತ್ಯ ಜೀವನ ತೃಪ್ತಿ ದಾಯಕ. 7ನೇ ಮನೆಯಲ್ಲಿ ಬುಧ ಇದ್ದರೆ ದಾಂಪತ್ಯ ಜೀವನ ಸುಖಮಯ. 7ನೇ ಮನೆಯಲ್ಲಿ ಗುರು ಇದ್ದರೆ ಒಳ್ಳೆಯ ನಡತೆ ಹೆಂಡತಿ ಸಿಗುತ್ತಾಳೆ. ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ…
ಲಕ್ಷ್ಮಿ ಪೂಜಾ,ನರಕ ಚತುರ್ದಶಿ,ದೀಪಾವಳಿ ಸೂರ್ಯೋದಯ: 06.17 AM, ಸೂರ್ಯಾಸ್ತ : 05.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078 ಆಶ್ವಯುಜ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಚತುರ್ದಶಿ 02:44 PM ತನಕ ನಂತರ ಅಮವಾಸ್ಯೆ ನಕ್ಷತ್ರ: ಇವತ್ತು ಚಿತ್ತ 01:47 AM ತನಕ ನಂತರ ಸ್ವಾತಿ ಯೋಗ: ಇವತ್ತು ಆಯುಷ್ಮಾನ್ 04:25 PM ತನಕ ನಂತರ ಸೌಭಾಗ್ಯ ಕರಣ: ಇವತ್ತು ವಿಷ್ಟಿ 02:25 AM ತನಕ ನಂತರ ಶಕುನಿ 02:44 PM ತನಕ ನಂತರ ಚತುಷ್ಪಾದ ರಾಹು ಕಾಲ: 04:30 ನಿಂದ 06:00 ವರೆಗೂ ಯಮಗಂಡ: 12:00 ನಿಂದ 01:30 ವರೆಗೂ ಗುಳಿಕ ಕಾಲ: 03:00 ನಿಂದ 04:30 ವರೆಗೂ ಅಮೃತಕಾಲ: 05.40 PM to 07.20 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:37 ನಿಂದ ಮ.12:22 ವರೆಗೂ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್…
ಬೆಳಗಾವಿ:- ವೃತ್ತಿ ಘನತೆಯನ್ನು ಪತ್ರಕರ್ತರು ಎತ್ತಿ ಹಿಡಿಯಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪತ್ರಿಕಾರಂಗವು ಸಮಾಜ ತಿದ್ದುವ ಪಾತ್ರ ನಿರ್ವಹಿಸುತ್ತಿದೆ. ಸಮಾಜದಲ್ಲಿ ತೊಂದರೆ, ಸಮಸ್ಯೆಗಳಿದ್ದಲ್ಲಿ ಅಂತಹ ಕಡೆ ಬೆಳಕು ಚೆಲ್ಲುವ ಕೆಲಸಕ್ಕೆ ಮಾಧ್ಯಮ ಮುಂದಾಗಬೇಕು. ಪತ್ರಕರ್ತರು ತಮ್ಮ ವರದಿಗಳಿಂದ ವೃತ್ತಿ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಕಿವಿಮಾತು ಹೇಳಿದರು. ಇಂದಿನ ಎಲೆಕ್ಟ್ರಾನಿಜ್ ಹಾಗೂ ಡಿಜಿಟಲ್ ಮಾಧ್ಯಮಗಳು ಸುದ್ದಿ ಭರಾಟೆ ಹೆಚ್ಚಾಗಿದ್ದು, ಮೂಲ ಸುದ್ದಿಯ ಸ್ವರೂಪವೇ ಬದಲಾಗಿ ಕೆಲವೊಮ್ಮೆ ಬೇರೆಯದೇ ಅರ್ಥ ಮೂಡಿಸುತ್ತಿದೆ. ಆದ್ದರಿಂದ ಮೂಲ ಸುದ್ದಿ ಅಥವಾ ಹೇಳಿಕೆಗಳು ಯಥಾವತ್ತಾಗಿ ವರದಿಯಾಗಬೇಕು ಎಂದು ಹೇಳಿದರು. ಪತ್ರಕರ್ತರು ತಮ್ಮ ಕುಟುಂಬ ಮಕ್ಕಳ ವಿದ್ಯಾಭ್ಯಾಸಗಳತ್ತ ಗಮನಹರಿಸಬೇಕು. ಬೆಳಗಾವಿ ನಗರದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ಜತೆಗೆ ಈಗಾಗಲೇ ಸಭೆ ನಡೆಸಿ ಚರ್ಚಿಸಲಾಗಿದೆ. ಸ್ಥಳ ಗೊಂದಲವಿರುವ ಕಾರಣ ವಿಳಂಬವಾಗಿದೆ. ಸ್ಥಳ ನಿಗದಿಯಾದ ತಕ್ಷಣವೇ ಭವನ ನಿರ್ಮಾಣಕ್ಕೆ ಸೂಚಿಸಲಾಗುವುದು ಎಂದು…
ಚಿತ್ರದುರ್ಗ:- ಬಿಜೆಪಿ ಸಮಾಜ ಒಡೆಯುವ ನೀತಿ ಹೊಂದಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕಗೊಂಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ‘ಹೊಸ ಬಾಟಲಿಗೆ ಹಳೆ ವೈನ್’ ಎಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ ಸಮಾಜ ಒಡೆಯುವ ನೀತಿ ಹೊಂದಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಅವರ ಪಕ್ಷದ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ’ ಎಂದರು. ಸಮಾಜದಲ್ಲಿರುವ ಎಲ್ಲ ಜಾತಿಯವರು ನಮ್ಮ ಪಕ್ಷದೊಂದಿಗೆ ಇದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಜಯೇಂದ್ರ ಅವರಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಪಕ್ಷ ಸಂಘಟನೆಯಲ್ಲಿ ಡಿ.ಕೆ.ಶಿವಕುಮಾರ್ ಅನುಭವ ದೊಡ್ಡದು’ ಎಂದು ಹೇಳಿದರು.
ದೀಪಾವಳಿಯಲ್ಲಿ ಪಟಾಕಿಗಳನ್ನು ಸಿಡಿಸಿ ಜನರು ತಮ್ಮ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳುವುದು ಸಹಜ. ಅದೇ ರೀತಿ ದೀಪಾವಳಿ ಸಂದರ್ಭದಲ್ಲಿ ಕಣ್ಣುಗಳಿಗೆ ಹಾನಿ ಆಗುವ ಜತೆಗೆ ಜನರು ಸುಟ್ಟಗಾಯಗಳಿಗೆ ಒಳಗಾಗುವ ಅಪಾಯ ಕೂಡ ಅಧಿಕ. ಈ ಹಿನ್ನೆಲೆಯಲ್ಲಿ ತಜ್ಞರು ಒಂದಷ್ಟು ಮುನ್ನೆಚ್ಚರಿಕೆಗಳನ್ನು ಸೂಚಿಸುತ್ತಾರೆ. ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳಿಂದ ಕಣ್ಣಿಗೆ ಗಾಯಗಳಾಗುವ ಪ್ರಕರಣ ಹೆಚ್ಚಾಗಿರುತ್ತದೆ. ದೀಪಾವಳಿಯಲ್ಲಿ ಕೈ ಮತ್ತು ಬೆರಳುಗಳ ನಂತರ ಕಣ್ಣುಗಳಿಗೇ ಅಪಾಯ ಜಾಸ್ತಿ. ಹೀಗಾಗಿ ಪಟಾಕಿಗಳ ಸಂತಸದಲ್ಲಿ ಕಣ್ಣಿನ ಸುರಕ್ಷತೆ ಬಗ್ಗೆಯೂ ಹೆಚ್ಚಿನ ಗಮನ ಇರಬೇಕು ಎಂದು ಡಾ.ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ಕ್ಲಿನಿಕಲ್ ಸೇವೆಗಳ ಮುಖ್ಯಸ್ಥೆ ಡಾ.ಬಿಂದಿಯಾ ಹಪಾನಿ ತಿಳಿಸಿದ್ದಾರೆ. ಪಟಾಕಿಗಳನ್ನು ಸಿಡಿಸುವವರು ಮಾತ್ರವಲ್ಲದೆ ನೋಡುಗರಿಗೂ ಅಪಾಯವಿದ್ದು, ಅವರಲ್ಲಿ ಶೇ. 50ಕ್ಕೂ ಹೆಚ್ಚು ಜನರು ಸಂಭಾವ್ಯ ಕಣ್ಣಿನ ಗಾಯಗಳನ್ನು ಎದುರಿಸುತ್ತಾರೆ ಎಂದಿರುವ ಅವರು ಒಂದಷ್ಟು ಮುನ್ನೆಚ್ಚರಿಕೆ ಹಾಗೂ ಸಲಹೆ-ಸೂಚನೆಗಳನ್ನು ನೀಡಿದ್ದಾರೆ. ಪಟಾಕಿಗಳಿಂದ ಕಣ್ಣುಗಳಿಗೆ ಆಗುವ ಗಾಯಗಳಿಂದ ಇಲ್ಲವೇ ಪಟಾಕಿ ಕಿಡಿಯ ಸ್ಪರ್ಶದಿಂದ ಕುರುಡುತನ ಉಂಟಾಗುವ ಸಾಧ್ಯತೆಯೂ ಇರುತ್ತದೆ. ಪಟಾಕಿಗಳಲ್ಲಿ ಗನ್ ಪೌಡರ್‌ನಲ್ಲಿ ಇರುವಂಥ…
ಬೆಂಗಳೂರು:- ಕೆಲಸ ಇಲ್ಲದೇ ಖಾಲಿ ಕೂತರೂ ವಿಚ್ಚೇದನ ಪತ್ನಿಗೆ ಪತಿ ಜೀವನಾಂಶ ಕೊಡಲೇಬೇಕು ಎಂದು ಹೈಕೋರ್ಟ್ ಹೇಳಿದೆ. ಜೀವನ ಪೂರ್ತಿ ಒಟ್ಟಿಗೆ ಬಾಳ್ವೆ ಮಾಡುವುದಾಗಿ ಮದುವೆಯಾಗಿ ಈಗ ಪತ್ನಿಯೊಂದಿಗೆ ಜೀವನ ಮಾಡಲು ಸಾಧ್ಯವಿಲ್ಲವೆಂದು ವಿಚ್ಛೇದನ ಪಡೆಯುವ ಪತಿರಾಯ, ತನಗೆ ದುಡಿಮೆಯಿಲ್ಲವೆಂದು ಅಥವಾ ಕೆಲಸವಿಲ್ಲವೆಂದು ಜೀವನಾಂಶ ಕೊಡುವುದನ್ನು ನಿರಾಕರಣೆ ಮಾಡುವಂತಿಲ್ಲ. ಹೀಗಾಗಿ, ವಿಚ್ಛೇದಿತ ಪತ್ನಿಗೆ ನೀವು ಹೇಗಾದರೂ ಮಾಡಿ ಜೀವನಾಂಶವನ್ನು ಕೊಡಲೇಬೇಕು ಎಂದು ನ್ಯಾಯಾಲಯ ತಿಳಿಸಿದೆ. ಕಳೆದ 2020ರಲ್ಲಿ ವಿವಾಹ ಆಗಿದ್ದ ದಂಪತಿಯ ದಾಂಪತ್ಯ ಕೆಲವೇ ತಿಂಗಳಲ್ಲಿ ಮುರಿದುಬಿದ್ದಿತ್ತು. ಇದರಿಂದಾಗಿ ಪರಸ್ಪರ ಒಪ್ಫಿಗೆ ಮೇರೆಗೆ ದಂಪತಿ ವಿಚ್ಛೇದನ ಪಡೆದಿದ್ದರು. ಈ ವೇಳೆ ಕುಟುಂಬ ನ್ಯಾಯಾಲಯದಲ್ಲಿ ದಂಪತಿ ಪರಸ್ಪರ ಒಪ್ಪಿದ್ದರಿಂದ ವಿಚ್ಚೇದನವನ್ನು ಊರ್ಜಿತ ಮಾಡಿತ್ತು. ಜೊತೆಗೆ, ಗೃಹಿಣಿಯಾಗಿದ್ದ ಪತ್ನಿಗೆ ಜೀವನ ನಿರ್ವಹಣೆಗೆ ಮಾಸಿಕ 10 ಸಾವಿರ ರೂಪಾಯಿ ಜೀವನಾಂಶ ನೀಡಬೇಕು ಎಂದು ಆದೇಶ ಹೊರಡಿಸಿತ್ತು. ಇದಾದ ನಂತರ ಕೆಲವು ತಿಂಗಳ ಕಾಲ ಜೀವನಾಂಶ ನೀಡಿದ್ದ ಪತಿರಾಯ ನಂತರ ತಾನು ಕೆಲಸಕ್ಕೆ ಹೋಗುವುದನ್ನು ಬಿಟ್ಟು ಮನೆಯಲ್ಲಿದ್ದನು.…
ಚನ್ನಪಟ್ಟಣ:- ಅಧಿಕಾರಿಗಳು ಪ್ರಾಮಾಣಿಕ ಜನಸೇವೆ ಮಾಡಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಜಿಲ್ಲೆಯಲ್ಲೆಡೆ ಬರ ಆವರಿಸಿದ್ದು, ಕೃಷಿ, ರೇಷ್ಮೇ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಿ ರೈತರಿಗೆ ನೆರವಾಗಬೇಕು ಎಂದರು. ಬಹುತೇಕ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇರುವುದು ಗಮನಕ್ಕೆ ಬಂದಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಲಭ್ಯ ಸಿಬ್ಬಂದಿಯೊಂದಿಗೆ ಸಾರ್ವಜನಿಕ ಕೆಲಸಗಳಿಗೆ ಅಡ್ಡಿಯಾಗದಂತೆ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಅಧಿಕಾರಿಗಳು ಯಾವುದೇ ಒತ್ತಡಗಳಿಗೆ ಒಳಗಾಗದೆ ಪ್ರಾಮಾಣಿತೆಯಿಂದ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕು. ನಾನು ಎಂದಿಗೂ ಕಾನೂನು ಬಾಹಿರ ಕೆಲಸ ಮಾಡಲು ಅವಕಾಶ ನೀಡಿಲ್ಲ. ಹಿಂದೆ ಹೇಗೆ ಕೆಲಸ ಮಾಡಿದಿರೋ ಗೊತ್ತಿಲ್ಲ, ಇನ್ನು ಮುಂದೆ ಬದ್ಧತೆಯಿಂದ ಕೆಲಸ ಮಾಡಿ ಎಂದು ತಾಕೀತು ಮಾಡಿದರು. ತಾಲೂಕಿನಲ್ಲಿ ಅತಿ ಹೆಚ್ಚು ಸಮಸ್ಯೆಗಳು ಸೃಷ್ಟಿಯಾಗುವುದೇ ಕಂದಾಯ ಇಲಾಖೆಯಲ್ಲಿ. ಕಂದಾಯ ಇಲಾಖೆ ಅಧಿಕಾರಿಗಳು ರೈತರನ್ನು ಕಚೇರಿಗೆ ಅಲೆದಾಡಿಸಬೇಡಿ. ಲಂಚಕ್ಕಾಗಿ ಪೀಡಿಸದೇ ಅವರ ಸಂಕಷ್ಟ ಅರಿತು ಕೆಲಸ ಕಾರ್ಯಗಳನ್ನು ತ್ವರಿವಾಗಿ…
ಬೆಂಗಳೂರು:- ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಆಗುತ್ತಾರೆ, ಡಿಸಿಎಂ ಆಗ್ತಾರೆ ಎಂಬ ವಿಚಾರದ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಸದ್ಯಕ್ಕೆ ಯಾವ ಚರ್ಚೆಯೂ ಇಲ್ಲ. ಎಲ್ಲರೂ ಚುನಾವಣೆಯಲ್ಲಿ ಬಿಜಿಯಾಗಿದ್ದಾರೆ. ಅದೇನೆ ಇದ್ರೂ ಹೈಕಮಾಂಡ್ ತೀರ್ಮಾನ ಮಾಡಬೇಕು. ಅಂತಹ ಚರ್ಚೆ ಈಗ ಸದ್ಯಕ್ಕೆ ನಡೆಯುತ್ತಿಲ್ಲ. ಚುನಾವಣೆ ಮುಗಿದ ಮೇಲೆ ಏನಾಗುತ್ತದೆ, ಮುಗಿದ ಮೇಲೆ ಏನು ಮಾಡ್ತಾರೆ ಕಾದುನೋಡಬೇಕಿದೆ ಎಂದು ಹೇಳಿದರು. ಇನ್ನೂ ಬೆಳಗಾವಿ ರಾಜಕಾರಣದಲ್ಲಿ ಹೊರಗಿನವರ ಹಸ್ತಕ್ಷೇಪದ ವಿಚಾರದಲ್ಲಿ ಬುಸುಗುಡುತ್ತಿರುವ ಸಚಿವ ಸತೀಶ್ ಜಾರಕಿಹೊಳಿ ಅವರು ಇದೀಗ ಮತ್ತೊಮ್ಮೆ ತಮ್ಮ ಆಕ್ಷೇಪವನ್ನು ಹೊರಹಾಕಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಮಾತೇ ಇಲ್ಲ ಎಂದರು. ʻʻಡಿ.ಕೆ ಶಿವಕುಮಾರ್ ಅವರು ನಮ್ಮ ಮನೆಗೆ ಸುಮಾರು ಬಾರಿ ಬಂದಿದ್ದಾರೆ. ಈ ವೇಳೆ ಪಕ್ಷದ ವಿಚಾರ ಮತ್ತು ಅಭಿವೃದ್ಧಿ ವಿಚಾರದ ಕುರಿತು ಚರ್ಚೆ ಆಗಿದೆʼʼ ಎಂದು ಹೇಳಿದ ಅವರು, ನಾವು ಮೈಸೂರಿಗೆ ಭೇಟಿ ನೀಡುವ ವಿಚಾರವೇ ಬೇರೆ,…