ಬಳ್ಳಾರಿ:- ಗಣಿನಾಡು ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಹಿಡಿತದಲ್ಲಿದೆ. ಜಿಲ್ಲೆಯ ಐದೂ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇದೀಗ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಇದು ಕೈಗೆ ಪ್ರತಿಷ್ಠೆಯಾಗಿದೆ. ನ.28ರಂದು ಬಳ್ಳಾರಿ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ನಡೆಯಲಿದೆ. ರಾಜ್ಯದ ಕಿರಿಯ ಮೇಯರ್ ಹೆಗ್ಗಳಿಕೆಗೆ ಪಾತ್ರವಾಗಿದ್ದ 23 ವರ್ಷದ ಡಿ.ತ್ರಿವೇಣಿ ಏಳು ತಿಂಗಳು ಆಡಳಿತ ನಡೆಸಿ, ನವೆಂಬರ್ 4ರಂದು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನೂತನ ಮೇಯರ್, ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನ ಎಸ್ಸಿ ಸಮುದಾಯಕ್ಕೆ ಮೀಸಲಾಗಿದೆ. ಉಪಮೇಯರ್ ಸ್ಥಾನಕ್ಕೆ ಎಸ್ಟಿ (ಮಹಿಳೆ) ಮೀಸಲಾಗಿದೆ. ಪಾಲಿಕೆಯ 39 ವಾರ್ಡ್‌ಗಳ ಪೈಕಿ ಬಿಜೆಪಿಯ 13 ಸದಸ್ಯರಿದ್ದರೇ, ಕಾಂಗ್ರೆಸ್ 21 ಸದಸ್ಯರು ಮತ್ತು ಐವರು ಪಕ್ಷೇತರ ಸದಸ್ಯರಿದ್ದಾರೆ. ಈ ಐವರು ಪಕ್ಷೇತರರು ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೇ ನಂ 28 ಕ್ಕೆ ನಡೆಯುವ ಚುನಾವಣೆಯಲ್ಲಿಯು ಈ ಬಾರಿಯ ಕಾಂಗ್ರೇಸ್ ಮತ್ತೆ ತನ್ನ ಪಾರುಪತ್ಯವನ್ನು ಸಾಧಿಸುವುದು ಮೇಲ್ನೋಟಕ್ಕೆ ಸಬೀತಾಗಿದೆ.
Author: AIN Author
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಹಾಗೂ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ನಾಲ್ಕು ವರ್ಷಗಳ ಹಿಂದೆ ತಮ್ಮ ಮರಣದಂಡನೆ ಶಿಕ್ಷೆ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು, ಅವರು ನಿಧನರಾಗಿ 9 ತಿಂಗಳ ಬಳಿಕ ವಿಚಾರಣೆ ನಡೆಸಲು ಅಲ್ಲಿನ ಸುಪ್ರೀಂಕೋರ್ಟ್ ನಿರ್ಧರಿಸಿದೆ. 2019ರ ದೇಶದ್ರೋಹ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಮುಷರಫ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈ ವರ್ಷದ ಫೆಬ್ರವರಿ 5ರಂದು ನಿಧನರಾದ ಮುಷರಫ್ ಅವರು ನಾಲ್ಕು ವರ್ಷಗಳ ಹಿಂದೆಯೇ ಗಲ್ಲು ಶಿಕ್ಷೆ ರದ್ದತಿಗೆ ಕೋರಿ ಅರ್ಜಿ ಸಲ್ಲಿಸಿದ್ದರು. “ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ನೇತೃತ್ವದ ನಾಲ್ವರು ಸದಸ್ಯರ ವಿಸ್ತೃತ ಪೀಠವು, ಈ ಹಿಂದೆ ಪ್ರರ್ವೇಜ್ ಮುಷರಫ್ ಅವರ ದೇಶದ್ರೋಹ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಲು ನಿರ್ಧರಿಸಿದೆ” ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಪರ್ವೇಜ್ ಮುಷರಫ್ ಅವರ ಅರ್ಜಿ ವಿಚಾರಣೆ ನಿರರ್ಥಕ ಎಂಬ ಲಾಹೋರ್…
‘ಕಿಸ್’ ಬೆಡಗಿ ಶ್ರೀಲೀಲಾ (Sreeleela) ಈಗ ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಸ್ಕಂದ’ ಮತ್ತು ‘ಭಗವಂತ ಕೇಸರಿ’ ಚಿತ್ರ ಹಿಟ್ ಆದ್ಮೇಲೆ ತಮ್ಮ ಸಂಭಾವನೆಯನ್ನ ಶ್ರೀಲೀಲಾ ಏರಿಸಿಕೊಂಡಿದ್ದಾರೆ. ‘ಧಮಾಕ’ (Dhamaka) ಬೆಡಗಿ ಟಾಲಿವುಡ್‌ನಲ್ಲಿ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ. ಮುಟ್ಟಿದೆಲ್ಲಾ ಚಿನ್ನ ಆಗ್ತಿದೆ. ಸಾಲು ಸಾಲು ಸಿನಿಮಾಗಳು ಆಫರ್‌ಗಳು ಶ್ರೀಲೀಲಾರನ್ನ ಅರಸಿ ಬರುತ್ತಿವೆ. ಹೀಗಿರುವಾಗ ನಟಿಗೆ ಡಿಮ್ಯಾಂಡ್ ಜಾಸ್ತಿ ಆಗುತ್ತಿದ್ದಂತೆ ಸಂಭಾವನೆ ಏರಿಕೆ ಮಾಡಿದ್ದಾರೆ. ಕೆರಿಯರ್ ಆರಂಭದಲ್ಲಿಯೇ ದುಬಾರಿ ನಟಿಯಾಗಿ ಸದ್ದು ಮಾಡ್ತಿದ್ದಾರೆ. ಒಂದು ಸಿನಿಮಾಗೆ 3.5 ಕೋಟಿ ಅಥವಾ 3 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದ ನಟಿ ಈಗ 4 ಕೋಟಿ ರೂಪಾಯಿಗೆ ಏರಿಕೆ ಮಾಡಿದ್ದಾರೆ. ಸದ್ಯ ಸಿನಿಮಾ ಜೊತೆಗೆ ಶ್ರೀಲೀಲಾ ಸಂಭಾವನೆ ಮ್ಯಾಟರ್ ಸಿನಿಪಂಡಿತರ ಚರ್ಚೆಗೆ ಗ್ರಾಸವಾಗಿದೆ. ‘ಆದಿಕೇಶವ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಪವನ್ ಕಲ್ಯಾಣ್, ಅಲ್ಲು ಅರ್ಜುನ್, ನಿತಿನ್ ಜೊತೆಗಿನ ಸಿನಿಮಾ ಕೆಲಸಗಳು ನಡೆಯುತ್ತಿದೆ. ಸದ್ಯದಲ್ಲೇ ರಿಲೀಸ್ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.
ಬೆಂಗಳೂರು: ನಗರದ ಮುಖ್ಯರಸ್ತೆಯ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಜಾಗರೂಕತೆಯಿಂದ ಭಾರಿ ಅಪಾಯದ ಘಟನೆಯೊಂದು ತಪ್ಪಿದಂತಾಗಿದೆ. ದಾಸನಪುರ ಡಿಪೋದಿಂದ ನೆಲಮಂಗಲ ಪಟ್ಟಣಕ್ಕೆ ಆಗಮಿಸುತ್ತಿದ್ದ ಬಿಎಂಟಿಸಿ ಬಸ್ ನಗರದ ಜೆಪಿ ಆಸ್ಪತ್ರೆ ಸಮೀಪ ಶಾರ್ಟ್ ಸಕ್ರ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಇನ್ನೂ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಜನರು ಭಯಗೊಂಡಿದ್ದಾರೆ. ಬಸ್ ನಲ್ಲಿದ್ದ ಜನರು ಕೂಗಾಡಿದ್ದಾರೆ, ತಕ್ಷಣ ಬಸ್ ನಿಲ್ಲಿಸಿದ ಚಾಲಕ ಪ್ರಯಾಣಿಕರನ್ನು ಕೆಳಗೆ ಇಳಿಸಿ ನಂತರ ಹಿಂದೆ ಬರುತ್ತಿದ್ದ ಬಸ್‌ನಲ್ಲಿದ್ದ ಬೆಂಕಿ ನಂದಿಸುವ ಸಾಧನದಿಂದ ಬೆಂಕಿಯನ್ನು ನಂದಿಸುವ ಮೂಲಕ ಜಾಗರೂಕತೆಯಿಂದ ಭಾರಿ ಅಪಾಯವನ್ನು ತಪ್ಪಿಸಿದ್ದಾರೆ. ಅಲ್ಲದೇ ಬೆಂಕಿ ಅವಘಡದ ಘಟನೆಯಲ್ಲಿಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ. ಬೆಂಕಿ ಕಾಣಿಸಿಕೊಂಡ ವಿಚಾರ ತಿಳಿದು ಜನರು ಹೆಚ್ಚಾಗಿ ಸೇರಿಕೊಂಡ ಪರಿಣಾಮ ಸ್ಥಳಕ್ಕೆ ಟೌನ್ ಇನ್‌ಸ್ಪೆಕ್ಟರ್ ಶಶಿಧರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೀಪಾವಳಿ ಸಂಭ್ರಮ ಭಾನುವಾರ ರಂಗೇರಿತ್ತು. ವಿಶ್ವಕಪ್ ಕೊನೆಯ ಲೀಗ್ ಪಂದ್ಯ ನೆದರ್ಲ್ಯಾಂಡ್ಸ್ ಮತ್ತು ಭಾರತದ ನಡುವೆ ಭಾನುವಾರ ಪಂದ್ಯ ನಡೆದಿದೆ. ವಿರಾಟ್ ಕೊಹ್ಲಿ ‘ಶತಕಗಳ ಅರ್ಧಶತಕ’ ದಾಖಲೆ ಮಾಡಲಿಲ್ಲ. ಆದರೆ ಮೂವರು ಬ್ಯಾಟರ್‌ಗಳ ಅರ್ಧಶತಕ ಮತ್ತು ಎರಡು ಶತಕಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ದೊರೆಯಿತು. ಅದರಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅವರ ಮಿಂಚಿನ ಶತಕವೂ ಒಂದಾಗಿತ್ತು. ಇದಲ್ಲದೇ ಆತಿಥೇಯ ಬಳಗದ ಒಂಬತ್ತು ಆಟಗಾರರ ಬೌಲಿಂಗ್ ನೋಡುವ ಅವಕಾಶವೂ ದೊರೆಯಿತು! ಒಟ್ಟಾರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೀಪಾವಳಿ ಸಂಭ್ರಮಕ್ಕೆ ರಂಗೇರಿತು. ಪಂದ್ಯದಲ್ಲಿ ಒಟ್ಟು 19 ಸಿಕ್ಸರ್, 56 ಬೌಂಡರಿಗಳು ಪಟಾಕಿಗಳಂತೆ ಸಿಡಿದವು. ಮೊದಲೇ ನಿರೀಕ್ಷಿಸಿದಂತೆ ಭಾರತ ತಂಡವು 160 ರನ್‌ಗಳಿಂದ ಜಯಿಸಿತು. ಇದರೊಂದಿಗೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಭಾರತವು ಅಜೇಯವಾಗುಳಿಯಿತು. ಇನ್ನೆರಡು ದಿನಗಳ ನಂತರ ಮುಂಬೈನಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ರೋಹಿತ್ ಶರ್ಮಾ ಬಳಗವು ಎದುರಿಸಲಿದೆ ಇಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಬ್ಯಾಟಿಂಗ್…
ಸ್ಪಿನ್ ಬೌಲಿಂಗ್ ತಂತ್ರವನ್ನು ಮರು ಮೌಲ್ಯಮಾಪನ ಮಾಡುವ ಬಗ್ಗೆ ನಾನು ನೀಡಿದ್ದ ಸಲಹೆಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಆಝಮ್ ಹಾಗೂ ಪಿಸಿಬಿ ಕ್ರಿಕೆಟ್ ನಿರ್ದೇಶದ ಮಿಕ್ಕಿ ಆರ್ಥರ್ ಅವರು ನಿರಾಕರಿಸಿದ್ದರು ಶನಿವಾರ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ ತಂಡ 93 ರನ್‌ಗಳಿಂದ ಸೋಲು ಅನುಭವಿಸಿತು. ಆ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ಸ್ ರೇಸ್‌ನಿಂದ ಅಧಿಕೃತವಾಗಿ ಹೊರ ನಡೆಯಿತು. ಒಟ್ಟಾರೆ ಆಡಿದ್ದ 9 ಪಂದ್ಯಗಳಿಂದ 4ರಲ್ಲಿ ಗೆಲುವು ಪಡೆಯುವ ಮೂಲಕ ಬಾಬರ್ ಆಝಮ್ ಪಡೆ 5ನೇ ಸ್ಥಾನದೊಂದಿಗೆ ಏಕದಿನ ವಿಶ್ವಕಪ್ ಟೂರ್ನಿಯ ಅಭಿಯಾನವನ್ನು ಮುಗಿಸಿತು. ಸಂದರ್ಶನವೊಂದರಲ್ಲಿ ಮಾತನಾಡಿದ ಮಿಸ್ಬಾ ಉಲ್ ಹಕ್, “ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮುಖ್ಯಸ್ಥ ಝಕಾ ಅಶ್ರಫ್ ಅವರು ಏಕದಿನ ವಿಶ್ವಕಪ್ ನಿಮಿತ್ತ ನನ್ನ ಮತ್ತು ಮೊಹಮದ್ ಹಫೀಝ್ ಬಳಿ ಸಲಹೆ ಕೇಳಿದ್ದರು. ಅದರಂತೆ ನಾನು, ಏಷ್ಯಾ ಕಪ್‌ಗೂ ಮುನ್ನ ಶದಾಬ್ ಖಾನ್ ಮತ್ತು ಮೊಹಮ್ಮದ್ ನವಾಝ್ ಅವರ ಜೊತೆ ಮತ್ತೊಬ್ಬ ಸ್ಪಿನ್ನರ್ ಅಗತ್ಯವಿದೆ ಎಂದು ಹೇಳಿದ್ದೆ,”…
ರಾಜಸ್ಥಾನ: ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯ ಲಾಲೋಟ್ ಪ್ರದೇಶದಲ್ಲಿ ನಡೆದಿದೆ. ಭೂಪೇಂದ್ರ ಸಿಂಗ್ ಎಂಬ ಸಬ್ ಇನ್ಸ್‌ಪೆಕ್ಟರ್ 4 ವರ್ಷದ ಬಾಲಕಿಯನ್ನು ಮಧ್ಯಾಹ್ನ ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆಯುವ ಮೊದಲು ಸ್ಥಳೀಯ ನಿವಾಸಿಗಳು ಥಳಿಸಿದ್ದಾರೆ. ಬಳಿಕ ರಾಹುವಾಸ್ ಠಾಣೆಗೆ ಮುತ್ತಿಗೆ ಹಾಕಿ, ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಬಜರಂಗ್ ಸಿಂಗ್, ”ಚುನಾವಣಾ ಕರ್ತವ್ಯದಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಭೂಪೇಂದ್ರ ಸಿಂಗ್ ಮಧ್ಯಾಹ್ನ ಬಾಲಕಿಯನ್ನು ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಸದ್ಯ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಆರೋಪಿಯನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ. ”ಸ್ಥಳೀಯ ನಿವಾಸಿಗಳು ನೀಡಿದ ದೂರಿನ ಆಧಾರದ ಮೇಲೆ ಭೂಪೇಂದ್ರ ಎಂದು ಗುರುತಿಸಲಾದ ಎಸ್‌ಐ ವಿರುದ್ಧ ರಾಹುವಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು…
ನಮ್ಮ ಆಹಾರ ಸೇವನೆಯಲ್ಲಿ ಕೊಂಚ ವ್ಯತ್ಯಾಸವಾದರೂ ಅದರ ಅದು ಹೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಆಹಾರ ಹೆಚ್ಚು ಸೇವಿಸದರೂ ಕಷ್ಟ, ಕಡಿಮೆ ಸೇವಿಸಿದರೂ ಕಷ್ಟ. ಹೀಗಾಗಿ ಸಮತೋಲಿತ ಆಹಾರವನ್ನು ಸೇವನೆ ಮಾಡುವುದು ಮುಖ್ಯವಾಗಿರುತ್ತದೆ. ಆದರೂ ಕೆಲವೊಮ್ಮೆ ತಿಂದ ಆಹಾರ ಅಜೀರ್ಣವಾಗಿ ಹೊಟ್ಟೆ ನೋವು ಕಾಡಬಹುದು. ಅಜೀರ್ಣವಾದರೆ ಹೊಟ್ಟೆ ಮುರಿಯುವುದು, ವಾಕರಿಕೆಯಂತಹ ಸಮಸ್ಯೆಗಳೂ ಉಂಟಾಗುತ್ತದೆ. ಇದಕ್ಕೇನು ಭಯಪಡುವ ಅಗತ್ಯವಿಲ್ಲ, ಮನೆಮದ್ದಿನಿಂದಲೇ ಶಮನ ಮಾಡಿಕೊಳ್ಳಬಹುದು. ಸೋಂಪಿನ ಕಾಳುಗಳು ಊಟದ ಬಳಿಕ ದಿನನಿತ್ಯ ಸೋಂಪಿನ ಕಾಳುಗಳನ್ನು ಸೇವನೆ ಮಾಡುವುದರಿಂದ ಅಜೀರ್ಣವನ್ನು ಶಮನ ಮಾಡಿಕೊಳ್ಳಬಹುದಾಗಿದೆ. ಇದು ಹೊಟ್ಟೆ ಸೆಳೆತ, ವಾಕರಿಕೆ ಮತ್ತು ಉಬ್ಬುವಿಕೆಯನ್ನು ಸಹ ಸರಾಗಗೊಳಿಸುತ್ತದೆ. ಸೋಂಪಿನ ಕಾಳುಗಳು ಫೆನ್‌ಕೋನ್ ಮತ್ತು ಎಸ್ಟ್ರಾಗೋಲ್ ಎಂಬ ತೈಲ ಸಂಯುಕ್ತಗಳನ್ನು ಹೊಂದಿದ್ದು ಅದು ಕರುಳಿನ ಅನಿಲವನ್ನು ಹೊರಹಾಕಲು ಸಹಾಯ ಮಾಡುತ್ತದೆ, ಜೀರ್ಣಕಾರಿ ರಸಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಆಂಟಿಸ್ಪಾಸ್ಮೊಡಿಕ್ ಗುಣಲಕ್ಷಣಗಳನ್ನು ಹೊಂದಿದೆ. ಅಡುಗೆ ಸೋಡ ಅಡುಗೆ ಸೋಡಾವು ಅಜೀರ್ಣವನ್ನು ಸರಿಪಡಿಸುತ್ತದೆ. ಅಲ್ಲದೆ ಹೊಟ್ಟೆಯುಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆಯನ್ನೂ ನಿವಾರಣೆ ಮಾಡುತ್ತದೆ. ಅದಕ್ಕಾಗಿ…
ಪ್ರವಾಸ ಹೋಗುವುದೆಂದರೆ ಯಾರಿಗಿಷ್ಟ ಇರೋದಿಲ್ಲ ಹೇಳಿ .. ಅದು ಬೇರೆ ಬೇರೆ ಹೊಸ ಜಾಗ ನೋಡೋದು ಅಂದ್ರೆ ತುಂಬಾ ಜನಕ್ಕೆ ಏನೋ ಖುಷಿ . ದೇಶ ಸುತ್ತಿನೋಡು ಕೋಶ ಓದಿ ನೋಡು ಅನ್ನುವ ಗಾದೆ ಮಾತಿನ ಹಾಗೆ ದೇಶ ವಿದೇಶಗಳಿಗೆ ಹೋಗೋದು ಅಂದ್ರೆ ಕೆಲವರಿಗೆ ಇಷ್ಟ. ನಾವು ನಿಮಗೆ ಹೇಳ್ತೀವಿ ನೋಡಿ ಅತ್ಯಂತ ಸುಂದರ ಪ್ರವಾಸಿ ತಾಣಗಳ ಬಗ್ಗೆ ತಿಳಿಯೋಣ. ಸಾಂಪ್ರದಾಯಿಕ ಪ್ರವಾಸಿ ಆಕರ್ಷಣೆಗಳು ಒಂದು ಕಾರಣಕ್ಕಾಗಿ ಜನಪ್ರಿಯವಾಗಿವೆ. ಐಫೆಲ್ ಟವರ್‌ನ ಮುಂದೆ ಫೋಟೋ ಸ್ನ್ಯಾಪ್ ಮಾಡುವುದು ಅಥವಾ ಐಸ್‌ಲ್ಯಾಂಡ್‌ನ ಬ್ಲೂ ಲಗೂನ್‌ನಲ್ಲಿ ಸ್ನಾನ ಮಾಡುವುದು ಸ್ವಲ್ಪ ಕ್ಲೀಷೆ ಆಗಿರಬಹುದು, ಆದರೆ ಅಂತಿಮವಾಗಿ ಪೋಸ್ಟ್‌ಕಾರ್ಡ್‌ನಲ್ಲಿ ಬದಲಿಗೆ ಪ್ರಖ್ಯಾತ ಹೆಗ್ಗುರುತನ್ನು ಅಥವಾ ನೈಸರ್ಗಿಕ ಅದ್ಭುತವನ್ನು ವೈಯಕ್ತಿಕವಾಗಿ ನೋಡುವುದರಲ್ಲಿ ಏನಾದರೂ ಶಕ್ತಿಯುತವಾಗಿದೆ ಚೀನಾ: ಚೀನಾದ ಮಹಾಗೋಡೆ 13,000 ಮೈಲುಗಳಷ್ಟು ಉದ್ದವಿರುವ, ಚೀನಾದ ಮಹಾಗೋಡೆಯು UNESCO ವಿಶ್ವ ಪರಂಪರೆಯ ತಾಣವಾಗಿದೆ ಮತ್ತು 2007 ರಲ್ಲಿ ವಿಶ್ವದ ಹೊಸ ಏಳು ಅದ್ಭುತಗಳಲ್ಲಿ ಒಂದಾಗಿ ಆಯ್ಕೆಯಾಗಿದೆ. ಗ್ರೇಟ್ ವಾಲ್‌ನ…
ಮುಂಬೈ: ಅಕ್ಟೋಬರ್ 5ರಿಂದ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ 2023 ಟೂರ್ನಿ ಈಗ ನಿರ್ಣಾಯಕ ಹಂತಕ್ಕೆ ಬಂದಿದ್ದು, ಸೆಮಿಫೈನಲ್ ಕದನದ ವಿವರವನ್ನು ಐಸಿಸಿ ಅಧಿಕೃತವಾಗಿ ಪ್ರಕಟಿಸಿದೆ. ಆರಂಭದಿಂದ ಇಲ್ಲಿಯವರೆಗೂ ಒಂದು ಪಂದ್ಯವನ್ನು ಸೋಲದೆ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವಲ್ಲಿ ಪಾಕಿಸ್ತಾನ ವಿಫಲವಾಗಿದ್ದು, ಮನೆ ಕಡೆ ಹೋಗುವುದು ಖಚಿತವಾಗಿದೆ. ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ 337 ರನ್ಗಳ ಬೃಹತ್ ಮೊತ್ತ ಪೇರಿಸಿದ್ದರಿಂದ ಪಾಕಿಸ್ತಾನ ಸೆಮಿಫೈನಲ್ ಪ್ರವೇಶವನ್ನು ತಪ್ಪಿಸಿಕೊಂಡಿತು. ಭಾರತ ಇಂದು ನೆದರ್ಲ್ಯಾಂಡ್ಸ್ ವಿರುದ್ಧ ಸೆಣಸಲಿದೆ. ಆದಾಗ್ಯೂ, ಈ ಪಂದ್ಯ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ನವೆಂಬರ್ 15ರಂದು ಮುಂಬೈಯಲ್ಲಿ ಭಾರತ Vs ನ್ಯೂಜಿಲೆಂಡ್ ವಿರುದ್ಧ ಮೊದಲ ಸೆಮಿಫೈನಲ್ ಪಂದ್ಯ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ನವೆಂಬರ್ 16 ರಂದು ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ Vs ಆಸ್ಟ್ರೇಲಿಯಾ ನಡುವೆ…