ಬೆಂಗಳೂರು: ಎಂಬಿಬಿಎಸ್ ವಿದ್ಯಾರ್ಥಿನಿ 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಎಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ನಲ್ಲಿ ನಡೆದಿದೆ. https://ainlivenews.com/sudden-increase-in-air-pollution-in-bangalore-due-to-fireworks/ ಪ್ರಕೃತಿ ಶೆಟ್ಟಿ (20) ಮೃತ ವಿದ್ಯಾರ್ಥಿನಿ, ಬೆಳಗಾವಿ ಮೂಲಕ ಅಥಣಿ ಮೂಲದ ಪ್ರಕೃತಿ ಮೊದಲನೇ ವರ್ಷದ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದಳು, ನಸುಕಿನ 3 ಗಂಟೆ ವೇಳೆಗೆ ಹಾಸ್ಟೆಲ್ ಕಟ್ಟಡದ 6ನೇ ಮಹಡಿಯಿಂದ ಹಾರಿ ಪ್ರಾಣಕಳೆದು ಕೊಂಡಿದ್ದಾಳೆ. ದಪ್ಪಗಿದ್ದೇನೆ ಎನ್ನುವ ಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾದ ವಿದ್ಯಾರ್ಥಿನಿ ಸಾವಿಗೀಡಾಗಿದ್ದಾಳೆ.
Author: AIN Author
ಮಧುಗಿರಿ;- ಕೇಂದ್ರದ ಬಿಜೆಪಿಗೆ ಕರ್ನಾಟಕದ ಬಗ್ಗೆ ಕೇಂದ್ರಕ್ಕೆ ಕಾಳಜಿ ಇಲ್ಲ ಎಂದು ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೇಂದ್ರ ಸರ್ಕಾರ ರಾಜ್ಯದ ರೈತರ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೇಂದ್ರದ ಬರ ಅದ್ಯಯನ ತಂಡ ರಾಜ್ಯದಲ್ಲಿ ಬರ ಪರಿಸ್ಥಿತಿ ಪರಿಶೀಲಿಸಿ ವರದಿ ನೀಡಿದ ನಂತರವೂ ಕೇಂದ್ರದಿಂದ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ’ ಎಂದರು. ರಾಜ್ಯದ 223 ತಾಲ್ಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ರಾಜ್ಯದ ರೈತರ ಕಷ್ಟಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜಕೀಯಕ್ಕಾಗಿ ಬಿಜೆಪಿ ಬರ ಅಧ್ಯಯನ ಮಾಡುತ್ತಿದೆ. ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ಹಣ ಕೊಡಿಸುವ ಕೆಲಸ ಮಾಡಬೇಕು ಎಂದರು. https://ainlivenews.com/b-y-vijayendra-met-former-prime-minister-hd-deve-gowda/ ಶೇ 75 ಮಳೆ ಕುಂಠಿತವಾಗಿದೆ. ₹37 ಸಾವಿರ ಕೋಟಿ ನಷ್ಟವಾಗಿದೆ. ಕೆಂದ್ರ ಸರ್ಕಾರಕ್ಕೆ ₹17 ಸಾವಿರ ಕೋಟಿ ನಷ್ಟ ಬರಿಸಿ ಕೊಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಈವರೆಗೆ ಹಣ ಬಿಡುಗಡೆ ಮಾಡಿಲ್ಲ. ರಾಜ್ಯದ ಬರ ಪರಿಸ್ಥಿತಿ ವಿವರಿಸಲು ಕೃಷಿ ಸಚಿವ ಕೃಷ್ಣ…
ಬೆಂಗಳೂರು: ದೀಪಾವಳಿ ಹಬ್ಬದ ಆಚರಣೆ ವೇಳೆ ಪಟಾಕಿ ಸಿಡಿಸುತ್ತಿರುವುದರಿಂದ ಬೆಂಗಳೂರಲ್ಲಿ ವಾಯುಮಾಲಿನ್ಯ ಪ್ರಮಾಣ ದಿಢೀರ್ ಹೆಚ್ಚಳವಾಗಿದೆ. ವಾಯುಮಾಲಿನ್ಯ ನಿಯಂತ್ರಣಕ್ಕೆ ಹಸಿರು ಪಟಾಕಿ ಕಡ್ಡಾಯ ಇದ್ದರೂ ಸಹ ಹಲವಡೆ ರಾಸಾಯನಿಕಯುಕ್ತ ಪಟಾಕಿ ಬಳಕೆಯಾಗುತ್ತಿದೆ. ಇದರಿಂದ ನಗರದ ಹಲವಾರು ಭಾಗಗಳಲ್ಲಿ ವಾಯು ಮಾಲಿನ್ಯ ಅಪಾಯದ ಮಟ್ಟದಲ್ಲಿದೆ. https://ainlivenews.com/a-young-woman-was-dragged-and-harassed-in-the-middle-of-the-street/ ಈಗಾಗಲೇ ದೆಹಲಿಯಲ್ಲಿ ಮಾಲಿನ್ಯ ಏರಿಕೆಯಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿದೆ. ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಮಾಲಿನ್ಯದ ವಿಚಾರವಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಬೆಂಗಳೂರಿನ ನಾನಾ ಭಾಗದಲ್ಲಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ ಅಳೆಯಲು ಮಾಪನ ಆಳವಡಿಕೆ ಮಾಡಲಾಗಿದೆ. ಈ ವೇಳೆ ಹಲವಾರು ಭಾಗಗಳಲ್ಲಿ ನಗರದ ವಾತಾವರಣ ಡೇಂಜರ್ ಝೋನ್‍ನಲ್ಲಿ ಇರುವುದು ಬೆಳಕಿಗೆ ಬಂದಿದೆ.
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕಾಡು ಪ್ರಾಣಿ ಮಾನವ ಸಂಘರ್ಷ ಮುಂದುವರಿದಿದೆ. ಅದರಲ್ಲೂ ಹುಣಸೂರು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದೆ. ನಾಗರಹೊಳೆ ಉದ್ಯಾನದ ಕಾಡಂಚಿದಲ್ಲಿರುವ ಬಿಲ್ಲೇನಹೊಸಹಳ್ಳಿ ಗ್ರಾಮದ ರೈತ ಚಿನ್ನದೊರೆ ಮತ್ತು ವೆಂಕಟೇಶ್ ಅವರಿಗೆ ಸೇರಿದ ಜಮೀನಿಗೆ ಆನೆ ನುಗ್ಗಿ ರಾಗಿ, ಮುಸುಕಿನ ಜೋಳ, ಮರಗೆಣಸು ಬೆಳೆ ನಾಶ ಮಾಡಿದೆ. https://ainlivenews.com/b-y-vijayendra-met-former-prime-minister-hd-deve-gowda/ ಬೆಳೆ ತಿಂದು ತುಳಿದು ನಾಶ ಮಾಡಿದ ಕಾಡಾನೆಗಳು ವಾಸದ ಮನೆ ಮೇಲೂ ದಾಳಿ ಮಾಡಿವೆ. ಕಾಡಾನೆಗಳು ಮನೆ ಅಂಗಳದಲ್ಲಿ ಡ್ರಮ್ ನಲ್ಲಿ ತುಂಬಿಸಿಟ್ಟಿದ್ದ ನೀರು ಕುಡಿದು ಹೋಗಿವೆ. ಕೂಟದ ಕಡ, ತಟ್ಟೆ ಹಳ್ಳ ಪಾರೆ ಭಾಗದಿಂದ ಈ ಆನೆಗಳು ಬಂದಿವೆ ಎನ್ನಲಾಗಿದೆ. ರೈಲ್ವೆ ಬ್ಯಾರಿಕೇಡ್ ಬೇಲಿ ದಾಟಿ ಬಂದಿರುವ ಗಜಪಡೆ ಕಾಡಂಚಿನ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ.
ಮಂಡ್ಯ:- ಮಾಜಿ ಸಿಎಂ ಸದಾನಂದಗೌಡರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಹಿರಿಯ ನಾಯಕರು ಚುನಾವಣಾ ರಾಜಕಾರಣದಿಂದ ದೂರಾದರೆ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಹಿರಿಯ ನಾಯಕರು ಚುನಾವಣಾ ರಾಜಕಾರಣದಿಂದ ದೂರಾದರೆ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಹಿರಿಯ ನಾಯಕರು ಆಲೋಚನೆ ಮಾಡಬೇಕು ಎಂದರು. https://ainlivenews.com/b-y-vijayendra-met-former-prime-minister-hd-deve-gowda/ ಹಿರಿಯ ನಾಯಕರ ಅನುಭವ ಹಾಗೂ ಅವರ ಹಿಂಬಾಲಕರ ಪಡೆಯನ್ನು ಹೈಕಮಾಂಡ್ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂಬುದರ ಕುರಿತು ಚಿಂತನೆ ನಡೆಸಬೇಕು ಎಂದಿದ್ದಾರೆ. ಹಿರಿಯ ನಾಯಕರಿಗೆ ಹೆಚ್ಚಿನ ಅನುಭವ ಇರುತ್ತದೆ. ಅವರಿಗೆ ಅವರದ್ದೆ ಆದ ಹಿಂಬಾಲಕರ ಪಡೆ ಇರುತ್ತದೆ. ಅವರನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ವರಿಷ್ಠರು ಚಿಂತನೆ ನಡೆಸಬೇಕು. ನನ್ನನ್ನು ಉಪಯೋಗಿಸಿ ಕೊಂಡರೆ ಪಕ್ಷಕ್ಕಾಗಿ ದುಡಿಯುತ್ತೇನೆ ಇಲ್ಲವಾದಲ್ಲಿ ಸುಖ ಜೀವನದಲ್ಲಿ ಇರುತ್ತೇನೆ ಎಂದು ಪರೋಕ್ಷವಾಗಿ ಬಿಜೆಪಿ ಹೈಕಮಾಂಡ್ ವಿರುದ್ಧ ಗುಡುಗಿದ್ದಾರೆ.
ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ (Vijay Devarakonda) ಇಬ್ಬರು ಒಬ್ಬರನ್ನೋಬ್ಬರೂ ಪ್ರೀತಿಸುತ್ತಿದ್ದಾರೆ. ಆದರೂ ನಾವಿಬ್ಬರೂ ಫ್ರೆಂಡ್ಸ್ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಇಬ್ಬರ ಡೇಟಿಂಗ್ ವಿಚಾರವಾಗಿ ಹಲವು ಬಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇದೀಗ ವಿಜಯ್ ಮನೆಯಲ್ಲಿ ರಶ್ಮಿಕಾ, ದೀಪಾವಳಿ ಹಬ್ಬ ಆಚರಣೆ ಮಾಡಿರೋದಕ್ಕೆ ಸಾಕ್ಷಿವೊಂದು ಅಭಿಮಾನಿಗಳಿಗೆ ಸಿಕ್ಕಿದೆ. ಸೀರೆಯುಟ್ಟಿರುವ ಫೋಟೋವೊಂದನ್ನ ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ‘ಹ್ಯಾಪಿ ದೀಪಾವಳಿ ಮೈ ಲವ್ಸ್’ ಎಂದು ಅಡಿಬರಹ ನೀಡಿದ್ದಾರೆ. ವಿಜಯ್ ಮನೆಯ ಹಬ್ಬದ ಸಂಭ್ರಮದ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅವರು ಕೂಡ ರಶ್ಮಿಕಾ ನೀಡಿದ ಕ್ಯಾಪ್ಷನ್ ಅನ್ನೇ ನೀಡಿದ್ದಾರೆ. ಇನ್ನೂ ರಶ್ಮಿಕಾ ಕುಳಿತಿರುವ ಫೋಟೋದಲ್ಲಿ ಬ್ಯಾಕ್‌ಗ್ರೌಂಡ್ ಲುಕ್ ನೋಡಿ ಇದು ವಿಜಯ್ ಮನೆಯೆಂದೇ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಸದ್ಯ ವಿಜಯ್ ಮನೆಯಲ್ಲಿ ನಟಿ ಹಬ್ಬ ಸೆಲೆಬ್ರೇಟ್ ಮಾಡಿರೋದು ನಿಜ ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡ ಕುಟುಂಬದ ಜೊತೆ ರಶ್ಮಿಕಾಗೇ ಉತ್ತಮ ಒಡನಾಟವಿದೆ. ವಿಜಯ್ ಮನೆಗೆ ಭೇಟಿ ನೀಡಿರುವುದು ಇದೇ…
ಹೊಸ ಯುವ ಪ್ರತಿಭೆಗಳೇ ಸೇರಿಕೊಂಡು ’ಬೆಂಬಿಡದ ನಾವಿಕ’ (Bembidada Naavika) ಚಿತ್ರವನ್ನು ಸಿದ್ದಗೊಳಿಸಿದ್ದಾರೆ. ಶ್ರೀ ಅಂಬಲವಾಡಿ ಮಹಾಕಾಳಿ ಕಂಬೈನ್ಸ್ ಅಡಿಯಲ್ಲಿ ಜಿ.ಮಹೇಶ್ ಬಂಡವಾಳ ಹೂಡಿದ್ದಾರೆ. ಸದ್ದು ಮಾಡದೆ ಪೂರ್ಣ ಕೆಲಸಗಳನ್ನು ಮುಗಿಸಿರುವ ತಂಡವು ಸುದ್ದಿ ಮಾಡುವ ಸಲುವಾಗಿ ಎರಡು ಹಾಡುಗಳು ಮತ್ತು ಯೋಗರಾಜ ಭಟ್ (Yogaraj Bhatt) ಹಿನ್ನಲೆ ಧ್ವನಿ ನೀಡಿರುವ ಟೀಸರ್ (Teaser) ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಥಿಯೇಟರ್‌ದಲ್ಲಿ ನಡೆಯಿತು. ಅದರಲ್ಲೂ ಕಥೆಯು ಇನ್‌ಫ್ಲುಯೆನ್ಸರ್ ಕುರಿತಾಗಿ ಇರುವುದರಿಂದ ಮಾಧ್ಯಮ ಮಿತ್ರರು ’ಪ್ರತಿ ಹೆಜ್ಜೆಗೂ’ ಗೀತೆಯನ್ನು ಅನಾವರಣಗೊಳಿಸಿದ್ದು ವಿಶೇಷವಾಗಿತ್ತು. ಮಂಗಳೂರು ಉಡುಪಿ ನಡುವೆ ನಡೆಯುವ ಥ್ರಿಲ್ಲರ್ ಡ್ರಾಮಾ ಸನ್ನವೇಶಗಳನ್ನು ಒಳಗೊಂಡಿದೆ. ಮಹತ್ವಕಾಂಕ್ಷಿಯುಳ್ಳ ಇನ್‌ಫ್ಲುಯೆನ್ಸರ್ ಯುವಕನಿಗೆ ಇಂಟರ್‌ನೆಟ್ ಮೂಲಕ ಬರುವ ಕಷ್ಟಗಳು ಮತ್ತೆ ಅದರಿಂದ ಹೇಗೆ ಆತನ ಜೀವನ ಬದಲಾಗುತ್ತದೆ. ಎಲ್ಲರಿಗೂ ಗುರಿ ಇರುವಂತೆ ಈತನಿಗೂ ಒಂದಷ್ಟು ಚ್ಯಾಲೇಂಜಸ್ ಇರುತ್ತದೆ. ಪ್ರತಿ ಕ್ಷಣ ತುಂಬಾ ಮುಖ್ಯವಾಗಿರುತ್ತದೆ. ಅದು ನಮ್ಮನ್ನು ಯಾವ ರೀತಿಯಾದರೂ ಬದಲಾಯಿಸಬಹುದು ಎಂಬುದನ್ನು ಹೇಳಿದೆ. ನಾಗತಿಹಳ್ಳಿ ಚಂದ್ರಶೇಖರ್ ಒಡೆತನದ ’ಟೆಂಟ್‌ಹೌಸ್’ದಲ್ಲಿ ತರಬೇತಿ…
ಬೆಂಗಳೂರು: ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಕ್ಕೆ ಸಂತೋಷವಾಗಿದೆ ಎಂದು ಬೆಂಗಳೂರಿನಲ್ಲಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ. ಒಂದೆಡೆ ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ನೇಮಕ. ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ. ಇದರಿಂದ ಎರಡು ಪಕ್ಷಗಳಿಗೆ ಮತ್ತಷ್ಟು ಬಲ ಬಂದಿದೆ. ಲೋಕಸಭೆ ಚುನಾವಣೆ ಬಗ್ಗೆ ಹೆಚ್ಡಿ ದೇವೇಗೌಡರ ಜೊತೆ ವಿಜಯೇಂದ್ರ ಚರ್ಚೆ ಮಾಡಿದ್ದಾರೆ. ಹಾಸನದಲ್ಲಿ ಯಾರೇ ಅಭ್ಯರ್ಥಿಯಾದ್ರೂ ನಾನು ಕೆಲಸ ಮಾಡ್ತೇನೆ. ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಜನರು ಅಸಮಾಧಾನಗೊಂಡಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ತಿಳಿಸಿದರು.
ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ. ಬೆಳಕಿನ ಹಬ್ಬದ ಸಂಭ್ರಮ ಹಿರಿಯ ನಟಿ ಮಾಲಾಶ್ರೀ ಅವರ ಮನೆಯಲ್ಲಿ ಈ ಬಾರಿ ಕೊಂಚ ಹೆಚ್ಚ ಎನ್ನಬಹುದು. ಹಬ್ಬದ ಸಂಭ್ರಮವನ್ನು ಸಂಭ್ರಮಿಸಲು ಮಾಲಾಶ್ರೀ ಅವರು ಮಗಳು ಆರಾಧನಾ ಜೊತೆ ಹೊಸ ಲುಕ್ ನಲ್ಲಿ ಮಿಂಚಿದ್ದಾರೆ. ಅಮ್ಮ – ಮಗಳು ನೂತನ ರೀತಿಯಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಫೋಟೊ ಶೂಟ್ ಮಾಡಿಸಿಕೊಂಡಿದ್ದೇವೆ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಶುಭಾಶಯ ತಿಳಿಸುತ್ತೇನೆ.
ದೀಪಾವಳಿ ಪ್ರಯುಕ್ತ ಬಿಗ್‌ಬಾಸ್ ಮನೆಯವರಿಗೆಲ್ಲ ಒಂದು ಭಾವುಕ ಸರ್ಪೈಸ್ ನೀಡಿದ್ದಾರೆ. ಮನೆಮಂದಿಗೆಲ್ಲರಿಗೂ ಅವರ ಮನೆಯಿಂದ ಅವರಿಗಿಷ್ಟವಾದ ತಿನಿಸನ್ನು ತರಿಸಿ ಕೊಡಲಾಗಿದೆ. ಬಾಕ್ಸ್‌ನಲ್ಲಿ ಬಂದ ತಮ್ಮಿಷ್ಟದ ತಿನಿಸನ್ನು ಮಾಡಿ ಕಳಿಸಿದ ಕುಟುಂಬದವರನ್ನು ನೆನಪಿಸಿಕೊಂಡು ಸ್ಪರ್ಧಿಗಳೆಲ್ಲ ಭಾವುಕರಾಗಿದ್ದಾರೆ. ಎಲ್ಲರ ಮನೆಯಿಂದ ತಿಂಡಿ ಬಂದರೂ ಒಬ್ಬ ಸ್ಪರ್ಧಿಯ ಮನೆಯಿಂದ ಮಾತ್ರ ಬಾಕ್ಸ್ ಬಂದಿರಲಿಲ್ಲ. ಅದು ವರ್ತೂರ್ ಸಂತೋಷ್ ಮನೆಯಿಂದ. ಇದನ್ನು ನೋಡಿ ವರ್ತೂರ್ ಅವರು ದುಃಖದಿಂದ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಆಗಲೇ ಇಡೀ ಮನೆಯವರೆಲ್ಲರೂ ದಂಗಾಗಿಬಿಡುವ ಆ ಘಟನೆ ನಡೆಯಿತು. ಈ ಘಟನೆ JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಸೆರೆಯಾಗಿದೆ. ತೆರೆದ ಬಿಗ್‌ಬಾಸ್ ಮನೆಯ ಬಾಗಿಲಿಂದ ವರ್ತೂರ್ ಸಂತೋಷ್ ಅವರ ಅಮ್ಮನೇ ಬುತ್ತಿ ಹಿಡಿದು ನಡೆದುಕೊಂಡು ಬರುತ್ತಿದ್ದರು! ಅವರ ಬಾಯಿಂದ ‘ಕಂದಾ’ ಅಂದಾಗಲಂತೂ ಸ್ಪರ್ಧಿಗಳೆಲ್ಲರಿಗೂ ತಮ್ಮ ಅಮ್ಮನೇ ಕರೆದ ಅನುಭವ. ವರ್ತೂರ್ ಸಂತೋಷ್ ಅವರು ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುತ್ತೇನೆ ಎಂದು ನಿನ್ನೆಯಿಂದಲೂ ಹೇಳುತ್ತಿದ್ದಾರೆ. ನಿರ್ಧಾರವನ್ನು ಅವರಿಗೇ ಬಿಟ್ಟು ಕಿಚ್ಚ ಸುದೀಪ್, ವೀಕೆಂಡ್ ಎಪಿಸೋಡ್ ಮುಗಿಸಿದ್ದಾರೆ.…