Author: AIN Author

ಉಡುಪಿ: ಉಡುಪಿ ಸಂತೆಕಟ್ಟೆ ಸಮೀಪ ನೇಜಾರಿ ತ್ರಪ್ತಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ಈ ಹತ್ಯೆಗೆ ಭಗ್ನ ಪ್ರೇಮ ಕಾರಣ ಎನ್ನಲಾಗಿದೆ. ಆರೋಪಿ ಪ್ರವೀಣ್ ಅರುಣ್ ಚೌಗಲೆ ಮಹಾರಾಷ್ಟ್ರದ ಸಾಂಗ್ಲಿಯವನಾಗಿದ್ದು, ಉಡುಪಿಯಲ್ಲಿ ಕೊಲೆ ಮಾಡಿದ ಬಳಿಕ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಅಡಗಿ ಕುಳಿತಿದ್ದ. ಆತನ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಉಡುಪಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪ್ರವೀಣ್ ಅರುಣ್ ಸಿಐಎಸ್ಎಫ್‌ ಸಿಬ್ಬಂದಿಯಾಗಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ಯಾಜ್ ಪರಿಚಯವಾಗಿ ಇಬ್ಬರು ಸ್ವಲ್ಪ ಸಮಯ ಆತ್ಮೀಯವಾಗಿದ್ದರು. ಆದರೆ ನಂತರ ಅಯಾಜ್ ಆತನಿಂದ ದೂರವಾಗಿದ್ದಳು. ಇದರಿಂದ ಕುಪಿತನಾಗಿ ಭಗ್ನಪ್ರೇಮಿಯಾಗಿದ್ದ ಪ್ರವೀಣ್ ಆಕೆಯನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಉಡುಪಿಯ ಈ ಹತ್ಯಾಕಾಂಡ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಆರೋಪಿ ಉಡುಪಿಗೆ ಬಂದಿದ್ದು ಕೆಲ…

Read More

ಹಲವು ದಿನಗಳಿಂದ ಸುದೀಪ್ ಅವರ ವಾರಿಯರ್ (Warrior) ಲುಕ್ ಇರುವಂತಹ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಇದು ಯಾವ ಸಿನಿಮಾದ್ದು? ಏನ್ ಕಥೆ ಎಂದು ಗೊತ್ತಾಗದೇ ಇರುವ ಕಾರಣದಿಂದಾಗಿ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಸದ್ಯ ಸುದೀಪ್ ಅಂತಹ ಸಿನಿಮಾ ಮಾಡುತ್ತಿಲ್ಲ. ಮ್ಯಾಕ್ಸ್ ಸಿನಿಮಾದಲ್ಲೂ ಅಂತಹ ಗೆಟಪ್ ಇಲ್ಲ. ಹಾಗಾಗಿ ಇದು ಜಾಹೀರಾತು ಒಂದರ ಲುಕ್ ಇರಬಹುದು ಎಂದು ಹೇಳಲಾಗುತ್ತಿದೆ. ಈ ನಡುವೆ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಿರಂತರವಾಗಿ ನಡೆಯುತ್ತಿದೆ. ಬಿಗ್ ಬಾಸ್ ನಡುವೆಯೂ ತಪ್ಪದೇ ಸುದೀಪ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಹೊತ್ತಿಗೆ ಮ್ಯಾಕ್ಸ್ (Max) ಸಿನಿಮಾದ ಬಹುತೇಕ ಶೂಟಿಂಗ್ ಮುಗಿಯಲಿದೆ. ಹಾಗಾಗಿ ಫೆಬ್ರವರಿಯಲ್ಲಿ (February) ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾ ತಂಡವು ಅಧಿಕೃತವಾಗಿ ಮಾಹಿತಿ ನೀಡದೇ ಇದ್ದರೂ, ಚಿತ್ರೋದ್ಯಮದಲ್ಲಿ ಕೇಳಿ ಬರುತ್ತಿರುವ ಮಾತಿನಂತೆ ಫೆಬ್ರವರಿಗೆ ಮ್ಯಾಕ್ಸ್ ತೆರೆ ಕಾಣಲಿದೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಸುದೀಪ್ ಒಪ್ಪಿಕೊಂಡಿದ್ದರಿಂದ ಮತ್ತು…

Read More

ಮುಂಬೈ:- ಹೃದಯ ಸ್ತಂಭನದಿಂದಾಗಿ ಸಹಾರಾ ಇಂಡಿಯಾ ಪರಿವಾರದ ಸಂಸ್ಥಾಪಕ ‘ಸಹರಾಶ್ರೀ’ ಸುಬ್ರತಾ ರಾಯ್ ಅವರು ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಭಾನುವಾರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ರಾಯ್ ನಿಧನಕ್ಕೆ ಸಂತಾಪ ಸೂಚಿಸಿರುವ ಸಹಾರಾ ಇಂಡಿಯಾ ಗ್ರೂಪ್, “ಸಹಾರಾ ಇಂಡಿಯಾ ಪರಿವಾರದ ಮ್ಯಾನೇಜಿಂಗ್ ವರ್ಕರ್ ಮತ್ತು ಚೇರ್ಮನ್​ ಆಗಿರುವ ‘ಸಹರಾಶ್ರೀ’ ಸುಬ್ರತಾ ರಾಯ್ ಅವರ ನಿಧನವನ್ನು ಕಂಪನಿಯು ತೀವ್ರ ದುಃಖದಿಂದ ತಿಳಿಸುತ್ತಿದೆ. ಅಂತಿಮ ವಿಧಿ ವಿಧಾನಗಳ ಬಗ್ಗೆ ವಿವರಗಳನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು. ಅವರು ನಮಗೆ ಮಾರ್ಗದರ್ಶಕರಾಗಿದ್ದರು. ಜೊತೆಗೆ ಕೆಲಸ ಮಾಡುವ ಎಲ್ಲರಿಗೂ ಸ್ಫೂರ್ತಿದಾಯಕವಾಗಿದ್ದರು” ಎಂದು ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಸಹಾರಾ ಇಂಡಿಯಾ ಪರಿವಾರವು ರಾಯ್ ಅವರ ಪರಂಪರೆಯನ್ನು ಎತ್ತಿಹಿಡಿಯಲು ಬದ್ಧವಾಗಿದೆ ಮತ್ತು ಸಂಸ್ಥೆಯು ಅವರ ದೃಷ್ಟಿಕೋನವನ್ನು ಗೌರವಿಸಿ, ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದೆ. ಮೃತರು ಪತ್ನಿ ಸ್ವಪ್ನಾ ರಾಯ್, ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್ ಎಂಬ ಇಬ್ಬರು…

Read More

ತುಮಕೂರು: “ಯಾವುದೋ ನಾಲ್ಕು ಬೈ ಎಲೆಕ್ಷನ್ ಗೆಲಿಸಿದ ಕ್ಷಣಕ್ಕೆ ದೊಡ್ಡ ಸಂಘಟನಾ ಚತುರ ಅಂತಾ ಸರ್ಟಿಫಿಕೇಟ್ ಕೊಡೋಕೆ ಆಗಲ್ಲಾ..” -ಇದು ಬಿವೈ ವಿಜಯೇಂದ್ರ ಅವರು ಸಂಘಟನಾ ಚತುರ ಎಂಬ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂಬ ಅಭಿಪ್ರಾಯಕ್ಕೆ ಸಂಬಂಧಿೈಸಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಆಡಿರುವ ವ್ಯಂಗ್ಯದ ಮಾತು. ಸುದ್ದಿಗಾರರ ಪ್ರಶ್ನೆಗಳೆಗೆ ಪ್ರತಿಕ್ರಿಯಿಸಿದ ಅವರು, ಇತ್ತೀಚಿನ ಬೈಎಲೆಕ್ಷನ್ ಗಳು ಯಾವ ಆಧಾರದ ಮೇಲೆ ಗೆಲುತ್ತೆ, ಸೋಲುತ್ತೆ ಅಂತಾ ಗೊತ್ತಿದೆ. ಗುಂಡ್ಲುಪೇಟೆ, ನಂಜನಗೂಡು ಬೈಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆದ್ರು, 6 ತಿಂಗಳಿಗೆ ಸೋತ್ರು. ಬೈಲೆಕ್ಷನ್ ರಿಸಲ್ಟ್ ತರೋಕೆ ಮಾನದಂಡಗಳು ಬೇರೆ ಬೇರೆ ಇರುತ್ತೆ. ಹಾಗಾಗಿ ಬೈಎಲೆಕ್ಷನ್ ಗೆದ್ದಾಕ್ಷಣಕ್ಕೆ ಮಹಾ ಸಂಘಟನಾ ಚತುರರು ಅಂತಾ ಸರ್ಟಿಫಿಕೇಟ್ ಕೊಡೋಕೆ ಆಗೊಲ್ಲ ಎಂದು ಅಭಿಪ್ರಾಯಪಟ್ಟರು. https://ainlivenews.com/joint_pain_suprem_ray_treatment_reiki/ ಬಿಜೆಪಿಯಲ್ಲಿ ಬಹಳ ಸಮಯದಿಂದ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಸ್ಥಾನ ನೆನೆಗುದಿಗೆ ಬಿದಿತ್ತು. ಏನೋ ಕೇಂದ್ರದ ಬಿಜೆಪಿ ಮುಖಂಡರಿಗೆ ಜ್ಙಾನೋದಯ ಆಗಿ ಅಧ್ಯಕ್ಷ ಸ್ಥಾನ ತುಂಬಿದ್ದಾರೆ. ಅದು ವಿಜಯೇಂದ್ರ ಅವರನ್ನ ಆ…

Read More

ನಿರ್ದೇಶಕ ದುನಿಯಾ ಸೂರಿ (Duniya Suri) ಈ ಹಿಂದೆ ರಕ್ಷಿತ್ ಶೆಟ್ಟಿಗಾಗಿ (Rakshit Shetty) ‘ಕದನ ವಿರಾಮ’ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಆಯಿತು. ಆ ನಂತರ ಈ ಸಿನಿಮಾ ಆಗಲೇ ಇಲ್ಲ. ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಸೂರಿ ಬ್ಯುಸಿಯಾದರು. ಇದೀಗ ಈ ಸಿನಿಮಾದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಕದನ ವಿರಾಮ ಸಿನಿಮಾವನ್ನು ದರ್ಶನ್ (Darshan) ಗಾಗಿ ಸೂರಿ ಮಾಡಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ದರ್ಶನ್ ಮತ್ತು ಸೂರಿ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಬರಲಿದೆ ಎಂದೂ ಹೇಳಲಾಗುತ್ತಿತ್ತು. ಈ ಕುರಿತಂತೆ ಸೂರಿ ಸ್ಪಷ್ಟನೆ ಕೊಟ್ಟಿದ್ದಾರೆ. ಕದನ ವಿರಾಮ ಸಿನಿಮಾವನ್ನು ದರ್ಶನ್ ಅವರಿಗೆ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ದರ್ಶನ್ ಅವರ ಜೊತೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಸ್ಟಾರ್ ನಟರಿಗೆ ಸೂರಿ ಸಿನಿಮಾ ಮಾಡುವುದಿಲ್ಲ ಎಂಬ ಗಾಸಿಪ್ ಇತ್ತು. ಅದಕ್ಕೂ ಅವರು ತೆರೆ ಎಳೆದಿದ್ದಾರೆ. ಕಥೆ ಯಾರನ್ನು ಕೇಳುತ್ತದೆಯೋ ಅವರಿಗೆ ಸಿನಿಮಾ…

Read More

ಬೆಂಗಳೂರು:- ಶೀಘ್ರವೇ ಸಬರ್ಬನ್‌ ರೈಲು ಸೇವೆಗಳಿಗೆ ಹಳಿಗಳು ಅಣಿಯಾಗಲಿವೆ. ಅದರ ಬೆನ್ನಿಗೇ ಇನ್ನೊಂದು ದೊಡ್ಡ ಮಟ್ಟದ ಸೇವೆ ಬೆಂಗಳೂರಿಗೆ ದೊಡ್ಡ ಮಟ್ಟದ ಸಹಾಯವನ್ನು ಮಾಡಲಿದೆ. ಬೆಂಗಳೂರಿನ ಹೊರವಲಯದಲ್ಲಿ ಸುತ್ತುವ ವರ್ತುಲಾಕಾರದ ಈ ರೈಲುಜಾಲದ ನಿರ್ಮಾಣಕ್ಕೆ ನೈಋತ್ಯ ರೈಲ್ವೇ ಅನುಮತಿಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕಾರ್ಯಗತಗೊಳಿಸುವ ಕಾರ್ಯಾಚರಣೆ ಆರಂಭವಾಗಲಿದೆ. ಒಟ್ಟು 287 ಕಿ.ಮೀ. ಉದ್ದದ ವೃತ್ತಾಕಾರದ ಈ ರೈಲು ಮಾರ್ಗ ಬೆಂಗಳೂರಿನ ಪಾಲಿಗೆ ಲೋಕಲ್‌ ರೈಲು ಸೇವೆಯಾಗಲಿದೆ. ಈ ಮೂಲಕ ಈಗ ಇರುವ ರೈಲುಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಈ ರೈಲು ಯೋಜನೆ ನಮ್ಮ ಮೆಟ್ರೋ ಮತ್ತು ಬೆಂಗಳೂರು ಸಬರ್ಬನ್‌ ರೈಲು ಸೇವೆಗಳಿಗೆ ಪೂರಕವಾಗಿ ಕೆಲಸ ಮಾಡಲಿದೆ. ವೃತ್ತಾಕಾರದ ರೈಲು ಜಾಲವು ಮೆಟ್ರೋ ನಿಲ್ದಾಣಗಳನ್ನು ಕೂಡಾ ಹಾದು ಹೋಗಲಿದ್ದು, ಒಂದು ಮೆಟ್ರೋ ನಿಲ್ದಾಣದಿಂದ ಆಸುಪಾಸಿನ ಬೇರೆ ಪ್ರದೇಶಗಳಿಗೆ ಹೋಗಲು ಅನುಕೂಲ ಕಲ್ಪಿಸಲಿದೆ. ಮತ್ತು ವೃತ್ತಾಕಾರದ ಪಥದಲ್ಲಿ ಬರುವ ಪ್ರದೇಶಗಳಿಂದ ಮೆಟ್ರೋ ನಿಲ್ದಾಣಗಳಿಗೂ ಸಂಪರ್ಕ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ. ಬೆಂಗಳೂರು ಸೆಂಟ್ರಲ್‌ ಕ್ಷೇತ್ರದ…

Read More

ರಾಜಕಾರಣದಿಂದ ಅಲ್ಪ ವಿರಾಮ ಪಡೆದುಕೊಂಡು ಸಿನಿಮಾ ರಂಗದಲ್ಲಿ ಸಕ್ರೀಯರಾಗಿರುವ ನಿಖಿಲ್ ಕುಮಾರಸ್ವಾಮಿ ಈಗಾಗಲೇ ಒಂದು ಸಿನಿಮಾ ಮಾಡುತ್ತಿದ್ದಾರೆ. ಇದೇ ಸಿನಿಮಾದ ಚಿತ್ರೀಕರಣದಲ್ಲೂ ಅವರು ಬ್ಯುಸಿಯಾಗಿದ್ದಾರೆ. ಈ ನಡುವೆ ಮತ್ತೊಂದು ಸಿನಿಮಾವನ್ನು (New Movie) ನಿಖಿಲ್ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾವನ್ನು ಅವರದ್ದೇ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಿದ್ದಾರೆ. ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಸುಭಾಸ್ಕರನ್ ಅವರು ನಿರ್ಮಿಸುತ್ತಿರುವ, ಲಕ್ಷ್ಮಣ್ ನಿರ್ದೇಶನದಲ್ಲಿ ಯುವರಾಜ ನಿಖಿಲ್ ಕುಮಾರ್ (Nikhil Kumar) ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ಬಹು ನಿರೀಕ್ಷಿತ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಸಲಗ ದುನಿಯಾ ವಿಜಯ್ (Duniya Vijay) ಅವರು ನಟಿಸುತ್ತಿದ್ದಾರೆ.  ವಿಜಯ್ ಅವರ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಸದ್ಯದಲ್ಲೇ ವಿಜಯ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ. ವಿಜಯ್ ಅವರ ಪಾತ್ರ ಏನ್ನಿರಬಹುದು? ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಬಗ್ಗೆ…

Read More

ಕಲಬುರಗಿ:- ಇಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಆರೋಪಿ ಕಿಂಗ್ ಪಿನ್ RD ಪಾಟೀಲ್ ನಾಲ್ಕುದಿನಗಳ ಜ್ಯೂಡಿಷಿಯಲ್ ಕಸ್ಟಡಿ ಇಂದಿಗೆ ಅಂತ್ಯ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆಯಲು ಕೋರ್ಟಿಗೆ ಇವತ್ತು CID ಮನವಿ ಸಲ್ಲಿಸುವ ಸಾಧ್ಯತೆಯಿದೆ. ಈಗಾಗಲೇ ಪರೀಕ್ಷಾ ಅಕ್ರಮ ಪ್ರಕರಣದ ದಾಖಲೆ ಪತ್ರಗಳನ್ನ ಠಾಣೆಯಿಂದ ತರಿಸಿಕೊಂಡಿರುವ CID ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದೆ…

Read More

ಒಂದೆಡೆ ಬರ, ಇನ್ನೊಂದೆಡೆ ವಿದ್ಯುತ್‌ ಕಣ್ಣಾಮುಚ್ಚಾಲೆಯಿಂದ ರೈತರು ಕಂಗಾಲಿದ್ದಾರೆ. ಈ ನಡುವೆ ಸರಕಾರದ ಯೋಜನೆಗಳು ಸುಸೂತ್ರವಾಗಿ ಅರ್ಹ ಫಲಾನುಭವಿ ರೈತರಿಗೆ ತಲುಪಿಸುವ ಕೆಲಸವಾಗುತ್ತಿಲ್ಲ. ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ (ವಿಮಾ) ಯೋಜನೆ ನೋಂದಣಿಗೂ ನಿರ್ಲಕ್ಷ್ಯ ತೋರಲಾಗಿದೆ. ಸರಕಾರದ ಯೋಜನೆಗಳನ್ನು ತಲುಪಿಸುವ ಹೊಣೆಗಾರಿಕೆ ನಿಭಾಯಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಶಾಸಕರಾದಿಯಾಗಿ ಜನಪ್ರತಿನಿಧಿಗಳ ಪಾತ್ರವಿದ್ದು, ಜಿಲ್ಲೆಯಲ್ಲಿ ಈ ವಿಚಾರದಲ್ಲಿಇಬ್ಬರೂ ನಿರ್ಲಕ್ಷ್ಯ ತೋರಿರುವುದಕ್ಕೆ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ನೋಂದಣಿ ಸಂಖ್ಯೆ ಶೇ. 14 ರಷ್ಟು ಮಾತ್ರ ಇರುವುದೇ ಸಾಕ್ಷಿ. ಜಿಲ್ಲೆಯ 10 ತಾಲೂಕುಗಳಿಂದ 5,15,064 ರೈತರಿದ್ದಾರೆ. ಇವರಲ್ಲಿ ಫಸಲ್‌ ಬಿಮಾ ಯೋಜನೆಗೆ ನೋಂದಣಿಯಾದವರು 74,850 ಮಾತ್ರ. ಶೇ.86 ರಷ್ಟು ರೈತರು ಯೋಜನೆಯಿಂದ ದೂರವಿದ್ದಾರೆ. ಕುಣಿಗಲ್‌ ಹಾಗೂ ತುಮಕೂರು ತಾಲೂಕಲ್ಲಿ ನೋಂದಣಿ ವಿಚಾರದಲ್ಲಿ ತೀರಾ ಕಳಪೆ ಪ್ರಗತಿಯಿದೆ. ಕುಣಿಗಲ್‌ ತಾಲೂಕಿನಲ್ಲಿ 58,778 ರೈತರಲ್ಲಿ ಯೋಜನೆಗೆ ನೋಂದಣಿಯಾದವರು 631 ಮಂದಿ ಮಾತ್ರ. ಹಾಗೆಯೇ ತುಮಕೂರಲ್ಲಿ 67,550 ರೈತರಲ್ಲಿ ನೋಂದಣಿಯಾದವರು 987…

Read More

ಬೆಂಗಳೂರು:- ಬಲಿಪಾಡ್ಯಮಿಯೊಂದಿಗೆ ದೀಪಾವಳಿ ಸಂಪನ್ನಗೊಂಢಿದೆ. ನಗರದಲ್ಲಿ ನಿನ್ನೆ ಅದ್ಧೂರಿಯಾಗಿ ಬಲಿಪಾಡ್ಯಮಿ ಹಬ್ಬ ನೆರವೇರಿತು. ಮನೆಯಲ್ಲಿ ಪೂಜೆ-ಪುನಸ್ಕಾರಗಳ ನಂತರ ಭಕ್ತರು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದರು. ಮಹಿಳೆಯರು ಮನೆಯೆದುರು ಸಾಲುಸಾಲು ದೀಪಗಳನ್ನು ಬೆಳಗಿದರು. ಮಕ್ಕಳು ಪಟಾಕಿ ಸಿಡಿಸಿ ಖುಷಿಪಟ್ಟರು. ಸಾರ್ವಜನಿಕರು ಬಹುತೇಕ ಹಸಿರು ಪಟಾಕಿಗಳನ್ನು ಸಿಡಿಸುತ್ತಿದ್ದರು. ಮಲ್ಲೇಶ್ವರದ ಲಕ್ಷ್ಮೀ ನರಸಿಂಹ ದೇವಸ್ಥಾನ, ಬನಶಂಕರಿ ದೇವಸ್ಥಾನ, ವೆಂಕಟೇಶ್ವರ ದೇವಾಲಯ, ಕುಮಾರಪಾರ್ಕ್‌ ವೆಸ್ಟ್‌ನಲ್ಲಿನ ಮಹಾಲಕ್ಷ್ಮೀ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಬನಶಂಕರಿ ದೇವಾಲಯದಲ್ಲಿ ಗೋಪೂಜೆ ನೆರವೇರಿತು. ದೇಗುಲದ ಸುತ್ತ ಹಣತೆಗಳನ್ನು ಬೆಳಗಿದ್ದು ಆಕರ್ಷಣೀಯವಾಗಿತ್ತು. ದೀಪಾವಳಿ ವಿದ್ಯೆ, ವಿನಯ, ವಿವೇಕದ ದಾರಿಯಲ್ಲಿ ಮುನ್ನಡೆಸುವ ಹಬ್ಬ. ಬೆಳಕಿನ ಎಚ್ಚರ ತೊಡಿಸುವ, ಭಕ್ತಿಯ ಮಾರ್ಗ ತೋರುವ, ಜ್ಞಾನಿಗಳನ್ನು ಕೊಡುವ, ಬಲಿಯಂತೆ ದಾನ ನೀಡುವ, ದೇವಗಾಂಧಾರ ಹಾಡುವ ಹಿರಿಯ ಹಬ್ಬ. ಕತ್ತಲು ಮರೆಯುವ, ಹೊಸ ಇತಿಹಾಸ ಬರೆಯುವ, ಸಜ್ಜನರೆಡೆಗೆ ಸರಿಯುವ ಸಡಗರದ ಹಬ್ಬ. ಅಜ್ಞಾನದ ಅಂದಕಾರ ಕಳೆದು ಸುಜ್ಞಾನದ ಬೆಳಕು ನೀಡುವ, ಹಣತೆಗಳನ್ನು ಹಚ್ಚಿ ಬೆಳಗುವ ಬೆಳಕಿನ ಹಬ್ಬ. ಪ್ರಜ್ವಲಿಸುವ…

Read More