ಬೆಂಗಳೂರು:- ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರ ಜಾಲಾ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣವೇ ಬೀಳುತ್ತಿಲ್ಲ. ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಹೊಸ ಮೊಬೈಲ್ ಕಳಿಸಿ, ಅದರ ಮೂಲಕ ಸೈಬರ್ ವಂಚಕರು 2.80 ಕೋಟಿ ರೂ. ದೋಚಿದ್ದಾರೆ. ಇದು ಸೈಬರ್ ಕ್ರೈಂ ಖದೀಮರ ಹೊಸ ಪ್ಲಾನ್ ಆಗಿದೆ. https://ainlivenews.com/a-lone-elephant-chased-tourists-during-a-safari-tourists-left/ ಬೆಂಗಳೂರಿನ ಟೆಕ್ಕಿಯೊಬ್ಬರ ವಿಳಾಸಕ್ಕೆ ಸೈಬರ್ ವಂಚಕರು ನೀವು ಹೊಸ ಸಿಮ್ ಖರೀದಿ ಮಾಡಿದ್ದೀರಿ, ಅದಕ್ಕೆ ಗಿಫ್ಟ್ ಎಂದು ಮೊಬೈಲ್ ಕಳುಹಿಸಿದ್ದರು. ಗಿಫ್ಟ್ ಸ್ವೀಕರಿಸಿದ ಟೆಕ್ಕಿ ಸಿಮ್ನ್ನು ಮೊಬೈಲ್ನಲ್ಲಿ ಹಾಕಿದ್ದಾರೆ. ಸಿಮ್ ಹಾಕಿದ ಕೆಲವೇ ಗಂಟೆಗಳಲ್ಲಿ ಟೆಕ್ಕಿ ಖಾತೆಯಲ್ಲಿದ್ದ 2.80 ಕೋಟಿ ರೂ. ಅನ್ನು ಸೈಬರ್ ಖದೀಮರು ತಮ್ಮ ಖಾತೆಗೆ ಜಮಾವಣೆ ಮಡಿಕೊಂಡಿದ್ದಾರೆ. ವಂಚಕರು ಮೊಬೈಲ್ನಲ್ಲಿ ಮೊದಲೇ ಕೆಲವು ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿದ್ದರು. ಟೆಕ್ಕಿ ಮೊಬೈಲ್ಗೆ ಸಿಮ್ ಹಾಕುತ್ತಿದ್ದಂತೆ, ಹಲವು ಸಂದೇಶಗಳು ಬಂದಿವೆ. ಈ ಮೊಬೈಲ್ಗೆ ಬರುವ ಸಂದೇಶಗಳು ಮತ್ತು ಒಟಿಪಿಗಳು ತಮಗೂ ಬರುವಂತೆ ವಂಚಕರು ಸೆಟ್ ಮಾಡಿದ್ದರು. ಸಂದೇಶಗಳು ಮತ್ತು ಒಟಿಪಿ ಮೂಲಕ ಟೆಕ್ಕಿಯ ಬ್ಯಾಂಕ್ ಖಾತೆ…
Author: AIN Author
ಬೆಂಗಳೂರು:- ಪತ್ನಿ, ಅತ್ತೆಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ತಲ್ವಾರ್‌ನಿಂದ ದುಷ್ಕರ್ಮಿ ಅಟ್ಯಾಕ್ ಮಾಡಿದ ಘಟನೆ ರಾಜಧಾನಿ ಬೆಂಗಳೂರು ಬೆಂಗಳೂರಿನಲ್ಲಿ ಜರುಗಿದೆ. https://ainlivenews.com/bmtc-bus-brake-failure-a-major-disaster-that-was-missed-by-a-hairs-breadth/ ಆಸೀಫ್ ಬಂಧಿತ ಆರೋಪಿ. ಆಸೀಫ್ ತನ್ನ ಪತ್ನಿ ಹೀನಾ ಕೌಸರ್ ಅತ್ತೆ ಫರ್ವಿನ್ ತಾಜ್ ಮೇಲೆ ದಾಳಿ ನಡೆಸಿದ್ದಾನೆ. ಜ.14ರಂದು ಬನಶಂಕರಿ ದೇಗುಲದ ಹಿಂಭಾಗದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 10 ವರ್ಷಗಳ ಹಿಂದೆ ತಾಯಿಯ ಅಣ್ಣನ ಮಗ ಆಸೀಫ್‌ನ ಜೊತೆ ಹೀನಾ ಕೌಸರ್ ಮದುವೆ ಮಾಡಲಾಗಿತ್ತು. ದಂಪತಿಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದಾರೆ. ಆದರೆ ಕಳೆದ ವರ್ಷ ಪರ ಸ್ತ್ರೀ ಸಹವಾಸ ಮಾಡಿದ ಪತಿ, ಪತ್ನಿಗೆ ಇನ್ನಿಲ್ಲದ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಕಿರುಚಾಟ ಕೇಳಿ ಅಕ್ಕಪಕ್ಕದವರು ಬರುತ್ತಿದ್ದಂತೆ ತಲ್ವಾರ್ ಬಿಟ್ಟು ಆರೋಪಿ ಪರಾರಿಯಾಗಿದ್ದ. ಗಾಯಗೊಂಡಿದ್ದ ಮಗಳು ಹಾಗೂ ತಾಯಿಯನ್ನು ಸ್ಥಳೀಯರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.
ಬೆಂಗಳೂರು:- ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಭಾರೀ ಅನಾಹುತ ಒಂದು ತಪ್ಪಿರುವ ಘಟನೆ ಜರುಗಿದೆ. https://ainlivenews.com/contractor-sachin-panchal-suicide-case-anticipatory-bail-for-two-accused/ ನಾಗದೇವನಹಳ್ಳಿಯ ರಸ್ತೆಯಲ್ಲಿ ಡಾಬಾ ಗೋಡೆ, ಬೀಡಾ ಅಂಗಡಿಗೆ ಬಸ್ ಗುದ್ದಿದೆ. ಶಿರ್ಕೆ ಸರ್ಕಲ್ ನಿಂದ ನಾಗರಬಾವಿ ಕಡೆ ಬಸ್ ಹೊರಟಿದ್ದರು. ರಸ್ತೆಯಲ್ಲಿ ಯಾರು ಇಲ್ಲದ ಕಾರಣ ಅನಾಹುತ ತಪ್ಪಿದೆ. ಬಸ್ ಅಪಘಾತದಿಂದ ಬಸ್ ನಲ್ಲಿದ್ದ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.
ಸಾಮಾನ್ಯವಾಗಿ ನೀವು ಅನೇಕ ಜನರು ತಮ್ಮ ಜೇಬಿನಲ್ಲಿ ಕೈ ಹಾಕಿಕೊಂಡು ತಿರುಗಾಡುವುದನ್ನು ನೋಡುತ್ತೀರಿ. ಇದು ಕೇವಲ ಸರಳ ವಿಷಯವಲ್ಲ.. ಇದರ ಹಿಂದೆ ಹಲವು ಅರ್ಥಗಳಿವೆ ಎನ್ನುತ್ತಾರೆ ಮನೋವಿಜ್ಞಾನಿಗಳು… ನಾವು ಇಂದು ಈ ಕುರಿತಾಗಿ ನಿಮಗೆ ತಿಳಿಸಿ ಕೊಡಲಿದ್ದೇವೆ… https://ainlivenews.com/heavy-rain-is-likely-for-two-days-in-these-districts-of-karnataka/ ಒಬ್ಬ ವ್ಯಕ್ತಿಯು ತನ್ನ ಜೇಬಿನಲ್ಲಿ ತನ್ನ ಕೈಗಳನ್ನು ಇಟ್ಟುಕೊಂಡು ನಡೆದರೆ, ಅವನು ವಿಚಲಿತನಾಗದೆ ತುಂಬಾ ಎಚ್ಚರವಾಗಿರುತ್ತಾನೆ ಎಂದರ್ಥ. ಈ ಗೆಸ್ಟರ್ ವಿಶೇಷವಾಗಿ ವ್ಯಕ್ತಿಯು ಸಾಮಾಜಿಕವಾಗಿ ಅಸುರಕ್ಷಿತತೆಯನ್ನು ಅನುಭವಿಸಿದಾಗ ಮತ್ತು ಈ ರೀತಿಯಲ್ಲಿ ತನ್ನ ಕೈಗಳನ್ನು ಮರೆಮಾಡುತ್ತದೆ. ಹೀಗೆ ಮಾಡುವುದರಿಂದ ಭದ್ರತೆಯ ಭಾವ ಮೂಡುತ್ತದೆ ಎಂದರ್ಥ. ವ್ಯಕ್ತಿ ತನ್ನ ಜೇಬಿನಲ್ಲಿ ಕೈಗಳನ್ನು ಇಟ್ಟುಕೊಂಡು ನಡೆಯಲು ಸಾಮಾನ್ಯ ಕಾರಣವೆಂದರೆ ಆರಾಮ ಅಥವಾ ಯಾವುದೇ ರೀತಿಯ ಕಿರಿಕಿರಿ ಇಲ್ಲದೆ ನಿರಾಳತೆಯನ್ನು ಹುಡುಕುವುದಾಗಿದೆ. ಈ ಸನ್ನೆಯು ಸ್ವಯಂ ಹಿತಕ್ಕಾಗಿ, ಅದರಲ್ಲಿಯೂ ವಿಶೇಷವಾಗಿ ಆ ವ್ಯಕ್ತಿ ಸಾಮಾಜಿಕವಾಗಿ ಆತಂಕ ಅಥವಾ ಅಸುರಕ್ಷಿತ ಭಾವನೆಯನ್ನು ಅನುಭವಿಸಿದಾಗ, ಕೈಗಳನ್ನು ಮರೆಮಾಡುತ್ತಾನೆ. ಈ ರೀತಿ ಮಾಡುವುದು ಒಂದು ರೀತಿಯ ಸುರಕ್ಷತೆಯ ಭಾವನೆಯನ್ನು ಮೂಡಿಸುತ್ತದೆ.…
ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದ 10 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainlivenews.com/innovative-effort-of-bellary-police-to-prevent-crime/ ಅದರಂತೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ,ಮೈಸೂರು, ರಾಮನಗರ, ದಲ್ಲಿ ಕೂಡ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮಳೆ ಶುರುವಾಗಿದೆ, ಪೀಣ್ಯ, ದಾಸರಹಳ್ಳಿ, ಹೆಸರಘಟ್ಟ, ಮೆಜೆಸ್ಟಿಕ್, ವಿಧಾನಸೌಧ, ಜೆಪಿನಗರ, ರಿಚ್ಮಂಡ್ ವೃತ್ತ, ಟೌನ್ಹಾಲ್ ಸೇರಿದಂತೆ ಬಹುತೇಕ ಕಡೆ ಮಳೆಯಾಗಿದೆ. ಇನ್ನೂ ಎಚ್ಎಎಲ್ನಲ್ಲಿ 25.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 25.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 26.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 26.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ…
ಪ್ರತಿಯೊಬ್ಬರಿಗೂ ಜೀವನದಲ್ಲಿ ಒಮ್ಮಯಾದರು ವಿಮಾನದಲ್ಲಿ ಪ್ರಯಾಣಿಸಬೇಕು ಎನ್ನುವ ಬಯಕೆ ಇದ್ದೇ ಇರುತ್ತದೆ. ಹಾಗೇಯೆ ಕೆಲವು ಮಕ್ಕಳಲ್ಲಿ ನಾನು ಮುಂದೇ ಪೈಲಟ್ ಆಗಬೇಕು ಎನ್ನುವ ಕನಸು ಕಂಡಿರುತ್ತಾರೆ. ಅದು ಕೆಲವು ತಂದೆ ತಾಯಿಗಳ ಕನಸು ಸಹಾ ಆಗಿರುತ್ತದೆ. ಆದರೆ ಈ ಕನಸನ್ನು ಎಲ್ಲಾ ಮಕ್ಕಳು ಇಡೆರಿಸಕೊಳ್ಳಲು ಆಗುವುದಿಲ್ಲ. ಕಾರಣ ಸರಿಯಾದ ಮಾರ್ಗದರ್ಶನದ ಕೊರತೆ. ಸರಿಯಾದ ಮಾರ್ಗದರ್ಶನದಿಂದ ಕೆಲವೇ ಕೆಲವರು ಪೈಲಟ್ ಆಗುವ ಮೂಲಕ ತಮ್ಮ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. https://ainlivenews.com/is-it-difficult-to-pass-stool-then-this-problem-means-you/ ಇನ್ನೂ ಗಂಡು ಮಕ್ಕಳಿಗೆ ಗಡ್ಡ ಅಂದ್ರೆ ತುಂಬಾ ಇಷ್ಟ. ಪೈಲಟ್‌ಗಳು ಗಡ್ಡ ಬಿಡುವಂತೆ ಇಲ್ಲ, ದಾಡಿ ಬಿಟ್ಟಿರೆ ಅದು ಒಂದು ಸಮಸ್ಯೆಯಾಗಿಲಿದೆ. ಪೈಲಟ್‌ಗಳಿಗೆ ಅವಕಾಶವಿಲ್ಲ ಎಂದು ಕೇಳಿದರೆ ಅನೇಕರು ಆಶ್ಚರ್ಯಚಕಿತರಾಗುತ್ತಾರೆ. ಪೈಲಟ್‌ಗಳು ಅನುಸರಿಸಬೇಕಾದ ಹಲವು ನಿಯಮಗಳಲ್ಲಿ ಪೈಲಟ್‌ಗಳು ಗಡ್ಡವನ್ನು ಹೊಂದಿರಬಾರದು ಕೂಡ ಒಂದು. ಬಹುತೇಕ ಎಲ್ಲಾ ವಿಮಾನಯಾನ ಸಂಸ್ಥೆಗಳು ಈ ನಿಯಮವನ್ನು ಅನುಸರಿಸುತ್ತವೆ ಫೆಡರಲ್ ಏವಿಯೇಷನ್ ಏಜೆನ್ಸಿಯ ಪ್ರಕಾರ, US ನಾಗರಿಕ ವಿಮಾನಯಾನ ಸಂಸ್ಥೆ ವಿಮಾನಯಾನ ಸಂಸ್ಥೆಗಳು ಪೈಲಟ್‌ಗಳು ಗಡ್ಡವನ್ನು ಹೊಂದಲು…
ಮನುಷ್ಯನಿಗೆ ಮೂರು ಹೊತ್ತಿನ ಆಹಾರ ಸೇವನೆ ಎಷ್ಟು ಪ್ರಾಮುಖ್ಯತೆಯೋ, ಅದೇ ರೀತಿ ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗಿ, ಅದರಲ್ಲಿ ಅಳಿದುಳಿದಿರುವಂತಹ ಕಲ್ಮಶವು ಕೂಡ ಮಲದ ರೂಪದಲ್ಲಿ ದೇಹದಿಂದ ಹೊರ ಹೋಗುವ ಪ್ರಕ್ರಿಯೆಯೂ ಕೂಡ ಸುಲಭವಾಗಿ ನಡೆಯುವುದು ಅಷ್ಟೇ ಮುಖ್ಯ. https://ainlivenews.com/i-am-the-candidate-from-jds-party-in-2028-elections-former-minister-d-c-tammanna/ ಆದರೆ ಇಂದಿನ ದಿನಗಳಲ್ಲಿ ಬಹಳಷ್ಟು ಜನರು ಪ್ರತಿ ದಿನ ಬೆಳಗ್ಗೆ ಸಮಯದಲ್ಲಿ ಮಲವಿಸರ್ಜನೆ ಮಾಡಲು ತುಂಬಾ ಕಷ್ಟಪಡುತ್ತಾರೆ. ಇದಕ್ಕೆ ಪ್ರಮುಖ ಕಾರಣ, ಅನಾರೋಗ್ಯಕಾರಿ ಆಹಾರ ಪದ್ಧತಿ ಹಾಗೂ ಜಡ ಜೀವನಶೈಲಿಯಿಂದಾಗಿ ಜೀರ್ಣಾಂಗ ವ್ಯವಸ್ಥೆಯ ಕಾರ್ಯ ನಿರ್ವಹಣೆಯಲ್ಲಿ ವ್ಯತ್ಯಾಸ ಕಂಡು ಬರುವುದರಿಂದ, ಈ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ಕೆಲವು ಜನರ ಮಲ ಟಾಯ್ಲೆಟ್ ಸೀಟ್ ಗೆ ಪ್ರತಿ ಬಾರಿ ಮಲವಿಸರ್ಜನೆ ಮಾಡಿದಾಗಲೂ ಅಂಟಿಕೊಳ್ಳುತ್ತದೆ. ಅದನ್ನು ಹೋಗಲಾಡಿಸಲು ಹಲವು ಬಾರಿ ಫ್ಲಶ್ ಮಾಡಬೇಕಾಗುತ್ತದೆ. ಇದನ್ನು ತಜ್ಞ ವೈದ್ಯರು ಅನ್ವೇಶಿಸಿ ಅತಿಯಾದ ಕೊಬ್ಬಿನ ಅಂಶ ದೇಹಕ್ಕೆ ಆಹಾರ ಪದಾರ್ಥಗಳ ಮೂಲಕ ಹೋಗುತ್ತಿದೆ, ಆದರೆ ಹೊಟ್ಟೆ ಅದನ್ನು ಜೀರ್ಣ ಮಾಡಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.…
ಮಂಡ್ಯ :- ಮುಂಬರುವ 2028 ರ ವಿಧಾನ ಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಜೆಡಿಎಸ್ ಪಕ್ಷದ ನಾನೇ ಅಭ್ಯರ್ಥಿಯಾಗಿ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಶನಿವಾರ ಹೇಳಿದರು. https://ainlivenews.com/siddaramaiah-first-among-the-most-corrupt-cms-in-karnataka-janardhana-reddy/ ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕೆಲವರು ಈಗಾಗಲೇ ಮದ್ದೂರು ಕ್ಷೇತ್ರದಲ್ಲಿ ಹಲವಾರು ಕಡೆ ಡಿ.ಸಿ.ತಮ್ಮಣ್ಣರಿಗೆ ವಯಸ್ಸಾಗಿದೆ ಆದ್ದರಿಂದ ಮುಂದಿನ ಚುನಾವಣೆಯಲ್ಲಿ ನಾನೇ ಎನ್ ಡಿಎ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುತ್ತಿರುವುದು ನನಗೆ ಬೇಸರ ತಂದಿದೆ ಎಂದು ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ರವರ ವಿರುದ್ಧ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು. ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ 94 ವರ್ಷ ವಯಸ್ಸಾಗಿದ್ದರೂ ಮುಂದೆ ನಡೆಯುವ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದಿದ್ದಾರೆ. ಹೀಗಿರುವಾಗ ನಾನು ಏಕೆ ಮತ್ತೆ ಸ್ಪರ್ಧಿಸಬಾರದು. ಇಷ್ಟಕ್ಕೂ ಮೀರಿ ನನ್ನ ಕುಟುಂಬದಲ್ಲೇ ಸ್ಪರ್ಧಿಸಲು ಇಬ್ಬರು ವ್ಯಕ್ತಿಗಳಿದ್ದಾರೆ ಎಂದರು. ಇನ್ನು ಫೆಬ್ರವರಿ 2 ರಂದು ನಡೆಯುವ ಮನ್…
ಕೊಪ್ಪಳ:- ಕರ್ನಾಟಕದಲ್ಲಿ ಹೆಚ್ಚು ಭ್ರಷ್ಟಾಚಾರ ಮಾಡಿದ ಸಿಎಂಗಳಲ್ಲಿ ಸಿದ್ದರಾಮಯ್ಯ ಫಸ್ಟು ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ. https://ainlivenews.com/a-student-committed-suicide-by-jumping-from-a-college-building-in-bengaluru/ ಈ ಸಂಬಂಧ ಮಾತನಾಡಿದ ಅವರು, ರಾಜ್ಯದಲ್ಲಿ ಅತಿಹೆಚ್ಚು ಭ್ರಷ್ಟಾಚಾರ ಮಾಡಿದ ಮುಖ್ಯಮಂತ್ರಿಗಳು ಅಂದರೆ ಸಿದ್ದರಾಮಯ್ಯನವರು, ಭ್ರಷ್ಟಾಚಾರದಿಂದ ಸಾಕಷ್ಟು ಬೇನಾಮಿ ಆಸ್ತಿಯನ್ನು ಮಾಡಿಕೊಂಡಿದ್ದಾರೆ ಎಂದರು. ಸಿದ್ದರಾಮಯ್ಯ ಹಿಂದುಳಿದ ನಾಯಕ ಎಂದು ಹೇಳಿಕೊಂಡು ಅಧಿಕಾರ ಪಡೆದು ರಾಜ್ಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ರಾಜ್ಯದಲ್ಲಿನ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸಿದ್ದರಾಮಯ್ಯನವರು ಅತಿಹೆಚ್ಚು ಭ್ರಷ್ಟಾಚಾರ ಮಾಡಿದ ಸಿಎಂ ಆಗಿದ್ದಾರೆ. ರಾಜ್ಯದಲ್ಲಿ ಮುಡಾ ಹಗರಣದಲ್ಲಿ ಕೇವಲ 140 ಸೈಟ್‌ಗಳು ಮಾತ್ರವಲ್ಲದೆ ಸಾವಿರಕ್ಕೂ ಅಧಿಕ ಸೈಟ್‌ಗಳನ್ನು ಬೇನಾಮಿ ಆಸ್ತಿಯಾಗಿ ಮಾಡಿಕೊಂಡಿದ್ದಾರೆ. ಮುಡಾದಲ್ಲಿ ಸೈಟ್ ಖರೀದಿ ಮಾಡಿರುವವರನ್ನು ವಿಚಾರಣೆ ಮಾಡಿದರೆ ಸತ್ಯಾಂಶ ಹೊರಬರಲಿದೆ. ಜನರಲ್ಲಿ ಹಿಂದುಳಿದ ನಾಯಕ ಎಂದು ನಂಬಿಕೆಯನ್ನು ಹುಟ್ಟಿಸಿಕೊಂಡು ಮಾಡಿರುವ ಭ್ರಷ್ಟಾಚಾರ ಮುಡಾ ಹಗರಣದಿಂದ ಹೊರ ಬಂದಿದೆ ಎಂದು ಕಿಡಿಕಾರಿದರು.
ಬೆಂಗಳೂರು:- ಕಾಲೇಜು ಕಟ್ಟಡದಿಂದ ಜಿಗಿದು ಬೆಂಗಳೂರಿನಲ್ಲಿ ವಿದ್ಯಾರ್ಥಿ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ. https://ainlivenews.com/are-you-waking-up-frequently-if-so-put-this-under-your-pillow/ ನಗರದ ಬಸವನಗುಡಿಯಲ್ಲಿರುವ ಬಿಎಂಎಸ್ ಕಾಲೇಜಿನಲ್ಲಿ ಅವಘಡ ಸಂಭವಿಸಿದೆ. ಆಕರ್ಷ್ ರೆಡ್ಡಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎನ್ನಲಾಗಿದೆ. 4ನೇ ವರ್ಷದ ಏರೋಸ್ಪೇಸ್ ಓದುತ್ತಿದ್ದರು. ಘಟನಾ ಸ್ಥಳಕ್ಕೆ ಹನುಮಂತನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೇ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರಿಂದ ತನಿಖೆ ಮುಂದುವರಿದಿದೆ.