ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂದಿನಿಂದ ನಾಲ್ಕು ದಿನ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಕೃಷಿ ಮೇಳ ಬೆಳಗ್ಗೆ 1 1 ಗಂಟೆಗೆ ಸಿಎಂ ಸಿದ್ದರಾಮಯ್ಯರಿಂದ ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದಾರೆ.ಆಹಾರ, ಆರೋಗ್ಯ, ಆದಾಯಕ್ಕಾಗಿ ಸಿರಿಧಾನ್ಯ ಎಂಬ ಘೋಷವಾಕ್ಯದಡಿ ಕೃಷಿ ಮೇಳ ಆಯೋಜನೆ ಮಾಡಲಾಗಿದ್ದುಐವರು ಸಾಧಕ ರೈತರಿಗೆ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ಪ್ರದಾನ ಕೂಡ ಮಾಡಲಾಗುತ್ತೆ. ಸಿಎಂ ಸಿದ್ದರಾಮಯ್ಯರಿಂದ ಜಿಕೆವಿಕೆಯ ಸಂಶೋಧಕರು ಅಭಿವೃದ್ಧಿಪಡಿಸಿರುವ, 5 ಹೊಸ ತಳಿಗಳ ಬಿಡುಗಡೆ ಕೃಷಿ ಮೇಳದ ಇತಿಹಾಸದಲ್ಲಿ ಮೊದಲ ಬಾರಿಗೆ ‘ಬೀಜ ಸಂತೆ’ ಆಯೋಜನೆಉದ್ಘಾಟನೆ ವೇಳೆ ಕೃಷಿ ಸಚಿವ ಚಲುವರಾಯ ಸ್ವಾಮಿ, ಡಿಸಿಎಂ ಡಿ.ಕೆ.ಶಿ, ಸಂಸದ ಡಿವಿ ಸದಾನಂದ ಗೌಡ ಉಪಸ್ಥಿತಿ ಉದ್ಘಾಟನ ಸಮಾರಂಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿಕೆವಿಕೆ ಕುಲಪತಿ ಎಸ್.ವಿ. ಸುರೇಶ ಭಾಗಿ ಕೃಷಿ ಮೇಳದಲ್ಲಿ 625 ಮಳಿಗೆಗೆ ವ್ಯವಸ್ಥೆ, ಸಾರ್ವಜನಿಕರಿಗೆ ಉಚಿತ ಪ್ರವೇಶ ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ಅಂದ್ರೆ ಜಿಕೆವಿಕೆಯಲ್ಲಿ ಕೃಷಿ ಮೇಳ ಆಯೋಜನೆ ಕೃಷಿ ಮೇಳ…
Author: AIN Author
ಚಾಮರಾಜನಗರ:- ರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಹಾಲಿನ ನಾಗರಾಜು ಅವರನ್ನು ಬಂಧಿಸಿರುವುದನ್ನು ಖಂಡಿಸಿ ಉಡಿಗಾಲ ಗ್ರಾಮ ಘಟಕದ ಪದಾಧಿಕಾರಿಗಳು ರಸ್ತೆ ನಡೆಸಿ ಪ್ರತಿಭಟನೆ ನಡೆಸಿದರು. ತಾಲೂಕಿನ ಉಡಿಗಾಲ ಗ್ರಾಮದಲ್ಲಿ ಚಾಮರಾಜನಗರ- ಗುಂಡ್ಲುಪೇಟೆ ಮುಖ್ಯರಸ್ತೆಯನ್ನು ತಡೆದು ಕೆಲಕಾಲ ಧರಣಿ ನಡೆಸಿದ ರೈತ ಮುಖಂಡರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ನಗರಕ್ಕೆ ಸಿಎಂ ಸಿದ್ದರಾಮಯ್ಯ ಆಗಮನದ ಹಿನ್ನೆಲೆಯಲ್ಲಿ, ಸಿಎಂ ವಿರುದ್ಧ ಯಾವುದೇ ಪ್ರತಿಭಟನೆಗಳನ್ನು ನಡೆಸಬಾರದು ಎಂದು ಮುನ್ನೆಚ್ಚರಿಕಾ ಕ್ರಮವಾಗಿ ನಮ್ಮ ಸಂಘದ ತಾಲೂಕು ಅಧ್ಯಕ್ಷರಾದ ಹಾಲಿನ ನಾಗರಾಜು ಅವರನ್ನು ಇಂದು ಮುಂಜಾನೆ ನಾಲ್ಕು ಗಂಟೆಯ ವೇಳೆಯಲ್ಲಿ ಪೊಲೀಸರು ಬಂಧಿಸಿರುವುದು ಖಂಡನೀಯ ಎಂದು ಅಸಮಾಧಾನ ಹೊರಹಾಕಿದರು. ಸಿಎಂ ಅವರು ಬರ ಪರಿಹಾರ ಕೊಟ್ಟಿಲ್ಲ. ೧೦ ಗಂಟೆ ವಿದ್ಯುತ್ ನೀಡುತ್ತೇವೆ ಎಂದು ಹೇಳಿ ಈಗ ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ. ಕಬ್ಬಿನ ಬಾಕಿ ಹಣವನ್ನು ನೀಡಿಲ್ಲ. ಅದರ ಹಣ…
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರು ಜಿಲ್ಲೆ ಪ್ರವಾಸ ಕೈಗೊಳ್ಳಲಿದ್ದಾರೆ. ಕನಕ ವಿದ್ಯಾರ್ಥಿ ನಿಲಯ, ಕಡಲೆ ಮಾರಮ್ಮ ದೇವಸ್ಥಾನ ಉದ್ಘಾಟನೆ ಸೇರಿದಂತೆ ಹಲವು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. https://ainlivenews.com/joint_pain_suprem_ray_treatment_reiki/ ಇನ್ನೂ ಕರ್ನಾಟಕ ಮುಖ್ಯಮಂತ್ರಿ ಪುತ್ರರ ವಿಡಿಯೋ, ಮಾಜಿ ಮುಖ್ಯಮಂತ್ರಿಗಳ ವಿದ್ಯುತ್ ಕಳ್ಳತ, ರಾಜ್ಯಾಧ್ಯಕ್ಷರ ನೇಮಕ ಮತ್ತು ವಿಪಕ್ಷ ನಾಯಕನ ಆಯ್ಕೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ಇದರೊಂದಿಗೆ ಮಳೆಯಿಲ್ಲದೆ ಬರಗಾಲ ಆವರಿಸಿದ್ದು, ಬರ ಪರಿಹಾರದ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಗುದ್ದಾಟ ನಡೆಯುತ್ತಿದೆ.
ಚೆನ್ನೈ: 100 ಪರ್ಸೆಂಟ್ ಈ ಸಲ ಕಪ್ ನಮ್ದೆ ಎಂದು ಕ್ರಿಕೆಟ್ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿರುವ ಭಾರತ ತಂಡದ ಬಗ್ಗೆ ನಟ ರಜನಿಕಾಂತ್ ಭರವಸೆಯ ಮಾತುಗಳನ್ನಾಡಿದ್ದಾರೆ. ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹೈವೋಲ್ಟೇಜ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ವೀರೋಚಿತ ಜಯ ಸಾಧಿಸಿತು. ಈ ಪಂದ್ಯಕ್ಕೆ ಖ್ಯಾತ ನಟ ರಜನಿಕಾಂತ್ ಕೂಡ ಸಾಕ್ಷಿಯಾಗಿದ್ದರು. ಪಂದ್ಯ ವೀಕ್ಷಿಸಿ ಭಾರತ ತಂಡದ ಆಟಗಾರರನ್ನು ಬೆಂಬಲಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಆಟಗಾರರ ಉತ್ತಮ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ತಲೈವಾ, ಮೊದಲು ನಾನು ಸ್ವಲ್ಪ ಟೆನ್ಶನ್ ಆದೆ. ಎರಡು ಮತ್ತು ಮೂರು ವಿಕೆಟ್‌ಗಳ (ನ್ಯೂಜಿಲೆಂಡ್) ನಂತರ ಒಂದೂವರೆ ಗಂಟೆ ಪಂದ್ಯ ಸ್ವಲ್ಪ ರೋಚಕವಾಗಿತ್ತು. ಆದರೆ 100 ಪರ್ಸೆಂಟ್ ಕಪ್ ನಮ್ಮದು. 100 ಪರ್ಸೆಂಟ್ ಸೆಮಿಫೈನಲ್ ಗೆಲುವಿಗೆ ಅವರೇ (ಮೊಹಮ್ಮದ್ ಶಮಿ) ಕಾರಣ ಎಂದು ಬಣ್ಣಿಸಿದ್ದಾರೆ. ಮೊಹಮ್ಮದ್ ಶಮಿ ಬೆಂಕಿ ಬೌಲಿಂಗ್ ದಾಳಿ ಹಾಗೂ ಸಂಘಟಿತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್…
ಟೆಲ್ ಅವೀವ್: ಇಸ್ರೇಲ್ (Isreal) ಮೇಲೆ ದಾಳಿ ನಡೆಸಿದ ಬಳಿಕ ಹಮಾಸ್ ಉಗ್ರರು (Hamas Terrorist) ಇಸ್ರೇಲಿ ಪ್ರಜೆಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದ ದೊಡ್ಡ ಸುರಂಗವೊಂದು ಗಾಜಾದ ಆಸ್ಪತ್ರೆಯಡಿ (Gaza Hospital) ಪತ್ತೆಯಾಗಿದೆ. ಈ ಸುರಂಗದ ವಿಡಿಯೋವನ್ನು ಇಸ್ರೇಲಿ ಸೇನೆ ಇಂದು ಬಿಡುಗಡೆ ಮಾಡುವ ಮೂಲಕ ಮೂಲಕ ಹಮಾಸ್ ಉಗ್ರರ ಕೃತ್ಯವನ್ನು ಬಹಿರಂಗ ಮಾಡಿದೆ. https://twitter.com/IDF/status/1724169252054188276?ref_src=twsrc%5Etfw%7Ctwcamp%5Etweetembed%7Ctwterm%5E1724169252054188276%7Ctwgr%5Ee798f9acf1c061c6caa7e898ae22595ac75d557f%7Ctwcon%5Es1_&ref_url=https%3A%2F%2Fpublictv.in%2Fidf-shows-how-rantisi-hospital-was-also-used-by-hamas-terrorists-to-hold-hostages%2F ಇಸ್ರೇಲ್ ಸೇನೆ ಆಸ್ಪತ್ರೆಯ ಮೇಲೆ ಏರ್ ಸ್ಟ್ರೈಕ್ ಮಾಡುವ ಮೂಲಕ ಮಗ್ದ ಮಕ್ಕಳನ್ನು ಹತ್ಯೆ ಮಾಡುತ್ತಿದೆ ಎಂದು ಹಮಾಸ್ ಹೇಳಿತ್ತು. ಆದರೆ ಇಸ್ರೇಲ್ ಈ ಆರೋಪವನ್ನು ತಳ್ಳಿ ಹಾಕಿ, ಹಮಾಸ್ ಉಗ್ರರು ಆಸ್ಪತ್ರೆಯನ್ನು ರಕ್ಷಣಾ ಕವಚವನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿತ್ತು. ಈಗ ಸುರಂಗದ ವಿಡಿಯೋವನ್ನು ಇಸ್ರೇಲ್ ಬಿಡುಗಡೆ ಮಾಡುವ ಮೂಲಕ ಹಮಾಸ್ ಉಗ್ರರ ಬಣ್ಣವನ್ನು ಬಯಲು ಮಾಡಿದೆ. ಗಾಜಾದಲ್ಲಿನ ರಾಂಟಿಸ್ಸಿ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್ ಸಂಗ್ರಹಿಸಿಟ್ಟಿರುವ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದಾಗಿ ಇಸ್ರೇಲ್ ಸೈನ್ಯದ ವಕ್ತಾರ ಹೇಳಿಕೊಳ್ಳುವ ವೀಡಿಯೊ ಮತ್ತು ಫೋಟೋಗಳನ್ನು ಇಸ್ರೇಲಿ ಮಿಲಿಟರಿ ರಿಲೀಸ್ ಮಾಡಿದೆ.
ಕೋಲ್ಕತ್ತಾ: ವಿಶ್ವಕಪ್ ಕ್ರಿಕೆಟ್ (World Cup Cricket) ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ದಕ್ಷಿಣ ಆಫ್ರಿಕಾ (South Africa) ಸೋಲಲು ನಾಯಕ ಟೆಂಬ ಬವುಮಾ (Temba Bavuma) ಅವರ ನಿರ್ಧಾರವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಹೌದು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದವರನ್ನು ಔಟ್ ಮಾಡಿದ್ದು ಅರೆಕಾಲಿಕ ಸ್ಪಿನ್ನರ್ ಟ್ರಾವಿಸ್ ಹೆಡ್. ಲೀಗ್‌ನಲ್ಲಿ ವೇಗದ ಶತಕ ಸಿಡಿಸಿದ್ದ ಹೆನ್ರಿಕ್ ಕ್ಲಾಸನ್ 47 ರನ್(48 ಎಸೆತ, 4 ಬೌಂಡರಿ, 2 ಸಿಕ್ಸರ್) ಗಳಿಸಿದ್ದಾಗ ಹೆಡ್ (Travis Head) ಬೌಲ್ಡ್ ಮಾಡಿದರು. ಮರು ಎಸೆತದಲ್ಲೇ ಮಾರ್ಕೊ ಜಾನ್ಸೆನ್ ಅವರನ್ನು ಎಲ್‌ಬಿಗೆ ಕೆಡವಿದ್ದರು. ಸಮಯ ಕಳೆಯುತ್ತಿದ್ದಂತೆ ಪಿಚ್ ಸ್ಪಿನ್‌ಗೆ ಸಹಕಾರಿ ಆಗುತ್ತಿತ್ತು. ಈ ವಿಷಯ ತಿಳಿದಿದ್ದರೂ ಬವುಮಾ ಆರಂಭದಲ್ಲೇ ಸ್ಪಿನ್ನರ್‌ಗಳಿಗೆ ಬೌಲ್ ನೀಡಲೇ ಇಲ್ಲ. ದಕ್ಷಿಣ ಆಫ್ರಿಕಾದ ಪರ ಸ್ಪಿನ್ನರ್‌ಗಳು ದಾಳಿಗೆ ಇಳಿದಿದ್ದು 14ನೇ ಓವರ್‌ನಲ್ಲಿ. 14ನೇ ಓವರಲ್ಲಿ ತಬ್ರೇಜ್ ಶಮ್ಮಿ ಬೌಲಿಂಗ್‌ಗಿಳಿದರೆ, 15ನೇ ಓವರ್ ಎಸೆದ ವಿಶ್ವನಂ.1 ಸ್ಪಿನ್ನರ್ ಕೇಶವ್ ಮಹಾರಾಜ್ ತಮ್ಮ…
ನನಗೆ ಪಿರಿಯಡ್ಸ್ ಆಗಿಲ್ಲ, ಗರ್ಭಿಣಿಯೇ (Pregnant) ಎಂದು ತಿಳಿದುಕೊಳ್ಳುವುದಕ್ಕಾಗಿ ರಕ್ತ ಪರೀಕ್ಷೆ ಮಾಡಿಸಿದ್ದೇನೆ. ನಾನು ಪ್ರಗ್ನೆಂಟ್ ಆಗಿದ್ದೇನೆ ದಯವಿಟ್ಟು ಮನೆಯಿಂದ ನನ್ನ ಆಚೆ ಕಳುಹಿಸಿ ಎಂದು ಹಿಂದಿ ಬಿಗ್ ಬಾಸ್ (Bigg Boss) ಸ್ಪರ್ಧಿ, ನಟಿ ಅಂಕಿತಾ ಲೋಖಂಡೆ (Ankita Lokhande) ಹೇಳಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಸದ್ಯ ಪ್ರಸಾರವಾಗುತ್ತಿರುವ ಸೀಸನ್ ನಲ್ಲಿ ನಟಿ ಅಂಕಿತಾ ಲೋಖಂಡೆ ಮತ್ತು ಪತಿ ವಿಕ್ಕಿ ಜೈನ್ (Vicky Jain)ಇಬ್ಬರೂ ಬಿಗ್ ಬಾಸ್ ಮನೆಯೊಳಗೆ ಇದ್ದಾರೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ಸುದ್ದಿ ಬಿಗ್ ಬಾಸ್ ಮನೆಯಿಂದ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಕುರಿತಂತೆ ಬಿಗ್ ಬಾಸ್ ಆಯೋಜಕರು ಅಧಿಕೃತವಾಗಿ ಹೇಳಿಕೆ ನೀಡದೇ ಇದ್ದರೂ, ಸದ್ಯದಲ್ಲೇ ಸತ್ಯ ಆಚೆ ಬರಲಿದೆ ಎಂದು ಚರ್ಚಿಸಲಾಗುತ್ತಿದೆ. ಹಿಂದಿ ಬಿಗ್ ಬಾಸ್ ಶೋನಲ್ಲಿ ನಾನಾ ರೀತಿಯ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಈ ಬಾರಿ ಮದುವೆಯಾದ ಎರಡು ಜೋಡಿಗಳನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗಿತ್ತು. ಅದರಲ್ಲಿ ಒಂದು ಜೋಡಿಯಿಂದ…
ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಅಮೋಘ ಪ್ರದರ್ಶನ ತೋರಿದ್ದ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿತು. ಆ ಮೂಲಕ ತಮ್ಮ ಬೆನ್ನೇರಿರುವ ‘ಚೋಕರ್ಸ್’ ಪಟ್ಟ ಕಳಚಿಕೊಳ್ಳುವಲ್ಲಿ ವಿಫಲವಾಯಿತು. ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ, ಎಂದಿನ ಲಯದಲ್ಲಿ ರನ್ ಗಳಿಸಲು ವಿಫಲವಾಯಿತು. ಸಾಹಸಮಯ ಶತಕ (101 ರನ್) ಸಿಡಿಸಿದ ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್ (47) ಬಿಟ್ಟರೆ ಉಳಿದವರು ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ಹೀಗಾಗಿ 49.4 ಓವರ್‌ಗಳಲ್ಲಿ 212 ರನ್ ಗಳಿಸಿ ಆಲೌಟ್ ಆಯಿತು. ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 47.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿ 8ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿತು. ದಕ್ಷಿಣ ಆಫ್ರಿಕಾ ತಂಡಕ್ಕೆ ಸೆಮಿಫೈನಲ್‌ನಲ್ಲಿ ಎದುರಾದ 5ನೇ ಸೋಲು ಇದು. ಈ ಹಿಂದೆ 1992, 1999, 2007 ಹಾಗೂ 2015ರ ಸೆಮಿಫೈನಲ್‌ಗಳಲ್ಲಿ ಸೋಲು ಎದುರಾಗಿತ್ತು. ವಿಶ್ವಕಪ್‌ನ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ತೋರುವ ಈ ತಂಡ…
ಕೊಪ್ಪಳ : ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ, ಅಸಮಾಧಾನವಿದೆ. ನೆಮ್ಮದಿಯಾಗಿ ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಲು ಅವರ ಪಕ್ಷದವರೇ ಬಿಡುವುದಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರು ಅಪಹಾಸ್ಯ ಮಾಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಕಾಂಗ್ರೆಸ್ಸಿಗೆ ಕುಟುಂಬ ರಾಜಕಾರಣ ಅಂತ ಬಿಜೆಪಿಯವರು ಹೇಳುತ್ತಾರೆ. ಆದರೆ ಈಗ ಏನಾಗಿದೆ? ಬಿಜೆಪಿಯವರು ಯಡಿಯೂರಪ್ಪ ಹೆಸರನ್ನು ಹೇಳಿಕೊಂಡು ಹೊರಟಿದ್ದಾರೆ ಎಂದರು. https://ainlivenews.com/joint_pain_suprem_ray_treatment_reiki/ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ನೆಚ್ಚಿಕೊಂಡು ಬಿಜೆಪಿ, ಜೆಡಿಎಸ್‌ನಿಂದ ಕಾಂಗ್ರೆಸ್ಸಿಗೆ ಹಲವಾರು ಜನರು ಬರುತ್ತಿದ್ದಾರೆ. ಹಂತ ಹಂತವಾಗಿ ಎಲ್ಲ ಹೇಳುವೆ ಎಂದರು. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ವಿಚಾರವಾಗಿ, ಅವರು ದಂಡ ಕಟ್ಟುವುದಾಗಿ ಒಪ್ಪಿಕೊಂಡಿದ್ದಾರೆ. ಕರೆಂಟ್ ಕದ್ದಿರುವುದನ್ನು ಮಾಧ್ಯಮದವರು ತೋರಿಸಿದ್ದಾರೆ. ಜೆಡಿಎಸ್, ಬಿಜೆಪಿಯವರು ಹತಾಶೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಸೂಚಿಸುತ್ತೇನೆ ಎಂದರು.
ಬೆಂಗಳೂರು: ಪಂಚರಾಜ್ಯ ಚುನಾವಣೆ ಮೇಲೂ ನನ್ನ ಪಕ್ಷಾಂತರ ಪ್ರಭಾವ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದರು. ಈ ಸಂಬಂಧ ಮಾತನಾಡಿದ ಅವರು,ನನ್ನ ಪಕ್ಷಾಂತರದ ಪ್ರಭಾವ ಈಗ ಪಂಚರಾಜ್ಯಗಳ ಚುನಾವಣೆಯ ಮೇಲೂ ಆಗಿದೆ. ಹಾಗಾಗಿಯೇ ಅಲ್ಲಿ 80 ವರ್ಷ ವಯಸ್ಸು ದಾಟಿದವರಿಗೂ ಬಿಜೆಪಿ ಟಿಕೆಟ್ ನೀಡಿದೆ ಎಂದರು ಕರ್ನಾಟಕದಲ್ಲಿ ಹಿರಿಯರ ನಿರ್ಲಕ್ಷಿಸಿ ಬಿಜೆಪಿ ಅಧಿಕಾರ ಕಳೆದುಕೊಂಡಿತು. ಹೀಗಾಗಿ ಪಂಚರಾಜ್ಯಗಳ ಚುನಾವಣೆಯಲ್ಲಿ ಈಗ ಹಿರಿಯರಿಗೆ ಮಣೆ ಹಾಕಲಾಗಿದೆ. ಎಲ್ಲ ರಾಜ್ಯಗಳಲ್ಲೂ ನಿಯಮ ಒಂದೇ ಅನ್ವಯ ಆಗಬೇಕಲ್ಲವೆ? ಎಂದವರು ಪ್ರಶ್ನಿಸಿದರು. ಈಚೆಗೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರನ್ನು ದೆಹಲಿಗೆ ಕರೆಸಿ 3 ದಿನ ಕಾಯಿಸಿದರು. ಐದು ನಿಮಿಷ ಮಾತನಾಡುವಷ್ಟು ಸೌಜನ್ಯ ವರಿಷ್ಠರು ತೋರಲಿಲ್ಲ ವೇಕೆ? ಇನ್ನು, ವಯಸ್ಸಿನ ನೆಪದಲ್ಲಿ ಲಾಲಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ ಅವರನ್ನು ಮನೆಗೆ ಕಳುಹಿಸಿದರು. ಆದರೆ, 3-4 ಮಾಜಿ ಮುಖ್ಯಮಂತ್ರಿಗಳೂ ಸೇರಿ, ಈಗ 80 ವರ್ಷ ಆದವರಿಗೂ ಟಿಕೆಟ್ ನೀಡಿದ್ದಾರೆ. ಇದಕ್ಕೆ ಮೂಲ ಕಾರಣ ಜಗದೀಶ್…