ಬೆಂಗಳೂರು;- ರಾಜಧಾನಿ ಬೆಂಗಳೂರು ನಗರದಲ್ಲಿ ಮತ್ತೊಂದು ಚಿರತೆ ಪ್ರತ್ಯಕ್ಷವಾಗಿ ಮತ್ತೆ ಆತಂಕ ಸೃಷ್ಟಿ ಮಾಡಿದೆ. ನೈಸ್ ರಸ್ತೆ ಸಮೀಪದ ಚಿಕ್ಕತೋಗೂರು ಬಳಿ ಚಿರತೆ ಪ್ರತ್ಯಕ್ಷವಾಗಿದೆ. ನಿನ್ನೆ ನ4 ರ ಸಂಜೆ 7.40ರ ಸಮಯದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಶನಿವಾರ ಸಂಜೆ ಚಿರತೆ ಮನೆ ಕಂಪೌಂಡ್ ಒಳಗೆ ನುಗ್ಗಿದ್ದು, ಬಾಗಿಲು ಬಳಿ ಬಂದ ಚಿರತೆ ಕಂಡು ಬಾಲಕ ಕಿರುಚಾಡಿದ್ದಾನೆ. ಬಾಲಕನ ಕಿರುಚಾಟಕ್ಕೆ ಚಿರತೆ ಓಡಿ ಹೋಗಿದೆ ಎಂದು ತಿಳಿದು ಬಂದಿದೆ. ಕೆ.ಆರ್.ಪುರಂ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪರಿಶೀಲನೆ ನಡೆಸಿ ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಶನಿವಾರ ಮಳೆ ಬಂದ ಹಿನ್ನೆಲೆಯಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದೆ.
Author: AIN Author
ಬೆಂಗಳೂರು;- ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗೋರಿಗೆ KSRTC ಗುಡ್ ನ್ಯೂಸ್ ನೀಡಿದೆ. ಪ್ರಯಾಣಿಕರ ಅನಕೂಲಕ್ಕಾಗಿ ಬೆಂಗಳೂರಿನಿಂದ ಎಲ್ಲಾ ಜಿಲ್ಲೆಗಳಿಗೂ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ 10ರಿಂದ ಎರಡು ಸಾವಿರ ಹೆಚ್ಚುವರಿ ಬಸ್‌ಗಳ ಸಂಚರಿಸಲಿವೆ. ಕಳೆದ ವಾರ ದಸರಾ ಹಿನ್ನೆಲೆ ಹೆಚ್ಚುವರಿ ಬಸ್‌ಗಳನ್ನ ಬಿಡಲಾಗಿತ್ತು. ಅದರಿಂದ ಸಾರಿಗೆ ಇಲಾಖೆಗೆ ಕೋಟಿ ಕೋಟಿ ಆದಾಯ ಹರಿದು ಬಂದಿತ್ತು. ಇದೀಗ ಮತ್ತೆ ಹಬ್ಬಕ್ಕೆ ಹೆಚ್ಚುವರಿ ಬಸ್‌ಗಳನ್ನ ಬಿಟ್ಟು ಲಾಭ ಪಡೆಯೋಕೆ ಸಾರಿಗೆ ಇಲಾಖೆ ಮುಂದಾಗಿದೆ. ಹೆಚ್ಚುವರಿ ಬಸ್ ಬಿಡೋದಾಗಿ ಸಾರಿಗೆ ನಿಗಮವು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. 12.11.2023 ರಂದು ನರಕ ಚತುರ್ದಶಿ ಹಾಗೂ ದಿನಾಂಕ: 14.11.2023 ರಂದು ಬಲಿಪಾಡ್ಯಮಿ ಹಬ್ಬ ಇದೆ.ಹೀಗಾಗಿ ಎಡದು ದಿನ ಮುಂಚೆನೇ ಪ್ರಯಾಣಿಕರು ಊರುಗಳಿಗೆ ತೆರಳುತ್ತಾರೆ.ಇದೆ 10ನೇ ತಾರೀಕಿನಿಂದ ಬಸ್ ಗಳು ಬಿಡಲಾಗುತ್ತೆ.ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ದಿನಾಂಕ: 14.11.2023 ಹಾಗೂ 15.11.2023 ರಂದು ವಿಶೇಷ ವಾಹನಗಳನ್ನು ಬಿಡಲಾಗುತ್ತೆ. ಮುಂಗಡ ಟಿಕೆಟ್ ಬುಕಿಂಗ್ ವ್ಯವಸ್ಥೆ ಕೂಡ…
ಹಿಂದಿನ ಕಾಲದಿಂದಲೂ ಭಾರತೀಯ ಅಡುಗೆಗಳಲ್ಲಿ ಅಷ್ಟೇ ಏಕೆ ಇಡೀ ವಿಶ್ವದ ತುಂಬೆಲ್ಲಾ ಅಡುಗೆಗಳಲ್ಲಿ ಒಗ್ಗರಣೆಯ ಜೊತೆಗೆ ತನ್ನ ಸ್ನೇಹಿತ ಬೆಳ್ಳುಳ್ಳಿಯ ಜೊತೆಗೆ ರುಚಿಯ ಸಾಮ್ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಭಾರತದ ಏಕೈಕ ತರಕಾರಿ ಈ ಶುಂಠಿ. ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವ ಹಿರಿಯರು ಈಗಲೂ ಸಹ ತಲೆನೋವು ಬಂದರೆ ಶುಂಠಿ ಚಹಾ ಕೇಳುವುದು ರೂಢಿಯಲ್ಲಿದೆ. ಇದಕ್ಕೆ ಕಾರಣ ಶುಂಠಿಯಲ್ಲಿರುವ ಅದ್ಭುತ ಮತ್ತು ಚಮತ್ಕಾರಿ ಗುಣಲಕ್ಷಣಗಳು. ಮನುಷ್ಯ ಶುಂಠಿಯನ್ನು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದಾನೆ ಎಂದರೆ ಇಂದಿಗೂ ಸಹ ಬೆಳಗಿನ ಸಮಯದಲ್ಲಿ ಪತ್ರಿಕೆಗಳನ್ನು ತಿರುವಿ ಹಾಕುವ ಮೊದಲು ಶುಂಠಿ ಚಹಾ ಕುಡಿದರೆ ಮಾತ್ರ ಅಂದಿನ ಎಲ್ಲಾ ಕೆಲಸಗಳು ಸರಾಗವಾಗಿ ನಡೆಯುತ್ತವೆ ಎಂಬ ನಂಬಿಕೆ ಹೊಂದಿರುವಷ್ಟು.ಅಂತಹವರಿಗೆ ಈಗಲೂ ಶುಂಠಿ ಚಹಾ ಕೂಡಿಯೇ ಹೋದರೆ ಏನನ್ನೂ ಕಳೆದುಕೊಂಡ ಭಾವನೆ. ಶುಂಠಿ ಟೀ ತನ್ನ ಘಮಗುಡುವ ಪರಿಮಳದೊಂದಿಗೆ ಕುಡಿಯಲು ಸಹ ನಾಲಿಗೆಗೆ ರುಚಿ ಕೊಡುತ್ತದೆ. ಇನ್ನು ಆರೋಗ್ಯದ ವಿಷಯಕ್ಕೆ ಸಂಬಂಧ ಪಟ್ಟರಂತೂ, ಇದರಲ್ಲಿ ಬಹಳಷ್ಟು ಖನಿಜಾಂಶಗಳು ಸೇರಿರುವುದರಿಂದ ಬೆಳಗಿನ…
ರಕ್ಷಿತ್ ಶೆಟ್ಟಿ (Rakshit Shetty) ನಟಿಸಿ, ಹೇಮಂತ್ ರಾವ್ (Hemanth Rao) ನಿರ್ದೇಶನ ಮಾಡಿರುವ ‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradacheyallo) ಸೈಡ್ ಬಿ ಚಿತ್ರದ ಟ್ರೈಲರ್ (Trailer) ಇಂದು ರಿಲೀಸ್ ಆಗಿದೆ. ಕಥಾ ನಾಯಕ ಮನುವಿನ ಸಾಕಷ್ಟು ತಮುಲಗಳನ್ನು ಈ ಟ್ರೈಲರ್ ನಲ್ಲಿ ತೋರಿಸಲು ಪ್ರಯತ್ನಿಸಿದ್ದಾರೆ ನಿರ್ದೇಶಕರು. ‘ಜೈಲಿಂದ ನೀ ಬರೋದನ್ನೆ ಕಾಯ್ತಿದ್ದೀನಿ.. ಮತ್ತೆ ಹಾಡೋಕೆ ಶುರು ಮಾಡ್ತೀನಿ’.. ‘ಮತ್ತೆ ಸಿಗೋದು ಬೇಡ ಆಯ್ತಾ’ ಎಂದು ನಾಯಕಿ ಹೇಳುವ ಮಾತುಗಳು ಸಿನಿಮಾದ ಕಥೆಯನ್ನು ಕುತೂಹಲದಿಂದ ನೋಡುವಂತೆ ಮಾಡುತ್ತವೆ. ಇಡೀ ಟ್ರೈಲರ್ ನಲ್ಲಿ ರಕ್ಷಿತ್ ಶೆಟ್ಟಿ ಆವರಿಸಿಕೊಂಡಿದ್ದಾರೆ. ರುಕ್ಮಿಣಿ, ಚೈತ್ರಾ ಆಚಾರ್ಯ, ಗೋಪಾಲ ಕೃಷ್ಣ ದೇಶಪಾಂಡೆ, ಅಚ್ಯುತ್ ಕುಮಾರ್ ಆಗಾಗ್ಗೆ ಝಲಕ್ ನಲ್ಲಿ ಬಂದು ಹೊಸ ರೀತಿಯ ಕೌತುಕಕ್ಕೆ ಕಾರಣವಾಗುತ್ತಾರೆ. ಟ್ರೈಲರ್ ಕಾನ್ಸೆಪ್ಟ್ ಸಖತ್ತಾಗಿದೆ. ಮನು ಏನಾಗುತ್ತಾನೆ ಎನ್ನುವ ಕ್ಯೂರಿಯಾಸಿಟಿ ಮೂಡಿಸುತ್ತದೆ. ರಕ್ಷಿತ್ ಅಭಿಮಾನಿಗಳಿಗಂತೂ ಟ್ರೈಲರ್ ಸಖತ್ ಹಿಡಿಸಲಿದೆ. ನವೆಂಬರ್ 17ಕ್ಕೆ ರಿಲೀಸ್ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತೆಲುಗಿನಲ್ಲೂ ಭರ್ಜರಿ…
ಬೆಂಗಳೂರು ಕೋಲಾರ, ಕೊಡಗು, ಹಾಸನ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು & ನಾಳೆ ಭಾರೀ ಮಳೆ ನಿರೀಕ್ಷಲಾಗಿದೆ ಎಂದು ಭಾರತೀಯ ಹವಮಾನ ಇಲಾಖೆಗೆ ಮಾಹಿತಿ ಮಾಹಿತಿ ನೀಡಿದೆ. ಸೋಮವಾರ ಹಾಗೂ ಮಂಗಳವಾರ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಇಂದು ಸೋಮವಾರ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಕೋಲಾರ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಯಲ್ಲೋ ಅಲರ್ಟ್ ಕೂಡ ಘೋಷಿಸಲಾಗಿದೆ. ಭಾನುವಾರ ಕೂಡ ಕರ್ನಾಟಕದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ. ಗುಡುಗು, ಮಿಂಚು ಸಹಿತ ಮಳೆಯೂ ಕೆಲವು ಕಡೆ ಆಗಿದೆ ಭಾನುವಾರ ಕೂಡ ಕರ್ನಾಟಕದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ. ಗುಡುಗು, ಮಿಂಚು ಸಹಿತ ಮಳೆಯೂ ಕೆಲವು ಕಡೆ ಆಗಿದೆ.
ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಬೆಳ್ಳುಳ್ಳಿ ಸಾಕಷ್ಟು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ. ಆದರೆ ನಿಮಗೆ ಗೊತ್ತಾ ಕೆಲವರು ಬೆಳ್ಳುಳ್ಳಿ ತಿನ್ನುವಾಗ ಯೋಚಿಸಿ ತಿನ್ನಬೇಕು. ಇಲ್ಲವಾದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ತುರಿಕೆ, ಹುಣ್ಣು, ಮೊಡವೆ, ದದ್ದು, ಕೆಂಪು ದದ್ದು ಮುಂತಾದ ಚರ್ಮ ಸಂಬಂಧಿ ಸಮಸ್ಯೆಗಳಿರುವವರು ಬೆಳ್ಳುಳ್ಳಿಯನ್ನು ಎಚ್ಚರಿಕೆಯಿಂದ ಸೇವಿಸಬೇಕು. ಏಕೆಂದರೆ ಅಂತಹವರಿಗೆ ಬೆಳ್ಳುಳ್ಳಿ ಅಲರ್ಜಿಯಾಗಿರಬಹುದು. ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಬೆಳ್ಳುಳ್ಳಿ ತಿನ್ನಬಾರದು ಎಂದು ವೈದ್ಯರು ಸೂಚಿಸುತ್ತಾರೆ. ಯಾಕೆಂದರೆ ಅಂತಹವರು ಬೆಳ್ಳುಳ್ಳಿ ಸೇವಿಸಿದರೆ ಎದೆಯುರಿ, ವಾಕರಿಕೆಯಂತ ಸಮಸ್ಯೆಗಳು ಉಂಟಾಗುತ್ತದೆ. ಅತಿಸಾರದ ಸಮಸ್ಯೆ ಇದ್ದರೂ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದನ್ನು ತಪ್ಪಿಸಬೇಕು. ಕೆಲವರ ಜೀರ್ಣಾಂಗ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ, ಇದರಿಂದಾಗಿ ಅವರು ಲೂಸ್‌ಮೋಷನ್‌ನಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಗರ್ಭಾವಸ್ಥೆಯಲ್ಲಿಯೂ ಸಹ, ಮಹಿಳೆಯರು ವೈದ್ಯರ ಸಲಹೆ ಮೇರೆಗೆ ಬೆಳ್ಳುಳ್ಳಿ ಸೇವಿಸಬೇಕು. ಬೆಳ್ಳುಳ್ಳಿಯ ಪರಿಣಾಮವು ಬಿಸಿಯಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ಶಾಖ ಹೆಚ್ಚಾಗುತ್ತದೆ ಮತ್ತು ಮಹಿಳೆಯರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಬೆಂಗಳೂರು;- ಇಂದು ಚಿನ್ನದ ಬೆಲೆ ಸ್ಥಿರವಾಗಿದ್ದು, ಬೆಳ್ಳಿ ದರ ತುಸು ಏರಿಕೆ ಕಂಡಿದೆ. ನಿನ್ನೆಯ ದರವೇ ಇಂದು ಕೂಡ ಮುಂದುವರಿದಿದೆ. ಕಳೆದ ವಾರ ಕೆಜಿಯ ಮೇಲೆ 1000 ರೂ ಇಳಿಕೆಯಾಗಿದ್ದ ಚಿನ್ನದ ದರ ಈ ವಾರ ತುಸು ಏರಿಕೆಯಾಗಿದೆ. ದೀಪಾವಳಿ ಹಬ್ಬದ ಸಮಯದಲ್ಲಿ ಚಿನ್ನ, ಬೆಳ್ಳಿ ಖರೀದಿ ಮಾಡುವ ಗ್ರಾಹಕರಿಗೆ ಚಿನ್ನದ ಬೆಲೆ ಖುಷಿ ನೀಡಿದರೆ, ಬೆಳ್ಳಿ ಬೆಲೆ ಬೇಸರ ತರಿಸುವಂತಿದೆ. ಇಂದು ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಎಷ್ಟಿದೆ ಎಂಬುದನ್ನು ತಿಳಿಯೋಣ. 22 ಕ್ಯಾರೆಟ್ ಚಿನ್ನದ ದರ ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ ದರ ಇಂದು 5,650 ರೂ. ಆಗಿದೆ. 8 ಗ್ರಾಂ ಚಿನ್ನದ ಬೆಲೆ 45,200 ರೂ ಇದೆ. ಇಂದು 10 ಗ್ರಾಂ ಚಿನ್ನದ ದರ 56,500 ರೂ. ಇದೆ. ನೂರು ಗ್ರಾಂ ಚಿನ್ನಕ್ಕೆ 5,65,000 ರೂ. ಇದೆ. 24 ಕ್ಯಾರೆಟ್ ಚಿನ್ನದ ದರ ಇಂದು ಒಂದು ಗ್ರಾಂ 24 ಕ್ಯಾರೆಟ್…
ಪಶುಸಂಗೋಪನೆ ಅಥವಾ ಹೈನುಗಾರಿಕೆ ಮಾಡುವಂತಹ ರೈತರಿಗೆ ಗೊತ್ತಿರಲೇಬೇಕಾದ ಕೆಲವು ಪ್ರಮುಖ ಯೋಜನೆಗಳ ಕುರಿತು ಇಲ್ಲಿದೆ ಮಾಹಿತಿ. ಇವುಗಳ ಸದುಪಯೋಗ ನೀವು ಪಡೆದುಕೊಂಡಿದ್ದೀರಾ? 1. ರಾಷ್ಟ್ರೀಯ ಗೋಕುಲ ಮಿಷನ್ (RASHTRIYA GOKUL MISSION) : ರಾಷ್ಟ್ರೀಯ ಗೋಕುಲ್ ಮಿಷನ್ (RGM) ಅನ್ನು ಡಿಸೆಂಬರ್ 2014 ರಿಂದ ಸ್ಥಳೀಯ ಗೋವಿನ ತಳಿಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗಾಗಿ ಜಾರಿಗೆ ತರಲಾಗುತ್ತಿದೆ. ಹಾಲಿನ ಉತ್ಪಾದನೆ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ಹಾಲಿನ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ಹೈನುಗಾರಿಕೆಯನ್ನು ಗ್ರಾಮೀಣ ರೈತರಿಗೆ ಹೆಚ್ಚು ಲಾಭದಾಯಕವಾಗಿಸಲು ಈ ಯೋಜನೆ ಮುಖ್ಯವಾಗಿದೆ. 2. ಡೈರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ: (NATIONAL PROGRAMME FOR DAIRY DEVELOPMENT) : ಗುಣಮಟ್ಟದ ಹಾಲು ಉತ್ಪಾದನೆ, ಸಂಗ್ರಹಣೆ, ಸಂಸ್ಕರಣೆ ಮತ್ತು ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆಗೆ ಮೂಲಸೌಕರ್ಯಗಳನ್ನು ಸೃಷ್ಟಿಸುವ/ಬಲಪಡಿಸುವ ಉದ್ದೇಶದಿಂದ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯು ಫೆಬ್ರವರಿ 2014 ರಿಂದ ದೇಶಾದ್ಯಂತ “ಡೈರಿ ಅಭಿವೃದ್ಧಿಗಾಗಿ ರಾಷ್ಟ್ರೀಯ ಕಾರ್ಯಕ್ರಮ” (NPDD) ಜಾರಿಗೊಳಿಸುತ್ತಿದೆ. ರಾಜ್ಯ ಅನುಷ್ಠಾನ ಸಂಸ್ಥೆ (SIA) ಮೂಲಕ ಈಗ,…
ಕಲಬುರಗಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಬ್ಯಾಲೆನ್ಸ್ ತಪ್ಪಿದೆ. ಹೀಗಾಗಲೇ ಅವರಲ್ಲೇ ಒಳಜಗಳ ಶುರುವಾಗಿವೆ. ಕಾಂಗ್ರೆಸ್ ನಾಯಕರಿಗೆ ರೈತರ ಏಳಿಗೆ, ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ಕೃಷಿ ಸಚಿವ ಬಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ ಸಿ ಪಾಟೀಲ್, ಸಿದ್ದರಾಮಯ್ಯ ಮೊದಲು ಐದು ವರ್ಷ ಸಿಎಂ ನಾನೆ ಅಂತಾರೆ, ಆಮೇಲೆ ಮಾಧ್ಯಮಗಳನ್ನು ದೂಷಿಸುತ್ತಿದ್ದಾರೆ. ಯಾಕೆ ಇಷ್ಟೊಂದು ಸುಳ್ಳು ಹೇಳುತ್ತಿದ್ದಾರೋ ಗೊತ್ತಿಲ್ಲ. ಇಂದು ಹೇಳಿಕೆ ಕೊಟ್ಟು ನಾಳೆ ವಾಪಸ್ ಪಡೆಯುತ್ತಿದ್ದಾರೆ. ಮಾರನೆ ದಿನ ಎಲ್ಲರೂ ಬಾಯಿ ಬಾಯಿ ಅಂತಾರೆ. ಅವರಲ್ಲೆ ಗೊಂದಲಗಳಿವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ಕುರಿತು ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ನಲ್ಲಿ ಸಿಎಂ ಬದಲಾವಣೆ ಬಗ್ಗೆ ನಡೆಯುತ್ತಿರುವ ಮುಖಂಡರ ನಾನಾ ಹೇಳಿಕೆಗಳು ಹಾಗೂ ಸಿಎಂ ಸಿದ್ದರಾಮಯ್ಯ ಅವರು, ಮುಂದಿನ 5 ವರ್ಷ ನಾನೇ ಸಿಎಂ ಎಂದು ಹೇಳಿದ ಹೇಳಿಕೆಯನ್ನು ಬಿಸಿ ಪಾಟೀಲ್ ವ್ಯಂಗ್ಯ ಮಾಡಿದರು. https://ainlivenews.com/suprem-ray-healing-center-reiki/#google_vignette ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಾಲ್ಕು ಸಾವಿರಕ್ಕೂ…
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಛಾಪೂ ಮೂಡಿಸಿರುವ ಸಿಂಪಲ್ ಸುನಿ ಹಾಗೂ ದೊಡ್ಮನೆ ಕುಡಿ ವಿನಯ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಬರ್ತಿರುವ ಬಹುನಿರೀಕ್ಷಿತ ಸಿನಿಮಾ ಒಂದು ಸರಳ ಪ್ರೇಮ ಕಥೆ. ಪೋಸ್ಟರ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಶೂಟಿಂಗ್ (Shooting) ಕಂಪ್ಲೀಟ್ ಆಗಿದೆ. ಮೈಸೂರಿನಲ್ಲಿ ಕೊನೆಯ ಹಂತದ ಚಿತ್ರೀಕರಣ ಮುಗಿಸಿ ಚಿತ್ರತಂಡ ಕುಂಬಳಕಾಯಿ ಹೊಡೆದಿದೆ. ವಿಶೇಷ ಅಂದರೆ ವಿನಯ್ ಸಿನಿಮಾದಲ್ಲಿ ಅಪ್ಪ ರಾಘಣ್ಣ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರೀಕರಣ ಮುಗಿಸಿ ಮಾಧ್ಯಮದವರೊಂದಿಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನಿರ್ದೇಶಕ ಸುನಿ (Simple Suni) ಮಾತನಾಡಿ, ಟೈಟಲ್ ಹೇಳುವಂತೆ ಇದೊಂದು ಸರಳ ಪ್ರೇಮಕಥೆ. ಸಂಗೀತ ನಿರ್ದೇಶಕನ ಪ್ರೇಮಕಥೆಯಾಗಿರುವುದರಿಂದ ಸಂಗೀತಮಯ ಜರ್ನಿ. ಅಂದರೆ ನಮ್ಮ ಆಲ್ಬಂ ತೆಗೆದುಕೊಂಡು ಹಾಕಿಕೊಂಡರೆ ಮೈಸೂರಿನಿಂದ ಬೆಂಗಳೂರು ತಲುಪುತ್ತೀರಾ. ಒಟ್ಟು ಸಿನಿಮಾದಲ್ಲಿ 11 ಸಾಂಗ್ ಗಳು ಇವೆ. ಎಲ್ಲಾ ಪ್ರಕಾರದ ಸಂಗೀತಗಳು ಹಾಡಿನಲ್ಲಿದೆ. ಖುಷಿ ವಿಷಯ ಏನಂದರೆ ಮೊದಲ ದಿನ ವಿನಯ್ ಸರ್ ಚಿತ್ರೀಕರಣ ಮಾಡಿದೆ. ಕೊನೆಯ…