ಮೈಸೂರು: ನಾನೂ ಸಹ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಆಗ ಅಧಿಕಾರಿಗಳು ಸಹಕಾರದಿಂದ ಯಶಸ್ವಿ ದಸರಾ ಮಾಡಿದ್ದೇವೆ. ಅದೇ ರೀತಿ ಈ ಬಾರಿಯ ದಸರಾ ಯಶಸ್ವಿಗೆ ಶ್ರಮಿಸಿದ ಎಲ್ಲಾ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಅರ್ಪಿಸುತ್ತೇನೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಿಳಿಸಿದರು. ಇಂದು ನಗರದ ಜೆ ಪಿ ಪ್ಯಾಲೇಸ್ ನಲ್ಲಿ ಆಯೋಜಿಸಿದ್ದ ಭೋಜನ ಕೂಟದಲ್ಲಿ ಅವರು ಮಾತನಾಡಿದರು . ಎಲ್ಲಾ ಸಚಿವರು, ಶಾಸಕರು, ಮಾಜಿ ಶಾಸಕರು, ಎಲ್ಲಾ ಅಧಿಕಾರಿಗಳು ಸಹಕಾರದಿಂದ ದಸರಾ ಯಶಸ್ಸು ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ ಹೆಚ್.ಸಿ.ಮಹದೇವಪ್ಪ ಅವರ ಮಾರ್ಗದರ್ಶನದಂತೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಿರುವುದರಿಂದ ಮೈಸೂರು ದಸರಾ ಯಶಸ್ಸು ಆಗಿದೆ ಎಂದರು. ಅಧಿಕಾರಿಗಳು ಅರ್ಪಣೆ ಮನೋಭಾವನೆಯಿಂದ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಹಾಗೂ ಟೀಕೆ ಟಿಪ್ಪಣಿ ಗಳು ಬಂದಿರುವುದಿಲ್ಲ. ಕಾರಣ ದಸರಾ ಅಚ್ಚುಕಟ್ಟಾಗಿ ನಡೆದಿದೆ. ಈ ಸಂಬಂಧ ಅಧಿಕಾರಿಗಳಿಗೆ ಅಭಿನಂದನೆಗಳು ಹೇಳುತ್ತೇನೆ ಎಂದರು. ಮೈಸೂರು ಪ್ರಾಂತ್ಯದ ಕಲೆ ಸಾಹಿತ್ಯ…
Author: AIN Author
ನವದೆಹಲಿ: ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ವಿಶ್ವಕಪ್ 2023 ಟೂರ್ನಿಯ (World Cup 2023) ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತ (India vs South Africa) ಅಮೋಘ ಜಯ ದಾಖಲಿಸಿದೆ. ಭಾರತ ಕ್ರಿಕೆಟ್ ತಂಡದ ಗೆಲುವಿಗೆ ಪ್ರಧಾನಿ ಮೋದಿ (Narendra Modi) ಟ್ವೀಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. https://ainlivenews.com/suprem-ray-healing-center-reiki/ ಭಾರತದ ಗೆಲುವಿಗೆ ಸಂತಸ ವ್ಯಕ್ತಪಡಿಸಿರುವ ಮೋದಿ, ನಮ್ಮ ಕ್ರಿಕೆಟ್ ತಂಡ ಮತ್ತೊಮ್ಮೆ ವಿಜಯಶಾಲಿಯಾಗಿದೆ! ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಪ್ರದರ್ಶನ ನೀಡಿದ ತಂಡಕ್ಕೆ ಅಭಿನಂದನೆಗಳು. ಉತ್ತಮ ತಂಡದ ಕೆಲಸ. ಇಂದು ಸುಂದರವಾದ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿಗೆ (Virat Kohli) ತಂಡವು ಹುಟ್ಟುಹಬ್ಬದ ಉಡುಗೊರೆಯನ್ನು ನೀಡಿದೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಿಪ್ಪನ್‌ಪೇಟೆ : ತಡರಾತ್ರಿ ಎಡೆಬಿಡದೆ ಸುರಿದ ಧಾರಾಕಾರ ಮಳೆಗೆ ಮನೆಯೊಂದರ ಮೇಲೆ ಬೃಹತ್ ಆಕಾರದ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡು ದಂಪತಿಗಳು ಕೂದಲೆಳೆ ಅಂತರದಲ್ಲಿ ಪಾರಾಗಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದ ಘಟನೆ ಕೋಡೂರು ಗ್ರಾಪಂ ವ್ಯಾಪ್ತಿಯ ಹೆಚ್. ಕುನ್ನೂರು ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ 8:00 ಗಂಟೆಯಿಂದ ಸುರಿದ ಬಿರುಗಾಳಿ ಸಹಿತ ಗುಡುಗು ಸಿಡಿಲಬ್ಬರದ ಧಾರಾಕಾರ ಮಳೆಗೆ ಹೆಚ್. ಕುನ್ನೂರು ಗ್ರಾಮದ ತಿಮ್ಮಪ್ಪ ಎಂಬುವವರ ಮನೆ ಮೇಲೆ ರಾತ್ರಿ 11 ರ ಸುಮಾರಿಗೆ ಮನೆ ಪಕ್ಕದಲ್ಲಿದ್ದ ಬೃಹತ್ ಆಕಾರದ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದ್ದು ಈ ಘಟನೆಯಲ್ಲಿ ಆಶಾ ಕಾರ್ಯಕರ್ತೆ ವಿನೂತ, ತಿಮ್ಮಪ್ಪ ದಂಪತಿಗಳು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ಮನೆಯಲ್ಲಿದ್ದ ಟಿವಿ ಸೇರಿದಂತೆ ದವಸ, ಧಾನ್ಯಗಳು, ಆಹಾರ ಪದಾರ್ಥಗಳು ಸೇರಿದಂತೆ ಇನ್ನಿತರ ವಸ್ತುಗಳು ನೀರುಪಾಲಾಗಿದ್ದು ಮನೆಗೆ ಹಾಕಿದ್ದ ಶೀಟ್, ಹೆಂಚುಗಳು ಸೇರಿದಂತೆ ಭಾಗಶಃ ಮನೆ ಜಖಂಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಕೋಡೂರು ಗ್ರಾಪಂ ಅಧ್ಯಕ್ಷ ಉಮೇಶ್,…
ಮಂಗಳೂರು: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ತಂದೆ ವಿಧಿವಶರಾಗಿದ್ದಾರೆ. ಪೂರ್ವಾಶ್ರಮದ ತಂದೆ ಅಂಗಡಿಮಾರು ಕೃಷ್ಣಭಟ್ಟ ಇಂದು ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಬಳಿಯ ಪಕ್ಷಿಕೆರೆಯಲ್ಲಿ ನಿಧನ ಹೊಂದಿದ್ದಾರೆ. https://ainlivenews.com/suprem-ray-healing-center-reiki/ ಇವರಿಗೆ 103 ವರ್ಷ ವಯಸ್ಸಾಗಿತ್ತು. ಹಿರಿಯ ವಿದ್ವಾಂಸ, ತುಳು ಲಿಪಿ ತುಳು ಸೌರ ಪಂಚಾಂಗ ಕರ್ತೃ. ಇವರು ಐವರು ಪುತ್ರರು, ಆರು ಪುತ್ರಿಯರು ಬಂಧುವರ್ಗವನ್ನು ಅಗಲಿದ್ದಾರೆ.
ಬೆಂಗಳೂರಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೊಲೆ ಕೇಸ್ಗೆ ಸಂಬಂಧಿಸಿ ಪ್ರತಿಮಾ ಕೊಲೆ ಕೇಸ್ನಲ್ಲಿ ಓರ್ವ ಆರೋಪಿ ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ. ಡಿಸಿಪಿ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಸಲಾಗ್ತಿದೆ. ನಾಲ್ಕು ವರ್ಷದಿಂದ ಪ್ರತಿಮಾ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದ. 10 ದಿನದ ಹಿಂದೆ ಕಿರಣ್ನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಆರೋಪಿ ಕಿರಣ್ನನ್ನ ಮಹದೇಶ್ವರಬೆಟ್ಟದಲ್ಲಿ ವಶಕ್ಕೆ ಪಡೆಯಲಾಗಿದೆ. ಸದ್ಯಕ್ಕೆ ಪ್ರಕರಣದ ತನಿಖೆ ಮುಂದುವರಿದಿದೆ ಎಂದರು. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ತುಡ್ಕಿ ಮೂಲದ ಪ್ರತಿಮಾಗೆ 18 ವರ್ಷಗಳ ಹಿಂದೆ ವಿವಾಹವಾಗಿತ್ತು. ನಂತರ ಭೂ ವಿಜ್ಞಾನ ಇಲಾಖೆಯಲ್ಲಿ ನೌಕರಿ ದೊರೆತಿದ್ದರಿಂದ ಪ್ರತಿಮಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.ಗಂಡ ಮತ್ತು ಮಗ ತೀರ್ಥಹಳ್ಳಿಯಲ್ಲಿ ವಾಸವಿದ್ದರು. ಹಲವು ವರ್ಷ ರಾಮನಗರ ಜಿಲ್ಲೆಯಲ್ಲಿ ಕೆಲಸ ಮಾಡಿದ್ದ ಪ್ರತಿಮಾ ನಂತರ ರೆಡು ವರ್ಷಗಳ ಹಿಂದೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು. ಎಂದಿನಂತೆ ಕಚೇರಿ ಕೆಲಸ ಮುಗಿದ ಮೇಲೆ ಶನಿವಾರ ರಾತ್ರಿ 8 ಗಂಟೆಗೆ ಕಚೇರಿಯಿಂದ ಕಾರು ಚಾಲಕ…
ಬೆಂಗಳೂರು: ಪ್ರತಿಪಕ್ಷಗಳ ಕೆಲಸ ಗುರುತಿಸುವ ನಿಮ್ಮ ʼಹೃದಯ ವೈಶಾಲ್ಯತೆʼಗೆ ನಾನು ಆಭಾರಿ. #ರೈತ_ಸಾಂತ್ವನ_ಯಾತ್ರೆ ಯನ್ನು ಸ್ವಾಗತ ಮಾಡಿರುವ ನಿಮ್ಮ ʼದೊಡ್ಡʼ ಗುಣವನ್ನು ಮನಸಾರೆ ಕೊಂಡಾಡುತ್ತೇನೆ .ಬರ ಅಧ್ಯಯನ ವರದಿಯನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದ್ದೀರಿ, ಬಹಳ ಸಂತೋಷ. * ‘ರೈತ ಸಾಂತ್ವನ ಯಾತ್ರೆ’ಯ ಅನುಭವವನ್ನು ಕೇಂದ್ರದ ಜತೆಗೂ ಹಂಚಿಕೊಳ್ಳುತ್ತೇವೆ. ನಿಮಗೆ ಸಂಶಯ ಬೇಡ. ರಾಜ್ಯದ ಅಗತ್ಯಗಳಿಗೆ ಕೇಂದ್ರ ಸರಕಾರ ಹೇಗೆ ಸ್ಪಂದಿಸುತ್ತಿದೆ? ಅದಕ್ಕೆ ನಿಮ್ಮ ನೇತೃತ್ವದ ಸರಕಾರ ಎಷ್ಟು ʼಗಂಭೀರ(!?)ʼ ಪ್ರಯತ್ನ ಮಾಡಿದೆ, ಮಾಡುತ್ತಿದೆ ಎನ್ನುವುದು ನನಗೂ ತಿಳಿದಿದೆ. ಬರದ ಜತೆಗೆ, ವಿದ್ಯುತ್ ಬಿಕ್ಕಟ್ಟು, ಕಾವೇರಿ ಸಂಕಷ್ಟದ ವಿಷಯದಲ್ಲಿ ನಿಮ್ಮ ಸರಕಾರದ ʼಅಪರಿಮಿತ ಅಸಡ್ಡೆʼಯನ್ನು ಅರಿಯದಷ್ಟು ಮುಗ್ಧನೇ ನಾನು? * ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರ ಜತೆ ಶ್ರೀ ಹೆಚ್.ಡಿ.ದೇವೇಗೌಡರು ಮತ್ತವರ ಕುಟುಂಬಕ್ಕೆ ಆತ್ಮೀಯತೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ಬಿಜೆಪಿ-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದೆ ಎನ್ನುವುದೂ ನಿಜ. ರಾಜ್ಯದ ಹಿತಕ್ಕಾಗಿ ನಾವು ಪ್ರಧಾನಿಯವರ ಮುಂದೆಯೂ ದನಿ ಎತ್ತುತ್ತೇವೆ, ಅದು ನಮ್ಮ…
ಬೆಳಗಾವಿ: ಖಡೇ ಬಜಾರ್ ವಿರೂಪಾಕ್ಷ ಬಟ್ಟೆ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬಂದ ಖದೀಮರು ಲಕ್ಷಾಂತರ ರೂ. ಮೌಲ್ಯದ ಸೀರೆಕಳ್ಳತನ ಮಾಡಿ ಎಸ್ಕೇಪ್ ಆಗಿರುವ ಘಟನೆ ನೀಡಿದಿದೆ. 2 ಲಕ್ಷ ಮೌಲದ್ಯ 8 ಕಾಂಚೀಪುರಂ ಸೀರೆ, 1 ಇಳಕಲ್ ಹಾಗೂ ರೇಷ್ಮೆ ಸೀರೆಗಳನ್ನು ಕಳ್ಳರು ಕದ್ದು ಎಸ್ಕೇಪ್ ಆಗಿದ್ದಾರೆ. ಈ ಗ್ಯಾಂಗ್ನಲ್ಲಿ 6 ಜನ ಮಹಿಳೆಯರು ಹಾಗೂ ಓರ್ವ ಪುರುಷ ಇದ್ದಾನೆ. ಸೀರೆ ಕಳ್ಳತನ ಮಾಡೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. https://ainlivenews.com/suprem-ray-healing-center-reiki/ ಒಬ್ಬರಿಗೆ ಒಬ್ಬರು ಪರಿಚಯ ಇಲ್ಲದೇ ಇರುವ ರೀತಿಯಲ್ಲಿ ಅಂಗಡಿಗೆ ಎಂಟ್ರಿ ಕೊಟ್ಟ ಕಿಲಾಡಿಗಳು ಲಕ್ಷಾಂತರ ರೂ. ಮೌಲ್ಯದ ಸೀರೆ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಈ ಮಹಿಳೆಯರು ತೆಲುಗು ಹಾಗೂ ತಮಿಳಿನಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ. ಸದ್ಯ ಈ ಪ್ರಕರಣವು ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬೆಂಗಳೂರು: ನಿಮ್ದು ಬೆಂಗಳೂರಿನಲ್ಲಿ ಸೈಟ್ ಇದೀಯಾ.. ಅದನ್ನ ವರ್ಷಗಟ್ಟಲೆಯಿಂದ ಖಾಲಿ ಏನಾದ್ರೂ ಬಿಟ್ಟಿದ್ದೀರಾ.. ಹಾಗಾದ್ರೆ ಇನ್ಮೇಲೆ ನಿಮಗೆ ಬಿಬಿಎಂಪಿ ಶಾಕ್ ನೀಡೋಕೆ ಮುಂದಾಗಿದೆ. ಹೌದು ನಗರಕ್ಕೆ ಚಿರತೆಗಳು ಎಂಟ್ರಿ ಕೊಟ್ಟು ಸಖತ್ ಕಾಟ ಕೊಡ್ತಿರೋ ಕಾರಣ ಖಾಲಿ ಸೈಟ್ ಮಾಲೀಕರ ಮೇಲೆ ಕಣ್ಣು ಇಟ್ಟಿರೋ ಮಹಾನಗರ ಪಾಲಿಕೆ ಸೈಟ್ ನಲ್ಲಿ ಗಿಡಿಗಂಟಿ ಬೆಳೆಸಿದ್ರೆ ಅಂತವರ ವಿರುದ್ದ ಸಮರ ಸಾರೋಕೆ ಮುಂದಾಗಿದೆ. ಬೆಂಗಳೂರು ಸುತ್ತಮುತ್ತ ಕಾಡು ಇದ್ದ ಜಾಗದಲ್ಲಿ ಇವತ್ತು ದೊಡ್ಡ ದೊಡ್ಡ ಅಪಾರ್ಟಮೆಂಟ್,ಮನೆಗಳು ನಿರ್ಮಾಣಗೊಂಡಿವೆ.ಹೀಗಾಗಿ ಕಾಡಿನಲ್ಲಿದ್ದ ವನ್ಯಜೀವಿಗಳು ನಾಡಿನತ್ತ ಬರೋಕೆ ಶುರುವಾಗಿದೆ.ಕಳೆದ ಕೆಲ ತಿಂಗಳಿಂದ ಬೆಂಗಳೂರು ನಗರಕ್ಕೆ ಚಿರತೆ ಎಂಟ್ರಿಯಾಗಿ ನಗರದ ಗಿಡಗಂಟಿ ಪೋದೆಗಳಲ್ಲಿ ಅವಿತುಕೊಳ್ತಿವೆ. ಇದು ಬಿಬಿಎಂಪಿ ಹಾಗೂ ಅರಣ್ಯ ಇಲಾಖೆಗೆ ಇನ್ನಿಲ್ಲದ ತಲೆನೋವು ತಂದಿದೆ. ಚಿರತೆಗಳು ಅವಿತುಕೊಳ್ಳುವದಕ್ಕೆ ನಗರದ ಸೈಟ್ ಮಾಲೀಕರ ನಿರ್ಲಕ್ಷ್ಯವೇ ಅನ್ನೋದು ಪಾಲಿಕೆಗೆ ಅರಿವಾಗಿ ಇದೀಗ ಖಾಲಿ ಸೈಟ್ ಬಿಟ್ಟ ಸೈಟ್ ಮಾಲೀಕರಿಗೆ ಗುನ್ನ ಇಡಲು ಪಾಲಿಕೆ ಚಿಂತಿಸಿದೆ. ಹೌದು.. ಬೆಂಗಳೂರಿಗರಿಗೆ ಚಿರತೆ ಕೊಡ್ತಿರೋ ಕಾಟ…
ಜೈಪುರ: ನಿಯಂತ್ರಣ ತಪ್ಪಿದ ಬಸ್‌ವೊಂದು ರೈಲು ಹಳಿಯ (Railway Track) ಮೇಲೆ ಬಿದ್ದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ರಾಜಸ್ಥಾನದ ದೌಸಾ (Rajasthan Dausa) ಜಿಲ್ಲೆಯಲ್ಲಿ ನಡೆದಿದೆ. ಮಧ್ಯರಾತ್ರಿ 2:15ಕ್ಕೆ ಮೇಲ್ಸೇತುವೆಯಿಂದ ದೌಸಾದ ರೈಲ್ವೆ ಹಳಿ ಮೇಲೆ ಬಸ್ ಬಿದ್ದು, ದುರಂತ ಸಂಭವಿಸಿದೆ. 30ಕ್ಕೂ ಹೆಚ್ಚು ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಹರಿದ್ವಾರದಿಂದ (Haridwar) ಉದಯಪುರಕ್ಕೆ ತೆರಳುತ್ತಿತ್ತು. https://ainlivenews.com/suprem-ray-healing-center-reiki/ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, 28 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಹೆಚ್ಚುವರಿ ತನಿಖೆ ನಡೆಸಲಾಗುತ್ತಿದೆ ಎಂದು ದೌಸಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜ್‌ಕುಮಾರ್ ಕಸ್ವಾ ತಿಳಿಸಿದ್ದಾರೆ. ಸಂಬಂಧಪಟ್ಟ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: 49 ಶತಕಗಳ ಮೂಲಕ ಸಚಿನ್ (Sachin) ದಾಖಲೆ ಸರಿಗಟ್ಟಿರುವ ಕೊಹ್ಲಿ (Virat Kohli) ತಮ್ಮ 35ನೇ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸಿಕೊಂಡರು. 49 ಶತಕ ಬಾರಿಸಿದ್ದೇನೋ ಸರಿ, ಆದು ಯಾವ ತಂಡದ ವಿರುದ್ಧ ಎಂದು ಗೊತ್ತಾಗಬೇಕಲ್ಲ. ಅದಕ್ಕೆ ಈ ಎಲ್ಲ ಅಂಕಿ ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ಶತಕ ಬಾರಿಸುವುದೆಂದರೆ ಸಚಿನ್ ಹಾಗೂ ಕೊಹ್ಲಿಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ಎಂದರೆ ಅಚ್ಚುಮೆಚ್ಚು. ಸಚಿನ್ ಆಸ್ಟ್ರೇಲಿಯಾ ವಿರುದ್ಧ 9 ಶತಕ ದಾಖಲಿಸಿದ್ದರೆ, ಕೊಹ್ಲಿ 8 ಶತಕ ದಾಖಲಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಇಬ್ಬರೂ ತಲಾ 5 ಶತಕ ದಾಖಲಿಸಿದ್ದಾರೆ. ಆ `49 ಶತಕ’ಗಳು ಯಾರ ವಿರುದ್ಧ..? ಆಸ್ಟ್ರೇಲಿಯಾ ವಿರುದ್ಧ ಸಚಿನ್ 9, ಕೊಹ್ಲಿ 8 ಶತಕ ಬಾಂಗ್ಲಾದೇಶದ ವಿರುದ್ಧ ಸಚಿನ್ 1, ವಿರಾಟ್ ಕೊಹ್ಲಿ 5 ಶತಕ ಇಂಗ್ಲೆಂಡ್ ವಿರುದ್ಧ ಸಚಿನ್ 2, ವಿರಾಟ್ 3 ಶತಕ ನ್ಯೂಜಿಲೆಂಡ್ ವಿರುದ್ಧ ಸಚಿನ್ ಹಾಗೂ ವಿರಾಟ್ ತಲಾ 5 ಶತಕ ಪಾಕಿಸ್ತಾನ ವಿರುದ್ಧ ಸಚಿನ್ 5…