ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ರಕ್ಷಕ್ ಬುಲೆಟ್ ಬಿಗ್’ ಮನೆಯೊಳಗಿನ ಅನುಭವ, ಸ್ಪರ್ಧಿಗಳ ಕುರಿತಾದ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದು, ಮುಂದಿನ ವಾರ ತಮ್ಮ ಜಾಗದಲ್ಲಿ ಯಾವ ಸ್ಪರ್ಧಿ ಇರಬಹುದು ಎಂಬುದನ್ನು ಇದೀಗ ಬಹಿರಂಗವಾಗಿ ತಿಳಿಸಿದ್ದಾರೆ. ಮೊದಲು ಟಾಸ್ಕ್ ಬಗ್ಗೆ ಮಾತನಾಡಿದ ರಕ್ಷಕ್, ‘ಫನ್ ಫ್ರೈಡೆಯಲ್ಲಿನ ಮ್ಯೂಸಿಕಲ್ ಪಾಟ್ ಟಾಸ್ಕ್ ಸಖತ್ ಮಜಾ ಕೊಟ್ಟಿತ್ತು. ಫನ್ ಫ್ರೈಡೆ ಅಂದ್ರೇ ಮಜವಾಗಿರೋ ಚುಟುವಟಿಕೆ. ಅದನ್ನೂ ಕೆಲವರು ಸಿಕ್ಕಾಪಟ್ಟೆ ಗಂಭೀರವಾಗೇ ಆಡುತ್ತಾರೆ. ಫನ್ ಅನ್ನೋ ಶಬ್ದಕ್ಕೆ ಹಾಳುಮಾಡಬಾರದು. ಬೇರೆ ಟ್ರಿಗರ್ ಆಗುವ ಟಾಸ್ಕ್ ಇರುತ್ತದೆ. ಅದಕ್ಕೆ ಕುಪಿತವಾಗಲಿ. ಆದ್ರೆ ಮಜವಾಗಿ ಆಡುವ ಆಟವನ್ನು ಮಜವಾಗಿಯೇ ಆಡಿ. ಎಂಜಾಯ್ ಮಾಡಿಕೊಂಡು ಆಡಬೇಕು’ ಎಂದು ಹೇಳಿದರು. ಮನೆಯೊಳಗಿನ ಸ್ಪರ್ಧಿಗಳಲ್ಲಿ ಜೆನ್ಯೂನ್ ಅಂದ್ರೆ ನಮ್ರತಾ. ಸ್ಟ್ರಾಟಜಿ ಅಂತ ಬಂದ್ರೆ ವಿನಯ್. ಫೇಕ್ ಅಂತ ಹೇಳಕ್ಕಾಗಲ್ಲ. ಆದರೆ ಬೇಡದಿರೋ ವಿಷಯಕ್ಕೆ ನಾಟಕ ಮಾಡಿದ್ದಾರೆ ಭಾಗ್ಯಶ್ರೀ. ಅಳೋದು ಒಂದೇ ಅಲ್ಲ ಲೈಫ್‌ನಲ್ಲಿ. ಅದನ್ನು ಗಟ್ಟಿಯಾಗಿ ಎದುರಿಸಬೇಕು. ಸತ್ಯವನ್ನು ಮುಖಕ್ಕೆ ಹೊಡೆದ ಹಾಗೆ…
Author: AIN Author
ಬೆಂಗಳೂರು;- ರಾಜ್ಯದಲ್ಲಿ ಎರಡು ದಿನ ಭಾರಿ ಮಳೆ ಆಗಲಿದ್ದು, 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರದಲ್ಲಿ ಜೋರು ಮಳೆಯಾಗಲಿದೆ. ಹೀಗಾಗಿ, ಈ ಜಿಲ್ಲೆಗಳಿಗೆ ಯೆಲ್ಲೂ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ, ಬಾಗಲಕೋಟೆ, ಧಾರವಾಡ, ಬೆಳಗಾವಿ, ಗದಗ, ಕೊಪ್ಪಳ, ಹಾವೇರಿ ಹಾಗೂ ಇತರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ. ಎರಡೂ ದಿನ ಮೋಡ ಕವಿದ ವಾತಾವರಣ, ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಂದೂ ಬೌಲ್ ಆಡದೇ ಏಂಜೆಲೊ ಮ್ಯಾಥ್ಯೂಸ್ ಔಟ್ ಆಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ರೀತಿಯಾಗಿರುವುದು ಇದೇ ಮೊದಲು. ಅವರು ಒಂದೂ ಎಸೆತ ಎದುರಿಸದೇ ಔಟ್ ಆದ ಬ್ಯಾಟರ್ ಕೂಡ ಅವರಾದರು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ 36 ವರ್ಷದ ಮ್ಯಾಥ್ಯೂಸ್ ಅವರು ಸದೀರ ಸಮರವಿಕ್ರಮ ಅವರು ಔಟಾದ ನಂತರ ಬ್ಯಾಟಿಂಗ್ ಮಾಡಬೇಕಿತ್ತು. ಆರನೇ ಕ್ರಮಾಂಕದ ಬ್ಯಾಟರ್ ಮ್ಯಾಥ್ಯೂಸ್ ಪಿಚ್‌ನತ್ತ ಬಂದರು. ಆದರೆ ಇದೇ ಸಂದರ್ಭದಲ್ಲಿ ತಮ್ಮ ಹೆಲ್ಮೆಟ್‌ನ ಪಟ್ಟಿ ಹರಿದಿದ್ದನ್ನು ಗಮನಿಸಿದರು. ಇನ್ನೊಂದು ಹೆಲ್ಮೆಟ್ ತರುವಂತೆ ಡಗ್‌ಔಟ್‌ನತ್ತ ಸಹ ಆಟಗಾರನಿಗೆ ಸನ್ನೆ ಮಾಡಿದರು. ಆದರೆ ಈ ಸಂದರ್ಭದಲ್ಲಿ ವೇಳೆ ಮೀರಿದ್ದನ್ನು ಗಮನಿಸಿದ ಬಾಂಗ್ಲಾ ಆಟಗಾರರು ಟೈಮ್ ಔಟ್‌ಗಾಗಿ ಮನವಿ ಸಲ್ಲಿಸಿದರು. ಒಬ್ಬ ಬ್ಯಾಟರ್ ಔಟ್ ಅಥವಾ ಗಾಯಗೊಂಡು ನಿವೃತ್ತಿಯಾಗಿ ನಿರ್ಗಮಿಸಿದ ಎರಡು ನಿಮಿಷಗಳ ಅವಧಿಯಲ್ಲಿ ಮತ್ತೊಬ್ಬ ಬ್ಯಾಟರ್ ಕ್ರೀಸ್‌ಗೆ ಬಂದು ಆಟ ಆರಂಭಿಸಬೇಕು ಎಂಬುದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (40.1.1) ನಿಯಮವಾಗಿದೆ. ಅಲ್ಲದೇ ನಿಯಮ 40.1.2ರ ಪ್ರಕಾರ, ಬ್ಯಾಟರ್…
ಬಿಗ್ಬಾಸ್ ಮನೆಯಲ್ಲಿ ಹೊಸ ಲವ್ ಸ್ಟೋರಿ ಶುರುವಾಗಿದೆ. ಮೊದಲು ಕಾರ್ತಿಕ್ ಮತ್ತು ಸಂಗೀತಾ ಲವ್ ಸ್ಟೋರಿ ಈಗಲೂ ಪೀಕ್‌ನಲ್ಲಿಯೇ ಇದೆ. ಇದಾದ ಮೇಲೆ ಮೈಕಲ್ ಮತ್ತು ಇಶಾನಿ ಜೋಡಿ ಓಪನ್ ಆಗಿಯೇ ಹೇಳಿಕೊಂಡಿದೆ. ಅದರ ಮಧ್ಯೆ ಇನ್ನೂ ಒಂದು ಲವ್ಲಿ ಸ್ಟೋರಿ ಈ ವಾರ ರಿವೀಲ್ ಆಗಿದೆ. ಕಿಚ್ಚನ ವಾರದ ಕಥೆಯಲ್ಲಿಯೇ ಇದೆಲ್ಲ ರಿವೀಲ್ ಆಗಿದೆ. ಇದರ ಆ ಲವ್ ಸ್ಟೋರಿಯ ಪ್ರೇಮಿಗಳು ಯಾರು? ಪರಸ್ಪರ ಇವರು ಒಪ್ಪಿಕೊಂಡ್ರೇ? ಇದಕ್ಕೆ ಉತ್ತರ ಸಿಂಪಲ್ ಆಗಿಯೇ ಇದೆ. ಬಿಗ್ ಬಾಸ್ ಮನೆಯೊಳಗೆ ಏನೇನೋ ಆಗುತ್ತದೆ. ಅದರ ಲವ್ ಸ್ಟೋರಿ ಕೂಡ ವಿಶೇಷವಾಗಿಯೇ ಕಾಣಿಸುತ್ತವೆ. ಪ್ರತಿ ಸೀಸನ್‌ನಲ್ಲೂ ಇಂತಹ ಒಂದಷ್ಟು ಲವ್ ಸ್ಟೋರಿ ಇರುತ್ತವೆ. ಎಲ್ಲ ಸಕ್ಸಸ್ ಆಗುತ್ತವೆ ಅಂತ ಹೇಳೋದು ಕಷ್ಟ. ಆ ಲೆಕ್ಕದಲ್ಲಿ ಚೆಂದನ್ ಶೆಟ್ಟಿ-ನಿವೇದಿತಾ ಸ್ಟೋರಿ ಸೂಪರ್ ಹಿಟ್ ಆಗಿದೆ. ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ. ಜೋಡಿ ಇನ್ನೂ ಮೋಡಿ ಮಾಡ್ತಾನೇ ಇದೆ. ಅರ್ಧಂಬರ್ಧ ಪ್ರೇಮಕಥೆ ಅನ್ನುವ ಸಿನಿಮಾ…
ಇಂದು ಸಿಲಿಕಾನ್ ಸಿಟಿ ಜನರಿಗೆ ಬಿಸಿಲಿನ ಬಿಸಿಯಿಂದ ಕೊಂಚ ರಿಲೀಫ್ ಸಿಕ್ಕಿದೆ. ಇಂದು ಮಧ್ಯಾಹ್ನನದಿಂದ ಬೆಂಗಳೂರಿನ ಬಹುತೇಕ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದ ತಂಪಾದ ವಾತಾವರಣ ಸೃಷ್ಟಿಯಾಗಿದ್ದು ಸಂಜೆಯಾಗುತ್ತಿದ್ದಂತೆ ಸ್ನ್ಯಾಕ್ಸ್‌ಗೆ ಬೇಡಿಕೆ ಹೆಚ್ಚಾಗಿದೆ. ಮಳೆ ಬರುವಾಗ ಒಂದು ಪ್ಲೇಟ್ ಬಜ್ಜಿ ಅದರೊಂದಿಗೆ ಚಹಾ ಇದ್ದರೆ ಅದರ ಮಜಾನೇ ಬೇರೆ. ಹೀಗಾಗಿ ಬೆಂಗಳೂರು ತಂಪಾಗುತ್ತಿದ್ದಂತೆ ಬಜ್ಜಿ, ಬೊಂಡಾ, ಚಹಾ, ಕಾಫಿ, ಫ್ರೆಂಚ್ ಫ್ರೈಸ್, ಮ್ಯಾಗಿ ಹೀಗೆ ಬಗೆ ಬಗೆಯ ತಿಂಡಿಗಳಿಗೆ ಜನ ಮುಗಿಬಿದ್ದಿದ್ದಾರೆ. ಟೀ ಅಂಗಡಿ, ಬೀದಿ ಬದಿ ಹಾಗೂ ರಸ್ತೆ ಸ್ನ್ಯಾಕ್ಸ್ ಅಂಗಡಿಗಳತ್ತ ಜನ ಹೆಜ್ಜೆ ಹಾಕಲು ಶುರು ಮಾಡಿದ್ದಾರೆ. ಅದರಲ್ಲೂ ಮಳೆ ಬಂದಾಗ ಹೆಚ್ಚು ತಿನ್ನಲು ಮನಸ್ಸಾಗೋದು ಕರಿದ ತಿಂಡಿಗಳಲ್ಲಿ ಒಂದಾದ ಬಜ್ಜಿಯನ್ನ. ಹೀಗಾಗಿ ಮಳೆ ಅಥವಾ ತಂಪಾದ ವಾತಾವರಣದಲ್ಲಿ ಇದಕ್ಕೆ ಬೇಡಿಕೆ ಹೆಚ್ಚು. ಬಜ್ಜಿಯಲ್ಲೂ ನಾನಾ ಬಗೆಯ ಬಜ್ಜಿಗಳಿವೆ. ಜನರು ತಮ್ಮ ಇಷ್ಟಕ್ಕನುಗುಣವಾಗಿ ಬಜ್ಜಿಗಳನ್ನು ಖರೀದಿಸಿ ಆನಂದಿಸುತ್ತಾರೆ. ಕೆಲವರು ಮನೆಯಲ್ಲೇ ಮಾಡುವ ಕರಿದ ತಿಂಡಿಗಳನ್ನು ಸೇವಿಸುತ್ತಾರೆ. ಅಂದಹಾಗೆ ಬಜ್ಜಿಯಲ್ಲಿ…
ಹೂವಿನಹಡಗಲಿ;- ಸರಕಾರ ಮೂರು ಗುಂಪಾಗಿ ಸಿಎಂ ಕುರ್ಚಿಗಾಗಿ ಕಿತ್ತಾಡುತ್ತಿದೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಬರಗಾಲದಿಂದ ಜನತೆ ಸಂಕಷ್ಟದಲ್ಲಿದ್ದು ರಾಜ್ಯ ಸರಕಾರ ಮೂರು ಗುಂಪಾಗಿ ಸಿ.ಎಂ ಕುರ್ಚಿಗಾಗಿ ಕಿತ್ತಾಡುತ್ತಾ ಜನರ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ ಎಂದರು. ರಾಜ್ಯದಲ್ಲಿ ಬರ ತೀವ್ರವಾದ ಹಿನ್ನಲೆಯಲ್ಲಿ ರೈತರು ಬೆಳೆದ ಬೆಳೆ ನಷ್ಟವಾಗಿದೆ. ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಪ್ರತಿ ಹೋಬಳಿ ಮಟ್ಟದಲ್ಲಿಯು ಮೇವು ಬ್ಯಾಂಕ್ ಹಾಗೂ ಗೋಶಾಲೆ ಪ್ರಾರಂಭ ಮಾಡಬೇಕು. ಇಷ್ಟೆಲ್ಲಾ ಇದ್ದಾಗ್ಯೂ ಸಹ ಸಿದ್ದರಾಮಯ್ಯನವರ ಸರಕಾರ ಜನತೆಯನ್ನು ನಿರ್ಲಕ್ಷಿಸಿದೆ.ಕೇಂದ್ರದ ಬರ ತಂಡ ಅಧ್ಯಯನಕ್ಕೆ ಬಂದಾಗ ನಿಜವಾದ ರಾಜ್ಯದ ಪರಿಸ್ಥಿತಿ ತೋರಲು ಸರ್ಕಾರ ವಿಫಲವಾಗಿದೆ.ವಿನಾಃ ಕಾರಣ ಹಣ ನೀಡಿಲ್ಲ ಎಂದು ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಡಿ.ಕೆ.ಶಿವಕುಮಾರ್ ಮುಖ್ಯ ಮಂತ್ರಿಯಾಗುತ್ತರೆ ಎಂದಾದಲ್ಲಿ ನಾನು ಶಾಸಕರ ಬೆಂಬಲ ಕೊಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿ ಅವರಿಬ್ಬರ ಸಂಬಂಧ…
ಬೆಂಗಳೂರು;- ಸರ್ಕಾರದ ವೈಫಲ್ಯದಿಂದಲೇ ಅಧಿಕಾರಿಗಳ ಹತ್ಯೆಯಾಗ್ತಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳಿಗೆ, ಜನಸಾಮಾನ್ಯರಿಗೆ ರಕ್ಷಣೆ ಇಲ್ಲ. ರಾಜ್ಯದ ಹಿರಿಯ ಅಧಿಕಾರಿಯನ್ನ ಮೆನೆಗೆ ಹೋಗಿ ಹತ್ಯೆ ಮಾಡಿದ್ದಾರೆ. ಇಂತಹ ಉದ್ಧಟತನ ತೋರುವ ಕೆಲಸ ಆಗ್ತಿದೆ. ಸರ್ಕಾರದ ವೈಫಲ್ಯವೇ ಇದಕ್ಕೆ ಕಾರಣ. ಇಂತಹ ವಾತಾವರಣ ಇದ್ರೆ ಯಾವ ಅಧಿಕಾರಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯ. ಸರ್ಕಾರ ಕಠಿಣವಾದ ಕ್ರಮ ಕೈಗೊಳ್ಳಬೇಕು. ಕಿಡಿಗೇಡಿಗಳಿಗೆ ಯಾವುದೇ ಲಂಗುಲಗಾಮು ಇಲ್ಲ. ಗೃಹ ಇಲಾಖೆ ವೈಫಲ್ಯ ಎದ್ದು ಕಾಣ್ತಿದೆ. ಯಾವಯಾವ ಭಾಗದಲ್ಲಿ ಏನೇನು ನಡೆಯುತ್ತೆ ಅಂತ ಪೊಲೀಸ್ ಇಲಾಖೆಗೆ ಮಾಹಿತಿ ಇರುತ್ತದೆ. ಅಧಿಕಾರಿಗಳು ಸ್ವತಂತ್ರವಾಗಿ ಕೆಲಸ ಮಾಡುವ ವಾತಾವರಣ ಇಲ್ಲ. ವರ್ಗಾವಣೆ ಮಾಡಿ ಹಣವಸೂಲಿ ಮಾಡ್ತಾ ನಿಂತಿದ್ರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡ್ತಾರಾ? ಸರ್ಕಾರದ ನಡೆಯಿಂದಲೇ ಇಂತಹ ಘಟನೆ ಜರುಗುತ್ತಿದೆ ಎಂದು ಕಿಡಿಕಾರಿದರು. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗೋದನ್ನ ಕಾಂಗ್ರೆಸ್ ಅವರು ಹೇಳಬೇಕು. ಲೋಕ ಸಭೆ ಚುನಾವಣೆ…
ಬೆಂಗಳೂರು;- ಸಿಎಂ ಕುರ್ಚಿ ಮೇಲೆ ಡಜನ್‍ಗಟ್ಟಲೆ ಜನರು ಕಣ್ಣಿಟ್ಟಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕರ್ನಾಟಕದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಸಿಎಂ ಕುರ್ಚಿ ಮೇಲೆ ಡಜನ್‍ಗಟ್ಟಲೆ ಜನರು ಕಣ್ಣಿಟ್ಟು ಹೋರಾಟ ಮಾಡುತ್ತಿದ್ದಾರೆ. ಆದ್ದರಿಂದ ಸಿದ್ದರಾಮಯ್ಯನವರು ಸಿಎಂ ಆಗಿ ಎಷ್ಟು ದಿನ ಇರುತ್ತಾರೋ ಗೊತ್ತಿಲ್ಲ ಎಂಬ ಅರ್ಥದಲ್ಲಿ ಪ್ರಧಾನಿಯವರು ಹೇಳಿಕೆ ನೀಡಿದ್ದಾರೆ ಎಂದರು. ಗ್ಯಾರಂಟಿ ಘೋಷಿಸಿದ್ದು, ಅಧಿಕಾರಕ್ಕೆ ಬಂದು ನುಡಿದಂತೆ ನಡೆದಿಲ್ಲ. ಯಾವುದೇ ಗ್ಯಾರಂಟಿಗಳು ಜನರಿಗೆ ತಲುಪುತ್ತಿಲ್ಲ ಎಂದಿದ್ದಾರೆ. ನಾವೇನೂ ಗ್ಯಾರಂಟಿ ವಿರೋಧಿಗಳು ಅಲ್ಲ. ಖಜಾನೆಯಲ್ಲಿರುವ ಹಣ ಗಮನಿಸದೆ ಜನರಿಗೆ ಕೊಟ್ಟ ಆಶ್ವಾಸನೆ ಉಳಿಸಿಕೊಳ್ಳುವುದು ಹೇಗೆ? ನಿಜವಾಗಿ ನಾವು ಕೊಟ್ಟ ಆಶ್ವಾಸನೆಗಳನ್ನು ಉಳಿಸಿಕೊಳ್ಳಲು ಸಾಧ್ಯವೇ ಎಂಬುದನ್ನು ವಿವೇಚಿಸಬೇಕಾಗಿತ್ತು. ಮತ್ತು ಆ ನಿಟ್ಟಿನಲ್ಲಿ ಪರಿಜ್ಞಾನ ಇರಬೇಕಿತ್ತು ಎಂದು ಹೇಳಿದ್ದಾರೆ. ಸಂಪೂರ್ಣವಾಗಿ ಇಡೀ ಸರಕಾರವು ಭ್ರಷ್ಟಾಚಾರದ ಕೂಪದಲ್ಲಿ ತುಂಬಿ ಹೋಗಿದೆ. ಭ್ರಷ್ಟಾಚಾರದ ಕಾರಣದಿಂದ ರಾಜ್ಯ ದಿವಾಳಿ ಆಗಿದೆ. ಬರ ಪರಿಸ್ಥಿತಿ ತೀವ್ರವಾಗಿದೆ. ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಾಗಿದೆ. ಇವೆಲ್ಲವನ್ನೂ ಸರಕಾರ ಗಮನಿಸುತ್ತಿಲ್ಲ…
ಮೈಸೂರು;-ಮುಖ್ಯಮಂತ್ರಿ ಹುದ್ದೆ ಚರ್ಚೆ ಅಪ್ರಸ್ತುತ ಎಂದು ಕೆ ಎಚ್ ಮುನಿಯಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಬಜೆಟ್‌ಗಳನ್ನು ನೀಡಿರುವ ಸಿದ್ದರಾಮಯ್ಯ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಯಾವುದೇ ತಂಟೆ, ತರಕಾರು ಇಲ್ಲದೆಯೇ ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಹುದ್ದೆಯ ಚರ್ಚೆ ಸದ್ಯಕ್ಕೆ ಅಪ್ರಸ್ತುತ ಎಂದರು. ಪ್ರಜಾಪ್ರಭುತ್ವದಲ್ಲಿ ರಾಜ್ಯದ 224 ಶಾಸಕರೂ ಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಇರುವುದು ಸಹಜ. ಆಡಳಿತ ಪಕ್ಷದಲ್ಲಿ 136 ಶಾಸಕರಿದ್ದೇವೆ. ಹೀಗಾಗಿ ಸರ್ಕಾರದ ಸ್ಥಿರತೆಯನ್ನು ಪ್ರಶ್ನಿಸುವ ಅಗತ್ಯವಿಲ್ಲ. ಮುಖ್ಯಮಂತ್ರಿಗಳು ಬಂದೋಬಸ್ತ್ ಆಗಿ ಇರುತ್ತಾರೆ’ ಎಂದರು.
ಮೈಸೂರು;- ಮೈಸೂರು ನಗರಪಾಲಿಕೆ ಚುನಾವಣೆ ತಡ ಮಾಡುವುದಿಲ್ಲ ಎಂದು ಸಚಿವ ಬಿ.ಎಸ್. ಸುರೇಶ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಮೈಸೂರು ಮಹಾನಗರಪಾಲಿಕೆ ಚುನಾವಣೆಯನ್ನು ಸಕಾಲದಲ್ಲಿ ನಡೆಸಲಾಗುವುದು. ಈ ವಿಷಯದಲ್ಲಿ ತಡ ಮಾಡುವ ಪ್ರಶ್ನೆಯೇ ಇಲ್ಲ’ ಎಂದರು. ಚುನಾವಣೆ ಮುಂದೂಡುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಾನು ಚುನಾವಣೆ ನಡೆಸಲು ಉತ್ಸುಕರಾಗಿದ್ದೇವೆ. ಮುಂಬರುವ ಲೋಕಸಭಾ ಚುನಾವಣೆಗೂ ಪಾಲಿಕೆ ಚುನಾವಣೆ ನಡೆಸುವುದಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು. ‘ಪಾಲಿಕೆ ಚುನಾವಣೆ ಮೀಸಲಾತಿ ಬಗ್ಗೆಯೂ ಈಗಾಗಲೇ ಪ್ರಕ್ರಿಯೆ ಶುರುವಾಗಿದೆ. ನಮಗೆ ಚುನಾವಣೆ ಪ್ರಕ್ರಿಯೆ ನಡೆಸಲು 15 ದಿನ ಸಾಕು’ ಎಂದರು. ‘ಮೈಸೂರು-ಬೆಂಗಳೂರನ್ನು ಅವಳಿ ನಗರಗಳಾಗಿ ಪರಿಗಣಿಸಿ ಅಭಿವೃದ್ಧಿಪಡಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿಯೇ ಹಲವು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಬೆಂಗಳೂರಿನಿಂದಾಚೆಗಿನ ನಗರಗಳು ಬೆಳೆಯಬೇಕು ಎಂಬುದು ನಮ್ಮ ಆಶಯವಾಗಿದೆ’ ಎಂದರು.