Author: AIN Author

ನಿಮ್ಮ ದಾಂಪತ್ಯ ಜೀವನದಲ್ಲಿ ಸಂತೋಷವಾಗಿ ಬಾಳಬೇಕಾದರೆ ಅವರ ಜನ್ಮ ಕುಂಡಲಿಯಲ್ಲಿ ಇರುವ ಗ್ರಹಗಳೇ ಕಾರಣ. ನಿಮ್ಮ ಜನ್ಮ ಕುಂಡಲಿಯಲ್ಲಿ 2 ನೇ ಮನೆ, 7ನೇ ಮನೆ ಮತ್ತು 11ನೇ ಮನೆ ಪರೀಕ್ಷಿಸಬೇಕು. ಈ ಸ್ಥಾನದಲ್ಲಿ ಏನಾದರೂ ಶುಭಗ್ರಹಗಳಿದ್ದರೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಚಂದ್ರ, ಬುಧ, ಗುರು ಮತ್ತು ಶುಕ್ರ ಗಳಿಂದ ಉತ್ತಮ ಫಲ ದೊರಕುವುದು. ನಿಮ್ಮ ಕುಂಡಲಿಯಲ್ಲಿ 2 ನೇ ಮನೆ ,7 ನೇ ಮನೆ 11ನೇ ಮನೆ ಗ್ರಹಗಳೊಂದಿಗೆ ಶುಭಗ್ರಹಗಳಿದ್ದರೆ ತುಂಬಾ ಒಳ್ಳೆಯದು ಫಲ ನಿರೀಕ್ಷಣೆ ಮಾಡುವಿರಿ. ನಿಮ್ಮ ಲಗ್ನ ಕುಂಡಲಿದಲ್ಲಿ ಈ ಕೆಳಗಿನಂತೆ ಲಕ್ಷಣಗಳು ಕಂಡರೆ, 7ನೇ ಮನೆಯಲ್ಲಿ ಚಂದ್ರ ಇದ್ದರೆ, ದಾಂಪತ್ಯ ಜೀವನ ತೃಪ್ತಿ ದಾಯಕ. 7ನೇ ಮನೆಯಲ್ಲಿ ಬುಧ ಇದ್ದರೆ ದಾಂಪತ್ಯ ಜೀವನ ಸುಖಮಯ. 7ನೇ ಮನೆಯಲ್ಲಿ ಗುರು ಇದ್ದರೆ ಒಳ್ಳೆಯ ನಡತೆ ಹೆಂಡತಿ ಸಿಗುತ್ತಾಳೆ. ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ…

Read More

ಸೂರ್ಯೋದಯ: 06.15 AM, ಸೂರ್ಯಾಸ್ತ : 05.51 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಆಶ್ವಯುಜ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ನವಮಿ 05:50 AM ತನಕ ನಂತರ ದಶಮಿ ನಕ್ಷತ್ರ: ಇವತ್ತು ಮಖ 04:24 PM ತನಕ ನಂತರ ಪುಬ್ಬಾ ಯೋಗ: ಇವತ್ತು ಬ್ರಹ್ಮ 03:20 PM ತನಕ ನಂತರ ಇಂದ್ರ ಕರಣ: ಇವತ್ತು ಗರಜ 05:50 AM ತನಕ ನಂತರ ವಣಿಜ 07:07 PM ತನಕ ನಂತರ ವಿಷ್ಟಿ ರಾಹು ಕಾಲ: 03:00 ನಿಂದ 04:30 ವರೆಗೂ ಯಮಗಂಡ: 09:00 ನಿಂದ 10:30 ವರೆಗೂ ಗುಳಿಕ ಕಾಲ: 12:00 ನಿಂದ 01:30 ವರೆಗೂ ಅಮೃತಕಾಲ: 01.42 PM to 03.30 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:37 ನಿಂದ ಮ.12:22 ವರೆಗೂ ಮೇಷ ರಾಶಿ: ನಂಬಿದ ಸಹೋದ್ಯೋಗಿಯಿಂದ ನೌಕರದಾರರಿಗೆ ಮುಂಬಡ್ತಿಯಿಂದ ವಿಳಂಬ, “ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು” ಎಂಬ ನಾಣ್ನುಡಿಯಂತೆ…

Read More

ಕೋಲಾರ:-ಅಪ್ರಾಪ್ತ ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಯಾದ ಬಾಲಕ ಕಾರ್ತಿಕ್ ಸಿಂಗ್ ಕುಟುಂಬಸ್ಥರು ಹಾಗೂ ಸಂಬಂದಿಕರಿಂದ ಪ್ರತಿಭಟನೆ ಜರುಗಿದೆ. ಕೋಲಾರ ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆದಿದೆ. ಆರೋಪಿಗಳನ್ನು ಗುಂಡಿಕ್ಕಿ ಕೊಲ್ಲುವಂತೆ ಆಗ್ರಹಿಸಿದ್ದಾರೆ. ಇನ್ನೂ ಘಟನೆ ಸಂಬಂಧ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಇತೇಂದ್ರ, ಕೇಂದ್ರ ವಲಯದ ಐಜಿಪಿ ರವಿಕಾಂತೇಗೌಡ ಅವರಿಂದ ಕೋಲಾರದ ಎಸ್ಪಿ ಕಛೇರಿಯಲ್ಲಿ ಸಭೆ ನಡೆದಿದೆ.

Read More

ಹುಬ್ಬಳ್ಳಿ : ಗ್ರಾಮೀಣ ಭಾಗದಲ್ಲಿ ಜನರು ಸರ್ಕಾರದ ಬಗ್ಗೆ ಹೆಚ್ಚು ಆಶಾ ಭಾವನೆಯನ್ನು ಹೊಂದಿದ್ದಾರೆ. ಅಧಿಕಾರಿಗಳು ಕ್ರೀಯಾಶೀಲ, ಆಸಕ್ತಿಯಿಂದ ಜನರಿಗೆ ಅನುಕೂಲವಾಗುವಂತೆ ಕಾರ್ಯ ನಿರ್ವಹಿಸಬೇಕು ಎಂದು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಹೇಳಿದರು. ಇಂದು ಸರ್ಕ್ಯೂಟ್ ಹೌಸ್ ನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 3 ಲಕ್ಷ ಹೆಕ್ಟೇರ್ ವಿವಿಧ ಬೆಳೆ ಬಿತ್ತನೆಯಾಗಿದ್ದು, 2 ಲಕ್ಷ 11 ಸಾವಿರ ಹೆಕ್ಟೇರ್ ಸೋಯಾಬಿನ್, ಈರುಳ್ಳಿ, ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿವೆ. ಈ ಕುರಿತು ಸರ್ಕಾರಕ್ಕೆ ವರದಿ ತಯಾರಿಸಿ ಸಲ್ಲಿಸಲಾಗುತ್ತಿದೆ. ಅಲ್ಲದೇ ಸರ್ಕಾರಕ್ಕೆ ರೂ. 212 ಕೋಟಿ ಬೆಳೆ ಪರಿಹಾರ ಬೇಕು ಎಂದು ಮನವಿ ಸಲ್ಲಿಸಲಾಗಿದೆ. ಜಿಲ್ಲೆಗೆ ರೂ.12 ಕೋಟಿ ಬೆಳೆ ಪರಿಹಾರ ಘೋಷಣೆಯಾಗಿದೆ. ಮುಂದಿನ ಜೂನ್ ತಿಂಗಳವರೆಗೆ ಸುಮಾರು 3 ರಿಂದ 4 ಲಕ್ಷ ಟನ್ ಮೇವಿನ ಬೇಡಿಕೆಯಿದೆ. ಇಂದು‌ ಬರ ಪರಿಸ್ಥಿತಿ ಪರಿಶೀಲನೆ ಸಂದರ್ಭದಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಸಹ ಮಳೆಯಾಗಬೇಕಿದೆ.…

Read More

ಬಳ್ಳಾರಿ;-ಕಾಂಗ್ರೆಸ್‌ನ ನಾನೇ ಸಿಎಂ ವಿವಾದದ ಬಗ್ಗೆ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಪ್ರತಿಕ್ರಯಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂಗ್ರೆಸ್‌ನಲ್ಲಿ ಎಲ್ಲರೂ ಮುಖ್ಯಮಂತ್ರಿಯಾಗುವವರೇ..?. ನಾನು ಮುಖ್ಯಮಂತ್ರಿ ನಾನು ಮುಖ್ಯಮಂತ್ರಿ ಎಂದು 224 ಜನರು ಹೇಳುತ್ತಿದ್ದಾರೆ. ಇನ್ನೂ ರಾಜಕಾರಣದಲ್ಲಿ ಕಣ್ಣು ಬಿಟ್ಟಿಲ್ಲ, ಪ್ರಿಯಾಂಕ್ ಖರ್ಗೆ ನಾನು ಸಿಎಂ ಎನ್ನುತ್ತಾರೆ. ಅವರಪ್ಪನ ಹೆಸರು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆ. ಆದರೆ ನಾನೇ ಸಿಎಂ ಅಂತಾನೆ ಮಗ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಲೇವಡಿ ಮಾಡಿದ್ದಾರೆ ಕಾಂಗ್ರೆಸ್‌ನಲ್ಲಿ ಮಲ್ಲಿಕಾರ್ಜುನ ಖರ್ಗೆಗೆ ಮುಖ್ಯಮಂತ್ರಿ ಆಗಲು ಬಿಟ್ಟಿಲ್ಲ. ಇನ್ನು ಇವರನ್ನು ಬಿಡುತ್ತಾರಾ. ಸತೀಶ್ ಜಾರಕಿಹೊಳಿ ಅವರು ಕೂಡ ಸಿಎಂ ರೇಸ್‌ನಲ್ಲಿದ್ದಾರೆ ಎನ್ನುತ್ತಾರೆ. ಇನ್ನೂ ಜಿ. ಪರಮೇಶ್ವರ ಅವರು ಮುಖ್ಯಮಂತ್ರಿಯಾಗಲಿ ಎಂದು ಸಚಿವ ಕೆ.ಎನ್‌ ರಾಜಣ್ಣ ಹೇಳುತ್ತಿದ್ದಾರೆ. ಪರಮೇಶ್ವರ ದೇವರು ಅನುಗ್ರಹ ಇದ್ದರೆ ಸಿಎಂ ಆಗುತ್ತೇನೆ ಎನ್ನುತ್ತಾರೆ. ದೇವರನ್ನು ಬೈಯುವ ಕಾಂಗ್ರೆಸ್‌ನವರು ಇದೀಗ ದೇವರು ಎನ್ನುತ್ತಾರೆ ಎಂದರು. ಸಂವಿಧಾನ ತಿದ್ದುಪಡಿ ಮಾಡಿ ಜಾತಿಗೊಂದು ಮುಖ್ಯಮಂತ್ರಿ ಮಾಡಲಿ. ಪರಮೇಶ್ವರ ಮತ್ತು ಖರ್ಗೆಗಾಗಿ ಅದೊಂದು ಜಾತಿಗೆ ಎರಡು…

Read More

ಹಾನಗಲ್;- ತಾರಕೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಅಡ್ಡಿಪಡಿಸಿದ್ದ ಮುಸ್ಲಿಂ ಮೂಲಭೂತವಾದಿಗಳ ಕೃತ್ಯ ಖಂಡಿಸಿ ಇಂದು ಹಾನಗಲ್ ನಗರದಲ್ಲಿ ಪಾದಯಾತ್ರೆ ನಡೆಸಲಾಯಿತು. “ಹಾನಗಲ್ ಚಲೋ” ತಾರಕೇಶ್ವರ ಪಲ್ಲಕ್ಕಿ ಶೋಭಾ ಯಾತ್ರೆಯಲ್ಲಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೇಂದ್ರ,ಕೂಡಲದ ಗುರು ಮಹೇಶ್ವರ ಶಿವಾಚಾರ್ಯ ಶ್ರೀಗಳು, ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಶ್ರೀಗಳು,ಬಿಜೆಪಿ ಜಿಲ್ಲಾಧ್ಯಕ್ಷರಾದ ಸಿದ್ದರಾಜ ಕಲಕೋಟಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ಗವಿಸಿದ್ದಪ್ಪ ದ್ಯಾಮಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣ ಈಳಗೇರ, ಶಶಿಧರ ಹೊಸಳ್ಳಿ, ರುದ್ರೇಶ್ ಚಿನ್ನಣ್ಣನವರ, ಪ್ರಮುಖರಾದ ಕಲ್ಯಾಣ ಕುಮಾರ ಶೆಟ್ಟರ, ಕೆ ಶಿವಲಿಂಗಪ್ಪ, ದೀಪಕ್ ಹರಪನಹಳ್ಳಿ, ಬಸವರಾಜ ಕೇಲಗಾರ, ಶಿವಾನಂದ ಮ್ಯಾಗೇರಿ, ಗಂಗಾಧರ ಬಾಣದ, ನಿಂಗಪ್ಪ ಗೊಬ್ಬೇರ, ಮಾಲತೇಶ್ ಸೊಪ್ಪಿನ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ರಮೇಶ್ ಪಾಲನಕರ ಹಾಗೂ ಸಾವಿರಾರು ಹಿಂದೂ ಸಮಾಜ ಬಾಂಧವರು, ಹಿಂದೂ ಸಂಘಟನೆಗಳ ಪ್ರಮುಖರು, ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Read More

ಚಾಮರಾಜನಗರ;- ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಗದೀಶ್ ಶೆಟ್ಟರ್‌ ಅವರಿಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಲೂ ಯೋಗ್ಯತೆಯಿಲ್ಲ. ಇಂತಹವರನ್ನು ಬಿಜೆಪಿ ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ ಹುದ್ದೆ, ವಿರೋಧ ಪಕ್ಷದ ನಾಯಕ, ಸ್ಪೀಕರ್, ಮಂತ್ರಿ ಸೇರಿದಂತೆ ಎಲ್ಲಾ ಹುದ್ದೆ ಕೊಟ್ಟಿದೆ. ಹೀಗಾಗಿ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಶೆಟ್ಟರ್‌ಗೆ ಇಲ್ಲ. ಶೆಟ್ಟರ್‌ರವರೇ ದಯವಿಟ್ಟು ಕಿರಾಣಿ ಅಂಗಡಿ ತೆಗೆದುಕೊಂಡು ಕುಳಿತುಕೊಳ್ಳಿ ಎಂದರು. ಬಿಜೆಪಿಯಲ್ಲಿ ವಿ.ಸೋಮಣ್ಣ ಅವರನ್ನು ಕಡೆಗಣನೆ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ಮಾತನಾಡಿದ ಯತ್ನಾಳ್, ಪಕ್ಷದಲ್ಲಿ ಸೋಮಣ್ಣಗೆ ದೊಡ್ಡ ಭವಿಷ್ಯವಿದೆ, ಅವರ ಕೊಡುಗೆ ದೊಡ್ಡದಿದೆ. ಹೀಗಾಗಿ ಹೈಕಮಾಂಡ್ ಬರ ಅಧ್ಯಯನ ತಂಡದಲ್ಲಿ ಅವರಿಗೆ ಸ್ಥಾನ ಕೊಟ್ಟಿಲ್ಲ. ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಿದರೆ ರಾಜ್ಯಾಧ್ಯಕ್ಷ ಆಗಬಹುದು ಎಂದರು. ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್​ ಪಕ್ಷಕ್ಕೆ ಹೋಗುತ್ತಾರೆ ಅಂತಾರೆ. ಕಾಂಗ್ರೆಸ್​ ತಮ್ಮಲ್ಲಿರುವ 136 ಶಾಸಕರನ್ನು ಸಮಾಧಾನಪಡಿಸಬೇಕಿದೆ. BJP ಬಿಟ್ಟು ಯಾರಾದರೂ ಕಾಂಗ್ರೆಸ್​ಗೆ ಹೋದರೆ ಮಣ್ಣು ತಿನ್ನಬೇಕಾಗುತ್ತದೆ ಎಂದರು.…

Read More

ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ರಕ್ಷಕ್ ಬುಲೆಟ್ ಬಿಗ್’​ ಮನೆಯೊಳಗಿನ ಅನುಭವ, ಸ್ಪರ್ಧಿಗಳ ಕುರಿತಾದ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದು, ಮುಂದಿನ ವಾರ ತಮ್ಮ ಜಾಗದಲ್ಲಿ ಯಾವ ಸ್ಪರ್ಧಿ ಇರಬಹುದು ಎಂಬುದನ್ನು ಇದೀಗ ಬಹಿರಂಗವಾಗಿ ತಿಳಿಸಿದ್ದಾರೆ. ಮೊದಲು ಟಾಸ್ಕ್​ ಬಗ್ಗೆ ಮಾತನಾಡಿದ ರಕ್ಷಕ್, ‘ಫನ್‌ ಫ್ರೈಡೆಯಲ್ಲಿನ ಮ್ಯೂಸಿಕಲ್ ಪಾಟ್‌ ಟಾಸ್ಕ್‌ ಸಖತ್ ಮಜಾ ಕೊಟ್ಟಿತ್ತು. ಫನ್‌ ಫ್ರೈಡೆ ಅಂದ್ರೇ ಮಜವಾಗಿರೋ ಚುಟುವಟಿಕೆ. ಅದನ್ನೂ ಕೆಲವರು ಸಿಕ್ಕಾಪಟ್ಟೆ ಗಂಭೀರವಾಗೇ ಆಡುತ್ತಾರೆ. ಫನ್ ಅನ್ನೋ ಶಬ್ದಕ್ಕೆ ಹಾಳುಮಾಡಬಾರದು. ಬೇರೆ ಟ್ರಿಗರ್ ಆಗುವ ಟಾಸ್ಕ್ ಇರುತ್ತದೆ. ಅದಕ್ಕೆ ಕುಪಿತವಾಗಲಿ. ಆದ್ರೆ ಮಜವಾಗಿ ಆಡುವ ಆಟವನ್ನು ಮಜವಾಗಿಯೇ ಆಡಿ. ಎಂಜಾಯ್ ಮಾಡಿಕೊಂಡು ಆಡಬೇಕು’ ಎಂದು ಹೇಳಿದರು. ಮನೆಯೊಳಗಿನ ಸ್ಪರ್ಧಿಗಳಲ್ಲಿ ಜೆನ್ಯೂನ್ ಅಂದ್ರೆ ನಮ್ರತಾ. ಸ್ಟ್ರಾಟಜಿ ಅಂತ ಬಂದ್ರೆ ವಿನಯ್. ಫೇಕ್‌ ಅಂತ ಹೇಳಕ್ಕಾಗಲ್ಲ. ಆದರೆ ಬೇಡದಿರೋ ವಿಷಯಕ್ಕೆ ನಾಟಕ ಮಾಡಿದ್ದಾರೆ ಭಾಗ್ಯಶ್ರೀ. ಅಳೋದು ಒಂದೇ ಅಲ್ಲ ಲೈಫ್‌ನಲ್ಲಿ. ಅದನ್ನು ಗಟ್ಟಿಯಾಗಿ ಎದುರಿಸಬೇಕು. ಸತ್ಯವನ್ನು ಮುಖಕ್ಕೆ ಹೊಡೆದ ಹಾಗೆ…

Read More

ಬೆಂಗಳೂರು;- ರಾಜ್ಯದಲ್ಲಿ ಎರಡು ದಿನ ಭಾರಿ ಮಳೆ ಆಗಲಿದ್ದು, 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ರಾಮನಗರದಲ್ಲಿ ಜೋರು ಮಳೆಯಾಗಲಿದೆ. ಹೀಗಾಗಿ, ಈ ಜಿಲ್ಲೆಗಳಿಗೆ ಯೆಲ್ಲೂ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ, ಬಾಗಲಕೋಟೆ, ಧಾರವಾಡ, ಬೆಳಗಾವಿ, ಗದಗ, ಕೊಪ್ಪಳ, ಹಾವೇರಿ ಹಾಗೂ ಇತರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ. ಎರಡೂ ದಿನ ಮೋಡ ಕವಿದ ವಾತಾವರಣ, ಕೆಲವೆಡೆ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Read More

ಒಂದೂ ಬೌಲ್ ಆಡದೇ ಏಂಜೆಲೊ ಮ್ಯಾಥ್ಯೂಸ್ ಔಟ್ ಆಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ರೀತಿಯಾಗಿರುವುದು ಇದೇ ಮೊದಲು. ಅವರು ಒಂದೂ ಎಸೆತ ಎದುರಿಸದೇ ಔಟ್ ಆದ ಬ್ಯಾಟರ್ ಕೂಡ ಅವರಾದರು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ 36 ವರ್ಷದ ಮ್ಯಾಥ್ಯೂಸ್ ಅವರು ಸದೀರ ಸಮರವಿಕ್ರಮ ಅವರು ಔಟಾದ ನಂತರ ಬ್ಯಾಟಿಂಗ್ ಮಾಡಬೇಕಿತ್ತು. ಆರನೇ ಕ್ರಮಾಂಕದ ಬ್ಯಾಟರ್‌ ಮ್ಯಾಥ್ಯೂಸ್ ಪಿಚ್‌ನತ್ತ ಬಂದರು. ಆದರೆ ಇದೇ ಸಂದರ್ಭದಲ್ಲಿ ತಮ್ಮ ಹೆಲ್ಮೆಟ್‌ನ ಪಟ್ಟಿ ಹರಿದಿದ್ದನ್ನು ಗಮನಿಸಿದರು. ಇನ್ನೊಂದು ಹೆಲ್ಮೆಟ್ ತರುವಂತೆ ಡಗ್‌ಔಟ್‌ನತ್ತ ಸಹ ಆಟಗಾರನಿಗೆ ಸನ್ನೆ ಮಾಡಿದರು. ಆದರೆ ಈ ಸಂದರ್ಭದಲ್ಲಿ ವೇಳೆ ಮೀರಿದ್ದನ್ನು ಗಮನಿಸಿದ ಬಾಂಗ್ಲಾ ಆಟಗಾರರು ಟೈಮ್‌ ಔಟ್‌ಗಾಗಿ ಮನವಿ ಸಲ್ಲಿಸಿದರು. ಒಬ್ಬ ಬ್ಯಾಟರ್ ಔಟ್ ಅಥವಾ ಗಾಯಗೊಂಡು ನಿವೃತ್ತಿಯಾಗಿ ನಿರ್ಗಮಿಸಿದ ಎರಡು ನಿಮಿಷಗಳ ಅವಧಿಯಲ್ಲಿ ಮತ್ತೊಬ್ಬ ಬ್ಯಾಟರ್ ಕ್ರೀಸ್‌ಗೆ ಬಂದು ಆಟ ಆರಂಭಿಸಬೇಕು ಎಂಬುದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (40.1.1) ನಿಯಮವಾಗಿದೆ. ಅಲ್ಲದೇ ನಿಯಮ 40.1.2ರ ಪ್ರಕಾರ, ಬ್ಯಾಟರ್‌…

Read More