Author: AIN Author

ಕೋಲಾರ : ನಗರ ಪ್ರದೇಶದಲ್ಲಿ ನಿವೇಶನ, ಮನೆ, ಸೇರಿದಂತೆ ಹಲವು ರೀತಿಯ ಆಸ್ತಿಗಳನ್ನು ಹೊಂದಿರುವವರು ದಾಖಲೆ ಸಮೇತ ನಗರಸಭೆ ಕಛೇರಿಗೆ ತೆರಳಿ ಅರ್ಜಿ ಸಲ್ಲಿಸಿದರೆ ಕೂಡಲೇ ಇ ಖಾತಾ ಮಾಡಿಕೊಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು. https://ainlivenews.com/mix-these-in-tea-and-drink-it-to-soothe-a-stomachache/ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಕೋಲಾರ ನಗರವು ಜಿಲ್ಲಾ ಕೇಂದ್ರವಾಗಿದ್ದು, ನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ಎಲ್ಲಾ ನಾಗರೀಕರು ತಾವು ಹೊಂದಿರುವ ಆಸ್ತಿಗಳಿಗೆ ಖಾತೆ ಮಾಡಿಸಲು ನಗರಸಭೆ ಕಛೇರಿಗೆ ಅಲೆ ಯುತ್ತಿರುವುದನ್ನು ತಪ್ಪಿಸುವ ಸಲುವಾಗಿ ರಾಜ್ಯ ಸರ್ಕಾರದಿಂದ ನಕ್ಷಾ ಯೋಜನೆಗೆ ಕೋಲಾರ ನಗರವನ್ನು ಆಯ್ಕೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಫೆ.18 ರಂದು ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಿಲಿದ್ದಾರೆ ಎಂದು ತಿಳಿಸಿದರು. ಫೆ.18 ರಿಂದ ಮೂರು ತಿಂಗಳ ಕಾಲ ಖಾತೆ ಅಭಿಯಾನ ಹಮ್ಮಿಕೊಳ್ಳಲಾಗಿದೆ ಖಾತೆ ಮಾಡಿಸಿಕೊಳ್ಳಲು ಯಾವುದೇ ಮಧ್ಯವರ್ತಿಗಳನ್ನು ನಂಬಬೇಡಿ ನಂಬಿದಲ್ಲಿ ಮೋಸ ಹೋಗುತ್ತೀರಿ ಖಾತೆ ಮಾಡಲು ಯಾವುದೇ ಏಜೆಂಟರ ನೇಮಸಿರೋದಿಲ್ಲ ನೇರವಾಗಿ ಸಾರ್ವಜನಿಕರೇ…

Read More

ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಬೊಜ್ಜು ಸೇರಿಕೊಂಡರೆ ಅದು ದೇಹದ ಸೌಂದರ್ಯವನ್ನೇ ಹಾಳು ಮಾಡಿ ಬಿಡುತ್ತದೆ. ಯಾವ ಬಟ್ಟೆ ಧರಿಸಿದರೂ ಅಸಹ್ಯವಾಗಿಯೇ ಕಾಣುತ್ತದೆ. ಈ ಬೊಜ್ಜು ಕರಗಿಸಲು ಸುಲಭ ಉಪಾಯ ಇಲ್ಲಿದೆ. https://ainlivenews.com/fierce-accident-three-escape-as-a-miracle/ ಇದ್ದಕ್ಕಿದ್ದಂತೆ ಒಬ್ಬ ಮನುಷ್ಯ ದಪ್ಪ ಆಗಿದ್ದಾನೆ ಎಂದರೆ ಎಲ್ಲರೂ ಮೊದಲು ನೋಡುವುದು ಆತನ ಹೊಟ್ಟೆಯನ್ನು. ಏಕೆಂದರೆ ಈಗಿನ ಕಾಲದಲ್ಲಿ ದಪ್ಪ ಆಗಬೇಕು ಎಂದರೆ ಅದಕ್ಕೆ ಪ್ರಮುಖ ಕಾರಣ ಬೊಜ್ಜು ಆಗಿರುತ್ತದೆ. ಸೊಂಟದ ಸುತ್ತಲೂ ಬೊಜ್ಜು ಶೇಖರಣೆಯಾಗುವುದು ಸಾಮಾನ್ಯ. ನೀವು ತಯಾರಿಸುವ ಚಹಾದಲ್ಲಿ ಕೆಲವು ಮಸಾಲೆ ಪದಾರ್ಥಗಳನ್ನು ಸೇರಿಸಿದರೆ ಸಾಕು. ಬಲೂನ್ ನಂತೆ ಊದಿರುವ ಡೊಳ್ಳು ಹೊಟ್ಟೆಯೂ ಮಂಜಿನಂತೆ ಕರಗುತ್ತದೆ. ಶುಂಠಿಯಲ್ಲಿರುವ ಪೋಷಕಾಂಶಗಳು ಹಸಿವನ್ನು ನಿಗ್ರಹಿಸುವುದು ಮಾತ್ರವಲ್ಲದೆ ಜಠರಗರುಳಿನ ಉರಿಯೂತವನ್ನೂ ಸಹ ನಿಗ್ರಹಿಸುತ್ತಾಡ್. ಇದು ತೂಕ ಇಳಿಕೆಯಲ್ಲೂ ಪ್ರಯೋಜನಕಾರಿ ಆಗಿದೆ. ಅರಿಶಿನದಲ್ಲಿ ಕರ್ಕ್ಯುಮೀನ್ ಎಂಬ ಅಂಶವಿದೆ. ಅರಿಶಿನದ ಟೀ ಕೂಡಿಯುವುದರಿಂದ ಇದು ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಪರಿಣಾಮಕಾರಿ ಆಗಿದೆ. ಕಡಿಮೆ ಕ್ಯಾಲೋರಿ ಪಾನೀಯವಾಗಿರುವ ಪುದೀನಾ ಟೀ ಕರುಳಿನ ಆರೋಗ್ಯಕ್ಕೆ…

Read More

ನೆಲಮಂಗಲ: ಭೀಕರ ಅಪಘಾತದಲ್ಲಿ ಅದೃಷ್ಟ ಎಂಬಂತೆ ಮೂವರು ಪಾರಾಗಿರುವ ಘಟನೆ ಬೆಂಗಳೂರು ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ. https://ainlivenews.com/remove-modi-from-the-post-of-prime-minister-and-install-gadkari-santosh-lad/ ವೇಗವಾಗಿ ಬಂದ ಲಾರಿ ಇನೋವಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ನೆಲಮಂಗಲದ ಮಾದನಾಯಕನಹಳ್ಳಿ ಬಳಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದವರು ಪವಾಡ ರೀತಿಯಲ್ಲಿ ಪಾರಾಗಿದ್ದಾರೆ. ನೆಲಮಂಗಲ ಮಾದನಾಯಕನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಮ್ ಆಗಿದೆ. ನೆಲಮಂಗಲ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ.

Read More

ಬೆಳಗಾವಿ:- ಪ್ರಧಾನಿ ಹುದ್ದೆಯಿಂದ ಮೋದಿ ಇಳಿಸಿ, ಗಡ್ಕರಿ ಕೂರಿಸಿ ಎಂದು ಸಂತೋಷ್ ಲಾಡ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಮೋದಿಯವರನ್ನು (ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಚಂದ್ರಬಾಬು ನಾಯ್ಡು ಅಥವಾ ನಿತಿನ್ ಗಡ್ಕರಿ ಪ್ರಧಾನಿಯಾಗಬೇಕು. https://ainlivenews.com/car-collides-with-tanker-while-trying-to-overtake-two-people-die/ ಪ್ರಧಾನಿಯನ್ನ ಕೆಳಗಿಳಿಸಿ ಬೇರೆಯವರನ್ನು ಪ್ರಧಾನಿ ಮಾಡಿದರೆ ಒಳ್ಳೆಯ ಕೆಲಸ ಮಾಡುತ್ತಾರೆ. ನನಗೆ ಇರುವ ಮಾಹಿತಿ ಪ್ರಕಾರ ಪ್ರಧಾನಿ ಬದಲಾಗುತ್ತಾರೆ. ಚಂದ್ರಬಾಬು ನಾಯ್ಡು ಅಥವಾ ನಿತಿನ್ ಗಡ್ಕರಿ ಪೈಕಿ ಒಬ್ಬರು ಪ್ರಧಾನಿಯಾಗುತ್ತಾರೆ ಎಂದರು. ನಾನು ಬಿಜೆಪಿ ನಾಯಕರು, ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ. ಮೋದಿಯನ್ನು ಕೆಳಗಿಸಿ ಬೇರೆಯವರನ್ನು ಪ್ರಧಾನಮಂತ್ರಿ ಮಾಡಬೇಕು. ನಿತಿನ್‌ ಗಡ್ಕರಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪ್ರಧಾನಿಯನ್ನಾಗಿ ಮಾಡಿ ನಾನೇ ಬುದ್ಧಿವಂತ, ವಿಶ್ವ ಗುರು ಅಂತಾ ಬಿಜೆಪಿಯವರು ಹೇಳಿದ್ರೆ ಹೇಗೆ ಎಂದು ಪ್ರಶ್ನಿಸಿದರು.

Read More

ದೊಡ್ಡಬಳ್ಳಾಪುರ:- ಓವರ್ ಟೇಕ್ ಮಾಡುವ ಭರದಲ್ಲಿ ಟ್ಯಾಂಕರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮಾಕಳಿದುರ್ಗಾ ಬಳಿ ಜರುಗಿದೆ. https://ainlivenews.com/this-is-a-strange-love-story-50-year-old-uncle-marries-18-year-old-girl/ ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದರೆ, ಮತ್ತಿಬ್ಬರಿಗೆ ಗಾಯವಾಗಿದೆ. ಬೆಂಗಳೂರು ಮೂಲದ ವಸಂತ್ ( 30 ) ಮತ್ತು ಚೇತನ್ ( 29 ) ಮೃತ ದುರ್ದೈವಿಗಳು. ಗೌರಿಬಿದನೂರು ಕಡೆಯಿಂದ ದೊಡ್ಡಬಳ್ಳಾಪುರದತ್ತ ಕಾರು ಬರುತ್ತಿತ್ತು. ಈ‌ ವೇಳೆ ಮುಂದೆ ಹೋಗ್ತಿದ್ದ ವಾಹನ, ಒವರ್ ಟೇಕ್ ಮಾಡುವ ಭರದಲ್ಲಿ ಎದುರಿಗೆ ಬರ್ತಿದ್ದ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್ ಮತ್ತು ಕಾರಿನ ಮುಂಬಾಗ ಜಖಂ ಆಗಿದೆ. ಗಾಯಾಳುಗಳಿಗೆ ದೊಡ್ಡಬಳ್ಳಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ದೊಡ್ಡಬಳ್ಳಾಪುರ ಶವಾಗಾರಕ್ಕೆ‌ ರವಾನೆ ಮಾಡಲಾಗಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Read More

ಹುಬ್ಬಳ್ಳಿ:- ಇತ್ತೀಚೆಗೆ ದಿನಗಳಲ್ಲಿ ಲವ್ ಅನ್ನೋದು ಯಾರ ಮೇಲಾಗುತ್ತೋ ಗೊತ್ತಾಗುವುದಿಲ್ಲ ಮರ್ರೆ. ಒಂದೆಡೆ 25, 26 ವರ್ಷದ ಯುವಕರಿಗೆ ಹುಡುಗಿ ಸಿಗದೆ ವಧುಗಾಗಿ ಹುಡುಕಾಡ್ತಿದ್ದಾರೆ. ಆದರೆ ಕೆಲವು ಅಂಕಲ್ ಗಳಿಗೆ ಬಯಸದೆ ಬಂದ ಭಾಗ್ಯ ಎಂಬಂತೆ ಚಿಕ್ಕ ಚಿಕ್ಕ ಹುಡುಗಿಯರೇ ಲವ್ ಮಾಡ್ತಿದ್ದಾರೆ. https://ainlivenews.com/what-is-happening-to-the-money-allocated-for-the-guarantee-question-from-the-deceitful-narayanaswamy/ ಅದರಂತೆ ಇಲ್ಲೋರ್ವ 50 ವರ್ಷದ ಅಂಕಲ್ ನನ್ನು 18 ವರ್ಷದ ಹುಡುಗಿ ಪ್ರೀತಿಸಿ ಮದುವೆ ಆಗಿದ್ದಾರೆ. ಹುಬ್ಬಳ್ಳಿಯಿಂದ ಕೊಲ್ಲಾಪುರದ ಅಜ್ಜಿ ಮನೆಗೆ ಹೋಗುವುದಾಗಿ ನಾಪತ್ತೆಯಾಗಿದ್ದ 18 ವರ್ಷದ ಯುವತಿ ಇದೀಗ 50 ವರ್ಷದ ವ್ಯಕ್ತಿ ಜೊತೆಗೆ ಮದುವೆಯಾಗಿದ್ದಾಳೆ. ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರೀಷ್ಮಾ ಹಾಗೂ ಪ್ರಕಾಶ್ ಮದುವೆಯಾಗಿದ್ದಾರೆ. ಯುವತಿ ಕರೀಷ್ಮಾಳನ್ನ ಮದುವೆಯಾಗಿರುವ ಪೋಟೋವನ್ನು ಪ್ರಕಾಶ್ ವಾಟ್ಸಪ್ ಸ್ಟೇಟಸ್​ ಹಾಕಿಕೊಂಡಿದ್ದಾರೆ. ಇದರಿಂದ ಶಾಕ್ ಆದ ಪೋಷಕರು ನಮ್ಮ ಮಗಳ ತಲೆಕೆಡಿಸಿ ಮದುವೆಯಾಗಿದ್ದಾನೆಂದು ಆರೋಪಿಸಿದ್ದಾರೆ. ಅಜ್ಜಿ ಮನೆಗೆ ಹೋಗಿದ್ದ ಕರೀಷ್ಮಾ ದಿಢೀರ್ ನಾಪತ್ತೆ ಆಗಿದ್ದಳು. ನಾಪತ್ತೆಯಾದ ಮಗಳನ್ನು ಹುಡುಕಿಕೊಡುವಂತೆ ಪಾಲಕರು ಕಣ್ಣೀರು ಹಾಕಿದ್ದರು. ಅಲ್ಲದೇ ಮಗಳ ಫೋಟೋ…

Read More

ಬೆಂಗಳೂರು: ಗ್ಯಾರಂಟಿಗಳಿಗೆ ಮೀಸಲಿಟ್ಟ ಹಣ ಯಾರು ನುಂಗುತ್ತಿದ್ದಾರೆ? ಎಂದು ರಾಜ್ಯ ಸರ್ಕಾರಕ್ಕೆ ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ ಮಾಡಿದ್ದಾರೆ. https://ainlivenews.com/current-in-these-areas-of-bangalore-tomorrow/ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿಗಳ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಮೀಸಲಿಟ್ಟ 52,009 ಕೋಟಿ ರೂ. ಹಣ ಎಲ್ಲಿ ಹೋಗುತ್ತಿದೆ? ಯಾರು ನುಂಗುತ್ತಿದ್ದಾರೆ ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು ಎಂದರು. ನಿಗದಿತ ಸಮಯಕ್ಕೆ ಗ್ಯಾರಂಟಿಗಳು ತಲುಪುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ಒಳಗಡೆ ಗ್ಯಾರಂಟಿ ಕೊಡಬೇಕೇ ಬೇಡವೇ ಎಂಬ ವಿಚಾರ ಚರ್ಚೆಯಲ್ಲಿದೆ. ಈ ಕಾರಣದಿಂದ ಜನರಿಗೆ ಅನುಮಾನ ಬರುವಂತಾಗಿದೆ ಎಂದರು. ದಲಿತರ ಹಣ 25 ಸಾವಿರ ಕೋಟಿಯನ್ನೂ ನುಂಗಿದ್ದೀರಿ. 52 ಸಾವಿರ ಕೋಟಿಯನ್ನು ಬಜೆಟ್‌ನಲ್ಲಿ ಇಟ್ಟಿದ್ದೀರಿ. 6 ತಿಂಗಳಿನಿಂದ ಅಕ್ಕಿ ಕೊಡುವುದಕ್ಕೂ ತಿಲಾಂಜಲಿ ಹಾಡಿದ್ದಾರೆ. ಮನೆ ಒಡತಿಗೆ ಕೊಡುತ್ತಿದ್ದ 2 ಸಾವಿರ ರೂ. ಬರುತ್ತಿಲ್ಲ. ಯುವನಿಧಿ ಮರೀಚಿಕೆಯಾಗಿದೆ, ಅದು ಯಾರಿಗೂ ಸಿಗುತ್ತಿಲ್ಲ. ಹಣ ಎಲ್ಲಿ ಹೋಗಿದೆ? ಇದು ಸಕಾಲಕ್ಕೆ ಜನರಿಗೆ ಯಾಕೆ ಸಿಗುತ್ತಿಲ್ಲ?…

Read More

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. https://ainlivenews.com/confusion-over-metro-ticket-price-hike-cm-siddaramaiahs-response-was-this/ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವುದರಿಂದ ಹಿನ್ನೆಲೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ನಾಳೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಈ ಕೆಳಕಂಡ ಭಾಗಗಳಲ್ಲಿ ಕರೆಂಟ್‌ ಕಟ್ಟಾಗಲಿದ್ದು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಪ್ರಕಟಣೆಯಲ್ಲಿ ಬೆಸ್ಕಾಂ ಮನವಿ ಮಾಡಿದೆ. ಮಂಜುನಾಥ ನಗರ, ಶಿವನಗರ, ಗಾಯತ್ರಿ ನಗರ, ಪ್ರಕಾಶನಗರ, ಎಲ್.ಎನ್ ಪುರ, ಸುಬ್ರಂಮಣ್ಯನಗರ, ವಿಜಯನಗರ, ರಾಜಾಜಿನಗರ 2ನೆ ಬ್ಲಾಕ್ ಮತ್ತು 6ನೆ ಬ್ಲಾಕ್, ಅಗ್ರಹಾರ, ದಾಸರಹಳ್ಳಿ, ಇಂದಿರಾನಗರ, ಶಂಕರಮಠ, ಬ್ರೀಗೆಡ್ ಅಪಾರ್ಟ್‌ಮೆಂಟ್, ಮಾಗಡಿ ರಸ್ತೆ 1ನೇ ಕ್ರಾಸ್‌ನಿಂದ 8ನೇ ಕ್ರಾಸ್, ಮಾಗಡಿ ರಸ್ತೆ 9ನೇ ಕ್ರಾಸ್, ಮಾಗಡಿ ರಸ್ತೆ 10ನೇ ಕ್ರಾಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ. ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅಡ್ದೇವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಚೆಲ್ಲಹಳ್ಳಿ,…

Read More

ಮೈಸೂರು:- ನಗರದ ವಿಶ್ವೇಶ್ವರಯ್ಯ ನಗರದ ಅಪಾರ್ಟ್‍ಮೆಂಟ್‍ನಲ್ಲಿ ಒಂದೇ ಕುಟುಂಬದ ನಾಲ್ವರ ಶವ ಪತ್ತೆಯಾಗಿರುವ ಆಘಾತಕಾರಿ ಘಟನೆ ಜರುಗಿದೆ. https://ainlivenews.com/serial-accident-on-the-bengaluru-mangalore-highway-7-cars-damaged/ ಚೇತನ್ (45), ರೂಪಾಲಿ (43), ಸೇರಿ ಇಬ್ಬರು ಮಕ್ಕಳು ಮೃತರು. ಹೆಂಡ್ತಿ, ಮಕ್ಕಳಿಗೆ ವಿಷ ನೀಡಿ ಗಂಡ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಚೇತನ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಉಳಿದವರ ಮೃತದೇಹಗಳು ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾಗಿವೆ. ಚೇತನ್ ವಿಷ ನೀಡಿ ಮನೆಯವರನ್ನು ಸಾಯಿಸಿ, ಬಳಿಕ ತಾನು ನೇಣು ಬಿಗಿದುಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ಕಮಿಷನರ್ ಸೀಮಾ ಲಾಟ್ಕರ್ ಹಾಗೂ ಡಿಸಿಪಿ ಜಾನ್ಹವಿ, ವಿದ್ಯಾರಣ್ಯಪುರಂ ಇನ್ಸ್‌ಪೆಕ್ಟರ್ ಮೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಹಾಸನ:- ಸರಣಿ ಅಪಘಾತದಲ್ಲಿ 7 ಕಾರುಗಳು ಜಖಂಗೊಂಡ ಘಟನೆ ಬೆಂಗಳೂರು – ಮಂಗಳೂರು ಹೈವೇಯಲ್ಲಿ ಭಾನುವಾರ ರಾತ್ರಿ ಜರುಗಿದೆ. https://ainlivenews.com/3-year-old-child-dies-after-being-shot-by-13-year-old-boy-thinking-it-was-a-toy-gun/ ಹೊಸದಾಗಿ ಆರಂಭಗೊಂಡ ಚೋಲಗೆರೆ ಟೋಲ್‌ ಬಳಿ ಸಾಲುಗಟ್ಟಿ ವಾಹನಗಳು ನಿಂತಿದ್ದವು. ಈ ವೇಳೆ ಅತಿ ವೇಗವಾಗಿ ಬಂದ ಕಾರೊಂದು ಮತ್ತೊಂದು ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಮುಂದಿದ್ದ 7 ಕಾರುಗಳು ಜಖಂಗೊಂಡಿವೆ. ವೀಕೆಂಡ್ ಹಿನ್ನಲೆಯಲ್ಲಿ ಹೈವೆಯಲ್ಲಿ ವಾಹನಗಳ ಸಂಚಾರ ಹೆಚ್ಚಿದ್ದು, ಸರಣಿ ಅಪಘಾತದಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪೊಲೀಸರು ಜಖಂಗೊಂಡ ವಾಹನವನ್ನು ತೆರವುಗೊಳಿಸಿ, ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Read More