ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ. ವೈ. ವಿಜಯೇಂದ್ರ ನೂತನ ಆಯ್ಕೆ ಬೆನ್ನೆಲ್ಲೆ ಬಿಜೆಪಿ ಕಚೇರಿಗೆ ಸುಣ್ಣ ಬಣ್ಣ ಬಳಿಯುವ ಕಾರ್ಯ ನಡೆಯುತ್ತಿದೆ. ಮಲ್ಲೇಶ್ವರಂನ ಜಗನ್ನಾಥ ಭವನಕ್ಕೆ ನಡೆಯುತ್ತಿರುವ ಸುಣ್ಣ ಬಣ್ಣದ ಕಾರ್ಯ ನೂತನ ಅಧ್ಯಕ್ಷರು ಕಚೇರಿಗೆ ಆಗಮಿಸುವ ಮುನ್ನ ಸುಣ್ಣ ಬಣ್ಣದೊಂದಿಗೆ ಕಚೇರಿ ಸಿಂಗಾರ ಗೊಳಿಸುವ ಕಾರ್ಯ ನಡೆಯುತ್ತಿದೆ. ನವೆಂಬರ್ 15ರಂದು ಪಕ್ಷದ ಕಚೇರಿಗೆ ಭೇಟಿ ನೀಡ್ತಿರುವ ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಅಂದೇ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರ ಮಾಡಲಿದ್ದಾರೆ.
Author: AIN Author
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಪ್ರತಿವರ್ಷದಂತೆ ಈ ವರ್ಷವೂ ದೀಪಾವಳಿಯನ್ನು (Deepavali) ಸೈನಿಕರೊಂದಿಗೆ (Soldiers) ಆಚರಿಸಲು ಚೀನಾ (China) ಗಡಿಗೆ ಹೊಂದಿಕೊಂಡಿರುವ ಹಿಮಾಚಲ ಪ್ರದೇಶದ (Himachal Pradesh) ಲೆಪ್ಚಾಗೆ (Lepcha) ತೆರಳಿದ್ದಾರೆ. ಭಾನುವಾರ ಬೆಳಗ್ಗೆ ದೂರದ ಗ್ರಾಮವನ್ನು ತಲುಪಿದ ಪ್ರಧಾನಿ ಮೋದಿ, ನಮ್ಮ ವೀರ ಭದ್ರತಾ ಪಡೆಗಳೊಂದಿಗೆ ದೀಪಾವಳಿಯನ್ನು ಆಚರಿಸಲು ಹಿಮಾಚಲ ಪ್ರದೇಶದ ಲೆಪ್ಚಾವನ್ನು ತಲುಪಿದ್ದೇನೆ ಎಂದು ಎಕ್ಸ್‌ನಲ್ಲಿ (X) ಬರೆದುಕೊಂಡಿದ್ದಾರೆ. ಇದಕ್ಕೂ ಮೊದಲು ಪ್ರಧಾನಿ ಮೋದಿ, ದೇಶದ ಜನರಿಗೆ ಒಳ್ಳೆಯ ಆರೋಗ್ಯ ಲಭಿಸಲಿ ಎಂದು ದೀಪಾವಳಿಯ ಶುಭಾಶಯಗಳನ್ನು ಕೋರಿದ್ದಾರೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ಈ ವಿಶೇಷ ಹಬ್ಬವು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಒಳ್ಳೆಯ ಆರೋಗ್ಯವನ್ನು ತರಲಿ ಎಂದು ಟ್ವೀಟ್ ಮಾಡುವ ಮೂಲಕ ಜನತೆಗೆ ದೀಪಾವಳಿಯ ಸಂದೇಶವನ್ನು ಸಾರಿದ್ದಾರೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಗಡಿ ಕಾಯುವ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸುವ ಸಂಪ್ರದಾಯವನ್ನು ಹಿಂದಿನಿಂದಲೂ ಹೊಂದಿದ್ದಾರೆ. 2014ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ, ಅವರು ಸಶಸ್ತ್ರ…
ಬೆಳಗಾವಿ: ಪ್ರೀತಿಸಲು ಒಪ್ಪದ ಯುವತಿಯ ಫೋಟೋವನ್ನು ನಗ್ನ ಚಿತ್ರವೊಂದಕ್ಕೆ ಜೋಡಿಸಿ ಎಡಿಟ್ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ಆರೋಪಿಯನ್ನು ಮಂಥನ್ ಪಾಟೀಲ್ (22) ಎಂದು ಗುರುತಿಸಲಾಗಿದೆ. ಆರೋಪಿ ಖಾನಾಪುರದ ಕಾಲೇಜಿನ ವಿದ್ಯಾರ್ಥಿನಿ ಒಬ್ಬಳನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆಕೆ ಒಪ್ಪದಿದ್ದಾಗ ಆಕೆಯ ಫೋಟೋವನ್ನು ನಗ್ನ ಚಿತ್ರದ ಜೊತೆ ಸೇರಿಸಿ ಎಡಿಟ್ ಮಾಡಿ ಕಿರುಕುಳ ಕೊಟ್ಟಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೆ ಆಕೆಯ ಮೂವರು ಸ್ನೇಹಿತೆಯರ ಫೋಟೋ ಬಳಸಿ ಇದೇ ರೀತಿ ಬ್ಲಾಕ್‍ಮೇಲ್ ಮಾಡಿದ್ದಾನೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ಅಲ್ಲಿ ಅಪ್ಲೋಡ್ ಮಾಡಿದ್ದಾನೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಆರೋಪಿ ಬೆಂಗಳೂರಿನಲ್ಲಿ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಡೀಪ್ ಫೇಕ್ ಆಪ್ ಮಾದರಿಯ ಮತ್ತೊಂದು ಆಪ್‍ನಲ್ಲಿ ಫೋಟೋ ಎಡಿಟ್ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಯುವತಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ದೂರಿನ ಅನ್ವಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ ಡುಪ್ಲಿಕೇಟ್ ಮುಖ್ಯಮಂತ್ರಿ ಇದ್ದಾರೆ. ತೆಲಂಗಾಣದಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿ ನಗೆಪಾಟಲಿಗೀಡಾಗಿದ್ದಾರೆ. ರಾಜ್ಯದ ಜನರಿಗೆ ಗ್ಯಾರಂಟಿ ಹೆಸರಿನಲ್ಲಿ ಕಿವಿಗೆ ಹೂವು ಮುಡಿಸಿದ್ದಾರೆ. ತೆಲಂಗಾಣದಲ್ಲಿ 2 ಲಕ್ಷ ಸರ್ಕಾರಿ ಹುದ್ದೆ ಭರ್ತಿ ಮಾಡೋದಾಗಿ ಹೇಳಿದ್ದಾರೆ. ಕರ್ನಾಟಕದಲ್ಲೇ 2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳು ಖಾಲಿ ಇವೆ. ಮೊದಲು ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿ. ತೆಲಂಗಾಣದಲ್ಲಿ ಹೋಗಿ ಮತದಾರರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ಮಾಡಿದರು. https://ainlivenews.com/the-price-hike-of-flowers-and-fruits-is-a-shock-for-those-who-are-celebrating-the-festival/ ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ 10 ಲಕ್ಷ ಮಹಿಳೆಯರಿಗೆ ಸಿಕ್ಕಿಲ್ಲ. ರಾಜ್ಯದಲ್ಲೇ ಲಕ್ಷಾಂತರ ಫಲಾನುಭವಿಗಳಿಗೆ ಹಣ ತಲುಪಿಲ್ಲ. ಈಗ ತೆಲಂಗಾಣದಲ್ಲಿ 4 ಸಾವಿರ ಹಣ ನೀಡುತ್ತೇವೆ ಎನ್ನುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು. ಕಾಂಗ್ರೆಸ್ ಹೈಕಮಾಂಡ್ ಸಿಎಂ, ಡಿಸಿಎಂ ಹಾಗೂ ಮಂತ್ರಿಗಳಿಗೆ ಟಾರ್ಗೆಟ್ ಕೊಟ್ಟಿದ್ದಾರೆ. ಯಾರು ಹೆಚ್ಚಿಗೆ ಹಣ ಕೊಡುತ್ತಾರೆ ಅವರು ಮಂತ್ರಿ…
ಬೆಂಗಳೂರು: ಕೆ.ಆರ್.ಮಾರ್ಕೆಟ್ ನಲ್ಲಿ ಫುಲ್ ಜನವೋ ಜನದೀಪಾವಳಿ ಹಬ್ಬದ ವಸ್ತುಗಳ ಖರೀದಿಗೆ ಮುಗಿಬಿದ್ದ ಜನರು ದೀಪಾವಳಿ ಹಬ್ಬಕ್ಕೂ ತಟ್ಟಿದ ಬೆಲೆ ಏರಿಕೆ ಬಿಸಿ ಹಬ್ಬದ ಸಂಭ್ರಮದಲ್ಲಿದ್ದವರಿಗೆ ಹೂ-ಹಣ್ಣಿನ ದರ ಏರಿಕೆ ಶಾಕ್ ಪ್ರತೀ ಬಾರಿಯಂತೆ ಈ ಬಾರಿಯ ದೀಪಾವಳಿ ಹಬ್ಬಕ್ಕೂ ಕಡಿಮೆ ಆಗದ ಅಗತ್ಯ ವಸ್ತುಗಳ ಬೆಲೆ https://ainlivenews.com/background-of-diwali-festival-heavy-business-in-kr-market/ ಯಾವ ಯಾವ ಹೂ ಬೆಲೆ ಹೇಗಿದೆ..!? ಮಲ್ಲಿಗೆ-ಕೆಜಿಗೆ 800 ರಿಂದ 1000 ರೂ. ಸೇವಂತಿಗೆ- 300 ರಿಂದ 500 ರೂ. ಗುಲಾಬಿ-160 ರಿಂದ 200 ರೂ. ಕನಕಾಂಬರ-800 ದಿಂದ 1000 ರೂ. ಮಳ್ಳೆ ಹೂವು-800 ರಿಂದ 1000 ರೂ. ಬಟನ್ಸ್ ಪ್ರತೀ ಮಾರು – 120-140 ರೂ ರೆಡ್ ರೋಸ್ ಒಂದು ಗುಚ್ಚ – 200 ರೂ ಹಣ್ಣುಗಳ ದರ ಬಟರ್ ಫ್ರೂಟ್- 350 ರಿಂದ 400 ರೂ ಸಣ್ಣ ಆಪಲ್ – 250 ರಿಂದ 300 ರೂ ಸೇಬು -150 ರಿಂದ 300ರೂ. ಕಿತ್ತಳೆ ಹಣ್ಣು- 80 ರಿಂದ 100…
ಬಳ್ಳಾರಿ: ಹಂಪಿ ವಿರೂಪಾಕ್ಷೇಶ್ವರ ದೇಗುಲ ಕಂಬಕ್ಕೆ ಡ್ರಿಲ್ ಹೊಡೆದು ಮೊಳೆ ಹೊಡೆದ ಹಿನ್ನೆಲೆ ಧಾರ್ಮಿಕ ದತ್ತಿ ಇಲಾಖೆ ವಿರುದ್ಧ ಪುರಾತತ್ವ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಯುನೆಸ್ಕೋ ವಿಶ್ವ ಪರಂಪರೆಯ ಐತಿಹಾಸಿಕ ತಾಣ, 7ನೇ ಶತಮಾನದ ಶಿವನ ದೇವಾಲಯವಾಗಿರುವ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ವಿರೂಪಾಕ್ಷ ದೇವಾಲಯದ ಕಂಬಕ್ಕೆ ಧಾರ್ಮಿಕ ದತ್ತಿ ಇಲಾಖೆ ಮೊಳೆ ಹೊಡೆದಿದೆ. ಈ ಸಂಬಂಧ ಪುರಾತತ್ವ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದ್ದು ಸ್ಮಾರಕಗಳಿಗೆ ಧಕ್ಕೆ ಆಗಿದೆ ಎಂದು ನೋಟಿಸ್ ಜಾರಿ ಮಾಡಿದೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ವಿರೂಪಾಕ್ಷೇಶ್ವರ ದೇಗುಲದ ಉತ್ತರ ದಿಕ್ಕಿನಲ್ಲಿ ಗೇಟ್ ಕೂರಿಸಲು ಧಾರ್ಮಿಕ ದತ್ತಿ ಇಲಾಖೆ ಮೊಳೆ ಹೊಡೆದಿದೆ. ದೇಗುಲಕ್ಕೆ ಭಕ್ತರು ದಕ್ಷಿಣ ಧ್ರುವದಿಂದ ಬಂದು ದರ್ಶನದ ಬಳಿಕ ಉತ್ತರ ಧ್ರುವದಿಂದ ಹೊರ ಹೋಗುತ್ತಾರೆ. ಭಕ್ತರು ಸರತಿ ಸಾಲಿನಲ್ಲಿ ಹೋಗಲು ತಂತಿ ಬೇಲಿ ನಿರ್ಮಿಸಲು ಮೊಳೆ ಹೊಡೆಯಲಾಗಿದೆ. ಆದರೆ ಮೊಳೆ ಹೊಡೆಯುವ ವೇಳೆ ಪುರಾತತ್ವ ಇಲಾಖೆಯಿಂದ ಅನುಮತಿ ಪಡೆದಿಲ್ಲ. ಅನುಮತಿ ಪಡೆಯದೇ ಮೊಳೆ ಹೊಡೆದಿದ್ದಕ್ಕೆ ಪುರಾತತ್ವ ಇಲಾಖೆ ಗರಂ ಆಗಿದೆ.…
ದೀಪಾವಳಿ ಹಬ್ಬದ (Deepavali Festival) ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ದೀಪ ಬೆಳಗುವ ಮೂಲಕ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ದೀಪಾವಳಿ ಹಬ್ಬದ ಆಚರಣೆ ಮಾಡಲಾಗುತ್ತಿದೆ. ಹೀಗಿರುವಾಗ ನಿಮ್ಮ ಬಾಳಿನಲ್ಲಿ ಕತ್ತಲೆ ಕಳೆದು ಬೆಳಕು ಮೂಡಲಿ ಎಂದು ವಿಶೇಷವಾಗಿ ರಾಧಿಕಾ ಪಂಡಿತ್ (Radhika Pandit) ವಿಶ್ ಮಾಡಿದ್ದಾರೆ. ರಾಧಿಕಾ ಯಶ್ (Radhika Yash) ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಕುಟುಂಬ ಮತ್ತು ಸ್ನೇಹಿತರ ಜೊತೆಗೂಡಿ ರಾಧಿಕಾ ಪಂಡಿತ್ ದೀಪಾವಳಿ ಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ. ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು, ನಿಮ್ಮ ಬಾಳಿನಲ್ಲಿ ಕತ್ತಲೇ ಕಳೆದು ಬೆಳಕು ಮೂಡಲಿ ಎಂದು ಪ್ರೀತಿಯಿಂದ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ನಟಿ ಶುಭಕೋರಿದ್ದಾರೆ. ಇನ್ನೂ ಚಂದವನದ ಸಿಂಡ್ರೆಲ್ಲಾ ರಾಧಿಕಾ, ಮತ್ತೆ ನಟನೆಗೆ ಮರಳಲಿ ಎಂದು ಕನ್ನಡಿಗರು ಎದುರು ನೋಡ್ತಿದ್ದಾರೆ. ಯಶ್ 19 (Yash 19) ಬಗ್ಗೆ ಅದೆಷ್ಟು ಫ್ಯಾನ್ಸ್‌ಗೆ ಕುತೂಹಲ ಇದ್ಯೋ, ಹಾಗೆಯೇ ರಾಧಿಕಾ ಮುಂದಿನ ಸಿನಿಮಾ (Films) ಬಗ್ಗೆ ಅಪ್‌ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾಯ್ತಿದ್ದಾರೆ.…
ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗಾಗಿ (Grammy Award) ಅರ್ಜಿ ಆಹ್ವಾನಿಸಲಾಗಿದೆ. ಈ ಬಾರಿಯೂ ಭಾರತದಿಂದ ಕೆಲ ವಿಡಿಯೋಗಳು ಪ್ರಶಸ್ತಿಗಾಗಿ ಕಳುಹಿಸಲಾಗಿತ್ತು. ಅದರಲ್ಲಿ ಪ್ರಧಾನಿ ನರೇಂದ್ರ ಮೊದಿ (Narendra Modi) ಅವರು ಕಾಣಿಸಿಕೊಂಡಿದ್ದ ಸಿರಿಧಾನ್ಯಗಳ ಮೇಲಿನ ಹಾಡನ್ನು ಗ್ರ್ಯಾಮಿ ಪ್ರಶಸ್ತಿಗಾಗಿ ನಾಮನಿರ್ದೇಶನಗೊಂಡಿದೆ. ಪೌಷ್ಠಿಕ ಆಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರದ ಪ್ರಯತ್ನಗಳನ್ನು ಈ ಹಾಡಿನಲ್ಲಿ ಬಿಂಬಿಸಲಾಗಿತ್ತು. ಅಬಂಡನ್ಸ್ ಆಫ್ ಮಿಲೆಟ್ಸ್ಹೆ (Abundance of Millets) ಸರಿನಲ್ಲಿ ಈ ಹಾಡನ್ನು ರಿಲೀಸ್ ಮಾಡಲಾಗಿತ್ತು. ಈಗಾಗಲೇ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದಿರುವ ಗಾಯಕ ಫಾಲು ಮತ್ತು ಅವರ ಪತಿ ಗೌರವ್ ಶಾ ಈ ಹಾಡಿಗೆ ದನಿಯಾಗಿದ್ದರು ಈ ಹಾಡಿನ ವಿಶೇಷ ಅಂದರೆ, ಮೋದಿ ಅವರು ಕೂಡ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಗಾಯಕಿ ಫಲ್ಗುಣಿ ಕಳೆದ ವರ್ಷ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದ ಸಂದರ್ಭದಲ್ಲಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಈ ಸಮಯದಲ್ಲಿ ಈ ಹಾಡಿನ ಪರಿಕಲ್ಪನೆ ಮೂಡಿ ಬಂದಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯು ವಿಭಿನ್ನ ರೀತಿಯ ಸದಭಿರುಚಿಯುಳ್ಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಪ್ರಸ್ತುತ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಹೊಸ ಕಥೆ ಗೌರಿಶಂಕರ. ಕರ್ನಾಟಕದ ಸುಂದರ ತಾಣ ಹಾಸನಾಂಬೆಯ ತವರೂರಾದ ಹಾಸನದಲ್ಲಿ ಈ ಕತೆಯು ಕೇಂದ್ರೀಕೃತವಾಗಿರುತ್ತದೆ. ಈ ಧಾರಾವಾಹಿಯ ನಾಯಕಿ ‘ಗೌರಿ’ ಸಮಾಜದಲ್ಲಿ ಘನತೆ ಗೌರವವನ್ನು ಹೊಂದಿರುವ ಪರಿವಾರದಲ್ಲಿ ಬೆಳೆದಿರುವ ಈಕೆ ಯಾರನ್ನೂ ನೋಯಿಸದ ಮುಗ್ದ ಮನಸ್ಸಿನ ಕಣ್ಮಣಿ. ಆದರೆ ಸಮಯ ಬಂದರೆ ತನ್ನ ನಿಲುವನ್ನು ಸ್ಪಷ್ಟವಾಗಿ ಮಾತನಾಡಬಲ್ಲ ಧೈರ್ಯವಂತೆ ಕೂಡ. ಜೊತೆಗೆ ತಂದೆಯಂತೆ ತಾನು ಪ್ರೊಫೆಸರ್ ಆಗಬೇಕೆಂಬ ಕನಸನ್ನು ಹೊತ್ತಿರೋಳು. ಇನ್ನು ಕಥಾ ನಾಯಕ ‘ಶಂಕರ’ ಅಲಿಯಾಸ್ ಜೋಗಿ, ಹೆಣ್ಣು ಮಕ್ಳು ಅಂದ್ರೆ ನಾಲ್ಕುಗೋಡೆ ಮಧ್ಯೆ ಇರ್ಬೇಕು ಅಂತ ನಂಬಿರೋ ಮನೆತನದಲ್ಲಿ ಬೆಳೆದವ. ಈತ ನೋಡೋಕೆ ರಫ್ ಆದ್ರೆ ಮಗುವಿನಂತ ಮನಸ್ಸು. ತನಗನಿಸಿದ್ದನ್ನು ಮಾಡಲೇಬೇಕು ಅನ್ನೋ ಹಠವಾದಿ. ಒಂದು ಕಡೆ ಶಾಂತಿ, ಸಹನೆ, ತಾಳ್ಮೆಯಿಂದ ಕೂಡಿದ ಗೌರಿ ಪರಿವಾರ.…
ಬೆಂಗಳೂರು: ಪಟಾಕಿ ಮಾರಾಟದ ವಿಚಾರವಾಗಿ ಕೋರ್ಟ್ಗೆ ಮೊರೆ ಹೋಗಿದ್ದ ಪಟಾಕಿ ಮಾಲೀಕರಿಗೆ ಇದೆ ತಿಂಗಳ 17ನೇ ತಾರೀಖಿನವರೆಗೂ ಪಟಾಕಿ ಮಾರಾಟಕ್ಕೆ ಕರ್ನಾಟಕದ ಹೈಕೋರ್ಟ್ ಅನುಮತಿ ನೀಡಿದೆ ಹೀಗಾಗಿ ಇಂದು ಅತ್ತಿಬೆಲೆಯಿಂದ ಚಂದಾಪುರದವರೆಗೆ ಪಟಾಕಿ ಅಂಗಡಿಗಳು ತಲೆಹತ್ತಿದೆ.. ಇನ್ನು ಹೈಕೋರ್ಟ್ 21 ಜನ ಪಟಾಕಿ ಮಾರಾಟಗಾರರು ಮಾರಾಟದ ವಿಚಾರವಾಗಿ ಕೋರ್ಟ್ಗೆ ಮೊರೆ ಹೋಗಿದ್ದರು.. ಹೀಗಾಗಿ ನೆನ್ನೆ ರಾತ್ರಿ ಹೈಕೋರ್ಟ್ ಪಟಾಕಿ ಮಳಿಗೆಗಳಿಗೆ ಅನುಮತಿಯನ್ನು ನೀಡಿದೆ. ಇನ್ನು ಪಟಾಕಿ ಅಂಗಡಿ ಮಾರಾಟಕ್ಕೆ ಅನುಮತಿ ಸಿಕ್ಕಿದ್ದ ಬೆನ್ನಲ್ಲೇ ಪಟಾಕಿಯನ್ನು ಖರೀದಿ ಮಾಡಲು ಗ್ರಾಹಕರು ಮುಗಿಬಿದ್ದಿದ್ದಾರೆ.. ಇನ್ನು ಪಟಾಕಿ ಖರೀದಿಗಾಗಿ ಹೆದ್ದಾರಿಯಲ್ಲಿ ಟಾಪಿಕ್ ಜಾಮ್ ಉಂಟಾಗಿತ್ತು ಅಲ್ಲದೆ ಟ್ರಾಫಿಕ್ ಜಾಮ್ ಆಗಿ ಜನರು ಪರದಾಡುವಂತೆ ಪರಿಸ್ಥಿತಿ ಎದರಗಿತ್ತು ಇನ್ನು ಈ ಹಿಂದೆ ಸೆಪ್ಟೆಂಬರ್ 7ನೇ ತಾರೀಖಿನಂದು ಅತ್ತಿಬೆಲೆ ಪಟಾಕಿ ಅಂಗಡಿಲಿ ಅಗ್ನಿ ದುರಂತದಿಂದ 17 ಜನ ಮೃತಪಟ್ಟಿದ್ದು ಸರ್ಕಾರ ಅನುಮತಿಯನ್ನು ನಿರಾಕರಣೆ ಮಾಡಿದ್ದು ದೀಪಾವಳಿ ಅಂಗವಾಗಿ ಗ್ರೀನ್ ಪಟಾಕಿ ಹೊಡೆಯಲು ಗ್ರೀನ್ ಸಿಗ್ನಲ್ ನ್ನು ಕೊಟ್ಟಿತ್ತು ಹೀಗಾಗಿ…