ಬಳ್ಳಾರಿ:- ರಾಜಕೀಯದಲ್ಲಿ ಯಾರಿಗೂ ಅಧಿಕಾರ ಶಾಶ್ವತವಲ್ಲ, ಸೋಲು ಗೆಲುವು ಸಾಮಾನ್ಯ ಎಂದು ಮಾಜಿ ಸಚಿವ ಶ್ರೀ ರಾಮುಲು ಹೇಳಿದ್ದಾರೆ.. ಮಗಳ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಕೌಲ್ಬಜಾರ್ ಗೆ ಬಂದಂತ ಸಮಯದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು, ಅಭಿಮಾನಿಗಳು ಧೃತಿಗೇಡಬೇಡಿ, ರಾಜಕೀಯದಲ್ಲಿ ಸೋಲು- ಗೆಲ್ಲುವು ಸಾಮಾನ್ಯ , ಕಾರ್ಯಕರ್ತರಿಗೆ ಯಾವುದೇ ತೊಂದರೆಯಾದರೆ ಸಹಿಸುವ ಮಾತೆ ಇಲ್ಲ, ರಾಜಕೀಯ ನಾಯಕರಿಗೆ ಜೀವಾಳವೇ ಕಾರ್ಯಕರ್ತರು ಮತ್ತು ಅಭಿಮಾನಿಗಳು,ಅವರಿಗೆ ತೊಂದರೆಯಾದರೆ ಮೌನವಹಿಸುವ ಜಾಯಮಾನ ನನ್ನದಲ್ಲ, ಹಿಂದಿನ ಅವರ ಅವಧಿಯ ರಾಜಕೀಯ ನೆನೆದು ರಾಮುಲು ಭಾವುಕರಾಗಿದ್ದಾರೆ ರಾಜಕೀಯದಲ್ಲಿ ಯಾರಿಗೂ ಅಧಿಕಾರ ಶಾಶ್ವತವಲ್ಲ ಎಂದು ಮಗಳ ಮದುವೆಯ ಆಮಂತ್ರಣ ಪತ್ರಿಕೆ ನೀಡಲು ಕೌಲ್ಬಜಾರ್ ಗೆ ಬಂದಂತ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ. ನೇರದಿರುವ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿತೈಸಿಗಳನ್ನು ಉದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ. ಇನ್ನೂ ಮಾಜಿ ಸಚಿವ ಬಿ.ಶ್ರೀರಾಮುಲು ಅವರಿಂದ ಅಭಯದ ಮಾತುಗಳು ಕೇಳಿ ಕಾರ್ಯಕರ್ತರು ಸಂತಸಗೊಂಡರು
Author: AIN Author
ಹುಬ್ಬಳ್ಳಿ: ಪೊಲೀಸರು ತಪ್ಪು ಮಾಡಿದ್ದರೆ ಬುದ್ದಿ ಹೇಳಿ ಬಹಿರಂಗವಾಗಿ ಹೀಗೆ ಮಾಡಿದ್ದು ಸರಿನಾ ಎಂದು ಎಸ್ ಎಸ್ ಕೆ ಸಮಾಜದ ಯುವ ಮುಖಂಡ ರಾಜು ಹನಮಂತಸಾ ನಾಯಕವಾಡಿ ಪ್ರಶ್ನೆ ಮಾಡಿದ್ದಾರೆ . ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ್ದು, ಪ್ರಕರಣವೊಂದರಲ್ಲಿ ಧಾರವಾಡದ ಉಪನಗರ ಪೊಲೀಸ್ ಠಾಣೆ ಇನಸ್ಪೇಕ್ಟರ್ ಕಾಡದೇವರ ಅವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯವರು ತರಾಟೆಗೆ ತಗೆದುಕೊಂಡಿದ್ದಾರೆ.ಪೊಲೀಸ್ ಅಧಿಕಾರಿಗಳನ್ನು ತರಾಟಗೆ ತಗೆದುಕೊಂಡಿರುವ ವಿಡಿಯೋ ಗಳು ಸಾಮಾಜಿಕ ಜಾಲ ತಾಣಗಳಲ್ಲಿ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು ಕೇಂದ್ರ ಸಚಿವರ ಈ ಒಂದು ನಡೆಯನ್ನು ಅವರು ಖಂಡಿಸಿದ್ದಾರೆ.ಸರಳ ಸಜ್ಜನಿಕೆಗೆ ತಾವೊಬ್ಬರು ಹೆಸರಾಗಿದ್ದು ಪೊಲೀಸರು ತಪ್ಪು ಮಾಡಿದ್ದರೆ ಸಮಸ್ಯೆಗಳನ್ನು ಸಾರ್ವಜನಿಕರು ನಿಮ್ಮ ಮುಂದೆ ತಗೆದುಕೊಂಡು ಬಂದಿದ್ದರೆ ಪೊಲೀಸ್ ಅಧಿಕಾರಿಗಳನ್ನು ಕರೆಯಿಸಿ ಅವರಿಗೆ ಬುದ್ದಿ ಹೇಳಿ ಆದರೆ ಹೀಗೆ ಬಹಿರಂಗವಾಗಿ ಮಾಡಿದ್ದು ಸರಿನಾ ಎಂದು ಪ್ರಶ್ನೆಯನ್ನು ಮಾಡಿದ್ದಾರೆ. ಹೀಗಾಗಿ ಈ ಕೂಡಲೇ ಆ ಒಂದು ಪೊಲೀಸ್ ಅಧಿಕಾರಿಯನ್ನು ಕರೆಯಿಸಿ ಆತ್ಮಸ್ಥೈರ್ಯವನ್ನು ತುಂಬಿ ಕ್ಷಮೆ ಕೇಳುವಂತೆ ಒತ್ತಾಯವನ್ನು ಮಾಡಿದ್ದಾರೆ.ಹೀಗೆ…
ದೀಪಾವಳಿ ಹಬ್ಬ ಬಂತು ಎಂದರೆ ಚಳಿಗಾಲವೂ ಆರಂಭವಾಯ್ತು ಎಂದರ್ಥ. ಈ ಸಂದರ್ಭದಲ್ಲಿ ಆರೋಗ್ಯವನ್ನು ರಕ್ಷಿಸಿಕೊಳ್ಳುವುದು ತುಂಬಾ ಮುಖ್ಯ. ತಣ್ಣಗಿನ ಈ ದಿನಗಳಲ್ಲಿ ಹೆಚ್ಚಾಗಿ ಒಣ ಹಣ್ಣುಗಳನ್ನು ಸೇವಿಸುವುದರಿಂದ ಚರ್ಮದ ಆರೋಗ್ಯ ಕಾಪಾಡಿಕೊಳ್ಳಬಹುದು. ನಾವು ಈ ವಿಶೇಷ ದಿನಕ್ಕೆ ವಾಲ್ನಟ್ ಬರ್ಫಿ ಮಾಡೋದು ಹೇಗೆಂದು ಹೇಳಿಕೊಡುತ್ತಿದ್ದೇವೆ. ಬೇಕಾಗುವ ಪದಾರ್ಥಗಳು: ಒರಟಾಗಿ ಪುಡಿ ಮಾಡಿದ ವಾಲ್ನಟ್ – 1 ಕಪ್ ಸಕ್ಕರೆ – 4 ಟೀಸ್ಪೂನ್ ಹಾಲಿನ ಪುಡಿ – 4 ಟೀಸ್ಪೂನ್ ಹಾಲು – 4 ಟೀಸ್ಪೂನ್ ಜಾಯಿಕಾಯಿ ಪುಡಿ – ಚಿಟಿಕೆ ತುಪ್ಪ – 4 ಟೀಸ್ಪೂನ್ ಮಾವಾ – ಕಾಲು ಕಪ್ ಬೇಕಾಗುವ ಪದಾರ್ಥಗಳು: * ಮೊದಲಿಗೆ ಮೈಕ್ರೊವೇವ್ ಸೇಫ್ ಬೌಲ್‌ನಲ್ಲಿ ಮಾವಾ ಮತ್ತು 2 ಟೀಸ್ಪೂನ್ ತುಪ್ಪವನ್ನು ಸೇರಿಸಿ ಮತ್ತು 1 ನಿಮಿಷ ಬಿಸಿ ಮಾಡಿ. * ಸಕ್ಕರೆ, ಹಾಲಿನ ಪುಡಿ, ಹಾಲು ಮತ್ತು ಜಾಯಿಕಾಯಿ ಪುಡಿ ಸೇರಿಸಿ ಪಕ್ಕಕ್ಕೆ ಇರಿಸಿ. * ಉಳಿದ ತುಪ್ಪವನ್ನು ವಾಲ್ನಟ್‌ಗೆ ಸೇರಿಸಿ…
ಖೇಣಿಗೆ ಇಟ್ಟಿದ್ದ ಅಡಿಕೆಯನ್ನ ಕಳ್ಳತನ ಮಾಡಿಕೊಂಡು ಹೋಗಿದ್ದ ಮೂವರು ಅಡಿಕೆ ಕಳ್ಳರನ್ನ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 12.50 ಲಕ್ಷ ಮೌಲ್ಯದ ಅಡಿಕೆ ಮತ್ತು ಒಂದು ಕಾರ್ ನ್ನ ಜಪ್ತಿ ಮಾಡಿದ್ದಾರೆ. ಕರೆಕಟ್ಟೆ ಗ್ರಾಮದ ಛತ್ರಪತಿ, ಹೊಳಲ್ಕೆರೆ ತಾಲೂಕಿನ ಕಾಳಘಟ್ಟ ಗ್ರಾಮದ ಧನಂಜಯ ನಾಯ್ಕ್ ಮತ್ತು ಗಿರೀಶ್ ಎಂಬುವರು ಬಂಧಿತರು. ಈ ಮೂವರು ವಡ್ನಾಳ ಗ್ರಾಮದ ಈಶ್ವರಪ್ಪ ಎಂಬುವರ ಅಡಿಕೆಯನ್ನ ಖೇಣಿಗೆ ಹಾಕಿದ್ದ ಸಂದರ್ಭದಲ್ಲಿ ಮೂವರು 6 ಕ್ವಿಂಟಲ್ ಅಡಿಕೆಯನ್ನ ಕಾರಿನಲ್ಲಿ ಹಾಕಿಕೊಂಡು ಪರಾರಿಯಾಗಿದ್ದರು. ಬಳಿಕ ಈಶ್ವರಪ್ಪ ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ ನೇತೃತ್ವದ ತಂಡ ಮೂವರು ಅಡಿಕೆ ಕಳ್ಳರನ್ನ ಬಂಧಿಸಿದೆ. ಮತ್ತೆ ವಿಚಾರಣೆ ನಡೆಸಿದಾಗ ಮೂವರ ವಿರುದ್ಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ 4 ಕೇಸ್ ಹಾಗೂ ಹೊಳೆಹಬ್ಬೂರು ಠಾಣೆಯಲ್ಲಿ 1 ಪ್ರಕರಣ ಇರುವುದು ಗೊತ್ತಾಗಿದೆ. ಒಟ್ಡು ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರಿಂದ 12.50 ಲಕ್ಷ…
ರೋಹಿತ್ ಶರ್ಮ ಬೌಲಿಂಗ್ ಸ್ಟೈಲ್ಗೆ ಪತ್ನಿ ಕ್ಲೀನ್ ಬೋಲ್ಡ್ ಆಗಿದ್ದು, ರಿತಿಕಾ ರಿಯಾಕ್ಷನ್ ಭಾರೀ ವೈರಲ್ ಆಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ 2 ವಿಶೇಷ ಕ್ಷಣಕ್ಕೆ ಸಾಕ್ಷಿಯಾಯಿತು. ಅವು ಯಾವುವೆಂದರೆ, ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಹಾಲಿ ನಾಯಕ ರೋಹಿತ್ ಶರ್ಮ ಬೌಲಿಂಗ್ ಮಾಡಿದ್ದು, ಅಲ್ಲದೆ, ಇಬ್ಬರೂ ಕೂಡ ಒಂದೊಂದು ವಿಕೆಟ್ ಪಡೆದಿದ್ದು. ಕೊಹ್ಲಿ 9 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ನಲ್ಲಿ ವಿಕೆಟ್ ಪಡೆದರೆ, ರೋಹಿತ್ 4284 ದಿನಗಳ ಬಳಿಕ ಅಂದರೆ, 7 ವರ್ಷಕ್ಕೂ ಅಧಿಕ ಸಮಯದ ನಂತರ ಬೌಲಿಂಗ್ ಮಾಡಿದರು. ಅಲ್ಲದೆ, ವಿಕೆಟ್ ಕೂಡ ಪಡೆದರು. ರೋಹಿತ್ ಶರ್ಮ ಅವರು ಪಂದ್ಯದ ಎರಡನೇ ಇನಿಂಗ್ಸ್ನ 48ನೇ ಓವರ್ ಎಸೆದರು. ತಮ್ಮ 5ನೇ ಎಸೆತದಲ್ಲಿ ನೆದರ್ಲೆಂಡ್ಸ್ ಬ್ಯಾಟರ್ ತೇಜ ನಿಡಮನೂರು ವಿಕೆಟ್ ಪಡೆದರು. 54 ರನ್ ಬಾರಿಸಿದ್ದ ನಿಡಮನೂರು ಸಿಕ್ಸರ್ ಬಾರಿಸಲು ಯತ್ನಿಸಿ, ಮೊಹಮ್ಮದ್ ಶಮಿಗೆ ಕ್ಯಾಚ್ ನೀಡಿ, ಡಗೌಟ್ಗೆ ಮರಳಿದರು. ಈ…
ಬಳ್ಳಾರಿ:- ಗಣಿನಾಡು ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಹಿಡಿತದಲ್ಲಿದೆ. ಜಿಲ್ಲೆಯ ಐದೂ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇದೀಗ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಇದು ಕೈಗೆ ಪ್ರತಿಷ್ಠೆಯಾಗಿದೆ. ನ.28ರಂದು ಬಳ್ಳಾರಿ ಪಾಲಿಕೆ ಮೇಯರ್, ಉಪಮೇಯರ್ ಚುನಾವಣೆ ನಡೆಯಲಿದೆ. ರಾಜ್ಯದ ಕಿರಿಯ ಮೇಯರ್ ಹೆಗ್ಗಳಿಕೆಗೆ ಪಾತ್ರವಾಗಿದ್ದ 23 ವರ್ಷದ ಡಿ.ತ್ರಿವೇಣಿ ಏಳು ತಿಂಗಳು ಆಡಳಿತ ನಡೆಸಿ, ನವೆಂಬರ್ 4ರಂದು ಮೇಯರ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನೂತನ ಮೇಯರ್, ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. ಮೇಯರ್ ಸ್ಥಾನ ಎಸ್ಸಿ ಸಮುದಾಯಕ್ಕೆ ಮೀಸಲಾಗಿದೆ. ಉಪಮೇಯರ್ ಸ್ಥಾನಕ್ಕೆ ಎಸ್ಟಿ (ಮಹಿಳೆ) ಮೀಸಲಾಗಿದೆ. ಪಾಲಿಕೆಯ 39 ವಾರ್ಡ್‌ಗಳ ಪೈಕಿ ಬಿಜೆಪಿಯ 13 ಸದಸ್ಯರಿದ್ದರೇ, ಕಾಂಗ್ರೆಸ್ 21 ಸದಸ್ಯರು ಮತ್ತು ಐವರು ಪಕ್ಷೇತರ ಸದಸ್ಯರಿದ್ದಾರೆ. ಈ ಐವರು ಪಕ್ಷೇತರರು ಈಗಾಗಲೇ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದೇ ನಂ 28 ಕ್ಕೆ ನಡೆಯುವ ಚುನಾವಣೆಯಲ್ಲಿಯು ಈ ಬಾರಿಯ ಕಾಂಗ್ರೇಸ್ ಮತ್ತೆ ತನ್ನ ಪಾರುಪತ್ಯವನ್ನು ಸಾಧಿಸುವುದು ಮೇಲ್ನೋಟಕ್ಕೆ ಸಬೀತಾಗಿದೆ.
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಹಾಗೂ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಷರಫ್ ನಾಲ್ಕು ವರ್ಷಗಳ ಹಿಂದೆ ತಮ್ಮ ಮರಣದಂಡನೆ ಶಿಕ್ಷೆ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು, ಅವರು ನಿಧನರಾಗಿ 9 ತಿಂಗಳ ಬಳಿಕ ವಿಚಾರಣೆ ನಡೆಸಲು ಅಲ್ಲಿನ ಸುಪ್ರೀಂಕೋರ್ಟ್ ನಿರ್ಧರಿಸಿದೆ. 2019ರ ದೇಶದ್ರೋಹ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯವು ಮುಷರಫ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈ ವರ್ಷದ ಫೆಬ್ರವರಿ 5ರಂದು ನಿಧನರಾದ ಮುಷರಫ್ ಅವರು ನಾಲ್ಕು ವರ್ಷಗಳ ಹಿಂದೆಯೇ ಗಲ್ಲು ಶಿಕ್ಷೆ ರದ್ದತಿಗೆ ಕೋರಿ ಅರ್ಜಿ ಸಲ್ಲಿಸಿದ್ದರು. “ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ನೇತೃತ್ವದ ನಾಲ್ವರು ಸದಸ್ಯರ ವಿಸ್ತೃತ ಪೀಠವು, ಈ ಹಿಂದೆ ಪ್ರರ್ವೇಜ್ ಮುಷರಫ್ ಅವರ ದೇಶದ್ರೋಹ ಪ್ರಕರಣದ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧದ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಲು ನಿರ್ಧರಿಸಿದೆ” ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಪರ್ವೇಜ್ ಮುಷರಫ್ ಅವರ ಅರ್ಜಿ ವಿಚಾರಣೆ ನಿರರ್ಥಕ ಎಂಬ ಲಾಹೋರ್…
‘ಕಿಸ್’ ಬೆಡಗಿ ಶ್ರೀಲೀಲಾ (Sreeleela) ಈಗ ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗೆ ರಿಲೀಸ್ ಆದ ‘ಸ್ಕಂದ’ ಮತ್ತು ‘ಭಗವಂತ ಕೇಸರಿ’ ಚಿತ್ರ ಹಿಟ್ ಆದ್ಮೇಲೆ ತಮ್ಮ ಸಂಭಾವನೆಯನ್ನ ಶ್ರೀಲೀಲಾ ಏರಿಸಿಕೊಂಡಿದ್ದಾರೆ. ‘ಧಮಾಕ’ (Dhamaka) ಬೆಡಗಿ ಟಾಲಿವುಡ್‌ನಲ್ಲಿ ಬಂಗಾರದ ಬೆಳೆ ಬೆಳೆಯುತ್ತಿದ್ದಾರೆ. ಮುಟ್ಟಿದೆಲ್ಲಾ ಚಿನ್ನ ಆಗ್ತಿದೆ. ಸಾಲು ಸಾಲು ಸಿನಿಮಾಗಳು ಆಫರ್‌ಗಳು ಶ್ರೀಲೀಲಾರನ್ನ ಅರಸಿ ಬರುತ್ತಿವೆ. ಹೀಗಿರುವಾಗ ನಟಿಗೆ ಡಿಮ್ಯಾಂಡ್ ಜಾಸ್ತಿ ಆಗುತ್ತಿದ್ದಂತೆ ಸಂಭಾವನೆ ಏರಿಕೆ ಮಾಡಿದ್ದಾರೆ. ಕೆರಿಯರ್ ಆರಂಭದಲ್ಲಿಯೇ ದುಬಾರಿ ನಟಿಯಾಗಿ ಸದ್ದು ಮಾಡ್ತಿದ್ದಾರೆ. ಒಂದು ಸಿನಿಮಾಗೆ 3.5 ಕೋಟಿ ಅಥವಾ 3 ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಳ್ಳುತ್ತಿದ್ದ ನಟಿ ಈಗ 4 ಕೋಟಿ ರೂಪಾಯಿಗೆ ಏರಿಕೆ ಮಾಡಿದ್ದಾರೆ. ಸದ್ಯ ಸಿನಿಮಾ ಜೊತೆಗೆ ಶ್ರೀಲೀಲಾ ಸಂಭಾವನೆ ಮ್ಯಾಟರ್ ಸಿನಿಪಂಡಿತರ ಚರ್ಚೆಗೆ ಗ್ರಾಸವಾಗಿದೆ. ‘ಆದಿಕೇಶವ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಪವನ್ ಕಲ್ಯಾಣ್, ಅಲ್ಲು ಅರ್ಜುನ್, ನಿತಿನ್ ಜೊತೆಗಿನ ಸಿನಿಮಾ ಕೆಲಸಗಳು ನಡೆಯುತ್ತಿದೆ. ಸದ್ಯದಲ್ಲೇ ರಿಲೀಸ್ ಬಗ್ಗೆ ಹೆಚ್ಚಿನ ಅಪ್‌ಡೇಟ್ ಸಿಗಲಿದೆ.
ಬೆಂಗಳೂರು: ನಗರದ ಮುಖ್ಯರಸ್ತೆಯ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಎಂಟಿಸಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕನ ಜಾಗರೂಕತೆಯಿಂದ ಭಾರಿ ಅಪಾಯದ ಘಟನೆಯೊಂದು ತಪ್ಪಿದಂತಾಗಿದೆ. ದಾಸನಪುರ ಡಿಪೋದಿಂದ ನೆಲಮಂಗಲ ಪಟ್ಟಣಕ್ಕೆ ಆಗಮಿಸುತ್ತಿದ್ದ ಬಿಎಂಟಿಸಿ ಬಸ್ ನಗರದ ಜೆಪಿ ಆಸ್ಪತ್ರೆ ಸಮೀಪ ಶಾರ್ಟ್ ಸಕ್ರ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಇನ್ನೂ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಜನರು ಭಯಗೊಂಡಿದ್ದಾರೆ. ಬಸ್ ನಲ್ಲಿದ್ದ ಜನರು ಕೂಗಾಡಿದ್ದಾರೆ, ತಕ್ಷಣ ಬಸ್ ನಿಲ್ಲಿಸಿದ ಚಾಲಕ ಪ್ರಯಾಣಿಕರನ್ನು ಕೆಳಗೆ ಇಳಿಸಿ ನಂತರ ಹಿಂದೆ ಬರುತ್ತಿದ್ದ ಬಸ್‌ನಲ್ಲಿದ್ದ ಬೆಂಕಿ ನಂದಿಸುವ ಸಾಧನದಿಂದ ಬೆಂಕಿಯನ್ನು ನಂದಿಸುವ ಮೂಲಕ ಜಾಗರೂಕತೆಯಿಂದ ಭಾರಿ ಅಪಾಯವನ್ನು ತಪ್ಪಿಸಿದ್ದಾರೆ. ಅಲ್ಲದೇ ಬೆಂಕಿ ಅವಘಡದ ಘಟನೆಯಲ್ಲಿಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ. ಬೆಂಕಿ ಕಾಣಿಸಿಕೊಂಡ ವಿಚಾರ ತಿಳಿದು ಜನರು ಹೆಚ್ಚಾಗಿ ಸೇರಿಕೊಂಡ ಪರಿಣಾಮ ಸ್ಥಳಕ್ಕೆ ಟೌನ್ ಇನ್‌ಸ್ಪೆಕ್ಟರ್ ಶಶಿಧರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೀಪಾವಳಿ ಸಂಭ್ರಮ ಭಾನುವಾರ ರಂಗೇರಿತ್ತು. ವಿಶ್ವಕಪ್ ಕೊನೆಯ ಲೀಗ್ ಪಂದ್ಯ ನೆದರ್ಲ್ಯಾಂಡ್ಸ್ ಮತ್ತು ಭಾರತದ ನಡುವೆ ಭಾನುವಾರ ಪಂದ್ಯ ನಡೆದಿದೆ. ವಿರಾಟ್ ಕೊಹ್ಲಿ ‘ಶತಕಗಳ ಅರ್ಧಶತಕ’ ದಾಖಲೆ ಮಾಡಲಿಲ್ಲ. ಆದರೆ ಮೂವರು ಬ್ಯಾಟರ್‌ಗಳ ಅರ್ಧಶತಕ ಮತ್ತು ಎರಡು ಶತಕಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ದೊರೆಯಿತು. ಅದರಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಅವರ ಮಿಂಚಿನ ಶತಕವೂ ಒಂದಾಗಿತ್ತು. ಇದಲ್ಲದೇ ಆತಿಥೇಯ ಬಳಗದ ಒಂಬತ್ತು ಆಟಗಾರರ ಬೌಲಿಂಗ್ ನೋಡುವ ಅವಕಾಶವೂ ದೊರೆಯಿತು! ಒಟ್ಟಾರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೀಪಾವಳಿ ಸಂಭ್ರಮಕ್ಕೆ ರಂಗೇರಿತು. ಪಂದ್ಯದಲ್ಲಿ ಒಟ್ಟು 19 ಸಿಕ್ಸರ್, 56 ಬೌಂಡರಿಗಳು ಪಟಾಕಿಗಳಂತೆ ಸಿಡಿದವು. ಮೊದಲೇ ನಿರೀಕ್ಷಿಸಿದಂತೆ ಭಾರತ ತಂಡವು 160 ರನ್‌ಗಳಿಂದ ಜಯಿಸಿತು. ಇದರೊಂದಿಗೆ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಭಾರತವು ಅಜೇಯವಾಗುಳಿಯಿತು. ಇನ್ನೆರಡು ದಿನಗಳ ನಂತರ ಮುಂಬೈನಲ್ಲಿ ನಡೆಯಲಿರುವ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ರೋಹಿತ್ ಶರ್ಮಾ ಬಳಗವು ಎದುರಿಸಲಿದೆ ಇಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಬ್ಯಾಟಿಂಗ್…