ನಾಡಿನೆಲ್ಲೆಡೆ ದೀಪಾವಳಿ ಸಂಭ್ರಮ. ಬೆಳಕಿನ ಹಬ್ಬದ ಸಂಭ್ರಮ ಹಿರಿಯ ನಟಿ ಮಾಲಾಶ್ರೀ ಅವರ ಮನೆಯಲ್ಲಿ ಈ ಬಾರಿ ಕೊಂಚ ಹೆಚ್ಚ ಎನ್ನಬಹುದು. ಹಬ್ಬದ ಸಂಭ್ರಮವನ್ನು ಸಂಭ್ರಮಿಸಲು ಮಾಲಾಶ್ರೀ ಅವರು ಮಗಳು ಆರಾಧನಾ ಜೊತೆ ಹೊಸ ಲುಕ್ ನಲ್ಲಿ ಮಿಂಚಿದ್ದಾರೆ. ಅಮ್ಮ – ಮಗಳು ನೂತನ ರೀತಿಯಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಫೋಟೊ ಶೂಟ್ ಮಾಡಿಸಿಕೊಂಡಿದ್ದೇವೆ. ನಾಡಿನ ಸಮಸ್ತ ಜನತೆಗೆ ದೀಪಾವಳಿ ಶುಭಾಶಯ ತಿಳಿಸುತ್ತೇನೆ. ಬಹಳ ವರ್ಷಗಳ ನಂತರ ನಾನು ಫೋಟೊ ಶೂಟ್ ಮಾಡಿಸಿಕೊಂಡಿದ್ದೀನಿ. ಮಗಳ ಜೊತೆಗೆ ಫೋಟೊ ಶೂಟ್ ಮಾಡಿಸಿಕೊಂಡಿರುವುದು ಹೆಚ್ಚು ಖುಷಿಯಾಗಿದೆ. ಈ ವರ್ಷ ನನ್ನ ಮಗಳು “ಕಾಟೇರ” ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾಳೆ. ನನಗೆ ತಾವು ನೀಡಿರುವ ಪ್ರೋತ್ಸಾಹ ನನ್ನ ಮಗಳಿಗೂ ನೀಡಿ ಎನ್ನುತ್ತಾರೆ ನಟಿ ಮಾಲಾಶ್ರೀ.
Author: AIN Author
ಇಷ್ಟು ನಿರೀಕ್ಷೆ ಮೂಡಿಸಿಯೂ ಥ್ರೆಡ್ಸ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಳಕೆದಾರರನ್ನು ಉಳಿಸಿಕೊಳ್ಳಲು ಸದ್ಯ ಕೊಂಚ ಕಷ್ಟಪಡುತ್ತಿದೆ ಎನ್ನಲಾಗುತ್ತಿದೆ. ಹೀಗಾಗಿ, ಎಲಾನ್ ಮಸ್ಕ್ ಒಡೆತನದ ಎಕ್ಸ್‌ಗೆ ಸರಿಸಮವಾಗಿ ಪ್ರತಿಸ್ಪರ್ಧೆಯೊಡ್ಡಲು ಹೊಸ ವೈಶಿಷ್ಟ್ಯವನ್ನು ಪರಿಚಯಿಸುವತ್ತ ಥ್ರೆಡ್ಸ್ ಕಾರ್ಯನಿರ್ವಹಿಸುತ್ತಿದೆ ಎಂಬ ಅಂಶ ಬಹಿರಂಗವಾಗಿದೆ. ಎಕ್ಸ್‌ನಲ್ಲಿರುವ ವಿವಿಧ ವೈಶಿಷ್ಟ್ಯಗಳ ಮೇಲೆ ಥ್ರೆಡ್ಸ್ ಕಾರ್ಯನಿರ್ವಹಿಸುತ್ತಿರುವ ವಿಷಯ ಥ್ರೆಡ್ಸ್‌ನ ಉದ್ಯೋಗಿಯೊಬ್ಬರು ಆಕಸ್ಮಿಕವಾಗಿ ಹಂಚಿಕೊಂಡಿದ್ದರಿಂದ ಈ ವಿಷಯ ಸೋರಿಕೆಯಾಗಿದೆ! ಮೆಟಾ-ಮಾಲೀಕತ್ವದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ `ಟ್ರೆಂಡಿಂಗ್ ಟಾಪಿಕ್ಸ್’ ವೈಶಿಷ್ಟ್ಯದ ಬಗ್ಗೆ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚಿಸುವ ಸ್ಕ್ರೀನ್‌ಶಾಟ್ ಅನ್ನು ಥ್ರೆಡ್ಸ್ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ಇದು ಎಕ್ಸ್‌ನಲ್ಲಿ ಇರುವಂತೆ `ವಾಟ್ಸ್ ಹ್ಯಾಪನಿಂಗ್’ ಎಂಬ ಫೀಚರ್ ಅನ್ನು ಹೋಲುತ್ತದೆ. ಆದಾಗ್ಯೂ, ಟ್ರೆಂಡಿಂಗ್ ವೈಶಿಷ್ಟ್ಯವು ಎಕ್ಸ್ ಅಪ್ಲಿಕೇಶನ್‌ನಲ್ಲಿ ಇರುವಂತೆಯೇ ಸುದ್ದಿ, ಕ್ರೀಡೆ ಮತ್ತು ಮನರಂಜನೆಯಂತಹ ಇತರ ವಿಭಾಗಗಳನ್ನು ಒಳಗೊಂಡಿರುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಮೆಟಾ ಉದ್ಯೋಗಿಗಳು ವಿಶೇಷ ಫೀಡ್ ಅನ್ನು ಹೊಂದಿದ್ದಾರೆ. ಅಲ್ಲಿ ಅವರು ಇತರ ಉದ್ಯೋಗಿಗಳಿಗೆ ಮಾತ್ರ ನೋಡಲು ವಿಷಯಗಳನ್ನು ಪೋಸ್ಟ್ ಮಾಡಬಹುದು. ಥ್ರೆಡ್ಸ್ ಎಂಜಿನಿಯರ್ ಟ್ರೆಂಡಿಂಗ್…
ಕಲಬುರ್ಗಿ:- ರಾಜ್ಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದ KEA ಪರೀಕ್ಷೆ ಅಕ್ರಮ ಪ್ರಕರಣದ ತನಿಖೆಯನ್ನ ಇದೀಗ CID ಶುರುಮಾಡಿದೆ. ಬೆಂಗಳೂರಿನಿಂದ ಅಧಿಕಾರಿಯೊಬ್ಬರು ತನಿಖೆಗಾಗಿ ಕಲಬುರಗಿಗೆ ಆಗಮಿಸಿದ್ದು ಮೊದಲು ಅಶೋಕ ನಗರ ಠಾಣೆಯಲ್ಲಿ ದಾಖಲಾಗಿರುವ ಕೇಸನ್ನ ಕೈಗೆತ್ತಿಕೊಂಡಿದ್ದಾರೆ. ಸರ್ಕಾರದ ಆದೇಶದ ಬಳಿಕ ಎಲ್ಲ ದಾಖಲೆಗಳನ್ನ ಸ್ಥಳೀಯ ಪೋಲೀಸರು CID ಗೆ ಹಸ್ತಾಂತರ ಮಾಡಿದ್ದಾರೆ.. ಈ ಹಿಂದೆ ನಡೆದ ಪಿಎಸ್ಐ ಪರೀಕ್ಷಾ ಅಕ್ರಮ ಪ್ರಕರಣದ ತನಿಖೆ ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದ ಕಲಬುರಗಿಯ CID ಅಧಿಕಾರಿಯೊಬ್ರು ಬೆಂಗಳೂರಿನ ತನಿಖಾಧಿಕಾರಿ ತಂಡದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.ಹೀಗಾಗಿ ತನಿಖೆ ಮತ್ತಷ್ಟು ವೇಗ ಪಡೆಯಲಿದೆ..
ಬೇಸಿಗೆಕಾಲ ಕಳೆದು ಮಳೆಗಾಲ ಶುರುವಾಗುತ್ತಿದೆ.ಮಳೆಗಾಲದಲ್ಲಿ ನಮ್ಮ ಆರೋಗ್ಯದ ಜೊತೆಗೆ ಚರ್ಮದ ಆರೈಕೆಯ ಕಡೆಗೂ ಗಮನಕೊಂಡಬೇಕಾಗುತ್ತದೆ. ಮಳೆಗಾಲ ಇರುವ ಕಾರಣ ನಾವು ಸ್ವಲ್ಪ ಹೆಚ್ಚಾಗಿ ಸ್ಕೀನ್ ಕೇರ್ ಮಾಡಲೇಬೇಕಾಗುತ್ತದೆ. ಹೌದು,ಎಲ್ಲಾ ಋತುಮಾನದಲ್ಲಿಯೂ ಚರ್ಮದ ಹೊಳಪು ಕಾಪಾಡಿಕೊಂಡು ಆರೈಕೆ ಮಾಡುವುದು ಮುಖ್ಯವಾಗುತ್ತದೆ. ಮಳೆಗಾಲದಲ್ಲಿ ಬರುವಂತಹ ಶೀತ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಮಾತ್ರ ನಮ್ಮನ್ನು ಕಾಡುವುದಿಲ್ಲ. ಕೆಲವು ಚರ್ಮ ಸಮಸ್ಯೆಗಳು ಸಹಾ ಹೆಚ್ಚಾಗುತ್ತದೆ. ಹಾಗಿದ್ರೆ ನಮ್ಮ ತ್ವಚೆಯ ಹಾರೈಕೆ ಹೇಗೆ ಮಾಡೋದು ಅನುವುದರ ಕುರಿತ ಟಿಪ್ಸ್ ಇಲ್ಲಿದೆ. ನಮ್ಮ ಚರ್ಮವನ್ನೂ ಕಾಪಾಡಿಕೊಳ್ಳಲು ಚರ್ಮದ ಮೇಲೆ ಏನೆಲ್ಲಾ ಲೇಪನ ಮಾಡುತ್ತೀವಿ ಅನ್ನುವುದರ ಜೊತೆಗೆ ದೇಹಕ್ಕೆ ಏನೆಲ್ಲಾ ಪೌಷ್ಠಿಕಾಂಶಗಳನ್ನು ತೆಗೆದುಕೊಳ್ಳುತ್ತೇವೆ ಎನ್ನುವುದರ ಮೇಲೂ ನಮ್ಮ ಚರ್ಮದ ಸೌದರ್ಯ ವೃದ್ಧಿ ಅವಲಂಬಿತವಾಗುತ್ತದೆ. ನೀರನ್ನ ಹೆಚ್ಚಾಗಿ ಸೇವನೆ ಮಾಡಬೇಕು. ಇದರ ಜೊತೆಗೆ ಕೆಲವೊಂದಿಷ್ಟು ಮನೆಮದ್ದನ್ನು ಮಾಡಿಕೊಳ್ಳಬೇಕು. ಒಂದು ಸ್ಪೂನ್ ಟಮೋಟೋ ಜ್ಯೋಸ್ಗೆ ಜೇನುತುಪ್ಪವನ್ನು ಮಿಶ್ರಣ ಮಾಡಿ ಹುಬ್ಬು ಮತ್ತು ಕೂದಲು ತಾಕಿಸದೆ ಮುಖಕ್ಕೆ ಹಚ್ಚಿ ಒಣಗಿದ ನಂತರ ಮುಖ ತೊಳೆಯಿರಿ. ವಾರದಲ್ಲಿ …
ಹಾಸನ: ನನಗಂತೂ ಅಸಮಾಧಾನವಿಲ್ಲ ನಾನು ಪಕ್ಷದ ಜವಬ್ದಾರಿ ಕೇಳಿ ಪಡೆದವನಲ್ಲ ಎಂದು ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕ ಸಿಟಿ ರವಿ ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿವೈ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ಅಧರ್ಮದ ವಿರುದ್ಧ ಧರ್ಮದ ಜಯ ಆಗಬೇಕು ಅಸತ್ಯದ ವಿರುದ್ಧ ಸತ್ಯದ ಜಯ ಆಗಬೇಕು. ಸನಾತನ ಧರ್ಮವೇ ಭಗವಂತನ ಕಾಣದೋ ಎಂದು ಹೇಳಿದರು. ರಾಮನಿಗೆ ಮತ್ತು ಪಾಂಡವರಿಗೂ ವನವಾಸ ತಪ್ಪಿಲ್ಲ ಇನ್ನೂ ಸಿ ಟಿ ರವಿ ಅವರಿಗಿಂತ ನಾನು ದೊಡ್ಡವನಾ? ಸ್ವರ್ಧೆಯೇ ಇಲ್ಲದಿದ್ದಾಗ ರೇಸಿನ ಪ್ರಶ್ನೆಯೇ ಇಲ್ಲ. ಇದೀಗಾ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಪಕ್ಷ ವಿಸ್ತರಿಸೋ ಕೆಲಸ ಆಗಬೇಕು. ಪಕ್ಷ ಜವಬ್ದಾರಿ ಕೊಟ್ಟಾಗ ಏನಾದ್ರು ಮಾತನಾಡಿದ್ರೆ ತಪ್ಪು ಸಂದೇಶ ರವಾನೆ ಆಗುತ್ತೆ. ನಮ್ಮ ಪಕ್ಷ ಗಟ್ಟಿಯಾಗಬೇಕು ಅಂತಾ ನಾನು ಬಯಸುವನು. ಅದು ಯಾರು ಮೂಲಕ ಆದರೂ ಸಂತೋಷ ಎಂದರು. ಪಕ್ಷ ಕಾಲ ಕಾಲಕ್ಕೆ ಅನುಭವ…
ಬೆಂಗಳೂರು:- ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಬಹುತೇಕ ಪ್ರದೇಶಗಳ್ಲಲಿ ಮುಂದಿನ 5 ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು ಹಾಗೂ ತುಮಕೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಒಣಹವೆ ಇರಲಿದ್ದು, ದಕ್ಷಿಣ ಒಳನಾಡಿನ ಬಹುತೇಕ ಕಡೆ ಮಳೆಯಾಗುವ ಸಾಧ್ಯತೆ ಇದೆ. ವಿಜಯಪುರದಲ್ಲಿ 15.6 ಡಿಗ್ರಿ ಸೆಲ್ಸಿಯಸ್ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ ರಾಜ್ಯಾದ್ಯಂತ ಮುಂಗಾರು ಮಳೆ ಕೊರತೆಯಿಂದ ಹಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಉಂಟಾಗಿದೆ. ಅಕ್ಟೋಬರ್ನಲ್ಲಿ ಹಿಂಗಾರು ಮಳೆ ಕೂಡ ಕಡಿಮೆಯಾಗಿದ್ದರಿಂದ ಶೇ.65ರಷ್ಟು ಮಳೆ ಕೊರತೆ ಎದುರಾಗಿ, ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ಸೂಚನೆ ಸಿಕ್ಕಿತ್ತು. ಆದರೆ, ನವೆಂಬರ್ ತಿಂಗಳ ಆರಂಭದಿಂದ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆಯ ಪರಿಣಾಮದಿಂದ ಮಳೆ ಕೊರತೆ ಶೇ.35ಕ್ಕೆ ಇಳಿಕೆಯಾಗಿದೆ. ಕಳೆದ ಎರಡು ವಾರಗಳಲ್ಲಿ ಶೇ.108ರಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು:-ಕಾಳೇನ ಅಗ್ರಹಾರ ಬಳಿ ಸರಣಿ ಅಪಘಾತ ಸಂಭವಿಸಿದ್ದು, ಅಪಘಾತದ ಭಯಾನಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಮೂರು ವಾಹನಗಳಿಗೆ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕಿರಣ್ ಮೇಲೆ ಹಾರಿಕೆಳಗೆ ಬಿದ್ದಿದ್ದಾರೆ. ಮತ್ತೊಂದು ಬೈಕ್ ನಲ್ಲಿದ್ದ ಜಸ್ಮಿತ ಹಾಗು ಬಸಂತ್ ಕುಮಾರ್ ಇವರಿಬ್ಬರಲ್ಲಿ ಜಸ್ಮಿತಾಗೆ ಗಂಭೀರಗಾಯವಾಗಿದೆ. ಅಭಿಷೇಕ್ ಅಗರವಾಲ್ ಕಾರು ಚಾಲಕ ಎನ್ನಲಾಗಿದ್ದು, ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ: ವಿದ್ಯೆಯಿಂದ ಉದ್ಯೋಗದ ಜೊತೆಗೆ ಸಂಸ್ಕಾರವೂ ಪ್ರಾಪ್ತಿಯಾಗಬೇಕು ಆಗ ಮಾತ್ರ ಬದುಕಿಗೆ ಸಾರ್ಥಕತೆ ಇರುತ್ತದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ. ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ಸರ್ಕಾರದ ಆಶಯ ಅದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಅವರು ಹೇಳಿದರು. ಶಿಕ್ಷಣ ಎಂದರೆ ಕೇವಲ ಪಠ್ಯವಲ್ಲ , ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳೂ ವಿಕ್ತತ್ವ ವಿಕಾಸಕ್ಕೆ ಸಹಕಾರಿ ಎಂದರು. ವಿದ್ಯಾರ್ಥಿಗಳು ಅಂಕ ಗಳಿಕೆಗೆ ಮಾತ್ರ ಪ್ರಾಮುಖ್ಯತೆ ನೀಡದೆ ಸಾಮಾನ್ಯ ಜ್ಞಾನ, ವಿವೇಕ ಬೆಳೆಸಿಕೊಳ್ಳಬೇಕು ಎಂದು ಸಚಿವರು ಕಿವುಮಾತು ಹೇಳಿದರು. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಇದೇ ವೇಳೆ ಕೃಷಿ ಸಚಿವರು ಸಿದ್ದಗಂಗಾ ಹಾಗೂ ಆದಿ ಚುಂಚನಗಿರಿ ಮಠಗಳಲ್ಲಿ ತಾವು ಕಲಿತ ಶಿಕ್ಷಣ , ಸಂಸ್ಕಾರರವನ್ನು ಸ್ಮರಿಸಿದರು. ನಾಗಮಂಗಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ಜೊತೆಗೆ ಹೊಸದಾಗಿ ಬಿ.ಎಸ್.ಸಿ, ಎಂ.ಎಸ್.ಸಿ., ಎಂ.ಎಸ್.ಸಿ., ಎಂ.ಎಸ್ .ಡಬ್ಲ್ಯೂ ಮತ್ತಿತರ ಕೋರ್ಸ್ ಗಳನ್ನು ಪ್ರಾರಂಭಿಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ನವದೆಹಲಿ: ಮೃತನಾಗಿದ್ದಾನೆ ಎಂದು ಹೇಳಲಾಗಿದ್ದ 11 ವರ್ಷದ ಬಾಲಕ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ದಿಢೀರನೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಘಟನೆ ವರದಿಯಾಗಿದೆ. ಚರಮ್ ಸಿಂಗ್ ಅವರು 2010 ರಲ್ಲಿ ಪುತ್ರಿ ಮೀನಾರನ್ನು ಭಾನುಪ್ರಕಾಶ್ ಅವರಿಗೆ ಮದುವೆ ಮಾಡಿಕೊಟ್ಟಿದ್ದರು. ಇವರ ಪುತ್ರನೇ ಅಭಯ್ ಸಿಂಗ್. 2013ರಲ್ಲಿ ಮೀನಾ ಮೃತಪಟ್ಟರು. ಪತಿಯ ಕುಟುಂಬದ ವಿರುದ್ಧ ಮೀನಾ ಪೋಷಕರು ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದರು. ಬಾಲಕ ಅಭಯ್ ಸಿಂಗ್‌ನನ್ನು ಚರಮ್ ಸಿಂಗ್ ಕುಟುಂಬವು ತಮ್ಮ ಸುಪರ್ದಿಗೆ ತೆಗೆದುಕೊಂಡಿತು. 2021ರಲ್ಲಿ ಕೌಟುಂಬಿಕ ನ್ಯಾಯಾಲಯವು ತೀರ್ಪು ನೀಡಿ ಅಭಯ್‌ನನ್ನು ತಂದೆಯ ಉಸ್ತುವಾರಿಗೆ ಒಪ್ಪಿಸಿತು. ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಚರಮ್ ಸಿಂಗ್ ಹೈಕೋರ್ಟ್ ಮೆಟ್ಟಿಲೇರಿದರು. ಈ ನಡುವೆ ಚರಮ್ ಸಿಂಗ್ ಕುಟುಂಬದ ವಿರುದ್ದ ಭಾನುಪ್ರಕಾಶ್ ತಮ್ಮ ಮಗನನ್ನು ಕೊಲೆ ಮಾಡಿದ ಆರೋಪದ ಹೊರಿಸಿ, ಪೊಲೀಸರಿಂದ ಪ್ರಕರಣ ದಾಖಲಾಗುವಂತೆ ನಿಗಾವಹಿಸುತ್ತಾರೆ. https://ainlivenews.com/did-sending-a-message-to-a-girl-lead-to-murder-what-does-igp-ravikante-gowda-say/ ಇದರ ವಿರುದ್ಧವಾಗಿ ಅಭಯ್ ಪರವಾಗಿ ಹೈಕೋರ್ಟ್‌ನಲ್ಲಿ ವಾದಿಸಿದ ವಕೀಲರು, ‘ಬಾಲಕ ಕೊಲೆಯಾಗಿಲ್ಲ, ಬದುಕಿದ್ದಾನೆ ಎಫ್‌ಐಆರ್ ರದ್ದು…
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗೆ ಅಪ್ಲಿಕೇಶನ್‌ಗಳನ್ನು ಒದಗಿಸುವ ಗೂಗಲ್‌ನ ಅಧಿಕೃತ ಪ್ಲೇ ಸ್ಟೋರ್‌ನಲ್ಲಿ ಸೇರಿಕೊಂಡಿದ್ದ ನಕಲಿ ಮತ್ತು ಅನಧಿಕೃತ ಸುಮಾರು 36 ಕ್ಯಾಮರಾ ಆಯಪ್‌ಗಳನ್ನು ತೆಗೆದುಹಾಕಲಾಗಿದೆ. ಹೀಗಾಗಿ ನೀವು ಕೂಡ ನಿಮ್ಮ ಫೋನ್‌ನಲ್ಲಿ ಅವುಗಳನ್ನು ಬಳಸುತ್ತಿದ್ದರೆ, ತಕ್ಷಣ ತೆಗೆದುಹಾಕುವುದು ಉತ್ತಮ. ಅಂದರೆ, ಗೂಗಲ್ ಪ್ಲೇ ಸ್ಟೋರ್ ನಿಯಮ ಪಾಲಿಸದ, ಅನಧಿಕೃತ ಮತ್ತು ನಕಲಿ ಆಯಪ್‌ಗಳನ್ನು ಗೂಗಲ್ ತೆಗೆದುಹಾಕುತ್ತದೆ. ಈ ಬಾರಿ ಗ್ರಾಹಕರ ಮಾಹಿತಿ ಕದಿಯುವ ಮತ್ತು ಫೋನ್‌ನಲ್ಲಿ ಅನಗತ್ಯ ಅಕ್ಸೆಸ್ ಪಡೆದುಕೊಳ್ಳುವ, ಸುಳ್ಳು ಜಾಹೀರಾತು ಹರಡುವ ಕ್ಯಾಮರಾ ಆಯಪ್‌ಗಳನ್ನು ಗೂಗಲ್ ಕಿತ್ತುಹಾಕಿದೆ. ಅವುಗಳ ವಿವರ ಇಲ್ಲಿದೆ. ಈ ಆಯಪ್‌ಗಳನ್ನು ನೀವು ಬಳಸುತ್ತಿದ್ದರೆ ಕೂಡಲೇ ಅನ್‌ಇನ್‌ಸ್ಟಾಲ್ ಮಾಡಿ. ಆ ಮೂಲಕ ಸಮಸ್ಯೆಯಿಂದ ಪಾರಾಗಿ ಗೂಗಲ್ ಎಚ್ಚರಿಕೆ ನೀಡಿದೆ. ಇಲ್ಲಿದೆ ನೋಡಿ ಈ ಕ್ಯಾಮರಾ ಆಯಪ್ ಯೊರೋಕೊ ಕ್ಯಾಮರಾ ಆಯಪ್ ಸೋಲು ಕ್ಯಾಮರಾ ಆಯಪ್ ಲೈಟ್ ಬ್ಯೂಟಿ ಕ್ಯಾಮರಾ ಆಯಪ್ ಬ್ಯೂಟಿ ಕೊಲಾಜ್ ಲೈಟ್ ಬ್ಯೂಟಿ ಕೊಲಾಜ್ ಲೈಟ್ ಫೋಟೋ ಕೊಲಾಜ್ & ಬ್ಯೂಟಿ ಆಯಪ್ ಬ್ಯೂಟಿ…