Author: AIN Author

ಉಡುಪಿ: ಅಗ್ನಿ ಅವಘಡದಿಂದಾಗಿ (Fire Accident) 7 ಮೀನುಗಾರಿಕಾ ಬೋಟ್‍ಗಳು (Boats) ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಗಂಗೊಳ್ಳಿಯಲ್ಲಿ (Gangolli) ನಡೆದಿದೆ. ದೀಪಾವಳಿ (Deepavali) ಪೂಜೆಯ ವೇಳೆ ಹಚ್ಚಿದ ಪಟಾಕಿಯಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ. ಬೈಂದೂರು ಹಾಗೂ ಗಂಗೊಳ್ಳಿ ಅಗ್ನಿಶಾಮಕ ದಳದಿಂದ ರಕ್ಷಣಾ ಕಾರ್ಯಚರಣೆ ನಡೆಯುತ್ತಿದೆ. ಹೆಚ್ಚುವರಿ ಅಗ್ನಿಶಾಮಕ ವಾಹನಗಳನ್ನು ರವಾನೆ ಮಾಡಲಾಗಿದೆ. https://ainlivenews.com/b-y-vijayendra-met-former-prime-minister-hd-deve-gowda/  ದುರಂತದಲ್ಲಿ ಕೋಟ್ಯಂತರ ರೂ. ನಷ್ಟ ಸಂಭವಿಸಿದೆ. ಬೋಟ್‍ಗಳನ್ನು ದುರಸ್ತಿ ಮತ್ತು ಪೇಂಟಿಂಗ್ ಕಾರ್ಯಕ್ಕೆ ದಡದಲ್ಲಿ ಇರಿಸಲಾಗಿತ್ತು. ಬೋಟ್‍ಗಳ ಮೇಲೆ ತೆಂಗಿನ ಗರಿಗಳನ್ನು ಹಾಸಲಾಗಿತ್ತು. ಆರಂಭದಲ್ಲಿ ಬೋಟ್ ಮೇಲೆ ಹಾಸಿದ್ದ ತೆಂಗಿನ ಗರಿಗಳಿಗೆ ಬೆಂಕಿ ತಗುಲಿದೆ. ಬಳಿಕ ಬೋಟ್‍ಗಳಿಗೆ ವ್ಯಾಪಿಸಿದ್ದು ಭಾರೀ ಪ್ರಮಾಣದ ಅಗ್ನಿ ಅವಘಡಕ್ಕೆ ಕಾರಣವಾಗಿದೆ. ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.   

Read More

ಬೆಂಗಳೂರು: ನಿಯಂತ್ರಣ ತಪ್ಪಿ ಕಾರೊಂದು (Car) 4 ಬೈಕ್‌ಗಳಿಗೆ (Bike) ಡಿಕ್ಕಿ ಹೊಡೆದು ನಿಲ್ಲಿಸದೇ ಮುಂದೆ ಹೋಗಿರುವ ಘಟನೆ ಕಾಳೇನ ಅಗ್ರಹಾರ ಬಳಿ ನಡೆದಿದೆ. ಸರಣಿ ಅಪಘಾತದ (Serial Accident) ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. https://ainlivenews.com/your-father-said-follow-the-path-and-you-will-get-success/ ನಿಯಂತ್ರಣ ತಪ್ಪಿ ಕಾರು ಚಾಲಕ 4 ಬೈಕ್‌ಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕಿರಣ್ ಮೇಲಕ್ಕೆ ಹಾರಿ ಕೆಳಗೆ ಬಿದ್ದಿದ್ದಾರೆ. ಜಸ್ಮಿತಾ ಹಾಗೂ ವಸಂತ್ ಕುಮಾರ್ ಎಂಬವರು ಮತ್ತೊಂದು ಬೈಕ್‌ನಲ್ಲಿದ್ದು, ಜಸ್ಮಿತಾಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಕಾರು ಚಾಲಕ ಎಡ ಬದಿಯಿಂದ ಓವರ್ ಟೇಕ್ ಮಾಡಲು ಪ್ರಯತ್ನಿಸಿರುವುದು ಕಂಡುಬಂದಿದೆ. ಆತ ಒಂದು ಬೈಕ್‌ಗೆ ಡಿಕ್ಕಿ ಹೊಡೆದಾಗ ಗಾಬರಿಯಿಂದ ಕಾರನ್ನು ನಿಲ್ಲಿಸದೆ ಇನ್ನೂ 3 ಬೈಕ್ ಗಳಿಗೆ ಡಿಕ್ಕಿ ಹೊಡೆದು ಎಸ್ಕೇಪ್ ಆಗಿರುವುದು ಸೆರೆಯಾದ ದೃಶ್ಯದಲ್ಲಿ ಕಂಡುಬಂದಿದೆ.

Read More

ದೊಡ್ಮನೆಯಲ್ಲಿ (Bigg Boss Kannada 10) ರೈತ ವರ್ತೂರು ಸಂತೋಷ್ (Varthur Santhosh) ಅವರಿಗೆ ಹೊರಗಡೆ ಅಪಾರ ಅಭಿಮಾನಿಗಳ ಬಳಗವಿದೆ. ಕೆಲ ದಿನಗಳ ಹಿಂದೆ ಹುಲಿ ಉಗುರಿನ ಕೇಸ್ ವಿಚಾರವಾಗಿ ಜೈಲು ಸೇರಿದ್ದರು. ಬೇಲ್ ಮೂಲಕ ಬಿಡುಗಡೆಯಾದ್ಮೇಲೆ ಸಂತೋಷ್,‌ ದೊಡ್ಮನೆ ಆಟ ಗೆದ್ದು ಬರಲೇಬೇಕೆಂದು ಅಭಿಮಾನಿಗಳು ತಮ್ಮ ವೋಟ್‌ಗಳ ಮೂಲಕ ಪ್ರೀತಿ ತೋರಿಸುತ್ತಿದ್ದಾರೆ. ಹೀಗಿರುವಾಗ ಸೇಫ್ ಆಗಿದ್ರೂ, ಕೂಡ ಬಿಗ್ ಬಾಸ್‌ನಿಂದ ಹೊರಬರುತ್ತೇನೆ ಎಂದು ವರ್ತೂರು ಸಂತೋಷ್ ಪಟ್ಟು ಹಿಡಿದಿದ್ದಾರೆ. ಸಂತೋಷ್ ಮಾತಿಗೆ ವೇದಿಕೆಯಿಂದ ಸುದೀಪ್ ಹೊರನಡೆದಿದ್ದಾರೆ. ಹೊರಗೆ ಒಂದು ಘಟನೆ ನಡೆದಿದೆ. ಅದರಿಂದ ಹೊರ ಬಂದು ನಾನು ಇಲ್ಲಿ ಆಡಬೇಕು ಎಂದರೆ ಕಷ್ಟ ಆಗ್ತಿದೆ ಎಂದು ಕಣ್ಣೀರು ಹಾಕಿದರು ವರ್ತೂರು. ಜೊತೆಗೆ ನಾನು ಹೊರಗೆ ಹೋಗ್ತೀನಿ ಎಂದು ಹಠ ಹಿಡಿದರು. ನಿಮಗೆ ಬಂದಿರೋ ಮತಗಳ ಸಂಖ್ಯೆ 34 ಲಕ್ಷ. ಜನರ ಅಭಿಪ್ರಾಯದ ವಿರುದ್ಧ ನಾನು ಹೋಗಲ್ಲ ಎಂದು ಸುದೀಪ್ ಅವರು ವೇದಿಕೆಯಿಂದಲೇ ಹೊರ ನಡೆದಿದ್ದಾರೆ. ವರ್ತೂರು-ಸುದೀಪ್‌ ಮಾತಿಗೆ ಇತರೆ ಸ್ಪರ್ಧಿಗಳು…

Read More

ನಟ ನಾಗಭೂಷಣ್ (Actor Nagabhushan) ಕಾರು ಅಪಘಾತ ಪ್ರಕರಣದಲ್ಲಿ ಮತ್ತೆ ಸಂಕಷ್ಟ ಎದುರಾಗಿದೆ. ಕೆಎಸ್ ಲೇಔಟ್ ಸಂಚಾರ ಪೊಲೀಸರು ಆಕ್ಸಿಡೆಂಟ್ ಸಂಬಂಧ ಕೋರ್ಟ್‌ಗೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ನಾಗಭೂಷಣ್ ವಿರುದ್ಧ ಹಲವು ಸಾಕ್ಷಿಗಳನ್ನ ಕೋಣನ ಕುಂಟೆ ಪೊಲೀಸರು ಕಲೆಹಾಕಿದ್ದಾರೆ. ಸೆಪ್ಟೆಂಬರ್ 30ರ ರಾತ್ರಿ ವಸಂತಪುರ ರಸ್ತೆಯ ಅಪಾರ್ಟ್ಮೆಂಟ್ ಬಳಿ ವಾಕಿಂಗ್ ಮಾಡುತ್ತಿದ್ದ ಕೃಷ್ಣ, ಪ್ರೇಮ ದಂಪತಿಗಳಿಗೆ ವೇಗವಾಗಿ ಬಂದ ನಟ ನಾಗಭೂಷಣ್ ಕಾರು ಡಿಕ್ಕಿ ಹೊಡೆದಿತ್ತು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಪತ್ನಿ ಪ್ರೇಮ ಸಾವನ್ನಪ್ಪಿದ್ರೆ, ಪ್ರೇಮ ಗಂಡ ಕೃಷ್ಣಗೆ ಗಂಭೀರ ಗಾಯವಾಗಿ ಆಸ್ಪತ್ರೆ ಸೇರಿದ್ರು. ಕೆಎಸ್ ಲೇಔಟ್ ಪೊಲೀಸರು ಕಾರು ಓಡಿಸ್ತಿದ್ದ ನಟನನ್ನ ಅರೆಸ್ಟ್ ಮಾಡಿ ಡ್ರಂಕ್ & ಡ್ರೈವ್ ಚೆಕ್ ಮಾಡಿ, ಪ್ರೊಸೀಜರ್ ಮುಗಿಸಿ, ಸ್ಟೇಷನ್ ಬೇಲ್ ಮೇಲೆ ಬಿಟ್ಟು ಕಳಿಸಿದ್ದರು. ಇದೀಗ ಸಂಚಾರ ಪೊಲೀಸರು ನಟ ನಾಗಭೂಷಣ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ನಾಗಭೂಷಣ್ ಮೇಲೆ ಸುಮಾರು 70ಕ್ಕೂ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಪೊಲೀಸರು ಫೈಲ್ ಮಾಡಿದ್ದಾರೆ. ಈ…

Read More

ಬಳ್ಳಾರಿ: ಜಿಲ್ಲೆಯ ತೋರಣಗಲ್ಲು ರೈಲು ನಿಲ್ದಾಣ ಪ್ರದೇಶದ 11ನೇ ವಾರ್ಡ್ನನ ಘೋರ್ಪಡೆ ನಗರದ ಎಚ್‌ಎಲ್‌ಸಿ ಕಾಲುವೆಯ ಬಳಿ ಪುರಸಭೆ ಸದಸ್ಯ ನಾಗರಾಜ ನಾಯ್ (32) ಮೇಲೆ ಅದೇ ವಾರ್ಡ್‌ ನಿವಾಸಿ ಶಿವಕುಮಾರ್ ಹಾಡಹಗಲೇ ಮಚ್ಚಿನಿಂದ ಹಲ್ಲೆ ನಡೆಸಿದ ಘಟನೆ ಭಾನುವಾರ ನಡೆದಿದೆ. https://ainlivenews.com/megha-shetty-in-prajwal-devarajs-new-movie-2/ ನಾಗರಾಜ ನಾಯ್ಕ ಅವರಿಗೆ ತಲೆ, ಬೆನ್ನಿಗೆ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿದ್ದು ತಕ್ಷಣ ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದೆ. ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ತೋರಣಗಲ್ಲು ಠಾಣೆಯ ಪೊಲೀಸರು ತಿಳಿಸಿದ್ದಾರೆ. ಘಟನೆಯ ವಿವರ: ಗಾಯಳು ಸದಸ್ಯ ನಾಗರಾಜ ನಾಯ್ಕ ಹಾಗೂ ಹಲ್ಲೆ ನಡೆಸಿದ ಶಿವಕುಮಾರ್ ಇವರಿಬ್ಬರಿಗೂ ಕಳೆದ ವರ್ಷ ಚುನಾವಣೆಯ ನಂತರ ವಾರ್ಡ್‌ನಲ್ಲಿಯ ಚರಂಡಿಯ ವಿಚಾರವಾಗಿ ಗಲಾಟೆ ನಡೆದಿತ್ತು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿ ಎರಡೂ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಇದೇ ವಿಚಾರವಾಗಿ ಭಾನುವಾರ ಮಧ್ಯಾಹ್ನ ಕಾಲುವೆಯ ಬಳಿ ಇಬ್ಬರಿಗೂ ಜಗಳ…

Read More

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ (World Cup 2023) ಟೂರ್ನಿ ಶಿವಣ್ಣ ವೀಕ್ಷಿಸಿದ್ದಾರೆ. ಶಿವಣ್ಣ ಕ್ರಿಕೆಟ್ ವೀಕ್ಷಿಸುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಏಕದಿನ ವಿಶ್ವಕಪ್‌ ಪಂದ್ಯ ಟೂರ್ನಿ ಭಾರತ- ನೆದರ್ಲೆಂಡ್ಸ್ (India Vs Netherlands) ತಂಡಗಳ ನಡುವಿನ ಪಂದ್ಯವನ್ನ ಕ್ರಿಕೆಟ್ ಶಿವರಾಜ್‌ಕುಮಾರ್ ವೀಕ್ಷಿಸಿದ್ದಾರೆ.  ಬಳಿಕ ಮಾಧ್ಯಮವೊಂದಕ್ಕೆ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಬಳಿಕ ಹಂಬಲ್ ಗುಣ ಬಂದಿರೋದೆಲ್ಲ ನಮ್ಮ ತಂದೆ ಅವರಿಂದಲೇ. ಅವರು ಒಳ್ಳೆಯ ದಾರಿ ಹಾಕಿಕೊಟ್ಟಿದ್ದಾರೆ. ಇವತ್ತು ಪುನೀತ್‌ನ ಯಾಕೆ ಎಲ್ಲರೂ ನೆನಪು ಮಾಡಿಕೊಳ್ತಾರೆ ಅಂದರೆ ಅವರ ಒಳ್ಳೆತನದಿಂದ, ಅದೇ ಶಾಶ್ವತವಾಗಿರುವುದು ಎಂದಿದ್ದಾರೆ. ನಮ್ಮ ವೃತ್ತಿಯಲ್ಲಿ ಎಷ್ಟೇ ಬೆಳೆದಿದ್ರೂ, ನಮ್ಮ ಭಾರತಕ್ಕೆ ಆಡುವ ಆಟಗಾರರ ಜೊತೆ ಇಲ್ಲಿ ಕೂರೋದು ಖುಷಿ ಕೊಟ್ಟಿದೆ ಎಂದು ಶಿವಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.

Read More

ಬೆಂಗಳೂರು: ದೀಪಾವಳಿ ಹಬ್ಬ ಹಿನ್ನೆಲೆ ಪಟಾಕಿ ಅವಘಡ ಕೇಸ್​ ಹೆಚ್ಚಳ ವಿಚಾರ ಸಂಬಂಧ ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಪರಮೇಶ್ವರ್ ಮಾತನಾಡಿದ್ದು, ಗ್ರೀನ್ ಪಟಾಕಿ ಉಪಯೋಗಿಸಬೇಕು ಎಂದು ಸೂಚನೆ ನೀಡಿದ್ದೇವೆ. ಜನರೂ ಕೂಡ ನಮಗೆ ಸಹಕಾರ ನೀಡಬೇಕು. ಕೆಲವೆಡೆ ಪಟಾಕಿಯಿಂದ ಕಣ್ಣಿಗೆ ಗಾಯವಾಗಿರುವ ವರದಿ ಆಗಿದೆ. ಎಸಿಪಿಗಳ ಒಂದು ಟೀಂನಿಂದ ಎಲ್ಲಾ ಏರಿಯಾಗಳಲ್ಲಿ ಪರಿಶೀಲನೆ ನಡೆಯುತ್ತಿದೆ ಎಂದರು. https://ainlivenews.com/b-y-vijayendra-met-former-prime-minister-hd-deve-gowda/ ಭಾನುವಾರ ಸಂಜೆಯಿಂದಲೇ ಬೆಂಗಳೂರಿನ ಮಿಂಟೋ ಆಸ್ಪತ್ರೆ, ನಾರಾಯಣ ನೇತ್ರಾಲಯದಲ್ಲಿ 20 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ 4 ಪ್ರಕರಣ ಪೈಕಿ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ. 10 ವರ್ಷದ ಬಾಲಕಿ ಮತ್ತು 18 ವರ್ಷದ ಯುವಕನ ಕಣ್ಣಿಗೆ ಪೆಟ್ಟು ಬಿದ್ದ ಕಾರಣ ಸರ್ಜರಿ ಮಾಡುವ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನೂ, ನಾರಾಯಣ ನೇತ್ರಾಲಯದಲ್ಲಿ ಒಂದೇ ದಿನಕ್ಕೆ 22 ಪ್ರಕರಣ ಪೈಕಿ 10 ಮಂದಿ ಕಣ್ಣಿಗೆ ಗಾಯವಾಗಿದ್ದು 12 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದೆಮ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಇವರಲ್ಲಿ…

Read More

ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ ಗಳು, ದೇವೇಗೌಡರನ್ನು ಇವತ್ತು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ ಅವ್ರು ಬಹಳ ಹೆಮ್ಮೆ ಪಟ್ಟರು ನಿಮ್ದು ಒಂದು ದೊಡ್ಡ ರಾಷ್ಟ್ರೀಯ ಪಕ್ಷ ಇಂತಹ ಪಕ್ಷದಲ್ಲಿ ಕಿರಿಯವನಾದ ನಿನಗೆ ನರೇಂದ್ರ ಮೋದಿಯವರು ಅವಕಾಶ ಕೊಟ್ಟಿದ್ದಾರೆ ತಂದೆಯವರಂತೆ ನೀನು ಯಶಸ್ಸು ಕಾಣುತ್ತೀಯಾ, ಅವರ ದಾರಿಯಲ್ಲಿ ಹೋಗು ನಿನಗೂ ಒಳ್ಳೆಯ ಯಶಸ್ಸು ಸಿಗುತ್ತದೆ ಎಂದು ದೇವೇಗೌಡರ ಭೇಟಿ ಬಳಿಕ ಬಿ ವೈ ವಿಜಯೇಂದ್ರ‌ ಹೇಳಿದರು. ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಹೋಗುವಂತೆ ಸಲಹೆ ನೀಡಿದ್ದಾರೆ ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಿಕೊಂಡು ಏನೇ ವ್ಯತ್ಯಾಸ ಗಳಿದ್ದರೂ ಅದನ್ನು ಸರಿಪಡಿಸಿಕೊಂಡು ಮುಂದೆ ಹೋಗುವಂತೆ ಮಾರ್ಗದರ್ಶನ ಮಾಡಿದ್ದಾರೆ ಅವರ ಮಾತಿಂದ ನನಗೆ ತುಂಬಾ ಸಂತೋಷ ಆಯ್ತು ಭೇಟಿ ವೇಳೆ‌ ಅವರ ಹೋರಾಟ ಮತ್ತು ನಮ್ಮ ತಂದೆಯವರ ಹೋರಾಟಗಳನ್ನು ನೆನಪು ಮಾಡಿಕೊಂಡ್ರು ಮಾಜಿ ಪ್ರಧಾನ ಮಂತ್ರಿ ಗಳು, ದೇವೇಗೌಡರನ್ನು ಇವತ್ತು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ ಅವ್ರು ಬಹಳ ಹೆಮ್ಮೆ ಪಟ್ಟರು ನಿಮ್ದು ಒಂದು…

Read More

ಲಕ್ನೋ: ಐಸಿಸ್‌ (ISIS) ಪರವಾಗಿ ಕೆಲಸ ಮಾಡುತ್ತಿದ್ದ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ (Aligarh Muslim University) ಆರು ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ (Uttar Pradesh) ಭಯೋತ್ಪಾದನಾ ನಿಗ್ರಹ ದಳದ (ATS) ಪೊಲೀಸರು ಬಂಧಿಸಿ ದ್ದಾರೆ. ಆರು ವ್ಯಕ್ತಿಗಳನ್ನು ಬಂಧಿಸುವುದರೊಂದಿಗೆ ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಭಯೋತ್ಪಾದಕ ಜಾಲವು ಬೆಳಕಿಗೆ ಬಂದಿದೆ. ಆರು ಮಂದಿಯಲ್ಲಿ ನಾಲ್ವರನ್ನು ರಕೀಬ್ ಇನಾಮ್, ನಾವೇದ್ ಸಿದ್ದಿಕಿ, ಮೊಹಮ್ಮದ್ ನೋಮನ್ ಮತ್ತು ಮೊಹಮ್ಮದ್ ನಾಜಿಮ್ ಎಂದು ಗುರುತಿಸಲಾಗಿದೆ.  https://ainlivenews.com/a-4-year-old-child-was-raped-by-a-police-sub-inspector/ ಎಲ್ಲಾ ಬಂಧಿತ ಆರೋಪಿಗಳು ಅಲಿಗಢ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯೊಂದಿಗೆ (Student Union) ಸಂಬಂಧ ಹೊಂದಿದ್ದರು. ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಪ್ರಕಾರ ಬಂಧಿತ ಆರೋಪಿಗಳು ದೇಶದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿದ್ದರು. ವಿದ್ಯಾರ್ಥಿ ಸಂಘದ ಸಭೆಗಳು ಐಸಿಸ್‌ನ ಹೊಸ ನೇಮಕಾತಿ ಸೆಲ್ ಆಗಿ ಮಾರ್ಪಟ್ಟಿವೆ ಎಂದು ಹೇಳಿಕೊಂಡಿದೆ. ಮೂಲಗಳ ಪ್ರಕಾರ, ಅಲಿಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈಗ ಕೇಂದ್ರೀಯ ತನಿಖಾ ಸಂಸ್ಥೆಗಳ ನಿಗಾದಲ್ಲಿದ್ದಾರೆ.

Read More

ಬೆಂಗಳೂರು:ಬಿಜೆಪಿಯ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ ಬಿವೈ ವಿಜಯೇಂದ್ರ ಅವರು ಇಂದು ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದರು. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ದೇವೇಗೌಡರ ನಿವಾಸಕ್ಕೆ ತೆರಳಿ ಜೆಡಿಎಸ್ ವರಿಷ್ಟರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಕ್ಕೆ ದೊಡ್ಡ ಶಕ್ತಿ ಬಂದಿದೆ ಎಂದ್ರು. ನಾನಷ್ಟೇ ಅಲ್ಲ, ಎಲ್ಲಾ ಹಿರಿಯರು ನಿನ್ನ ಜತೆ ಇರುತ್ತೇವೆ ಎಂದಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯನ್ನು ಒಗ್ಗಟ್ಟಾಗಿ ಎದುರಿಸಬೇಕಿದೆ. ಪ್ರವಾಸ ಮಾಡಿ ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡೋಣ ಎಂದಿದ್ದಾರೆ ಎಂದು ಹೇಳಿದರು.

Read More