ಬೆಂಗಳೂರು : ರನ್ ಮೆಷಿನ್ ವಿರಾಟ್ ಕೊಹ್ಲಿ ವಿಶ್ವಕಪ್-2023 ಲೀಗ್ ಹಂತದಲ್ಲಿ ಅಧಿಕ ರನ್ ಗಳಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಟೂರ್ನಿಯಲ್ಲಿ ಆಡಿರುವ 9 ಇನ್ನಿಂಗ್ಸ್‌ಗಳಲ್ಲಿ 2 ಶತಕ, 5 ಅರ್ಧಶತಕ ಸಹಿತ 594 ರನ್ ಚಚ್ಚಿದ್ದಾರೆ. ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ 591, ನ್ಯೂಜಿಲೆಂಡ್‌ನ ರಚಿನ್ ರವೀಂದ್ರ 565, ಭಾರತ ತಂಡದ ನಾಯಕ ರೋಹಿತ್ ಶರ್ಮಾ 503 ರನ್ ಗಳಿಸಿದ್ದಾರೆ. ಇನ್ನು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 499 ರನ್ ಸಿಡಿಸಿ ನಂತರದ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಐಸಿಸಿ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಶುಭಮನ್ ಗಿಲ್, ಅನಾರೋಗ್ಯ ಕಾರಣ ಟೂರ್ನಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದರು. ಅವರು 7 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿ 3 ಅರ್ಧ ಶತಕ ಸಹಿತ 270 ರನ್ ಕಲೆಹಾಕಿದ್ದಾರೆ. ಆ ಮೂಲಕ ಈ ಪಟ್ಟಿಯಲ್ಲಿ 34ನೇ ಸ್ಥಾನದಲ್ಲಿ ಉಳಿದಿದ್ದಾರೆ. ಶ್ರೇಯಸ್ ಅಯ್ಯರ್ 421 ರನ್ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ 347 ರನ್ ಗಳಿಸಿದ್ದಾರೆ.…
Author: AIN Author
ದೀಪಾವಳಿ ಹಬ್ಬದ ಪ್ರಯುಕ್ತ ಟ್ರೆಡಿಷನಲ್ ಲುಕ್ನಲ್ಲಿ ರಿಷಬ್ ಫ್ಯಾಮಿಲಿ ಮಿಂಚುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಸ್ ವೈರಲ್ ಆಗಿದೆ. ರಿಷಬ್ ಶೆಟ್ಟಿ ಮನೆಯಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಮಕ್ಕಳ ಜೊತೆ ಜೊತೆ ರಿಷಬ್ ದೀಪ ಹಚ್ಚಿ ಸಂಭ್ರಮಿಸಿದರು. ಶೂಟಿಂಗ್ ಬ್ಯುಸಿ ನಡುವೆ ಕಾಂತಾರ ನಟ ಫ್ಯಾಮಿಲಿ ಜೊತೆ ಹಬ್ಬ ಆಚರಿಸಿದ ಖುಷಿಯಲ್ಲಿದ್ದಾರೆ. ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಆಯಕ್ಟಿವ್ ಆಗಿದ್ದು, ಮಕ್ಕಳ ಜೊತೆ ಬೆಳಕಿನ ಹಬ್ಬ ಆಚರಿಸಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ನಾಡಿನ ಜನತೆಗೆ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಕಾಂತಾರ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿರುವ ರಿಷಬ್ ಶೆಟ್ಟಿ ಮನೆಯಲ್ಲೂ ಹಬ್ಬ ಮಕ್ಕಳೊಂದಿಗೆ ಕಳೆಗಟ್ಟಿದೆ. ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿಗೆ ರಣ್ವಿತ್ ಶೆಟ್ಟಿ ಹಾಗೂ ರಾಧ್ಯಾ ಶೆಟ್ಟಿ ಎಂಬ ಮುದ್ದಾದ ಮಕ್ಕಳಿದ್ದಾರೆ. ಫೋಟೋಸ್ ನೋಡಿದ ನೆಟ್ಟಿಗರು ರಿಷಬ್ ಶೆಟ್ಟಿ ಅವರಿಗೆ ಹ್ಯಾಪಿ ದೀಪಾವಳಿ, ಸಂಪ್ರದಾಯ ಅಂದ್ರೆ ಹೀಗಿರಬೇಕು ಶೆಟ್ರೆ,…
ದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) 2023 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ (World Cup) ಮತ್ತೊಂದು ದಾಖಲೆ ಬರೆದಿದ್ದಾರೆ. ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 500 ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ನಾಯಕನಾಗಿ ಹೊರಹೊಮ್ಮಿದ್ದಾರೆ. ಟೂರ್ನಿಯ ಲೀಗ್ ಹಂತದಲ್ಲಿ ಆಡಿದ ಒಂಬತ್ತು ಪಂದ್ಯಗಳಲ್ಲಿ ಬಲಗೈ ಬ್ಯಾಟರ್ 55.89 ಸರಾಸರಿಯಲ್ಲಿ 503 ರನ್ ಗಳಿಸಿದ್ದಾರೆ. ಈ ಟೂರ್ನಿಯಲ್ಲಿ ಇದುವರೆಗೆ ಒಂದು ಶತಕ ಮತ್ತು ಮೂರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. 36 ವರ್ಷ ವಯಸ್ಸಿನ ರೋಹಿತ್ ಶರ್ಮಾ ಒಂದೇ ವಿಶ್ವಕಪ್ ಆವೃತ್ತಿಯಲ್ಲಿ 500 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಭಾರತೀಯ ನಾಯಕನಾಗಿ ದಾಖಲೆ ಮಾಡಿದ್ದಾರೆ. ಆ ಮೂಲಕ ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಿ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್ ಗಳಿಸಿದ ಭಾರತೀಯ ನಾಯಕನಾಗಿ ರೆಕಾರ್ಡ್ ಮಾಡಿದ್ದಾರೆ. ಗಂಗೂಲಿ ಭಾರತ ತಂಡದ ನಾಯಕನಾಗಿದ್ದ ಸಂದರ್ಭದಲ್ಲಿ 2003 ವಿಶ್ವಕಪ್‌ನಲ್ಲಿ 465 ರನ್ ಗಳಿಸಿ ಇದುವರೆಗೆ ಅಗ್ರಸ್ಥಾನದಲ್ಲಿದ್ದರು. ಒಂದೇ…
ಅಮರಾವತಿ: ವ್ಯಕ್ತಿಯೊಬ್ಬ ಮದ್ಯ (Alcohol) ಕೊಡಲಿಲ್ಲ ಎಂದು ವೈನ್ ಶಾಪ್‌ಗೇ (Wine Shop) ಬೆಂಕಿ (Fire) ಹಚ್ಚಿದ ಘಟನೆ ವಿಶಾಖಪಟ್ಟಣಂನ (Visakhapatnam) ಮಧುರ್ವಾಡ (Madurwada) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವೈನ್ ಶಾಪ್‌ಗೆ ಬೆಂಕಿ ಇಟ್ಟ ವ್ಯಕ್ತಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಆರೋಪಿಯನ್ನು ಮಧು ಎಂದು ಗುರುತಿಸಲಾಗಿದೆ. ಆತ ಮಧುವಾಡ ಬಡಾವಣೆಯ ವೈನ್ ಶಾಪ್‌ಗೆ ತಡರಾತ್ರಿ ಬಂದಿದ್ದ. ವೈನ್ ಶಾಪ್ ಮುಚ್ಚುವ ಸಮಯವಾಗಿದ್ದರಿಂದ ಶಾಪ್ ಸಿಬ್ಬಂದಿ ಮದ್ಯ ನೀಡಲು ನಿರಾಕರಿಸಿದ್ದಾರೆ. ಇದರಿಂದ ಆರೋಪಿ ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ಉಂಟಾಗಿದೆ. ಬಳಿಕ ಆತನಿಗೆ ಎಚ್ಚರಿಕೆ ನೀಡಿದ ಬಳಿಕ ಆತ ಅಲ್ಲಿಂದ ತೆರಳಿದ್ದಾನೆ. ಎಚ್ಚರಿಕೆ ನೀಡಿದ್ದಕ್ಕೆ ಸಿಟ್ಟಾಗಿದ್ದ ಮಧು ಭಾನುವಾರ ಸಂಜೆ ಪೆಟ್ರೋಲ್ ಟ್ಯಾಂಕ್‌ನೊಂದಿಗೆ ವೈನ್ ಶಾಪ್‌ಗೆ ವಾಪಸ್ ಬಂದಿದ್ದಾನೆ. https://ainlivenews.com/joint_pain_suprem_ray_treatment_reiki/ ವೈನ್ ಶಾಪ್ ಒಳಗಡೆ ಮಾತ್ರವಲ್ಲದೆ ಸಿಬ್ಬಂದಿ ಮೇಲೂ ಪೆಟ್ರೋಲ್ ಅನ್ನು ಸುರಿದು ತಕ್ಷಣ ಬೆಂಕಿ ಹಚ್ಚಿದ್ದಾನೆ. ಈ ವೇಳೆ ಸಿಬ್ಬಂದಿ ಅಂಗಡಿಯಿಂದ ಹೊರಕ್ಕೆ ಓಡಿ ಹೋಗಿ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.…
ಬೆಂಗಳೂರು:-ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಇಂದು ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ಬಿ.ವೈ.ವಿಜಯೇಂದ್ರ ಅವರು ಪದಗ್ರಹಣ ಮಾಡಲಿದ್ದು, ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಇನ್ನು ವಿಜಯೇಂದ್ರ ಅವರ ಪದಗ್ರಹಣ ಸಮಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಬೆಳಗ್ಗೆ 6.30ರಿಂದಲೇ ಹೋಮ-ಹವನ ಶುರುವಾಗಿವೆ. ಕರ್ನಾಟಕದ ಬಿಜೆಪಿ ಕಚೇರಿಯಲ್ಲಿ ಈಗ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪಕ್ಷಕ್ಕೆ ಹೊಸ ಸಾರಥಿಯಾಗಿ ವಿಜಯೇಂದ್ರ ಅವರು ನೇಮಕಗೊಂಡು ಬುಧವಾರ ನಿರ್ಗಮಿತ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಬಿಜೆಪಿ ಕಚೇರಿಯನ್ನು ತೋರಣದಿಂದ ಅಲಂಕರಿಸಲಾಗಿದೆ. ಹಾಗೇ ಜಗನಾಥ್ ಭವನದ ಮುಂದೆ ರಂಗೋಲಿ ಬಿಡಿಸಲಾಗಿದೆ.
ಉಡುಪಿ: ಉಡುಪಿ ಸಂತೆಕಟ್ಟೆ ಸಮೀಪ ನೇಜಾರಿ ತ್ರಪ್ತಿ ನಗರದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣದ ಆರೋಪಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ಈ ಹತ್ಯೆಗೆ ಭಗ್ನ ಪ್ರೇಮ ಕಾರಣ ಎನ್ನಲಾಗಿದೆ. ಆರೋಪಿ ಪ್ರವೀಣ್ ಅರುಣ್ ಚೌಗಲೆ ಮಹಾರಾಷ್ಟ್ರದ ಸಾಂಗ್ಲಿಯವನಾಗಿದ್ದು, ಉಡುಪಿಯಲ್ಲಿ ಕೊಲೆ ಮಾಡಿದ ಬಳಿಕ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಸಂಬಂಧಿಕರೊಬ್ಬರ ಮನೆಯಲ್ಲಿ ಅಡಗಿ ಕುಳಿತಿದ್ದ. ಆತನ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಉಡುಪಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಪ್ರವೀಣ್ ಅರುಣ್ ಸಿಐಎಸ್ಎಫ್ ಸಿಬ್ಬಂದಿಯಾಗಿದ್ದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅಯ್ಯಾಜ್ ಪರಿಚಯವಾಗಿ ಇಬ್ಬರು ಸ್ವಲ್ಪ ಸಮಯ ಆತ್ಮೀಯವಾಗಿದ್ದರು. ಆದರೆ ನಂತರ ಅಯಾಜ್ ಆತನಿಂದ ದೂರವಾಗಿದ್ದಳು. ಇದರಿಂದ ಕುಪಿತನಾಗಿ ಭಗ್ನಪ್ರೇಮಿಯಾಗಿದ್ದ ಪ್ರವೀಣ್ ಆಕೆಯನ್ನು ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಉಡುಪಿಯ ಈ ಹತ್ಯಾಕಾಂಡ ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಆರೋಪಿ ಉಡುಪಿಗೆ ಬಂದಿದ್ದು ಕೆಲ…
ಹಲವು ದಿನಗಳಿಂದ ಸುದೀಪ್ ಅವರ ವಾರಿಯರ್ (Warrior) ಲುಕ್ ಇರುವಂತಹ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಇದು ಯಾವ ಸಿನಿಮಾದ್ದು? ಏನ್ ಕಥೆ ಎಂದು ಗೊತ್ತಾಗದೇ ಇರುವ ಕಾರಣದಿಂದಾಗಿ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಸದ್ಯ ಸುದೀಪ್ ಅಂತಹ ಸಿನಿಮಾ ಮಾಡುತ್ತಿಲ್ಲ. ಮ್ಯಾಕ್ಸ್ ಸಿನಿಮಾದಲ್ಲೂ ಅಂತಹ ಗೆಟಪ್ ಇಲ್ಲ. ಹಾಗಾಗಿ ಇದು ಜಾಹೀರಾತು ಒಂದರ ಲುಕ್ ಇರಬಹುದು ಎಂದು ಹೇಳಲಾಗುತ್ತಿದೆ. ಈ ನಡುವೆ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾದ ಶೂಟಿಂಗ್ ನಿರಂತರವಾಗಿ ನಡೆಯುತ್ತಿದೆ. ಬಿಗ್ ಬಾಸ್ ನಡುವೆಯೂ ತಪ್ಪದೇ ಸುದೀಪ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅಂದುಕೊಂಡಂತೆ ನಡೆದರೆ, ಡಿಸೆಂಬರ್ ಹೊತ್ತಿಗೆ ಮ್ಯಾಕ್ಸ್ (Max) ಸಿನಿಮಾದ ಬಹುತೇಕ ಶೂಟಿಂಗ್ ಮುಗಿಯಲಿದೆ. ಹಾಗಾಗಿ ಫೆಬ್ರವರಿಯಲ್ಲಿ (February) ಸಿನಿಮಾ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸಿನಿಮಾ ತಂಡವು ಅಧಿಕೃತವಾಗಿ ಮಾಹಿತಿ ನೀಡದೇ ಇದ್ದರೂ, ಚಿತ್ರೋದ್ಯಮದಲ್ಲಿ ಕೇಳಿ ಬರುತ್ತಿರುವ ಮಾತಿನಂತೆ ಫೆಬ್ರವರಿಗೆ ಮ್ಯಾಕ್ಸ್ ತೆರೆ ಕಾಣಲಿದೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಸುದೀಪ್ ಒಪ್ಪಿಕೊಂಡಿದ್ದರಿಂದ ಮತ್ತು…
ಮುಂಬೈ:- ಹೃದಯ ಸ್ತಂಭನದಿಂದಾಗಿ ಸಹಾರಾ ಇಂಡಿಯಾ ಪರಿವಾರದ ಸಂಸ್ಥಾಪಕ ‘ಸಹರಾಶ್ರೀ’ ಸುಬ್ರತಾ ರಾಯ್ ಅವರು ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಭಾನುವಾರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ರಾಯ್ ನಿಧನಕ್ಕೆ ಸಂತಾಪ ಸೂಚಿಸಿರುವ ಸಹಾರಾ ಇಂಡಿಯಾ ಗ್ರೂಪ್, “ಸಹಾರಾ ಇಂಡಿಯಾ ಪರಿವಾರದ ಮ್ಯಾನೇಜಿಂಗ್ ವರ್ಕರ್ ಮತ್ತು ಚೇರ್ಮನ್ ಆಗಿರುವ ‘ಸಹರಾಶ್ರೀ’ ಸುಬ್ರತಾ ರಾಯ್ ಅವರ ನಿಧನವನ್ನು ಕಂಪನಿಯು ತೀವ್ರ ದುಃಖದಿಂದ ತಿಳಿಸುತ್ತಿದೆ. ಅಂತಿಮ ವಿಧಿ ವಿಧಾನಗಳ ಬಗ್ಗೆ ವಿವರಗಳನ್ನು ಸರಿಯಾದ ಸಮಯದಲ್ಲಿ ತಿಳಿಸಲಾಗುವುದು. ಅವರು ನಮಗೆ ಮಾರ್ಗದರ್ಶಕರಾಗಿದ್ದರು. ಜೊತೆಗೆ ಕೆಲಸ ಮಾಡುವ ಎಲ್ಲರಿಗೂ ಸ್ಫೂರ್ತಿದಾಯಕವಾಗಿದ್ದರು” ಎಂದು ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿದೆ. ಸಹಾರಾ ಇಂಡಿಯಾ ಪರಿವಾರವು ರಾಯ್ ಅವರ ಪರಂಪರೆಯನ್ನು ಎತ್ತಿಹಿಡಿಯಲು ಬದ್ಧವಾಗಿದೆ ಮತ್ತು ಸಂಸ್ಥೆಯು ಅವರ ದೃಷ್ಟಿಕೋನವನ್ನು ಗೌರವಿಸಿ, ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ಹೇಳಿದೆ. ಮೃತರು ಪತ್ನಿ ಸ್ವಪ್ನಾ ರಾಯ್, ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್ ಎಂಬ ಇಬ್ಬರು…
ತುಮಕೂರು: “ಯಾವುದೋ ನಾಲ್ಕು ಬೈ ಎಲೆಕ್ಷನ್ ಗೆಲಿಸಿದ ಕ್ಷಣಕ್ಕೆ ದೊಡ್ಡ ಸಂಘಟನಾ ಚತುರ ಅಂತಾ ಸರ್ಟಿಫಿಕೇಟ್ ಕೊಡೋಕೆ ಆಗಲ್ಲಾ..” -ಇದು ಬಿವೈ ವಿಜಯೇಂದ್ರ ಅವರು ಸಂಘಟನಾ ಚತುರ ಎಂಬ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ ಎಂಬ ಅಭಿಪ್ರಾಯಕ್ಕೆ ಸಂಬಂಧಿೈಸಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಆಡಿರುವ ವ್ಯಂಗ್ಯದ ಮಾತು. ಸುದ್ದಿಗಾರರ ಪ್ರಶ್ನೆಗಳೆಗೆ ಪ್ರತಿಕ್ರಿಯಿಸಿದ ಅವರು, ಇತ್ತೀಚಿನ ಬೈಎಲೆಕ್ಷನ್ ಗಳು ಯಾವ ಆಧಾರದ ಮೇಲೆ ಗೆಲುತ್ತೆ, ಸೋಲುತ್ತೆ ಅಂತಾ ಗೊತ್ತಿದೆ. ಗುಂಡ್ಲುಪೇಟೆ, ನಂಜನಗೂಡು ಬೈಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆದ್ರು, 6 ತಿಂಗಳಿಗೆ ಸೋತ್ರು. ಬೈಲೆಕ್ಷನ್ ರಿಸಲ್ಟ್ ತರೋಕೆ ಮಾನದಂಡಗಳು ಬೇರೆ ಬೇರೆ ಇರುತ್ತೆ. ಹಾಗಾಗಿ ಬೈಎಲೆಕ್ಷನ್ ಗೆದ್ದಾಕ್ಷಣಕ್ಕೆ ಮಹಾ ಸಂಘಟನಾ ಚತುರರು ಅಂತಾ ಸರ್ಟಿಫಿಕೇಟ್ ಕೊಡೋಕೆ ಆಗೊಲ್ಲ ಎಂದು ಅಭಿಪ್ರಾಯಪಟ್ಟರು. https://ainlivenews.com/joint_pain_suprem_ray_treatment_reiki/ ಬಿಜೆಪಿಯಲ್ಲಿ ಬಹಳ ಸಮಯದಿಂದ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕ ಸ್ಥಾನ ನೆನೆಗುದಿಗೆ ಬಿದಿತ್ತು. ಏನೋ ಕೇಂದ್ರದ ಬಿಜೆಪಿ ಮುಖಂಡರಿಗೆ ಜ್ಙಾನೋದಯ ಆಗಿ ಅಧ್ಯಕ್ಷ ಸ್ಥಾನ ತುಂಬಿದ್ದಾರೆ. ಅದು ವಿಜಯೇಂದ್ರ ಅವರನ್ನ ಆ…
ನಿರ್ದೇಶಕ ದುನಿಯಾ ಸೂರಿ (Duniya Suri) ಈ ಹಿಂದೆ ರಕ್ಷಿತ್ ಶೆಟ್ಟಿಗಾಗಿ (Rakshit Shetty) ‘ಕದನ ವಿರಾಮ’ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿ ಆಯಿತು. ಆ ನಂತರ ಈ ಸಿನಿಮಾ ಆಗಲೇ ಇಲ್ಲ. ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ಸೂರಿ ಬ್ಯುಸಿಯಾದರು. ಇದೀಗ ಈ ಸಿನಿಮಾದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಕದನ ವಿರಾಮ ಸಿನಿಮಾವನ್ನು ದರ್ಶನ್ (Darshan) ಗಾಗಿ ಸೂರಿ ಮಾಡಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ದರ್ಶನ್ ಮತ್ತು ಸೂರಿ ಕಾಂಬಿನೇಷನ್ ನಲ್ಲಿ ಈ ಸಿನಿಮಾ ಬರಲಿದೆ ಎಂದೂ ಹೇಳಲಾಗುತ್ತಿತ್ತು. ಈ ಕುರಿತಂತೆ ಸೂರಿ ಸ್ಪಷ್ಟನೆ ಕೊಟ್ಟಿದ್ದಾರೆ. ಕದನ ವಿರಾಮ ಸಿನಿಮಾವನ್ನು ದರ್ಶನ್ ಅವರಿಗೆ ಮಾಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೇ, ದರ್ಶನ್ ಅವರ ಜೊತೆ ಮುಂದಿನ ದಿನಗಳಲ್ಲಿ ಸಿನಿಮಾ ಮಾಡುವುದಾಗಿಯೂ ಅವರು ಹೇಳಿಕೊಂಡಿದ್ದಾರೆ. ಸ್ಟಾರ್ ನಟರಿಗೆ ಸೂರಿ ಸಿನಿಮಾ ಮಾಡುವುದಿಲ್ಲ ಎಂಬ ಗಾಸಿಪ್ ಇತ್ತು. ಅದಕ್ಕೂ ಅವರು ತೆರೆ ಎಳೆದಿದ್ದಾರೆ. ಕಥೆ ಯಾರನ್ನು ಕೇಳುತ್ತದೆಯೋ ಅವರಿಗೆ ಸಿನಿಮಾ…