ಚಾಕೋಲೇಟ್ ಬಯಕೆ ಹೆಚ್ಚೇ? ಹಾಗಾದರೆ ನಿಮಗೆ ಈ ಪೋಷಕಾಂಶದ ಕೊರತೆಯಿರಬಹುದು ನೋಡಿ. ಈ ಚಾಕೋಲೇಟ್ ಪ್ರಿಯತೆ ಒಮ್ಮೊಮ್ಮೆ ಮೇರೆ ಮೀರುವ ಸಂದರ್ಭಗಳನ್ನೂ ನೀವು ಎದುರಿಸಿದ್ದೀರಾ? ಅಂದರೆ, ಇದ್ದಕ್ಕಿದಂತೆ ನಡುರಾತ್ರಿಯಲ್ಲೋ, ಅಥವಾ ಇನ್ನೆಲ್ಲೋ ಭಾಷಣ ಕೇಳುವಾಗಲೋ ಅಥವಾ ಇನ್ಯಾವುದೋ ಕೆಲಸದಲ್ಲಿದ್ದಾಗಲೇ, ಚಾಕೋಲೇಟ್ ತಿನ್ನಬೇಕೆಂಬ ಬಯಕೆ ಇದ್ದಕ್ಕಿದ್ದಂತೆ ಮೂಡುವುದು, ಬಹುಶಃ, ಹೀಗೆ ಅನಿಸಬೇಕೆಂದರೆ ನೀವು ಚಾಕೋಲೇಟ್ ಪ್ರೇಮಿ ಆಗಿರಲೇಬೇಕಾಗಿಲ್ಲ. ಇಷ್ಟರವರೆಗೆ ಚಾಕೋಲೇಟ್ ಇಷ್ಟವಿದ್ದರೂ, ಇದ್ದಕ್ಕಿದ್ದಂತೆ ತಿನ್ನಬೇಕೆಂಬ ಬಯಕೆ ಮೂಡದೆ ಇದ್ದರೂ, ಇತ್ತೀಚೆಗೆ ಯಾಕೋ ಯಾವಾಗಲೂ ಚಾಕೋಲೇಟ್ ತಿನ್ನಬೇಕೆಂಬ ಬಯಕೆ ನಿಮ್ಮನ್ನು ಕಾಡುತ್ತಿದ್ದರೆ ಯಾಕೆ ಹೀಗೆ ಎಂದು ತಲೆಕೆಡಿಸಬೇಡಿ. ನಿಮಗೆ ಹೀಗನಿಸುವುದಕ್ಕೆ ನೀವು ಅಂದುಕೊಂಡದ್ದಕ್ಕಿಂತಲೂ ಬೇರೆಯದೇ ಆದ ಕಾರಣಗಳಿರುತ್ತವೆ! ಹೌದು, ಚಾಕೋಲೇಟ್ ಬಯಕೆಯ ನಿಜವಾದ ಕಾರಣ ನಿಮ್ಮಲ್ಲಾಗಿರುವ ಪೋಷಕಾಂಶದ ಕೊರತೆಯೂ ಆಗಿರಬಹುದು. ಕೊಕೋ ಪೌಡರ್, ಕೊಕೋ ಬಟರ್ ಹಾಗೂ ಸಕ್ಕರೆ ಈ ಮೂರು ಪದಾರ್ಥಗಳು ಹೆಚ್ಚಿರುವ ಚಾಕೋಲೇಟ್ನಲ್ಲಿ ಇನ್ನುಳಿದ ಪದಾರ್ಥಗಳು ನೀವು ಯಾವ ಚಾಕೋಲೇಟ್ ಇಷ್ಟ ಪಡುತ್ತೀರಿ ಎಂಬುದರ ಮೇಲೆ ನಿರ್ಧರಿತವಾಗಿದೆ. ಮಿಲ್ಕ್, ಚಾಕೋಲೇಟ್, ಡಾರ್ಕ್…
Author: AIN Author
ಚಳಿಗಾಲದಲ್ಲಿ ಒಡೆವ ಹಿಮ್ಮಡಿಯ ಸಮಸ್ಯೆಗೆ ಇಲ್ಲಿದೆ ಪರಿಹಾರ. ಈ ಸಮಸ್ಯೆ ಸಣ್ಣದೆಂದು ಸಾಮಾನ್ಯರಿಗೆ ಅನಿಸಬಹುದು. ಆದರೆ ನಿಜವಾಗಿಯೂ ಈ ಸಮಸ್ಯೆ ಅನುಭವಿಸಿದವರಿಗಷ್ಟೇ ಅದರ ಗಂಭೀರತೆ ಅರ್ಥವಾಗುವುದು. ಯಾಕೆಂದರೆ, ಹಿಮ್ಮಡಿ ಒಡೆಯಲು ಒಮ್ಮೆ ಶುರುವಾದರೆ, ಚಳಿಗಾಲದ ತೀವ್ರತೆ ಹೆಚ್ಚಾಗುತ್ತಾ ಹೋದಂತೆಲ್ಲ, ಇದೂ ಕೂಡಾ ತೀವ್ರವಾಗುತ್ತಲೇ ಹೋಗುತ್ತದೆ. ಪಾದಕ್ಕೆ ಸೂಕ್ತ ಕಾಳಜಿ ತೆಗೆದುಕೊಳ್ಳದೆ ಇದ್ದರೆ, ಹಿಮ್ಮಡಿ ಒಡೆದು ಒಡೆದು ಕೊನೆಗೆ ಪಾದದಿಂದ ರಕ್ತ ಜಿನುಗಲು ಆರಂಭವಾಗುತ್ತದೆ. ಆಗ ಕಾಲು ನೆಲದಲ್ಲಿ ಊರಲೂ ಸಾಧ್ಯವಾಗದಷ್ಟು ನೋವು. ಹಾಗಾಗಿ, ಚಳಿಗಾಲ ಬರುತ್ತಿದ್ದಂತೆ, ಈ ಸಮಸ್ಯೆ ಪ್ರತಿಬಾರಿ ಎದುರಿಸುವ ಮಂದಿ ಖಂಡಿತವಾಗಿಯೂ ತಮ್ಮ ಪಾದದ ಕುರಿತು ಗಂಭೀರವಾಗಿ ಕಾಳಜಿ ತೆಗೆದುಕೊಳ್ಳಲೇಬೇಕು. ಇಲ್ಲಿ ನಿರ್ಲಕ್ಷ್ಯ ಸಲ್ಲ. ಹಾಗಾದರೆ ಬನ್ನಿ, ಚಳಿಗಾಲದಲ್ಲಿ ಪಾದಗಳ ಕಾಳಜಿ ಹೇಗೆ ಮಾಡಬೇಕು ಎಂಬುದನ್ನು ನೋಡೋಣ. ನಿತ್ಯವೂ ಪಾದಗಳನ್ನು ಚೆನ್ನಾಗಿ ಸ್ವಚ್ಛ ಮಾಡಿ. ಒದ್ದೆ ಪಾದಗಳನ್ನು ಮೆದುವಾದ ಟವೆಲ್ನಿಂದ ಮೆತ್ತಗೆ ಒರೆಸಿಕೊಂಡು, ಗಾಳಿಯಾಡಲು ಬಿಡಿ. ಮಲಗುವ ಮುನ್ನ, ಒಡೆದ, ಬಿರುಕು ಬಿಟ್ಟ ಹಿಮ್ಮಡಿಗೆ ದಪ್ಪ ಕ್ರೀಮನ್ನು ಹಚ್ಚಿ.…
ಬೆಂಗಳೂರು;- ಕಾಂಗ್ರೆಸ್ಸಿನ 50 ಜನ ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. ಈ ಸಂಬಂಧ ಮಾತನಾಡಿದ ಅವರು,ಲೋಕಸಭೆ ಚುನಾವಣೆಯ ಬಳಿಕ ಬಿಜೆಪಿ- ಜೆಡಿಎಸ್ನಲ್ಲಿ ಯಾರೂ ಉಳಿಯುವುದಿಲ್ಲ. ಇನ್ನೂ ಐದು ತಿಂಗಳು ಸಮಯ ಕೊಡುತ್ತೇನೆ. ಕಾಂಗ್ರೆಸ್ಸಿನ 50 ಜನ ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ’ ಎಂದರು. ಮಾತೆತ್ತಿದರೆ ವರಿಷ್ಠರು, ವರಿಷ್ಠರು ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಿದ್ದರೆ ರಾಜ್ಯ ನಾಯಕರಿಗೆ ಬೆಲೆ ಇಲ್ಲವೇ? ಎಲ್ಲವನ್ನೂ ವರಿಷ್ಠರೇ ಮಾಡುತ್ತಾ ಇದ್ದರೆ ನೀವೇನು ಮಾಡುತ್ತಾ ಇದೀರಿ? ಬೆರಳು ಚೀಪುತ್ತಾ ಇದ್ದೀರಾ’ ಎಂದು ವ್ಯಂಗ್ಯವಾಡಿದರು. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ನ 19 ಶಾಸಕರು ಬೆಂಬಲ ಕೊಡುತ್ತೇವೆ’ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ಕುಮಾರಸ್ವಾಮಿಯವರ ಬೆಂಬಲ ಕೇಳಿದವರ್ಯಾರು? ಈಗ ನಮಗೆ ಅವರ ಅವಶ್ಯಕತೆ ಏನಿದೆ? ಯಾರು ಮುಖ್ಯಮಂತ್ರಿ ಆಗುತ್ತಾರೆ, ಯಾರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎನ್ನುವುದು ಅವರಿಗೆ ಏಕೆ ಬೇಕು’ ಎಂದರು.
ಹುಬ್ಬಳ್ಳಿ: ಕೈ-ಕಾಲು ಕಳೆದುಕೊಂಡವರಿಗೆ ಕೃತಕ ಕೈ-ಕಾಲು ಕೊಡಲು ಮಜೇಥಿಯಾ ಫೌಂಡೇಷನ್ ಆಶ್ರಯದಲ್ಲಿ ನಗರದ ಮೂರುಸಾವಿರ ಮಠದ ಸಭಾ ಭವನದಲ್ಲಿ ಅಳತೆ ಪಡೆಯಲಾಯಿತು. ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಗವಿಕಲರ ಸೇವೆಯಲ್ಲಿ ಫೌಂಡೇಷನ್ ನಿರತವಾಗಿರುವುದು ಸಂತೋಷ ವಿಷಯ. ಬಡವರ ಬಗ್ಗೆ ಅತೀವ ಕಾಳಜಿ ಹೊಂದಿರುವ ಜಿತೇಂದ್ರ ಮಜೇಥಿಯಾ ಅವರು ಕಲಿಯುಗದ ಕರ್ಣ ಎಂದರು. ಕೈ-ಕಾಲು ಕಳೆದುಕೊಂಡವರು ನಿತ್ಯ ಜೀವನ ನಡೆಸುವುದು ಕಷ್ಟ. ಇಂಥವರ ಬಾಳಿಗೆ ಊರುಗೋಲಿನ ಅಗತ್ಯವಿದೆ. ಬೇರೆಯವರ ಮೇಲೆ ಅವಲಂಬನೆಯಾಗದೇ ಸ್ವಾವಲಂಬಿಯಾಗಲಿ ಎಂದು ಮಜೇಥಿಯಾದವರು ಈ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು. ಫೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ್ ಮಜೇಥಿಯಾ ಅಧ್ಯಕ್ಷತೆ ವಹಸಿ ಮಾತನಾಡಿ, ಅಂಗವಿಕಲ ಸೇವೆಗೆ ನಮ್ಮ ಫೌಂಡೇಷನ್ ಸದಾ ಸಿದ್ಧ ಎಂದು ವಾಗ್ದಾನ ಮಾಡಿದರು. ಹೈದರಾಬಾದ್ನಿಂದ ಆಗಮಿಸಿದ್ದ ಕೃತಕ ಕೈ-ಕಾಲು ತಯಾರಿಕ ಘಟಕವು ಅಂಗವಿಕಲರ ಕೈ-ಕಾಲುಗಳ ಅಳತೆ ತೆಗೆದುಕೊಂಡಿತು. ಫೌಂಡೇಷನ್ ಕಾರ್ಯದರ್ಶ ಅಮರೇಶ ಹಿಪ್ಪರಗಿ, ಡಾ.ಕೆ. ರಮೇಶ ಬಾಬು, ಡಾ.ವಿ.ಬಿ. ನಿಟಾಲಿ, ಡಾ. ನಾಗರಾಜ…
ಹುಬ್ಬಳ್ಳಿ: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ಅದರ ಮಹತ್ವ ಇರುವುದು, ಖುಶಿ ಸಿಗುವುದು ಯಾವಾಗ ಎಂದರೆ ನಾವೇ ಆಕಾಶ ಬುಟ್ಟಿ ಮಾಡಿ ಮನೆ ಮುಂದೆ ತೂಗು ಬಿಟ್ಟಾಗ. ಈ ಹಿನ್ನೆಲೆಯಲ್ಲಿ ಸುನಿಧಿ ಕಲಾ ಸೌರಭ ಸಂಸ್ಥೆಯು ಅನಂತ ಪ್ರೇರಣಾ ಕೇಂದ್ರದ ಸಹಯೋಗದೊಂದಿಗೆ ಆಕಾಶ ಬುಟ್ಟಿ ತಯಾರಿಸುವ ವಿಧಾನವನ್ನು ಕಲಿಸುವ ಶಿಬಿರ ಹಮ್ಮಿಕೊಂಡಿದೆ. ನವೆಂಬರ್ 7ರಿಂದ 9ರ ವರೆಗೆ ನಿತ್ಯ ಸಂಜೆ 4ಕ್ಕೆ ಆಕಾಶಬುಟ್ಟಿ ತಯಾರಿಕೆ ಕಲಿಸಿಕೊಡಲಾಗುವುದು. ಇಲ್ಲಿಯ ವಿಜಯನಗರ ಕೆಂಪಣ್ಣನವರ ಕಲ್ಯಾಣ ಮಂಟಪ ಪಕ್ಕದ ಅನಂತ ಪ್ರೇರಣಾ ಕೇಂದ್ರದ ಸಭಾಂಗಣದಲ್ಲಿ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ವೀಣಾ ಅಠವಲೆ ಅವರನ್ನು ಸಂಪಕಿರ್ಸಬಹುದು ಎಂದು ಸಂಸ್ಥೆಯ ಅಧ್ಯಕ್ಷ ಸುಭಾಸ ನರೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು;- ರಾಜಧಾನಿ ಬೆಂಗಳೂರಲ್ಲಿ ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಕಲ್ಲು ಕ್ವಾರಿಯನ್ನು ಸ್ಥಗಿತಗೊಳಿಸಿದ್ದಕ್ಕೆ ಡಿಡಿ ಪ್ರತಿಮಾ ಕೊಲೆ ಶಂಕೆ ವ್ಯಕ್ತವಾಗಿದೆ. ಹಿರಿಯ ಅಧಿಕಾರಿ ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರ ಜಿಲ್ಲೆ ಹುಣಸಮಾರನಹಳ್ಳಿಯಲ್ಲಿ ಕ್ವಾರಿ ಸ್ಥಗಿತಗೊಳಿಸಿದ್ರು. ಅಕ್ರಮ ಗಣಿಗಾರಿಕೆ ಸಂಬಂಧ ಉಪ ನಿರ್ದೇಶಕಿ ಪ್ರತಿಮಾ ವರದಿ ನೀಡಿದ್ದರು. ಗ್ರಾಮದ ಸರ್ವೆ ನಂಬರ್ 177, 179ರಲ್ಲಿ 4 ಎಕರೆ ಜಾಗದಲ್ಲಿ ದೂರು ಬಂದಿತ್ತು. ದೂರಿನ ಅನ್ವಯ ಅಧಿಕಾರಿಗಳು ಸ್ಥಳಕ್ಕೆ ಪರಿಶೀಲನೆ ನಡೆಸಿದ್ದರು. ಲೈಸೆನ್ಸ್ ಪಡೆಯದೆ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರು. ಕಲ್ಲು ಬಂಡೆಗಳನ್ನ ಅಕ್ರಮವಾಗಿ ಬ್ಲಾಸ್ಟ್ ಮಾಡುತ್ತಿದ್ದರು. ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿ ಪ್ರತಿಮಾ ಇದನ್ನು ನಿಲ್ಲಿಸಿದ್ದರು. ನಾಲ್ಕು ಎಕರೆ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಕಲ್ಲು ಕ್ವಾರಿಯನ್ನ ನಿಲ್ಲಿಸಿದ್ದಕ್ಕೆ ಮರ್ಡರ್ ಶಂಕೆ ವ್ಯಕ್ತವಾಗಿದೆ.
ಜಡೇಜಾ ಸ್ಪಿನ್ ಮೋಡಿಗೆ ಸೌತ್ ಆಫ್ರಿಕಾ ಉಡೀಸ್ ಆಗಿದೆ. ವಿಶ್ವಕಪ್ 2023ರ ಟೂರ್ನಿಯಲ್ಲಿ ಭಾರತ 8ನೇ ಗೆಲುವು ದಾಖಲಿಸಿದೆ. ಸೌತ್ ಆಫ್ರಿಕಾ ವಿರುದ್ಧವೂ ಭಾರತ ಮಾರಕ ಬೌಲಿಂಗ್ ದಾಳಿ ಸಂಘಟಿಸಿದೆ. ಇದರ ಪರಿಣಾಮ ಸೌತ್ ಆಫ್ರಿಕಾ 83 ರನ್ಗೆ ಆಲೌಟ್ ಆಗಿದೆ. ಟೀಂ ಇಂಡಿಯಾ 243 ರನ್ ಗೆಲುವು ದಾಖಲಿಸಿದೆ. ಲೀಗ್ ಹಂತದ 8 ಪಂದ್ಯ ಗೆದ್ದಿರುವ ಭಾರತ ಕೊನೆಯ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ಧ ಹೋರಾಟ ನಡೆಸಲಿದೆ. ಹುಟ್ಟುಹಬ್ಬದ ದಿನವೇ ವಿರಾಟ್ ಕೊಹ್ಲಿ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. ಹೀಗಾಗಿ ಭಾರತ 327 ರನ್ ಟಾರ್ಗೆಟ್ ನೀಡಿತ್ತು. ಸೌತ್ ಆಫ್ರಿಕಾ ಬ್ಯಾಟಿಂಗ್ ಸ್ಟ್ರೆಂಥ್ ಚೆನ್ನಾಗಿದೆ. ಆದರೆ ಭಾರತದ ಬಲಿಷ್ಠ ಬೌಲಿಂಗ್ ಪಡೆ ಹರಿಣಗಳಿಗೆ ಅವಕಾಶವೇ ನೀಡಲಿಲ್ಲ. ಎರಡನೇ ಓವರ್ನಿಂದಲೇ ವಿಕೆಟ್ ಬೇಟೆ ಆರಂಭಗೊಂಡಿತು. ಮೊಹಮ್ಮದ್ ಸಿರಾಜ್ ಎಸೆತದಲ್ಲಿ ಕ್ವಿಂಟನ್ ಡಿಕಾಕ್ ಬೋಲ್ಡ್ ಆಗಿ ಪೆವಿಲಿಯನ್ ಸೇರಿದರು ವಿಶ್ವಕಪ್ ಟೂರ್ನಿಯಲ್ಲಿ ನಿರಾಸೆ ಮೂಡಿಸಿದ ನಾಯಕ ತೆಂಬಾ ಬವುಮಾ ಭಾರತ ವಿರುದ್ಧವೂ ನೆಲೆ ಕಂಡಕೊಳ್ಳಲಿಲ್ಲ. ಇದಕ್ಕೆ…
ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ಭರ್ಜರಿ ಜಯ ದಾಖಲಿಸಿದೆ. ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 5 ವಿಕೆಟ್ ಗಳ ನಷ್ಟಕ್ಕೆ 326 ರನ್ ಗಳ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ ಸೌತ್ ಆಫ್ರಿಕಾ ಬ್ಯಾಟರ್ ಗಳು ಭಾರತ ತಂಡದ ಬೌಲರ್ ಗಳ ದಾಳಿಗೆ ತತ್ತರಿಸಿ ಹೋಗಿದ್ದಾರೆ. ಸೌತ್ ಆಫ್ರಿಕಾವನ್ನು 27 ಓವರ್ ಗಳಲ್ಲಿ (27.1) 10 ವಿಕೆಟ್ ಪಡೆದು ಕೇವಲ 83 ರನ್ ಗಳಿಗೆ ಆಲೌಟ್ ಮಾಡಿ ಭಾರತ ತಂಡ ಅಜಯ ಆಟ ಮುಂದುವರಿಸಿದೆ.
ಕೋಲ್ಕತಾ;- ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ತನ್ನ ಹೆಸರಿನಲ್ಲಿದ್ದ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ ಅವರಿಗೆ ಭಾರತದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಭಿನಂದನೆ ಸಲ್ಲಿಸಿದ್ದಾರೆ. ವಿರಾಟ್ ಚೆನ್ನಾಗಿ ಆಡಿದ್ದೀರಿ.. 49 ರಿಂದ 50 ಕ್ಕೆ ಹೋಗಲು ನನಗೆ 365 ದಿನಗಳು ಬೇಕಾಯಿತು. ನೀವು 49 ರಿಂದ 50 ಕ್ಕೆ ಹೋಗಿ ಮುಂದಿನ ಕೆಲವು ದಿನಗಳಲ್ಲಿ ನನ್ನ ದಾಖಲೆಯನ್ನು ಮುರಿಯುತ್ತೀರಿ ಎಂದು ನಾನು ಭಾವಿಸುತ್ತೇನೆ.ಅಭಿನಂದನೆಗಳು!!’ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಮುನ್ನ’ವಿರಾಟ್, ನಿಮ್ಮ ಉತ್ಸಾಹ ಮತ್ತು ಪ್ರದರ್ಶನಗಳಿಂದ ನೀವು ಹೃದಯಗಳನ್ನು ಗೆಲ್ಲುತ್ತಲೇ ಇರಿ. ನಿಮ್ಮ ಮುಂದೆ ಉತ್ತಮ ವರ್ಷವಿರಲಿ ಎಂದು ಹಾರೈಸುತ್ತೇನೆ’ ಎಂದು ಜನ್ಮದಿನದ ಶುಭಾಶಯಗಳನ್ನು ಕೋರಿದ್ದರು.
ಕೋಲಾರ;- ಕಾಂಗ್ರೆಸ್ ಸರ್ಕಾರ ಬಂದಿರೋದ್ರಿಂದ ರಾಜ್ಯಕ್ಕೆ ಬರ ಬಂದಿದೆ ಎಂದು ಸಂಸದ ಮುನಿಸ್ವಾಮಿ ಕಿಡಿಕಾರಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಈ ಸರ್ಕಾರದ ಕಾಲ್ಗುಣ ಹೇಗಿದೆ ಅಂದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯಕ್ಕೆ ಬರ ಬಂತು. ಸುಳ್ಳು ಭರವಸೆ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಅಧಿಕಾರ ಸಿಕ್ಕ ಬಳಿಕ ರೈತರನ್ನು ನಿರ್ಲಕ್ಷ್ಯ ಮಾಡಲಾಯಿತು. ರಾಜ್ಯಾದ್ಯಂತ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬರಗಾಲ ತೀವ್ರವಾಗಿದೆ ಈವರೆಗೆ ಯಾವ ರೈತರಿಗೂ ಪರಿಹಾರ ಇರಲಿ, ಕನಿಷ್ಟ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ವಾಗ್ದಾಳಿ ನಡೆಸಿದರು. ಅಧಿಕಾರಕ್ಕೆ ಬರ್ತಿದ್ದಂತೆ ಕಮಿಷನ್, ಲೂಟಿ ಹೊಡೆಯುವ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ನೂರಾರು ಕೋಟಿ ಹಣ ಸರ್ಕಾರಿ ಮನೆಯಲ್ಲಿ ಸಿಕ್ಕಿದೆ. ಇದನ್ನ ನೋಡಿದ್ರೆ ಗೊತ್ತಾಗುತ್ತೆ ಇವರ ಸರ್ಕಾರ ಏನು ಮಾಡುತ್ತಿದೆ. ಹೊಸ ಸರ್ಕಾರ ಬಂದ ಮೇಲೆ ಜಿಲ್ಲೆಗೆ ಏನು ತಂದಿದ್ದಾರೆ ಹೇಳಲಿ? ಕೋಲಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರೈತರಿಗೂ ಮೋಸ, ಇತ್ತ ದಲಿತರಿಗೂ ಮೊಸ ಮಾಡುತ್ತಿರುವ ಸರ್ಕಾರ ಇದು. ಇಂಥ ಸರ್ಕಾರ…