Author: AIN Author

ಮಂಡ್ಯ :- ಮದ್ದೂರು ಪಟ್ಟಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶಾಸಕ ಕೆ.ಎಂ.ಉದಯ್ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಮುಖಂಡರು ಶಿವಪುರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಕ್ರೇನ್ ಮೂಲಕ ಭಾರಿ ಗಾತ್ರದ ಹೂವಿನ ಹಾರ ಹಾಕುವ ಮೂಲಕ ಅದ್ದೂರಿಯಾಗಿ ಅಭಿನಂದಿಸಿದರು. ಶಿವಪುರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ರಾತ್ರಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಅಗಮಿಸುವ ಮುನ್ನ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗಣ್ಯರನ್ನು ಪಟಾಕಿ ಸಿಡಿಸಿ, ಬೃಹತ್ ಹೂವಿನ ಹಾರ ಹಾಕಿ ಸಡಗರ ಸಂಭ್ರಮದಿಂದ ಬರ ಮಾಡಿಕೊಳ್ಳಲಾಯಿತು. ವಿವಾಹ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಕದಲೂರು ಗ್ರಾಮದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸ್ವೀಕರಿಸಿದರು. ಬಳಿಕ, ಶಾಸಕ ಕೆ.ಎಂ.ಉದಯ್ ಅವರ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿ ಮುಂಬರುವ ಲೋಕಸಭಾ, ಜಿಪಂ ಹಾಗೂ ತಾಪಂ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಯಾವ ರೀತಿ ಗೆಲ್ಲಿಸಬೇಕು ಮತ್ತು ಪಕ್ಷದ ಸಂಘಟನೆ ಹೇಗೆ ಮಾಡಬೇಕು ಎಂಬುವುದರ…

Read More

ನವದೆಹಲಿ: ಭಾರತ ಕ್ರಿಕೆಟ್ ತಂಡ ವಿಶ್ವಕಪ್ ಗೆಲುವಿನ ಹಂಬಲದಲ್ಲಿ ಅಂತಿಮ ಹಂತದಲ್ಲಿ ಎಡವಿತು. ಭಾನುವಾರ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಫೈನಲ್‌ನಲ್ಲಿ ಆಸ್ಟ್ರೇಲಿಯಾ ಆರು ವಿಕೆಟ್‌ಗಳ ಜಯ ಸಾಧಿಸಿತು. ಫೈನಲ್‌ನಲ್ಲಿ ಭಾರತದ ಸೋಲಿಗೆ ಕಾರಣವಾದ ಐದು ತಿರುವುಗಳೇನು ಎಂಬುದನ್ನು ನೋಡೋಣ. ಮಿಂಚುವಲ್ಲಿ ವಿಫಲರಾದ ಗಿಲ್‌ ಭಾರತ ತಂಡದ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಉತ್ತಮ ಆರಂಭ ನೀಡಿದ್ದರು. ಆದರೆ ಅವರಿಗೆ ಜೊತೆಯಾಗಿ ನಿಲ್ಲುವಲ್ಲಿ ಶುಭಮನ್‌ ಗಿಲ್‌ ಎಡವಿದರು. ಇದರಿಂದ ಭಾರತಕ್ಕೆ ಉತ್ತಮ ಆರಂಭ ಒದಗಿಸಲು ಸಾಧ್ಯವಾಗಲಿಲ್ಲ. ಕೇವಲ 4 ರನ್‌ ಗಳಿಸಿ ಕ್ಯಾಚ್‌ ನೀಡಿ ಗಿಲ್‌ ಪೆವಿಲಿಯನ್‌ ಸೇರಿದರು. ತಂತ್ರಗಾರಿಕೆ ಮೂಲಕ ಭಾರತದ ಬ್ಯಾಟರ್‌ಗಳು ಹೆಚ್ಚು ರನ್‌ ಹೊಡೆಯದಂತೆ ಕಟ್ಟಿಹಾಕುವಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳು ಯಶಸ್ವಿಯಾದರು. ಮಧ್ಯಮ ಕ್ರಮಾಂಕದಲ್ಲಿ ನಿಧಾನಗತಿಯ ಆಟ ಐದನೇ ಓವರ್‌ನಲ್ಲಿ ಶುಭಮನ್ ಗಿಲ್ ಔಟಾದ ನಂತರ, ರೋಹಿತ್ ಶರ್ಮಾ ಆಕ್ರಮಣಕಾರಿ ಸ್ಟ್ರೋಕ್‌ಗಳನ್ನು ಆಡುವುದನ್ನು ಮುಂದುವರೆಸಿದರು. 10 ನೇ ಓವರ್‌ನಲ್ಲಿ ಔಟಾಗುವ ಮೊದಲು 31 ಎಸೆತಗಳಲ್ಲಿ…

Read More

ಮುಂಬೈ: ಮಹಾರಾಷ್ಟ್ರದ (Maharashtra) ಹಿಂಗೋಲಿಯಲ್ಲಿ (Hingoli) ಸೋಮವಾರ ಬೆಳಗ್ಗೆ 3.5 ತೀವ್ರತೆಯ ಭೂಕಂಪ (Earthquake) ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಇಂದು ಬೆಳಗ್ಗೆ 5:09ಕ್ಕೆ 5 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯನ್ನು ತೋರಿಸಿದೆ. ಸದ್ಯ ಯಾವುದೇ ಹಾನಿಯ ವರದಿಯಾಗಿಲ್ಲ. ಈ ಬಗ್ಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.  https://ainlivenews.com/fast-bowler-shami-who-has-created-a-new-sensation-decision-to-hire-as-brand-ambassador/ ಇತ್ತೀಚೆಗೆ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಭೂಕಂಪ ಸಂಭವಿಸಿತ್ತು. ಹರಿಯಾಣದ ಫರಿದಾಬಾದ್‌ನಲ್ಲಿ 9 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರಬಿಂದುವನ್ನು ಗುರುತಿಸಲಾಗಿತ್ತು. ಅಕ್ಟೋಬರ್ 3ರಂದು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಭೂಕಂಪನ ಸಂಭವಿಸಿತ್ತು. ಸ್ಥಳೀಯ ಜನರು ಭಯಭೀತರಾಗಿ ತಮ್ಮ ಮನೆ, ಕಚೇರಿಗಳಿಂದ ಹೊರಗೆ ಓಡಿದ್ದರು. 

Read More

ಅಹಮದಾಬಾದ್‌: ವಿಶ್ವಕಪ್‌ ಸೋಲಿನಿಂದ ನಿರಾಸೆಗೊಂಡಿರುವ ಟೀಂ ಇಂಡಿಯಾಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಯ ನೀಡಿದ್ದಾರೆ. ಆಸ್ಟ್ರೇಲಿಯಾ ತಂಡದ ಗೆಲುವಿಗೆ ಅಭಿನಂದನೆ ಸಲ್ಲಿಸಿರುವ ಮೋದಿ, ಟೀಂ ಇಂಡಿಯಾ ಆಟಗಾರರಿಗೆ ಅಭಯ ನೀಡಿದ್ದಾರೆ. ಈ ಕುರಿತು ಸೋಶಿಯಲ್‌ ಮೀಡಿಯಾ ಎಕ್ಸ್‌ ನಲ್ಲಿ ಹೇಳಿಕೆ ನೀಡಿರುವ ಪ್ರಧಾನಿ ಮೋದಿ, ಆತ್ಮೀಯ ಟೀಂ ಇಂಡಿಯಾ, ಈ ವಿಶ್ವಕಪ್‌ ಟೂರ್ನಿ ಮೂಲಕ ನಿಮ್ಮ ಅಸಾಧಾರಣ ಪ್ರತಿಭೆ ಗಮನ ಸೆಳೆದಿದೆ. ಉತ್ಸಾಹದಿಂದಲೇ ನೀವು ಆಡಿದ್ದೀರಿ, ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದೀರಿ. ನಾವು ಇಂದು ಮತ್ತು ಯಾವಾಗಲೂ ನಿಮ್ಮೊಂದಿಗೆ ಇರುತ್ತೇವೆ ಎಂದು ಅಭಯ ನೀಡಿದ್ದಾರೆ ಇದೇ ವೇಳೆ ವಿಶ್ವಕಪ್‌ನಲ್ಲಿ ಅಮೋಘ ಜಯ ಸಾಧಿಸಿದ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಆಸ್ಟ್ರೇಲಿಯಾ ತಂಡವೂ ಶ್ಲಾಘನೀಯ ಪ್ರದರ್ಶನ ನೀಡಿದ್ದು, ಟ್ರಾವಿಸ್‌ ಹೆಡ್‌ ಅವರ ಇಂದಿನ ಆಟ ಗಮನಾರ್ಹವಾಗಿದೆ ಎಂದು ತಿಳಿಸಿದ್ದಾರೆ. ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 240…

Read More

ಅಹಮದಾಬಾದ್: ಭಾರತದ ವಿಶ್ವಕಪ್ ಗೆಲ್ಲುವ ನಿರೀಕ್ಷೆ ಹುಸಿಯಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿದೆ. ಅಹಮದಬಾದ್‍ನ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆದ ಫೈನಲ್ ಪಂದ್ಯದಲ್ಲಿ ಭಾರತ ಟೀಂ ಆಸ್ಟ್ರೇಲಿಯಾ (IND Vs AUS) ವಿರುದ್ಧ 6 ವಿಕೆಟ್‍ಗಳ ಸೋಲನ್ನು ಕಂಡಿದೆ. 20 ವರ್ಷಗಳ ಸೇಡನ್ನ ತೀರಿಸಿಕೊಳ್ಳುವ ತವಕದಲ್ಲಿದ್ದ ಭಾರತಕ್ಕೆ ಆಸ್ಟ್ರೇಲಿಯಾ ತಿವಿದಿದ್ದು ಮತ್ತೆ ಭಾರತ ಫೈನಲ್‍ನಲ್ಲಿ ಮುಗ್ಗರಿಸಿದೆ. ಗೆಲುವಿಗೆ ಕಾರಣಗಳೇನು..? ಭಾರತ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಕಳಪೆಯಾಗಿದೆ. ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾವನ್ನು ವಿಕೆಟ್‍ನಲ್ಲೇ (Wicket) ಕಟ್ಟಿ ಹಾಕಿದೆ. ಅಲ್ಲದೆ ಮೋದಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡೋದು ಕಷ್ಟಕರವಾಗಿದ್ದು, ಸ್ಲೋ ಬ್ಯಾಟಿಂಗ್ ಪಿಚ್ ಆಗಿರೋ ಕಾರಣ ಸ್ಫೋಟಕ ಬ್ಯಾಟಿಂಗ್ ಸಾಧ್ಯವಾಗಲಿಲ್ಲ. ಎರಡನೇ ಬ್ಯಾಟಿಂಗ್‍ಗೆ (Batting) ಮೊದಲ ಬ್ಯಾಟಿಂಗ್‍ಗಿಂತ ಪಿಚ್ ಉತ್ತಮವಾಗಿತ್ತು. ಡ್ಯೂಪ್ಯಕ್ಟರ್ ಕೂಡ ಟೀಂ ಆಸ್ಟ್ರೇಲಿಯಾಗೆ (Australia) ಸಾಥ್ ನೀಡಿದ್ದು, ಭಾರತದ ಪ್ರಮುಖ ಬ್ಯಾಟ್ಸ್ ಮ್ಯಾನ್‍ಗಳ ವೈಫಲ್ಯವಾಗಿರುವುದು. ಮಿಡಲ್ ಓವರ್‍ನಲ್ಲಿ ಭಾರತಕ್ಕೆ ಹೆಚ್ಚು ರನ್ ಗಳಿಸಲು ಸಾಧ್ಯವಾಗದೆ…

Read More

ಕಲುಬುರಗಿ: KEA ಪರೀಕ್ಷೆ ಅಕ್ರಮ ಪ್ರಕರಣದ ಆರೋಪಿ ಇಂಜಿನಿಯರ್ ರುದ್ರಗೌಡನಿಗೆ ಇದೀಗ ಮೈತುಂಬ ಸಾಲ ಕಾರಣ ರಮ್ಮಿ ಆಡೋ ಚಟವಂತೆ.. ಹೌದು CID ಪೋಲೀಸರಿಂದ ಬಂಧಿತನಾಗಿರುವ ಆರೋಪಿ ರುದ್ರಗೌಡ ಆನ್ ಲೈನ್ ರಮ್ಮಿ ಆಡಿ ಆಡಿ ಎಲ್ಲೆಡೆ ಸಾಲ ಮಾಡಿದ್ದಾನಂತೆ.. ಮೊದಲು ಖಯಾಲಿ ಆಗಿದ್ದ ಆಟ ಬರುಬರುತ್ತಾ ಚಟವಾಗಿ ಪರಿವರ್ತನೆ ಆಗಿದೆ.. ವಿಚಾರಣೆ ವೇಳೆ ಈ ಮಾಹಿತಿ ಬಯಲಾಗಿದೆ.. ಆರಂಭದಲ್ಲಿ ಅಕ್ರಮವಾಗಿ ಗಳಿಸಿದ ಹಣ ಜೂಜಿಗಿಟ್ಟು ನಂತ್ರ ಸಾಕಾಗದ್ದಕ್ಕೆ ಮೈತುಂಬ ಸಾಲ ಮಾಡಿಕೊಂಡ ಎನ್ನಲಾಗಿದೆ.

Read More

ಅಹಮದಾಬಾದ್: ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್ 2023 (World Cup 2023) ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯವಾಗಿ ಸೋಲು ಕಂಡಿದೆ. ಈ ಹಿನ್ನೆಲೆಯಲ್ಲಿ ಕೋಚ್ ಆಗಿ ಮುಂದುವರಿಯುವ ಬಗ್ಗೆ ನಿರ್ಧಾರ ಕೈಗೊಳ್ಳಲು ಸಮಯ ಬೇಕಿದೆ ಎಂದು ಮುಖ್ಯ ಕೋಚ್ ರಾಹುಲ್ ಡ್ರಾವಿಡ್ (Rahul Dravid) ಹೇಳಿದರು. ದ್ರಾವಿಡ್ ಅವರ 2 ವರ್ಷಗಳ ಒಪ್ಪಂದವು ಭಾನುವಾರಕ್ಕೆ ಕೊನೆಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ತಂಡದ ಮುಖ್ಯ ಕೋಚ್ ಆಗಿ ಮುಂದುವರಿಯುವ ಬಗ್ಗೆ ನಾನಿನ್ನೂ ಯಾವುದೇ ರೀತಿಯ ಯೋಚನೆಗಳನ್ನು ಮಾಡಿಲ್ಲ. ಯಾಕಂದರೆ ನನ್ನ ಸಂಪೂರ್ಣ ಗಮನ ಈ ಬಾರಿಯ ಸರಣಿ ಮತ್ತು ಪಂದ್ಯದ ಮೇಲಿತ್ತು. ಭವಿಷ್ಯದ ಬಗ್ಗೆ ಯೋಚನೆ ಮಾಡಲು ಕೂಡ ಸಮಯವಿರಲಿಲ್ಲ. ಹೀಗಾಗಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ನನಗೆ ಒಂದಿಷ್ಟು ಸಮಯ ಬೇಕಾಗಿದೆ ಎಂದು ತಿಳಿಸಿದರು ನನ್ನ ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ. ಕಳೆದ ಎರಡು ವರ್ಷಗಳಿಂದ ನಾನು ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ (Cricket) ಆಟಗಾರರ ಜೊತೆ ಕೆಲಸ ಮಾಡಿದ್ದೇನೆ.…

Read More

ಬಾಗಲಕೋಟೆ: ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ ಸಂಭಾಷಣೆ ಕುರಿತು ಬಿಜೆಪಿ ಆರೋಪ ವಿಚಾರ ಸಂಬಂಧ ಬಾಗಲಕೋಟೆಯಲ್ಲಿ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಇದನ್ನು ನೋಡಿದ್ರೆ ನಗು ಬರುತ್ತೆ. ಇವರೆಲ್ಲರೂ ಸತ್ಯಹರಿಶ್ಚಂದ್ರ ರಾಜನ ಮನೆಯಲ್ಲಿ ಬಾಡಿಗೆ ಇದ್ದೋರ ಹಾಗೆ ಮಾತಾಡ್ತಾರಲ್ಲ. https://ainlivenews.com/fast-bowler-shami-who-has-created-a-new-sensation-decision-to-hire-as-brand-ambassador/ ಇಪ್ಪತ್ತು ವರ್ಷ ನೋಡಿಲ್ವಾ ಇವರ ಕಥೆ ಏನಿದೆ ಅನ್ನೋದು. ಬೇರೆಯವರಿಗೆ ಬೇರೆ ತರಹ ಅರ್ಥ ಆಗಬಹುದು. ಮಾತಾಡ್ಲಿ, ಆಪಾದನೆ ಮಾಡ್ಲಿ ಒಂದು ಬೆರಳು ಮುಂದೆ ಮಾಡುವಾಗ ನಾಲ್ಕು ಬೆರಳು ನಮ್ಮ ಕಡೆ ಇರ್ತಾವೆ ಅನ್ನೋ ಅರಿವು ಇರಬೇಕು ಎಂದರು.

Read More

ಇಲ್ಲೊಬ್ಬರು ತಂದೆ ತಮ್ಮ ಮಗಳ ಬರ್ತ್‌ಡೇಗೆ ಬಾಟಲ್‌ನಲ್ಲಿ ಕೊಳಚೆ ನೀರು ತುಂಬಿಸಿ ನೀಡಿದ್ದಾಳೆ., ಈ ವಿಚಾರವನ್ನು ಸ್ವತಃ ಮಗಳೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈ ಅನಿರೀಕ್ಷಿತ ಗಿಫ್ಟ್‌ನ ಕಾರಣದಿಂದ ಜನ ಕುತೂಹಲದಿಂದ ಈಕೆಯ ಈ ಪೋಸ್ಟ್‌ನ್ನು  ವೀಕ್ಷಿಸಿದ್ದು, ಈಗ 3 ಮಿಲಿಯನ್‌ಗೂ ಹೆಚ್ಚು ಜನ ಪೋಸ್ಟ್‌ ವೀಕ್ಷಿಸಿ, ವೈರಲ್ ಆಗಿದೆ.  ಆದರೆ ಇದರಲ್ಲೊಂದು ಜೀವನ ಪಾಠವಿದೆ…! ಈ ವಿಚಾರವನ್ನು ಮಗಳು ಪೆಟ್ರಿಶಿಯ  ಮೌ ತನ್ನ ಪೋಸ್ಟ್‌ನಲ್ಲಿ ವಿವರಿಸಿದ್ದು, ತಂದೆ ಇದುವರೆಗೆ ನೀಡಿದ ವಿಭಿನ್ನ ಗಿಫ್ಟ್‌ಗಳ ಬಗೆ ವಿವರಿಸಿದ್ದಾಳೆ. ನನ್ನ ತಂದೆ ಈ ರೀತಿ ವಿಭಿನ್ನ ಗಿಫ್ಟ್ ನೀಡುವುದು ಇದೇ ಮೊದಲೇನಲ್ಲ, ಈ ಹಿಂದೆ ಅವರು ನನಗೆ ಪ್ರಥಮ ಚಿಕಿತ್ಸೆ ಕಿಟ್, ಪೆಪ್ಪರ್ ಸ್ಪೇ, ವಿಶ್ವಕೋಶ(encyclopedia) ಕೀ ಚೈನ್‌ ಇವಿಷ್ಟೇ ಅಲ್ಲದೇ ತಾನೇ ಮಗಳಿಗಾಗಿ ಬರೆದ ಪುಸ್ತಕವೊಂದನ್ನು ಗಿಫ್ಟ್ ಆಗಿ ನೀಡಿದ್ದರು. ಇವೆಲ್ಲವೂ ಉತ್ತಮವಾದ ಅಪ್ಪನ ಈ ಹಿಂದಿನ ಗಿಫ್ಟ್‌ಗಳಾಗಿದ್ದವು ಎಂದು ಮಗಳು ಬಣ್ಣಿಸಿದ್ದಾಳೆ. ಆದರೆ ಈ ಬಾರಿ ಪಡೆದ ಗಿಫ್ಟ್ ಮತ್ತಷ್ಟು…

Read More

ಕೋಲಾರ: ಲಾಂಗು, ಮಚ್ಚು ಹಿಡಿದು ರೀಲ್ಸ್ ಮಾಡಿ ಸಾಮಾಜಿಕ‌ ಜಾಲತಾಣಗಳಲ್ಲಿ ಪೋಸ್ಟ್​​ ಹಾಕಿದ್ದ ​ಇಬ್ಬರು ಯುವಕರನ್ನು ಪೊಲೀಸರು ಕೋಲಾರ ತಾಲೂಕಿನ ನರಸಾಪುರದಲ್ಲಿ ಬಂಧಿಸಿದ್ದಾರೆ. ಅಕ್ರಮ ಶಸ್ತಾಸ್ತ್ರ ಕಾಯ್ದೆ ಪ್ರಕರಣ‌ದಡಿಯಲ್ಲಿ ನರಸಾಪುರದ ವೇಣು ಮತ್ತು ಪವನ್ ಕುಮಾರ್​ ಅನ್ನು ಬಂಧಿಸಲಾಗಿದೆ. ಇತ್ತೀಚಿಗೆ ಯುವಕರು ಅಪರಾಧ ಪ್ರಕರಣಗಳಲ್ಲಿ ಹಚ್ಚಾಗಿ ಕಾಣಿಸಿಕೊಂಡಿದ್ದರು. ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಟ್ಟಿದೆ.

Read More