ಬೆಂಗಳೂರು: ಯಾರದ್ದೋ ಮಾತು ಕೇಳಿ ದುಡ್ಡು ವಸೂಲಿ ಮಾಡಿದ್ದ ಪ್ರೋಬೇಶನರಿ ಪಿ ಎಸ್ ಐ ಅರೆಸ್ಟ್ ಸಿದ್ದಾರೂಡ್ ಪಿಎಸ್ ಐ ಸಿದ್ದರೋಡ್, ರಾಜ್ ಕಿಶೋರ್ , ಅಲ್ಲಾಬಾಕಾಶ್ ಬಂಧಿತ ಅರೋಪಿಗಳಾಗಿರುತ್ತಾರೆ. ಈ ಹಿಂದೆ ಕೇಸ್ ಕೆಜಿ ಹಳ್ಳಿಯಲ್ಲಿ ಕೇಸ್ ಆದಾಗ ಮಡಿವಾಳ ಪೊಲೀಸ್ ಠಾಣೆ ಯಲ್ಲಿ ಕರ್ತವ್ಯ ನಿರ್ವಹಿಸುತಿದ್ದ ಪಿ ಎಸ್ ಐ… ಹಲವು ತಿಂಗಳ ಹಿಂದೆ ಪ್ರೊ ಪಿ ಎಸ್ ಐ ಗೆ ತಾನೊಬ್ಬ ಹೋಮ್ ಗಾರ್ಡ್ ಎಂದು ಪರಿಚಯ ಮಾಡಿಕೊಂಡಿದ್ದ ರಾಜ್ ಕಿಶೋರ್..ಸದ್ಯ ಎಲ್ಲಿಯೂ ಹೋಮ್ ಗಾರ್ಡ್ ಕೆಲಸ ಮಾಡದ ರಾಜ್ ಕಿಶೋರ್ https://ainlivenews.com/terminate-service-of-marshals-dcm-dk/ ಪಿ ಎಸ್ ಐ ಗೂ ಹೋಮ್ ಗಾರ್ಡ್ ಭದ್ರತೆಯಲ್ಲಿ ಹೋದಾಗ ಪರಿಚಯ ಆಗುತ್ತೆ ಠಾಣೆ ಹತ್ರ ಬೈಕ್ ಸ್ಟಾರ್ಟ್ ಮಾಡಲು ಯತ್ನಸುವಾಗ ಬಂದಿದ್ದ ರಾಜ್ ಕಿರೋಶ್ ಬೈಕ್ ಸಮಸ್ಯೆ ಆಗಿದೆ ತಾನೆ ರಿಪೇರಿ ಮಾಡಿಸುತ್ತೆನೆ ಎಂದು ಹತ್ತಿರವಾಗಿದ್ದ..ನಮ್ಮ ಅಣ್ಣನಿಗೆ ಹಣ ಬರ್ಬೇಕು ನೀವು ಬನ್ನಿ ಸಾರ್ ಕೊಡಿಸಿ ಎಂದು ಹೇಳಿದ್ದಾನೆ. ಆಗ ಪಿ…
Author: AIN Author
ಭಾಗ್ಯಶ್ರೀ (Bhagyashree) ಅವರ ಬಿಗ್‌ಬಾಸ್ (Big Boss Kannada) ಪ್ರಯಾಣ ಈ ವಾರ ಕೊನೆಗೊಂಡಿದೆ. ಕೆಲವೊಮ್ಮೆ ಪರಿಶ್ರಮದಿಂದ, ಇನ್ನು ಕೆಲವೊಮ್ಮೆ ಅದೃಷ್ಟದ ಬಲದಿಂದ ಮಿಂಚುತ್ತ ಉಳಿದುಕೊಂಡಿದ್ದ ಭಾಗ್ಯಶ್ರೀ ಮನೆಯಿಂದ ಹೊರಗೆ ಬಂದಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಇಷ್ಟು ವಾರಗಳ ಕಾಲ ಅವರ ಬದುಕು ಹೇಗಿತ್ತು, ಮನೆಯಿಂದ ಹೊರಗೆ ಬರಲು ಕಾರಣವಾದ ಸಂಗತಿಗಳು ಯಾವವು, ಅವರ ಪ್ರಕಾರ ಮನೆಯೊಳಗೆ ಯಾರು ಫೇಕ್, ಯಾರು ಜೆನ್ಯೂನ್? ಈ ಎಲ್ಲದರ ಕುರಿತು ಭಾಗ್ಯಶ್ರೀ, ಬಿಗ್‌ಬಾಸ್ ಮನೆಯಿಂದ ಹೊರಬಂದು ಮರುಕ್ಷಣವೇ JioCinemaಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದಾರೆ. ಬಿಗ್‌ಬಾಸ್ ಮನೆಯಿಂದ ಈಗ ಜಸ್ಟ್ ಹೊರಗೆ ಬಂದಿದೀನಿ. ಇದು ಕೊನೆ ಅಂತ ಖಂಡಿತವಾಗಲೂ ಹೇಳೋದಿಲ್ಲ. ಅಲ್ಲಿ ತೆಗೆದುಕೊಂಡಿರುವ ಅನುಭವಗಳು ನನ್ನ ಜೀವನದಲ್ಲಿ ಹೊಸ ಪ್ರಾರಂಭ ಅಂತಲೇ ಹೇಳ್ತೀನಿ. ಈವತ್ತು ಮನೆಯಿಂದ ಹೊರಗಡೆ ಬರ್ತೀನಿ ಅಂತ ನಿರೀಕ್ಷೆ ಮಾಡಿದ್ದೆ. ಎಲ್ರೂ ನನ್ನ ನೋಡ್ತಿದ್ದ ರೀತಿ ಹೇಗಿತ್ತು ಅಂದ್ರೆ, ‘ಇವ್ರು ಟಾಸ್ಕ್‌ನಲ್ಲಿ ತುಂಬ ಹಿಂದೆ ಉಳಿಯುತ್ತಾರೆ’ ಎಂದೇ ನೋಡುತ್ತಿದ್ದರು. ಗ್ರೂಪ್‌ಗೆ ನನ್ನ ತೆಗೆದುಕೊಳ್ಳಬೇಕಾದರೆ, ನಾನು…
ಅಹಮ್ಮದಾಬಾದ್: ವಿಶ್ವಕಪ್ 2023 ರಲ್ಲಿ (World Cup 2023) ಆಸ್ಟ್ರೇಲಿಯಾ ಗೆಲುವಿನ ನಗೆ ಬೀರಿದ ಬೆನ್ನಲ್ಲೇ ಇದೀಗ ತಂಡದ ಆಟಗಾರ ಮಿಚೆಲ್ ಮಾರ್ಷ್ (Mitchell Marsh) ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಹೌದು. ಮಿಚೆಲ್ ಟ್ರೋಫಿ (World Cup Trophy) ಮೇಲೆ ಕಾಲಿಟ್ಟು ಕುಳಿತ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಟ್ರೋಫಿಗೆ ಅಗೌರವ ಸೂಚಿಸಿರುವ ಮಿಚೆಲ್ ನಡೆಯನ್ನು ಜನ ಖಂಡಿಸಿದ್ದು, ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಫೋಟೋದಲ್ಲಿ ಮಿಚೆಲ್ ಅವರು ತಮ್ಮ ಎರಡೂ ಕಾಲುಗಳನ್ನು ವಿಶ್ವಕಪ್ ಟ್ರೋಫಿಯ ಮೇಲೆ ಇಟ್ಟು ಗೆದ್ದು ಬೀಗಿದ್ದೇವೆ ಎಂಬ ಸಿಂಬಲ್ ತೋರಿಸಿದ್ದಾರೆ. ಈ ಫೋಟೋವನ್ನು ಆರಂಭದಲ್ಲಿ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ತಮ್ಮ ಇನ್‍ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಮ್ಮಿನ್ಸ್ ಫೋಟೋ ಶೇರ್ ಮಾಡುತ್ತಿದ್ದಂತೆಯೇ ಇದು ಭಾರೀ ವೈರಲ್ ಆಯಿತು. ಮಿಚೆಲ್ ವಿಶ್ವಕಪ್‍ಗೆ ಅಗೌರವ ತೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ರೋಲ್ ಮಾಡಲಾಗುತ್ತಿದೆ. ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿ ಗೆದ್ದ ಕೆಲವೇ ಗಂಟೆಗಳ ನಂತರ ಈ…
ಅಮರಾವತಿ: ವಿಶಾಖಪಟ್ಟಣಂನ (Visakhapatnam) ಬಂದರಿನಲ್ಲಿ (Fishing Harbour) ಭಾನುವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸುಮಾರು 40 ಮೀನುಗಾರಿಕಾ ದೋಣಿಗಳು (Boat) ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಸುಮಾರು 30 ಕೋಟಿ ರೂ. ನಷ್ಟವಾಗಿದೆ. ಕೆಲವು ಕಿಡಿಗೇಡಿಗಳು ದೋಣಿಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮೀನುಗಾರರು ಶಂಕಿಸಿದ್ದಾರೆ. ಘಟನೆಯ ಬಳಿಕ ಅಗ್ನಿಶಾಮಕ ದಳ ಬೆಂಕಿ ಆರಿಸಲು ಹರಸಾಹಸ ಪಟ್ಟರು. ಕೆಲವು ದೋಣಿಗಳಲ್ಲಿ ಸಿಲಿಂಡರ್, ಇಂಧನ ಟ್ಯಾಂಕ್‌ಗಳಿಗೆ ಬೆಂಕಿ ತಗುಲಿದ್ದರಿಂದ ಅವಘಡ ಸಂಭವಿಸಿದ್ದು, ಪ್ರದೇಶದ ಜನರು ಘಟನೆಯಿಂದ ಭೀತಿಗೊಂಡರು. ರಾತ್ರಿ 11:30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಆನಂದ್ ರೆಡ್ಡಿ ತಿಳಿಸಿದ್ದಾರೆ. https://ainlivenews.com/geo-scientist-statue-murder-case-explosive-issue-comes-to-light-during-investigation/ ದೋಣಿಗಳಲ್ಲಿನ ಸಿಲಿಂಡರ್‌ಗಳು ಸ್ಫೋಟಕ್ಕೆ ಕಾರಣವಾಗುತ್ತಿವೆ. ಆದ್ದರಿಂದ ನಾವು ಜನರನ್ನು ದೂರವಿರಲು ಕೇಳುತ್ತಿದ್ದೇವೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳ ಕಾರ್ಯನಿರ್ವಹಿಸುತ್ತಿವೆ. ಬೆಂಕಿಗೆ ಕಾರಣವನ್ನು ಇನ್ನೂ ದೃಢಪಡಿಸಲಾಗಿಲ್ಲ. ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಈ ಕುರಿತು ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಸಲಾಗುತ್ತಿದೆ ಎಂದು ಆನಂದ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಕಿಚ್ಚನ ಮನೆ ಮುಂದೆ ವ್ಯಕ್ತಿಯೊಬ್ಬನ ಅತಿರೇಕದ ವರ್ತನೆ ಕಂಡು ಸೆಕ್ಯೂರಿಟಿ ಗಾರ್ಡ್ ಗಳು ಶಾಕ್ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗೋಕೆ ಅವಕಾಶ ಮಾಡಿ ಕೊಡಿ ಅಂತ ರಾತ್ರೋ ರಾತ್ರಿ ಕಿಚ್ಚನ ಮನೆ ಮುಂದೆ ವ್ಯಕ್ತಿಯೊಬ್ಬ ಹೈ ಡ್ರಾಮ ಮಾಡಿದ್ದಾನೆ. ಚಾನ್ಸ್ ಕೇಳೋಕೆ ಅಂತ ಎತ್ತಿನ ಗಾಡಿ ಮೂಲಕ ಬಂದಿರೋ ಮಂಜು ಅನ್ನೋ ವ್ಯಕ್ತಿ ನಿನ್ನೆ ಸಂಜೆ ಸುಮಾರು 6 ಗಂಟೆಯಿಂದ 10ಗಂಟೆವರೆಗೂ ಸುದೀಪ್ ಮನೆ ಮುಂದೆ ಕಾದು ನಿಂತಿದ್ದಾನೆ. ಟಿ ನರಸಿಪುರದಿಂದ ಬಂದಿದಿನಿ ಅಂತ ಹೇಳಿದ್ದ ಮಂಜು, ನಾವು ಅನಕ್ಷರಸ್ತರು ರೈತರು ಬಿಗ್ ಬಾಸ್ ಹೋಗಲು ಅವಕಾಶ ಕೊಡಿ ಅಂತ ಎತ್ತಿನ ಗಾಡಿ ತಂದು ಸುದೀಪ್ ಮನೆ ಮುಂದೆ ನಿಲ್ಲಿಸಿದ್ದ. ನಂತರ ಸುದೀಪ್ ಮನೇಲಿಲ್ಲ ಚೆನ್ನೈ ಹೋಗಿದ್ದಾರೆ ಅಂತ ಹೇಳಿ ಸೆಕ್ಯುರಿಟಿ ಮನವಿ ಮಾಡಿ ಕಳಿಸಿದ್ದಾರೆ. ಮಂಜು ಹೇಳುವ ಪ್ರಕಾರ ಮನೆಯೊಳಗಿದ್ದ ವ್ಯಕ್ತಿಯೊಬ್ಬ ಮಂಜುಗೆ ಅವಾಚ್ಯಶಬ್ದಗಳಿಂದ ನಿಂದನೆ ಮಾಡಿದ್ರಂತೆ. ಧಮಾಕಿ ಸಹ ಹಾಕಿದ್ದಾರೆ ಅಂತ ಆರೋಪಿಸಿದ್ದಾನೆ. ಎತ್ತಿನ ಗಾಡಿಗೆ…
ಹುಬ್ಬಳ್ಳಿ: ಹುಬ್ಬಳ್ಳಿಯ ಧೀನಬಂದು ಕಾಲೋನಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಏಕೆಂದರೆ ಮದ್ಯಸೇವಿಸಿ ನಡುರಸ್ತೆಯಲ್ಲಿ ಚಾಕು ಹಿಡಿದು ವ್ಯಕ್ತಿ ಓಡಾಡುತ್ತಿದ್ದಾನೆ. ವಿನೋದ್ ನಡುಗಟ್ಟಿ ಎಂಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಚಾಕು ಹಿಡಿದು ಓಡಾಡುತ್ತಿದ್ದಾನೆ. ಕಳೆದ ಒಂದು ವಾರದಿಂದ ಇದೇ ಸ್ಥಿತಿ ಇದ್ದು ವಿನೋದ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಿಗ್‌ಬಾಸ್ (Bigg Boss Kannada) ಮನೆಯಿಂದ ಈ ಶನಿವಾರ ಹೊರಬಿದ್ದ ಸ್ಪರ್ಧಿ ಇಶಾನಿ (Ishani). ಇಷ್ಟು ವಾರಗಳ ಕಾಲದ ಅವರ ಬಿಗ್‌ಬಾಸ್ ಜರ್ನಿ ಹೇಗಿತ್ತು, ಅವರು ಹೊರಬೀಳಲು ಕಾರಣವಾದ ಸಂಗತಿಗಳು ಏನು, ಷೋ ಬಗ್ಗೆ ಅವರು ಏನು ಹೇಳುತ್ತಾರೆ, ಬಿಗ್‌ಬಾಸ್ ಮನೆಯಿಂದ ಹೊರಬಿದ್ದ ಮರುಕ್ಷಣವೇ ಅವರ ಎಕ್ಸ್‌ಕ್ಲೂಸೀವ್ ಸಂದರ್ಶನ ಇಲ್ಲಿದೆ. JioCinemaಗಾಗಿ ಅವರು ಹಲವಾರು ವಿಷಯಗಳನ್ನು ಮಾತನಾಡಿದ್ದಾರೆ. ಏನು ಹೇಳಬೇಕು ಎಂದು ಗೊತ್ತಾಗ್ತಿಲ್ಲ. ಬಿಗ್‌ಬಾಸ್ ಮನೆಯಿಂದ ಆಚೆ ಬಂದಿದೀನಿ. 99 ಪರ್ಸೆಂಟ್ ನನಗೆ ನಾನು ಇರ್ತೀನಿ ಅಂತ ಕಾನ್ಫಿಡೆನ್ಸ್ ಇತ್ತು. ಉಳಿದ ಒಂದು ಪರ್ಸೆಂಟ್ ನನಗೆ ಆಗಲ್ಲ ಅನಿಸಿತ್ತು. ನನಗೆ ಹಟ ಜಾಸ್ತಿ ಇದೆ. ಗೇಮ್ ಆಡುವ ಅವಕಾಶ ಜಾಸ್ತಿ ಸಿಗಲಿಲ್ಲ. ಅದರಿಂದ ನನಗೆ ಬೇಜಾರಾಗಿತ್ತು. ನನ್ನನ್ನು ಯಾರೂ ಸೀರಿಯಸ್ ಆಗಿ ತಗೊಂಡಿರ್ಲಿಲ್ಲ. ಹಾಗಾಗಿ ನನ್ನ ಸ್ಟ್ರೆಂಥ್ ತೋರಿಸಲಾಗಲಿಲ್ಲ. ನಾನು ಸ್ವಲ್ಪ ಎಮೋಷನಲ್ ಆಗಿದೀನಿ. ಆದರೆ ಎಮೋಷನಲ್ ಆಗಿರುವುದು, ಅದು ವಲ್ನರಬಲ್ ಆಗಿದ್ರೆ ಅದು ವೀಕ್‌ನೆಸ್ ಅಲ್ವೇ ಅಲ್ಲ. ಅದು ಸ್ಟ್ರೆಂಥ್.…
ಬೆಂಗಳೂರು: ಸರ್ಕಾರದ ವಿರುದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತೆ ಸಿಡಿದೆದ್ದು, ಇಂದು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲು ಸಜ್ಜಾಗಿದ್ದಾರೆ. ಅಂಗನವಾಡಿಗಳಿಗೆ ಸಹಾಯಕಿರನ್ನು ನೇಮಿಸುವಂತೆ ಒತ್ತಾಯಿಸಿ, ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವದಿ ಪ್ರತಿಭಟನೆ ನಡೆಸಲು ಕಾರ್ಯಕರ್ತೆಯರು ಮುಂದಾಗಿದ್ದಾರೆ. https://ainlivenews.com/lets-stand-with-the-indian-team-in-the-grief-of-defeat-cm-siddaramaiah/ ಕಳೆದೆ ಹಲವು ವರ್ಷಗಳಿಂದ ಅಂಗನವಾಡಿ ಸಹಾಯಕಿಯರ ನೇಮಕಾತಿ ವಿಳಂಬ ಆಗುತ್ತಿದ್ದು, ಬೆಂಗಳೂರು ಜಿಲ್ಲೆಯಲ್ಲಿ 2877 ಅಂಗನವಾಡಿ ಕೇಂದ್ರಗಳು ಇವೆ. ಅದರಲ್ಲಿ 1198 ಸಹಾಕಿಯರ ಹುದ್ದೆ ಖಾಲಿ ಇದ್ದು, ಅನೇಕ ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು ನೇಮಕಾತಿಯಲ್ಲಿ ವಿಳಂಬ ಆಗುತ್ತಿದೆ ಎಂದು ಕಾರ್ಯಕರ್ತೆಯರು ಬೇಸರಗೊಂಡಿದ್ಧಾರೆ. ಇನ್ನೂ ನೇಮಕಾತಿ ಬೇಡಿಕೆಯ ಜೊತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸರ್ಕಾರದ ವಿರುದ್ದ ಅಂಗನವಾಡಿ ಕಾರ್ಯಕರ್ತೆಯರು ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.
ಮೈಸೂರು: ಮೈಸೂರಿನ ಕುವೆಂಪು ನಗರದಲ್ಲಿರುವ ಸಾಹಿತಿ ಎಸ್ ಎಲ್ ಭೈರಪ್ಪ ನಿವಾಸಕ್ಕೆ ಬಿ ವೈ ವಿಜಯೇಂದ್ರ ಭೇಟಿ ನೀಡಿದ್ದು ಆಶೀರ್ವಾದ ಪಡೆದಿದ್ದಾರೆ. ರಾಜ್ಯಾಧ್ಯಕ್ಷರಾದ ನಂತರ ಮೈಸೂರಿಗೆ ಮೊದಲ ಬಾರಿ ಆಗಮಿಸಿರುವ ಬಿ.ವೈ. ವಿಜಯೇಂದ್ರ ಟೆಂಪಲ್ ರನ್, https://ainlivenews.com/geo-scientist-statue-murder-case-explosive-issue-comes-to-light-during-investigation/ ಮಠಗಳ ಭೇಟಿ ಜೊತೆಗೆ ಗಣ್ಯರು, ಸಾಹಿತಿಗಳ ಭೇಟಿ ಮಾಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ (Siddaramaiah) ತವರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಎರಡನೇ ದಿನದ ಪ್ರವಾಸ ಕೈಗೊಂಡಿದ್ದಾರೆ.
ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿಯುವಲ್ಲಿ ಭಾರತ ತಂಡ ಎಡವಿದೆ. ಆದರೆ, ಟೂರ್ನಿಯಲ್ಲಿ ನೀಡಿದ ಉತ್ತಮ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಸೋಲು ಹಾಗೂ ಗೆಲುವು ಆಟದ ಅವಿಭಾಜ್ಯ ಅಂಗ. ಸೋಲಿನ ದುಃಖದಲ್ಲಿರುವ ಭಾರತ ತಂಡದ ಜೊತೆ ನಿಲ್ಲೋಣ ಎಂದು ಹೇಳಿದ್ದಾರೆ. ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಭಾರತ ತೋರಿದ ಸಂಘಟಿತ ಪ್ರದರ್ಶನ, ಫೈನಲ್ ಪಂದ್ಯದ ವರೆಗಿನ ಅಜೇಯ ಅಭಿಯಾನ ಬಹುಕಾಲ ನೆನಪಿನಲ್ಲಿ ಅಚ್ಚಳಿಯದೆ ಉಳಿಯಲಿದೆ ಎಂದು ಪೋಸ್ಟ್ ಮಾಡಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದೆ ಇನ್ನೂ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಹ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋತರೂ, ಭಾರತ ತಂಡ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದೆ. ಇಡೀ ಸರಣಿಯಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ಭಾರತ ತಂಡದ ಬಗ್ಗೆ ಹೆಮ್ಮೆ ಇದೆ. ಆ ಎಲ್ಲ ನೆನಪುಗಳಿಗಾಗಿ ಧನ್ಯವಾದಗಳು’…