ತುಮಕೂರು: ಬಾವಿಗೆ ಜಿಗಿದು ಎರಡು ವರ್ಷದ ಪುಟ್ಟ ತಂಗಿಯನ್ನ ಕಾಪಾಡಿದ್ದ ಪೋರಿಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಲಭಿಸಿದೆ. ಹೌದು ತನ್ನ ಎರಡು ವರ್ಷದ ತಂಗಿಯನ್ನ ಕಾಪಾಡಲು ಜೀವ ಪಣಕ್ಕಿಟ್ಟು ಬಾವಿಗೆ ಜಿಗಿದು ತಂಗಿಯನ್ನ ಕಾಪಾಡಿದ್ದ ಶಾಲು ಎಂಬ 8 ವರ್ಷದ ಬಾಲಕಿ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ವಿಜೇತೆಯಾಗಿದ್ದಾಳೆ. ತುಮಕೂರು ತಾಲೂಕಿನ ಕುಚಂಗಿ ಪಾಳ್ಯದ ಸರ್ಕಾರಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಾಳೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಶಾಲುಗೆ ಅಧಿಕೃತ ಅಹ್ವಾನ ನೀಡಲಾಗಿದೆ. ಆಟ ಆಡುವ ವೇಳೆ ಬಾವಿಗೆ ಬಿದ್ದಿದ್ದ ಶಾಲುವಿನ ತಂಗಿ ಎರಡು ವರ್ಷದ ಪುಟ್ಟ ಕಂದಮ್ಮನನ್ನು ಲೈಫ್ ಜಾಕೆಟ್ ತೊಟ್ಟು ಬಾವಿಗೆ ಜಿಗಿದು ಕಾಪಾಡಿದ್ದಾಳೆ. ಕಳೆದ ಜೂನ್ ನಲ್ಲಿ ಈ ಘಟನೆ ನಡೆದಿದ್ದು, ಶಾಲು ಶೌರ್ಯ ಮೆಚ್ಚಿ ಸರ್ಕಾರ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡುತ್ತಿದೆ. ನಾಳೆ ಬೆಂಗಳೂರು ಜವಹಾರ ಬಾಲಭವನದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
Author: AIN Author
ತನ್ನ ಸ್ನೇಹಿತರಿಂದ ದೂರವಾಗಿ ವಿನಯ್ ತಂಡ ಸೇರಿಕೊಂಡಿದ್ದ ಸಂಗೀತಾ, ಕಾರ್ತಿಕ್ ತಲೆಬೋಳಿಸಿಕೊಳ್ಳುವ ಸವಾಲ್ ಕೂಡ ಹಾಕಿದ್ದರು. ಹಾಗೆಯೇ ತನಿಷಾ ಮೆಣಸಿನಕಾಯಿ ತಿನ್ನಲೂ ಕಾರಣರಾಗಿದ್ದರು. ಸ್ನೇಹಿತರ ನೋವಿಗೆ ಕಾರಣರಾದ ಬಗ್ಗೆ ಅವರಲ್ಲಿ ಪಶ್ಚಾತ್ತಾಪ ಹುಟ್ಟಿದೆಯಾ? ಅದೇ ಅವರು ಮನೆಯಿಂದ ಹೊರಬರಲೂ ಕಾರಣವಾಯ್ತಾ? ಇಂಥದ್ದೊಂದು ಅನುಮಾನ JioCinema ಬಿಡುಗಡೆ ಮಾಡಿದ ಇಂದಿನ ಪ್ರೋಮೊ ನೋಡಿದರೆ ಹುಟ್ಟದೇ ಇರದು. ‘ನಾನು ನಾನಲ್ದೆ, ಬೇರೆ ಯಾರೋ ಆಗ್ತಿದೀನಿ ಅನಿಸ್ತಿದೆ’ ಎಂದು ಸಂಗೀತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಲೆಯೊಳಗೆ ಪ್ರೆಷರ್ ಜಾಸ್ತಿ ಆಗ್ತಿದೆ ಎಂದು ಫ್ರೆಸ್ಟ್ರೇಟ್ ಆಗಿದ್ದಾರೆ. ಅವರನ್ನು ಸಮಾಧಾನ ಮಾಡಲು ಬಂದ ಕಾರ್ತಿಕ್‌ಗೆ ಕೈ ಮುಗಿದಿದ್ದಾರೆ. ಹಾಗೆಯೇ, ‘ನಿಮಗೆ ಬೇಕಾದಾಗ ಜಗಳ ಆಡ್ತೀರಾ. ಬೇಕಾದಾಗ ಸಮಾಧಾನ ಮಾಡ್ತೀರಾ?’ ಎಂದು ಕಾರ್ತಿಕ್ ಅವರನ್ನು ಕುಟುಕಿದ್ದಾರೆ. ಅದನ್ನು ಕೇಳಿ ಸಂಗೀತಾ ಬಳಿಯಿಂದ ಕಾರ್ತಿಕ್ ಎದ್ದು ಹೋಗಿದ್ದಾರೆ. ‘ನನಗೆ ಈ ಗೇಮ್ ಆಡಲು ಇಷ್ಟವಿಲ್ಲ’ ಎಂದು ಸಂಗೀತಾ ಬಿಗ್‌ಬಾಸ್ ಬಳಿಯಲ್ಲಿ ಬಿಕ್ಕಿ ಬಿಕ್ಕಿ ವಿನಂತಿಸಿಕೊಂಡಿದ್ದಾರೆ. ಅದರ ಬೆನ್ನಿಗೇ ಮನೆಯ ಮುಖ್ಯದ್ವಾರ ತೆರೆದುಕೊಂಡಿರುವ…
ಉಡುಪಿ: ಗೆಸ್ಟ್ ಹೌಸ್ ನ ಗೇಟ್ ಒಂದು ಪುಟ್ಟ ಮಗುವಿನ ಮೇಲೆ ಬಿದ್ದ ಪರಿಣಾಮ ಮಗು ಸಾವನಪ್ಪಿದ ಘಟನೆ ಕೋಟತಟ್ಟು ಪಡುಕರೆಯಲ್ಲಿ ಮಂಗಳವಾರ ಸಂಜೆ ಸಂಭವಿಸಿದೆ.ಮೃತ ಮಗುವನ್ನು ಸ್ಥಳೀಯ ನಿವಾಸಿ ಸುಧೀರ್ ಮೊಗವೀರ ಅವರ ಏಕೈಕ ಪುತ್ರ ಮೂರು ವರ್ಷದ ಸುಶಾಂತ್ (3) ಎಂದು ಗುರುತಿಸಲಾಗಿದೆ. https://ainlivenews.com/young-woman-sexually-molested-in-our-metro-fellow-passengers-who-did-not-come-to-the-rescue/ ಮನೆಯ ಸಮೀಪದಲ್ಲಿರುವ ಗೆಸ್ಟ್‌ಹೌಸ್‌ನ ಗೇಟ್‌ನಲ್ಲಿ ಈ ಮಗು ಪ್ರತಿದಿನ ಆಟವಾಡುತ್ತಿದ್ದು ಅದರಂತೆ ಮಂಗಳವಾರ ಆಡುತ್ತಿದ್ದಾಗ ಗೇಟ್ ಕಳಚಿ ಮೈ ಮೇಲೆ ಬಿದ್ದಿತು. ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಮೃತಪಟ್ಟಿದೆ. ಸ್ಥಳಕ್ಕೆ ಕೋಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಹಿನ್ನೆಲೆಯಲ್ಲಿ ಇಂದು ಹೈ ಕೋರ್ಟ್ ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರ ಅರ್ಜಿ ವಿಚಾರಣೆ ಇಂದು ನಡೆಯಲಿದೆ. https://ainlivenews.com/cylinder-explosion-in-bangalore-7-injured/ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಪ್ರಾಸಿಕ್ಯೂಷನ್ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಡಿ.ಕೆ.ಶಿವಕುಮಾರ್ ಅರ್ಜಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಅನುಮತಿಯನ್ನು ಹೈ ಕೋರ್ಟ್ ಏಕಸದಸ್ಯ ಪೀಠ ಎತ್ತಿ ಹಿಡಿದಿತ್ತು. ಹಾಗಾಗಿ ಡಿ.ಕೆ.ಶಿವಕುಮಾರ್ ದ್ವಿಸದಸ್ಯ ಪೀಠಕ್ಕೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಅದನ್ನು ಪರಿಗಣಿಸಿ, ಹೈ ಕೋರ್ಟ್ ದ್ವಿಸದಸ್ಯ ಪೀಠ ತಡೆಯಾಜ್ಞೆ ನೀಡಿತ್ತು. ಅದನ್ನು ಪ್ರಶ್ನಿಸಿ, ಸಿಬಿಐ ಸುಪ್ರಿಂಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣವನ್ನು ಹೈ ಕೋರ್ಟ್ ನಕ್ಕೇ ಇತ್ಯರ್ಥ ಪಡಿಸಿಕೊಳ್ಳುವಂತೆ ಸೂಚಿಸಿದ ಸುಪ್ರಿಂಕೋರ್ಟ್ 2 ವಾರಗಳ ಗಡುವು ನೀಡಿತ್ತು. ಹಾಗಾಗಿ ಇಂದು ಹೈ ಕೋರ್ಟ್ ನ ದ್ವಿ ಸದಸ್ಯ ಪೀಠದಲ್ಲಿ ಮತ್ತೆ ಅರ್ಜಿಯ ವಿಚಾರಣೆ ನಡೆಯಲಿದೆ. ದ್ವಿ ಸದಸ್ಯ ಪೀಠವು ಅರ್ಜಿಯನ್ನು ವಜಾ ಮಾಡಿದರೆ, ಡಿ.ಕೆ.ಶಿವಕುಮಾರ್ ಗೆ ಸಂಕಷ್ಟ ತಪ್ಪಿದ್ದಲ್ಲ ಎನ್ನಲಾಗುತ್ತಿದೆ
ಬೆಂಗಳೂರು: ಜಾತಿಗಣತಿ ವರದಿ ರಾಜಕೀಯ ಪ್ರೇರಿತ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದ್ದಾರೆ. https://ainlivenews.com/cylinder-explosion-in-bangalore-7-injured/ ರಾಜ್ಯ ಸರ್ಕಾರ ಸದುದ್ದೇಶದಿಂದ ಜಾತಿಗಣತಿ ವರದಿ ಪಡೆಯುತ್ತಿಲ್. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದ ರಾಜಕೀಯ ಮಾಡ್ತಿದ್ದಾರೆ. ಈ ಸಮೀಕ್ಷೆ ಸರಿಯಾಗಿ ಆಗಿಲ್ಲ ಅಂತಾ ಪ್ರತಿಯೊಬ್ಬರೂ ಹೇಳ್ತಿದ್ದಾರೆ. ಜಾತಿ ಗಣತಿಗೆ ನಮ್ಮ ಸಂಪೂರ್ಣ ವಿರೋಧ ಇದೆ. ಸರ್ಕಾರ ಈವರೆಗೆ ಒಂದೂ ಭರವಸೆದಾಯಕ ಕೆಲಸ ಮಾಡಿಲ್ಲ. ರಾಹುಲ್ ಹೇಳಿದರೆಂದು ವರದಿ ಮೇಲೆ ರಾಜಕೀಯ ಮಾಡ್ತಿದ್ದಾರೆ. ಸರ್ಕಾರದ ನಿಲುವು ನೋಡಿಕೊಂಡು ನಾವು ಮುಂದುವರಿಯುತ್ತೇವೆ ಎಂದರು.
ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಾಯಗಳಾಗಿವೆ. ವೀವರ್ಸ್ ಕಾಲೋನಿ ಬಳಿಯ ಮಾರುತಿ ಬಡಾವಣೆಯಲ್ಲಿ ನಡೆದಿದೆ. ಉತ್ತರ ಪ್ರದೇಶದ ವಾರಾಣಸಿ ಮೂಲದ ಜಮಾಲ್, ನಾಜಿಯಾ, ಇರ್ಫಾನ್, ಗುಲಾಬ್, ಶಹಜಾದ್ಗೆ ಸಿಲಿಂಡರ್ ಸ್ಫೋಟದಿಂದ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಜಾನೆ 5.30ರ ಸುಮಾರಿಗೆ ಸಿಲಿಂಡರ್ ಸೋರಿಕೆಯಾಗಿ ಸ್ಫೋಟವಾಗಿದೆ. ಸಿಲಿಂಡರ್ ಸ್ಫೋಟಗೊಂಡ ತೀವ್ರತೆಗೆ ಮನೆಯ ಕಿಟಕಿಗಳು ಛಿದ್ರವಾಗಿವೆ.
ಬೆಂಗಳೂರು: ನಿಗಮ ಮಂಡಳಿ ಅಧ್ಯಕ್ಷರ ಆಯ್ಕೆ ಕುರಿತು ತಡರಾತ್ರಿವರೆಗೂ ಸಭೆ ನಡೆದರೂ ಅಧ್ಯಕ್ಷರ ನೇಮಕ ಅಂತಿಮವಾಗಿಲ್ಲ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ (Randeep Surjewala) ಜೊತೆ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಡಿಸಿಎಂ ಡಿಕೆ ಶಿವಕುಮಾರ್ (DK Shivkumar) ಸುದೀರ್ಘ ಚರ್ಚೆ ನಡೆಸಿದರು. ಅಸಮಧಾನಿತ ಕೆಲವು ಹಿರಿಯ ನಾಯಕರಿಗೆ ಸಭೆಯಿಂದಲೇ ಕರೆ ಮಾಡಿ ಸುರ್ಜೆವಾಲಾ ಅಭಿಪ್ರಾಯ ಕೇಳಿದರು. ಗೊಂದಲ ಇಲ್ಲದಂತೆ ಪಟ್ಟಿ ಸಿದ್ದ ಪಡಿಸಲು ಕಾಂಗ್ರೆಸ್ ನಾಯಕರ ಕಸರತ್ತು ನಡೆಯಿತು. ಅಸಮಧಾನಿತ ಶಾಸಕರ ಪೈಕಿ ಬಸವರಾಜ ರಾಯರೆಡ್ಡಿಯನ್ನು ಸಭೆಗೆ ಕರೆಸಿ ಸುರ್ಜೇವಾಲಾ, ಸಿದ್ದರಾಮಯ್ಯ, ಡಿಕೆಶಿ ಮಾತನಾಡಿದರು. https://ainlivenews.com/bengalureans-from-now-on-fresh-fish-will-arrive-at-your-doorstep/ ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿಕೆಶಿ, ಪಕ್ಷ ಸಂಘಟನೆ ಹಾಗೂ ಬೋರ್ಡ್ ನೇಮಕದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಮೊದಲ ಸುತ್ತಿನ ಮಾತುಕತೆ ಆಗಿದೆ. ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ ಸೇರಿದಂತೆ ಎಲ್ಲಾ ಭಾಗದ ಶಾಸಕರನ್ನ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈಗ ಪಟ್ಟಿ ಮಾಡಿರುವ ಹೆಸರುಗಳನ್ನ ದೆಹಲಿ ನಾಯಕರಿಗೆ ಕಳುಹಿಸುತ್ತೇವೆ.…
ತಮಿಳು (Tamil) ಚಿತ್ರೋದ್ಯಮ ಖ್ಯಾತ ವಿಲನ್ ಮನ್ಸೂರ್ ಅಲಿ ಖಾನ್ (Mansoor Ali Khan), ನಿಜ ಜೀವನದಲ್ಲೂ ವಿಲನ್ ಆಗಿದ್ದಾರೆ. ಲಿಯೋ ಸಿನಿಮಾದಲ್ಲಿ ನಾಯಕಿ ತ್ರಿಷಾ ಅವರನ್ನು ರೇಪ್ ಮಾಡುವಂತಹ ಸನ್ನಿವೇಶ ಇದೆ ಅಂದುಕೊಂಡಿದೆ. ಆದರೆ, ಇರಲಿಲ್ಲ. ಇದ್ದರೆ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬೆಡ್ ಮೇಲೆ ಬೀಸಾಕುತ್ತಿದ್ದೆ. ಈ ಹಿಂದೆ ಖುಷ್ಬೂ ಸೇರಿದಂತೆ ಹಲವರನ್ನು ಹಾಗೆಯೇ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದರು. ತ್ರಿಷಾ (Trisha) ಬಗೆಗಿನ ಮತ್ತು ಒಟ್ಟಾರೆ ನಟಿಯರ ಬಗ್ಗೆ ಆಡಿದ್ದ ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ತ್ರಿಷಾ ಸೇರಿದಂತೆ ಹಲವರು ನಟನೆ ನಡೆಯನ್ನು ಖಂಡಿಸಿದ್ದರು. ನಟನ ವ್ಯಕ್ತಿತ್ವವನ್ನು ಅವನ ಮಾತು ತೋರಿಸುತ್ತಿದೆ ಎಂದು ರಿಯ್ಯಾಕ್ಟ್ ಮಾಡಿದ್ದರು. ಜೊತೆಗೆ ಲಿಯೋ ಸಿನಿಮಾದ ನಿರ್ದೇಶಕರು ಕೂಡ ಅಸಮಾಧಾನ ವ್ಯಕ್ತ ಪಡಿಸಿದ್ದರು. ಮತ್ತೆ ಆತನೊಂದಿಗೆ ನಾನು ನಟಿಸುವುದಿಲ್ಲ ಎಂದು ತ್ರಿಷಾ ಹೇಳಿಕೊಂಡಿದ್ದರು. ಆಕ್ರೋಶ ಭುಗಿಲುಗೊಂಡ ಬೆನ್ನಲ್ಲೇ ಖುಷ್ಬೂ (Khushboo) ಕೂಡ ಘಟನೆಯ ಬಗ್ಗೆ ಮಾತನಾಡಿದ್ದರು. ಮನ್ಸೂರ್ ಅಲಿ ಖಾನ್ ನಂತಹ ಕೊಳಕು…
ಕಲುಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಹಲ್ಲೆ ಖಂಡಿಸಿ ಬಂಜಾರ ಸಮುದಾಯ ಫ್ರತಿಭಟನೆ ಹಿನ್ನಲೆ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಿ ಪೋಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತ ಸೇರಿದಂತೆ ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ..ಚಿತ್ತಾಪುರದಿಂದ ಕಾರಲ್ಲಿ ಬರುತ್ತಿದ್ದ ವೇಳೆ ಬೈಕಲ್ಲಿ ಬಂದಿದ್ದ ದುಷ್ಕರ್ಮಿ ಗ್ಯಾಂಗ್ ಮಣಿಕಂಠ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿತ್ತು..
ದೊಡ್ಡಬಳ್ಳಾಪುರ: ಬಾಗಲಕೋಟೆಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದ ಲಿಂಗೈಕ್ಯ ಶ್ರೀ ಶರಣಬಸವ ಸ್ವಾಮಿಗಳ ಸಂಸ್ಮರಣೋತ್ಸವದ ಅಂಗವಾಗಿ ನ.23 ರಂದು ಗದ್ದುಗೆ ಶಿಲಾಮಂಟಪದ ಶಿಲಾನ್ಯಾಸ ಹಾಗೂ ಗುರು ಕುಟೀರದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಸಮುದಾಯದ ಶಿವರಾಜ್ ತಂಗಡಗಿ ಭಾಗವಹಿಸಲಿ ದ್ದಾರೆ. ಕಾರ್ಯಕ್ರಮಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸುಮಾರು 2000 ಜನರು ಭಾಗವಹಿಸಲಿದ್ದಾರೆ ಎಂದು ತಾಲೂಕು ಭೋವಿ ಸಮಾಜದ ಅಧ್ಯಕ್ಷ ಎನ್. ರಾಮಕೃಷ್ಣ ತಿಳಿಸಿದರು. ಮಾಧ್ಯಮವದರೊಂದಿಗೆ ಮಾತನಾಡಿದ ಅವರು, ಗುರುಪೀಠ ಉದ್ಘಾಟನೆ ಹಾಗೂ ಸಮಾವೇಶದ ಕುರಿತು ಜಿಲ್ಲೆಯ ಎಲ್ಲ ತಾಲೂಕುಗ ಳಲ್ಲಿ ಈಗಾಗಲೇ ಪ್ರಚಾರ ಮಾಡಲಾಗಿದೆ. ಬುಧವಾರ ಸಂಜೆ ಅವರವರ ಸ್ವಂತ ವಾಹನಗಳಲ್ಲಿ ಬಾಗಲಕೋಟೆ ಗೆ ಪ್ರಯಾಣ ಬೆಳೆಸಲಾಗುವುದು ಎಂದು ವಿವರಿಸಿದರು. ಭೋವಿ ಅಭಿವೃದ್ಧಿ ನಿಗಮಕ್ಕೆ ಸಮಾಜದವರನ್ನೇ ಅಧ್ಯಕ್ಷ ರನ್ನಾಗಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಜೊತೆಗೆ ಕಲ್ಲು ಬಂಡೆ ಹೊಡೆಯಲು ಸಮಾಜದವರಿಗೆ ಅನುಮತಿ ಕೊಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು…