ಟೆಲ್ ಅವೀವ್: ಗಾಯಾಳುಗಳನ್ನು ಸಾಗಿಸುತ್ತಿದ್ದ ಪ್ಯಾಲೆಸ್ತೀನ್‌ನ (Palestine) ಅಂಬುಲೆನ್ಸ್ (Ambulance) ಮೇಲೆ ಇಸ್ರೇಲ್ (Israel) ಸೇನೆ ನಡೆಸಿದ ದಾಳಿಯಲ್ಲಿ ಸುಮಾರು 15 ಜನ ಸಾವಿಗೀಡಾಗಿದ್ದು, 60 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಬೆನ್ನಲ್ಲೇ ಅಮೆರಿಕ, ಇಸ್ರೇಲ್ ಸೇನೆ ಸುತ್ತುವರಿದ ಪ್ರದೇಶಗಳಲ್ಲಿ ಸಿಲುಕಿರುವ ನಾಗರಿಕರಿಗೆ ನೆರವು ನೀಡಲು ಗಾಜಾದಲ್ಲಿ ಕದನ ವಿರಾಮ ಘೋಷಿಸುವಂತೆ ಇಸ್ರೇಲ್‍ಗೆ ಒತ್ತಾಯಿಸಿದೆ. https://ainlivenews.com/suprem-ray-healing-center-reiki/#google_vignette ಅದಾಗಿಯೂ ಅಮೆರಿಕಾದ ಸಲಹೆಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು (Benjamin Netanyahu) ತಿರಸ್ಕರಿಸಿದ್ದಾರೆ. ಅಲ್ಲದೇ ಒತ್ತೆಯಾಳುಗಳನ್ನು ಬಿಡಿಸಲು ಕ್ರಮಕೈಗೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಯಾವುದೇ ಕದನ ವಿರಾಮವಿಲ್ಲದೆ ಒಂದು ತಿಂಗಳು ಸಮೀಪಿಸಿದೆ. ಈ ಯುದ್ಧ ಹಮಾಸ್ ಉಗ್ರರು ಒತ್ತೆಯಾಳುಗಳನ್ನು ಬಿಡುಗಡೆ ಮಾಡವವರೆಗೂ ಮುಂದುವರಿಯುತ್ತದೆ. ಒತ್ತೆಯಾಳುಗಳ ಬಿಡುಗಡೆಗೆ ಇನ್ನೂ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ನೇತಾನ್ಯಾಹು ಹೇಳಿದ್ದಾರೆ.