ಬೆಂಗಳೂರು:- ಡಿಕೆಶಿ ವಿರುದ್ಧದ CBI ತನಿಖೆ ವಾಪಸ್ ವಿಚಾರವಾಗಿ ವಿಪಕ್ಷ ನಾಯಕ ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಪ್ರಕರಣ ವಾಪಸ್ ಪ್ರಸ್ತಾವನೆ ವಿಚಾರ ‘ಪ್ರಕರಣ ಕೋರ್ಟ್ನಲ್ಲಿದೆ, ಇದು ಕಾನೂನಿಗೆ ವಿರುದ್ಧವಾದುದು. ‘ಸಿಬಿಐ ತನಿಖೆಗೆ ನೀಡಿರುವುದು ತಪ್ಪು ಎಂದು ಅಪೀಲು ಹೋಗಿದ್ದರು. ಕೋರ್ಟ್ನಿಂದ ತೀರ್ಪು ಬರುವ ಮೊದಲು ನಿರ್ಧಾರ ಸರಿಯಲ್ಲ. ಸರ್ಕಾರ ಬದಲಾದಾಗ ಎಲ್ಲರೂ ಹಾಗೆ ಮಾಡುತ್ತಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
Author: AIN Author
ಬೆಂಗಳೂರು:- ಕರಾವಳಿ, ದಕ್ಷಿಣ ಒಳನಾಡಿಗೆ ಹೆಚ್ಚಿನ ಮಳೆಯ ಅಲರ್ಟ್ ಘೋಷಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಹವಮಾನ ಇಲಾಖೆ ತಜ್ಞ ಎ.ಪ್ರಸಾದ್ ಹೇಳಿದರು. ಉತ್ತರ ಒಳನಾಡಿನಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದ್ದು, ಅಕ್ಟೋಬರ್ನಿಂದ ನವೆಂಬರ್ವೆರೆಗೆ 38 ಪ್ರತಿಶತದಷ್ಟು ಮಳೆ ಕೊರತೆಯಿದೆ. ಕರಾವಳಿ ಭಾಗದಲ್ಲಿ ಶೇಕಡಾ 14 ರಷ್ಟು, ಉತ್ತರ ಒಳನಾಡಿನಲ್ಲಿ ಶೇಕಡಾ 25ರಷ್ಟು ಮಳೆ ಕೊರತೆಯಿದೆ. ಇನ್ನು ಮೈಸೂರಿನಲ್ಲಿ ಈ ವರ್ಷ ವಾಡಿಕೆಗಿಂತ ಅತಿಹೆಚ್ಚು ಮಳೆಯಾದರೆ, ಬೆಂಗಳೂರಿನಲ್ಲೂ ಈ ಬಾರಿ ಅತಿ ಹೆಚ್ಚಿನ ಮಳೆಯಾಗಿದೆ. ಈ ನಗರದಲ್ಲಿ ಮೂರು ದಿನಗಳ ಕಾಲ ಮೋಡಕವಿದ ವಾತಾವರಣ ಇರಲಿದ್ದು, ರಾತ್ರಿ ವೇಳೆ ಗುಡುಗು-ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಜ್ಞ ಎ.ಪ್ರಸಾದ್ ಹೇಳಿದರು. ರಾಜ್ಯದಲ್ಲಿ ಮಳೆಯಿಲ್ಲದೆ ಕಂಗಾಲಾಗಿದ್ದವರಿಗೆ ಹಿಂಗಾರು ಮಳೆ ಕೈಹಿಡಿದಂತೆ ಕಾಣುತ್ತಿದೆ. ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ರೈತರು, ಹಿಂಗಾರು ಹಂಗಾಮಿನ ಬೆಳೆಗಳನ್ನು ಬೆಳೆಯುತ್ತಾರೆ. ಕಡಿಮೆ ಶ್ರಮ ಹಾಗೂ ಕಡಿಮೆ ನಿರ್ವಹಣೆ ಈ ಬೆಳೆಗೆ ಸಾಕಾಗಿರುತ್ತದೆ. ಈ ಬಾರಿ ಹಿಂಗಾರು ಮಳೆ ಕೂಡ ಕೈಕೊಡುವ ಲಕ್ಷಣವಿತ್ತು.…
ಬೆಂಗಳೂರು:- ಅರಣ್ಯ ಇಲಾಖೆಯು ಬೆಂಗಳೂರು ಜಿಲ್ಲೆಯ ಭಾಗಗಳಲ್ಲಿ ಕಾರ್ಯಾಚರಣೆ ನಡೆಸಲು ಚಿರತೆ ಕಾರ್ಯಪಡೆ ಹಾಗೂ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿರುವ ಒಂಬತ್ತು ಜಿಲ್ಲೆಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಲಭ್ಯವಿರುವ ಸಲಕರಣೆ, ಸಂಪನ್ಮೂಲ ಬಳಸಿಕೊಂಡು ಕೆಲಸ ಮಾಡಲು ಸೂಚಿಸಲಾಗಿದೆ. ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿರುವ ಜಿಲ್ಲೆಗಳಾದ ಕೋಲಾರ-ಗೀತಾಂಜಲಿ, ತುಮಕೂರು-ಸ್ಮಿತಾ ಬಿಜ್ಜೂರು, ಬೆಂಗಳೂರು ಗ್ರಾಮಾಂತರ-ವನಶ್ರೀ ವಿಪಿನ್ ಸಿಂಗ್, ರಾಮನಗರ-ಅನಿಲ್‌ಕುಮಾರ್ ರತನ್, ಹಾಸನ-ಕುಮಾರ್ ಪುಷ್ಕರ್, ಚಿಕ್ಕಮಗಳೂರು-ವಿಜಯ್ ಮೋಹನ್‌ರಾಜ್, ಮೈಸೂರು-ಸಾಸ್ವತಿ ಮಿಶ್ರಾ, ಚಾಮರಾಜನಗರ-ಬಿಶ್ವಜಿತ್ ಮಿಶ್ರಾ, ಕೊಡಗು-ಬ್ರಿಜೇಶ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ನೋಡಲ್ ಅಧಿಕಾರಿಗಳು ವಾರದಲ್ಲಿ ಮೂರು ದಿನ ಜಿಲ್ಲೆಗಳಿಗೆ ಭೇಟಿ ನೀಡಬೇಕು. ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಬೇಕು. ಸಂಘರ್ಷ ತಡೆಗೆ ಯೋಜನೆ ರೂಪಿಸಬೇಕು ಎಂದು ಸೂಚಿಸಲಾಗಿದೆ.
ಟೆಲ್ ಅವಿವ್: ಕಳೆದ ಆರು ವಾರಗಳಿಂದ ನಡೀತಿರೋ ಹಮಾಸ್-ಇಸ್ರೇಲ್ (Israel- Hamas) ಭೀಕರ ಯುದ್ಧದದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಒತ್ತೆಯಾಳುಗಳ ಬಿಡುಗಡೆಗಾಗಿ ಕದನವಿರಾಮಕ್ಕೆ ಅಂತಾರಾಷ್ಟ್ರೀಯ ಸಮುದಾಯ ನಡೆಸ್ತಿದ್ದ ಪ್ರಯತ್ನಕ್ಕೆ ಈಗ ಫಲ ಸಿಕ್ಕಿದೆ. 50 ಒತ್ತೆಯಾಳುಗಳ ಬಿಡುಗಡೆ ಸಂಬಂಧ ಇಸ್ರೇಲ್-ಹಮಾಸ್ ನಡ್ವೆ ಒಪ್ಪಂದ ಏರ್ಪಟ್ಟಿದೆ. ಈ ಒಪ್ಪಂದಕ್ಕೆ ಇಸ್ರೇಲ್ ಸಂಪುಟ ಒಪ್ಪಿಗೆ ನೀಡಿದೆ. ಈ ಒಪ್ಪಂದದ ಭಾಗವಾಗಿ ಇಸ್ರೇಲ್ 4 ದಿನ ಪ್ಯಾಲಿಸ್ತೇನ್ ಮೇಲೆ ಯಾವುದೇ ರೀತಿಯ ದಾಳಿಯನ್ನು ಮಾಡಲ್ಲ. ಈ ಸಂದರ್ಭದಲ್ಲಿ 240 ಒತ್ತೆಯಾಳುಗಳ ಪೈಕಿ ಮಕ್ಕಳು, ಮಹಿಳೆಯರು ಸೇರಿ ಕನಿಷ್ಠ 50 ಮಂದಿಯನ್ನು ಹಮಾಸ್ ಬಿಡುಗಡೆ ಮಾಡಬೇಕಾಗುತ್ತದೆ. https://ainlivenews.com/housewifes-body-found-hanging-in-bangalore/ ಅತ್ತ ಇಸ್ರೇಲ್ ಕೂಡ ತಮ್ಮ ಜೈಲುಗಳಲ್ಲಿರೋ ಪ್ಯಾಲಿಸ್ತೇನ್ (Palestine) ಮಹಿಳೆಯರು, ಮಕ್ಕಳನ್ನು ಬಿಡುಗಡೆ ಮಾಡಲಿದೆ. ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಕರೆತರಬೇಕೆಂಬ ಕಾರಣಕ್ಕೆ ಕಠಿಣವಾದರೂ ಸರಿಯಾದ ನಿರ್ಣಯ ತೆಗೆದುಕೊಂಡಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ. ದಿನಕ್ಕೆ ಕನಿಷ್ಠ 10 ಒತ್ತೆಯಾಳುಗಳನ್ನು ರಿಲೀಸ್ ಮಾಡ್ತಿದ್ರೆ ಕದನ ವಿರಾಮ ವಿಸ್ತರಣೆಗೊಳ್ಳುತ್ತದೆ ಎಂದು ಇಸ್ರೇಲ್ ತಿಳಿಸಿದೆ. ಕದನ ವಿರಾಮ…
ಬೆಂಗಳೂರು:- ಮೆಟ್ರೋ ರೈಲಿನೊಳಗೆ ಭಿಕ್ಷೆ ಬೇಡುತ್ತಿದ್ದವನಿಗೆ ಬೆಂಗಳೂರು ಮೆಟ್ರೋ ನಿಗಮ ನಿಯಮಿತದ ಅಧಿಕಾರಿಗಳು ಆತನ ಮೇಲೆ ಪ್ರಕರಣ ದಾಖಲಿಸಿ ₹500 ದಂಡ ವಸೂಲಿ ಮಾಡಿದ್ದಾರೆ. ಮಲ್ಲಿಕಾರ್ಜುನ್ (20) ಎಂಬಾತ ದಂಡ ತೆತ್ತಿದ್ದಾನೆ. ಮೆಟ್ರೋದ ಒಳಗಡೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯಿಂದ ದಂಡ ವಸೂಲಿ ಮಾಡಿರುವ ಮೊದಲ ಪ್ರಕರಣ ಇದಾಗಿದೆ. ಬಿಎಂಆರ್‌ಸಿಎಲ್ ಈತನ ವಿರುದ್ಧ ಮೆಟ್ರೋ ಕಾಯ್ದೆ ಸೆಕ್ಷನ್ 59ರ ಅಡಿ ಪ್ರಯಾಣಿಕರಿಗೆ ತೊಂದರೆ ನೀಡಿದ ಪ್ರಕರಣ ದಾಖಲಿಸಿಕೊಂಡಿದೆ. ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ₹150 ಕೊಟ್ಟು ಒಂದು ದಿನದ ಕಾರ್ಡ್ ತೆಗೆದುಕೊಂಡ ಈತ ₹50 ರಿಚಾರ್ಜ್ ಮಾಡಿಸಿಕೊಂಡಿದ್ದಾನೆ. ಬಳಿಕ ರೈಲನ್ನೇರಿ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ‘ನಾನು ಮೂಗ ಹಾಗೂ ಕಿವುಡ, ಸಹಾಯ ಮಾಡಿ’ ಎಂದು ಬರೆದಿದ್ದ ಚೀಟಿಗಳನ್ನು ಕೊಟ್ಟು ಭಿಕ್ಷೆ ಬೇಡಿದ್ದಾನೆ. ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಮೆಟ್ರೋ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಭದ್ರತೆ ಸಿಬ್ಬಂದಿ ಎಲ್ಲಾ ನಿಲ್ದಾಣಗಳಿಗೂ ಈ ಬಗ್ಗೆ ಅಲರ್ಟ್ ಮಾಡಿದ್ದರು. ಸುಮಾರು ಒಂದು ಗಂಟೆ ಬಳಿಕ ಯಶವಂತಪುರಕ್ಕೆ ಬಂದು ಕಾರ್ಡ್…
ಬೆಂಗಳೂರು:- ದಶಕಗಳ ಕಾಲ ನಿದ್ದೆಯಲ್ಲಿದ್ದು, ಏಕಾಏಕಿ ಅರ್ಜಿ ಸಲ್ಲಿಸಿದರೆ ನೆರವು ನೀಡಲಾಗದು ಎಂದು ಹೈಕೋರ್ಟ್ ಹೇಳಿದೆ. ಸುಮಾರು ಐದು ದಶಕಗಳ ಕಾಲ ಗಾಢ ನಿದ್ರೆಯಲ್ಲಿದ್ದು, ಈಗ ದೈವವಾಣಿ ಆವತೀರ್ಣವಾಯಿತೆಂಬಂತೆ ಏಕಾಏಕಿ ನಿದ್ದೆಯಿಂದ ಎದ್ದು ನ್ಯಾಯ ಕೇಳಲು ಬಂದವರಿಗೆ ನೆರವು ನೀಡಲು ನಾವು ಇಲ್ಲಿ ಕೂತಿಲ್ಲ. ಅಂತಹದ್ದನ್ನು ನಮ್ಮಿಂದ ನಿರೀಕ್ಷಿಸುವುದೂ ಬೇಡ ಎಂದು ಪುನರ್ವಸತಿ ಕಲ್ಪಿಸುವ ವಿಚಾರವಾಗಿ 50 ವರ್ಷಗಳ ಬಳಿಕ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್ ಚಾಟಿ ಬೀಸಿದೆ. ಭದ್ರಾ ಮೇಲ್ದಂಡೆ ಯೋಜನೆಗಾಗಿ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಸಂತೆಬೆನ್ನೂರು ಹೋಬಳಿಯ ಗೊಲ್ಲರಹಳ್ಳಿ ಗ್ರಾಮದ ಸ್ಥಳಾಂತರಕ್ಕೆ 1962ರಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿದ್ದ 20 ಎಕರೆ ಜಮೀನನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದು, ಅರ್ಹ ಸಂತ್ರಸ್ತ ಫಲಾನುಭವಿಗಳಿಗೆ ಅನ್ಯಾಯವಾಗಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಸ್ಥಳೀಯರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ…
ಬಾಗಲಕೋಟೆ;- ವಿರೋಧ ಮಾಡುವವರಿಗೂ ಜಾತಿ ಜನಗಣತಿ ವರದಿಯಲ್ಲೇನಿದೆ ಎಂದು ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಜಾತಿ ಜನಗಣತಿ ವರದಿ ಕುರಿತು ರಾಜ್ಯದಲ್ಲಿ ಶುರುವಾಗಿರುವ ಟೀಕೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಕಿಡಿಕಾರಿದ್ದಾರೆ. ಜಾತಿ ಗಣತಿ ವರದಿ ಸಲ್ಲಿಕೆಯಾಗುವ ಮೊದಲೇ ಅದರ ಕುರಿತು ರಾಜ್ಯದಲ್ಲಿ ಚರ್ಚೆ ಶುರುವಾಗಿದೆ. ವರದಿಯಲ್ಲೇನಿದೆ ಎಂಬುದು ಅದನ್ನು ಬೇಡ ಎನ್ನುತ್ತಿರುವವರಿಗೂ ಗೊತ್ತಿಲ್ಲ. ಸುಮ್ಮನೆ ಊಹೆಯ ಮೇಲೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ವಿಚಾರವಾಗಿ ಊಹೆಗಳ ಮೇಲೆ ಮಾತನಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ಹಾಗಾಗಿ ಅದರ ಕುರಿತು ವರದಿ ಸಲ್ಲಿಕೆಯಾದ ನಂತರ ಮಾತನಾಡೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಇದೇ ವೇಳೆ ಜಾತಿ ಜನಗಣತಿ ಸಮಾಜವನ್ನು ಒಡೆಯುತ್ತದೆ ಎಂದಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರಿಗೆ ವರದಿಯಲ್ಲಿ ಏನಿದೆ ಎಂಬುದು ಗೊತ್ತಿದೆಯೇ? ಯಾರೇ ಆಗಲಿ ವಿಷಯ ಗೊತ್ತಿಲ್ಲದೆ ಮಾತನಾಡಬಾರದು ಎಂದರು.
ವಾಷಿಂಗ್ಟನ್: ಫೇಸ್‌ಬುಕ್‌ನ ಒಡೆತನ ಹೊಂದಿರುವ ಮೆಟಾ ಕಂಪನಿ ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದೆ. ‘ರೇಬಾನ್ ಮೆಟಾ ಸ್ಮಾರ್ಟ್ ಗ್ಲಾಸ್’ ಹೆಸರಿನ ಈ ಕನ್ನಡಕವನ್ನು ಧರಿಸಿ ನೋಡಿದ್ದನ್ನೆಲ್ಲ ಫೇಸ್‌ಬುಕ್‌ನಲ್ಲಿ ಲೈವ್ ಮಾಡಬಹುದು. ಅಲ್ಲದೇ ಬೇಕೆನಿಸಿದ ಫೋಟೋವನ್ನೂ ಕ್ಲಿಕ್ಕಿಸಬಹುದು. ಇತ್ತೀಚಿಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು (ಎಐ) ಸರ್ವಾಂತರ್ಯಾಮಿ ಎನಿಸಿದೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ ಕಂಪನಿಗಳು ಈ ತಂತ್ರಜ್ಞಾನದಲ್ಲಿ ಭಾರೀ ಹೂಡಿಕೆ ಮಾಡುತ್ತಿವೆ. ಈ ಓಟದಲ್ಲಿ ಫೇಸ್‌ಬುಕ್ ಒಡೆತನ ಹೊಂದಿರುವ ಮೆಟಾ ಸ್ವಲ್ಪ ಹಿಂದುಳಿದಿದೆ. ಆದರೆ ಮೆಟಾ ತನ್ನದೇ ಆದ ಎಐ ಅಸಿಸ್ಟೆಂಟ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಇದಕ್ಕೆ ಮೆಟಾ ಎಐ ಎಂದೇ ಹೆಸರಿಡಲಾಗಿದೆ. ಮೆಟಾ ಎಐ ಬಳಸಿ ನೂತನ ಸ್ಮಾರ್ಟ್ ಗ್ಲಾಸ್ ಅಭಿವೃದ್ಧಿಪಡಿಸಲಾಗಿದೆ. ಮೆಟಾದ ಮೊದಲ ಸ್ಮಾರ್ಟ್ ಗ್ಲಾಸ್ ಇದಾಗಿದ್ದು, ತುಂಬಾ ಹಗುರ ಮತ್ತು ಆರಾಮದಾಯಕವಾಗಿದೆ. ಇವುಗಳನ್ನು ಮುಂದಿನ ಪೀಳಿಗೆಯ ಸ್ಮಾರ್ಟ್ ಗ್ಲಾಸ್ ಎಂದೂ ವಿವರಿಸಲಾಗಿದೆ. ಸ್ಮಾರ್ಟ್ ಗ್ಲಾಸ್‌ಗಳನ್ನು ಧರಿಸಿ ನೀವು ನೋಡುವ ಎಲ್ಲವನ್ನೂ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಬಹುದು. ಇದರಲ್ಲಿ 12…
ಬೂದು ಕುಂಬಳಕಾಯಿ ಎಲ್ಲರಿಗೂ ಗೊತ್ತೇ ಇದೆ. ಇದರಿಂದ ಪೇಠಾ ಎನ್ನುವ ಪ್ರಸಿದ್ಧ ಸಿಹಿ ತಿನಿಸನ್ನೂ ತಯಾರಿಸುತ್ತಾರೆ. ಬೂದು ಕುಂಬಳಕಾಯಿಯನ್ನು ಸಾಂಬಾರಿನಲ್ಲಿಯೂ ಬಳಸುತ್ತಾರೆ. ಇದು ಔಷಧೀಯ ಗುಣಗಳನ್ನು ಹೊಂದಿರುವ ಅತ್ಯಂತ ಪೌಷ್ಟಿಕ ಆಹಾರವಾಗಿದೆ. ಆರೋಗ್ಯಕರ ಆಹಾರದಿಂದ ಕಾಯಿಲೆಗಳು ದೂರ ನಾವು ಮಾಡುವ ಆಹಾರದ ಆಯ್ಕೆಗಳು ನಾವು ಯಾವ ರೀತಿಯ ದೇಹವನ್ನು ಹೊಂದಿದ್ದೇವೆ ಎಂಬುದನ್ನು ನಿರ್ಧರಿಸುತ್ತದೆ. ದೇಹವು ಕಾರ್ಯನಿರ್ವಹಿಸುವ ರೀತಿಯಲ್ಲಿ ಪರಿಣಾಮ ಬೀರುತ್ತದೆ. ದೇಹವು ಕ್ಷಾರೀಯ ಸ್ಥಿತಿಯಲ್ಲಿದ್ದಾಗ, ಇದರರ್ಥ ದೇಹದ pH ಮಟ್ಟವು ಹೆಚ್ಚಾಗುತ್ತದೆ. ಇದು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ. ಒಟ್ಟಾರೆಯಾಗಿ, ಕ್ಷಾರೀಯ ದೇಹವನ್ನು ಹೊಂದಿರುವುದು ಎಂದರೆ ನೀವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳು ಕಡಿಮೆಯಾಗುತ್ತದೆ. ಪೋಷಕಾಂಶಗಳಿಂದ ಸಮೃದ್ಧವಾಗಿದೆ ಬೂದು ಕುಂಬಳಕಾಯಿ ರಸವು ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫರಸ್, ಸತು, ಮೆಗ್ನೀಸಿಯಮ್, ತಾಮ್ರ ಮತ್ತು ಮ್ಯಾಂಗನೀಸ್‌ನಂತಹ ಖನಿಜಗಳನ್ನು ಹೊಂದಿದೆ ಮತ್ತು ನಿಯಾಸಿನ್, ಥಯಾಮಿನ್, ವಿಟಮಿನ್ ಸಿ ಮತ್ತು ರೈಬೋಫ್ಲಾವಿನ್‌ನಂತಹ ವಿಟಮಿನ್‌ಗಳ ಮೂಲವಾಗಿದೆ. ಬರೀ ಹೊಟ್ಟೆಯಲ್ಲಿ…
ತುಳಸಿ ವಿವಾಹ ಸೂರ್ಯೋದಯ: 06.22 AM, ಸೂರ್ಯಾಸ್ತ : 05.50 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಶುಕ್ಲ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ದ್ವಾದಶಿ 07:06 PM ತನಕ ನಂತರ ತ್ರಯೋದಶಿ ನಕ್ಷತ್ರ: ಇವತ್ತು ರೇವತಿ 04:01 PM ತನಕ ನಂತರ ಅಶ್ವಿನಿ ಯೋಗ: ಇವತ್ತು ಸಿದ್ಧಿ 09:05 AM ತನಕ ನಂತರ ವ್ಯತೀಪಾತ ಕರಣ: ಇವತ್ತು ಬವ 08:03 AM ತನಕ ನಂತರ ಬಾಲವ 07:06 PM ತನಕ ನಂತರ ಕೌಲವ ರಾಹು ಕಾಲ: 10:30 ನಿಂದ 12:00 ವರೆಗೂ ಯಮಗಂಡ: 03:00 ನಿಂದ 04:30 ವರೆಗೂ ಗುಳಿಕ ಕಾಲ: 07:30 ನಿಂದ 09:00 ವರೆಗೂ ಅಮೃತಕಾಲ: 01.44 PM to 03.15 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:40 ನಿಂದ ಮ.12:24 ವರೆಗೂ ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. “ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು” ಸೋಮಶೇಖರ್ ಗುರೂಜಿB.Sc…