Author: AIN Author

ಹಾಸನ: ಮಾಜಿ ಸಚಿವ ಎಚ್ ಡಿ ರೇವಣ್ಣ ಆಪ್ತ ಉದ್ಯಮಿ ಕೃಷ್ಣಗೌಡ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಆರೋಪಿಗಳ ಬಂಧನದ ವಿಷಯದಲ್ಲಿ ಜಿಲ್ಲಾ ಪೊಲೀಸ್‌ ವಿಫಲಗೊಂಡಿದ್ದರಿಂದ ಪ್ರಕರಣ ಹಳ್ಳಹಿಡಿದು ಹೋಗಬಹುದು ಎನ್ನುವ ಹಂತದಲ್ಲಿ ಕಾನೂನು, https://ainlivenews.com/miley-is-the-new-president-of-argentina-who-talks-to-a-dead-dog/  ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ಪ್ರಕರಣವನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದ್ದಾರೆ. ಈಗ ಸಿಐಡಿ ಪ್ರವೇಶದಿಂದ ಪ್ರಕರಣದ ತನಿಖೆಯ ದಿಕ್ಕು ಬದಲಾಗುವ ಸಾಧ್ಯತೆ ಇದೆ. ಶುಕ್ರವಾರವೇ ಸಿಐಡಿಯ ತನಿಖಾಧಿಕಾರಿ ನಗರಕ್ಕೆ ಆಗಮಿಸಲಿದ್ದು ಆರೋಪಿಗಳಿಗೆ ಮತ್ತೊಮ್ಮೆ ಡ್ರಿಲ್ ಆರಂಭವಾಗಲಿದೆ.

Read More

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ಕಾನೂನು ಲೋಪವನ್ನು ನಮ್ಮ ಸರ್ಕಾರ ಸರಿ ಮಾಡಿದೆ ಎಂದು ಡಿಕೆ ಶಿವಕುಮಾರ್ (DK Shivakumar) ವಿರುದ್ಧದ ಸಿಬಿಐ (CBI) ಕೇಸ್ ವಾಪಸ್ ಪಡೆಯುವ ಸರ್ಕಾರದ ನಡೆಯನ್ನು ಗೃಹಸಚಿವ ಜಿ ಪರಮೇಶ್ವರ್ (G Parameshwara) ಸಮರ್ಥನೆ ಮಾಡಿಕೊಂಡಿದ್ದಾರೆ. https://ainlivenews.com/cm-siddaramaiah-works-as-a-lawyer-lecturer-hdk-spark/ ಡಿಕೆಶಿ ಸಿಬಿಐ ಕೇಸ್ ವಾಪಸ್ ಪಡೆಯುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ರಾಜಕೀಯ ಪ್ರೇರಿತ ಅಲ್ಲ. ಯಡಿಯೂರಪ್ಪ ಅವರು ಮೌಖಿಕ ನಿರ್ದೇಶನ ಕೊಟ್ಟು ಸಿಬಿಐಗೆ ಕೇಸ್ ಕೊಡಿ ಎಂದು ಸಿಎಸ್‌ಗೆ ಮೌಖಿಕ ಆದೇಶ ಕೊಟ್ಟಿದ್ದು ರಾಜಕೀಯ ಪ್ರೇರಿತ ಅಲ್ಲವಾ? ನಾವು ಮಾಡಿರೋದು ಕಾನೂನಿನ ಚೌಕಟ್ಟಿನಲ್ಲಿ. ಅಂದಿನ ಅಡ್ವೊಕೇಟ್ ಜನರಲ್ ಅವರು ಹೇಳಿದ್ರು, ಈಗ ನಮ್ಮ ಎಜಿ ಅವರು ನಮಗೆ ಅದನ್ನು ಹೇಳಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ನಮ್ಮ ಇತಿಮಿತಿಯಲ್ಲಿ ತೀರ್ಮಾನ ಮಾಡಿದ್ದೇವೆ. ಹಾಗಾಗಿ ಇದು ರಾಜಕೀಯ ಪ್ರೇರಿತ ಅಲ್ಲ ಎಂದಿದ್ದಾರೆ. ರಾಜಕೀಯ ಪ್ರೇರಿತ ಬಿಜೆಪಿ ಅವರು ಮಾಡಿದಾಗ ಒಂದು, ನಾವು ಮಾಡಿದಾಗ ಒಂದು ಆಗೋದಿಲ್ಲ. ಎಲ್ಲವೂ ಒಂದೇ…

Read More

ತುಮಕೂರು: ರಾಜ್ಯದ ಜನತೆ ಮುಂದೆ ಸರ್ಕಾರ ಬೆತ್ತಲಾಗಿದೆ. ಸಿಎಂ ಸಿದ್ದರಾಮಯ್ಯ ಆಕ್ಟ್, ಸೆಕ್ಷನ್ ಬಗ್ಗೆ ಮಾತನಾಡುತ್ತಾರೆ. ಅಂದು ಸಿಬಿಐನವರು ಅನುಮತಿ ಕೇಳಿದ್ದರು.‌ ಸರ್ಕಾರ ಅನುಮತಿ ನೀಡಿತ್ತು. ರಾಜ್ಯದ ಡಿಸಿಎಂ ನ್ಯಾಯಾಲಯಗಳಿಗೆ ಓಡಾಡಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ ನ್ಯಾಯಾಲಯದಲ್ಲೇ ತೀರ್ಪಾಗಲಿ. https://ainlivenews.com/shooting-in-metro-also-from-now-on-bmrcl-green-signal/  ನ್ಯಾಯಾಲಯದ ಮುಂದೆಯೇ ಕ್ಲೀನ್ ಚೀಟ್ ಪಡೆದು ಜನರ ಮುಂದೆ ಹೋಗಬೇಕಿತ್ತು. ಇದೊಂದು ನ್ಯಾಯಾಲಯಕ್ಕೆ ಸವಾಲ್ ಹಾಕಿದ ರೀತಿಯಲ್ಲಿದೆ. ಸಿಬಿಐಗೆ ಸವಾಲ್ ಅಲ್ಲ, ನ್ಯಾಯಾಲಯಕ್ಕೆ ಸವಾಲ್. ಇಂತಹ ಪ್ರಕರಣಗಳನ್ನು ಕ್ಯಾಬಿನೆಟ್​ನಲ್ಲಿ ಚರ್ಚೆ ಮಾಡುವುದು ಸೂಕ್ತವಾಗಿರಲಿಲ್ಲ. ಎಂದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವಾಗ್ದಾಳಿ ಮಾಡಿದರು.

Read More

ಕಲಬುರಗಿ: ಜಸ್ಟ್ 28 ಸೆಕೆಂಡ್ ಅಷ್ಟೆ.. ಅಷ್ಟರಲ್ಲಿಯೇ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಿದ ಬೈಕನ್ನ ಖದೀಮನೊಬ್ಬ ಕದ್ದೊಯ್ದ ಘಟನೆ ಕಲಬುರಗಿಯಲ್ಲಿ ನಡೆದಿದೆ..ಜೇವರ್ಗಿ ರಸ್ತೆಯ ಕೊಠಾರಿ ಭವನದ ಬಳಿ ಘಟನೆ ನಡೆದಿದ್ದ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ನೋಡ ನೋಡ್ತಿದ್ದಂತೆ ಕದ್ದೊಯ್ದಿದ್ದಾನೆ. ಚಂದ್ರಕಾಂತ ಎಂಬುವವರಿಗೆ ಸೇರಿರೋ ಬೈಕ ಅಂತ ಗೊತ್ತಾಗಿದ್ದು ಮುಖಕ್ಕೆ ಮಾಸ್ಕ್ ಕಟ್ಕೊಂಡು ಬಂದು ಬೈಕ್ ಕದಿಯೋ ಸೀನ್ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ..ಪ್ರಕರಣ ದಾಖಲಿಸಿಕೊಂಡ ಸ್ಟೇಷನ್ ಬಜಾರ್ ಠಾಣೆ ಪೋಲೀಸರು ಆರೋಪಿಗಾಗಿ ತಲಾಷ ನಡೆಸಿದ್ದಾರೆ.

Read More

ಹುಬ್ಬಳ್ಳಿ: ಜಾತಿ‌ ಜನಗಣತಿ ಗೊಂದಲ ವಿಚಾರ, ಕಾಂಗ್ರೆಸ್ ಸರ್ಕಾರದಲ್ಲೇ ಗೊಂದಲವಿದೆ. ಜಾತಿ ಜನಗಣತಿ ವಿಚಾರದಲ್ಲೊ ದೊಡ್ಡ ಪ್ರಮಾಣದ ಗೊಂದಲ‌ಸೃಷ್ಠಿಯಾಗುತ್ತಿದೆ. ಇದು ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತೆ. ಜಾತಿ ಜನಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ. ಜಾತಿಜನಗಣತಿ ಮಾಡಬೇಕಿರುವುದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರದ ಕೆಲಸವನ್ನ ನಾವು ಮಾಡುತ್ತೇವೆ ಅಂತಾ ರಾಜ್ಯ ಸರ್ಕಾರ ಹೇಳುತ್ತಿದೆಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಜಾತಿ ಜನಗಣತಿ ವರದಿಯ ಪತ್ರ ಮಾಯವಾಗಿದೆ ಅಂತಾ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರೇ ಪತ್ರ ಬರೆದಿದ್ದಾರೆ. ಈ ವಿಚಾರದ ಬಗ್ಗೆ ಸರ್ಕಾರದಲ್ಲೇ ಸಹಮತವಿಲ್ಲ. ಡಿ.ಕೆ.ಶಿವಕುಮಾರ , ಶಾಮನೂರು ಶಿವಶಂಕರಪ್ಪ ಮೊದಲಾದವರಿಂದ ಇದರ ಬಗ್ಗೆ ವಿರೋಧವಿದೆ. ಈ ಕುರಿತು ವರದಿ ಜಾರಿಯಾಗಬಾರದೆಂದ ವಿರೋಧ ಅವರಲ್ಲೇ ಇದೆ. ಸರ್ಕಾರದಲ್ಲಿ ಗೊಂದಲ, ಭಿನ್ನಾಭಿಪ್ರಾಯ ಇರುವಾಗ ವರದಿ ಹೇಗೆ ಸಲ್ಲಿಸುತ್ತಾರೆ ? ಕೆಲ‌ಶಾಸಕರನ್ನ ಎತ್ತಿಕಟ್ಟಿ ಸಿಎಂ ಸಿದ್ಧರಾಮಯ್ಯ ತಮ್ಮ ಪಾರುಪತ್ಯ ಮೆರೆಯುತ್ತಿದ್ದಾರೆ. ಜನರ ಹಿತದೃಷ್ಠಿಯಿಂದ…

Read More

ಧಾರವಾಡ: ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಸರಂಬಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹರಾಜರಿಗೆ ಅವಮಾನ ಮಾಡಿರುವ ಘಟನೆ ಖಂಡಿಸಿ ಹಾಗೂ ಪದೇ ಪದೇ ಶಿವಾಜಿ ಮಾಹರಾಜರ ಅಪಮಾನ ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕ್ಕೆ ಒತ್ತಾಯಿಸಿ, ಧಾರವಾಡದಲ್ಲಿ ಮರಾಠ ಸಮಾಜದ ಮುಖಂಡರು ಮನವಿ ಸಲ್ಲಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಗೆ ಬಂದ ಮರಾಠ ಮಡಳ ಮುಖಂಡರು ಹಾಗೂ ಸಮಾಜದ ಮುಖಂಡರು ಶ್ರೀ ಶಿವಾಜಿ ಮಹರಾಜರಿಗೆ ಅಪಮಾನ ಮಾಡುವವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಇತ್ತೀಚೆಗೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಸರಂಬಿ ಗ್ರಾಮದಲ್ಲಿನ ಮುಸ್ಲಿಂ ಕೆಲವು ಕಿಡಗಡಿಗಳು ಟಿಪ್ಪು ಸುಲ್ತಾನ ಮುಂದೆ ಬೇಡಿಕೊಳ್ಳುವ ರೀತಿ ಶಿವಾಜಿ ಮಹರಾಜರ ಪೋಟೊಎಡಿಟ್ ಮಾಡಿ ಅಪಮಾನ ಮಾಡಿದ್ದಾರೆ. ಈಗಾಗಲೇ ಆ ಕೃತ್ಯ ನಡೆಸಿದವರನ್ನು ಬಂಧನ ಮಾಡಲಾಗಿದೆ. ಆದರೆ ಈ ರೀತಿಯ ಘಟನೆಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ.‌ ನಾವು ಎಲ್ಲ ಸಮಾಜದ ನಾಯಕರನ್ನು ಹಾಗೂ ಗುರುಗಳನ್ನು ಗೌರವದಿಂದ ಕಾಣುತ್ತವೆ. ಆದರೆ ಕೆಲವು…

Read More

ಬಾಗಲಕೋಟೆ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧದ ಆದಾಯ ಮೀರಿದ ಆಸ್ತಿ ಸಂಪಾದನೆ ಆರೋಪವು ಗಂಭೀರ ಸ್ವರೂಪದ್ದಾಗಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಾಲಿಂಗಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಪ್ರಕರಣದ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿಯನ್ನು ಹಿಂಪಜೆಯಲು ರಾಜ್ಯ ಸಚಿವ ಸಂಪುಟ ಸಭೆ ತೆಗೆದುಕೊಂಡಿರುವ ನಿರ್ಣಯ ಅಕ್ಷಮ್ಯ. ಇದನ್ನು ಆಮ್ ಆದ್ಮಿ ಪಕ್ಷ ಖಡಾಖಂಡಿತವಾಗಿ ತಿರಸ್ಕರಿಸುತ್ತದೆ ಎಂದು ಅರ್ಜುನ ಹಲಗಿಗೌಡರ ಆಮ್ ಆದ್ಮಿ ಪಕ್ಷ ಉತ್ತರ ಕರ್ನಾಟಕ ಸಂಘಟನೆಯ ಕಾರ್ಯದರ್ಶಿ ಹೇಳಿದರು. ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧದ ಸಿಬಿಐ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿದೆ. ಚಾರ್ಜ್‌ಶೀಟ್‌ ಹಾಕುವ ಹಂತಕ್ಕೆ ಬಂದಿದೆ. ಮುಕ್ತಾಯ ಹಂತದಲ್ಲಿರುವ ಪ್ರಕರಣವನ್ನು ಸಿಬಿಐ ತನಿಖೆಯಿಂದ ಹಿಂಪಡೆಯುವುದು ದುರುದ್ದೇಶಪೂರಿತವಾಗಿದೆ. ಈ ನಿರ್ಧಾರ ಕಾನೂನಿಗೆ ವಿರುದ್ಧವಾಗಿದೆ ಎಂದರು. ಜನಸಮಾನ್ಯರ, ರೈತರ ಆಸ್ತಿಗಳಲ್ಲಿ ಕೊಂಚವೂ ಹೆಚ್ಚಾಗುವುದಿಲ್ಲ. ಆದರೆ ರಾಜಕಾರಣಿಗಳ ಆಸ್ತಿ ನೂರಾರು ಪಟ್ಟು ಹೆಚ್ಚಾಗುವುದು ಹೇಗೆ? 2013-18ರ ಐದು ವರ್ಷದಲ್ಲಿ ಶಿವಕುಮಾರ್‌ ಅವರ ಆಸ್ತಿ ಶೇ 380ರಷ್ಟು ಏರಿಕೆಯಾಗಿದೆ. ಇದು ಹೇಗೆ ಸಾಧ್ಯವಾಯ್ತು ಎಂಬುದಕ್ಕೆ…

Read More

ಕೋಲಾರ: ಕೃಷಿ ಉತ್ಪನ್ನ ಮಾರುಕಟ್ಟೆಗೆ ಬೇಕಾದ ೮೦ ಎಕರೆ ಜಾಗ ಗುರುತಿಸಿಲ್ಲ ಎಂದು ರೈತ ಸಂಘ ಹಾಗೂ ಜೆಡಿಎಸ್ ನಿಂದ ಪ್ರತಿಭಟನೆ ಮಾಡಲಾಯಿತು. ಕೋಲಾರ ಹೊರ ವಲಯದ ಕೊಂಡರಾಜನಹಳ್ಳಿ ಬಳಿ ಇರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಎದುರು ಸರ್ಕಾರ ಹಾಗೂ ಜಿಲ್ಲಾಡಳಿತ ದ ವಿರುದ್ದ ಜಾನುವಾರು, ಬಂಡಿ, ಟ್ರಾಕ್ಟರ್, ಹಣ್ಣು- ತರಕಾರಿ, ಸೊಪ್ಪುಇನೊಂದಿಗೆ ಪ್ರತಿಭಟನೆ ನಡೆಸಿದರು. ಎಪಿಎಂಸಿ ಬಳಿಕ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇನ್ನೂ ಹೆದ್ದಾರಿ ತಢದ್ರೆ ಹೋರಾಟಗಾರರನ್ನ ಬಂಧಿಸುವ ಸಾಧ್ಯತೆ ಇದೆ.

Read More

ನಟಿ ತ್ರಿಷಾಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದ ಮನ್ಸೂರ್ ಅಲಿ ಖಾನ್ ಮೇಲೆ ಲೈಂಗಿಕ ಕಿರುಕುಳ ದೂರು ದಾಖಲಾಗಿತ್ತು. ಚೆನ್ನೈನ ಥೌ‍ಸಂಡ್ ಲೈಟ್ಸ್ ಆಲ್ ವುಮೆನ್ ಪೊಲೀಸ್ ಠಾಣೆಗೆ ಬಂದು ಹಾಜರಾಗುವಂತೆ ನಟನಿಗೆ ನೋಟಿಸ್ ನೀಡಲಾಗಿತ್ತು. ಅನಾರೋಗ್ಯದ ನೆಪವೊಡ್ಡಿ ಬರಲು ಆಗುವುದಿಲ್ಲ ಎಂದು ಮನ್ಸೂರ್ ಅಲಿ ಖಾನ್ ಹೇಳಿದ್ದ. ಜೊತೆಗೆ ಜಾಮೀನು ಅರ್ಜಿಯನ್ನೂ (Court) ಸಲ್ಲಿಸಿದ್ದ. ಆದರೆ, ಡಿಢೀರ್ ಅಂತ ಮನಸ್ಸು ಬದಲಾಯಿಸಿ ಪೊಲೀಸ್ ಠಾಣೆಗೆ ಹಾಜರಾಗಿದ್ದ. ಇತ್ತ ಜಾಮೀನು ಅರ್ಜಿಯಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ನಿರೀಕ್ಷೆ ಜಾಮೀನು (Bail) ಸ್ವೀಕೃತವಾಗಿಲ್ಲ. ಹಾಗಾಗಿ ನ್ಯಾಯಾಧೀಶರು ಛೀಮಾರಿ ಹಾಕಿದ್ದಾರೆ. ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕಾಗಿ ಸೆಷನ್ಸ್ ನ್ಯಾಯಾಲಯ ಗರಂ ಆಗಿದೆ ಎಂದು ವರದಿ ಆಗಿದೆ. ಮನ್ಸೂರ್ ಅಲಿ ಖಾನ್ (Mansoor Ali Khan) ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ತಮಿಳು ಚಿತ್ರೋದ್ಯಮದಲ್ಲಿ ಆಕ್ರೋಶ ಹೆಚ್ಚಾಗುತ್ತಿದೆ. ಲಿಯೋ ಸಿನಿಮಾದಲ್ಲಿ ನಾಯಕಿ ತ್ರಿಷಾ (Trisha) ಅವರನ್ನು ರೇಪ್ (Rape) ಮಾಡುವಂತಹ ಸನ್ನಿವೇಶ ಇದೆ ಅಂದುಕೊಂಡಿದೆ. ಆದರೆ, ಇರಲಿಲ್ಲ.…

Read More

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ತೇರದಾಳ ಹಿಡಕಲ ರಸ್ತೆಯ ಒಂದನೇ ಕಾಲುವೆಯ ಬಳಿ ಜಮೀನಲ್ಲಿ ಹರಿದು ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಬಸಪ್ಪ ಅಥಣಿ (65) ಮೃತಪಟ್ಟವರು. ತಮ್ಮ ಜಮೀನಿನಲ್ಲಿ ಹೋಗಿ ಮರಳಿ ಬರುವಾಗ ಅಲ್ಲೇ ತುಂಡಾಗಿ ಬಿದ್ದಿದ್ದ ಹೆಸ್ಕಾಂ ವಿದ್ಯುತ್ ತಂತಿ ( ಎಲ್ ಟಿ ಲೈನ್) ಬಸಪ್ಪ ಅವರ ಗಮನಕ್ಕೆ ಬಂದಿರಲಿಲ್ಲ ಹೊಟ್ಟೆ ಹಾಗೂ ಕೈಗಳಿಗೆ ವಿದ್ಯುತ್ಪರ್ಶವಾಗಿ ಮೃತಪಟ್ಟಿದ್ದಾರೆ ಎಂದು ಮೃತರು ಪುತ್ರ ರಾಜು ಬಸಪ್ಪ ಅಥಣಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ತೇರದಾಳ ಪಿಎಸ್ಐ ಅಪ್ಪು ಐಗಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಪ್ರಕಾಶ ಕುಂಬಾರ ಬಾಗಲಕೋಟೆ

Read More