ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಹೆಚ್ಎಎಲ್ ಏರ್ಪೋರ್ಟ್ಗೆ ಆಗಮಿಸಿದ್ದಾರೆ https://ainlivenews.com/laser-therapy-soukhy-robotic-ortho-care/ ಪ್ರಧಾನಿ ಮೋದಿ ಅವರನ್ನು ಡಿಜಿ&ಐಜಿಪಿ ಅಲೋಕ್ ಮೋಹನ್, ಬೆಂಗಳೂರು ನಗರ ಡಿಸಿ ದಯಾನಂದ್, ಕಮಿಷನರ್ ದಯಾನಂದ್ ಸ್ವಾಗತಿಸಿದರು. HAL ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ.
Author: AIN Author
ಹುಬ್ಬಳ್ಳಿ: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಬಿಎಸ್‌ವೈ ಸಂಬಂಧಿ ಕುಂದಗೋಳ ಕ್ಷೇತ್ರದ ಮಾಜಿ ಶಾಸಕ ಚಿಕ್ಕನಗೌಡರ ಮರಳಿ ಬಿಜೆಪಿಗೆ ಹೋದ್ರಾ..? ಹೌದು,,, ರಾಜ್ಯ ಬಿಜೆಪಿ ಅಧ್ಯಕ್ಷ ವಿಜೇಯಂದ್ರ ಭೇಟಿಯಾದ ಎಸ್ ಐ ಚಿಕ್ಕನಗೌಡರ, ವಿಜೇಯಂದ್ರ ರಾಜ್ಯಾಧ್ಯಕ್ಷ ಆದ ನಂತರ ಅಭಿನಂದನೆ ಸಲ್ಲಿಸಿದ ಚಿಕ್ಕನಗೌಡ್ರ, ಕುಂದಗೋಳ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಎಸ್.ಐ. ಚಿಕ್ಕನಗೌಡರ, ಕೇಲ ದಿನಗಳ ಹಿಂದೆ ತಮ್ಮ ಬೆಂಬಲಿಗರ ಜೊತೆ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದರು. ಸಧ್ಯ ಏಕಾಏಕಿ ವಿಜೇಯಂದ್ರ ಜೊತೆಗೆ ಕಾಣಿಸಿಕೊಂಡ ಚಿಕ್ಕನಗೌಡರ ಮತ್ತು ಹಿಂಬಾಲಕರು ಮರಳಿ ಮತ್ತೇ ಕಮಲ ಹಿಡಿತಾರಾ ಎಂಬ ಶಂಕೆ ಮೂಡಿದೆ.
ಕನ್ನಡ ಚಿತ್ರರಂಗದಲ್ಲಿ ಹೊಸಬರ ಅಬ್ಬರ ಜೋರಾಗಿದೆ. ಹಲವು ಹೊಸಬರು ಗುಣಮಟ್ಟದ, ಕಂಟೆಂಟ್ ವುಳ್ಳ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬರುತ್ತಿದ್ದಾರೆ. ದೊಡ್ಡ ಗೆಲುವು ಸಾಧಿಸದಿದ್ದರೂ ಪ್ರಶಂಸೆಯನ್ನು ಪಡೆದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಹೊಸ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ತಯಾರಾಗುತ್ತಿರುವ ಸಿನಿಮಾ ಅಗ್ನಿ.. ಇತ್ತೀಚೆಗೆಷ್ಟೇ ಬೆಂಗಳೂರಿನ ಬಂಡೇ ಮಹಾಕಾಳಿ ಸನ್ನಿಧಿಯಲ್ಲಿ ಜರ್ನಿ ಸಿನಿಮಾದ ಮುಹೂರ್ತ ನೆರವೇರಿದೆ. ಈ ವೇಳೆ ಚಿತ್ರತಂಡ ಒಂದಷ್ಟು ಮಾಹಿತಿ ಹಂಚಿಕೊಂಡಿದೆ. ನಿರ್ದೇಶಕ ಅಗ್ನಿ ಮಾತನಾಡಿ, 5 ಜನ ಸ್ನೇಹಿತರ ನಡುವೆ ನಡೆಯುವ ಕಥೆ. ಕಾಲೇಜ್ ನಂತರ ದಿನಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಹಾಸನ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ನಿರ್ದೇಶಕನಾಗಿ ನನಗೆ ಇದು ಮೊದಲ ಸಿನಿಮಾ. ನಿರೂಪಕನಿಂದ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ ಎಂದು ತಿಳಿಸಿದರು. ನಾಯಕ ದಿನಿ ಮಾತನಾಡಿ, ಅಗ್ನಿ ಅವರು ಕಥೆ ಹೇಳಿದರು. ಇಷ್ಟವಾಯ್ತು. ಸಿನಿಮಾ ಶುರುವಾದಾಗಿನಿಂದ ಅಂತ್ಯದವರೆಗೂ ಮನರಂಜನೆ ಸಿಗುತ್ತದೆ. ಕ್ಲೈಮ್ಯಾಕ್ಸ್ ನಲ್ಲಿ ಪ್ರತಿಯೊಬ್ಬರು ಕಣ್ಣೀರು ಬರುತ್ತದೆ. ಕ್ಲೈಮ್ಯಾಕ್ಸ್ ಗೂ…
ವಿಜಯಪುರ: ಕಳೆದ ಆರೇಳು ತಿಂಗಳುಗಳಿಂದ ಬಂದ್ ಆಗಿದ್ದಂತಹ ಉದ್ಯಾನವ ಮತ್ತೆ ಈಗ ಆರಂಭವಾಗಿದೆ. ಜೊತೆಗ ಉದ್ಯಾನವನಕ್ಕೆ ಹೈಟೇಕ್ ಟಚ್ ಕೂಡಾ ನೀಡಲಾಗಿದೆ. ಈಗ ಅದೆಷ್ಟೋ ಜನ ಪ್ರವಾಸಿಗರು ಒಂದು ದಿನದ ಪಿಕ್ನಿಕ್ ಅಂತಾ ಈ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ಪ್ರೇಮಿಗಳಿಗೂ ಹಾಟ್ ಫೇವರೇಟ್ ಪ್ಲೇಸ್ ಆಗಿ ಮಾರ್ಪಟ್ಟಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ… https://ainlivenews.com/laser-therapy-soukhy-robotic-ortho-care/ ಹೌದು ವಿಜಯಪುರ ನಗರದ ಹೊರಭಾಗದ ಭೂತನಾಳ ಕೆರೆಯ ಬಳಿಯ ಉದ್ಯಾನವನಕ್ಕೆ ಈಗ ಹೈಟೇಕ್ ಸ್ಪರ್ಷ ನೀಡಲಾಗಿದೆ. ಒಳಗೆ ಹೋದರೆ ಸಾಕು ನವಿಲುಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಮಾಡಿದ್ದಾರೆ. ಜೊತೆಗೆ ಒಳಗೆ ಹೋದಂತೆ ಮಂಗಗಳು, ಆನೆ ಸೇರಿದಂತೆ ವಿವಿಧ ಪ್ರಾಣಿಗಳ ಕೆತ್ತನೆ ಕೂಡಾ ಮಾಡಲಾಗಿದೆ. ಇನ್ನೂ ಮಕ್ಕಳಿಗಾಗಿ ಆಟಿಗೆ ಸಾಮಾನುಗಳನ್ನು ಸಹಿತ ಇಲ್ಲಿ ಇಡಲಾಗಿದೆ. ಈಗ ಈ ಉದ್ಯಾನವನಕ್ಕೆ ಹೈ ಟೇಕ್ ಸ್ಪರ್ಷ ನೀಡಲಾಗಿದೆ. ಮೊದಲಿಗಿಂತಲೂ ಈ ಉದ್ಯಾನವನಕ್ಕೆ ಈಗ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ… ಕಳೆದ ಆರೇಳು ತಿಂಗಳು ಗಳ ಕಾಲ…
ತುಮಕೂರು: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಮಾಜಿ ಸಚಿವ ಸೋಮಣ್ಣ ಭೇಟಿ ನೀಡಿದ್ದಾರೆ. ಡಿಸೆಂಬರ್ 6ರಂದು ಗುರುಭವನ ಲೋಕಾರ್ಪಣೆ ಸಮಾರಂಭ ಹಿನ್ನೆಲೆ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆಗೆ ವಿ.ಸೋಮಣ್ಣ ಆಗಮಿಸುತ್ತಿದ್ದಾರೆ. ಸಿದ್ದಲಿಂಗ ಶ್ರೀಗಳ ಅಶೀರ್ವಾದ ಪಡೆದು ಬಳಿಕ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ಮಾಡಲಿದ್ದಾರೆ.
ಬೆಂಗಳೂರು: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧ ನಡೆದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ, ವೀರ ಮರಣವನ್ನಪ್ಪಿದ ಯೋಧನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಜಿಗಣಿ ನಂದನವನ ಬಡಾವಣೆಯ ಸ್ವಗೃಹದಲ್ಲಿ ಯೋಧನ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಬೆಳಗ್ಗೆಯಿಂದಲೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಪೊಲೀಸ್ ಇಲಾಖೆ ಸಾರ್ವಜನಿಕರು ಮತ್ತು ಗಣ್ಯರಿಗೆ ಪ್ರತೇಕ ವ್ಯವಸ್ಥೆ ಮಾಡಿದೆ. ಬ್ಯಾರಿಕೇಡ್‌ಗಳನ್ನ ಹಾಕಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದೆ. ನಿಜಕ್ಕೂ ಇಂತಹ ದಿನ ಬರುತ್ತೆ ಅಂತಾ ಊಹೆ ಮಾಡಿರಲಿಲ್ಲ. ನಿಜಕ್ಕೂ ಬಹಳ ನೋವಾಗ್ತಿದೆ. ವೀರ ಯೋಧನನ್ನ ಕಳೆದುಕೊಂಡು ನಾಡು ತಬ್ಬಲಿಯಾಗಿದೆ. ದೇವರು ಕುಟುಂಬಕ್ಕೆ ಅವರ ಆಗಲಿಕೆ ನೋವು ಭರಿಸುವ ಶಕ್ತಿ ನೀಡಲಿ. ಅಂತಿಮ ದರ್ಶನದ ಮೂಲಕ ಗೌರವ ಸಮರ್ಪಣೆಗೆ ಬಂದಿದ್ದೇವೆ ಎಂದು ಅಂತಿಮ ದರ್ಶನಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ವಿಷಾದ ವ್ಯಕ್ತಪಡಿಸಿದ್ದಾರೆ. https://ainlivenews.com/laser-therapy-soukhy-robotic-ortho-care/ ಅಂತಿಮ ದರ್ಶನ ಬಳಿಕ ಬೆಳಗ್ಗೆ 10 ಗಂಟೆಗೆ ಮನೆಯಿಂದ ಅಂತಿಮ ಯಾತ್ರೆ ಹೊರಡಲಿದೆ.…
ಬೆಂಗಳೂರು: ವಿಪಕ್ಷ ನಾಯಕ ಆರ್.ಅಶೋಕ್ ಚಿತ್ರದುರ್ಗ, ತುಮಕೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಇಂದು ಮಧ್ಯಾಹ್ನ 2.30ಕ್ಕೆ ಚಿತ್ರದುರ್ಗದ ಮಾದಾರ ಚನ್ನಯ್ಯ ಮಠಕ್ಕೆ ಭೇಟಿ ನೀಡಲಿದ್ದಾರೆ ಬಳಿಕ ಮಧ್ಯಾಹ್ನ 3.30ಕ್ಕೆ ಸಿರಿಗೆರೆ ಮಠಕ್ಕೆ ಭೇಟಿ ನೀಡಿ ಸಂಜೆ 5.30ಕ್ಕೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. https://ainlivenews.com/laser-therapy-soukhy-robotic-ortho-care/ ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಮಾಜಿ ಸಚಿವ ಸೋಮಣ್ಣ ಭೇಟಿ ನೀಡಲಿದ್ದಾರೆ. ಡಿಸೆಂಬರ್ 6ರಂದು ಗುರುಭವನ ಲೋಕಾರ್ಪಣೆ ಸಮಾರಂಭ ಹಿನ್ನೆಲೆ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆಗೆ ವಿ.ಸೋಮಣ್ಣ ಆಗಮಿಸುತ್ತಿದ್ದಾರೆ. ಬೆಳಗ್ಗೆ 8.30ಕ್ಕೆ ಸಿದ್ಧಗಂಗಾ ಮಠಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಭೇಟಿ ನೀಡಲಿದ್ದಾರೆ. ಸಿದ್ದಲಿಂಗ ಶ್ರೀಗಳ ಅಶೀರ್ವಾದ ಪಡೆದು ಬಳಿಕ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ಮಾಡಲಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಲೋನ್ ಕೊಡುತ್ತೇವೆ ಎಂದು ಹೇಳಿ ಯಾಮಾರಿಸುವ ಜನ ಇದ್ದಾರೆ ಎಷ್ಟೇ ಕೇರ್ ಫುಲ್ ಆಗಿದ್ದರೂ ಮೋಸ ಮಾಡುವವರು ಇರುತ್ತಾರೆ ಹಾಗೆ ಬೆಂಗಳೂರಲ್ಲಿ ಸಬ್ಸಿಡಿ ಲೋನ್ ಕೊಡ್ಸತ್ತೇನೆ ಅಂತ ನೂರಾರು ಜನರಿಗೆ ಟೋಪಿ ಹಾಕಿದ ಭೂಪ.. ನಿಮಗೇನಾದ್ರು ಲೋನ್ ಕೊಡ್ಸಿತ್ತೇನೆ ಅಂತ ಬಂದ್ರೆ ಹುಷಾರ್ ಹುಡುಗಿಯರ ಮೂಲಕ ಗಾಳ ಹಾಕಿ ಮೋಸ ಮಾಡೋದೆ ಫುಲ್ ಟೈಂ ಜಾಬ್ ಮಾಡಿಕೊಂಡು ಬಿಟ್ಟಿದ್ದಾರೆ ಹಾಗಾಗಿ ಎಚ್ಚರದಿಂದ ಇರಬೇಕು. ಸಬ್ಸಿಡಿ ಲೋನ್ ಕೊಡ್ಸತ್ತೇನೆ ಅಂತ ನೂರಾರು ಜನರಿಗೆ ಟೋಪಿ ಹಾಕಿದ ಭೂಪ ಸಿವಿಲ್ ಸ್ಕೋರ್ ಮೆಂಟೈನ್ ಮಾಡಿದ್ರೆ ಲಕ್ಷ ಲಕ್ಷಾ ಲೋನ್ ಬರುತ್ತೆ ಅಂತ ಹೇಳ್ತಾನ ನಿಮ್ಮದೆ ಡಾಕ್ಯುಮೆಂಟ್ ಪಡೆದು ಆಧಾರ್ ಕಾರ್ಡ್, ಪಾನ್ ಕಾರ್ಡ್ ಪಡೆಯುತ್ತಾನೆ ಮೊಬೈಲ್ ಸೆಂಟರ್ ಗೆ ಕರೆದುಕೊಂಡು ಹೋಗಿ ಅಪ್ರೂಲ್ ಮಾಡ್ಸತ್ತಾನೆ ಮೊಬೈಲ್ ,ಗಾಡಿ ತೆಗೆದುಕೊಂಡು ಕೊಡುತ್ತೇನೆ ಎಂದು ಯಾಮರಿಸುತ್ತಾನೆ ಮೊಬೈಲ್ ಗಾಡಿ ತೆಗೆದುಕೊಂಡು ಇವನೆ ಇಎಂಐ ಕಟುತ್ತಾನೆಮೂರು ತಿಂಗಳ ನಂತರ EMI ಕಟ್ಟೋದೆಯಿಲ್ಲ , ಪೊಲೀಸ್ ಸ್ಟೇಷನ್…
ಕಲಬುರಗಿ: KEA ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ RD ಪಾಟೀಲ್ ನನ್ನ ಮತ್ತೆ 8 ದಿನಗಳ ಕಾಲ CID ವಶಕ್ಕೆ ನೀಡಿ ಜಿಲ್ಲಾ JMFC ಕೋರ್ಟ್ ಆದೇಶ ನೀಡಿದೆ..ಈಗಾಗಲೇ ವಶಕ್ಕೆ ಪಡೆದಿದ್ದ CID ಅಶೋಕ ನಗರ ಠಾಣೆ ಕೇಸಲ್ಲಿ 9 ದಿನ ಪೂರ್ಣ ವಿಚಾರಣೆ ನಡೆಸಿತ್ತು. https://ainlivenews.com/laser-therapy-soukhy-robotic-ortho-care/ ಇದೀಗ ವಿವಿ ಠಾಣೆ ಕೇಸ್ ವಿಚಾರಣೆಗಾಗಿ ಮತ್ತೊಮ್ಮೆ ವಶಕ್ಕೆ ನೀಡುವಂತೆ ಕೋರ್ಟಿಗೆ ಮನವಿ ಮಾಡಿತ್ತು..CID ಮನವಿ ಪುರಸ್ಕರಿಸಿದ ಕೋರ್ಟ್ ಇದೀಗ 8 ದಿನಗಳ ಕಾಲ ವಶಕ್ಕೆ ನೀಡಿ ಆದೇಶಿಸಿದೆ.. ಹೀಗಾಗಿ ಅಕ್ರಮದ ಹೆಚ್ಚಿನ ಅಂಶಗಳನ್ನ CID ಕಲೆಹಾಕುವ ಸಾಧ್ಯತೆಯಿದೆ..
ಹುಬ್ಬಳ್ಳಿ: ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಗೊಳಿಸಿ, ಎಸ್‌ಇಪಿ ಜಾರಿಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕ ನಗರದ ಪಿ.ಸಿ. ಜಾಬಿನ್ ಕಾಲೇಜಿನ ಆವರಣದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿತು. https://ainlivenews.com/laser-therapy-soukhy-robotic-ortho-care/ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ತಿರುವು ಸಿಗಲಿದೆ. ವಿದ್ಯಾರ್ಥಿಗಳ ಆಸಕ್ತಿಗೆ ಶಿಸ್ತಿನ ಅಧ್ಯಯನಕ್ಕೆ ಒತ್ತುಕೊಟ್ಟು, ಕೌಶಲಾಧಾರಿತ ಶಿಕ್ಷಣದ ಕನಸನ್ನು ಎನ್‌ಇಪಿ ಮೂಲಕ ನನಸು ಮಾಡಿಕೊಳ್ಳಬಹುದು. ಆದರೆ, ರಾಜ್ಯ ಸರ್ಕಾರ ಈ ನೀತಿ ಹಿಂಪಡೆಯಲು ತೀರ್ಮಾನಿಸಿರುವುದು ಖಂಡನೀಯ. ನೀತಿಯಲ್ಲಿ ಏನಾದರೂ ಲೋಪದೋಷಗಳಿದ್ದರೆ ಸರಿಪಡಿಸಲು ಅವಕಾಶವಿದೆ. ಶಿಕ್ಷಣ ನೀತಿಯನ್ನೇ ವಿರೋಧಿಸಲು ಹೊರಟಿದ್ದು ರಾಜಕೀಯ ದುರುದ್ದೇಶ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಸಚಿವರುಗಳ ಒಡೆತನದ ಖಾಸಗಿ ಶಾಲಾ ಕಾಲೇಜುಗಳಲ್ಲಿ ಶ್ರೀಮಂತ ವರ್ಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ಎನ್‌ಇಪಿ ರಾಷ್ಟ್ರಮಟ್ಟದ ಶಿಕ್ಷಣ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ದೊರೆಯುವುದು ಬೇಕಾಗಿಲ್ಲ ಎಂದು ಆರೋಪಿಸಿದರು. ಸುಮಾರು ಐದುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹಿ…