ಬೀದರ್ : ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿಗಳ ವಿರುದ್ದ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ ಕಿಡಿಕಾರಿದ್ದಾರೆ. ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾಂಗ್ರೆಸ್‌ನವರು ರೈತರಿಗೆ ಒಂದಾದರೂ ಗ್ಯಾರಂಟಿ ನೀಡಿದ್ದಾರಾ? ರೈತರಿಗೆ ಅಟ್ಯಾಚ್ ಆಗುವಂತ ಒಂದೂ ಗ್ಯಾರಂಟಿ ನೀಡಿಲ್ಲ ಎಂದು ಕುಟುಕಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸರ್ಕಾರ ಇದ್ದಾಗ ರೈತರ ಸಾಲ ಮನ್ನಾ ಮಾಡಿದ್ರು. ಆದರೆ, ಈಗ ಕಾಂಗ್ರೆಸ್‌ನವರು ಕೇಂದ್ರದತ್ತ ಬೊಟ್ಟು ಮಾಡುತ್ತಿದ್ದಾರೆ. ರೈತರು ಈ ದೇಶದ ಜೀವನಾಡಿಯಾಗಿದ್ದು, ಅವರು ಸಂಕಷ್ಟದಲ್ಲಿರುವಾಗ ರಾಜ್ಯ ಸರ್ಕಾರ ಅವರ ಬಗ್ಗೆ ಕಿಂಚಿತ್ತು ಕಾಳಜಿ ಮಾಡುತ್ತಿಲ್ಲ. ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದ್ದು, ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
Author: AIN Author
ಉತ್ತರ ಕನ್ನಡ : ಬಿಜೆಪಿಗರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರನ್ನೇ ಬಿಟ್ಟಿಲ್ಲ, ಇನ್ನು ಅವರ ಮಗನನ್ನ ಬಿಡ್ತಾರಾ? ಎಂದು ಮೀನುಗಾರಿಕಾ ಹಾಗೂ ಬಂದರು ಸಚಿವ ಮಂಕಾಳ ವೈದ್ಯ ಕುಟುಕಿದರು. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಡಿಯೂರಪ್ಪನವರನ್ನ ಸಿಎಂ ಆದಾಗಲೇ ಇಳಿಸಿದ್ದರು. ವಿಜಯೇಂದ್ರರನ್ನ ರಾಜ್ಯಾಧ್ಯಕ್ಷ ಮಾಡಿದ್ದಾರೆ, ಶೀಘ್ರದಲ್ಲೇ ಆ ಸ್ಥಾನದಿಂದ ಇಳಿಸುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಅವರ ಪಕ್ಷದ ನಾಯಕರೇ ಅಧ್ಯಕ್ಷ ಹುದ್ದೆ ನೇಮಕದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾವು ಮಾಡುವ ಕೆಲಸವನ್ನ ಅವರ ಪಕ್ಷದ ನಾಯಕರೇ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನದಲ್ಲಿ ಗೆಲ್ಲುತ್ತೇವೆ ಎಂದು ಬಿಜೆಪಿಗರು ಹೇಳುತ್ತಾರೆ. ಕಳೆದ ಬಾರಿ ಮಿಸ್ ಆಗಿ 27 ಸ್ಥಾನದಲ್ಲಿ ಬಿಜೆಪಿಗರು ಗೆದ್ದಿದ್ದರು. ಈ ಬಾರಿ ಕಾಂಗ್ರೆಸ್ 28 ಸ್ಥಾನದಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಹ್ಮದಾಬಾದ್: ದೇಶವೇ ಎದುರು ನೋಡುತ್ತಿರುವ ವಿಶ್ವಕಪ್ ಮಹಾಸಮರಕ್ಕೆ ಇನ್ನೊಂದು ದಿನ ಬಾಕಿಯಿದೆ. ಕೋಟ್ಯಂತರ ಅಭಿಮಾನಿಗಳು ಫೈನಲ್ (World Cup Final) ಪಂದ್ಯ ವೀಕ್ಷಣೆ ಮಾಡಲು ಕಾದು ಕುಳಿತಿದ್ದಾರೆ. ಲೀಗ್ ಸುತ್ತಿನಿಂದಲೂ ಒಂದೇ ಒಂದು ಪಂದ್ಯ ಸೋಲದ ಭಾರತ ಸರಿಸಾಟಿಯೇ ಇಲ್ಲದಂತೆ ಮುನ್ನುಗ್ಗುತ್ತಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಭಾನುವಾರ ಭಾರತ ಮತ್ತು ಆಸ್ಟ್ರೇಲಿಯಾ (Ind vs Aus) ತಂಡಗಳ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ನವೆಂಬರ್ 19 ರಂದು ಮಧ್ಯಾಹ್ನ 2 ಗಂಟೆ ವೇಳೆಗೆ ಪಂದ್ಯ ಆರಂಭವಾಗಲಿದ್ದು, 20 ವರ್ಷಗಳ ಬಳಿಕ ಭಾರತ ಕಾಂಗರೂ ಪಡೆ ವಿರುದ್ಧ ಸೇಡು ತೀರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಆದ್ರೆ ಪಂದ್ಯ ಆರಂಭಕ್ಕೂ ಮುನ್ನವೇ ಭಾರತ ತಂಡಕ್ಕೆ (Team India) ಸ್ಫೂರ್ತಿ ತುಂಬಲು ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಹಲವು ನೃತ್ಯಪಟುಗಳು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬೀಡುಬಿಟ್ಟಿದ್ದು, ನೃತ್ಯ ಅಭ್ಯಾಸ ನಡೆಸುತ್ತಿದ್ದಾರೆ. ಟೀಂ ಇಂಡಿಯಾವನ್ನು ಮತ್ತಷ್ಟು ಹುರಿದುಂಬಿಸಲು ʻಜೀತೇಗ ಇಂಡಿಯಾ ಜೀತೇಗʼ (Jeetega,…
ನ್ಯಾಷನಲ್ ಸ್ಟಾರ್ ಯಶ್-ರಾಧಿಕಾ ಪಂಡಿತ್ (Radhika Pandit) ದಂಪತಿಯ ಪುತ್ರ ಯಥರ್ವ್ 4ನೇ ವರ್ಷದ ಹುಟ್ಟುಹಬ್ಬದ (ಅ.30) ಸಂಭ್ರಮವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಬರ್ತ್‌ಡೇ ಸೆಲೆಬ್ರೇಶನ್ ಫೋಟೋವನ್ನು ನಟಿ ರಾಧಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪುತ್ರಿ ಐರಾ ಮತ್ತು ಯಥರ್ವ್ ಹುಟ್ಟುಹಬ್ಬವನ್ನು ಪ್ರತಿ ವರ್ಷವೂ ಗ್ರ್ಯಾಂಡ್ ಸೆಲೆಬ್ರೇಟ್ ಮಾಡುತ್ತಾರೆ. ಎಂದಿನಂತೆ ಈ ವರ್ಷವೂ ಕೂಡ ಯಶ್ ಪುತ್ರನ ಬರ್ತ್‌ಡೇ ಅದ್ದೂರಿಯಾಗಿ ನಡೆದಿದೆ. ಮಗನ ಬರ್ತ್‌ಡೇಯಂದು ಮಕ್ಕಳ ಜೊತೆ ಯಶ್, ರಾಧಿಕಾ ಕೂಡ ಮಸ್ತ್ ಆಗಿ ಡ್ಯಾನ್ಸ್ ಸ್ಟೇಪ್ಸ್ ಹಾಕಿದ್ದಾರೆ ತ್ರಿ ಐರಾ ಮತ್ತು ಯಥರ್ವ್ ಹುಟ್ಟುಹಬ್ಬವನ್ನು ಪ್ರತಿ ವರ್ಷವೂ ಗ್ರ್ಯಾಂಡ್ ಸೆಲೆಬ್ರೇಟ್ ಮಾಡುತ್ತಾರೆ. ಎಂದಿನಂತೆ ಈ ವರ್ಷವೂ ಕೂಡ ಯಶ್ ಪುತ್ರನ ಬರ್ತ್‌ಡೇ ಅದ್ದೂರಿಯಾಗಿ ನಡೆದಿದೆ. ಮಗನ ಬರ್ತ್‌ಡೇಯಂದು ಮಕ್ಕಳ ಜೊತೆ ಯಶ್, ರಾಧಿಕಾ ಕೂಡ ಮಸ್ತ್ ಆಗಿ ಡ್ಯಾನ್ಸ್ ಸ್ಟೇಪ್ಸ್ ಹಾಕಿದ್ದಾರೆ.
ಬಿಹಾರ: ಬಾಯ್‌ಫ್ರೆಂಡ್ ಜತೆ ಸಂಬಂಧದಲ್ಲಿದ್ದ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆಯಾಗಲು ಹೇಳಿ ತಾನು ಬಿಟ್ಟುಕೊಟ್ಟಿರುವ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ. ಹೌದು, ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನೊಂದಿಗೆ ವಿವಾಹ ಮಾಡಿಕೊಟ್ಟ ಘಟನೆ ಬೇಗುಸರೈನಲ್ಲಿ ನಡೆದಿದೆ. ಮಹಿಳೆ ಇಬ್ಬರು ಪುಟ್ಟ ಮಕ್ಕಳ ತಾಯಿಯೂ ಆಗಿದ್ದಾರೆ. ಆದರೆ, ಆ ಮಕ್ಕಳನ್ನು ತಾನೇ ನೋಡಿಕೊಳ್ಳುತ್ತೇನೆ. ಇದರಿಂದ ತನ್ನ ಹೊಸ ಜೀವನ ಸಂಗಾತಿಯೊಂದಿಗೆ ತನ್ನ ಹೆಂಡತಿಗೆ ಹೊರೆಯಾಗಬಾರದು ಎಂದು ಸಹ ಪತಿ ಹೇಳಿದ್ದಾನೆ. ಬಿಹಾರದ ಬೇಗುಸರೈ ಜಿಲ್ಲೆಯ ದಹಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. 24 ವರ್ಷದ ಅಜಯ್ ಕುಮಾರ್ 2018 ರಲ್ಲಿ ಕಾಜಲ್ (22) ಅವರನ್ನು ವಿವಾಹವಾದರು. ಅವರ ಮದುವೆಯು ಸಡಗರದಿಂದ ನಡೆಯಿತು. ಆದರೆ, ಮದುವೆಯ ನಂತರವೂ ಕಾಜಲ್ ಜಿಲ್ಲೆಯ ಮನ್ಸೂರ್ಚಕ್ ಪೊಲೀಸ್ ಠಾಣೆ ವ್ಯಾಪ್ತಿಯ ಅಘಾಪುರ ಗ್ರಾಮದ ನಿವಾಸಿ ರಾಜ್ ಕುಮಾರ್ ಠಾಕೂರ್ ಅವರೊಂದಿಗೆ ಸಂಪರ್ಕದಲ್ಲಿದ್ದರು. ಮದುವೆಗೂ ಮುನ್ನವೇ ಕಾಜಲ್ ಮತ್ತು ರಾಜ್ ಕುಮಾರ್ ಪ್ರೀತಿಸುತ್ತಿದ್ದರು. ಆದರೆ, ಕಾಜಲ್ ಎರಡು ಮಕ್ಕಳ…
ಮಂಗಳೂರು: ”ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ 2024ರ ಜನವರಿ 22ರಿಂದ ಮಾರ್ಚ್ 10ರವರೆಗೆ 48 ದಿನಗಳ ಕಾಲ ನಡೆಯಲಿದೆ,” ಎಂದು ಶ್ರೀರಾಮ ಮಂದಿರದ ವಿಶ್ವಸ್ಥರಾಗಿರುವ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಆಶ್ರಯದಲ್ಲಿ ಕದ್ರಿಯ ಮಂಜುಪ್ರಾಸಾದದಲ್ಲಿ ಸಾರ್ವಜನಿಕ ಗೋಪೂಜೆ ಉತ್ಸವದ ಸಾನ್ನಿಧ್ಯ ವಹಿಸಿದ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಜನವರಿ 2ರಂದು ಅಭಿಜಿನ್ ಮುಹೂರ್ತದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಶ್ರೀರಾಮನ ಭವ್ಯ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಎಲ್ಲರಿಗೂ ಪಾಲ್ಗೊಳ್ಳಲು ಸಾಧ್ಯವಾಗಲಾರದು. ಉಳಿದ 48 ದಿನಗಳ ಮಂಡಲೋತ್ಸವದಲ್ಲಿ ದೇಶದ ಎಲ್ಲಜನತೆ ಪಾಲ್ಗೊಳ್ಳುವಂತೆ ಮುಕ್ತ ಆಹ್ವಾನ ನೀಡುವುದಾಗಿ ಸ್ವಾಮೀಜಿ ಹೇಳಿದರು. https://ainlivenews.com/what-happens-if-tea-coffee-is-given-to-children/ ‘ಅಯೋಧ್ಯೆಯಲ್ಲಿ ಶ್ರೀರಾಮನ ಶಿಲಾ ವಿಗ್ರಹ ಸಿದ್ಧಗೊಳ್ಳುತ್ತಿದ್ದು, ಜನವರಿ 17ರಂದು ಅಯೋಧ್ಯೆಗೆ ವಿಗ್ರಹದ ಮೆರವಣಿಗೆ ನಡೆಯಲಿದೆ. ಪವಿತ್ರ ಸರಯೂ ನದಿಯಲ್ಲಿ ಶಿಲಾಮೂರ್ತಿಗೆ ಅಭಿಷೇಕ ನೆರವೇರಿಸಿ, ಅಲ್ಲಿಂದ ಮತ್ತೆ ಮೆರವಣಿಗೆಯಲ್ಲಿ ಅಯೋಧ್ಯೆಗೆ ಕೊಂಡೊಯ್ದು, ಜನವರಿ 18ರಂದು…
ಕಲಬುರಗಿ: ತೀವ್ರ ಚರ್ಚೆಗೆ ಗ್ರಾಸವಾಗಿರುವ KEA ಸ್ಪರ್ಧಾತ್ಮಕ ಪರೀಕ್ಷೆ ಇಂದು ಮತ್ತು ನಾಳೆ ಅಂದ್ರೆ ನವೆಂಬರ್ 18 &19 ರಂದು ನಡೆಯಲಿವೆ..ವಿಶೇಷ ಅಂದ್ರೆ ಈ ಹಿಂದೆ ಕಲಬುರಗಿಯಲ್ಲಿ ನಡೆದ ಪರೀಕ್ಷೆಯಲ್ಲಿ ಎಡವಟ್ಟುಗಳಾಗಿ ವಿವಾದಕ್ಕೆ ಕಾರಣವಾದ ಹಿನ್ನಲೆ ಸರ್ಕಾರ ಎಚ್ಚೆತ್ತುಕೊಂಡಿದೆ. ಅದಕ್ಕಾಗಿ ಹಲವು ಕಂಡೀಷನ್ಸ್ ಹಾಕಿದೆ ಆದ್ರೆ ಮಂಗಲಸೂತ್ರ ಕಾಲುಂಗುರ ಧರಿಸಲು ಯಾವುದೇ ಅಭ್ಯಂತರವಿಲ್ಲ ಅಂತ ಹೇಳಿದೆ..ಜಿಲ್ಲೆಯಲ್ಲಿ 14 ಎಕ್ಸಾಂ ಸೆಂಟರ್ ಗಳಿದ್ದು 14058 ಜನ ಪರೀಕ್ಷೆ ಬರೆಯಲಿದ್ದಾರೆ ಎನ್ನಲಾಗಿದೆ..
ದೊಡ್ಮನೆಯ ಆಟ 6 ವಾರಗಳನ್ನ ಪೂರೈಸಿದೆ. ದಿನದಿಂದ ದಿನಕ್ಕೆ ರೋಚಕ ಹಂತಗಳನ್ನ ತಲುಪುತ್ತಿದೆ. ಇನ್ನೂ ಪ್ರತಿ ವಾರದಂತೆ ಈ ವಾರವೂ ಕೂಡ ಕಳಪೆ ಯಾರೆಂದು ತೀರ್ಮಾನಿಸಿ ಮನೆಮಂದಿ ಜೈಲಿಗಟ್ಟಿದ್ದಾರೆ. ನಟಿ ತನಿಷಾ ಕುಪ್ಪಂಡಗೆ (Tanisha Kuppanda) ಜೈಲೂಟ ಫಿಕ್ಸ್ ಆಗಿದೆ. ದೊಡ್ಮನೆಯ ಆಟ ಜದರ್‌ದಸ್ತ್ ಆಗಿ ಮೂಡಿ ಬರುತ್ತಿದೆ. ಬಿಗ್ ಮನೆಯ (Bigg Boss House) ಡ್ರಾಮಾ ನೋಡೋಕೆ ಅಭಿಮಾನಿಗಳು ಪ್ರತಿ ದಿನ ಹಾಜರಿ ಹಾಕ್ತಿದ್ದಾರೆ. ಹೀಗಿರುವಾಗ ಮನೆಯ ಬಹುಮತದೊಂದಿಗೆ ಜೈಲಿಗೆ ಹೋಗಿದ್ದಾರೆ ತನಿಷಾ. ಇಡೀ ವಾರದ ಟಾಸ್ಕ್, ಆ್ಯಕ್ಟಿವಿಟಿ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ತನಿಷಾಗೆ ಕಳಪೆ ಹಣೆಪಟ್ಟಿ ಹೋಗಿದೆ. ಟಾಸ್ಕ್‌ವೊಂದರಲ್ಲಿ ನಿಧಾನವಾಗಿ ಆಟ ಆಡಿದ್ರು ಅನ್ನೋದನ್ನೇ ಕಾರಣ ಇಟ್ಟುಕೊಂಡು ವಿನಯ್, ನಮ್ರತಾ ಕಳಪೆ ಕೊಟ್ಟರು. ಅದಕ್ಕಾಗಿ ಮೂವರ ಪತ್ರ ಮಿಸ್ ಆಯ್ತು ಎಂದು ತನಿಷಾಗೆ ಟಾರ್ಗೆಟ್ ಮಾಡಿದ್ದಾರೆ ಮನೆಮಂದಿ. ಸಂಗೀತಾ (Sangeetha Sringeri) ಜೊತೆಗಿನ ಜಗಳ, ಟಾಸ್ಕ್‌ನಲ್ಲಿ ಯಡವಟ್ಟು, ಇವೆಲ್ಲವೂ ಸೇರಿ ತನಿಷಾ ವಿರುದ್ಧ ಮನೆಮಂದಿ ನಿಂತಿದ್ದರು. ಮನೆಮಂದಿಯ ಬಹುಮತ…
ಬೆಂಗಳೂರು: ಸಿಎಂ ಇಬ್ರಾಹಿಂ (CM Ibrahim) ಅವರನ್ನು ಜೆಡಿಎಸ್ ಪಕ್ಷದಿಂದಲೇ ಅಮಾನತುಗೊಳಿಸಿರುವುದಾಗಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು (HD DeveGowda) ಆದೇಶ ಹೊರಡಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳ ಬಗ್ಗೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ದೊಡ್ಡಗೌಡರು ಈ ಆದೇಶ ಹೊರಡಿಸಿದ್ದಾರೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ (BJP-JDS Alliance) ವಿಚಾರದಲ್ಲಿ ರಾಜ್ಯಾಧ್ಯಕ್ಷರಾಗಿದ್ದ ಸಿಎಂ ಇಬ್ರಾಹಿಂ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ್ದರೂ ತಾನೇ ರಾಜ್ಯಾಧ್ಯಕ್ಷ ಎಂದು ಹೇಳಿಕೊಂಡು ಪ್ರತ್ಯೇಕ ಸಭೆ ನಡೆಸಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಿರುವುದಾಗಿ ಆದೇಶ ಪ್ರತಿಯಲ್ಲಿ ತಿಳಿಸಿದ್ದಾರೆ. ಅಮಾನತು ಹಿನ್ನೆಲೆ: ಪಕ್ಷದ ಹಿತಕ್ಕಾಗಿ ಬಿಜೆಪಿ ಜತೆ ಲೋಕಸಭೆ ಚುನಾವಣೆಗಾಗಿ ಮೈತ್ರಿ ಮಾಡಿಕೊಳ್ಳಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸರ್ವಾನುಮತದ ಅಧಿಕಾರ ನೀಡಲಾಗಿತ್ತು ಹಾಗೂ ಮೈತ್ರಿಯ ಬಗ್ಗೆ ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಲು ರಾಷ್ಟ್ರೀಯ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರಿಗೆ ಪೂರ್ಣ ಅಧಿಕಾರ ನೀಡಲಾಗಿತ್ತು. ಈ…
ಮೋಹಕ ತಾರೆ ರಮ್ಯಾ (Ramya) ನಿರ್ಮಾಣದ ‘ಸ್ವಾತಿ ಮುತ್ತಿನ ಮಳೆ ಹನಿಯೇ’ (Swathi Muttina Male Haniye) ಟ್ರೈಲರ್ ಇದೀಗ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದರಲ್ಲಿ ಟ್ರೈಲರ್ ರಿಲೀಸ್ ಸಮಾರಂಭ ನಡೆದಿದೆ. ಚಿತ್ರದ ಟ್ರೈಲರ್ ಭಾವನಾತ್ಮಕವಾಗಿ ಮೂಡಿ ಬಂದಿದ್ದು, ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅನಿಕೇತ್ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ (Raj B Shetty), ಪ್ರೇರಣಾ ರೋಲ್‌ನಲ್ಲಿ ಸಿರಿ ರವಿಕುಮಾರ್ (Siri Ravikumar) ಜೀವತುಂಬಿದ್ದು, ಇಡೀ ಟ್ರೈಲರ್ ಎಮೋಷನಲ್ ಆಗಿ ನೋಡುಗರಿಗೆ ಕನೆಕ್ಟ್ ಆಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ಅನಿಕೇತ್‌ಗೆ ಹೆಲ್ತ್ ಕೌನ್ಸಿಲರ್ ಆಗಿ ಪ್ರೇರಣಾ ಜೊತೆಯಾಗುತ್ತಾರೆ. ಕಥೆಯಲ್ಲಿ ಏನಾಗುತ್ತೆ ಎಂಬುದನ್ನ ಸುಳಿವು ಬಿಟ್ಟು ಕೊಡದೇ ಸಿನಿಮಾ ನೋಡುವಂತೆ ಪ್ರೇರಣೆ ನೀಡಿದೆ ಈ ಟ್ರೈಲರ್. ಭಾವನಾತ್ಮಕವಾಗಿ ಪ್ರೇಕ್ಷಕರನ್ನ ಸೆಳೆಯುತ್ತಿದೆ ಈ ಟ್ರೈಲರ್. ರಿಲೀಸ್ ಆಗಿರೋ ಟ್ರೈಲರ್ ನೋಡಿಯೇ ರಾಜ್ ಬಿ ಶೆಟ್ಟಿ, ಸಿರಿ ನಟನೆಗೆ ಫ್ಯಾನ್ಸ್ ಕಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಒಂದೊಳ್ಳೆ ವಿಭಿನ್ನ ಕಥೆಗೆ ನಟಿ ರಮ್ಯಾ ನಿರ್ಮಾಣದ ಮೂಲಕ…