ಇಲ್ಲೊಬ್ಬರು ತಂದೆ ತಮ್ಮ ಮಗಳ ಬರ್ತ್‌ಡೇಗೆ ಬಾಟಲ್‌ನಲ್ಲಿ ಕೊಳಚೆ ನೀರು ತುಂಬಿಸಿ ನೀಡಿದ್ದಾಳೆ., ಈ ವಿಚಾರವನ್ನು ಸ್ವತಃ ಮಗಳೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈ ಅನಿರೀಕ್ಷಿತ ಗಿಫ್ಟ್‌ನ ಕಾರಣದಿಂದ ಜನ ಕುತೂಹಲದಿಂದ ಈಕೆಯ ಈ ಪೋಸ್ಟ್‌ನ್ನು ವೀಕ್ಷಿಸಿದ್ದು, ಈಗ 3 ಮಿಲಿಯನ್‌ಗೂ ಹೆಚ್ಚು ಜನ ಪೋಸ್ಟ್ ವೀಕ್ಷಿಸಿ, ವೈರಲ್ ಆಗಿದೆ. ಆದರೆ ಇದರಲ್ಲೊಂದು ಜೀವನ ಪಾಠವಿದೆ…! ಈ ವಿಚಾರವನ್ನು ಮಗಳು ಪೆಟ್ರಿಶಿಯ ಮೌ ತನ್ನ ಪೋಸ್ಟ್‌ನಲ್ಲಿ ವಿವರಿಸಿದ್ದು, ತಂದೆ ಇದುವರೆಗೆ ನೀಡಿದ ವಿಭಿನ್ನ ಗಿಫ್ಟ್‌ಗಳ ಬಗೆ ವಿವರಿಸಿದ್ದಾಳೆ. ನನ್ನ ತಂದೆ ಈ ರೀತಿ ವಿಭಿನ್ನ ಗಿಫ್ಟ್ ನೀಡುವುದು ಇದೇ ಮೊದಲೇನಲ್ಲ, ಈ ಹಿಂದೆ ಅವರು ನನಗೆ ಪ್ರಥಮ ಚಿಕಿತ್ಸೆ ಕಿಟ್, ಪೆಪ್ಪರ್ ಸ್ಪೇ, ವಿಶ್ವಕೋಶ(encyclopedia) ಕೀ ಚೈನ್ ಇವಿಷ್ಟೇ ಅಲ್ಲದೇ ತಾನೇ ಮಗಳಿಗಾಗಿ ಬರೆದ ಪುಸ್ತಕವೊಂದನ್ನು ಗಿಫ್ಟ್ ಆಗಿ ನೀಡಿದ್ದರು. ಇವೆಲ್ಲವೂ ಉತ್ತಮವಾದ ಅಪ್ಪನ ಈ ಹಿಂದಿನ ಗಿಫ್ಟ್‌ಗಳಾಗಿದ್ದವು ಎಂದು ಮಗಳು ಬಣ್ಣಿಸಿದ್ದಾಳೆ. ಆದರೆ ಈ ಬಾರಿ ಪಡೆದ ಗಿಫ್ಟ್ ಮತ್ತಷ್ಟು…
Author: AIN Author
ಕೋಲಾರ: ಲಾಂಗು, ಮಚ್ಚು ಹಿಡಿದು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ಇಬ್ಬರು ಯುವಕರನ್ನು ಪೊಲೀಸರು ಕೋಲಾರ ತಾಲೂಕಿನ ನರಸಾಪುರದಲ್ಲಿ ಬಂಧಿಸಿದ್ದಾರೆ. ಅಕ್ರಮ ಶಸ್ತಾಸ್ತ್ರ ಕಾಯ್ದೆ ಪ್ರಕರಣದಡಿಯಲ್ಲಿ ನರಸಾಪುರದ ವೇಣು ಮತ್ತು ಪವನ್ ಕುಮಾರ್ ಅನ್ನು ಬಂಧಿಸಲಾಗಿದೆ. ಇತ್ತೀಚಿಗೆ ಯುವಕರು ಅಪರಾಧ ಪ್ರಕರಣಗಳಲ್ಲಿ ಹಚ್ಚಾಗಿ ಕಾಣಿಸಿಕೊಂಡಿದ್ದರು. ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಜಿಲ್ಲಾ ಪೊಲೀಸ್ ಇಲಾಖೆ ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಟ್ಟಿದೆ.
ಬೆಂಗಳೂರು: ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಡಿಸೆಂಬರ್ 6 ಕ್ಕೆ ದತ್ತಮಾಲೆ (Dattamale) ಧರಿಸಿ ದತ್ತಪೀಠಕ್ಕೆ (Dattapeeth) ಭೇಟಿ ನೀಡಲಿದ್ದಾರೆ. ಜೆಡಿಎಸ್‌ನ (JDS) ಎಲ್ಲಾ ಶಾಸಕರಿಗೂ ಈ ಸಂದರ್ಭ ಜೊತೆಗೂಡಲು ಹೆಚ್‌ಡಿಕೆ ಸೂಚನೆ ನೀಡಿದ್ದಾರೆ https://ainlivenews.com/terminate-service-of-marshals-dcm-dk/ ಹೆಚ್‌ಡಿಕೆ ಒಂದು ದಿನದ ಮಟ್ಟಿಗೆ ಮಾಲೆ ಧರಿಸಿ ದತ್ತಪೀಠಕ್ಕೆ ಹೋಗುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಸನಾಂಬೆ ದರ್ಶನಕ್ಕೆ ಒಟ್ಟಾಗಿ ತೆರಳಿದ್ದ ಜೆಡಿಎಸ್ ಶಾಸಕರು ಇದೀಗ ದತ್ತಪೀಠಕ್ಕೂ ಒಟ್ಟಾಗಿ ತೆರಳುವ ಸಾಧ್ಯತೆ ಇದೆ. ದತ್ತಪೀಠದಲ್ಲಿ ಜೆಡಿಎಸ್ ಒಗ್ಗಟ್ಟು ಪ್ರದರ್ಶಿಸಲಿದ್ದಾರೆ ಕುಮಾರಸ್ವಾಮಿ ಅವರು ಮೊದಲ ಬಾರಿಗೆ ದತ್ತಪೀಠಕ್ಕೆ ತೆರಳುತ್ತಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಬೆನ್ನಲ್ಲೇ ಕುಮಾರಸ್ವಾಮಿ ಹಿಂದುತ್ವದ ಹಾದಿಗೆ ಬಂದAತೆ ಭಾಸವಾಗುತ್ತಿದೆ. ದತ್ತಮಾಲೆ ಧರಿಸಿ ದತ್ತಪೀಠದ ದರ್ಶನ ಪಡೆಯಲಿದ್ದಾರೆ. ಈ ಮೂಲಕ 2024ರ ಚುನಾವಣೆಗೆ ಒಕ್ಕಲಿಗ+ಹಿಂದುತ್ವದ ಅಸ್ತ್ರದಲ್ಲಿ ಕುಮಾರಸ್ವಾಮಿ ಅಖಾಡಕ್ಕೆ ಇಳಿಯುವ ಸೂಚನೆಯಿದೆ.
ಬೆಂಗಳೂರು:- ಭೂ ವಿಜ್ಞಾನಾಧಿಕಾರಿ ಪ್ರತಿಮಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಸ್ಪೋಟಕ ವಿಚಾರ ಬೆಳಕಿಗೆ ಬಂದಿದೆ. ಆರೋಪಿ ಕಿರಣ್ ಕೊಲೆ ಮಾಡಿದ್ದು 5 ಲಕ್ಷ ಹಣಕ್ಕಾಗಿ. ಪೊಲೀಸರ ವಿಚಾರಣೆಯಲ್ಲಿ ಸುಳ್ಳು ಹೇಳಿಕೆ ನೀಡಿದ್ದ. ಕಿರಣ್ ಸ್ನೇಹಿತ ಶಿವು ಎಂಬಾತನಿಂದ ಅಸಲಿ ಕಹಾನಿ ಬಯಲಾಗಿದೆ. ಮೊದಲಿಗೆ ಕೋಪಕ್ಕೆ ಕೊಲೆ ಮಾಡಿದ್ದಾಗಿ ಆರೋಪಿ ಕಿರಣ್ ಹೇಳಿಕೆ ನೀಡಿದ್ದರು. ಕೆಲಸದಿಂದ ತೆಗೆದಿದ್ದಕ್ಕೆ ಕೋಪಗೊಂಡು ಕೊಲೆ ಮಾಡಿದ್ದಾಗಿ ಹೇಳಿದ್ದ. ಕ್ಷಮೆ ಕೇಳಿ ಮತ್ತೆ ಕೆಲಸಕ್ಜೆ ಸೇರಿಸಿಕೊಳ್ಳಲು ಕೇಳಲು ಹೋಗಿದ್ದೆ. ಆದ್ರೆ ಇದಕ್ಕೆ ಒಪ್ಪದಿದ್ದಾಗ ಕೊಲೆ ಮಾಡಿದ್ದಾಗಿ ಆರೋಪಿ ಕಿರಣ್ ಹೇಳಿದ್ದ. ನಂತರ ಅಲ್ಲಿಯೇ ಇದ್ದ ಹದಿನೈದು ಸಾವಿರದಿಂದಿಗೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದಾಗಿ ಹೇಳಿಕೆ ನೀಡಿದ್ದ. ಇದೀಗ ಕೊಲೆಯ ಹಿಂದಿನ ಅಸಲಿ ಕಹಾನಿಯನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ. ತಲಘಟ್ಟಪುರ ಇನ್ಸ್ಪೆಕ್ಟರ್ ಜಗದೀಶ್ ನೇತ್ರತ್ವದಲ್ಲಿ ನಡೆದಿದ್ದ ತನಿಖೆ ನಡೆದಿದೆ. ಕೊಲೆ ಬಳಿಕ ಮನೆಯಲ್ಲಿ ಇದ್ದ ಹಣ ಮತ್ತು ಚಿನ್ನ ದೋಚಿ ಆರೋಪಿ ಎಸ್ಕೇಪ್ ಆಗಿದ್ದ. ಜೊತೆಗೆ ಪ್ರತಿಮಾ ಕೈಯಲ್ಲಿದ್ದ…
ನವದೆಹಲಿ: ಇಂದಿನಿಂದ ರಾಷ್ಟ್ರಪತಿ ಮುರ್ಮು ಅವರು, 3 ದಿನಗಳ ಕಾಲ ಒಡಿಶಾ, ಆಂಧ್ರಪ್ರದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ.20-22ರವರೆಗೆ ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದು, ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನ ಭಾನುವಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ನ.20ರಂದು ಮುರ್ಮು ಅವರು, ‘ಒಡಿಶಾದ ಬರಿಪದದಲ್ಲಿ ಅಖಿಲ ಭಾರತ ಸಂತಾಲಿ ಲೇಖಕರ ಸಂಘದ 36ನೇ ವಾರ್ಷಿಕ ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದಾರೆ. ಅದೇ ದಿನ ಅವರು ಕುಲಿಯಾನದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಯನ್ನು ಸಹ ಉದ್ಘಾಟಿಸಲಿದ್ದಾರೆ’ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. https://ainlivenews.com/high-speed-internet-unveiled-in-china-100-gb-net-per-second/ ನ.21 ರಂದು ಪಹಾದ್‌ಪುರ ಗ್ರಾಮದಲ್ಲಿ ಕೌಶಲ್ಯ ತರಬೇತಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ತರುವಾಯ ಬದಂಪಹಾರ್ ರೈಲು ನಿಲ್ದಾಣಕ್ಕೆ ಭೇಟಿ ಅಲ್ಲಿ ಅವರು ಮೂರು ಹೊಸ ರೈಲು(ಬದಂಪಹಾರ್- ಟಾಟಾನಗರ, ಬದಂಪಹಾರ್-ರೂರ್ಕೆಲಾ ಎಕ್ಸ್‌ಪ್ರೆಸ್ ಮತ್ತು ಬದಂಪಹಾರ್-ಶಾಲಿಮಾರ್ ಎಕ್ಸ್‌ಪ್ರೆಸ್) ಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಬಳಿಕ ಅವರು ಬದಂಪಹಾರ್-ಶಾಲಿಮಾರ್ ಎಕ್ಸ್‌ಪ್ರೆಸ್‌ನಲ್ಲಿ ಬದಂಪಹಾರ್‌ನಿಂದ ರೈರಂಗಪುರಕ್ಕೆ ಪ್ರಯಾಣಿಸುತ್ತಾರೆ. ಅದೇ ದಿನ ಸಂಜೆ ಬುರ್ಲಾದ…
ಕಲಬುರ್ಗಿ:- ಕಾರ್ತಿಕ ಮಾಸ ಅಂದ್ರೆ ಅದು ಬೆಳಕಿನ ಹಬ್ಬ..ಅದು ದೀಪಗಳ ಹಬ್ಬ.ಹೀಗಾಗಿ ಕಲಬುರಗಿ ಜಿಲ್ಲೆ ಭೀಮಾ ನದಿ ತಟದಲ್ಲಿರುವ ಪುರಾತನ ಕ್ಷೇತ್ರ ಸನ್ನತಿಯಲ್ಲಿ ಕಾರ್ತಿಕ ಮಾಸದ ದೀಪೋತ್ಸವ ನಡೆಯಿತು. ಪ್ರತಿ ವರ್ಷದಂತೆ ಈ ವರ್ಷವೂ ಸಹ ನೂರಾರು ಭಕ್ತರ ಕಾರ್ತಿಕ ಮಾಸದ ಪ್ರಯುಕ್ತ ಶ್ರೀ ಚಂದ್ರಲಾಂಬೆಯ ಸನ್ನಿಧಿಗೆ ಬಂದು ಹಣತೆಗಳನ್ನಿಟ್ಟು ದೀಪ ಬೆಳಗಿದ್ರು.ದೇಗಲದ ಪ್ರಾಂಗಣ ಹೊಸ್ತಿಲು ದೀಪಸ್ತಂಭ ಅಂಗಳ ಹೀಗೆ ಎಲ್ಲೆಲ್ಲೂ ದೀಪಗಳ ಸಾಲು ಮೇಳೈಸಿತ್ತು. ಹೀಗೆ ಶಕ್ತಿ ಪೀಠಕ್ಕೆ ಹೆಸರಾಗಿರುವ ಸನ್ನತಿ ಪುಣ್ಯ ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಭಾನುವಾರ ಜಗಮಗಿಸುತಿತ್ತು. ದೇಗುಲದ ಅರ್ಚಕ ಗೋಪಾಲ ಭಟ್ ದೀಪೋತ್ಸವದ ಸಂಕಲ್ಪ ನಡೆಸಿಕೊಟ್ಟರು..
ವಿಶ್ವಕಪ್ ಕೊನೆಯ ಲೀಗ್ ಪಂದ್ಯದಲ್ಲಿ ಸೋತು ದುಃಖದಲ್ಲಿದ್ದ ವಿರಾಟ್ ಕೊಹ್ಲಿಯನ್ನು ಅವರ ಪತ್ನಿ ಅನುಷ್ಕಾ ಶರ್ಮಾ ಸಮಾಧಾನ ಮಾಡುತ್ತಿರುವ ಚಿತ್ರವು ಇದೀಗ ವೈರಲ್ ಆಗಿದೆ. ಅನುಷ್ಕಾ ಶರ್ಮಾ ತನ್ನ ಪತಿ ವಿರಾಟ್‌ನನ್ನು ಅಪ್ಪಿಕೊಂಡು ಸಾಂತ್ವನ ಮಾಡುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು. ಮತ್ತೊಂದೆಡೆ, ಆಸ್ಟ್ರೇಲಿಯಾ ವಿರುದ್ದ ಸೋಲಿನ ಹೊರತಾಗಿಯೂ ಭಾರತವು ಇಡೀ ಟೂರ್ನಿಯಲ್ಲಿ ಆಡಿದ ಆಟವನ್ನು ಇಡೀ ದೇಶವೇ ಶ್ಲಾಘಿಸುತ್ತಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023ರ ಫೈನಲ್‌ನಲ್ಲಿ ಆಸ್ಟ್ರೇಲಿಯಾದ ವಿರುದ್ಧ 6 ವಿಕೆಟ್‌ಗಳ ಸೋಲು ಅನುಭವಿಸಿದ ಬಳಿಕ, ಭಾರತೀಯ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಮತ್ತು ಇತರ ಆಟಗಾರರು ನಿರಾಶೆಗೊಂಡಿದ್ದರು. ಪಂದ್ಯದ ಮುಕ್ತಾಯದ ನಂತರ ವಿರಾಟ್ ಅವರನ್ನು ಅನುಷ್ಕಾ ಅವರು ತಬ್ಬಿಕೊಂಡು ಸಾಂತ್ವನ ಮಾಡಿದ್ದಾರೆ. ಈ ಚಿತ್ರವು ಈಗ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಫೈನಲ್ ಪಂದ್ಯದಲ್ಲಿ ಸೋಲಿನಿಂದಾಗಿ ನಿರಾಸೆಗೊಂಡಿದ್ದ ವಿರಾಟ್ ಕೊಹ್ಲಿ ಅವರು ತಮ್ಮ ಹೆಂಡತಿ ಇರುವ ಸ್ಟ್ಯಾಂಡ್‌ನತ್ತ ಹೋಗುತ್ತಾರೆ. ಆಗ ಅನುಷ್ಕಾ ಶರ್ಮಾ ಅವರು…
ಉಡುಪಿ:- ರಾಜ್ಯ ಸರ್ಕಾರ ಬಡಮಕ್ಕಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಲಾಭದಿಂದ ವಂಚಿಸುತ್ತಿದೆ ಎಂದು ಸಿ.ಟಿ.ರವಿ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಪಡಿಸುವುದರಿಂದ ಶಿಕ್ಷಣ ಕ್ಷೇತ್ರಕ್ಕೆ ಅನಾಹುತ ಆಗುತ್ತದೆ. ಆದರೆ ರಾಜ್ಯ ಸರ್ಕಾರ ಇದನ್ನು ಪರಿಗಣಿಸದೆ ರಾಜಕೀಯ ಮಾಡುತ್ತಿದೆ. ಹಿಂದೆ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕ ಅಭಿಪ್ರಾಯಕೊಟ್ಟಿತ್ತು. ಆದರೆ ಈಗ ಅದನ್ನು ಜಾರಿಗೆ ತರುವುದಿಲ್ಲ ಎಂದು ಹಠಮಾರಿ ಧೋರಣೆ ತೋರಿಸುತ್ತಿದೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ದೋಷಗಳಿದ್ದರೆ ಹೇಳಿ, ಸರಿಪಡಿಸಬಹುದು, ಆದರೆ ಯಾವುದಕ್ಕೆ ನಿಮ್ಮ ವಿರೋಧ, ಮಾತೃಭಾಷೆಯಲ್ಲಿ ಶಿಕ್ಷಣಕ್ಕೆ ನಿಮ್ಮ ವಿರೋಧವೇ, ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣಕ್ಕೆ ನಿಮ್ಮ ವಿರೋಧವೇ ಎಂದು ಪ್ರಸ್ನಿಸಿದ ಸಿ.ಟಿ.ರವಿ, ಪ್ರಾದೇಶಿಕ ಭಾಷೆ ಶಿಕ್ಷಣದಿಂದ ಕಲಿಕೆ ಸುಲಭವಾಗುತ್ತದೆ, ಮಾತೃಭಾಷೆ ಜೊತೆಗೆ ಇನ್ನೆರಡು ಭಾಷೆ ಕಲಿಯುವುದಕ್ಕೆ ಅವಕಾಶ ಇದೆ. ಆದರೆ ಭಾಷಾ ಬಾಂಧವ್ಯ ನಿರ್ಮಾಣ ನಿಮಗೆ ಸಹ್ಯ ಆಗ್ತಾ ಇಲ್ಲವೇ, ನಾವು ಅನ್ಯಭಾಷೀಯರ ಜೊತೆ ಜಗಳವಾಡುತ್ತಲೇ ಇರಬೇಕೇ, ಕೌಶಲದ ತರಬೇತಿ ನೀಡುವುದು ಅಪರಾಧವೇ…
ಬಳ್ಳಾರಿ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ನೇಮಕ ಭ್ರಷ್ಟಾಚಾರಕ್ಕೆ ಪೂರಕ ಎಂದು ಉಗ್ರಪ್ಪ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ರಾಜಕಾರಣದ ಆಧುನಿಕ ಧೃತರಾಷ್ಟ್ರನಿದ್ದಂತೆ. ಒಬ್ಬ ಮಗನನ್ನು ಸಂಸದರನ್ನಾಗಿ ಮಾಡಿ, ಮತ್ತೂಬ್ಬ ಮಗನನ್ನು ಶಾಸಕನಾಗದಿದ್ದರೂ ಸಚಿವನಾಗಿಸಲು ಪ್ರಯತ್ನಿಸಿ, ಈಗ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಧೃತರಾಷ್ಟ್ರ ಪ್ರೇಮ ಮೆರೆದಿದ್ದಾರೆ ಯಡಿಯೂರಪ್ಪ ಅವ ಧಿಯಲ್ಲಿ ಬಿ.ವೈ.ವಿಜಯೇಂದ್ರ ಅಧಿ ಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ದೇಶದ ರಕ್ಷಕ, ಚೌಕಿದಾರ್ ಎಂದೆಲ್ಲ ಹೇಳಿಕೊಳ್ಳುವ ಪ್ರಧಾನಿ ಮೋದಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಿಸಬೇಕು. ಇಲ್ಲದಿದ್ದರೆ ವಿಜಯೇಂದ್ರ ನೇಮಕ ಭ್ರಷ್ಟಾಚಾರಕ್ಕೆ ಪೂರಕವಾಗಿದೆ ಎಂದು ಜನ ಭಾವಿಸುತ್ತಾರೆ ಎಂದು ಹೇಳಿದ್ದಾರೆ.
ಹುಬ್ಬಳ್ಳಿ;- ಬಿಜೆಪಿ ಅವರ ಆಂತರಿಕ ವಿಚಾರದ ಬಗ್ಗೆ ನಾವು ಮಾತನಾಡುವುದಿಲ್ಲ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಪುತ್ರ ವಿಜಯೇಂದ್ರ ಭ್ರಷ್ಟ ಎನ್ನುವ ಕಾರಣಕ್ಕೆ ಬಿಎಸ್‌ವೈ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಈಗ ಅದೇ ವಿಜಯೇಂದ್ರರನ್ನು ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಮಧ್ಯಪ್ರದೇಶದಲ್ಲಿ ಅಪ್ಪ ಹಾಗೂ ಮಗ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿರುವ ದೃಶ್ಯಾವಳಿಗಳು ಬಂದಿವೆ.ಅದರ ಬಗ್ಗೆ ಮಾತನಾಡಲು ಬಿಜೆಪಿಗರಿಗೆ ಹೇಳಿ. ಸುಮ್ಮನೆ ಯಾವುದೋ ಒಂದರ ಬಗ್ಗೆ ಮಾತನಾಡಿದರೆ ಹೇಗೆ? ಸಿದ್ದರಾಮಯ್ಯರ ಪುತ್ರ ಯತೀಂದ್ರ ಮಾತಿನ ದೃಶ್ಯಾವಳಿಯಲ್ಲಿ ವರ್ಗಾವಣೆ ಎಂಬ ಪದವೇ ಇಲ್ಲ. ಮುಖ್ಯಮಂತ್ರಿಗಳು ಈಗಾಗಲೇ ಅದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದರು.