ಬಾಗಲಕೋಟೆ: ಬಿಜೆಪಿಯ ಬಹಳಷ್ಟು ಅತೃಪ್ತ ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ. ಇಲ್ಲಿ ಬಂದ ಮೇಲೆ ಅವರ ಸ್ಥಾನಮಾನದ ಬಗ್ಗೆಯೂ ಆಲೋಚನೆ ಮಾಡಬೇಕಾಗುತ್ತದೆ ಎಂದು ಮಾಜಿ ಸಚಿವ ಲಕ್ಷ್ಮಣ್ ಸವದಿ ಹೊಸ ಬಾಂಬ್ ಸಿಡಿಸಿದ್ದಾರೆ. ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು, ” ಅನೇಕ ಬಿಜೆಪಿ ನಾಯಕರು ನಮ್ಮ ಜೊತೆ ಸಂಪರ್ಕದಲ್ಲಿದ್ದಾರೆ, ಅವರ ಕ್ಷೇತ್ರದಲ್ಲಿ ಸಹಮತ ಇರುವ ಬಗ್ಗೆ ಚರ್ಚೆ ಮಾಡುತ್ತೇವೆ. ಬರುವವರನ್ನ ಕರೆತಂದಾಗ ಯಾರಿಗೂ ಅನ್ಯಾಯ ಮತ್ತು ತೊಂದರೆಯಾಗದಂತೆ ನೋಡಿಕೊಳ್ಳಬೇಕು ” ಎಂದರು. ಈಗ ಎಷ್ಟು ಜನ ತಮ್ಮ ಸಂಪರ್ಕದಲ್ಲಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸವದಿ, ” ನಾವು ಗೋಲಿ ಹೊಡೆಯುವಾಗ ಎರಡು ರೀತಿಯಿಂದ ಹೊಡೆಯುತ್ತೇವೆ. ಒಂದು ಚರ್ರಿಗೋಲಿ ಅಂತ ಇರುತ್ತೇ ಅದು ಛಿದ್ರವಾಗಿರುತ್ತೇ, https://ainlivenews.com/satish-jarakiholi-becoming-cm-is-as-true-as-surya-being-born-congress-mla/ ಅದು ಎಷ್ಟು ಮಂದಿಗೆ ಬಡಿಯುತ್ತೋ ಗೊತ್ತಿಲ್ಲ. ಫೈರಿಂಗ್ನಲ್ಲಿ ಎರಡು ರೀತಿ ಇರುತ್ತೇ, ಯಾವಾಗ ಯಾವ ಸಂದರ್ಭದಲ್ಲಿ ಯಾವ ಫೈರಿಂಗ್ ಹೊಡೆಯುತ್ತೇವೆ ಗೊತ್ತಿಲ್ಲ ಎಂದರು. ಫೈರಿಂಗ್ ಮಾಡೋದೆ ಫಿಕ್ಸಾ ಎಂಬ ಪ್ರಶ್ನೆಗೆ, ” ಇದು ನಮ್ಮ ಕರ್ತವ್ಯ,…
Author: AIN Author
ಬೆಂಗಳೂರು:- ಜಾತಿ ಜನಗಣತಿ ವರದಿ ಬಿಡುಗಡೆಗೆ ಡಿಕೆ ಶಿವಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವರದಿ ಬಿಡುಗಡೆಗೆ ತುದಿಗಾಲಿನಲ್ಲಿ ನಿಂತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಹೋದಲ್ಲಿ ಬಂದಲ್ಲಿ ಜಾತಿಜನಗಣತಿ ವರದಿ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಇದಕ್ಕೆ ಲಿಂಗಾಯತ ಸಮುದಾಯ ಮಾತ್ರವಲ್ಲದೆ, ಒಕ್ಕಲಿಗ ಸಮುದಾಯವೂ ವಿರೋಧ ವ್ಯಕ್ತಪಡಿಸುತ್ತಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಿರುವ ವರದಿ ತಿರಸ್ಕರಿಸುವ ಒಕ್ಕಲಿಗರ ಸಂಘದ ಮನವಿ ಪತ್ರಕ್ಕೆ ಡಿ.ಕೆ.ಶಿವಕುಮಾರ್ ಕೂಡ ಸಹಿ ಹಾಕಿದ್ದಾರೆ. ಗೃಹಸಚಿವ ಡಾ.ಜಿ.ಪರಮೇಶ್ವರ, ಸಚಿವರಾದ ಸತೀಶ್ ಜಾರಕಿಹೊಳಿ, ಶಿವರಾಜ್ ತಂಗಡಗಿ ಸೇರಿದಂತೆ ಅನೇಕರು ವರದಿ ಜಾರಿಗೆ ಸಿಎಂ ಸಿದ್ದರಾಮಯ್ಯ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ. ಆದರೆ, ವರದಿ ಬಿಡುಗಡೆಗೆ ಲಿಂಗಾಯತ ಸಮುದಾಯ ವಿರೋಧ ವ್ಯಕ್ತಪಡಿಸಿದೆ
ಮೆಟಾ-ಮಾಲೀಕತ್ವದ ತ್ವರಿತ ಮೆಸೇಜಿಂಗ್ ಅಪ್ಲಿಕೇಷನ್ ತನ್ನ ಡೆಸ್ಕ್‌ಟಾಪ್ ಬೀಟಾ ಪರೀಕ್ಷಕರಿಗೆ ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದೆ. ವಿಂಡೋಸ್ ಬಳಕೆದಾರರಿಗೆ ಅಪರಿಚಿತ ಫೋನ್ ಸಂಖ್ಯೆ ಅಥವಾ ತಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದ ಫೋನ್ ಸಂಖ್ಯೆಗಳೊಂದಿಗೆ ಚಾಟ್‌ಗಳನ್ನು ಮಾಡಲು ಅನುವು ಮಾಡಿಕೊಡುವಂತಹ ಫೀಚರ್ ಇದಾಗಿದೆ. ಸದ್ಯದ ವರದಿಯ ಪ್ರಕಾರ ವಾಟ್ಸಾಪ್ ಹೊಸ ಸ್ಕ್ರೀನ್ ಅನ್ನು ಪರಿಚಯಿಸುತ್ತಿದೆ. ಅದರಲ್ಲಿ ಫೋನ್ ಸಂಖ್ಯೆಯನ್ನು ನಮೂದಿಸಲು ಸಾಧ್ಯವಾಗುತ್ತದೆ. ಹೀಗಾಗಿ ನೀವು ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದ ಹೊಸ ಫೋನ್ ನಂಬರ್ ಅನ್ನು ನಮೂದಿಸಿ ತಕ್ಷಣ ಚಾಟಿಂಗ್ ಆರಂಭಿಸಬಹುದಾಗಿದೆ. ಅಂದರೆ ಸಂವಹನವನ್ನು ಇನ್ನಷ್ಟು ಸುಲಭ ಮತ್ತು ಸರಳವಾಗಿಸುವ ಸಲುವಾಗಿ ವಾಟ್ಸಾಪ್ ಇಂತಹದ್ದೊಂದು ವೈಶಿಷ್ಟ್ಯವನ್ನು ಪರಿಚಯಿಸುತ್ತಿದೆ. ನಿಮ್ಮ ವಾಟ್ಸಾಪ್ ಖಾತೆಯಲ್ಲಿ ಈ ವೈಶಿಷ್ಟ್ಯತೆ ಲಭ್ಯತೆಯನ್ನು ಪರಿಶೀಲಿಸಲು ನೀವು ಬಯಸಿದರೆ, `ನ್ಯೂ ಚಾಟ್’ ಅನ್ನು ತೆರೆಯಿರಿ. ನಿಮ್ಮ ಡಿಪಿಯ ಪಕ್ಕದಲ್ಲಿರುವ ಪ್ಲಸ್ ಚಿಹ್ನೆಯನ್ನು ಕ್ಲಿಕ್ ಮಾಡಿದರೆ ಹೊಸ ಚಾಟ್ ಪರದೆ ತೆರೆದುಕೊಳ್ಳುತ್ತದೆ. ಇಲ್ಲಿ ನಿಮಗೆ `ಫೋನ್ ನಂಬರ್’ ಎಂಬ ಹೊಸ ಎಂಟ್ರಿ ಪಾಯಿಂಟ್ ಕಾಣಬೇಕು.…
ಕಲಬುರಗಿ: -ಒಬ್ಬಂಟಿಯಾಗಿ ವಾಸವಾಗಿದ್ದ ಮಹಿಳೆಯನ್ನ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ಕಲಬುರಗಿಯಲ್ಲಿ ನಡೆದಿದೆ. ನಗರದ ಸಂತೋಷ್ ಕಾಲನಿ ನಿವಾಸಿ 65 ವರ್ಷದ ರತ್ನಾಬಾಯಿ ಕೊಲೆಯಾದ ದುರ್ದೈವಿ.. ದೇವರ ಹೆಸರಿನಲ್ಲಿ ಭವಿಷ್ಯ ಹೇಳಿ ಜೀವನ ಸಾಗಿಸ್ತಿದ್ದ ಮಹಿಳೆ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ರಾಘವೇಂದ್ರ ನಗರ ಫೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ..
ಪ್ರಸಕ್ತ ಸಾಲಿನ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಆತಿಥೇಯ ಟೀಮ್ ಇಂಡಿಯಾ 6 ವಿಕೆಟ್‌ಗಳ ಹೀನಾಯ ಸೋಲುಂಡಿತು. ಈ ಮೂಲಕ ಐಸಿಸಿ ಟೂರ್ನಿಯಲ್ಲಿ ಟ್ರೋಫಿ ಗೆಲ್ಲುವ ಭಾರತ ತಂಡದ ಕನಸು ನುಚ್ಚು ನೂರಾಯಿತು. ಈ ಬಗ್ಗೆ ಮಾತನಾಡಿದ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ತಂಡ ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಮುಖ್ಯ ಕಾರಣ ತಿಳಿಸಿದ್ದಾರೆ. ಮಂದಗತಿಯ ಪಿಚ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ರೋಹಿತ್ ಶಾರ್ಮ ಸಾರಥ್ಯದ ಟೀಮ್ ಇಂಡಿಯಾ 240 ರನ್‌ಗಳಿಗೆ ಆಲ್‌ಔಟ್ ಆಯಿತು. ಬಳಿಕ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಓಪನರ್ ಟ್ರಾವಿಸ್ ಹೆಡ್ (137) ಅವರ ಮನಮೋಹಕ ಶತಕದ ಬಲದಿಂದ ಇನ್ನು 7 ಓವರ್‌ಗಳು ಬಾಕಿ ಇರುವಾಗಲೇ 6 ವಿಕೆಟ್‌ಗಳ ಜಯ ದಾಖಲಿಸಿ ದಾಖಲೆಯ 6ನೇ ಬಾರಿ ಟ್ರೋಫಿ ಎತ್ತಿ ಹಿಡಿಯಿತು. “ಟೀಮ್ ಇಂಡಿಯಾದ ಸೋಲಿಗೆ ಪಿಚ್ ಮುಖ್ಯ ಕಾರಣವಾಯಿತು. ಫೈನಲ್ ಪಂದ್ಯಕ್ಕೆ ಆತಿಥೇಯ ಭಾರತ…
ಮಹಿಳೆಯರು ಸ್ಟೈಲಿಶ್ ಆಗಿ ಕಾಣಿಸಲು ತುಂಬಾ ಪ್ರಯತ್ನ ಪಡುತ್ತಾರೆ. ಆದರೆ ಮಹಿಳೆಯರಿಗೆ ಅಂದವನ್ನು ಹೆಚ್ಚಿಸುವುದೇ ಕೂದಲು. ಒಬ್ಬರಿಗೆ ಒಂದೊಂದು ರೀತಿಯ ಹೇರ್‌ಕಟ್ ಸೂಟ್ ಆಗುತ್ತದೆ. ಅದಕ್ಕಾಗಿಯೇ ಮಹಿಳೆಯರಿಗಾಗಿಯೇ ವಿಶೇಷ ಹೇರ್‌ಕಟ್ ಮಾಡಿಸುವುದು ಹೇಗೆ, ಯಾವ ಸ್ಟೈಲ್ ಹೇರ್‌ಕಟ್ ಮಾಡಿಸಿದರೇ ಸುಂದರವಾಗಿ ಕಾಣಿಸುತ್ತಾರೆ ಎಂಬುವುದರ ಬಗ್ಗೆ ಕೆಲವೊಂದು ಟಿಪ್ಸ್‌ಗಳನ್ನು ನಾವು ಇಂದು ನಿಮಗೆ ಹೇಳಿಕೊಡುತ್ತೇವೆ. ಶಾರ್ಟ್ ಹೇರ್‌ಕಟ್ ಶಾರ್ಟ್ ಹೇರ್ ಇರುವವರು ನನ್ನ ಕೊದಲಿಗೆ ಯಾವ ರೀತಿಯ ಹೇರ್‍ಕಟ್ ಮಾಡಿಸಿಕೊಳ್ಳಬೇಕೆಂದು ಯೋಚಿಸುತ್ತಿದ್ದರೆ, ಶಾರ್ಟ್ ಹೇರ್‍ಕಟ್ ಮಾಡಿಸಿಕೊಳ್ಳಿ. ಇದೊಂದು ಟ್ರೆಂಡಿ ಹೇರ್ ಸ್ಟೈಲ್ ಆಗಿದ್ದು, ನೀವು ಯಾವುದೇ ರೀತಿಯ ಡ್ರೆಸ್ ಧರಿಸಿದರೂ ಸೂಟ್ ಆಗುತ್ತದೆ. ಮೀಡಿಯಂ ಹೇರ್‌ಕಟ್ ಕೆಲವರಿಗೆ ಹೇರ್ ತುಂಬಾ ಉದ್ದವಿರುವುದರಿಂದ ಇಷ್ಟವಿಲ್ಲದೇ ಹೋದರೆ, ಈ ಹೇರ್‍ಕಟ್ ಮಾಡಿಸಿಕೊಳ್ಳುವುದು ಉತ್ತಮ. ಏಕೆಂದರೆ ಇದು ನಿಮಗೆ ತುಂಬಾ ಹೇರ್‍ಕಟ್ ಮಾಡಿಕೊಂಡಿದ್ದೇವೆ ಎಂಬ ಫೀಲ್ ನೀಡುವುದಿಲ್ಲ. ಅಲ್ಲದೇ ಈ ಹೇರ್‍ಕಟ್ ನೀವು ಸುಂದರವಾಗಿ ಕಾಣಿಸಿಕೊಳ್ಳಲು ಸಹಾಯಕವಾಗಿದೆ. ಲಾಗ್ ಹೇರ್‌ಕಟ್ ಎಷ್ಟೋ ಜನ ಹೆಣ್ಣು…
ಬೆಂಗಳೂರು:- ಆಪರೇಷನ್ ಕಮಲ ಬಗ್ಗೆ ವಿಪಕ್ಷ ನಾಯಕ ಅಶೋಕ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಾವು ಬೇಡ ಅಂದರೂ ಕಾಂಗ್ರೆಸ್ಸಿಗರೇ ಬಹಳಷ್ಟು ಅಸ್ತ್ರ ಕೊಟ್ಟಿದ್ದಾರೆ. ಆಪರೇಷನ್ ಕಮಲದ ಅವಶ್ಯಕತೆ ನಮಗಿಲ್ಲ, ಅವರೇ ಕುಸಿದು ಬಿಳುತ್ತಿದ್ದಾರೆ ಎಂದರು. ಇನ್ನೂ ಸುವರ್ಣಸೌಧದ ಸಾರ್ವಕರ್ ಫೋಟೋ ತೆಗೆಯುತ್ತೇವೆ ಎಂದಿದ್ದಾರೆ. ಇದು ಸಾರ್ವಕರ್ಗೆ ಮಾಡುತ್ತಿರುವ ಅಪಮಾನ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕೊಲೆ, ಸುಲಿಗೆ ಜಾಸ್ತಿಯಾಗಿದೆ. ರಾಜ್ಯದಲ್ಲಿ ಟಿಪ್ಪು ಸಂಸ್ಕೃತಿ ಇದೆ ಎಂದು ಕಿಡಿಕಾರಿದರು.
ಭೋಪಾಲ್: ಹಾಡಹಗಲೇ ಜನನಿಬೀಡ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಇಬ್ಬರು ಮುಸುಕುಧಾರಿಗಳು ಅಪಹರಿಸಿದ ಘಟನೆ ಮಧ್ಯಪ್ರದೇಶದ (Madhya Pradesh) ಗ್ವಾಲಿಯರ್‌ನಲ್ಲಿ (Gwalior) ನಡೆದಿದೆ. ಯುವತಿ ಬಸ್‍ನಲ್ಲಿ ಬಂದು, ಆಕೆಯ ಸಹೋದರನಿಗಾಗಿ ಪೆಟ್ರೋಲ್ ಬಂಕ್ ಒಂದರ ಬಳಿ ಕಾಯುತ್ತಿದ್ದಾಗ ಆಕೆಯ ಅಪಹರಣವಾಗಿದೆ. ಅಪಹರಣಕಾರರಲ್ಲಿ ಓರ್ವ ಹೆಲ್ಮೆಟ್ ಧರಿಸಿದ್ದರೆ, ಮತ್ತೋರ್ವ ಮುಖಕ್ಕೆ ಬಟ್ಟೆಯನ್ನು ಸುತ್ತಿಕೊಂಡಿದ್ದ. ಯುವತಿಯನ್ನು ಅಪಹರಿಸುತ್ತಿರುವ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. https://twitter.com/ANI_MP_CG_RJ/status/1726623568006656282?ref_src=twsrc%5Etfw%7Ctwcamp%5Etweetembed%7Ctwterm%5E1726623568006656282%7Ctwgr%5E7edb3446996dada20ff661477b9ad687e0aed34a%7Ctwcon%5Es1_&ref_url=https%3A%2F%2Fwww.news9live.com%2Fcrime%2Fmadhya-pradesh-police-rescues-girl-from-lodge-one-abductor-arrested-hunt-continues-to-nab-second-2355723 ಅಪಹರಣಕ್ಕೊಳಗಾದ ಯುವತಿ ಬಿಎ ವ್ಯಾಸಂಗ ಮಾಡುತ್ತಿದ್ದು, ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ನಿವಾಸಿಯಾಗಿದ್ದಾಳೆ. ತನ್ನ ಕುಟುಂಬದೊಂದಿಗೆ ದೀಪಾವಳಿ ಆಚರಿಸಲು ಊರಿಗೆ ತೆರಳಿದ್ದಳು. ಈ ವೇಳೆ ಯುವತಿಯ ಅಪಹರಿಸಲಾಗಿದೆ. ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆಟ್ರೋಲ್ ಬಂಕ್ ಸೇರಿದಂತೆ ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸಲಾಗುತ್ತಿದೆ. ಅಪಹರಣಕ್ಕೆ ಕಾರಣ ತಿಳಿದು ಬಂದಿಲ್ಲ. ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಲಬುರಗಿ: ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದು ಹೋರಾಟಗಾರ ಕುರುಬೂರು ಶಾಂತಕುಮಾರ್ ಅವರು ಉಭಯ ಸರ್ಕಾರದ ವಿರುದ್ಧ ಕಿಡಿಕಾರಿದರು. ಕಲಬುರಗಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರೈತರು ಬರಗಾಲದ ಸಂಕಷ್ಟದಿಂದ ನರಳುತ್ತಿದ್ದಾರೆ. ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ನೆರವಿಗೆ ಬಾರದೆ ರಾಜಕೀಯ ಚೆಲ್ಲಾಟ ಮಾಡುತ್ತಿದ್ದಾರೆ. ರಾಜ್ಯದ 220 ತಾಲೂಕುಗಳು ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿವೆ. ಕೃಷಿ ಸಾಲ ಪಡೆದ ರೈತರು ಬೆಳೆ ಬೆಳೆಯಲು ಹೂಡಿಕೆ ಮಾಡಿದ್ದಾರೆ. ಬೆಳೆ ನಾಶವಾಗಿದೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ’ ಎಂದರು. https://ainlivenews.com/satish-jarakiholi-becoming-cm-is-as-true-as-surya-being-born-congress-mla/ ಕೈಗಾರಿಕೆ, ಉದ್ಯಮಿಗಳಿಗೆ ಸಂಕಷ್ಟದ ನೆರವು ಸಾಲ ಮನ್ನಾ ಮಾಡಿರುವ ರೀತಿ, ರೈತರ ಎಲ್ಲಾ ಬ್ಯಾಂಕು ಹಾಗೂ ಸಹಕಾರ ಸಂಘಗಳ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಲೇಬೇಕು. ರೈತರ ಸಾಲ ವಸೂಲಿಗೆ ಬ್ಯಾಂಕ್ ಗಳು ನೀಡುವ ಕಿರುಕುಳ ನಿಲ್ಲಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು:- ಬೆಂಗಳೂರಿನಲ್ಲಿ ಇಂದಿನಿಂದ 2 ದಿನಗಳ ಕಾಲ ಮಳೆ ಆಗಲಿದ್ದು, 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಸೇರಿ ಒಟ್ಟು 7 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ನವೆಂಬರ್ 24ರಂದು ಅತಿ ಹೆಚ್ಚು ಮಳೆಯಾಗಲಿದೆ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ವಿಜಯಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರ…