ದುಬೈ: ಕ್ರೀಡೆಯ ಸಮಗ್ರತೆ ಮತ್ತು ಆಟಗಾರರ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ತೃತೀಯ ಲಿಂಗಿಗಳಿಗೆ ನಿಷೇಧ ಹೇರಿರುವುದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತಿಳಿಸಿದೆ. ಐಸಿಸಿ ಸಭೆಯಲ್ಲಿ (ICC Meeting) ಈ ನಿರ್ಧಾರ ಪ್ರಕಟಿಸಲಾಗಿದೆ. ಈ ನಿರ್ಧಾರವು ಮಹಿಳಾ ಕ್ರಿಕೆಟ್ನ ಸಾರವನ್ನು ರಕ್ಷಿಸುವ ಗುರಿ ಹೊಂದಿದೆ. ಆಟದ ಸಮಗ್ರತೆ, ಸುರಕ್ಷತೆ ಮತ್ತು ಒಳಗೊಳ್ಳುವಿಕೆಯನ್ನು ಕೇಂದ್ರೀಕರಿಸಿದ ಈ ನಿಯಮಗಳನ್ನ ಮಾಡಲಾಗಿದ್ದು, 2 ವರ್ಷಗಳಲ್ಲಿ ಮೌಲ್ಯಮಾಪನಕ್ಕೆ ಒಳಗಾಗುತ್ತವೆ ಎಂಬುದಾಗಿ ತಿಳಿಸಿದೆ ಜನನದ ಸಮಯದಲ್ಲಿ ಪುರುಷನಾಗಿದ್ದು, ಪುರುಷನಾಗಿಯೇ ಪ್ರೌಢಾವಸ್ಥೆಗೆ ಒಳಗಾದ ವ್ಯಕ್ತಿ, ನಂತರದಲ್ಲಿ ಲಿಂಗ ಬದಲಾವಣೆ ಕಾರ್ಯವಿಧಾನಗಳಿಗೆ ಒಳಗಾಗಿದ್ದರೇ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡಕ್ಕೆ ಅರ್ಹತೆ ಪಡೆಯುವುದಿಲ್ಲ ಎಂಬುದನ್ನು ಐಸಿಸಿ ದೃಢೀಕರಿಸಿದೆ. 9 ತಿಂಗಳ ಸಮಾಲೋಚನೆಯ ನಂತರ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ರಿಚರ್ಡ್ ಥಾಂಪ್ಸನ್ ಸೇರಿದಂತೆ ಐಸಿಸಿ ಮಂಡಳಿಯು ಈ ಲಿಂಗ ಅರ್ಹತಾ ನಿಯಮಗಳನ್ನು ಅಂತಿಮಗೊಳಿಸಿತು.
Author: AIN Author
ಕಳೆದ ಕೆಲವು ವರ್ಷಗಳಿಂದ ಭಾರತೀಯ ಕಾರು ಖರೀದಿದಾರರ ಅತ್ಯಂತ ಜನಪ್ರಿಯ ಆಯ್ಕೆಗಳಾಗಿವೆ. ಸಣ್ಣ ಮೈಕ್ರೋ ಎಸ್‌ಯುವಿಗಳೊಂದಿಗೆ ಈ ವಿಭಾಗವು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ 1. ಟಾಟಾ ನೆಕ್ಸಾನ್ ಅಕ್ಟೋಬರ್ ತಿಂಗಳಲ್ಲಿ ಟಾಟಾ ನೆಕ್ಸಾನ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಸ್‌ಯುವಿಯಾಗಿ ಮೂಡಿಬಂದಿದೆ. ಈ ಅವಧಿಯಲ್ಲಿ ಸ್ವದೇಶಿ ಕಾರು ತಯಾರಕ ಕಂಪನಿ ಟಾಟಾ ಮೋಟಾರ್ಸ್‌ನ ಈ ಕಾರು 16,887 ಯುನಿಟ್ ಮಾರಾಟವಾಗಿದೆ. ಇದರಲ್ಲಿ ಎಲೆಕ್ಟ್ರಿಕ್ ಕಾರುಗಳೂ ಒಳಗೊಂಡಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಟಾಟಾ ನೆಕ್ಸಾನ್‌ನ ಮಾರಾಟ ಶೇ. 22.66ರಷ್ಟು ಏರಿಕೆ ಕಂಡಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ನೆಕ್ಸಾನ್ ಶ್ರೇಣಿಯ ಪ್ರಮುಖ ಫೇಸ್‌ಲಿಫ್ಟ್ ಮಾದರಿ ಬಿಡುಗಡೆಯಾಗಿದ್ದು, ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ಇದು ಮಾರಾಟ ಹೆಚ್ಚಲು ಪ್ರಮುಖ ಕಾರಣವಾಗಿದೆ. 2. ಮಾರುತಿ ಸುಜುಕಿ ಬ್ರೇಝಾ ಮಾರುತಿ ಸುಜುಕಿ ಬ್ರೆಝಾ 2016ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದಾಗಿನಿಂದ ಸಬ್‌ಕಾಂಪ್ಯಾಕ್ಟ್ ಎಸ್‌ಯುವಿ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವ ಕಾರು ಆಗಿದೆ. ಈವರೆಗೆ…
ಬೆಂಗಳೂರು :- ಜಾತಿಗಣತಿ ವರದಿ ವಿಚಾರ, ಇದು ರಾಜಕೀಯ ಪ್ರೇರಿತ ಎಂದು ಅಶ್ವಥ್ ನಾರಾಯಣ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಎಚ್.ಕಾಂತರಾಜು ವರದಿ ಸಮಾಜದಲ್ಲಿ ಸಮಸ್ಯೆ ಬಗೆಹರಿಸುವುದಕ್ಕಿಂತ ರಾಜಕೀಯ ಪ್ರೇರಿತವಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗಾಗಲಿ, ಕಾಂಗ್ರೆಸ್ ನವರಿಗಾಗಲಿ ದುರುದ್ದೇಶ ಇದೆ. ಇದರದಲ್ಲಿ ಸದುದ್ದೇಶ ಇದ್ದರೆ ಭ್ರಷ್ಟಾಚಾರ ರಹಿತ ಸರ್ಕಾರ ನೀಡುತ್ತಿದ್ದರು ಎಂದು ಮಾಜಿ ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ. ಆಡಳಿತದಲ್ಲಿ ಪಾರದರ್ಶಕತೆ ಇಲ್ಲ. ಗುಣಮಟ್ಟದ ಶಿಕ್ಷಣ, ಸೌಲಭ್ಯ ಇಲ್ಲ. ಯಾವುದೇ ಪ್ರಶ್ನೆಗಳಿಗೂ ಅವರ ಬಳಿ ಉತ್ತರ ಇಲ್ಲ. ಅಧಿಕಾರಕ್ಕೆ ಬಂದ ಬಳಿಕವಾದರೂ ಜನ ಕೊಟ್ಟ ಬೆಂಬಲಕ್ಕೆ ಕೆಲಸಮಾಡಬೇಕಿತ್ತು. ಆದರೆ, ಕಾಂತರಾಜು ವರದಿ ಕೇವಲ ಸಮೀಕ್ಷೆ ಅಂತಾರೆ. ಜಾತಿ ಜನಗಣತಿ ಸಮೀಕ್ಷೆ ಸರಿಯಾಗಿ ಆಗಿಲ್ಲ ಅನ್ನುವ ಮಾತು ಕೇಳಿಬರುತ್ತಿದೆ. ಹಸ್ತಪ್ರತಿ ಇಲ್ಲ, ಕಾರ್ಯದರ್ಶಿ ಸಹಿ ಇಲ್ಲ ಅಂತಿದ್ದರೂ ಈಗ ವರದಿ ಬಿಡುಗಡೆ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸರ್ವರಿಗೂ ಸಮಪಾಲು, ಸಮಬಾಳು ಅಂತಿದ್ದಾರೆ, ಬರೀ ಸ್ವಾರ್ಥ, ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ.…
ನವದೆಹಲಿ: ಭಾರತೀಯ ಮೂಲದ ತಮಿಳುನಾಡು ನಿವಾಸಿ ಮಹಿಳೆ ಕಲ್ಪನಾ ಬಾಲನ್ ಅವರು ವಿಶಿಷ್ಟ ಕಾರಣದಿಂದಾಗಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. 26 ವರ್ಷ ವಯಸ್ಸಿನ ಕಲ್ಪನಾ ಅವರ ಬಾಯಿಯಲ್ಲಿ ಬರೋಬ್ಬರಿ 38 ಹಲ್ಲುಗಳಿವೆ. ಸಾಮಾನ್ಯವಾಗಿ ಮಾನವರ ಬಾಯಿಯಲ್ಲಿ 32 ಹಲ್ಲುಗಳು ಇರುತ್ತವೆ. ಆದರೆ, ಕಲ್ಪನಾ ಬಾಲನ್ ಅವರ ಬಾಯಿಯಲ್ಲಿ ಒಟ್ಟು 38 ಹಲ್ಲುಗಳು ಇದ್ದು, 6 ಹಲ್ಲುಗಳು ಹೆಚ್ಚುವರಿಯಾಗಿ ಇರುವ ಕಾರಣಕ್ಕೆ ಗಿನ್ನೆಸ್ ದಾಖಲೆಗೆ ಪಾತ್ರರಾಗಿದ್ದಾರೆ. ಈ ಕುರಿತಾಗಿ ಗಿನ್ನೆಸ್ ವಿಶ್ವ ದಾಖಲೆ ಸಂಸ್ಥೆ ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಕುರಿತಾಗಿ ಮಾಹಿತಿ ಪ್ರಕಟಿಸಿದೆ. ಕಲ್ಪನಾ ಬಾಲನ್ ಅವರ ಕೆಳ ದವಡೆಯಲ್ಲಿ ನಾಲ್ಕು ಹೆಚ್ಚುವರಿ ಹಲ್ಲುಗಳಿವೆ. ಇನ್ನು ಮೇಲು ದವಡೆಯಲ್ಲಿ 2 ಹೆಚ್ಚುವರಿ ಹಲ್ಲುಗಳು ಇವೆ. ಈ ಕುರಿತಾಗಿ ಸಚಿತ್ರ ಸಹಿತ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಮಾಹಿತಿ ನೀಡಲಾಗಿದೆ. ಕಲ್ಪನಾ ಬಾಲನ್ ಅವರು ಹದಿ ಹರೆಯಲ್ಲಿದ್ದಾಗ ಅವರ ಬಾಯಿಯಲ್ಲಿ ಹಾಲು ಹಲ್ಲುಗಳು ಉದುರಿದ ಬಳಿಕ ಬೆಳೆದ ಹೊಸ ಹಲ್ಲುಗಳ ಪೈಕಿ…
ಈ ಹಿಂದೆಂದೂ ಕಾಣದ ಬರ ಈ ಬಾರಿ ಬಂದಿದ್ದು ಹಾವೇರಿ ಜಿಲ್ಲೆಯ ರೈತರು ಅಕ್ಷರಶಃ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹ ಸಮಯದಲ್ಲಿ ನೆರವಿಗೆ ಬರಬೇಕಿದ್ದ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಸುಮ್ಮನಿವೆ ಎಂದು ಹಾವೇರಿ ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆ ಆರೋಪಿಸಿವೆ. ಈ ಕುರಿತಂತೆ ಸಭೆ ನಡೆಸಿದ ರೈತರು ರಾಜ್ಯದಲ್ಲಿರುವ ಸರ್ಕಾರ ಕೇಂದ್ರದ ಮೇಲೆ ಬೊಟ್ಟು ತೋರಿಸುತ್ತಿದೆ. ಕೇಂದ್ರ ಸರ್ಕಾರ ರಾಜ್ಯ ಸರ್ಕಾರದ ಬಿಡುಗಡೆ ಮಾಡಲಿ ಎಂದು ನೋಡುತ್ತಿದೆ. ಇವೆರಡರ ನಡುವೆ ರೈತನ ಸ್ಥಿತಿ ಬಿಗಡಾಯಿಸಿದೆ ಎಂದು ರೈತರು ಆರೋಪಿಸಿದ್ದಾರೆ. ರಾಜ್ಯದಲ್ಲಿ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಜಿಲ್ಲೆಗಳಲ್ಲಿ ಹಾವೇರಿಯ ಸಹ ಒಂದು. ಇತ್ತ ಈ ವರ್ಷ ಪ್ರತಿಶತ 99ರಷ್ಟು ಬಿತ್ತನೆ ಮಾಡಿದ್ದ ಜಿಲ್ಲೆ ಸಹ ಹಾವೇರಿ. ಆದರೆ ಮಳೆರಾಯನ ಮುನಿಸು ರೈತನನ್ನು ಹೈರಾಣಾಗಿಸಿದೆ. ಸರ್ಕಾರ ಹಾವೇರಿ ಜಿಲ್ಲೆಯ ಎಂಟೂ ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಿದೆ. ಆದರೆ ಬರಪೀಡಿತ…
ಸಕ್ಕರೆಯ ಅಂಶ ಇಲ್ಲದೇ ವ್ಯಕ್ತಿ ಬದುಕಲು ಸಾಧ್ಯವಿಲ್ಲ. ನಿಜ. ಆದರೆ ಆದರೆ ಇಂದು ಸಂಸ್ಕರಿಸಿದ ಸಕ್ಕರೆಗಳಿಂದ ತುಂಬಿದ ಸಂಸ್ಕರಿಸಿದ ಆಹಾರಗಳಲ್ಲಿ ಇರುವ ಸಕ್ಕರೆಯ ಪ್ರಮಾಣ ಆತಂಕಕಾರಿ. ಅಂದರೆ ನಾವೆಲ್ಲ ಬಹುಶಃ ನಮಗೆ ತಿಳಿದಿರುವುದಕ್ಕಿಂತ ಹೆಚ್ಚು ಸಕ್ಕರೆಯನ್ನು ಸೇವಿಸುತ್ತಿದ್ದೇವೆ. ಆದ್ದರಿಂದ ನಮ್ಮ ಆಹಾರದಿಂದ ಅದನ್ನು ಗರಿಷ್ಠ ಪ್ರಮಾಣದಲ್ಲಿ ತೆಗೆದುಹಾಕುವುದು ಒಳ್ಳೆಯದು. ನೀವು ಸಕ್ಕರೆ ತಿನ್ನುವುದನ್ನು ನಿಲ್ಲಿಸಿದಾಗ ನಿಮ್ಮ ದೇಹಕ್ಕೆ ಏನಾಗುತ್ತದೆ ಎಂಬುದನ್ನು ಇಲ್ಲಿದೆ ನೋಡಿ. ದೈಹಿಕ ಲಕ್ಷಣಗಳು: ದೇಹಕ್ಕೆ ಸಕ್ಕರೆ ಪೂರೈಕೆ ನಿಂತಾಗ ಅದು ಹಿಂತೆಗೆದುಕೊಳ್ಳುವ ಲಕ್ಷಣಗಳನ್ನು ಅನುಭವಿಸಲು ಪ್ರಾರಂಭಿಸಬಹುದು. ಈ “ಸಕ್ಕರೆ ಹಿಂತೆಗೆದುಕೊಳ್ಳುವಿಕೆ” ದೈಹಿಕ ಮತ್ತು ಮಾನಸಿಕ ಲಕ್ಷಣಗಳಿಗೆ ಕಾರಣವಾಗಬಹುದು. ದೈಹಿಕ ಲಕ್ಷಣಗಳಲ್ಲಿ ನಿಶ್ಯಕ್ತಿ, ತಲೆನೋವು ಮತ್ತು ಜಠರಗರುಳಿನ ತೊಂದರೆಯೂ ಸೇರಿದೆ. ಬಲವಾದ ಮನಸ್ಸಿನೊತ್ತಡ ಅನುಭವಿಸುವ ಸಾಧ್ಯತೆಯಿದೆ. ಈ ಅಹಿತಕರ ಅನುಭವವು ಧೂಮಪಾನ ತ್ಯಜಿಸುವ ಆರಂಭಿಕ ದಿನಗಳಂತೆಯೇ ಹತಾಶೆ ಮತ್ತು ಕಿರಿಕಿರಿಯನ್ನೂ ಉಂಟುಮಾಡಬಹುದು. ಶಕ್ತಿಯ ಮಟ್ಟ ಸುಧಾರಿಸುತ್ತದೆ: ಸಾಮಾನ್ಯವಾಗಿ ಒಂದು ವಾರ ಹೀಗಾಗುತ್ತದೆ. ಅದರ ನಂತರ, ನಿಮ್ಮ ಶಕ್ತಿಯ ಮಟ್ಟವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ.…
ಬೆಂಗಳೂರು: ನಗರದ ವಿದ್ಯಾರಣ್ಯಪುರ ತಿಂಡ್ಲು ದುರ್ಗಾದೇವಿ ಬಡಾವಣೆಯಲ್ಲಿರುವ ಶ್ರೀ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಸುವರ್ಣ ಮಹೋತ್ಸವ ಕ್ರೀಡಾಂಗಣದಲ್ಲಿ ಡಿಸೆಂಬರ್ 6 ರಿಂದ 17ರವರೆಗೆ 11 ದಿನಗಳ ಕಾಲ ಶ್ರೀ ವಿಶ್ವ ಮಹಾಕಾಳೀ ಯಾಗ ನಡೆಯಲಿದೆ. ವಿದ್ಯಾಭಿವೃದ್ಧಿ ವಶೀಕರಣ, ಸರ್ವ ವಶೀಕರಣ, ಸರ್ವ ಶತೃನಾಶ, ಸರ್ವರೋಗ ನಿವಾರಣ, ಸರ್ವ ಕಾರ್ಯವಿಜಯ, ಕುಲದೋಷ ನಿವಾರಣ, ಗ್ರಹದೋಷ ನಿವಾರಣ, ಸರ್ವ ಬಾಧೆಗಳ ನಿವಾರಣ, ಸರ್ಪದೋಷ ನಿವೃತ್ತಿ, ಸೌಭಾಗ್ಯದೋಷ ನಿವಾರಣ, ಪಿತೃ ದೋಷ ನಿವಾರಣ, ಸಂತಾನ ಪ್ರಾಪ್ತಿ, ಸ್ವಯಂವರ ಶಾಂತಿ, ಪಂಚಭೂತ ಶಾಂತಿ ಹಾಗೂ ಲೋಕಶಾಂತಿಗಾಗಿ ಈ ವಿಶ್ವ ಮಹಾಕಾಳಿ ಯಾಗವನ್ನು ಏರ್ಪಡಿಸಲಾಗಿದೆ. ಬದ್ರಿನಾಥ ಆಶ್ರಮದ ಕೇರಳ ತಾಂತ್ರಿಕ ಪ್ರಮುಖರು, ಯಾಗ ಗುರು ಶಾಂತಿದಾಸನ್ ಸ್ವಾಮೀಜಿ ಅವರು ವಿಶೇಷವಾಗಿ ಕಾಳಿ ಯಾಗ, ನವಕಾಳಿ ಹೋಮ, ಮಹಾ ಚಂಡಿಕಾ ಹೋಮ, ಮಹಾಲಕ್ಷ್ಮಿ ಹೋಮ, ಮಹಾ ಸರಸ್ವತಿ ಹೋಮ, ಮಹಾ ಸುದರ್ಶನ ಹೋಮ, ಮಹಾ ಗಾಯತ್ರಿ ಹೋಮ, ಮಹಾ ಅಗ್ನಿ ಹೋತ್ರ, ಅಘೋರ ಹೋಮ, ವೀರಭದ್ರ ಹೋಮ, ಮಹಾಗಣಪತಿ…
ಬೆಂಗಳೂರು:- ಮಾಜಿ ಶಾಸಕ ಸಿಟಿ ರವಿ ಅವರು, ಜಾತಿಗಣತಿ ವರದಿ ವಿಚಾರದಲ್ಲಿ ಕಾಂಗ್ರೆಸ್ ನಡೆ ಟೀಕಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕಾಂತರಾಜು ವರದಿಗೆ ಸಂಬಂಧಿಸಿದಂತೆ ಅದರ ಪ್ರಿನ್ಸಿಪಲ್ ಸೆಕ್ರೇಟರಿಯೇ ಸಹಿ ಹಾಕಿಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಒಂದೂವರೆ ಕೋಟಿ ಜನರ ಉಲ್ಲೇಖವೇ ಇಲ್ಲ. ಹಾಗಿರುವಾಗ ಎಷ್ಟರ ಮಟ್ಟಿಗೆ ಕಾಂತರಾಜು ವರದಿ ಇದೆ ಎಂದು ಹೇಳಿದರು. ನಮ್ಮ ಕಡೆ ಗಾದೆ ಇದೆ. ಮಗುವನ್ನು ಚಿವುಟಿ, ತೊಟ್ಟಿಲು ತೂಗುವುದು. ಹಾಗೆ ಕಾಂಗ್ರೆಸ್ ನಡೆ ಇದೆ. ಹಿಂದೆ ಅಧಿಕಾರದಲ್ಲಿದ್ದಾಗಲೇ ವರದಿ ಸಿಕ್ಕಿತ್ತು. ಆಗಲೇ ಯಾಕೆ ಮಾಡಲಿಲ್ಲ? ಡಿಸಿಎಂ ಡಿ.ಕೆ. ಶಿವಕುಮಾರ್ ಇಲ್ಲಿ ಸಹಿ ಹಾಕುವ ಅವಶ್ಯಕತೆ ಇರಲಿಲ್ಲ. ವರದಿ ಬಗ್ಗೆ ವಿರೋಧ ಇದ್ದರೆ ಒಂದೇ ಸಾಲಲ್ಲಿ ರಾಜೀನಾಮೆ ಕೊಟ್ಟು ಹೊರಗೆ ಬಂದು ಹೋರಾಟದಲ್ಲಿ ಭಾಗಿಯಾಗಬೇಕು. ಈಗಾಗಲೇ ವೀರಶೈವ ಸಮಾಜ, ಒಕ್ಕಲಿಗ ಸಮಾಜ ವೈಜ್ಞಾನಿಕವಾಗಿ ಸರಿ ಇಲ್ಲ ಎಂದು ವರದಿಯನ್ನು ವಿರೋಧಿಸಿದೆ. ಜಾತಿ ಗಣತಿ ಅಲ್ಲ ಅಂತಾದ್ರೆ ವರದಿ ಎಲ್ಲಿ ಹೋಯ್ತು?. ಒಂದೂವರೆ ಕೋಟಿ ಜನ…
ಬೆಂಗಳೂರು:- ಮುಂದಿನ ಆರು ತಿಂಗಳಲ್ಲಿ ಪಿಎಸ್ಐ ಸೇರಿ ವಿವಿಧ ಹುದ್ದೆಗಳಿಗೆ 4547 ಮಂದಿ ನೇಮಕ ಮಾಡಲಾಗುತ್ತದೆ ಎಂದು ಡಾ ಜಿ ಪರಮೇಶ್ವರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನ್ಯಾಯಾಲಯದಿಂದ ಒಪ್ಪಿಗೆ ದೊರೆತ ಹಿನ್ನೆಲೆ 545 ಮಂದಿ ಪೊಲೀಸ್ ಸಬ್ಇನ್ಸ್ಪೆಕ್ಟರ್ ಹುದ್ದೆಗಳನ್ನು ಡಿಸೆಂಬರ್ ಅಂತ್ಯದೊಳಗಾಗಿ ಭರ್ತಿ ಮಾಡಲಾಗುವುದು. ನಂತರ 402 ಪೊಲೀಸ್ ಸಬ್ಇನ್ಸ್ಪೆಕ್ಟರ್ಗಳ ಹುದ್ದೆ ಭರ್ತಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಬಳಿಕ 600 ಮಂದಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗುವುದು ಎಂದ ಅವರು, ಒಟ್ಟಾರೆಯಾಗಿ 1547 ಪಿಎಸ್ಐ ಹುದ್ದೆಗಳನ್ನು ಮುಂದಿನ ಆರು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದರು. ಇದೇ ರೀತಿ ಮೂರು ಸಾವಿರ ಕಾನ್ಸ್ಟೇಬಲ್ಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಆದಷ್ಟು ತ್ವರಿತವಾಗಿ ಪೂರ್ಣಗೊಳ್ಳಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು. ಪೊಲೀಸ್ ಇಲಾಖೆಗೆ ಇನ್ನೂ ಹದಿನೈದು ಸಾವಿರ ಕಾನ್ಸ್ಟೇಬಲ್ಗಳ ಅಗತ್ಯವಿದೆ. ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದ ಅವರು, ಆಯ್ಕೆಯಾಗುವವರಿಗೆ ತರಬೇತಿ ನೀಡುವ ಅಗತ್ಯ ಇರುವುದರಿಂದ…
ಬೆಂಗಳೂರು:- ರಾಯಬಾಗ ಶಾಲೆಯ ಕೊಳವೆಬಾವಿಯಲ್ಲಿ ನೀರು ಕಲುಷಿತ ಆಗುತ್ತಿದೆ ಎಂಬ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹುಬ್ಬಾರವಾಡಿ ಗ್ರಾಮದಲ್ಲಿ ಖಾಸಗಿ ಕಂಪೆನಿಯೊಂದರ ರಾಸಾಯನಿಕ ಗೊಬ್ಬರ ಸಂಗ್ರಹಣಗಾರದಿಂದಾಗಿ ಪಕ್ಕದಲ್ಲಿರುವ ಪ್ರಾಥಮಿಕ ಮತ್ತು ಅಂಗನವಾಡಿ ಕೇಂದ್ರದ ಕೊಳವೆಬಾವಿಯ ನೀರು ಕಲುಷಿತಗೊಳ್ಳುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಸರ್ಕಾರ ಹಾಗೂ ಸ್ಥಳೀಯ ಆಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಅಲ್ಲದೇ, ಇದೊಂದು ಸಾರ್ವಜನಿಕ ಮಹತ್ವದ ಗಂಭೀರ ವಿಚಾರವಾಗಿದೆ. ಅರ್ಜಿ ಸಂಬಂಧ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ, ರಾಯಬಾಗ ತಹಸೀಲ್ದಾರ್, ಚಿಕ್ಕೋಡಿ ಎಕ್ಸಿಕ್ಯೂಟಿವ್ ಇಂಜಿನಿಯರ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ರಾಯಬಾಗ ಉಪವಿಭಾಗ, ರಾಯಬಾಗ ಸಿಡಿಪಿಒ, ರಾಯಬಾಗ…