ವಿಜಯಪುರ: ಕಳೆದ ಆರೇಳು ತಿಂಗಳುಗಳಿಂದ ಬಂದ್ ಆಗಿದ್ದಂತಹ ಉದ್ಯಾನವ ಮತ್ತೆ ಈಗ ಆರಂಭವಾಗಿದೆ. ಜೊತೆಗ ಉದ್ಯಾನವನಕ್ಕೆ ಹೈಟೇಕ್ ಟಚ್ ಕೂಡಾ ನೀಡಲಾಗಿದೆ. ಈಗ ಅದೆಷ್ಟೋ ಜನ ಪ್ರವಾಸಿಗರು ಒಂದು ದಿನದ ಪಿಕ್ನಿಕ್ ಅಂತಾ ಈ ಜಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜೊತೆಗೆ ಪ್ರೇಮಿಗಳಿಗೂ ಹಾಟ್ ಫೇವರೇಟ್ ಪ್ಲೇಸ್ ಆಗಿ ಮಾರ್ಪಟ್ಟಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ… https://ainlivenews.com/laser-therapy-soukhy-robotic-ortho-care/ ಹೌದು ವಿಜಯಪುರ ನಗರದ ಹೊರಭಾಗದ ಭೂತನಾಳ ಕೆರೆಯ ಬಳಿಯ ಉದ್ಯಾನವನಕ್ಕೆ ಈಗ ಹೈಟೇಕ್ ಸ್ಪರ್ಷ ನೀಡಲಾಗಿದೆ. ಒಳಗೆ ಹೋದರೆ ಸಾಕು ನವಿಲುಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುವಂತೆ ಮಾಡಿದ್ದಾರೆ. ಜೊತೆಗೆ ಒಳಗೆ ಹೋದಂತೆ ಮಂಗಗಳು, ಆನೆ ಸೇರಿದಂತೆ ವಿವಿಧ ಪ್ರಾಣಿಗಳ ಕೆತ್ತನೆ ಕೂಡಾ ಮಾಡಲಾಗಿದೆ. ಇನ್ನೂ ಮಕ್ಕಳಿಗಾಗಿ ಆಟಿಗೆ ಸಾಮಾನುಗಳನ್ನು ಸಹಿತ ಇಲ್ಲಿ ಇಡಲಾಗಿದೆ. ಈಗ ಈ ಉದ್ಯಾನವನಕ್ಕೆ ಹೈ ಟೇಕ್ ಸ್ಪರ್ಷ ನೀಡಲಾಗಿದೆ. ಮೊದಲಿಗಿಂತಲೂ ಈ ಉದ್ಯಾನವನಕ್ಕೆ ಈಗ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ… ಕಳೆದ ಆರೇಳು ತಿಂಗಳು ಗಳ ಕಾಲ…
Author: AIN Author
ತುಮಕೂರು: ತುಮಕೂರಿನ ಸಿದ್ಧಗಂಗಾ ಮಠಕ್ಕೆ ಮಾಜಿ ಸಚಿವ ಸೋಮಣ್ಣ ಭೇಟಿ ನೀಡಿದ್ದಾರೆ. ಡಿಸೆಂಬರ್ 6ರಂದು ಗುರುಭವನ ಲೋಕಾರ್ಪಣೆ ಸಮಾರಂಭ ಹಿನ್ನೆಲೆ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆಗೆ ವಿ.ಸೋಮಣ್ಣ ಆಗಮಿಸುತ್ತಿದ್ದಾರೆ. ಸಿದ್ದಲಿಂಗ ಶ್ರೀಗಳ ಅಶೀರ್ವಾದ ಪಡೆದು ಬಳಿಕ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ಮಾಡಲಿದ್ದಾರೆ.
ಬೆಂಗಳೂರು: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರ ವಿರುದ್ಧ ನಡೆದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿ, ವೀರ ಮರಣವನ್ನಪ್ಪಿದ ಯೋಧನಿಗೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಜಿಗಣಿ ನಂದನವನ ಬಡಾವಣೆಯ ಸ್ವಗೃಹದಲ್ಲಿ ಯೋಧನ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ. ಬೆಳಗ್ಗೆಯಿಂದಲೇ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಪೊಲೀಸ್ ಇಲಾಖೆ ಸಾರ್ವಜನಿಕರು ಮತ್ತು ಗಣ್ಯರಿಗೆ ಪ್ರತೇಕ ವ್ಯವಸ್ಥೆ ಮಾಡಿದೆ. ಬ್ಯಾರಿಕೇಡ್‌ಗಳನ್ನ ಹಾಕಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಿದೆ. ನಿಜಕ್ಕೂ ಇಂತಹ ದಿನ ಬರುತ್ತೆ ಅಂತಾ ಊಹೆ ಮಾಡಿರಲಿಲ್ಲ. ನಿಜಕ್ಕೂ ಬಹಳ ನೋವಾಗ್ತಿದೆ. ವೀರ ಯೋಧನನ್ನ ಕಳೆದುಕೊಂಡು ನಾಡು ತಬ್ಬಲಿಯಾಗಿದೆ. ದೇವರು ಕುಟುಂಬಕ್ಕೆ ಅವರ ಆಗಲಿಕೆ ನೋವು ಭರಿಸುವ ಶಕ್ತಿ ನೀಡಲಿ. ಅಂತಿಮ ದರ್ಶನದ ಮೂಲಕ ಗೌರವ ಸಮರ್ಪಣೆಗೆ ಬಂದಿದ್ದೇವೆ ಎಂದು ಅಂತಿಮ ದರ್ಶನಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ವಿಷಾದ ವ್ಯಕ್ತಪಡಿಸಿದ್ದಾರೆ. https://ainlivenews.com/laser-therapy-soukhy-robotic-ortho-care/ ಅಂತಿಮ ದರ್ಶನ ಬಳಿಕ ಬೆಳಗ್ಗೆ 10 ಗಂಟೆಗೆ ಮನೆಯಿಂದ ಅಂತಿಮ ಯಾತ್ರೆ ಹೊರಡಲಿದೆ.…
ಬೆಂಗಳೂರು: ವಿಪಕ್ಷ ನಾಯಕ ಆರ್.ಅಶೋಕ್ ಚಿತ್ರದುರ್ಗ, ತುಮಕೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಇಂದು ಮಧ್ಯಾಹ್ನ 2.30ಕ್ಕೆ ಚಿತ್ರದುರ್ಗದ ಮಾದಾರ ಚನ್ನಯ್ಯ ಮಠಕ್ಕೆ ಭೇಟಿ ನೀಡಲಿದ್ದಾರೆ ಬಳಿಕ ಮಧ್ಯಾಹ್ನ 3.30ಕ್ಕೆ ಸಿರಿಗೆರೆ ಮಠಕ್ಕೆ ಭೇಟಿ ನೀಡಿ ಸಂಜೆ 5.30ಕ್ಕೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. https://ainlivenews.com/laser-therapy-soukhy-robotic-ortho-care/ ಇಂದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಮಾಜಿ ಸಚಿವ ಸೋಮಣ್ಣ ಭೇಟಿ ನೀಡಲಿದ್ದಾರೆ. ಡಿಸೆಂಬರ್ 6ರಂದು ಗುರುಭವನ ಲೋಕಾರ್ಪಣೆ ಸಮಾರಂಭ ಹಿನ್ನೆಲೆ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆಗೆ ವಿ.ಸೋಮಣ್ಣ ಆಗಮಿಸುತ್ತಿದ್ದಾರೆ. ಬೆಳಗ್ಗೆ 8.30ಕ್ಕೆ ಸಿದ್ಧಗಂಗಾ ಮಠಕ್ಕೆ ಮಾಜಿ ಸಚಿವ ವಿ.ಸೋಮಣ್ಣ ಭೇಟಿ ನೀಡಲಿದ್ದಾರೆ. ಸಿದ್ದಲಿಂಗ ಶ್ರೀಗಳ ಅಶೀರ್ವಾದ ಪಡೆದು ಬಳಿಕ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ಮಾಡಲಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಲೋನ್ ಕೊಡುತ್ತೇವೆ ಎಂದು ಹೇಳಿ ಯಾಮಾರಿಸುವ ಜನ ಇದ್ದಾರೆ ಎಷ್ಟೇ ಕೇರ್ ಫುಲ್ ಆಗಿದ್ದರೂ ಮೋಸ ಮಾಡುವವರು ಇರುತ್ತಾರೆ ಹಾಗೆ ಬೆಂಗಳೂರಲ್ಲಿ ಸಬ್ಸಿಡಿ ಲೋನ್ ಕೊಡ್ಸತ್ತೇನೆ ಅಂತ ನೂರಾರು ಜನರಿಗೆ ಟೋಪಿ ಹಾಕಿದ ಭೂಪ.. ನಿಮಗೇನಾದ್ರು ಲೋನ್ ಕೊಡ್ಸಿತ್ತೇನೆ ಅಂತ ಬಂದ್ರೆ ಹುಷಾರ್ ಹುಡುಗಿಯರ ಮೂಲಕ ಗಾಳ ಹಾಕಿ ಮೋಸ ಮಾಡೋದೆ ಫುಲ್ ಟೈಂ ಜಾಬ್ ಮಾಡಿಕೊಂಡು ಬಿಟ್ಟಿದ್ದಾರೆ ಹಾಗಾಗಿ ಎಚ್ಚರದಿಂದ ಇರಬೇಕು. ಸಬ್ಸಿಡಿ ಲೋನ್ ಕೊಡ್ಸತ್ತೇನೆ ಅಂತ ನೂರಾರು ಜನರಿಗೆ ಟೋಪಿ ಹಾಕಿದ ಭೂಪ ಸಿವಿಲ್ ಸ್ಕೋರ್ ಮೆಂಟೈನ್ ಮಾಡಿದ್ರೆ ಲಕ್ಷ ಲಕ್ಷಾ ಲೋನ್ ಬರುತ್ತೆ ಅಂತ ಹೇಳ್ತಾನ ನಿಮ್ಮದೆ ಡಾಕ್ಯುಮೆಂಟ್ ಪಡೆದು ಆಧಾರ್ ಕಾರ್ಡ್, ಪಾನ್ ಕಾರ್ಡ್ ಪಡೆಯುತ್ತಾನೆ ಮೊಬೈಲ್ ಸೆಂಟರ್ ಗೆ ಕರೆದುಕೊಂಡು ಹೋಗಿ ಅಪ್ರೂಲ್ ಮಾಡ್ಸತ್ತಾನೆ ಮೊಬೈಲ್ ,ಗಾಡಿ ತೆಗೆದುಕೊಂಡು ಕೊಡುತ್ತೇನೆ ಎಂದು ಯಾಮರಿಸುತ್ತಾನೆ ಮೊಬೈಲ್ ಗಾಡಿ ತೆಗೆದುಕೊಂಡು ಇವನೆ ಇಎಂಐ ಕಟುತ್ತಾನೆಮೂರು ತಿಂಗಳ ನಂತರ EMI ಕಟ್ಟೋದೆಯಿಲ್ಲ , ಪೊಲೀಸ್ ಸ್ಟೇಷನ್…
ಕಲಬುರಗಿ: KEA ಪರೀಕ್ಷೆ ಅಕ್ರಮ ಪ್ರಕರಣದ ಪ್ರಮುಖ ಆರೋಪಿ RD ಪಾಟೀಲ್ ನನ್ನ ಮತ್ತೆ 8 ದಿನಗಳ ಕಾಲ CID ವಶಕ್ಕೆ ನೀಡಿ ಜಿಲ್ಲಾ JMFC ಕೋರ್ಟ್ ಆದೇಶ ನೀಡಿದೆ..ಈಗಾಗಲೇ ವಶಕ್ಕೆ ಪಡೆದಿದ್ದ CID ಅಶೋಕ ನಗರ ಠಾಣೆ ಕೇಸಲ್ಲಿ 9 ದಿನ ಪೂರ್ಣ ವಿಚಾರಣೆ ನಡೆಸಿತ್ತು. https://ainlivenews.com/laser-therapy-soukhy-robotic-ortho-care/ ಇದೀಗ ವಿವಿ ಠಾಣೆ ಕೇಸ್ ವಿಚಾರಣೆಗಾಗಿ ಮತ್ತೊಮ್ಮೆ ವಶಕ್ಕೆ ನೀಡುವಂತೆ ಕೋರ್ಟಿಗೆ ಮನವಿ ಮಾಡಿತ್ತು..CID ಮನವಿ ಪುರಸ್ಕರಿಸಿದ ಕೋರ್ಟ್ ಇದೀಗ 8 ದಿನಗಳ ಕಾಲ ವಶಕ್ಕೆ ನೀಡಿ ಆದೇಶಿಸಿದೆ.. ಹೀಗಾಗಿ ಅಕ್ರಮದ ಹೆಚ್ಚಿನ ಅಂಶಗಳನ್ನ CID ಕಲೆಹಾಕುವ ಸಾಧ್ಯತೆಯಿದೆ..
ಹುಬ್ಬಳ್ಳಿ: ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಗೊಳಿಸಿ, ಎಸ್‌ಇಪಿ ಜಾರಿಗೊಳಿಸುತ್ತಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕ ನಗರದ ಪಿ.ಸಿ. ಜಾಬಿನ್ ಕಾಲೇಜಿನ ಆವರಣದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿತು. https://ainlivenews.com/laser-therapy-soukhy-robotic-ortho-care/ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾದರೆ ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ಮಹತ್ವದ ತಿರುವು ಸಿಗಲಿದೆ. ವಿದ್ಯಾರ್ಥಿಗಳ ಆಸಕ್ತಿಗೆ ಶಿಸ್ತಿನ ಅಧ್ಯಯನಕ್ಕೆ ಒತ್ತುಕೊಟ್ಟು, ಕೌಶಲಾಧಾರಿತ ಶಿಕ್ಷಣದ ಕನಸನ್ನು ಎನ್‌ಇಪಿ ಮೂಲಕ ನನಸು ಮಾಡಿಕೊಳ್ಳಬಹುದು. ಆದರೆ, ರಾಜ್ಯ ಸರ್ಕಾರ ಈ ನೀತಿ ಹಿಂಪಡೆಯಲು ತೀರ್ಮಾನಿಸಿರುವುದು ಖಂಡನೀಯ. ನೀತಿಯಲ್ಲಿ ಏನಾದರೂ ಲೋಪದೋಷಗಳಿದ್ದರೆ ಸರಿಪಡಿಸಲು ಅವಕಾಶವಿದೆ. ಶಿಕ್ಷಣ ನೀತಿಯನ್ನೇ ವಿರೋಧಿಸಲು ಹೊರಟಿದ್ದು ರಾಜಕೀಯ ದುರುದ್ದೇಶ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಸಚಿವರುಗಳ ಒಡೆತನದ ಖಾಸಗಿ ಶಾಲಾ ಕಾಲೇಜುಗಳಲ್ಲಿ ಶ್ರೀಮಂತ ವರ್ಗದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅವರಿಗೆ ಎನ್‌ಇಪಿ ರಾಷ್ಟ್ರಮಟ್ಟದ ಶಿಕ್ಷಣ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ದೊರೆಯುವುದು ಬೇಕಾಗಿಲ್ಲ ಎಂದು ಆರೋಪಿಸಿದರು. ಸುಮಾರು ಐದುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಹಿ…
ಬೆಂಗಳೂರು: ಜಮ್ಮುಕಾಶ್ಮೀರದ ರಜೆರಿ ಜಿಲ್ಲೆಯಲ್ಲಿ ಬುಧವಾರ ಉಗ್ರರ ಜೊತೆಗಿನ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಕನ್ನಡಿಗ ಯೋಧ ಎಂ.ವಿ. ಪ್ರಾಂಜಲ್ ಅವರ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 50 ಲಕ್ಷ ರೂ ಪರಿಹಾರ ಘೋಷಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಾಂಜಲ್ ಪಾರ್ಥಿವ ಶರೀರಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ ನಮನ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಕ್ಯಾಪ್ಟನ್ ಪ್ರಾಂಜಲ್ ಅವರು ತಮ್ಮ ತಂಡದೊಂದಿಗೆ ಕಾರ್ಯಾಚರಣೆ ನಡೆಸಿದ್ದರು. https://ainlivenews.com/laser-therapy-soukhy-robotic-ortho-care/ ನಾಗರಿಕರ ಜೊತೆ ಸಮಾಲೋಚನೆ ನಡೆಸುತ್ತಿರುವ ಸಂದರ್ಭದಲ್ಲಿ ಉಗ್ರರಿಂದ ತೀವ್ರವಾದ ದಾಳಿ ನಡೆಯಿತು. ಈ ಗುಂಡಿನ ದಾಳಿಯಲ್ಲಿ ಪ್ರಾಂಜಲ್ ಅವರು ನಾಗರಿಕರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಉಗ್ರರೊಂದಿಗೆ ಈ ವೇಳೆ ಗುಂಡಿನ ಚಕಮಕಿ ನಡೆಯಿತು. ಈ ದಾಳಿಯಲ್ಲಿ ಪ್ರಾಂಜಲ್ ಅವರು ತೀವ್ರವಾಗಿ ಗಾಯಗೊಂಡು ಹುತಾತ್ಮರಾದರು. ಆದರೆ ಪ್ರಾಂಜಲ್ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನಾಗರಿಕರನ್ನು ರಕ್ಷಿಸಿದರು. ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ. ಹುತಾತ್ಮ ಯೋಧನ ಕುಟುಂಬಕ್ಕೆ ನಮ್ಮ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ರೀತಿಯ ನೆರವೂ ಸಿಗಲಿದೆ ಎಂದರು.…
ಬೆಂಗಳೂರು: ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು ಬೆಳಗ್ಗೆ 10.30ಕ್ಕೆ ನಟ ಪುನೀತ್‌ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು ‘ಕಂಬಳ ಕರೆ’ಗೆ ಚಾಲನೆ ನೀಡಲಿದ್ದಾರೆ. https://ainlivenews.com/laser-therapy-soukhy-robotic-ortho-care/ ಮುಖ್ಯಸಭಾ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ 5.30ಕ್ಕೆ ಉದ್ಘಾಟಿಸಲಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ, ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಬೆಳಗ್ಗೆ 11 ಗಂಟೆಯ ಬಳಿಕ ಹಲವು ನಟ ನಟಿಯರು ಭಾಗಿಯಾಗುತ್ತಾರೆ. ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಸಂಪುಟ ಸಚಿವರು, ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ. ಭಾನುವಾರ(ನ.26) ಸಂಜೆ 5.30ಕ್ಕೆ ಕಂಬಳದ ಸಮಾರೋಪ ಕಾರ್ಯಕ್ರಮ ನಡೆಯುತ್ತದೆ ಎಂದು ಮಾಹಿತಿ ನೀಡಿದರು.
777 ಚಾರ್ಲಿ’ ನಟಿ ಸಂಗೀತಾ ಶೃಂಗೇರಿ (Sangeetha Sringeri) ಅವರು ಸೀಸನ್ 10 ಬಿಗ್ ಬಾಸ್‌ನಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಆಟ ಆಡ್ತಿದ್ದಾರೆ. ಆದರೆ ಇದೀಗ ಸಂಗೀತಾ ಆಟ ಆಡ್ತಿರೋ ರೀತಿ ಬಿಗ್ ಬಾಸ್ ಮನೆ ಹೊರಗೆ ಭಾರೀ ಪರಿಣಾಮವನ್ನೇ ಬೀರಿದೆ. ಇದರಿಂದ ಸಾಮಾಜಿಕ ಜಾಲತಾಣದಲ್ಲಿ 13 ಸಾವಿರ ಫಾಲೋವರ್ಸ್ ಅನ್ನು ನಟಿ ಕಳೆದುಕೊಂಡಿದ್ದಾರೆ. ದೊಡ್ಮನೆಯಲ್ಲಿ (Bigg Boss Kannada 10) ನಟಿ ಸಂಗೀತಾ ವಿಲನ್ ಆಗಿ ಈಗೀಗ ಹೈಲೆಟ್ ಆಗುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಕಾಲಿಟ್ಟ ದಿನ ಸಂಗೀತಾ ಮೇಲೆ ಇದ್ದಂತಹ ಅಭಿಪ್ರಾಯ ಈಗ ಬದಲಾಗಿದೆ. ಮೊನ್ನೆ ಟಾಸ್ಕ್ ಚಾಲೆಂಜ್‌ನಲ್ಲಿ ಸಂಗೀತಾ ಮಾತಿನಂತೆ ಕಾರ್ತಿಕ್- ತುಕಾಲಿ ಸಂತೂ ತಲೆ ಬೊಳಿಸಿದ ಮೇಲೆ ನಟಿ ವಿರುದ್ಧ ಫ್ಯಾನ್ಸ್ ತಿರುಗಿ ಬಿದ್ದಿದ್ದಾರೆ. ಈ ಘಟನೆ ಮತ್ತು ಸಂಗೀತಾ ನಡೆ ನುಡಿ ಎಲ್ಲವೂ ಬದಲಾಗಿರೋದರಿಂದ ಕಾರ್ತಿಕ್ ಮಹೇಶ್ (Karthik Mahesh) ಅಭಿಮಾನಿಗಳು ಸಂಗೀತಾ ಮೇಲೆ ಬೇಸರ ಮಾಡಿಕೊಂಡಿದ್ದಾರೆ. ಯಾರೇ ಸೆಲೆಬ್ರಿಟಿ ಬಿಗ್ ಬಾಸ್ ಮನೆಗೆ ಕಾಲಿಟ್ಟರೇ…