ಬೆಂಗಳೂರು;- ಪೊಲೀಸ್ ಇನ್ ಫಾರ್ಮರ್ ಎಂದು ಪೊಲೀಸರಿಗೆಯೇ ವಂಚನೆ ಮಾಡ್ತಿದ್ದ ಕಿಲಾಡಿಯನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕಳೆದ ನಾಲ್ಕು ವರ್ಷದಿಂದ ಪೊಲೀಸರಿಗೆ ವಂಚಿಸಿ ಪಬ್ ಬಾರ್ಗಳಲ್ಲಿ ಮೋಜುಮಸ್ತಿ ಮಾಡುತ್ತಿದ್ದ ವಸೀಂ ಎಂಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ವಸೀಂ, ಪೊಲೀಸರ ಜೊತೆಯಲ್ಲಿ ಇದ್ದುಕೊಂಡೇ ಅವರಿಗೆ ಸಹಾಯ ಮಾಡುವಂತೆ ಅವರ ಬಳಿಯಿಂದಲೇ ಹಣ ಪಡೆದು ವಂಚಿಸಿದ್ದಾನೆ. ಅಲ್ಲಿ ಇಲ್ಲಿ ಸುತ್ತಾಡುತ್ತ ಮೋಜು ಮಸ್ತಿ ಮಾಡುತ್ತ, ಹಾಯಾದ ಜೀವನ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲೊಂದು ದಂಧೆ ನಡೀತಿದೆ, ನಾನು ಅಲ್ಲಿಗೆ ಹೋಗಿ ಲೊಕೇಶನ್ ಕಳಿಸ್ತೀನಿ. ದಂಧೆಯಲ್ಲಿ ಏನೇನು ನಡೆಯುತ್ತೆ ಎಂದು ಮಾಹಿತಿ ನೀಡ್ತಿನಿ ಎಂದು ಪೊಲೀಸರಿಗೆ ಆರೋಪಿ ವಸೀಂ ನಂಬಿಸುತ್ತಿದ್ದ. ಪೊಲೀಸರು ಈಗ್ಲೇ ಬರ್ತೀವಿ ಅಂದ್ರೆ ಬೇಡ ನಾನು ಅಲ್ಲಿಗೆ ಹೋಗಿ ಸ್ಪಾಟ್ ಲೊಕೇಶನ್ ಕಳಿಸ್ತೀನಿ ಅಂತಿದ್ದ. ಸರ್ ಆಟೋ ಪ್ರಾಬ್ಲಂ ಆಗ್ಬಿಟ್ಟಿದೆ, ಪೆಟ್ರೋಲ್ ಬೇಕಿತ್ತು, ಬೈಕ್ ಇಲ್ಲ. ಮನೆಯಲ್ಲಿ ಸಮಸ್ಯೆ ಎಂದು ನಂಬಿಸಿ ಎರಡ್ಮೂರು ಸಾವಿರ ಫೋನ್ ಪೇ…
Author: AIN Author
ಬೀದರ್ : ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ನಾಚಿಕೆ ಆಗಬೇಕು ಎಂದು ಪ್ರವಾಸೋದ್ಯಮ ಸಚಿವ ಹೆಚ್ ಕೆ ಪಾಟೀಲ್ (HK Patel) ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ (Karnataka Congress Government) ಲೂಟಿಗೆ ಇಳಿದಿದೆ ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿಗೆ ಜವಾಬ್ದಾರಿ ಇರಬೇಕು. ಪ್ರಧಾನಿಯಾಗಿ ನೀವೇ ಹೀಗೆ ಮಾತನಾಡುತ್ತಿದ್ದೀರಿ. ನಾಚಿಗೆ ಆಗಲ್ವಾ? ಚುನಾವಣಾ ಬಾಂಡ್ ಅನ್ನು ಆರ್‌ಟಿಐ ಮಾಹಿತಿ ಹಕ್ಕಿನಲ್ಲೂ ಕೊಡದಂತೆ ಕಾನೂನು ಮಾಡಿದ್ದೀರಿ. ಯಾರ ಬಗ್ಗೆ ಮಾತನಾಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ, ಡಿಸಿಎಂ ಕುರ್ಚಿ ಕಿತ್ತಾಟದ ಸಂಧಾನಕ್ಕೆ ಬಂದು ಸೂಟ್‌ಕೇಸ್ ತೆಗೆದುಕೊಂಡು ಹೋಗುತ್ತಾರೆ ಎಂಬ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, https://ainlivenews.com/supreme-ray-healing-centre-reiki-treatment/ ಹೆಚ್‌ಡಿಕೆಗೆ ಬರೀ ಸೂಟ್‌ಕೇಸ್‌ನದ್ದೆ ಚಿಂತೆ. ಜನರ ಸಮಸ್ಯೆ ಬಗ್ಗೆ ಮಾತನಾಡುವುದನ್ನು ಬಿಟ್ಟು ಸೂಟ್‌ಕೇಸ್ ಬಗ್ಗೆ ಮಾತನಾಡುವುದು ದುರ್ದೈವದ ಸಂಗತಿ ಎಂದು ಕಿಡಿಕಾರಿದರು. ಬಿಜೆಪಿ ನಾಯಕರ ಬರ ಪ್ರವಾಸಕ್ಕೆ ಪ್ರತಿಕ್ರಿಯಿಸಿ, ಒಬ್ಬ…
ಮುಂಬೈ: ಗ್ಲೇನ್ ಮ್ಯಾಕ್ಸ್‌ವೆಲ್ (Glenn Maxwell) ಭರ್ಜರಿ ದ್ವಿಶತಕದ ನೆರವಿನೊಂದಿಗೆ ಆಸ್ಟ್ರೇಲಿಯಾ (Australia) ತಂಡವು ಅಫ್ಘಾನಿಸ್ತಾನದ ವಿರುದ್ಧ 3 ವಿಕೆಟ್‌ಗಳ ಅಮೋಘ ಜಯ ಸಾಧಿಸಿದ್ದು, ವಿಶ್ವಕಪ್ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಪಂದ್ಯಗೆದ್ದು ಸೆಮೀಸ್ ಪ್ರವೇಶಿಸುವ ಆಸೆಯಲ್ಲಿದ್ದ ಅಫ್ಘಾನಿಸ್ತಾನ ತಂಡದ ಕನಸು ಭಗ್ನಗೊಂಡಿದೆ. ಟಾಸ್‌ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ (Afghanistan) ತಂಡ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ 46.5 ಓವರ್‌ಗಳಲ್ಲೇ 293 ರನ್ ಗಳಿಸಿ ಜಯ ಸಾಧಿಸಿತು ಆಸ್ಟ್ರೇಲಿಯಾ ಆರಂಭದಲ್ಲೇ ಎಡವಿತು, ಪವರ್ ಪ್ಲೇ ಮುಗಿಯುವಷ್ಟರಲ್ಲೇ 52 ರನ್‌ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತ್ತು. ಆ ನಂತರವೂ ಆಫ್ಘನ್ ಬೌಲರ್‌ಗಳು ಬೆಂಬಿಡದೇ ಆಸೀಸ್ ಮೇಲೆ ತಮ್ಮ ಪರಾಕ್ರಮ ಮುಂದುವರಿಸಿ 39 ರನ್‌ಗಳ ಅಂತರದಲ್ಲೇ ಇನ್ನೂ 7 ವಿಕೆಟ್‌ಗಳನ್ನ ಉಡೀಸ್ ಮಾಡಿದ್ದರು. ಇದು ಆಸ್ಟ್ರೇಲಿಯಾಗೆ ದೊಡ್ಡ ಆಘಾತವಾಯಿತು. ಸ್ಫೋಟಕ ಬ್ಯಾಟ್ಸ್‌ಮ್ಯಾನ್ ಎಂದೇ ಗುರುತಿಸಿಕೊಂಡಿದ್ದ ಟ್ರಾವಿಸ್ ಹೆಡ್, ಜೋಸ್ ಇಂಗ್ಲಿಸ್…
ಬೆಂಗಳೂರು;- ಬೆಂಗಳೂರು ಸಂಚಾರಕ್ಕೆ ಬಿಎಂಟಿಸಿ ಅಥವಾ ಮೆಟ್ರೋ ಪ್ರಯಾಣ ಇದರಲ್ಲಿ ಯಾವುದು ಬೆಸ್ಟ್ ಎನ್ನುವುದಕ್ಕೆ ಇಲ್ಲಿದೆ ಉತ್ತರ. ಬೆಂಗಳೂರಿನಲ್ಲಿ ಈಗ ಎರಡು ರೀತಿಯ ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಿವೆ. ಒಂದು ಬೆಂಗಳೂರು ಮೆಟ್ರೋಪಾಲಿಟಿನ್ ಸಾರಿಗೆ ನಿಗಮ(ಬಿಎಂಟಿಸಿ) ಮತ್ತೊಂದು ನಮ್ಮ ಮೆಟ್ರೋ. ಈ ಎರಡು ಸಾರಿಗೆ ವಿಧಾನಗಳಲ್ಲಿ ಬೆಂಗಳೂರಿನ ನಾಗರೀಕರು ಯಾವುದನ್ನು ಅತಿ ಹೆಚ್ಚು ಬಳಸುತ್ತಾರೆ? ದೂರದ ಪ್ರಯಾಣ ಮತ್ತು ಹತ್ತಿರದ ಪ್ರಯಾಣಕ್ಕೆ ಯಾವ ವಿಧಾನವನ್ನು ಬಳಸುತ್ತಾರೆ ಎಂಬ ಕುತೂಹಲ ಇರಬೇಕಲ್ಲವೇ ? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ. ಒಂದು ಕಾಲದಲ್ಲಿ ದೂರದ ಪ್ರಯಾಣಕ್ಕೆ ರಾಜ್ಯ ರಾಜಧಾನಿ ಬೆಂಗಳೂರಿಗೆ ಆಗಮಿಸುವ ಸಾವಿರಾರು ನಾಗರೀಕರಿಗೆ ಬಿಎಂಟಿಸಿ ಬಸ್ ಪ್ರಯಾಣವೇ ಆಧಾರವಾಗಿತ್ತು. ನಂತರದ ದಿನಗಳಲ್ಲಿ ಆಟೋ, ಕ್ಯಾಬ್ ಓಲಾ ಉಬರ್ ಏನೆಲ್ಲಾ ಸಾರಿಗೆ ವಿಧಾನಗಳು ರಸ್ತೆಗಿಳಿದರೂ ಬಿಎಂಟಿಸಿಯನ್ನು ಹಿಂದಿಕ್ಕಲು ಸಾಧ್ಯವಾಗಿರಲಿಲ್ಲ. ಈಗಲೂ ಒಟ್ಟು ಪ್ರಯಾಣಿಕರು ಸಂಚರಿಸುವ ಅತಿ ದೊಡ್ಡ ಸಾರಿಗೆ ವಿಧಾನ ಬಿಎಂಟಿಸಿ. ಆದರೆ ದೂರದ ಪ್ರಯಾಣಕ್ಕೆ ಮೆಟ್ರೋ ಬಳಕೆ ಹೆಚ್ಚುತ್ತಿದೆ. ಶೇ.50ರಷ್ಟು ಪ್ರಯಾಣಿಕರು 4…
ಚಾಮರಾಜನಗರ: ಹಿಂದೂ ಧರ್ಮದ ಆಧಾರದ ಮೇಲೆ ನಾವು ವೀರಶೈವ ಲಿಂಗಾಯತರಾಗಿದ್ದೇವೆ. ಪಾಪ ಆ ಸ್ವಾಮೀಜಿ ನಕ್ಸಲೈಟ್ (Naxalite) ಆಗಬೇಕಿತ್ತು. ಕಮ್ಯೂನಿಸ್ಟ್ (Communist) ಆಗಿದ್ದಾರೆ. ದುರ್ದೈವ ಅವರು ಖಾವಿ ಹಾಕಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಕಿಡಿಕಾರಿದ್ದಾರೆ. ಚಾಮರಾಜನಗರ (Chamarajanagar) ಜಿಲ್ಲೆ ಬರ ಪ್ರವಾಸಕ್ಕೆ ಬಂದ ಸಂದರ್ಭದಲ್ಲಿ ಗಣಪತಿ ನಮ್ಮ ಸಂಸ್ಕೃತಿಯಲ್ಲ ಎಂಬ ಸಾಣೇಹಳ್ಳಿ ಶ್ರೀ (Sanehalli Shree) ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. https://ainlivenews.com/supreme-ray-healing-centre-reiki-treatment/ ರಾಜ್ಯೋತ್ಸವ ಪ್ರಶಸ್ತಿ ಸಲುವಾಗಿ ಕೆಲವು ಮಠಾಧೀಶರು ಹಿಂದೂ ವಿರೋಧಿ ಹೇಳಿಕೆ ಕೊಡುತ್ತಿದ್ದಾರೆ. ಮುಂದಿನ ಬಾರಿಯಾದರೂ ಕೊಡಲಿ ಎಂಬುದು ಅವರ ಉದ್ದೇಶವಾಗಿದೆ. ಈಗಾಗಲೇ ಒಬ್ಬ ಸ್ವಾಮೀಜಿಗೆ ಕೊಟ್ಟಿದ್ದಾರೆ. ಪ್ರಶಸ್ತಿ, ಜೀವನ ವೆಚ್ಚ ಎಲ್ಲವನ್ನೂ ಕೊಡುತ್ತಾರೆ ಎಂದು ಹರಿಹಾಯ್ದರು. ಹಿಂದೂ ಧರ್ಮದ ವಿರುದ್ಧ ಮಾತನಾಡಲೂ ಪೇಯ್ಡ್ ಸಾಹಿತಿಗಳಿದ್ದರೆ, ಪೇಯ್ಡ್ ಭಗವಾಧ್ವಜ ಹಾಕಿಕೊಂಡ ಕಳ್ಳರಿದ್ದಾರೆ. ಹಿಂದೂ ವಿರೋಧಿ ಹೇಳಿಕೆ ಕೊಟ್ಟರೆ ಮಠಕ್ಕೆ ಕೋಟ್ಯಂತರ ರೂ. ಅನುದಾನ ಕೊಡುತ್ತಾರೆ ಎಂಬ ನಂಬಿಕೆ. ಹೀಗಾಗಿ ಹಿಂದೂ ಸನಾತನ ಧರ್ಮದ ಬಗ್ಗೆ…
ದೃಷ್ಟಿ ಸುಧಾರಣೆಗಾಗಿ ವ್ಯಾಪಕ ಪೋಷಕಾಂಶ-ಭರಿತ ಆಹಾರಗಳನ್ನು ತಿನ್ನುವುದು ಅತ್ಯುತ್ತಮ. ಉತ್ತಮ ಆಹಾರ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಎ, ಸಿ, ಮತ್ತು ಇ, ಸತು ಮತ್ತು ಸೆಲೆನಿಯಮ್‌ನಂತಹ ಅಗತ್ಯ ಪೋಷಕಾಂಶಗಳು, ಕ್ಯಾರೊಟಿನಾಯ್ಡ್‌ಗಳಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಜೊತೆಗೆ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಅಸ್ವಸ್ಥತೆಗಳಿಂದ ರಕ್ಷಿಸುತ್ತದೆ. ಮುಖ್ಯವಾಗಿ ಸೊಪ್ಪು, ಬೀಜಗಳು, ಸಮುದ್ರಾಹಾರ ಅಂದರೆ ಮೀನು, ಏಡಿ ಮತ್ತು ಹಣ್ಣು ಮತ್ತು ತರಕಾರಿಗಳನ್ನು ತಿನ್ನುವ ಮೂಲಕ ನೀವು ಮೇಲೆ ತಿಳಿಸಿದ ಎಲ್ಲಾ ಪೋಷಕಾಂಶಗಳನ್ನು ಪಡೆಯಬಹುದು. ನಿರ್ಜಲೀಕರಣವು ಒಣ ಕಣ್ಣುಗಳು, ಕಿರಿಕಿರಿ ಮತ್ತು ದೇಹದಲ್ಲಿ ಬಳಲಿಕೆಗೆ ಕಾರಣವಾಗಬಹುದು. ಕಣ್ಣುಗಳನ್ನು ನಿರ್ಜಲೀಕರಣದಿಂದ ತಪ್ಪಿಸಲು ದಿನವಿಡೀ ಸಾಕಷ್ಟು ನೀರು ಮತ್ತು ಇತರ ದ್ರವಾಹಾರಗಳನ್ನು ಸೇವಿಸಬೇಕು. ಕುಡಿಯುವ ನೀರಿನ ಜೊತೆಗೆ, ಸೌತೆಕಾಯಿ, ಕಲ್ಲಂಗಡಿಗಳಂತಹ ಆಹಾರ ಪದಾರ್ಥಗಳು ನಿಮ್ಮ ಕಣ್ಣುಗಳನ್ನು ನಿರ್ಜಲೀಕರಣ ಸಮಸ್ಯೆಯನ್ನು ದೂರ ಮಾಡುತ್ತವೆ. ನಿಮ್ಮ ಕಣ್ಣುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕಣ್ಣಿನ ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಮ್ಮ…
ಬೆಂಗಳೂರು;- ಕರ್ನಾಟಕ ಸೇರಿ ಹಲವೆಡೆ ಚಿನ್ನ ಮತ್ತು ಬೆಳ್ಳಿ ಬೆಲೆ ಇಳಿಕೆ ಮುಂದುವರಿದಿದೆ. ಹಾಗಾದ್ರೆ ಬಂಗಾರ, ಬೆಳ್ಳಿ ದರ ಯಾವ್ಯಾವ ನಗರಗಳಲ್ಲಿ ಎಷ್ಟಿದೆ ನೋಡೋಣ ಬನ್ನಿ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,240 ರೂ. 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,450ರೂ. ಬೆಳ್ಳಿ ಬೆಲೆ 1 ಕೆಜಿ: 74,000 ರೂ. ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 56,250 ರೂಪಾಯಿ ಇತ್ತು. ಆದರೆ ಇಂದು 56,240 ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆ ಗಿಂತ 10 ರೂಪಾಯಿ ಇಳಿಕೆಯಾಗಿದೆ. ನಿನ್ನೆ ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 61.640 ರೂಪಾಯಿ ಇತ್ತು. ಆದರೆ ಇಂದು 61,360ರೂಪಾಯಿ ಆಗಿದೆ. ನಿನ್ನೆ ಇದ್ದ ಬೆಲೆ ಗಿಂತ 90 ರೂಪಾಯಿ ಇಳಿಕೆಯಾಗಿದೆ. ಒಂದೆಡೆ ಚಿನ್ನದ ಮೇಲಿನ ಹೂಡಿಕೆ ಕಡಿಮೆಯಾಗುತ್ತಿದೆ. ಇನ್ನೊಂದೆಡೆ…
ಬೆಂಗಳೂರು;- ಬಿಜೆಪಿಯಿಂದ ಬರ ಅಧ್ಯಯನ ಕೇವಲ ರಾಜಕೀಯಕ್ಕಾಗಿ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಬರ ಅಧ್ಯಯನಕ್ಕೆ ಹೋಗುತ್ತಿದ್ದಾರೆ. ಅಧ್ಯಯನ ಮಾಡಿಕೊಳ್ಳಲಿ ನಮ್ಮ ಅಭ್ಯಂತರವೇನೂ ಇಲ್ಲ. ಅವರಿಗೆ ರಾಜ್ಯದ ಜನರು, ರೈತರ ಬಗ್ಗೆ ಕಾಳಜಿ ಇದ್ದರೆ ತಮ್ಮದೇ ಪಕ್ಷದ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ರಾಜ್ಯಕ್ಕೆ ಸೂಕ್ತ ಬರ ಪರಿಹಾರದ ಹಣ ಕೊಡಿಸಲಿ ಎಂದರು. ಬಿಜೆಪಿ ನಾಯಕರ ಬರ ಅಧ್ಯಯನ ಪ್ರವಾಸ ಕುರಿತ ಪ್ರಶ್ನೆಗೆ, ಈಗಾಗಲೇ ರಾಜ್ಯಕ್ಕೆ ಕೇಂದ್ರ ಸರ್ಕಾರದ ತಂಡ ಬಂದು ರಾಜ್ಯದಲ್ಲಿ ಬರ ಅಧ್ಯಯನ ನಡೆಸಿ ಹೋಗಿದೆ. ಆ ತಂಡ ಇನ್ನೂ ವರದಿ ಕೊಟ್ಟಿಲ್ಲ. ಈಗ ಮತ್ತೆ ತಾವೇ ಬೇರೆ ಬರ ಅಧ್ಯಯನಕ್ಕೆ ಮುಂದಾಗಿರುವ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಬರ ಅಧ್ಯಯನ ತಂಡದ ವರದಿ ಕೊಡಿಸಿ ರಾಜ್ಯಕ್ಕೆ ಸೂಕ್ತ ಪರಿಹಾರದ ಹಣ ಬಿಡುಗಡೆ ಮಾಡಿಸಲಿ ಎಂದರು. ರಾಜ್ಯದ ಬರ ಪರಿಸ್ಥಿತಿಯಿಂದ…
ಬಿಗ್ ಬಾಸ್ ಮನೆಯ ಮನೆಯ ಸದಸ್ಯರು ಇದೀಗ ಐದನೇ ವಾರಕ್ಕೆ ಕಾಲಿಟ್ಟಿದ್ದಾರೆ. ಈ ನಡುವೆ ಎರಡು ತಂಡಗಳಾಗಿ ಆಟ ಆಡುತ್ತಿರುವ ಸ್ಪರ್ಧಿಗಳಲ್ಲಿ ಕೊಂಚ ವ್ಯತ್ಯಾಸಗಳು ಕಂಡುಬಂದಿರುವುದು ಇದೀಗ ವೀಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಈ ಹಿಂದೆ ವಿನಯ್ ಹಾಗೂ ಸಂಗೀತಾ ನೇತೃತ್ವದಲ್ಲಿ ಮನೆಯ ಸದಸ್ಯರು ಆಟವಾಡಿದ್ದರು. ಆದ್ರೆ, ಈ ಬಾರಿ ಅದೇ ತಂಡಗಳಿಗೆ ನಾಯಕರು ಬದಲಾಗಿದ್ದು, ವಿನಯ್ ಜಾಗಕ್ಕೆ ಸಿರಿ ಅವರು ಕ್ಯಾಪ್ಟನ್ ಆಗಿದ್ದಾರೆ. ತಮ್ಮ ತಂಡಕ್ಕೆ ‘ವಜ್ರಕಾಯ’ ಎಂದು ಹೆಸರಿಟ್ಟಿದ್ದಾರೆ. ಅವರ ನಂತರ ಸಂಗೀತಾ ಬದಲಿಗೆ ಪ್ರತಾಪ್ ತಮ್ಮ ತಂಡ ‘ಗಂಧದಗುಡಿ’ಗೆ ನಾಯಕರಾಗಿ ಆಯ್ಕೆಯಾಗಿದ್ದಾರೆ. ಈ ಎರಡು ಟೀಮ್ನ ಸದಸ್ಯರು ಇದೀಗ ಮುಂದಿನ ಸ್ಪರ್ಧೆಗಳಲ್ಲಿ ಜಿದ್ದಾಜಿದ್ದಿ ನಡೆಸಲು ಮುಂದಾಗಿದ್ದಾರೆ. ಎರಡು ತಂಡಗಳು ಹೊಸ ಹೆಸರು ಪಡೆದುಕೊಳ್ಳುವುದರ ಜತೆಗೆ ಹೊಸ ನಾಯಕರನ್ನು ಪಡೆದುಕೊಂಡಿದೆ. ಈ ಮಧ್ಯೆ ಸದಾ ಮನೆಯಲ್ಲಿ ಪ್ರೀತಿಯಿಂದ ಮಾತನಾಡುತ್ತ, ಆತ್ಮೀಯತೆಯಿಂದ ಇದ್ದ ಕಾರ್ತಿಕ್ ಹಾಗೂ ಸಂಗೀತಾ ಜೋಡಿ ಸದ್ಯ ಪರಸ್ಪರ ಕೋಪದಿಂದ ಮಾತನಾಡಿಕೊಳ್ಳುತ್ತಿದ್ದಾರೆ. ಇಬ್ಬರ ನಡುವೆ ಕೊಂಚ ಬಿರುಕು ಮೂಡಿದ್ದು,…
ಹೈದರಾಬಾದ್: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಇದೇ ಮೊದಲ ಬಾರಿಗೆ ಹೈದರಾಬಾದ್ ವಿಶ್ವವಿದ್ಯಾಲಯದ (Hyderabad University) ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಮುಸ್ಲಿಂ ವಿದ್ಯಾರ್ಥಿನಿಯನ್ನು(Muslim Student) ಕಣಕ್ಕೆ ಇಳಿಸಿದೆ. ರಸಾಯನಶಾಸ್ತ್ರದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ಶೇಖ್ ಆಯೇಷಾ (Shaik Aayesha) ಅವರು ಕಣಕ್ಕೆ ಇಳಿದಿದ್ದಾರೆ. ಇವರು ಎಸ್‌ಎಫ್‌ಐ-ಎಸ್‌ಎಸ್-ಟಿಎಸ್‌ಎ ಮೈತ್ರಿಯ ಭಾಗವಾಗಿ ಅಧ್ಯಕ್ಷ ಸ್ಥಾನಕ್ಕೆ ನಿಂತಿರುವ ಮೊಹಮಮ್ಮದ್ ಅತಿಕ್ ವಿರುದ್ಧ ಸ್ಪರ್ಧಿಸಲಿದ್ದಾರೆ. ವಿಶಾಖಪಟ್ಟಣ ಮೂಲದ 24 ವರ್ಷದ ಶೇಖ್ ಅಯೇಷಾ 2019ರಿಂದ ಎಬಿವಿಪಿ ಜೊತೆ ಸಂಪರ್ಕದಲ್ಲಿದ್ದಾರೆ. ಹೈದರಾಬಾದ್ ವಿವಿಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಮಧ್ಯೆ ನೇರ ಸ್ಪರ್ಧೆ ನಡೆಯುತ್ತಿದೆ. ನವೆಂಬರ್ 9 ರಂದು ವಿದ್ಯಾರ್ಥಿ ಸಂಘಕ್ಕೆ ಚುನಾವಣೆ ನಡೆಯಲಿದೆ. https://twitter.com/ABVPTelangana/status/1721544582008340643?ref_src=twsrc%5Etfw%7Ctwcamp%5Etweetembed%7Ctwterm%5E1721544582008340643%7Ctwgr%5E0b690f19b68e1e88c817f1064f17cb90bbf0cb4a%7Ctwcon%5Es1_&ref_url=https%3A%2F%2Fpublictv.in%2Fin-a-1st-abvp-puts-up-muslim-girl-shaik-aayesha-hyderabad-university-polls%2F ಮಾಧ್ಯಮದ ಜೊತೆ ಮಾತನಾಡಿದ ಶೇಖ್ ಅಯೇಷಾ, ರಾಷ್ಟ್ರೀಯತೆಯನ್ನು ಬೆಂಬಲಿಸುವ ಎಲ್ಲಾ ಅಲ್ಪಸಂಖ್ಯಾತರನ್ನು ಎಬಿಬಿಪಿ ಬೆಂಬಲಿಸುತ್ತದೆ. ನಾನು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಎಂಎಸ್‌ಸಿ ಓದುತ್ತಿದ್ದಾಗ ಎಬಿವಿಪಿಯ ಭಾಗವಾಗಿ ರಾಜ್ಯ ಕಾರ್ಯಕಾರಿ ಸದಸ್ಯೆಯಾಗಿ ಕೆಲಸ ಮಾಡಿದ್ದೇನೆ. ಮುಸ್ಲಿಂ ಮಹಿಳೆಯರು ನಾಯಕತ್ವ ಬೆಳೆಸಿಕೊಳ್ಳಲು…