ಮುಂಬೈ: ವಿದ್ಯಾರ್ಥಿನಿಯ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಖ್ಯಾತ ಗಾಯಕ ಸಂಜಯ್ ಚಕ್ರವರ್ತಿಯನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಖ್ಯಾತ ಗಾಯಕ ಮತ್ತು ಸಂಯೋಜಕ, ಪಂಡಿತ್ ಅಜೋಯ್ ಚಕ್ರವರ್ತಿ ಅವರ ಸಹೋದರ ಸಂಜಯ್ ಚಕ್ರವರ್ತಿಯನ್ನು ಚಾರು ಮಾರ್ಕೆಟ್ ಪೊಲೀಸ್ ತಂಡ ಮುಂಬೈನಲ್ಲಿ ಬಂಧಿಸಿದ್ದಾರೆ. ಈ ಘಟನೆಯು ಜೂನ್ ತಿಂಗಳಲ್ಲಿ ನಡೆದಿದ್ದು, ಗಾಯಕ ತಾನು ನಡೆಸುತ್ತಿದ್ದ ಗಾಯನ ಸಂಸ್ಥೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ್ದಾರೆ. ಆಕೆಯ ಪೋಷಕರು ದೂರು ನೀಡಿದ್ದಾರೆ. ಗಾಯಕ ಎಸಗಿರುವ ಆರೋಪದ ಮೇಲೆ ತನಿಖೆ ಆತನ್ನು ಬಂಧಿಸಲಾಗಿದೆ. ದೂರಿನ ಪ್ರಕಾರ, ತರಗತಿ ಮುಗಿದ ನಂತರ ಚಕ್ರವರ್ತಿ ಅಲ್ಲೇ ಉಳಿದುಕೊಂಡು ಎಲ್ಲಾ ವಿದ್ಯಾರ್ಥಿಗಳು ಹೋದ ನಂತರ, ಬಾಲಕಿಗೆ ಕಿರುಕುಳ ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. https://ainlivenews.com/good-news-for-women-from-the-central-government-free-sewing-machine-will-be-available/ ಸಂತ್ರಸ್ತೆಯನ್ನು ಆಕೆಯ ಪೋಷಕರು ಮಾನಸಿಕ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಚಿಕಿತ್ಸೆಯ ಸಮಯದಲ್ಲಿ ವಿದ್ಯಾರ್ಥಿನಿ ವೈದ್ಯರಿಗೆ ನಡೆದಂತಹ ಎಲ್ಲಾ ಘಟನೆಗಳನ್ನು ಬಹಿರಂಗಪಡಿಸಿದಳು. ನಂತರ ಆಕೆಯ ಪೋಷಕರಿಗೆ ಈ ವಿಷಯ…
Author: AIN Author
ಮೈಸೂರು:- ಮುಡಾ ಹಗರಣವು ಬಗೆದಷ್ಟು ಬಯಲಾಗುತ್ತಿದೆ. 2 ಸೈಟ್ ನೀಡಬೇಕಾಗಿದ್ದ ವ್ಯಕ್ತಿಗೆ 12 ನಿವೇಶನ ಹಂಚಿಕೆ ಮಾಡಿರೋದು ಬೆಳಕಿಗೆ ಬಂದಿದೆ. https://ainlivenews.com/deputy-lokayukta-visited-the-central-jail-inspected/ ಮಹೇಂದ್ರ ಎಂಬುವವರಿಗೆ ಸೇರಿದ 2.22 ಎಕರೆ ಭೂಮಿ ಉಪಯೋಗಿಸಿಕೊಂಡಿರುವುದಾಗಿ ಮುಡಾ ಹೇಳಿಕೊಂಡಿದೆ. ಆದರೆ, ಭೂಮಿಯನ್ನು ಸ್ವಾಧೀನಪಡಿಸಿಕೊಂಡಿರುವುದು ಎಂಬ ಮಾಹಿತಿ ಮುಡಾ ಬಳಿ ಇಲ್ಲವಂತೆ! ಆದಾಗ್ಯೂ ಅವರಿಗೆ 50-50 ಅನುಮಪಾತದಲ್ಲಿ ಸೈಟ್ಗಳನ್ನು ಹಂಚಿಕೆ ಮಾಡಲಾಗಿದೆ. ದೇವನೂರು ಗ್ರಾಮದ ಸರ್ವೆ ನಂ. 81/2 ರಲ್ಲಿ ಭೂಮಿಯನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಪಡಿಸಿಕೊಂಡಿತ್ತು. ಆದರೆ ಯಾವಾಗ ಆ ಭೂಮಿಯನ್ನು ವಶಪಡಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ ಎನ್ನುವ ಮಾಹಿತಿ ಮಾತ್ರ ಮುಡಾ ಬಳಿ ಇಲ್ಲ. ಅಷ್ಟೆ ಅಲ್ಲದೆ, ದೇವನೂರು ಗ್ರಾಮದ ಭೂಮಿಗೆ ವಿಜಯನಗರ 3 ನೇ ಹಂತದಲ್ಲಿ ನಿವೇಶನಗಳನ್ನು ನೀಡಲಾಗಿದೆ. ಪ್ರೋತ್ಸಾಹದಾಯಕ ಯೋಜನೆಯಲ್ಲಿ ಸ್ವ ಇಚ್ಛೆಯಿಂದ ಬಿಟ್ಟುಕೊಟ್ಟಿದ್ದಾರೆ ಎಂದು ಕ್ರಯ ಪತ್ರದಲ್ಲಿ ನಮೂದಿಸಲಾಗಿದೆ. ಈ ಯೋಜನೆಗೆ ನೀಡಬೇಕಿರುವುದು ಕೇವಲ 2 ಸೈಟ್ಗಳು ಮಾತ್ರ. 40*60 ಮತ್ತು 40*30 ರ 3600 ಚದರ ಅಡಿ ಮಾತ್ರ ಪರಿಹಾರ…
ಕಲಬುರಗಿ: ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ ವೀರಪ್ಪನವರು ಸೆಂಟ್ರಲ್ ಜೈಲಿಗೆ ಭೇಟಿ ನೀಡಿದ್ದಾರೆ.. https://ainlivenews.com/woman-torn-clothes-in-public-and-attacked-by-neighbors-such-perversity-in-kunda-nagari/ ಬೆಳ್ಳಂಬೆಳಗ್ಗೆ ಭೇಟಿ ನೀಡಿದ ಉಪಲೋಕಾಯುಕ್ತರು ಜೈಲಿನ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.. ಅಷ್ಟೇಅಲ್ಲ ಕೈದಿಗಳಿಂದ ನಡೆದ ಅಕ್ರಮ ಚಟುವಟಿಕೆಗಳ ಬಗ್ಗೆ ಸಮಗ್ರ ಮಾಹಿತಿ ಕಲೆಹಾಕಿದ್ದಾರೆ.. ಇದೇವೇಳೆ ಕೈದಿಗಳ ಜೊತೆಯೂ ಮಾತನಾಡಿ ಆಹಾರದ ಗುಣಮಟ್ಟವನ್ನ ಪರಿಶೀಲನೆ ನಡೆಸಿದ್ರು..
ಬೆಳಗಾವಿ:- ವೇಶ್ಯಾವಾಟಿಕೆಯ ಆರೋಪ ಹೊರಿಸಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಸಾರ್ವಜನಿಕವಾಗಿ ಬಟ್ಟೆ ಹರಿದು ಹಾಕಿರುವ ಘಟನೆ ಬೆಳಗಾವಿಯ ವಡ್ಡರವಾಡಿಯಲ್ಲಿ ಜರುಗಿದೆ. https://ainlivenews.com/railway-officials-meeting-with-jsw-representatives/ ನೆರೆ ಮನೆಯವರೇ ಹಲ್ಲೆ ಮಾಡಿದ್ದಾರೆ ಎನ್ನಲಾಗಿದ್ದು, ಕೃತ್ಯದ ವಿಡಿಯೋ ಮೊಬೈಲ್ ಫೋನ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಆರಂಭದಲ್ಲಿ ದೂರು ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದರು ಎಂಬ ಆರೋಪವೂ ಕೇಳಿ ಬಂದಿದ್ದು, ಸದ್ಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಕ್ಕದಲ್ಲಿ ವಾಸವಿರುವ ಮತ್ತೊಂದು ಕುಟುಂಬದವರು, ಮಹಿಳೆಯ ವಿರುದ್ಧ ವೇಶ್ಯಾವಾಟಿಕೆಯ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಮನೆಗೆ ನುಗ್ಗಿ ತಾಯಿ, ಮಗಳನ್ನು ಹೊರಗೆ ಎಳೆದು ತಂದು ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಸಂಬಂಧ ಇಲ್ಲದವರೆಲ್ಲಾ ಆ ಮಹಿಳೆಯರ ಮನೆಗೆ ಬಂದು ಹೋಗುತ್ತಾರೆ. ಮಹಿಳೆಯರು ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ನೆರೆ ಮನೆಯವರು ತಾಯಿ-ಮಗಳನ್ನ ಮನೆ ಬಿಡಿಸಲು ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿದ್ದು, ಸಾರ್ವಜನಿಕವಾಗಿ ಮಹಿಳೆಯ ಬಟ್ಟೆ ಹರಿದು ಹಾಕಿ ಹಲ್ಲೆ ಮಾಡಲಾಗಿದೆ.
ಹುಬ್ಬಳ್ಳಿ: ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು ಜೆಎಸ್‌ಡಬ್ಲು ಕಂಪನಿಯ ಪ್ರತಿನಿಧಿಗಳೊಂದಿಗೆ ಇಲ್ಲಿನ ರೈಲ್ ಸೌಧದಲ್ಲಿ ವ್ಯಾಪಾರ ಅಭಿವೃದ್ಧಿ ಕುರಿತು ಸಭೆ ನಡೆಸಿದರು. ಕಬ್ಬಿಣದ ಅದಿರು, ಕಲ್ಲಿದ್ದಲು ಮತ್ತು ಇತರ ವಸ್ತುಗಳ ಸಾಗಣೆ ಹಾಗೂ ಸರಕು ಸಾಗಣೆಯಲ್ಲಿನ ಸಮಸ್ಯೆ, ಲೋಡಿಂಗ್, ಅನ್‌ಲೋಡಿಂಗ್ ಹೆಚ್ಚಳ, ಮುಂದಿನ ದಿನಗಳಲ್ಲಿ ವ್ಯಾಪಾರ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. https://ainlivenews.com/guru-nanak-jayanti-special-pooja-prayer-at-gurudwara/ ಸರಕು ಸಾಗಣೆಯು ನೈರುತ್ಯ ರೈಲ್ವೆಯ ಪ್ರಮುಖ ಆದಾಯವಾಗಿದ್ದು, ಜೆಎಸ್‌ಡಬ್ಲು ಕಂಪನಿಯು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೆಎಸ್‌ಡಬ್ಲು ಕಂಪನಿಯು ಮುಂದಿನ ನಾಲ್ಕು ತಿಂಗಳಲ್ಲಿ ಸರಕು ಸಾಗಣೆ ಹೆಚ್ಚಿಸಬೇಕು. ಇದಕ್ಕೆ ನೈರುತ್ಯ ಇಲಾಖೆ ಸಂಪೂರ್ಣ ಬೆಂಬಲ ನೀಡಲಿದೆ’ ಎಂದು ಜೆಎಸ್‌ಡಬ್ಲು ಪ್ರತಿನಿಧಿಗಳಿಗೆ ಅರವಿಂದ ಶ್ರೀವಾಸ್ತವ ಭರವಸೆ ನೀಡಿದರು. ನಾಲ್ಕು ರೈಲ್ವೆ ಕೆಳಸೇತುವೆಗಳ ನಿರ್ಮಾಣ ಕುರಿತು ರೈಲ್ವೆ ಇಲಾಖೆ ಅಧಿಕಾರಿಗಳ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದ ಜೆಎಸ್‌ಡಬ್ಲು ಪ್ರತಿನಿಧಿಗಳು, ಶೀಘ್ರವೇ ಈ ಯೋಜನೆ ಕಾರ್ಯಗತಗೊಳಿಸುವುದಾಗಿ ತಿಳಿಸಿದರು. ದರೋಜಿ ರೈಲು ನಿಲ್ದಾಣ ಕಾಮಗಾರಿ, ಸಿಗ್ನಲಿಂಗ್ ಘಟಕಗಳ…
ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಗುರುದ್ವಾರದ ಗುರುಸಿಂಗ್ ಸಭಾಭವನದಲ್ಲಿ ಗುರುನಾನಕ್ ಜಯಂತಿ ಆಚರಿಸಲಾಯಿತು. https://ainlivenews.com/a-baby-boy-was-born-to-hit-man-rohit-sharma/ ಗುರುದ್ವಾರವನ್ನು ವಿವಿಧ ಬಗೆಯ ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಗುರುದ್ವಾರಕ್ಕೆ ಬೆಳಿಗ್ಗೆಯಿಂದ ರಾತ್ರಿವರೆಗೂ ಅಪಾರ ಸಂಖ್ಯೆಯಲ್ಲಿ ಸಿಖ್ಖರು ಭೇಟಿ ನೀಡಿ ಪ್ರಾರ್ಥಿಸಿದರು. ‘ಗುರು ಗ್ರಂಥ ಸಾಹೇಬ್’ ಧರ್ಮಗ್ರಂಥಕ್ಕೆ ವಿಶೇಷ ಪೂಜೆ ಸಲ್ಲಿಸಿ ನಮಿಸಿದರು. ಜಯಂತಿ ಅಂಗವಾಗಿ ನ.10ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನ.15ರಂದು ಪಂಜಾಬ್ ಅಮೃತಸರದ ಹಿರ್ದೇಜಿತ್ ಸಿಂಗ್ ಅವರು ಗುರುನಾನಕ್ ಅವರ ಕುರಿತು ಕಥೆ ವಾಚಿಸಿದರು. ಗುರುವಂತ್ ಸಿಂಗ್ ಅವರು ಕೀರ್ತನೆ ಹಾಡಿದರು. ಇದಕ್ಕೂ ಮುನ್ನ ಕವಿ ದರ್ಬಾರ್ ಹಾಗೂ ಸಂಗೀತ ಕಾರ್ಯಕ್ರಮ ನೆರೆದವರ ಗಮನ ಸೆಳೆಯಿತು.
ಹಿಟ್ ಮ್ಯಾನ್ ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನವಾಗಿದೆ. ಈ ಮೂಲಕ ರೋಹಿತ್ ದಂಪತಿ ಮನೆಗೆ ಎರಡನೇ ಅತಿಥಿಯ ಆಗಮನವಾಗಿದೆ. https://ainlivenews.com/nadita-attacked-by-darshan-fans-on-pratham-the-good-boys-post-that-raised-doubts/ ಪರ್ತ್‌ನಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ರೋಹಿತ್ ಲಭ್ಯತೆ ಸಂದೇಹವಿತ್ತು. ಆದರೆ, ಈಗ ಪತ್ನಿಗೆ ಗಂಡು ಮಗು ಜನಿಸಿದ್ದು, ಟೀಂ ಇಂಡಿಯಾ ನಾಯಕ ಶೀಘ್ರದಲ್ಲೇ ಆಸ್ಟ್ರೇಲಿಯಾಕ್ಕೆ ತೆರಳಬಹುದು ಎಂದು ಹೇಳಲಾಗಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಗೆ ರೋಹಿತ್ ಆಸ್ಟ್ರೇಲಿಯಾಕ್ಕೆ ಬರಲು ಸಾಧ್ಯವಾಗದಿದ್ದರೆ ಜಸ್ಪ್ರೀತ್ ಬುಮ್ರಾ ತಂಡವನ್ನು ಮುನ್ನಡೆಸುವುದು ಖಚಿತವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ಸ್ವದೇಶದಲ್ಲೇ ಟೀಂ ಇಂಡಿಯಾ ವೈಟ್‌ವಾಶ್ ಅನುಭವಿಸಿತು. WTC ಫೈನಲ್‌ಗೆ ಅರ್ಹತೆ ಪಡೆಯಲು ಮೆನ್ ಇನ್ ಬ್ಲೂ ಆಸ್ಟ್ರೇಲಿಯಾದಲ್ಲಿ ನಾಲ್ಕು ಅಥವಾ ಹೆಚ್ಚಿನ ಪಂದ್ಯಗಳನ್ನು ಗೆಲ್ಲುವ ಅಗತ್ಯವಿದೆ. ಕ್ರಿಕೆಟಿಗ ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನಿಸಿರುವುದಕ್ಕೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ‘ಜೂನಿಯರ್ ಹಿಟ್‌ಮ್ಯಾನ್‌ನ ಜನ್ಮಕ್ಕಾಗಿ ಕ್ಯಾಪ್ಟನ್ ಹಿಟ್‌ಮ್ಯಾನ್‌ಗೆ ಅಭಿನಂದನೆಗಳು ಎಂದಿದ್ದಾರೆ.
ಬೆಂಗಳೂರು: ಪ್ರಥಮ್ ಮೇಲೆ ದರ್ಶನ್ ಫ್ಯಾನ್ಸ್ ನಿಂದ ಹಲ್ಲೆ ನಡೀತಾ ಎಂಬ ಅನುಮಾನ ಮೂಡಿದೆ. ಇದೀಗ ಪ್ರಥಮ್ ಅವರು ಮಾಡಿರುವ ಒಂದು ಪೋಸ್ಟ್ ಈ ಅನುಮಾನಕ್ಕೆ ಕಾರಣವಾಗಿದೆ. https://ainlivenews.com/8-people-travel-with-bed-and-pillow-on-one-bike-riot-cop/ ನಿಗೂಢವಾಗಿಯೇ ಪ್ರಥಮ್ ಪೋಸ್ಟ್ ಹಾಕಿದ್ದು, ಹೋಟೆಲ್ ನಲ್ಲಿ ಪ್ರಥಮ್ ಮೇಲೆ ಅಟ್ಯಾಕ್ ಆಯ್ತಾ ಎಂಬ ಗುಮಾನಿ ಮೂಡಿದೆ. ನಮ್ಮ ಪಾಡಿಗೆ ನಾವಿದ್ದೇವೆ, ನಿಮ್ಮ ಪಾಡಿಗೆ ನೀವಿರಿ. ದರ್ಶನ್ ಸರ್ ಅವರ ಪಾಡಿಗೆ ಅವರಿದ್ದಾರೆ. ಮಿನಿ ಗೂಂಡಾಗಳ ನಿಗರಾಟ ನೋಡೋಕೆ ಆಗ್ತಿಲ್ಲ. ಹೋಟೆಲ್ CCTV ಇದೆ, ಮುಂದುವರೆದರೆ ನಾನು ಸುಮ್ಮನೆ ಕೂರಲ್ಲ. ಹೋಟೆಲ್ ಸಿಬ್ಬಂದಿ ಮನವಿಯ ಮೇರೆಗೆ ದೂರು ಕೊಡದಿರಲು ಒಳ್ಳೆ ಹುಡುಗ ಪ್ರಥಮ್ ನಿರ್ಧಾರ ಮಾಡಿದ್ದಾರೆ. ಸದ್ಯಕ್ಕೆ ನಟ ದರ್ಶನ್ ಹೆಲ್ತ್ ಬೇಲ್ ಮೇಲಿದ್ದು, ಹಲವು ದಿನಗಳ ಹಿಂದೆ ದರ್ಶನ್ ಫ್ಯಾನ್ಸ್ ಗೆ ಪ್ರಥಮ್ ಬುದ್ಧಿ ಹೇಳಿದ್ದರು.
ನಮ್ಮ ಇಂಡಿಯಾ ಅಂದ್ರೆ ಸುಮ್ನೇನಾ ಮರ್ರೆ. ಇನ್ನಿಲ್ಲದ ಹೊಸ ಪ್ರಯೋಗ, ಹೊಸ ಸಾಹಸ, ನಮ್ಮ ಜನ ಆಗಾಗ ಮಾಡುತ್ತಿರುತ್ತಾರೆ. ಅದರಂತೆ ಇಲ್ಲೊಬ್ಬ ಪುಣ್ಯಾತ್ಮ ಹಾಸಿಗೆ ದಿಂಬು ಸೇರಿ ತನ್ನ ಇಡೀ ಕುಟುಂಬವನ್ನೇ ಒಂದೇ ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿರುವ ಘಟನೆ ಜರುಗಿದೆ. ಇನ್ನೂ ಇದನ್ನು ನೋಡಿದ ಪೊಲೀಸರೇ ಶಾಕ್ ಆಗಿದ್ದಾರೆ. https://ainlivenews.com/hospital-fire-accident-10-children-burnt-alive-in-uttar-pradesh/ ಒಂದೇ ಕುಟುಂಬದ 8 ಜನ ಒಂದೇ ಬೈಕ್ನಲ್ಲಿ ಪ್ರಯಾಣಿಸುತ್ತಿದ್ರು. ಅಲ್ಲದೇ ತಮ್ಮ ಜೊತೆಗೆ ಹಾಸಿಗೆ, ಟೆಂಟ್ ಸೇರಿದಂತೆ ಕೆಲ ವಸ್ತುಗಳನ್ನ ಸಹ ಸಾಗಿಸುತ್ತಿದ್ರು. ಯಾರೂ ಕೂಡ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ಟ್ರಾಫಿಕ್ ಸಬ್ ಇನ್ಸ್ ಪೆಕ್ಟರ್ ದಿನೇಶ್ ಪಟೇಲ್ ಬೈಕ್ ಅಡ್ಡಗಟ್ಟಿ ಟ್ರಾಫಿಕ್ ಸುರಕ್ಷತೆಯ ಬಗ್ಗೆ ಎಚ್ಚರಿಕೆ ನೀಡಿ ಬಿಟ್ಟು ಕಳಿಸಿಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗ್ತಿದೆ.
ಲಕ್ನೋ:- ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಬೆಂಕಿ 10 ಮಕ್ಕಳು ಸಜೀವ ದಹನ ಆಗಿರುವ ದಾರುಣ ಘಟನೆ ಉತ್ತರ ಪ್ರದೇಶದಲ್ಲಿ ಜರುಗಿದೆ. https://ainlivenews.com/breaking-news-bike-taxi-rider-bullied-by-rickshaw-driver/ ಝಾನ್ಸಿಯ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳಕ್ಕೆ ತಲುಪುವ ಮೊದಲೇ ಹೊಗೆ ತುಂಬಿದ ವಾರ್ಡ್‌ನ ಕಿಟಕಿಗಳನ್ನು ಒಡೆದು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ರೋಗಿಗಳನ್ನು ಸ್ಥಳಾಂತರಿಸಿದ್ದಾರೆ. ವಾರ್ಡ್‌ನಲ್ಲಿದ್ದ ಸಿಬ್ಬಂದಿ ಪ್ರಕಾರ, ರಾತ್ರಿ 10:35 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ 10 ಮಕ್ಕಳು ಸಾವನ್ನಪ್ಪಿದ್ದಾರೆ. ಮೂವತ್ತೇಳು ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಮಕ್ಕಳ ವಾರ್ಡ್‌ನ ಎರಡು ಘಟಕಗಳ ಪೈಕಿ ಒಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಪ್ರಕರಣದ ತನಿಖೆಗೆ ಕ್ರಮವಹಿಸಲಾಗಿದೆ ಎಂದು ಝಾನ್ಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವಿನಾಶ್ ಕುಮಾರ್ ತಿಳಿಸಿದ್ದಾರೆ. ಘಟನೆಯ ವೇಳೆ ಎನ್‌ಐಸಿಯುನಲ್ಲಿ ಒಟ್ಟು 54 ಮಕ್ಕಳನ್ನು ದಾಖಲಿಸಲಾಗಿದ್ದು, 44 ಮಕ್ಕಳನ್ನು ರಕ್ಷಿಸಲಾಗಿದೆ. ಬಲಿಯಾದವರ ಪೈಕಿ ಏಳು ಮಕ್ಕಳನ್ನು ಗುರುತಿಸಲಾಗಿದೆ.