ಚಿಕ್ಕಬಳ್ಳಾಪುರ: KSRTC ಬಸ್ ಹಾಗೂ ಮಿನಿ ಬಸ್ ನಡುವೆ ಭೀಕರ ಅಪಘಾತ (Road accident) ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಸಾವು ಮೂವರ ಸ್ಥಿತಿ ಗಂಭೀರ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಚಿನ್ನಸಂದ್ರ ಗೇಟ್ ಬಳಿ ಘಟನೆ ನಡೆದಿದೆ. ಮಿನಿ ಬಸ್‌ನಲ್ಲಿದ್ದ ಒಬ್ಬ ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. https://ainlivenews.com/knee-pain-treatment-joint-pain-treatment/ ಗಾಯಾಳುಗಳನ್ನು ಚಿಂತಾಮಣಿಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತದ ರಭಸಕ್ಕೆ ಮಿನಿ ಬಸ್ ನಜ್ಜುಗುಜ್ಜಾಗಿ ಛಿದ್ರ ಛಿದ್ರವಾಗಿದೆ. ಕೈವಾರ ಮೂಲದ ಇಲ್ಲು (40) ಮೃತ ವ್ಯಕ್ತಿ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಿಂದಾಗಿ ಚಿಂತಾಮಣಿ – ಬೆಂಗಳೂರು ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತು.
Author: AIN Author
ಬೆಂಗಳೂರು: ಉಸಿರುಗಟ್ಟಿಸಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೂಡ್ಲು ಬಳಿಯ ನಂಜಾರೆಡ್ಡಿ ಲೇಔಟ್ ನಲ್ಲಿ ನಡೆದಿದೆ. ಅನುರಾಧ ಅಲಿಯಾಸ್ ಅಲೀಮಾ ಅಸಹಜ ರೀತಿಯಲ್ಲಿ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ರಾಜಶೇಖರ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿ, ಆರಂಭದಲ್ಲಿ ಈ ಘಟನೆ ಸಂಬಂಧಿಸಿ ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೇ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂಬ ಸಾವಿನ ಸಿಕ್ರೇಟ್ ಬಯಲಾಗಿದೆ. ರಾಜಶೇಖರನ ಜೊತೆ ಅನುರಾಧ ಎರಡನೇ ಮದುವೆಯಾಗಿದ್ದಳು. ರಾಜಶೇಖರಗೆ ಬೇರೊಬ್ಬ ಮಹಿಳೆ ಜೊತೆಗೆ ಸಂಬಂಧ ಇದೆ ಅನ್ನೋ ವಿಚಾರಕ್ಕೆ ಗಲಾಟೆ ತೀವ್ರಗೊಂಡು, ಕೈಗಳಿಂದ ಕುತ್ತಿಗೆ ಹಿಸುಕಿ ನಂತರ ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಅವನೇ ಮಹಿಳೆಯನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಪೊಲೀಸ್ ಠಾಣೆಗೆ ಅಗಮಿಸಿದ ಆರೋಪಿ ಆತ್ಮಹತ್ಯೆ ಎಂದು ಪೊಲೀಸರನ್ನು ನಂಬಿಸಿದ್ದಾನೆ. ಇದರ ಪ್ರಕಾರ ಪರಪ್ಪನ ಅಗ್ರಹಾರ ಪೊಲೀಸರು ಆತ್ಮಹತ್ಯೆ ಪ್ರಕರಣ ಎಂದು ದಾಖಲು ಮಾಡಿಕೊಂಡಿದ್ದರು. ಮರಣೋತ್ತರ ಪರೀಕ್ಷೆ ವರದಿ…
ಉಡುಪಿ: ಉಡುಪಿ ನಗರದ ಬನ್ನಂಜೆ ಜಯಲಕ್ಷ್ಮಿ ಸಿಲ್ಕ್ಸ್ ಎದುರು ನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು ಇಂದು ಒಂದು ಗಂಟೆ ಕಾಲ ಹೈಡ್ರಾಮ ನಡೆಯಿತು. ಆಟೋ ಚಾಲಕರೊಬ್ಬರು ಅಂಗಡಿ ಮುಂಭಾಗದಲ್ಲಿ ಆಟೋ ನಿಲ್ಲಿಸಿದಾಗ ಜಯಲಕ್ಷ್ಮೀ ಸಿಲ್ಕ್ಸ್ ನ ಮಾಲೀಕರೇ ಬಂದು ಅಟೋ ಚಾಲಕನ ಕೀ ಕಿತ್ತುಕೊಂಡ ಬಳಿಕ ಈ ಡ್ರಾಮಾ ಪ್ರಾರಂಭಗೊಂಡಿತು. ಕೀ ಕಿತ್ತುಕೊಂಡ ಬಳಿಕ ಎರಡು ವಾಹನಗಳನ್ನು ಅಟೋ ತೆಗೆಯದಂತೆ ಅಡ್ಡವಾಗಿ ಇಡಲಾಯಿತು ಎಂದು ಆಟೋ ಚಾಲಕ ಆರೋಪಿಸಿದ್ದಾರೆ. https://ainlivenews.com/knee-pain-treatment-joint-pain-treatment/ ಈ ಘಟನೆ ಬಳಿಕ ಬನ್ನಂಜೆ ರಸ್ತೆಯಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಆಯ್ತು.ಆಟೋ ಚಾಲಕರು ಸ್ಥಳದಲ್ಲಿ ಸೇರಿ ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರಿಗೆ ಕರೆ ಮಾಡಿದರೂ ಪರಿಸ್ಥಿತಿ ಸರಿ ದಾರಿಗೆ ಬಂದಿರಲಿಲ್ಲ. ಇಲ್ಲಿ ನಿತ್ಯ ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆಟೋ ಚಾಲಕರು ಆರೋಪಿಸಿದರು. ಪೊಲೀಸರು ಸ್ಥಳಕ್ಕೆ ಬಂದ ಬಳಿಕ ಅವರನ್ನು ಸಮಾಧಾನಪಡಿಸಲಾಯಿತು. ಘಟನೆಯಿಂದ ಆಕ್ರೋಶಗೊಂಡಿರುವ ಆಟೋ ಚಾಲಕರು ಎಸ್ಪಿಗೆ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.
ಬೆಂಗಳೂರು: ಕಾರ್ಮಿಕರ (Labours) ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು, ಅದಕ್ಕಾಗಿ 9.60 ಲಕ್ಷ ಮಕ್ಕಳಿಗೆ ಕಲ್ಯಾಣ ನಿಧಿ ಮೂಲಕ ಸಹಾಯಧನ ಬಿಡುಗಡೆ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದ್ದಾರೆ. ವಿಧಾನಸೌಧದ (Vidhana Soudha) ಕಾರ್ಮಿಕ ಇಲಾಖೆಯ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2022-23ನೇ ಸಾಲಿನ ಶೈಕ್ಷಣಿಕ ಧನ ಸಹಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಪ್ರಕಾರ ಪ್ರತಿಯೊಬ್ಬರೂ ಸಮಾಜದ ಸಂಪತ್ತಿನಲ್ಲಿ ಸಮಪಾಲು ಹೊಂದಬೇಕು. ಹೀಗಾಗಿ ನಾವು ಕಾರ್ಮಿಕರ ಮಕ್ಕಳಿಗೆ ಈ ರೀತಿಯ ಕಾರ್ಯಕ್ರಮಗಳನ್ನ ರೂಪಿಸಿದ್ದೇವೆ. ಇದರಿಂದ ಸಮ ಸಮಾಜದ ಆಶಯಗಳನ್ನ ಜಾರಿಗೊಳಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು ಶೂದ್ರ ಮತ್ತು ಮಹಿಳೆಯರನ್ನು ಶತ-ಶತಮಾನಗಳ ಕಾಲ ಶಿಕ್ಷಣದಿಂದ (Education) ವಂಚಿತರನ್ನಾಗಿ ಮಾಡಲಾಗಿತ್ತು. ಈ ಕಾರಣಕ್ಕೇ ಶೂದ್ರ ವರ್ಗಗಳು ಹಿಂದುಳಿಯುವಂತಾಯಿತು, ಅಸಮಾನತೆ ಹೆಚ್ಚಾಯಿತು. ಈ ಅಸಮಾನತೆ ಅಳಿಸುವ ಉದ್ದೇಶ ನಮ್ಮ ಸರ್ಕಾರದ್ದು. ಅದಕ್ಕಾಗಿ 9.60 ಲಕ್ಷ ಮಕ್ಕಳಿಗೆ ಕಲ್ಯಾಣ ನಿಧಿ ಮೂಲಕ ಸಹಾಯಧನ ಬಿಡುಗಡೆ…
ಬೆಂಗಳೂರು: ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸುಮಾರು 126 ಕೋಟಿ ರೂ. ಅನುದಾನವನ್ನು (Grant) ನಮ್ಮ ಸರ್ಕಾರ (BJP) ಮಂಜೂರಾತಿ ಮಾಡಿ ಆದೇಶ ಹೊರಡಿಸಿದ್ದ ಕಾಮಗಾರಿಗಳನ್ನು ರದ್ದುಪಡಿಸಿ, 126 ಕೋಟಿ ಹಣವನ್ನು ಬೇರೆ ಕ್ಷೇತ್ರಕ್ಕೆ ವರ್ಗಾವಣೆ ಮಾಡಿದ್ದಾರೆ. ಸತ್ಯಾಗ್ರಹ ಮಾಡಿ ಮನವಿ ಮಾಡಿದರೂ ಸಹ ಈವರೆಗೆ ಕ್ಷೇತ್ರದ 126 ಕೋಟಿ ಅನುದಾನ ನನಗೆ ಹಿಂತಿರುಗಿಸಿಲ್ಲ ಎಂದು ಶಾಸಕ ಮುನಿರತ್ನ (Munirathna) ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು (BS Yediyurappa) ನನ್ನ ಬಳಿ ಅನುದಾನ ಹಿಂತಿರುಗಿಸಿದ್ದಾರ ಎಂದು ಕೇಳಿದ ಸಂದರ್ಭ ನಾನು ಇಲ್ಲ ಎಂದು ಹೇಳಿದ್ದೆ. ನಾನು ಕಾಮಗಾರಿಗಳನ್ನು (Work) ವೀಕ್ಷಣೆ ಮಾಡುತ್ತೇನೆ. ಕಾಮಗಾರಿ ವೀಕ್ಷಣೆಗೆ ದಿನಾಂಕ ನಿಗದಿ ಮಾಡುವಂತೆ ಯಡಿಯೂರಪ್ಪ ಸೂಚಿಸಿದ್ದರು. ಅದರ ಪ್ರಕಾರ ಇವತ್ತು ವೀಕ್ಷಣೆ ಮಾಡಿದ್ದಾರೆ ಎಂದರು. ನಮ್ಮ ಕ್ಷೇತ್ರದ ಅನುದಾನ ಹಿಂತಿರುಗಿಸುವಂತೆ ಸಂಸದ ಡಿಕೆ ಸುರೇಶ್ (DK Suresh) ಅವರಿಗೆ ಮನವಿ ಮಾಡುತ್ತೇನೆ. ಯಾವ ಕಾಮಗಾರಿಗೆ ನಾವು ಅನುದಾನ ತಂದಿದ್ದೆವೋ ಅದನ್ನು ಮತ್ತೆ ನಮಗೆ…
ಬೆಂಗಳೂರು: ರೈತರಿಗೆ ಹೊಸ ವಿದ್ಯುತ್ ಸಂಪರ್ಕಕ್ಕೆ ಕೊಡಲಾಗುತ್ತಿದ್ದ ಸಬ್ಸಿಡಿಗೆ ಕತ್ತರಿ ಹಾಕಿರುವ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ಪೊಳ್ಳು ಗ್ಯಾರಂಟಿಗಳ ಮೂಲಕ ದೀಪಾವಳಿ ಹೊತ್ತಿಗೆ ರಾಜ್ಯವನ್ನು ದಿವಾಳಿ ಅಂಚಿಗೆ ನೂಕಿರುವ ಸರಕಾರ, ರೈತರ ಮೇಲೆಯೂ ವಕ್ರದೃಷ್ಟಿ ಬೀರಿದೆ. ಬರ, ವಿದ್ಯುತ್ ಕ್ಷಾಮದಿಂದ ಕಂಗೆಟ್ಟು ಹೋಗಿರುವ ಅನ್ನದಾತರಿಗೆ ಮತ್ತೊಂದು ಬರೆ ಎಳೆದು, ತಾನು ರೈತದ್ರೋಹಿ ಎಂದು ಸಾಬೀತು ಮಾಡಿಕೊಂಡಿದೆ ಎಂದು ಕಿಡಿಕಾರಿದ್ದಾರೆ. ‘ಗ್ಯಾರಂಟಿಗಳಿಗೆ ಪ್ರಚಾರ ಜಾಸ್ತಿ, ಅಭಿವೃದ್ದಿಗೆ ಹಣ ನಾಸ್ತಿ’ ಎನ್ನುವ ಪರಿಸ್ಥಿತಿ ರಾಜ್ಯದಲ್ಲಿ ತಲೆದೋರಿದೆ. ರೈತರಿಗೆ ಹೊಸ ವಿದ್ಯುತ್ ಸಂಪರ್ಕಕ್ಕೆ ಕೊಡುತ್ತಿದ್ದ ಸಬ್ಸಿಡಿಗೆ ಕಾಂಗ್ರೆಸ್ ಸರಕಾರ ಕತ್ತರಿ ಹಾಕಿದೆ ಎನ್ನುವ ಸರಕಾರಿ ಆದೇಶ ನೋಡಿ ನನಗೆ ತೀವ್ರ ಆಘಾತ ಉಂಟಾಯಿತು. ಕೇಡುಗಾಲಕ್ಕೆ ಕೋಳಿಯು ಮೊಟ್ಟೆ ಬದಲು ಮರಿಯನ್ನೇ ಹಾಕಿತು ಎನ್ನುವ ಹಾಗೆ ಕಾಂಗ್ರೆಸ್ ಸರಕಾರ ಎರಡು ಕೈಗಳಿಂದಲೂ ರೈತರ ಮೇಲೆ ಮಣ್ಣು ಹಾಕುತ್ತಿದೆ ಎಂದು…
ಹಾಸನ: ರಾಜ್ಯ ಸರಕಾರವು ಮೊದಲು ಕಚ್ಚಾಟ ನಿಲ್ಲಿಸಿ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಕೊಡಬೇಕು. ಇಲ್ಲವಾದರೇ ರೈತರು ಬೀದಿಗಿಳಿದು ಹೋರಾಟ ಮಾಡುವ ಮೊದಲೆ ಎಚ್ಚೆತ್ತುಕೊಳ್ಳಿ ಎಂದು ಲೋಕಾಸಭಾ ಸದಸ್ಯರಾದ ಡಿ.ವಿ. ಸದಾನಂದಗೌಡ ಸಲಹೆ ನೀಡಿ ಎಚ್ಚರಿಸಿದರು. ಹಾಸನ ಜಿಲ್ಲೆಯಲ್ಲಿ ಬರ ವಿಕ್ಷಣೆ ಮಾಡಿ ಅಧ್ಯಯನ ಮುಗಿಸಿದ ನಂತರ ನಗರದ ಖಾಸಗೀಹೋಟೆಲೊಂದರಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಜನರ ಬೇಡಿಕೆ ಈಡೇರಿಸಲು ಆಗುತ್ತಿಲ್ಲ. ಒಬ್ಬ ಸಿಎಂ ಅಧಿಕಾರಿಗಳ ಸಭೆಯಲ್ಲಿ ಹೇಳಿದರೂ ಯಾವುದೇ ವಿಷಯಗಳಿಗೆ ಕಿಮ್ಮತ್ತಿಲ್ಲ. ಶೇಕಡ ೮೦ ರಷ್ಟು ಬೆಳೆ ಹಾನಿ ಆಗಿದೆ. ಬರ ಪರಿಹಾರದ ವಿಚಾರದಲ್ಲಿ ರಾಜ್ಯ ಸರ್ಕಾರದ ಯಾವ ಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಹಾಸನ ಜಿಲ್ಲೆಗೆ ಬರಪರಿಹಾರದ ಹಣ ೧೨ ಕೋಟಿ ರೂ ರಿಲೀಸ್ ಆಗಿದೆ. ಆದ್ರೆ ಜಿಲ್ಲಾಡಳಿತಕ್ಕೆ ಸರ್ಕಾರ ಸರಿಯಾಗಿ ಮಾರ್ಗದರ್ಶನ ನೀಡದ ಹಿನ್ನೆಲೆ ಅನುದಾನ ಪ್ರಯೋಜನ ಆಗುತ್ತಿಲ್ಲ. ಕನಿಷ್ಠ ಕಾಳಜಿಯಾದರೂ ಸರ್ಕಾರಕ್ಕೆ ಬೇಕು ಎಂದರು.ರೈತರ ಆತ್ಮಹತ್ಯೆ, ಹಾವು ಕಚ್ಚಿ ಸತ್ತವರಿಗೆ ರಾಜ್ಯ ಸರ್ಕಾರ ಈ ವರಗೆ…
ಧಾರವಾಡ: ಸಚಿವ ಹೆಚ್‌ಸಿ ಮಹದೇವಪ್ಪ ಅವರು ಅಂಗರಕ್ಷಕನಿಂದ ಶೂ ಹಾಕಿಸಿಕೊಂಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಈ ವಿಚಾರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಬಳಿಕ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಧಾರವಾಡದಲ್ಲಿ ಈ ಬಗ್ಗೆ ಮಾತನಾಡಿದ ಅವರು, ನಂಜನಗೂಡು ಉಪಚುನಾವಣೆಯಲ್ಲಿ ನನಗೆ ಸೊಂಟಕ್ಕೆ ಪೆಟ್ಟಾಗಿತ್ತು. ಒಳಗಡೆ ಕೀವಾಗಿ ಕಾಲು ಅಲುಗಾಡಿಸದಂತಾಗಿತ್ತು. ಅಂದಿನಿಂದ ಸಮಸ್ಯೆ ಇದೆ. ಹೀಗಾಗಿ ಅಂಗರಕ್ಷಕನಿಂದ ಶೂ ಹಾಕಿಸಿಕೊಂಡಿರುವುದಾಗಿ ಸಮರ್ಥನೆ ನೀಡಿದ್ದಾರೆ. ಈ ಬಗ್ಗೆ ವಿವರಿಸಿದ ಅವರು, ಕುಳಿತರೆ ಬೇಗ ಏಳಲು ಆಗೋದಿಲ್ಲ, ಬಗ್ಗಲು ಕೂಡ ಸಾಧ್ಯವಾಗೋದಿಲ್ಲ. ಎಷ್ಟೋ ಜನ ಕಾಲು ಮುಂದಕ್ಕೆ ಇಟ್ಟು ನಮಸ್ಕಾರ ಮಾಡಿಸಿಕೊಳ್ಳೋರಿದ್ದಾರೆ. ಹಾಗೆ ನಾನು ಮಾಡುವವನಲ್ಲ. ನೀವು ಇದನ್ನು ಗಮನಿಸಿದ್ದು ಸಂತಸ ತಂದಿದೆ. ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿದಂತಾಗುತ್ತದೆ ಎಂದು ಹೇಳಿದರು. https://ainlivenews.com/knee-pain-treatment-joint-pain-treatment/ ಆಪರೇಷನ್ ಕಮಲ ಬಗ್ಗೆ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿದ ಮಹದೇವಪ್ಪ, ನಮ್ಮ ಅಧ್ಯಕ್ಷರಿಗೆ ಮಾಹಿತಿ ಇರುತ್ತೆ. ಹೀಗಾಗಿ ಅವರು ಹೇಳಿರುತ್ತಾರೆ. ನಾನು ಅಧಿಕಾರಿಗಳ ಸಭೆಯಲ್ಲಿದ್ದೇನೆ. ಹೀಗಾಗಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.…
ಬೆಂಗಳೂರು: ಕೃಷಿ ಭೂಮಿಗೆ ಖಾತಾ ಪೋಡಿ ಮಾಡಿಕೊಡಲು $28 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮಹದೇವಪುರ ಆರ್ಐ ವಸಂತ್ ಅವರು ಬೆಂಗಳೂರಿನಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಆರ್ಐ ವಸಂತ್ ಅವರು ಈಗಾಗಲೇ 3.5 ಲಕ್ಷ ಹಣ, 4 ಲಕ್ಷದ ಚೆಕ್ ಪಡೆದಿದ್ದಾರೆ. ನಿನ್ನೆ ಸಂಜೆ 4 ಲಕ್ಷ ರೂ. ಪಡೆಯುವಾಗ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ವಸಂತ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ವಸಂತ್ ಮನೆಯಲ್ಲಿದ್ದ 9 ಲಕ್ಷ ಹಣ ವಶಕ್ಕೆ ಪಡೆದಿದ್ದಾರೆ. ಬಂಧಿತ ಅಧಿಕಾರಿಯನ್ನು ವಸಂತ್ ಎಂದು ಗುರುತಿಸಲಾಗಿದೆ. ಆತ ಈ ಮೊದಲೇ ಚೆಕ್‍ನಲ್ಲಿ 4 ಲಕ್ಷ ರೂ. ಹಣವನ್ನು ಚೆಕ್‍ನಲ್ಲಿ ಪಡೆದಿದ್ದ ಎಂದು ತಿಳಿದು ಬಂದಿದೆ. ಬುಧವಾರ ಖಾಸಗಿ ಹೋಟೆಲ್‍ನಲ್ಲಿ 3.5 ಲಕ್ಷ ರೂ. ಪಡೆಯುತ್ತಿದ್ದ ವೇಳೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಖಾತೆ ಪೋಡಿ ಮಾಡಿ ಕೊಡಲು 28 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಎಂದು ತಿಳಿದು ಬಂದಿದೆ ವಿಚಾರಣೆ ವೇಳೆ ಹಣವನ್ನು ಮನೆಯಲ್ಲಿ ಇಟ್ಟಿರುವುದಾಗಿ ವಸಂತ್ ಹೇಳಿದ್ದಾನೆ.…
ಬೆಂಗಳೂರು: ಕಿಯೋನಿಕ್ಸ್ ಅವ್ಯವಹಾರದ ಬಗ್ಗೆ ನಾವು ತನಿಖೆ ಮಾಡಿಸುತ್ತೇವೆ. ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖೆ ಮಾಡಿಸುತ್ತೇವೆ ಎಂದು ಬೆಂಗಳೂರಿನಲ್ಲಿ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.ಪ್ರತಿಯೊಂದು ಕಾನೂನು ಪ್ರಕಾರವೇ ಮಾಡಲು ಹೊರಟಿದ್ದೇವೆ.ಎಜಿ ರಿಪೋರ್ಟ್ ಪ್ರಕಾರ 500 ಕೋಟಿ ಅವ್ಯವಹಾರ ನಡೆದಿದೆ. ಪೇಮೆಂಟ್ ಮಾಡಿ ಅಂತಾ ಬಿಜೆಪಿ ಹೇಳೋದು ಇದಕ್ಕೇನಾ? ಪರಿಶೀಲನೆ ಮಾಡದೆ ನಾವು ಬಿಲ್ ಕೊಡಬೇಕಾ? ನಮ್ಮದು ಆಳುವ ಸರ್ಕಾರ ಅಲ್ಲ, ಆಲಿಸುವ ಸರ್ಕಾರ. ತನಿಖೆಯಲ್ಲಿ ಅಕ್ರಮ ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು. ಪಿಎಸ್ ಐ ನೇಮಕಾತಿ ಪ್ರಕರಣ ವಿಚಾರ ಬಗ್ಗೆಯೂ ಮಾತನಾಡಿದ ಅವರು, ಪಿಎಸ್ ಐ ಪ್ರಕರಣದಲ್ಲಿ ಏನು ಮಾಡಿದ್ರು ಅಕ್ರಮವೇ ಆಗಿಲ್ಲ ಅಂದ್ರು ಸದನದಲ್ಲೇ ತಪ್ಪು ಉತ್ತರ ಕೊಟ್ರಲ್ಲ ಒಬ್ಬ ಆರೋಪಿಯನ್ನ ಒಬ್ಬರು ಬಿಡಿಸಿದ್ರಲ್ಲ ಯಾರು ಬಿಡಿಸಿದ್ದು ಯಾರು ಹೇಳಿ ಪರೋಕ್ಷವಾಗಿ ಅಶ್ವಥ್ ನಾರಾಯಣ್ ವಿರುದ್ಧ ವಾಗ್ದಾಳಿ ಆರ್ ಡಿ ಪಾಟೀಲ್ ಎಸ್ಕೇಪ್ ವಿಚಾರ ಬಗ್ಗೆ ಮಾತನಾಡಿ ಅಧಿಕಾರಿಗಳ ತಪ್ಪಿದ್ರೂ ಕ್ರಮ ಜರುಗಿಸ್ತೇವೆ ಪೊಲೀಸರು ಮಫ್ತಿಯಲ್ಲಿ ಹೋಗಿದ್ದರು ಪಾಟೀಲ್…