ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಧಾರಕಾರ ಮಳೆ ಹಳ್ಳದಂತದ ರಸ್ತೆಗಳು ಮಹಾನಗರ ಪಾಲಿಕೆ ವಿರುದ್ದ ಜನರ ಆಕ್ರೋಶ… ಸಿಲಿಕಾನ್ ಸಿಟಿ ಬೆಂಗಳೂರಿನ ಸಹಕಾರ ನಗರ ಯಲಹಂಕ ಕೋಗಿಲು ಕ್ರಾಸ್ ಬಳಿ ಧಾರಕಾರ ಮಳೆ ಸುರಿದಿದ್ದು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಆವಾಂತರ ಸೃಷ್ಟಿಸಿದೆ. ಇಲ್ಲಿನ ಪ್ರಮುಖ ರಸ್ತೆಗಳೆಲ್ಲವು ಹಳ್ಳಗಳಂತಗಿದ್ದು ಜನರು ರಸ್ತೆಯಲ್ಲಿ ಓಡಾಡಲು ಪರದಾಡುವ ಪರಿಸ್ಥಿತಿ ಉಂಟಾಗಿತ್ತು,.. ಇನ್ನೂ ಸರಿಯಾದ ಸಮಯದಲ್ಲಿ ಬಿಬಿಎಂಪಿ ಆಧಿಕಾರಿಗಳು ಬಂದು ಕಾರ್ಯನಿರ್ವಯಿಸದಿದ್ದರಿಂದ ಜನರು ನಡುರಸ್ತೆಯಲ್ಲಿ ಸಿಲುಕಿಕೊಂಢು ಪರದಾಡುವ ಪರಿಸ್ಥಿತಿ ಉಂಟಾಯಿತು ರಸ್ತೆ ಕಾಣದೆ ಕಪೌಂಡ್ ಜಿಗಿದು ರಸ್ತೆ ದಾಟುವ ಪರಿಸ್ಥಿತಿ ಉಂಟಾಗಿತ್ತು ಅಂತ ಪಾಲಿಕೆ ಆಧಿಕಾರಿಗಳ ವಿರುದ್ದು ಜನರು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ರಾಜಕಾಲುವೆ ಒತ್ತುವರಿ ತೆರವು ಮಾಡಿದ್ದಾರೆ ಈ ಪರಿಸ್ಥಿತಿ ನಮಗೆ ಬರುತ್ತಿರಲಿಲ್ಲ, ಪ್ರತಿ ಭಾರಿ ಚುನಾವಣೆ ಸಂದರ್ಭದಲ್ಲಿ ಇಲ್ಲಿನ ಸ್ಥಳಿಯ ಶಾಸಕರು ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡುತ್ತಾರೆ ಅದರೆ ಚುನಾವಣೆ ಮುಗಿದ ಮೇಲೆ ಈ ಕಡೆ ತಲೆನೂ ಹಾಕುವುದಿಲ್ಲ ಈ ಕೊಡುಲೇ…
Author: AIN Author
ಬೆಂಗಳೂರು: ಕರ್ನಾಟಕ ಸೇರಿ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯ ಇಳಿಕೆ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 56,100 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 61,200 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,350 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 56,100 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,300 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ: 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,100 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,200 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 735 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 56,100 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 61,200 ರೂ ಬೆಳ್ಳಿ ಬೆಲೆ 10…
ಬೆಂಗಳೂರು: ತೆಲಂಗಾಣ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಸಿಎಂ ಸಿದ್ದರಾಮಯ್ಯ ಮತಬೇಟೆ ನಡೆಸಲಿದ್ದಾರೆ. ಪಂಚ ರಾಜ್ಯ ವಿಧಾನಸಭೆ ಚುನಾವಣಾ (Assembly election 2023) ಪ್ರಚಾರ ಕಣಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಎಂಟ್ರಿ ಕೊಟ್ಟಿದ್ದಾರೆ. ಇಂದು ತೆಲಂಗಾಣದಲ್ಲಿ ʼಗ್ಯಾರಂಟಿ ಸಿಎಂ ಸಿದ್ದರಾಮಯ್ಯʼ ಅವರ ಚುನಾವಣಾ ಪ್ರಚಾರ (Telangana assembly election) ಆರಂಭವಾಗಲಿದೆ. ಈ ತಿಂಗಳಲ್ಲಿ ಸಾಧ್ಯವಾದಷ್ಟು ರಾಜ್ಯಗಳ ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ. ಅದರಲ್ಲೂ ಛತ್ತೀಸ್‌ಗಢ ಮತ್ತು ರಾಜಸ್ಥಾನಗಳಲ್ಲಿ ಒಬಿಸಿ ಮತಗಳು ಹೆಚ್ಚು ಇರುವುದರಿಂದ ಸಿಎಂಗೆ ಪ್ರಚಾರಕ್ಕೆ ಆಹ್ವಾನ ನೀಡಲಾಗಿದೆ. ಈಗಾಗಲೇ ಮಿಜೋರಾಂನಲ್ಲಿ ಮತದಾನ ಮುಗಿದಿದ್ದು, ಇನ್ನುಳಿದ ನಾಲ್ಕು ರಾಜ್ಯಗಳಲ್ಲಿ ಪ್ರಚಾರ ನಡೆಯುತ್ತಿದೆ. ಬೆಳಿಗ್ಗೆ 11.30ಗಂಟೆಗೆ ಸಿದ್ದರಾಮಯ್ಯ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಡಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕಾಮರೆಡ್ಡಿ ಜಿಲ್ಲೆಗೆ ತೆರಳುವರು. ಕಾಮರೆಡ್ಡಿ ನಗರದಲ್ಲಿ 2 ಗಂಟೆಗೆ ಬೃಹತ್ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮತಯಾಚಿಸುವರು. ಸಂಜೆ 6.30ಕ್ಕೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಕೊಪ್ಪಳ: ‘ಲೋಕಸಭೆ ಚುನಾವಣೆ ಸಮಯದಲ್ಲಿ ಬಿಜೆಪಿ, ಜೆಡಿಎಸ್ನ 12 ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ‘ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು. ನಗರದಲ್ಲಿ ಲೋಕಸಭೆ ಚುನಾವಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಭೆ ವೇಳೆ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಹಾಗೂ ಜೆಡಿಎಸ್ ನೀತಿಗಳಿಂದ ಕೆಲವು ಶಾಸಕರು ಬೇಸತ್ತಿದ್ದಾರೆ.ಚುನಾವಣೆ ಸಮಯದಲ್ಲಿ ಅವರೆಲ್ಲರೂ ಕಾಂಗ್ರೆಸ್ಗೆ ಬರುವುದಾಗಿ ತಿಳಿಸಿದ್ದಾರೆ’ ಎಂದರು. https://ainlivenews.com/knee-pain-treatment-joint-pain-treatment/ ‘ಬರ ಎದುರಿಸಲು ರಾಜ್ಯ ಸರಕಾರದಿಂದ ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎಸ್ಡಿಆರ್ಎಫ್ನಿಂದ ಕೊಡಬೇಕಾದದ್ದನ್ನು ಕೊಡುತ್ತಿದ್ದೇವೆ. ಆದರೆ, ಕೇಂದ್ರದಿಂದ ಪರಿಹಾರ ಬರುತ್ತಿಲ್ಲ. ಅವರು ರಾಜಕಾರಣ ಮಾಡುತ್ತಿದ್ದಾರೆ. ಈ ಕುರಿತು ನಳಿನ್ ಕುಮಾರ್ ಕಟೀಲ್ ಮಾತನಾಡುವುದು ಬಿಟ್ಟು ಪರಿಹಾರ ಕೊಡಿಸಲಿ’ ಎಂದು ಹೇಳಿದರು.
ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ, ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ‘ರುದ್ರಿ’ ಸಿನಿಮಾ ಇಂದು ಬಿಡುಗಡೆ ಆಗುತ್ತಿದೆ. ನೇರವಾಗಿ ‘ನಮ್ಮ ಫ್ಲಿಕ್ಸ್ ಕನ್ನಡದ ಓಟಿಟಿ ಆಪ್’ (NAMMAFLIX) ನಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರತಂಡ ತಿಳಿಸಿದೆ. ಗೊಂಬೆಗಳ ಲವ್ ಖ್ಯಾತಿಯ ಪಾವನಾ ಈ ಸಿನಿಮಾದಲ್ಲಿ ಪ್ರಧಾನ ಪಾತ್ರ ಮಾಡಿದ್ದು, ಬಡಿಗೇರ ದೇವೇಂದ್ರ ನಿರ್ದೇಶನದಲ್ಲಿ ಚಿತ್ರ ಮೂಡಿ ಬಂದಿದೆ. ಈಗಾಗಲೇ ಠಾಗೋರ್ ಅಂತಾರಾಷ್ಟ್ರೀಯ ಚಿತ್ರೋತ್ಸವ ಸೇರಿದಂತೆ ದೇಶ ವಿದೇಶಗಳ ಚಿತ್ರೋತ್ಸವದಲ್ಲಿ ರುದ್ರಿ ಭಾಗಿಯಾಗಿದೆ. ಅಲ್ಲಿ ಪ್ರದರ್ಶನ ಕಂಡಿದೆ. ಹಲವಾರು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ರುದ್ರಿ ಸಿನಿಮಾ 90ರ ದಶಕದ ಕಥೆ. ಆ ಕಾಲದಲ್ಲಿ ಇನ್ನೂ ಮಹಿಳೆಯರಿಗೆ ತಮ್ಮ ಮೇಲಿನ ದೌರ್ಜನ್ಯವನ್ನು ಹೇಳಿಕೊಳ್ಳುವಂತಹ ಧೈರ್ಯವಿರಲಿಲ್ಲ. ಅಂತಹ ಮಹಿಳೆಯೊಬ್ಬರ ಶೋಷಣೆಯ ಕಥೆಯನ್ನು ರುದ್ರಿ ಮೂಲಕ ಹೇಳಲು ಹೊರಟಿದ್ದಾರೆ ನಿರ್ದೇಶಕರು. ಸಿ.ಆರ್. ಮಂಜುನಾಥ್ ಅವರ ನಿರ್ಮಾಣದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಸಾಧೂ ಕೋಕಿಲಾ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅನನ್ಯ ಭಟ್ ಅವರು ಹಾಡಿಗೆ…
ಮಲಯಾಳಂ (Malayalam) ಖ್ಯಾತ ನಟ ಹಾಗೂ ಮಿಮಿಕ್ರಿ ಕಲಾವಿದ ಕಲಾಭವನ್ ಹನೀಫ್ (Kalabhavan Hanif) ನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಕೊಚ್ಚಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ವಾರದಿಂದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಪತ್ನಿ ವಹಿದಾ ತಿಳಿಸಿದ್ದಾರೆ. ಮಲಯಾಳಂ ಸಿನಿಮಾ ರಂಗದಲ್ಲಿ ಮಾತ್ರವಲ್ಲ, ಮಿಮಿಕ್ರಿ ಕಲೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅವರು ಹೊಂದಿದ್ದರು. ಇವರಿಗೆ ಸಿತಾರಾ ಮತ್ತು ಶಾರುಖ್ ಇಬ್ಬರು ಮಕ್ಕಳಿದ್ದಾರೆ. ಈವರೆಗೂ 150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಲಾಭವನ್ ‘ಚೆಪ್ಪುಕಿಲುಕ್ಕಣ್ಣ ಚನಗತಿ’ ಸಿನಿಮಾದ ಮೂಲಕ 1991ರಲ್ಲಿ ಸಿನಿಮಾ ರಂಗ ಪ್ರವೇಶ ಮಾಡಿದ್ದರು. ಮೊದ ಮೊದಲು ರಂಗಭೂಮಿಯಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಂತರ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
ಮಾಲ್ಡೀವ್ಸ್: ಮಾಲ್ಡೀವ್ಸ್ ದೇಶವು ತನ್ನ ದೇಶದಲ್ಲಿ ಭಾರತದ ಮಿಲಿಟರಿ ಉಪಸ್ಥಿತಿಯನ್ನು ತೆಗೆದುಹಾಕುವ ನಿಟ್ಟಿನಲ್ಲಿ ಮಾತುಕತೆಗಳನ್ನು ಪ್ರಾರಂಭಿಸಿದೆ ಎಂದು ಅಧ್ಯಕ್ಷ-ಚುನಾಯಿತ ಮೊಹಮ್ಮದ್ ಮುಯಿಝು ಬ್ಲೂಮ್‌ಬರ್ಗ್ ನ್ಯೂಸ್ ಪ್ರಕಟಿಸಿದ ಸಂದರ್ಶನದಲ್ಲಿ ಹೇಳಿದ್ದಾರೆ. ಭಾರತ ಹಾಗೂ ಚೀನಾ ಎರಡೂ ದೇಶಗಳು ಈ ದೇಶದಲ್ಲಿ ತನ್ನ ಪ್ರಭಾವವನ್ನು ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ಕಳೆದ ತಿಂಗಳು ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಅವರನ್ನು ಅಧ್ಯಕ್ಷ ಸ್ಥಾನದ ಚುನಾವಣೆಲ್ಲಿ ಸೋಲಿಸಿದ ಬಳಿಕ ತಮ್ಮ ಚುನಾವಣೆ ಭರವಸೆಗಳಲ್ಲಿ ಪ್ರಮುಖವಾಗಿ ಘೋಷಣೆ ಮಾಡಲಾದ ವಿಚಾರದಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ಹಾಗೇನಾದರೂ ತಾವು ಅಧ್ಯಕ್ಷರಾದಲ್ಲಿ ಭಾರತದ ಸೇನಾಪಡೆಗಳನ್ನು ಮಾಲ್ಡೀವ್ಸ್‌ನಿಂದ ಹೊರಹಾಕುವುದಾಗಿ ಅವರು ಭರವಸೆ ನೀಡಿದ್ದರು. ಸುಮಾರು 70 ಭಾರತೀಯ ಸೇನಾ ಸಿಬ್ಬಂದಿಗಳು ಭಾರತ ಸರ್ಕಾರದ ಪ್ರಾಯೋಜಿತ ರಾಡಾರ್ ಕೇಂದ್ರಗಳು ಮತ್ತು ಕಣ್ಗಾವಲು ವಿಮಾನಗಳನ್ನು ನಿರ್ವಹಿಸುತ್ತಿದ್ದಾರೆ. ಭಾರತೀಯ ಯುದ್ಧನೌಕೆಗಳು ಮಾಲ್ಡೀವ್ಸ್‌ನ ವಿಶೇಷ ಆರ್ಥಿಕ ವಲಯದಲ್ಲಿ ಗಸ್ತು ತಿರುಗಲು ಸಹಾಯ ಮಾಡುತ್ತವೆ. https://ainlivenews.com/knee-pain-treatment-joint-pain-treatment/ ಮುಯಿಝು ಸಂದರ್ಶನದಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ತೆಗೆದುಹಾಕುವ ಬಗ್ಗೆ ಭಾರತ ಸರ್ಕಾರದೊಂದಿಗೆ ಮಾತುಕತೆ ಗಳನ್ನುಈಗಾಗಲೇ ಪ್ರಾರಂಭ…
ಬೆಂಗಳೂರು:- ಬೆಂಗಳೂರಲ್ಲಿ ಮತ್ತೆ ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದೆ. ರಸ್ತೆಯಲ್ಲಿ ಟೂಲ್ಸ್ ಹಿಡಿದು ಟೆಂಪೋ ಟ್ರಾವೆಲರ್ ಡ್ರೈವರ್, ಕಾರು ಚಾಲಕ ಬಡಿದಾಡಿಕೊಂಡಿದ್ದಾರೆ. ರಸ್ತೆಯಲ್ಲಿ ಕಿತ್ತಾಡಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಬಡಿದಾಟ ಮಾಡಿಕೊಂಡಿದ್ದಾರೆ. ಕೆ. ಆರ್ ಪುರದ ಬಳಿ ಗಲಾಟೆ ನಡೆದಿದೆ. ಕೈಯಲ್ಲಿ ರಾಡ್ ಹಿಡಿದು ಟೆಂಪೋ ಟ್ರಾವೆಲರ್ ಡ್ರೈವರ್ ಹಲ್ಲೆಗೆ ಮುಂದಾಗಿದ್ದಾನೆ. ರೋಡ್ ರೇಜ್ ನ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೆಂಗಳೂರು:- ಯುವತಿ ಸ್ನಾನ ಮಾಡುವಾಗ ವಿಡಿಯೋ ರೆಕಾರ್ಡ್ ಮಾಡಿದ ಜಿಮ್ ಕೋಚ್ ಅರೆಸ್ಟ್ ಆಗಿದ್ದಾನೆ. ಸಿಲಿಕಾನ್ ಸಿಟಿಯಲ್ಲಿ ಫಿಟ್ನೆಸ್ ಸೆಂಟರ್ ನಲ್ಲಿ ಯುವತಿ ಸ್ನಾನ ಮಾಡೋದನ್ನು ಸೆರೆ ಹಿಡಿದ ಕಾಮುಕ ಜಿಮ್ ಕೋಚ್ನನ್ನು ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಫಿಟ್ನೆಸ್ ಸೆಂಟರ್ನಲ್ಲಿ ವರ್ಕ್ ಔಟ್ ಮುಗಿಸಿದ್ದ ಯುವತಿ ಸ್ನಾನಕ್ಕೆಂದು ಬಾತ್ ರೂಮ್ ತೆರಳಿದ್ದರಂತೆ. ಈ ವೇಳೆ ಜಿಮ್ ಕೋಚ್ ಬಾತ್ ರೂಮ್ನ ಕಿಟಕಿಯಲ್ಲಿ ಮೊಬೈಲ್ ಇಟ್ಟು ವಿಡಿಯೋ ಮಾಡಲು ಯತ್ನಿಸಿದ್ದನಂತೆ. ಏನೋ ಶಬ್ದ ಆಯ್ತು ಅಂತ ಬಾತ್ ರೂಮ್ನಿಂದ ಯುವತಿ ಹೊರ ಬಂದು ನೋಡಿದ ಸಂದರ್ಭದಲ್ಲಿ ಅಲ್ಲಿ ಯಾರು ಇರಲಿಲ್ಲವಂತೆ. ಇದರಿಂದ ಅನುಮಾನಗೊಂಡ ಯುವತಿ ಜಿಮ್ನಲ್ಲಿ ಅಳವಡಿಸಿದ್ದ ಸಿಸಿಟಿವಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಆರೋಪಿ ವಿಡಿಯೋ ಮಾಡಲು ಯತ್ನಿಸಿದ್ದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಘಟನೆ ಸಂಬಂಧ ಕೂಡಲೇ ಯುವತಿ ರಾಮಮೂರ್ತಿನಗರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು ಪಿಟ್ನೆಸ್ ಕೋಚ್ ಸಿಬಿಯಾಚನ್…
ಶಿವಮೊಗ್ಗ: ಬಿಜೆಪಿಯವರನ್ನು ಬೈದರೆ ಮಾತ್ರ ಕಾಂಗ್ರೆಸ್ ಶಾಸಕರಿಗೆ ರಾಜಕೀಯ ಸ್ಥಾನಮಾನಗಳು ಸಿಗುವುದೆಂಬ ಭಾವನೆ ಬೇಳೂರಿಗೆ ಇರಬೇಕು ಎಂದು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಕುಟುಕಿದ್ದಾರೆ. ಸಂಸದ ರಾಘವೇಂದ್ರ ಅವರು ಚುನಾವಣಾ ಸಮಯದಲ್ಲಿ ಮಾತ್ರ ಜಿಲ್ಲಾ ಪ್ರವಾಸ ಮಾಡುತ್ತಾರೆ ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿಕೆ ಕುರಿತು ನಗರದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಗೋಪಾಲಕೃಷ್ಣ ಗೌರವಾನ್ವಿತ, ಸೀನಿಯರ್ ಎಂಎಲ್ ಎ ಆಗಿದ್ದಾರೆ. https://ainlivenews.com/knee-pain-treatment-joint-pain-treatment/ ಮಂತ್ರಿ ಆಗಬೇಕು, ನಿಗಮ ಮಂಡಳಿ ಅಧ್ಯಕ್ಷ ಆಗಬೇಕು ಅನ್ನೋ ಆಸೆ ಇದೆ. ವಿಪಕ್ಷಗಳಿಗೆ ಯಾರು ಹೆಚ್ಚು ಬೈಯ್ತಾರೋ ಅದರ ಮೇಲೆ ಪ್ರಮೋಷನ್ ಸಿಗುತ್ತೆ ಇರಬೇಕು. ಹಾಗಾಗಿ ಈ ತರಹದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದರು. ನನ್ನ ಮೇಲೆ ನನ್ನ ಕ್ಷೇತ್ರದ ಜನ ವಿಶ್ವಾಸ ಇಟ್ಟಿದ್ದಾರೆ. ಅವರಿಗೆ ಮಾತ್ರ ನಾನು ಉತ್ತರದಾಯಿ. ಇಷ್ಟು ವರ್ಷ ನನಗೆ ಹಾರೈಸಿದ್ದಾರೆ. ಸೇವೆ ಮಾಡುವ ಅವಕಾಶ ನೀಡಿದ್ದಾರೆ. ಹಾಗಾಗಿ ಅವರಿಗೆ ಮಾತ್ರ ನಾನು ಉತ್ತರ ನೀಡಬೇಕು ಎಂದು ತಿಳಿಸಿದರು.