Author: AIN Author

ಟೀಮ್ ಇಂಡಿಯಾ ಮುಖ್ಯ ಕೋಚ್‌ ಆಗಿ ದ್ರಾವಿಡ್‌ ಮುಂದುವರಿಯಲಿದ್ದಾರೆ.ದ್ರಾವಿಡ್‌ ತರಬೇತಿಯ ಭಾರತ ತಂಡ ಇತ್ತೀಚೆಗೆ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಅಹಮದಾಬಾದಿನಲ್ಲಿ ನ. 19ರಂದು ಫೈನಲ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಸೋಲುವ ಮೊದಲು ಸತತವಾಗಿ 10 ಪಂದ್ಯಗಳನ್ನು ಗೆದ್ದು ಅಜೇಯ ಸಾಧನೆ ಪ್ರದರ್ಶಿಸಿತ್ತು. ದ್ರಾವಿಡ್‌ ಅವರೊಂದಿಗೆ ನೆರವು ಸಿಬ್ಬಂದಿ ಗುತ್ತಿಗೆಯನ್ನೂ ವಿಸ್ತರಿಸಲಾಗಿದೆ. ರವಿ ಶಾಸ್ತ್ರಿ ಅವರ ಉತ್ತರಾಧಿಕಾರಿಯಾಗಿ 2021ರ ನವೆಂಬರ್‌ನಲ್ಲಿ (ಟಿ20 ವಿಶ್ವಕಪ್‌ ನಂತರ) ದ್ರಾವಿಡ್‌ ಎರಡು ವರ್ಷಗಳ ಅವಧಿಗೆ ಕೋಚ್‌ ಆಗಿ ನೇಮಕಗೊಂಡಿದ್ದರು. ವಿಶ್ವಕಪ್‌ವರೆಗೆ ಅವರ ಗುತ್ತಿಗೆ ಅವಧಿಯಿತ್ತು. ದ್ರಾವಿಡ್‌ ಅವಧಿಯಲ್ಲಿ ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನಲ್ಲೂ ರನ್ನರ್ ಅಪ್ ಆಗಿತ್ತು. ಅಲ್ಲೂ ಆಸ್ಟ್ರೇಲಿಯಾ ಜಯಶಾಲಿಯಾಗಿತ್ತು. ‘ಐಸಿಸಿ ಟ್ರೋಫಿ ಗೆಲ್ಲಿಸಿಕೊಡಬೇಕೆಂಬ ದ್ರಾವಿಡ್‌ ಬೆನ್ನಿಗೆ ಬಿಸಿಸಿಐ ನಿಲ್ಲಲಿದೆ. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸ್ಥಿರವಾದ ಪ್ರದರ್ಶನ ನೀಡಲು ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲವನ್ನು ಅವರಿಗೆ ನೀಡಲಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭಾರತ ಸುಮಾರು 12 ವರ್ಷಗಳಿಂದ ಐಸಿಸಿಯ ಯಾವುದೇ…

Read More

ವಿಜಯಪುರ:- ರಾಜೀನಾಮೆ ಕುರಿತು ಬಿಆರ್ ಪಾಟೀಲ್ ಪತ್ರ ವಿಚಾರವಾಗಿ ಸಚಿವ ಕೃಷ್ಣ ಬೈರೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಶಾಸಕ ಬಿ.ಆರ್.ಪಾಟೀಲರ ಬಳಿ ದಾಖಲೆಗಳಿದ್ದರೆ ಅವನ್ನು ಮುಖ್ಯಮಂತ್ರಿಗೆ ಕೊಡಲಿ. ಬಿ.ಆರ್‌.ಪಾಟೀಲ ಅವರ ಬಳಿ ದಾಖಲೆ ಇವೆ ಎನ್ನುತ್ತಾರೆ. ಇದ್ದರೆ ಸಂಬಂಧಿಸಿದವರಿಗೆ ಕೊಡಲಿ. ನನ್ನ ಬಳಿಯೂ ದಾಖಲೆಗಳಿವೆ ಎಂದರು.

Read More

ಬೆಂಗಳೂರು:- ಗುತ್ತಿಗೆದಾರರಿಗೆ ಹಣ ನೀಡದ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ. ಹೈಕೋರ್ಟ್‌ ಆದೇಶ ಪಾಲಿಸದ ಬಿಬಿಎಂಪಿ ಮತ್ತು ಸರ್ಕಾರದ ವಿರುದ್ಧ ಮೆಸರ್ಸ್ ನಿಕ್ಷೇಪ ಇನ್ಫ್ರಾ ಪ್ರಾಜೆಕ್ಟ್ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಧೀಶ ನ್ಯಾ।ಪಿ.ಬಿ.ವರಾಳೆ ಹಾಗೂ ನ್ಯಾ। ಕೃಷ್ಣ ಎಸ್‌.ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು. ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಸಲು ವಿಳಂಬ ಮಾಡುತ್ತಿರುವ ಬಗ್ಗೆ ರಾಜ್ಯ ಸರ್ಕಾರ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಸರ್ಕಾರ ಹೇಳಿರುವಂತೆ ಈಗಾಗಲೇ ಇಬ್ಬರು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೆಷ್ಟು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಬೇಕು? ಬಾಕಿ ಹಣ ಬಿಡುಗಡೆ ಮಾಡುವುದರಲ್ಲಿಯೇ ಹಿರಿತನವನ್ನು ಏಕೆ ಅನುಸರಿಸಬೇಕು? ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳಲು ಬಿಡಬಾರದು ಎಂದು ಕಟುವಾಗಿ ನುಡಿದಿದೆ. ಕೆಲವು ಕಾಮಗಾರಿಗಳಿಗೆ ಸ್ಥಳೀಯ ಸಂಸ್ಥೆ ಟೆಂಡರ್ ಕರೆದು, ಆ ಕಾಮಗಾರಿಗಳನ್ನು ಪೂರ್ಣಗೊಳಿಸಿದ ಬಳಿಕ ಹಣ ಪಾವತಿಗೆ ಷರತ್ತುಗಳನ್ನು ಒಡ್ಡುವುದು ಹಾಗೂ ಅನಗತ್ಯ ವಿಳಂಬ ಮಾಡುವುದು…

Read More

ಇಸ್ಲಾಮಾಬಾದ್: ಸಾಮಾಜಿಕ ಜಾಲತಾಣದಲ್ಲಿ (Social Media) ಯುವತಿಯೊಬ್ಬಳು ಯುವಕರೊಂದಿಗೆ ಕಾಣಿಸಿಕೊಂಡ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಿದ ಘಟನೆ ಪಾಕಿಸ್ತಾನದ (Pakistan) ಕೊಹಿಸ್ತಾನ್ ಎಂಬಲ್ಲಿ ನಡೆದಿದೆ. ಜಿರ್ಗಾ ಎಂದು ಕರೆಯಲ್ಪಡುವ ಹಿರಿಯರ ಮಂಡಳಿಯು ಆಕೆಯನ್ನು ಕೊಲ್ಲಲು ಆದೇಶಿಸಿದ ನಂತರ ಈ ಕೃತ್ಯ ಎಸಗಲಾಗಿದೆ ಎಂದು ವರದಿಯಾಗಿದೆ. ಯುವತಿ ಸ್ಥಳೀಯ ಯುವಕರೊಂದಿಗೆ ನೃತ್ಯ ಮಾಡುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಳು. https://ainlivenews.com/do-you-know-which-are-the-most-visited-websites-by-indians/  ಬಳಿಕ ಆ ವೀಡಿಯೋ ವೈರಲ್ ಆಗಿತ್ತು. ಈ ವಿಚಾರ ಸ್ಥಳೀಯ ಮುಖಂಡರ ಕೋಪಕ್ಕೆ ಕಾರಣವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಬ್ಬ ಯುವತಿಗೂ ಜೀವ ಬೆದರಿಕೆ ಹಾಕಲಾಗಿದ್ದು, ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ. ಬಳಿಕ ನ್ಯಾಯಾಲಯ ಆಕೆಯ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ಖಚಿತಪಡಿಸಿಕೊಂಡ ನಂತರ ಆಕೆಯ ತಂದೆಯೊಂದಿಗೆ ಮನೆಗೆ ಕಳುಹಿಸಿಕೊಟ್ಟಿದೆ ಎಂದು ವರದಿಯಾಗಿದೆ.

Read More

ಬೆಂಗಳೂರು:- ಲವರ್ ಫೋನ್ ನಲ್ಲಿ ತನ್ನ ವಿಧ ಮಹಿಳೆಯರ 13 ಸಾವಿರ ನಗ್ನ ಫೋಟೋಗಳನ್ನು ಕಂಡ ಯುವತಿಯೊಬ್ಬರು ಪೊಲೀಸ್ ಠಾಣಾ ಮೆಟ್ಟಿಲೇರಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ವೈಟ್ ಫೀಲ್ಡ್ ಸೈಬರ್‌ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ. ಯುವತಿಯು ಬೆಳ್ಳಂದೂರಿನಲ್ಲಿರುವ ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಕಳೆದ ನಾಲ್ಕು ತಿಂಗಳುಗಳಿಂದ ಯುವಕನೊಬ್ಬನೊಂದಿಗೆ ಸಂಬಂಧದಲ್ಲಿದ್ದರು. ಆತ ಸಹ ಐದು ತಿಂಗಳುಗಳಿಂದ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರು ಸಂಬಂಧದಲ್ಲಿದ್ದ ಸಂದರ್ಭದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ತಮ್ಮಿಬ್ಬರ ಕೆಲ ಆತ್ಮೀಯ ಕ್ಷಣಗಳ ವಿಡಿಯೋವನ್ನ ಸಂತ್ರಸ್ತೆ ಡಿಲೀಟ್ ಮಾಡಲು ಮುಂದಾಗಿದ್ದರು. ಪ್ರಿಯತಮನ ಫೋನ್ ಅನ್ನು ಆತನಿಗೆ ತಿಳಿಯದೇ ತೆಗೆದುಕೊಂಡು ಫೋಟೋ ಗ್ಯಾಲರಿ ತೆರೆದಿದ್ದರು. ಈ ವೇಳೆ ತನ್ನ, ತನ್ನ ಸಹದ್ಯೋಗಿಯೊಬ್ಬಳು ಸೇರಿದಂತೆ ವಿವಿಧ ಮಹಿಳೆಯರ ಸುಮಾರು 13 ಸಾವಿರ ನಗ್ನ ಫೋಟೋಗಳು ಆತನ ಫೋನ್​​ನಲ್ಲಿ ಪತ್ತೆಯಾಗಿವೆ. ಈ ಎಲ್ಲ ಫೋಟೋಗಳನ್ನ ನೋಡಿ ವಿಚಲಿತಳಾದ ಆಕೆ ತಕ್ಷಣ ಆತನೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾಳೆ. ಅಲ್ಲದೇ ತಕ್ಷಣವೇ ಕಂಪನಿಯ ಲೀಗಲ್ ಎಕ್ಸಿಕ್ಯುಟಿವ್​ಗೆ…

Read More

ಗದಗ:- ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗಜೇಂದ್ರಗಡ-ಕುಷ್ಟಗಿ ರಸ್ತೆಯಲ್ಲಿ ಜರುಗಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಲಾಲಬಂಡಿ ನಿವಾಸಿಗಳಾದ ಹಸನ್‌ಸಾಬ್ (30) ದಾವಲ್‌ಸಾಬ್(28) ಮೃತ ದುರ್ದೈವಿಗಳು. ಸಿಂಧನೂರನಿಂದ ಗಜೇಂದ್ರಗಡಕ್ಕೆ ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಸ್ಥಳಕ್ಕೆ ಗಜೇಂದ್ರಗಡ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗಜೇಂದ್ರಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

2023-24ನೇ ಕೌಶಲ್ಯಾಭಿವೃದ್ಧಿ ಇಲಾಖೆ ವ್ಯಾಪ್ತಿಯ ಸಿಡಾಕ್ ಸಂಸ್ಥೆಯ ಮೂಲಕ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಯುವಜನರಿಗೆ ಉದ್ಯಮಶೀಲತೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯ ಆನ್ ಲೈನ್ ತಂತ್ರಾಂಶದ ಮೂಲಕ ಅರ್ಜಿಗಳನ್ನು 2023 ರ ನವೆಂಬರ್ 30 ರೊಳಗಾಗಿ ಸಲ್ಲಿಸಬಹುದು. ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು https://www.scsptsp.karnataka.gov.in/HMS/CDOC/EDPRe gistrationForm.aspread ಮೂಲಕ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸುವವರ ವಯೋಮಿತಿ ಕನಿಷ್ಟ 21 ವರ್ಷ, ಗರಿಷ್ಟ 50 ವರ್ಷದೊಳಗಿರಬೇಕು. ಶೈಕ್ಷಣಿಕ ಅರ್ಹತೆಯು ಪಿ.ಯು.ಸಿ ಮತ್ತು ಮೇಲ್ಪಟ್ಟವರಾಗಿರಬೇಕು ತರಬೇತಿಗೆ ಹಾಜರಾಗಲು ಪ್ರತಿ ಅಭ್ಯರ್ಥಿಗೆ ಪ್ರಯಾಣ ಭತ್ಯೆಯಾಗಿ ಹತ್ತು ದಿನಗಳಿಗೆ ರೂ.1000/-ಗಳನ್ನು ನೀಡಲಾಗುವುದು. ಹೆಚ್ಚಿನ ವಿವರಗಳಿಗಾಗಿ ಉಪನಿರ್ದೇಶಕರ ಕಛೇರಿ. ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ನಂ.217. 2ನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ ಗ್ರಾಮ, ದೇವನಹಳ್ಳಿ ತಾಲ್ಲೂಕು ಬೆಂ.ಗ್ರಾ.ಜಿಲ್ಲೆ -562110. ದೂರವಾಣಿ ಸಂಖ್ಯೆ-080-29787447, ಸಹಾಯಕ ನಿರ್ದೇಶಕರ ಕಚೇರಿ ದೇವನಹಳ್ಳಿ ತಾಲ್ಲೂಕು ದೂ.ಸಂ. 080-27681784, ದೊಡ್ಡಬಳ್ಳಾಪುರ ತಾಲ್ಲೂಕು ದೂ.ಸಂ. 080-27623681, ಹೊಸಕೋಟೆ ತಾಲ್ಲೂಕು ದೂ.ಸಂ. 080-27931528, ನೆಲಮಂಗಲ ತಾಲ್ಲೂಕ

Read More

ಗಿಡಮೂಲಿಕೆ ಆಗಿರುವಂತಹ ಅರಶಿನವು ತುಂಬಾ ಪರಿಣಾಮಕಾರಿ. ಅರಿಶಿನದ ನೀರಿನಿಂದ ದೇಹದ ತೂಕ ಕಡಿಮೆ ಮಾಡಬಹುದು. ಇದನ್ನು ಭಾರತ ಹಾಗೂ ಆಗ್ನೇಯ ಏಶ್ಯಾದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅರಿಶಿನದಲ್ಲಿ ಆಂಟಿಆಕ್ಸಿಡೆಂಟ್ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಹಿಂದಿನಿಂದಲೂ ಭಾರತೀಯರು ತಮ್ಮ ಔಷಧಿಯಲ್ಲಿ ಬಳಸಿಕೊಂಡು ಬರಲಾಗುತ್ತಿರುವಂತಹ ಅರಿಶಿನವು ತುಂಬಾ ಪರಿಣಾಮಕಾರಿ ಆಗಿದೆ. ಬಂಗಾರದ ಗಿಡಮೂಲಿಕೆ ಎಂದು ಕರೆಯಲ್ಪಡುವ ಅರಿಶಿನದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳೂ ಇವೆ ಮತ್ತು ಇದು ಆಹಾರಕ್ಕೆ ಹಳದಿ ಬಣ್ಣ ನೀಡುವುದು. ಅರಿಶಿನವನ್ನು ತೂಕ ಇಳಿಸಲು ಬಳಸುವುದು ಹೇಗೆ? ಅರಿಶಿನದ ಮೂಲ ಭಾರತವಾಗಿದ್ದು, ಹಿಂದಿನಿಂದಲೂ ಆಯುರ್ವೇದದಲ್ಲಿ ಇದು ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಆದರೆ ಇಂದಿನ ದಿನಗಳಲ್ಲಿ ಇದು ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಲಿದೆ. ಇದನ್ನು ಅಲ್ಲಿ ಚಹಾದ ರೂಪದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅರಿಶಿನದಲ್ಲಿ ಇರುವಂತಹ ಆಂಟಿಆಕ್ಸಿಡೆಂಟ್ ಗುಣಗಳು ಹೊಟ್ಟೆಯ ಬೊಜ್ಜು ಕರಗಿಸುವುದು. ಅರಿಶಿನವನ್ನು ದಿನನಿತ್ಯದ ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಆಗ ಹೊಟ್ಟೆಯ ಉಬ್ಬರ ಮತ್ತು ಗ್ಯಾಸ್ ಕಡಿಮೆ ಆಗುವುದು. ಅರಿಶಿನದ ಆರೋಗ್ಯ ಲಾಭಗಳು…

Read More

ಬಳ್ಳಾರಿ:- ಅಕ್ರಮ ಆಸ್ತಿ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿರುವ ಬಗ್ಗೆ ಸಚಿವ ನಾಗೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಡಿಕೆ ಶಿವಕುಮಾರ್ ಅವರ ಕೇಸ್ ಬಗ್ಗೆ ನಾವು ಸ್ಪಷ್ಟವಾಗಿದ್ದೇವೆ. ಆ ಕೇಸ್ ಗಳು ಸೂಕ್ತ ರೀತಿಯಲ್ಲಿ ಆಗಿಲ್ಲ. ಸ್ಪೀಕರ್ ಅವರ ಪರ್ಮಿಷನ್ ತೆಗೆದುಕೊಂಡಿಲ್ಲ. ಅವತ್ತಿನ ಸಂದರ್ಭದಲ್ಲಿ ಡಿಕೆಶಿ ಅವರನ್ನ ಒಳಗೆ ಹಾಕಿದ್ರೆ ಸಾಕು ಎನ್ನುವಂತೆ ಇತ್ತು. ಹೀಗಾಗಿ ತರಾತುರಿಯಲ್ಲಿ ನಿಯಮ ಪಾಲಿಸದೇ ಯಡವಟ್ಟು ಮಾಡಿದ್ದಾರೆ. ಹೀಗಾಗಿ ನಾವು ಈಗ ಪರಿಶೀಲಿಸಿ, ಅಡ್ವಕೇಟ್ ಜನರಲ್ ಅವರ ಬಳಿ ಲೀಗಲ್ ಒಪಿನಿಯನ್ ಪಡೆದು ಮುಂದುವರೆದಿದ್ದೇವೆ’ ಎಂದು ನಾಗೇಂದ್ರ ಅವರು ತಿಳಿಸಿದ್ದಾರೆ. ಜನಾರ್ದನ ರೆಡ್ಡಿ ಅವರ ಹೇಳಿಕೆ ನೋಡಿದ್ದೇನೆ. ನನಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ. ನಾನು ಆ ಪ್ರಕರಣದಲ್ಲಿ ಹೊರ ಬರ್ತೀನಿ. ಒಬ್ಬ ಆರೋಪಿ ನನ್ನ ಮೇಲೆ ಆರೋಪ ಮಾಡಿದ್ದಾನೆ. ಇದು ರಾಜಕೀಯ ಪ್ರೇರಿತವಾಗಿ ನಡೆದಿದೆ ಅಂತಾ ಇದೆ. ನನಗೆ ನ್ಯಾಯ ದೇವತೆ ಮೇಲೆ ನಂಬಿಕೆ ಇದೆ.…

Read More

ಲೈಫ್ ಸರ್ಟಿಫಿಕೇಟ್ ಅಥವಾ ಜೀವ ಪ್ರಮಾಣಪತ್ರ ಸಲ್ಲಿಸಲು ನವೆಂಬರ್ 30ರವರೆಗೂ ಕಾಲಾವಕಾಶ ಇದೆ. ಇವತ್ತು ನವೆಂಬರ್ 28 ಆಗಿದ್ದು, ಇನ್ನು ಮೂರು ದಿನ ಮಾತ್ರವೇ ಬಾಕಿ ಇದೆ. ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರದ ಎಲ್ಲಾ ಉದ್ಯೋಗಿಗಳೂ ಕೂಡ ಲೈಫ್ ಸರ್ಟಿಫಿಕೇಟ್ ಕೊಡುವುದು ಕಡ್ಡಾಯವಾಗಿದೆ. ಒಂದು ವೇಳೆ ಜೀವನ್ ಪ್ರಮಾಣಪತ್ರ ಸಲ್ಲಿಸದಿದ್ದರೆ ಏನಾಗುತ್ತದೆ ಗೊತ್ತಾ ಇಲ್ಲಿದೆ ನೋಡಿ! ನವೆಂಬರ್ 30ರೊಳಗೆ ಲೈಫ್ ಸರ್ಟಿಫಿಕೇಟ್  ಕೊಡದಿದ್ದರೆ ಏನಾಗುತ್ತದೆ? ಫಲಾನುಭವಿಗಳು ಜೀವಂತವಾಗಿದ್ದಾರಾ ಎಂದು ಖಾತ್ರಿಪಡಿಸಿಕೊಳ್ಳಲು ಲೈಫ್ ಸರ್ಟಿಫಿಕೇಟ್ ಅನ್ನು ಪಡೆಯಲಾಗುತ್ತದೆ. ಸಾಕಷ್ಟು ಬಾರಿ ಪಿಂಚಣಿದಾರರು ಸಾವನ್ನಪ್ಪಿ, ಅವರ ಖಾತೆಗೆ ಪಿಂಚಣಿ ಪ್ರತೀ ತಿಂಗಳೂ ಜಮೆ ಆಗುತ್ತಲೇ ಇರುತ್ತಿತ್ತು. ಇದನ್ನು ತಪ್ಪಿಸಲು ಪ್ರತೀ ವರ್ಷ ಜೀವನ್ ಪ್ರಮಾಣಪತ್ರ ಸಲ್ಲಿಕೆಯನ್ನು ಕಡ್ಡಾಯ ಮಾಡಲಾಗಿದೆ. ನವೆಂಬರ್ 30ರೊಳಗೆ ಜೀವ ಪ್ರಮಾಣಪತ್ರ ಸಲ್ಲಿಸದಿದ್ದರೆ ಪಿಂಚಣಿ ಸ್ಥಗಿತಗೊಳ್ಳುತ್ತದೆ. ಹಾಗಂತ ಪಿಂಚಣಿ ಖಾಯಂ ಆಗಿ ನಿಂತುಹೋಗುವುದಿಲ್ಲ. ತಾತ್ಕಾಲಿಕವಾಗಿ ಮಾತ್ರ ಸ್ಥಗಿತಗೊಳ್ಳುತ್ತದೆ. ಮುಂಬರುವ ತಿಂಗಳ ಪಿಂಚಣಿ ಸಿಗುವುದಿಲ್ಲ. ನೀವು ತಡವಾಗಿ ಲೈಫ್ ಸರ್ಟಿಫಿಕೇಟ್…

Read More