ಮಂಡ್ಯ : ಲೋಕಸಭಾ ಚುನಾವಣೆಗೆ ಜೆಡಿಎಸ್ ತಯಾರಿ ನಡೆಸಿದ್ದು ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರಾ ಮಾಜಿ ಸಚಿವ ಪುಟ್ಟರಾಜು ಎಂಬುದು ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದೆ. ನಿಖಿಲ್‌ಗೆ ಆಹ್ವಾನ ನೀಡಿದ್ದ ಪುಟ್ಟರಾಜು ಆದರೆ ಮಂಡ್ಯ ಲೋಕಸಭಾ ಚುನಾವಣೆಗೆ ಬರಲು ನಿಖಿಲ್ ನಿರಾಕರಣೆ ವ್ಯಕ್ತಪಡಿಸಿದ್ದು ದೇವೇಗೌಡರಿಂದ ಪುಟ್ಟರಾಜುಗೆ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಇದರ ಬೆನ್ನಲ್ಲೆ ಚುನಾವಣೆಗೆ ಪುಟ್ಟರಾಜು ತಯಾರಿ ನಡೆಸಿದ್ದು ಸ್ವಕ್ಷೇತ್ರದ ಮೂಲಕವೇ ಲೋಕಸಭಾ ಅಭ್ಯರ್ಥಿಯ ಸಿಗ್ನಲ್ ನೀಡುತ್ತಿರೋ ಪುಟ್ಟರಾಜು ಬೃಹತ್ ಕಾರ್ಯಕ್ರಮ ಆಯೋಜನೆ ಮೂಲಕ ಎಲೆಕ್ಷನ್ ಪ್ರಿಪ್ರೇಷನ್.? ಹುಟ್ಟು ಹಬ್ಬದ ನೆಪದಲ್ಲಿ ಸಾವಿರು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲಾಗಿದ್ದು ಜೆಡಿಎಸ್ ವರಿಷ್ಠರ ಸೂಚನೆಯಂತೆ ಸಿದ್ಧತೆ ಆರಂಭ ಕೂಡ ಕೈಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದ್ದೂರಿಯಾಗಿ 60ನೇ ವರ್ಷದ ಹುಟ್ಟು ಹಬ್ಬ ಹಾಗೂ ಕನ್ನಡ ರಾಜ್ಯೋತ್ಸವಕಾರ್ಯಕ್ರಮ ಮಾಡಿಕೊಟ್ಟಿದ್ದು ಹಾಗೆ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸಿದರು. ಅದ್ದೂರಿ ಕಾರ್ಯಕ್ರಮದ ಮೂಲಕ ಎಂಪಿ ಚುನಾವಣೆ ಸ್ಪರ್ಧಿಸುವ ಸಂದೇಶ ರವಾನೆ ಕೊಟ್ರಾ…
Author: AIN Author
ಬಾಲಿವುಡ್ ನ ಖ್ಯಾತನಟ ರಣ್ ದೀಪ್ ಹೂಡಾ (Randeep Hooda) ನಿನ್ನೆಯಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಹಾಗೂ ಮಾಡೆಲ್ ಆಗಿರುವ ಲಿನ್ ಲೈಸ್ರಾಮ್ (Lin Laisram) ಜೊತೆ ಅವರು ದಾಂಪತ್ಯ (Marriage) ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಯ ಮದುವೆ ಮಣಿಪುರ ಸಂಪ್ರದಾಯದಂತೆ ನಡೆದಿದ್ದು, ಮದುವೆಯ ಫೋಟೋಗಳನ್ನು ರಣ್ ದೀಪ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಧು ವರರಿಗೆ ಹಾರೈಸಿ ಎಂದು ಕೇಳಿದ್ದಾರೆ. ಮಣಿಪುರದ ಮೈಥಿಯಿ ಸಂಪ್ರದಾಯದಂತೆ ನಡೆದ ಮದುವೆಯಲ್ಲಿ ರಣ್ ದೀಪ್ ಕ್ರೀಮ್ ಬಣ್ಣದ ಧಿರಿಸಿನಲ್ಲಿ ಮಿಂಚುತ್ತಿದ್ದರು. ಮಾಡೆಲ್ ಲಿನ್ ಮೂಲತಃ ಮಣಿಪುರದವರು ಆಗಿದ್ದು, ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಜೊತೆಗೆ ನಟಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಹೂಡಾಗೆ 47 ವರ್ಷ ವಯಸ್ಸಾಗಿದ್ದರೂ, ಮಣಿಪುರದ ಬೆಡಗಿ ಮೆಚ್ಚಿ ಮದುವೆಯಾಗಿದ್ದಾರೆ ಎನ್ನುವುದು ವಿಶೇಷ.
ಮುಂಬೈ: ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಮತ್ತೆ ತವರು ಮುಂಬೈ ಇಂಡಿಯನ್ಸ್ (Mumbai Indians) ಸೇರ್ಪಡೆಗೊಂಡ ಬಳಿಕ ಗುಜರಾತ್ ಟೈಟಾನ್ಸ್ ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ (Shubman Gill) ಹೆಗಲಿಗೆ ನಾಯಕತ್ವದ ಹೊಣೆ ನೀಡಲಾಗಿದೆ. ಈ ಬಗ್ಗೆ ಗುಜರಾತ್ ಟೈಟಾನ್ಸ್ (GujaratTaitans) ತನ್ನ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಶುಭಮನ್ ಗಿಲ್ ಸಹ ನಾಯಕತ್ವದ ಹೊಣೆ ನೀಡಿದ ಫ್ರಾಂಚೈಸಿಗೆ ಧನ್ಯವಾದ ತಿಳಿಸಿದ್ದಾರೆ. ಗುಜರಾತ್ ಟೈಟಾನ್ಸ್‌ನ ನಾಯಕತ್ವ ವಹಿಸಿಕೊಳ್ಳಲು ನಾನು ಹೆಮ್ಮೆಪಡುತ್ತೇನೆ. ಇಂತಹ ಉತ್ತಮ ತಂಡವನ್ನು ಮುನ್ನಡೆಸಲು ಫ್ರಾಂಚೈಸಿ ನನ್ನ ಮೇಲೆ ನಂಬಿಕೆಯಿಟ್ಟು ನಾಯಕತ್ವದ ಹೊಣೆ ನೀಡಿದೆ. ಇದನ್ನು ಕೇವಲ ಧನ್ಯವಾದ ಹೇಳಿ ಮುಗಿಸಲಾರೆ. ಈ ಟೂರ್ನಿಯನ್ನು ಸ್ಮರಣೀಯವಾಗಿಸೋಣ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಶುಭಮನ್ ಗಿಲ್ ಗುಜರಾತ್ ಟೈಟಾನ್ಸ್ ಪರ ಆಡಿರುವ 2 ಆವೃತ್ತಿಯ 33 ಇನ್ನಿಂಗ್ಸ್‌ಗಳಲ್ಲಿ, 47.34 ಸರಾಸರಿಯಲ್ಲಿ 1,373 ರನ್ ಬಾರಿಸಿದ್ದಾರೆ. ಅದರಲ್ಲೂ 2023ರ 16ನೇ ಆವೃತ್ತಿಯ ಐಪಿಎಲ್‌ನಲ್ಲಿ 17 ಪಂದ್ಯಗಳಿಂದ 59.33 ಸರಾಸರಿಯಲ್ಲಿ ಒಟ್ಟು…
ಜನರು ಆರೋಗ್ಯಕರ ಆಹಾರಗಳ ಕಡೆಗೆ ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ. ಆರೋಗ್ಯಕರ ಆಹಾರಗಳ ಬಗ್ಗೆ ತಿಳಿಯಲು ಹೆಚ್ಚು ಹೆಚ್ಚು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಇಂತಹ ಆರೋಗ್ಯಕರ ಆಹಾರಗಳ ಹೆಸರು ಬಂದಾಗ, ಅವುಗಳ ಬಗ್ಗೆ ನಾವು ಮಾತನಾಡುವಾಗ ಅಲ್ಲಿ ಚಿಯಾ ಬೀಜಗಳ ಹೆಸರು ಖಂಡಿತವಾಗಿ ಬಂದೇ ಬರುತ್ತದೆ. ಚಿಯಾ ಸೀಡ್ಸ್ ಆರೋಗ್ಯಕರವಾಗಿದ್ದು, ಇದು ದೇಹದ ತೂಕ ನಷ್ಟಕ್ಕೆ ಜನಪ್ರಿಯವಾದ ಆಹಾರವಾಗಿದೆ. ಅಲ್ಲದೇ ಇದನ್ನು ವಿವಿಧ ತೂಕ ನಷ್ಟ ಪಾನೀಯಗಳು ಮತ್ತು ಸ್ಮೂಥಿಗಳು ಹಾಗೂ ಸಲಾಡ್ ಇತ್ಯಾದಿಗಳಲ್ಲಿ ಬೆರೆಸಲಾಗುತ್ತದೆ ಚಿಯಾ ಬೀಜಗಳು ಉತ್ಕರ್ಷಣ ನಿರೋಧಕಗಳಿಂದ ಬಹು ಸಮೃದ್ಧವಾಗಿವ. ಇದು ಶರೀರದಲ್ಲಿ ಫ್ರೀ ರಾಡಿಕಲ್ ಗಳಿಂದ ಉಂಟಾಗುವ ಋಣಾತ್ಮಕ ಪರಿಣಾಮಗಳಿಂದ ದೇಹವನ್ನು ರಕ್ಷಿಸಲು ಬಹಳ ಉಪಯುಕ್ತವಾಗಿದೆ. ಚಿಯಾ ಬೀಜಗಳು ಹೊಟ್ಟೆಯ ಆರೋಗ್ಯವನ್ನು ಸಹಾ ಕಾಪಾಡುತ್ತದೆ. ಈ ಬೀಜಗಳ ಸೇವನೆ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ. ಇದರಲ್ಲಿ ನಾರಿನಾಂಶವು ಹೆಚ್ಚಾಗಿರುವುದರಿಂದ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ, ಆ ಸಮಸ್ಯೆ ಎದುರಾಗದಂತೆ ತಡೆಯುತ್ತದೆ. ನಾವು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ದೇಹದ ತೂಕವನ್ನು…
ಮೊಡವೆಗಳಿಗೆ ಮೂಲ ಕಾರಣಗಳು ಹೊರಗಿನ ಧೂಳು ಹೊಗೆ ಕಲ್ಮಶ ಹೆಚ್ಚು ಎಣ್ಣೆಯುಕ್ತ ಆಹಾರವನ್ನು ತಿನ್ನುವುದು ಹಾರ್ಮೋನ್ ಗಳ ಬದಲಾವಣೆ ಜಂಕ್ ಫುಡ್ ಸೇವಿಸುವುದು ಮತ್ತು ಜೀನ್ಸ್ ಮತ್ತು ಹಲವು ಕಾರಣದಿಂದಾಗಿ ಮೊಡವೆಗಳು ಬರುತ್ತವೆ ಈ ಮೊಡವೆಯ ಸಮಸ್ಯೆಗೆ ಅನೇಕ ರೀತಿಯ ಕ್ರೀಂ ಗಳನ್ನು ಬಳಸಿದ್ದಿರಾ ಆದರೆ ನಿಮ್ಮ ಮನೆಯಲ್ಲೇ ಸುಲಭವಾಗಿ ಸಿಗುವಂತಹ ಟೂತ್ ಪೇಸ್ಟ್ ಬಳಸಿ ನೋಡಿದ್ದೀರಾ ಖಂಡಿತ ಇಲ್ಲ ಹಾಗಾದರೆ ಹಲ್ಲುಜ್ಜುವ ಪೇಸ್ಟ್ ಇಂದ ಹೇಗೆ ಮೊಡವೆಗಳನ್ನು ದೂರ ಮಾಡಬಹುದು ಎಂದು ಈಗ ತಿಳಿಯೋಣ. ಮೊದಲಿಗೆ ಒಂದು ಚಮಚ ಅಡುಗೆ ಸೋಡಾ ಗೆ ಸ್ವಲ್ಪ ಟೂತ್ ಪೇಸ್ಟ್ ಮಿಕ್ಸ್ ಮಾಡಿ ಮುಖವನ್ನು ತೊಳೆದು ಮೊಡವೆ ಇರುವ ಜಾಗಕ್ಕೆ ರಾತ್ರಿ ಮಲಗುವ ಮುಂಚೆ ಹಚ್ಚಿ ಅರ್ಧ ಗಂಟೆಯ ನಂತರ ಇಲ್ಲವೇ ಇಡೀ ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ತೊಳೆದು ಕೊಳ್ಳಿ ಮುಖ ತೊಳೆದ ನಂತರ ಮಾಯಿಶ್ಚರೈಸರ್ ಅಥವಾ ಲೋಳೆ ರಸ ಹಚ್ಚಿ ಇದರಿಂದ ಪೇಸ್ಟ್ ಇಂದ ಉಂಟಾದ ಕಿರಿಕಿರಿ ತಪ್ಪುತ್ತದೆ. ವಾರದಲ್ಲಿ…
ತಿರುವನಂತಪುರಂ: 7 ವರ್ಷದ ಮಗಳ ಮೇಲೆ ಅತ್ಯಾಚಾರ (Rape) ಎಸಗಲು ತನ್ನ ಪ್ರೇಮಿಗೆ (Lover) ಅವಕಾಶ ಕೊಟ್ಟ ಮಹಿಳೆಗೆ ಕೇರಳ (Kerala) ಕೋರ್ಟ್ 40 ವರ್ಷ, 6 ತಿಂಗಳ ಕಠಿಣ ಜೈಲು ಶಿಕ್ಷೆ ಹಾಗೂ 20,000 ರೂ. ದಂಡ ವಿಧಿಸಿದೆ. ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ತಿರುವನಂತಪುರಂನ (Thiruvananthapuram) ವಿಶೇಷ ಫಾಸ್ಟ್ ಟ್ರ‍್ಯಾಕ್ ಕೋರ್ಟ್ ಆರೋಪಿ ಮಹಿಳೆಯನ್ನು ತಾಯ್ತನಕ್ಕೆ ಅವಮಾನ ಎಂದು ಪರಿಗಣಿಸಿದೆ. ಮಾತ್ರವಲ್ಲದೆ ಆಕೆ ಯಾವುದೇ ಕರುಣೆಗೆ ಅರ್ಹಳಲ್ಲ ಎಂದು ಘೋಷಿಸಿದ್ದು, ಗರಿಷ್ಠ ಶಿಕ್ಷೆಯನ್ನು ವಿಧಿಸುವುದಾಗಿ ಹೇಳಿದೆ. ಆಕೆ ದಂಡ ಪಾವತಿಸಲು ವಿಫಲಳಾದಲ್ಲಿ ಹೆಚ್ಚುವರಿ 6 ತಿಂಗಳ ಜೈಲು (Jail) ಶಿಕ್ಷೆ ವಿಧಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ. ಪೋಕ್ಸೋ (POCSO) (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಪ್ರಕರಣಗಳಲ್ಲಿ ಹೆಚ್ಚಾಗಿ ತಾಯಂದಿರು ಕಾನೂನು ಪರಿಣಾಮಗಳನ್ನು ಎದುರಿಸುವುದು ಬಹಳ ವಿರಳ. ಈ ಘಟನೆ 2018ರ ಮಾರ್ಚ್‌ನಿಂದ 2019ರ ಸೆಪ್ಟೆಂಬರ್ ನಡುವೆ ಘಟಿಸಿದೆ. ಈ ಸಮಯದಲ್ಲಿ ಮಹಿಳೆ ತನ್ನ ಮಾನಸಿಕ ಅಸ್ವಸ್ಥ ಪತಿಯಿಂದ ಬೇರ್ಪಟ್ಟು, ಪ್ರಕರಣದ ಪ್ರಮುಖ…
ಪ್ರಧಾನಿ ಅನ್ವರ್ ಇಬ್ರಾಹಿಂ (Anwar Ibrahim) ನೇತೃತ್ವದ ಮಲೇಷ್ಯಾ (Malaysia) ಸರ್ಕಾರವು ಚೀನಾ (China) ಮತ್ತು ಭಾರತೀಯ (Indians) ನಾಗರಿಕರಿಗೆ ಪ್ರವೇಶ ವೀಸಾಗಳಿಗೆ ಸಂಬಂಧಿಸಿದಂತೆ ಮಹತ್ವದ ನೀತಿ ಬದಲಾವಣೆಯನ್ನು ಘೋಷಿಸಿದೆ. ಮಲೇಷ್ಯಾ ಸರ್ಕಾರ ಡಿಸೆಂಬರ್ 1ರಿಂದ 30 ದಿನಗಳವರೆಗೆ ವಾಸ್ತವ್ಯ ಹೂಡಲು ಚೀನಾ ಮತ್ತು ಭಾರತದ ನಾಗರಿಕರಿಗೆ ವೀಸಾಮುಕ್ತ ಪ್ರವೇಶವನ್ನು (Visa-Free Entry) ಘೋಷಿಸಿದೆ. ಪುತ್ರಜಯದಲ್ಲಿ ನಡೆದ ಪೀಪಲ್ಸ್ ಜಸ್ಟಿಸ್ ಪಾರ್ಟಿಯ ವಾರ್ಷಿಕ ಸಭೆಯಲ್ಲಿ ಭಾಷಣ ಮಾಡುವ ಸಂದರ್ಭ ಇಬ್ರಾಹಿಂ ಈ ಘೋಷಣೆ ಮಾಡಿದರು. ಭಾರತೀಯ ಪ್ರಯಾಣಿಕರಿಗೆ ಏನು ಬದಲಾವಣೆ? ವೀಸಾ ನಿರ್ಮೂಲನೆ: ಮಲೇಷ್ಯಾಕ್ಕೆ ಭೇಟಿ ನೀಡುವ ಭಾರತೀಯ ನಾಗರಿಕರಿಗೆ ಇನ್ನು ಮುಂದೆ ಡಿಸೆಂಬರ್ 1 ರಿಂದ ಪ್ರವೇಶ ವೀಸಾಗಳ ಅಗತ್ಯವಿಲ್ಲ. ವೀಸಾ-ಮುಕ್ತ ವಾಸ್ತವ್ಯ: ಭಾರತೀಯರು ವೀಸಾ ಪಡೆಯದೆ 30 ದಿನಗಳವರೆಗೆ ಮಲೇಷ್ಯಾದಲ್ಲಿ ಉಳಿಯಬಹುದು. ಭದ್ರತಾ ಸ್ಕ್ರೀನಿಂಗ್: ಮಲೇಷ್ಯಾಕ್ಕೆ ಭೇಟಿ ನೀಡುವ ಭಾರತೀಯ ಪ್ರಜೆಗಳಿಗೆ ಭದ್ರತಾ ಸ್ಕ್ರೀನಿಂಗ್ ಇರುತ್ತದೆ. ಈ ಕ್ರಮ ಕೈಗೊಳ್ಳಲು ಕಾರಣವೇನು? ವಿಶೇಷವಾಗಿ ಭಾರತ ಮತ್ತು ಚೀನಾದಿಂದ ಪ್ರವಾಸಿಗರು ಮತ್ತು ಹೂಡಿಕೆದಾರರ ಒಳಹರಿವನ್ನು…
ದೆಹಲಿ: ಲಂಡನ್‌ನಿಂದ ಅಮೃತಸರಕ್ಕೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದ (Air India Flight) ಒಳಗಡೆ ನೀರು ಸೋರಿಕೆಯಾಗಿರುವ (Water Leaking) ಪ್ರಸಂಗ ನಡೆದಿದೆ. ಈ ಅನಿರೀಕ್ಷಿತ ಘಟನೆಯಿಂದ ಪ್ರಯಾಣಿಕರಿಗೆ ಅನಾನುಕೂಲವಾಗಿದ್ದು, ಇದಕ್ಕೆ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ. https://x.com/baldwhiner/status/1729856754068959379?s=20 ಘಟನೆಗೆ ಸಂಬಂಧಿಸಿದಂತೆ ಎಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವಿಮಾನದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳ ಮೇಲಿರುವ ಹ್ಯಾಂಡ್ ಬ್ಯಾಗೇಜ್ ಸಂಗ್ರಹದಿಂದ ನೀರು ಹೇಗೆ ಸೋರಿಕೆಯಾಗುತ್ತಿತ್ತು ಎಂಬುದು ವೀಡಿಯೋದಲ್ಲಿ ಕಂಡುಬಂದಿದೆ. ಈ ಬಗ್ಗೆ ಬರೆದಿರುವ ಪ್ರಯಾಣಿಕ, ಏರ್ ಇಂಡಿಯಾ.. ನಮ್ಮೊಂದಿಗೆ ಪ್ರಯಾಣಿಸಿ. ಇದು ಪ್ರಯಾಣವಲ್ಲ, ನಮ್ಮನ್ನು ತಲ್ಲೀನಗೊಳಿಸುವ ಅನುಭವ ಎಂದು ತಮಗಾದ ಅನಾನುಕೂಲತೆಯನ್ನು ತಿಳಿಸಿದ್ದಾರೆ.
ಭಾರತ ಹಾಗೂ ಬಹುತೇಕ ದೇಶಗಳಲ್ಲಿ ಚಿನ್ನದ ಬೆಲೆ ಏರಿಕೆ ಆಗಿದೆ. ಕಳೆದ 10 ದಿನಗಳಲ್ಲಿ ಮೂರನೇ ಬಾರಿಗೆ ಬೆಲೆಗಳ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 55,550 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 60,600 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 55,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 7,175 ರುಪಾಯಿಯಲ್ಲಿ ಇದೆ. ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ನವೆಂಬರ್ 15ಕ್ಕೆ): 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,550 ರೂ 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,600 ರೂ ಬೆಳ್ಳಿ ಬೆಲೆ 10 ಗ್ರಾಂಗೆ: 730 ರೂ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 55,550 ರೂ 24 ಕ್ಯಾರಟ್ನ…
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಿನಿ ಹರಾಜಿಗೆ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಡೇವಿಡ್ ವಿಲ್ಲಿ ಅವರು ಆರ್‌ಸಿಬಿ ಫ್ಯಾನ್ಸ್‌ಗೆ ಭಾವುಕ ಸಂದೇಶವನ್ನು ಬರೆದಿದ್ದಾರೆ. ಇವರು ಎರಡು ಆವೃತ್ತಿಯಲ್ಲಿ ಆರ್‌ಸಿಬಿ ತಂಡವನ್ನು ಪ್ರತಿನಿಧಿಸಿದ್ದರು. 2022ರ ಐಪಿಎಲ್ ಮೆಗಾ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿ ಮೂಲ ಬೆಲೆ 2 ಕೋಟಿ ರೂ. ಗಳಿಗೆ ಡೇವಿಡ್ ವಿಲ್ಲಿ ಅವರನ್ನು ಖರೀದಿಸಿತ್ತು. ಈ ಎರಡೂ ಆವೃತ್ತಿಗಳಲ್ಲಿ ಆಡಿದ 8 ಪಂದ್ಯಗಳಿಂದ ಇವರು 53 ರನ್‌ಗಳು ಹಾಗೂ 4 ವಿಕೆಟ್‌ಗಳನ್ನು ಕಬಳಿಸಿದ್ದರು. ಇದಕ್ಕೂ ಮುನ್ನ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ವಿಲ್ಲಿ ಆಡಿದ್ದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗಿನ ಪ್ರತಿಯೊಂದು ನಿಮಿಷವನ್ನು ನಾನು ಇಷ್ಟಪಡುತ್ತೇನೆ. ಭವಿಷ್ಯದಲ್ಲಿ ಆರ್‌ಸಿಬಿ ಅಭಿಮಾನಿಗಳ ಎದುರಿಗೆ ಮರಳುತ್ತೇನೆಂಬ ವಿಶ್ವಾಸ ನನಗಿದೆ. ಇಲ್ಲಿ ಸಿಕ್ಕಿರುವ ನೆನಪುಗಳಿಗೆ ಧನ್ಯವಾದ,” ಎಂದು ಡೇವಿಡ್ ವಿಲ್ಲೀ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದಕ್ಕೆ ಆರ್‌ಸಿಬಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಮತ್ತೆ…