ಹುಬ್ಬಳ್ಳಿ: ಬೆಳಗಾವಿಯಲ್ಲಿ ಡಿಸೆಂಬರ್ 4 ರಿಂದ 14 ವರೆಗೆ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ 10 ಮಹತ್ವದ ಬಿಲ್ ಮಂಡನೆ ಮಾಡಲಾಗುವುದು ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್ ಕೆ ಪಾಟೀಲ್ ಹೇಳಿದರು. ಶುಕ್ರವಾರ ನಗರದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು,ಡಿಸೆಂಬರ್ 4 ರಂದು ನಮ್ಮ ಬಿಸಿನೆಸ್ ಅಡ್ವಸರಿ ಸಮಿತಿ ಸಭೆ ನಡೆಯಲಿದ್ದು 10 ಪ್ರಮುಖ ಬಿಲ್ ಗಳ ಮಂಡನೆ ಮಾಡಲಾಗುವ ಕುರಿತು ಸಲಹೆ ಸೂಚನೆಗಳನ್ನು ಪಡೆಯಲಾಗುವುದು ಜೊತೆಗೆಆ ಸಭೆಯಲ್ಲಿ ಯಾವ ಬಿಲ್ ಮಂಡನೆ ಆಗಬೇಕು ಎಂಬ ಸುದೀರ್ಘವಾದ ಚರ್ಚೆ ನಡೆಸುತ್ತೇವೆ ಅಧಿವೇಶನದಲ್ಲಿ ಬರಗಾಲ ಕುರಿತು ಹೆಚ್ಚು ಚರ್ಚೆ ಆಗಲಿದ್ದು ಪ್ರಮುಖ ಸಮಸ್ಯೆ, ಅಭಿವೃದ್ಧಿ ವಿಚಾರಗಳು ಸಹ ಚರ್ಚೆ ನಡೆಸಲಾಗುವುದು. ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ಸಮಸ್ಯೆಗಳು ಬಗ್ಗೆ ಚರ್ಚೆಗೆ ಹೆಚ್ಚು ಮಹತ್ವ ಕೊಡಲಾಗಿದೆ ಎಂದರು. ಐದು ರಾಜ್ಯ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ದೇಶದ ಐದು ರಾಜ್ಯಗಳಲ್ಲಿ ನಡೆದ ಮತದಾನ ನಂತರಈಗಾಗಲೇ ಮತದಾನೋತ್ತರ ಫಲಿತಾಂಶ ಬಂದಿದೆ.…
Author: AIN Author
ಹಾಸನ: ದೇವೇಗೌಡ್ರು ಬಾಲಕೃಷ್ಣನ ಮಾತು ಕೇಳಿ ರಾಜಕೀಯ ಮಾಡಬೇಕಾಗಿಲ್ಲ. ಅವರ ಬಗ್ಗೆ ಮಾತಾಡಬೇಕಾದರೆ ಕೂತು ಮಲಗಿ ಯೋಚನೆ ಮಾಡಿ ಮಾತಾಡ್ಬೇಕು ಎಂದು ಹೇಳುವ ಮೂಲಕ ಮಾಗಡಿ ಶಾಸಕ ಬಾಲಕೃಷ್ಣ ಅವರ ವಿರುದ್ಧ ಶ್ರವಣಬೆಳಗೊಳ ಶಾಸಕ ಸಿಎನ್ ಬಾಲಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾಗಡಿ ಬಾಲಕೃಷ್ಣ ಯಾರ ಯಾರ ಆಶ್ರಯದಲ್ಲಿ ಬೆಳೆದಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಮಾತಿಗೆ ಮಿತಿಯನ್ನು ಹಾಕದೆ ಮಾತನಾಡಿದ್ದಾರೆ. ಆಯಾ ಕಾಲಘಟ್ಟದಲ್ಲಿ ರಾಜಕೀಯದಲ್ಲಿ ಬದಲಾವಣೆಗಳು ಆಗುವುದು ಸಹಜ. ಮಾತನಾಡಬೇಕಾದರೆ ಆಚಾರ ವಿಚಾರಗಳನ್ನು ನೋಡಿಕೊಂಡು ಮಾತನಾಡಬೇಕು ಎಂದರು. https://ainlivenews.com/residents-own-property-in-bangalore-heres-the-good-news/ ದೇವೇಗೌಡರು ರಾಷ್ಟ್ರ ಮಟ್ಟದ ನಾಯಕರು, ಅವರು ರಾಜಕೀಯದಲ್ಲಿ ಆಗಲಿ ವೈಯಕ್ತಿಕ ಜೀವನದಲ್ಲಾಗಲಿ ಒಂದೇ ಒಂದು ಕಪ್ಪು ಚುಕ್ಕಿ ಇಲ್ಲದೆ ಇರುವ ಏಕೈಕ ರಾಜಕಾರಣಿ ದೇಶದ ಆಡಳಿತವನ್ನು ನಡೆಸಿದ್ದಾರೆ ಎಂದರೆ ಅದು ದೇವೇಗೌಡ್ರು ಎಂದು ಹೊಗಳಿದರು.
ತುಮಕೂರು: ಡಿವೈಡರ್’ಗೆ ಲಾರಿ ಡಿಕ್ಕಿಯಾಗಿ ಮತ್ತೊಂದು ಲಾರಿಗೆ ಡಿಕ್ಕಿಯಾಗಿ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿರಾ ತಾಲೂಕಿನ ಜೋಗಿಹಳ್ಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ. https://ainlivenews.com/good-news-from-state-govt-for-applicants-for-new-ration-card/ ಟೈಯರ್ ಗಳನ್ನ ತುಂಬಿಕೊಂಡು ಹೋಗ್ತಿದ್ದ ಲಾರಿ ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿ ಹೊಡೆದಿದ್ದು ಬಳಿಕ ಮತ್ತೊಂದು ಲಾರಿಗೆ ಡಿಕ್ಕಿಯಾಗಿ ಅಪಘಾತ ಹೊಂದಿದೆ. ತುಮಕೂರು ಕಡೆಯಿಂದ ಶಿರಾದ ಕಡೆ ಹೋಗ್ತಿದ್ದ ಲಾರಿ ಹಾಗೆ ಶಿರಾ ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಮತ್ತೊಂದು ಲಾರಿ ಎರಡು ಒಂದಕ್ಕೊಂದು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಭಯಂಕರ ಆಕ್ಸಿಡೆಂಟ್ ಆಗಿ ಟೈಯರ್ ತುಂಬಿಕೊಂಡು ಹೋಗ್ತಿದ್ದ ಲಾರಿ ಚಾಲಕ ಸಾವನ್ನಪ್ಪಿದ್ದಾನೆ. ಅದೃಷ್ಟಾವಶಾತ್ ಇನ್ನೊಂದು ಲಾರಿ ಚಾಲಕನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಿಶೀಲನೆ ನಡೆಯುತ್ತಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ 15ಕ್ಕೂ ಹೆಚ್ಚು ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಬಸವೇಶ್ವರ ನಗರದ ಖಾಸಗಿ ಶಾಲೆಗಳಿಗೆ ಹಾಗೂ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಗೂ ಕಿಡಿಗೇಡಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಾರೆ. ಬಸವೇಶ್ವರ ನಗರದ ನ್ಯಾಪಲ್, ವಿದ್ಯಾಶಿಲ್ಪ ಸೇರಿದಂತೆ 7 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ಬೆದರಿಕೆ ಕರೆ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಯಿಂದ ಕಳುಹಿಸುತ್ತಿರುವ ಪೊಲೀಸರು, ಪೋಷಕರೆಲ್ಲರೂ ಆತಂಕಪಡುವ ಸ್ಥಿತಿ ಏನೂ ಆಗಿಲ್ಲವೆಂದು ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರ ಹಾಗು ಬಾಂಬ್ ನಿಷ್ಕ್ರೀಯತಂಡ ದೌಡಾಯಿಸಿದ್ದು ಪರಿಶೀಲನೆ ನಡೆಸಲು ಮುಂದಾಗಿದೆ. ಕಳೆದ 1 ವರ್ಷದಿಂದ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೂ ಸಹ ಈವರೆಗೂ ಬಾಂಬ್ ಬೆದರಿಕೆ ಹಾಕಿರುವ ಆರೋಪಿಯ ಬಂಧನವಾಗಿಲ್ಲ. ಕಳೆದ ವರ್ಷ ಒಂದೇ ದಿನ 30 ಶಾಲೆಗಳಿಗೆ ಇ-ಮೇಲ್ ಬೆದರಿಕೆ ಹಾಕಲಾಗಿತ್ತು.
ಚಾಮರಾಜನಗರ: ಹುಡುಗರಿಗೆ ಹುಡುಗಿಯರೆ ಸಿಗದ ಈ ಕಾಲದಲ್ಲಿ ವಿದ್ಯಾವಂತೆ ಹಾಗೂ ಸ್ಪುರದ್ರೂಪಿ ಹುಡುಗಿಯನ್ನು ಗ್ರಾಂಡಾಗಿ ಮದುವೆ ಮಾಡಿಕೊಟ್ರೆ ಇಲ್ಲೊಬ್ಬ ಹಣಬಾಕ, ತನ್ನ ಪತ್ನಿಗೆ ಕೊಡಬಾರದ ಚಿತ್ರ ಹಿಂಸೆ ನೀಡಿ ಸಾವಿನ ಮನೆಗೆ ದೂಕಿರುವ ಘಟನೆ ನಡೆದಿದೆ ಅದು ಎಲ್ಲಿ ಅಂತೀರಾ ನೋಡಿ ಈ ಸ್ಟೋರಿನಾ… ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದ 26 ವರ್ಷದ ಸ್ವಾತಿ ಗಂಡನ ಹಣ ದಾಹಕ್ಕೆ ಬಲಿಯಾದ ಸುಂದರ ಯುವತಿಯಾಗಿದ್ದಾಳೆ. ಸ್ವಾತಿ ಎಂ.ಎಸ್ಸಿತಿ ಓದಿದ್ದ ವಿದ್ಯಾವಂತೆ ಸ್ಪುರದ್ರೂಪಿಯಾಗಿದ್ದ ಆಕೆ ನೂರಾರು ಕನಸು ಹೊತ್ತಿದ್ಲು. ಸರಳ ಹಾಗೂ ಮಿತಬಾಷಿ ಹಾಗೂ ಉತ್ತಮ ಗುಣಗಳುಳ್ಳ ಹುಡುಗಿಯಾಗಿದ್ಲು. ಮದುವೆಗೆ ಮುಂಚೆ ಚಾಮರಾಜನಗರ ತಾಲೂಕಿನ ಹರವೆ ಗ್ರಾಮದ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡ್ತಾ ಇದ್ಲು. ಕಳೆದ 7 ತಿಂಗಳ ಹಿಂದೆ ಹಂಗಳ ಗ್ರಾಮದ ವಿನಯ್ ಎಂಬಾತ ತಾನು ಇಂಜಿನಿಯರ್ ತಿಂಗಳಿಗೆ ಲಕ್ಷ ಸಂಬಳ ಬರುತ್ತೆ ಎಂದು ಸ್ಚಾತಿ ಮನೆಯವರಿಗೆ ನಂಬಿಸಿದ್ದ . ಆದರೆ ನಿಶ್ಚಿತಾರ್ಥ ಮಾಡುವಾಗ ಆತ ಬಿ.ಕಾಂ.…
ಕಲಬುರಗಿ: ಹಣ ಕೊಡಲಿಲ್ಲ ಅಂತ ಹೆತ್ತ ತಾಯಿಯನ್ನೇ ಕೊಲೆಗೈದು ಪರಾರಿಯಾಗಿದ್ದ ಆರೋಪಿಯನ್ನ ಬಂಧಿಸುವಲ್ಲಿ ಕಲಬುರಗಿ ಪೋಲೀಸರು ಸಕ್ಸಸ್ ಆಗಿದ್ದಾರೆ. https://ainlivenews.com/good-news-from-state-govt-for-applicants-for-new-ration-card/ ಪಾಪಿ ಪುತ್ರ ಬಸವರಾಜ್ ಆರೋಪಿಯಾಗಿದ್ದು ತನ್ನ ತಾಯಿ ರತ್ನಾಬಾಯಿಯನ್ನ ಕೊಲೆ ಮಾಡಿದ ಆರೋಪದ ಮೇಲೆ ರಾಘವೇಂದ್ರ ನಗರ ಪೋಲೀಸರು ಅರೆಸ್ಟ್ ಮಾಡಿದ್ದಾರೆ. ದೇವರ ಹೆಸರಲ್ಲಿ ಭವಿಷ್ಯ ಹೇಳ್ತಾ ಜೀವನ ಮಾಡ್ತಿದ್ದ ರತ್ನಾಬಾಯಿ ಕೆಲ ದಿನಗಳ ಹಿಂದಷ್ಟೇ ಕೊಲೆಯಾಗಿದ್ಲು. ಪ್ರಕರಣದ ಬೆನ್ನತ್ತಿದ ಪೋಲೀಸ್ರು ವೃದ್ಧೆಯ ಮಗ ಹಾಗು ಕೊಲೆಗೆ ಸಹಕಾರ ನೀಡಿದ ಶರ್ಫುದ್ದೀನ್ ಹೀಗೆ ಇಬ್ಬರನ್ನ ಬಂಧಿಸಿದ್ದಾರೆ…
ಬೆಂಗಳೂರು: ಮನೆ ಮುಂದೆ ಕಾರು ಪಾರ್ಕಿಂಗ್ ಮಾಡಿದ್ದನ್ನ ಪ್ರಶ್ನೆ ಮಾಡಿದ್ದಕ್ಕೆ ಅನಾಮಿಕ ವ್ಯಕ್ತಿ ಯುವತಿಗೆ ಕೆಟ್ಟ ಪದಗಳಿಂದ ನಿಂದಿಸಿರುವ ಘಟನೆ ನಿನ್ನೆ ರಾತ್ರಿ ಸಂಜಯ್ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. https://twitter.com/AdappaAdishtya/status/1730209024883425542?t=qx4djeKHIKuoZAbkP9rDcA&s=08 ಯುವತಿಯ ಸ್ನೇಹಿತರು ಸಮಾಧಾನ ಮಾಡುವ ಪ್ರಯತ್ನಪಟ್ಟರೂ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು ಇದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಯುವತಿ ಸ್ನೇಹಿತನಿಂದ ಎಕ್ಸ್ ನಲ್ಲಿ ಕಮಿಷನರ್ ಗೆ ಟ್ಯಾಗ್ ಮಾಡಿ ಸಂಜಯ್ ನಗರ ಪೊಲೀಸರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸರಿಗೆ ವಿಡಿಯೋ ಸಮೇತ ದೂರು ಕೊಟ್ಟರು ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳದ ಬಗ್ಗೆ ಆರೋಪ ಮಾಡಲಾಗಿದೆ.
ಬೆಂಗಳೂರು: ಹೊಸ ರೇಷನ್ ಕಾರ್ಡ್ ಅರ್ಜಿ ಪಡೆಯುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಕೊಟ್ಟಿದೆ.ಏನಾಪ್ಪಾ ಅಂದ್ರೆ ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ ಕಲ್ಪಿಸಿದ ಆಹಾರ ಇಲಾಖೆ ಡಿಸೆಂಬರ್ 3ರಂದು ಹೊಸ ರೇಶನ್ ಕಾರ್ಡ್ ಅರ್ಜಿಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಹೊಸ ರೇಶನ್ ಕಾರ್ಡ್ ಅರ್ಜಿಗೆ ಕೇವಲ ಒಂದು ದಿನವ ಅವಕಾಶ ಕೊಟ್ಟಿದ್ದು ಡಿಸೆಂಬರ್ 3ರಂದು 11ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಮಾತ್ರ ಅರ್ಜಿಗೆ ಕಾಲಾವಕಾಶ ನೀಡಲಾಗಿದೆ. ಹೆಚ್ಚಿನ ಅರ್ಜಿ ಸಲ್ಲಿಕೆಯಾಗುವ ಹಿನ್ನೆಲೆ ಕಡಿಮೆ ಸಮಯಾವಕಾಶ ಕೊಟ್ಟ ಆಹಾರ ಇಲಾಖೆ ಎಲ್ಲರಿಗೂ ಭಾನುವಾರ ಅರ್ಜಿ ಕೊಡುವ ಹಿನ್ನೆಲೆ ಅಂದೇ ಹೊಸ ರೇಷನ್ ಮಾಡಿಸಲು ಅವಕಾಶ ನೀಡಲಾಗಿದೆ.
ಬಿಗ್ ಬಾಸ್ ಮನೆಯ (Bigg Boss Kannada 10) ಗೇಮ್ ಮಾಸ್ಟರ್ ಡ್ರೋನ್ ಪ್ರತಾಪ್ (Drone Prathap) ಅವರು ತೆಗೆದುಕೊಂಡ ಆ ಒಂದು ನಿರ್ಧಾರದಿಂದ ಎಡವಿದ್ದಾರೆ. ಕಾರ್ತಿಕ್‌ಗೆ (Karthik Mahesh) ಗುನ್ನ ಕೊಟ್ಟಿದ್ದಕ್ಕೆ ಬಿಗ್ ಬಾಸ್ ಇದೀಗ ಉಲ್ಟಾ ಹೊಡೆದಿದ್ದಾರೆ. ಪ್ರತಾಪ್ ಆಡಿದ ಆಟಕ್ಕೆ ಕರ್ಮ ರಿಟರ್ನ್ಸ್ ಎಂಬಂತೆ ಆಗಿದೆ. ಪ್ರತಿ ವಾರದಂತೆ ಈ ವಾರವೂ ಕೂಡ 2 ತಂಡಗಳಾಗಿ ಬಿಗ್ ಬಾಸ್ ವಿಂಗಡಿಸಿದ್ದರು. ‘ಮಣ್ಣಿನ ಮಕ್ಕಳು’ ತಂಡಕ್ಕೆ ಡ್ರೋನ್ ಕ್ಯಾಪ್ಟನ್ ಆದರೆ ‘ವಿಕ್ರಾಂತ್’ ತಂಡಕ್ಕೆ ಮೈಕಲ್ ಕ್ಯಾಪ್ಟನ್ ಆಗಿದ್ದರು. ಪ್ರತಾಪ್ ಅವರ ತಂಡ ಸೇರಿದ್ದರು ಕಾರ್ತಿಕ್. ಆದರೆ, ದುರ್ಬಲ ಸದಸ್ಯರೊಬ್ಬರನ್ನ ತಂಡದಿಂದ ಹೊರಗೆ ತಳ್ಳಬೇಕಾದ ಪರಿಸ್ಥಿತಿ ಬಂದಾಗ ಕಾರ್ತಿಕ್ ಅವರನ್ನ ಡ್ರೋನ್ ಪ್ರತಾಪ್ ಹೊರಗಿಟ್ಟರು. ಆ ಮೂಲಕ ಕ್ಯಾಪ್ಟೆನ್ಸಿ ಓಟದಿಂದ ಕಾರ್ತಿಕ್ ಹೊರಬಿದ್ದರು ವಾರದ ಎಲ್ಲಾ ಟಾಸ್ಕ್‌ಗಳಲ್ಲಿ ಡ್ರೋನ್ ಪ್ರತಾಪ್ ನೇತೃತ್ವದ ತಂಡ ಸೋಲು ಅನುಭವಿಸಿದೆ. ಹೀಗಾಗಿ, ಡ್ರೋನ್ ಪ್ರತಾಪ್ ನೇತೃತ್ವದ ಸಂಪೂರ್ಣ ತಂಡ ಕ್ಯಾಪ್ಟೆನ್ಸಿ ರೇಸ್‌ನಿಂದ ಹೊರಬಿದ್ದಿದೆ. ಮೈಕಲ್…
ಹೈದರಾಬಾದ್: ಉತ್ತರ ಪ್ರದೇಶ (Uttar Pradesh) ಸರ್ಕಾರವು ಹಲಾಲ್ (Halal) ಟ್ಯಾಗ್ ಹೊಂದಿರುವ ಆಹಾರ ಉತ್ಪನ್ನಗಳನ್ನು ನಿಷೇಧಿಸಿದೆ. ಈ ಬೆನ್ನಲ್ಲೇ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು, ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುವ ಯಾವುದೇ ನಿರ್ಧಾರ ಸರ್ಕಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, https://ainlivenews.com/residents-own-property-in-bangalore-heres-the-good-news/ ಹಲಾಲ್ ಉತ್ಪನ್ನಗಳ ಮಾರಾಟ ನಿಷೇಧಿಸುವ ಯಾವುದೇ ನಿರ್ಧಾರವನ್ನು ಸರ್ಕಾರ ತೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಆರ್‌ಎಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಸಂವಿಧಾನವು ಯಾರಿಗೂ ವಿಶೇಷ ಕೊಡುಗೆ ನೀಡಲು ಅವಕಾಶ ನೀಡುವುದಿಲ್ಲ. ಧಾರ್ಮಿಕ ಮೀಸಲಾತಿಯನ್ನು ಕೆಸಿಆರ್ ನೀಡಿದ್ದಾರೆ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಇರುವ 4% ಮೀಸಲಾತಿಯನ್ನೂ ನಿಷೇಧಿಸುತ್ತೇವೆ. ಅದನ್ನು ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗದ ಜನರಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ.