ರಾಯ್ಪುರ್: ಇಲ್ಲಿ ನಡೆದ ನಾಲ್ಕನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 20 ರನ್‌ಗಳ ಜಯ ಸಾಧಿಸಿತು. 3-1 ಅಂತರದಿಂದ ಸರಣಿಯನ್ನು ಭಾರತ ತನ್ನ ಕೈವಶ ಮಾಡಿಕೊಂಡಿತು. ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಟೀಂ ಇಂಡಿಯಾ 9 ವಿಕೆಟ್ ನಷ್ಟಕ್ಕೆ 174 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. 175 ರನ್ ಗುರಿ ಬೆನ್ನತ್ತಿದ ಆಸೀಸ್ 20 ಓವರ್‌ಗೆ 7 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲಷ್ಟೇ ಶಕ್ತವಾಯಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಟ್ರಾವಿಸ್ ಹೆಡ್ ಮತ್ತು ಜೋಶ್ ಫಿಲಿಪ್ ಉತ್ತಮ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಆರಂಭದಲ್ಲೇ ಹೊಡಿಬಡಿ ಆಟದೊಂದಿಗೆ ಮಿಂಚಿದ ಹೆಡ್ 16 ಬಾಲ್‌ಗೆ 31 ರನ್ (5 ಫೋರ್, 1 ಸಿಕ್ಸ್) ಬಾರಿಸಿದರು. ಈ ಗ್ಯಾಪ್‌ನಲ್ಲಿ ಫಿಲಿಪ್ ಕೇವಲ 8 ರನ್ ಗಳಿಸಿ ಔಟಾದರು. ನಂತರ ಯಾವೊಬ್ಬ ಬ್ಯಾಟರ್ ಕೂಡ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಹೆಡ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಇತ್ತರು. https://ainlivenews.com/are-you-thinking-of-buying-a-new-phone-here-are-5g-new-mobiles-available-at-low-prices/ ಬೆನ್…
Author: AIN Author
ಬೆಂಗಳೂರು: ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಕೇಸ್ ಸಂಬಂಧ ದಿನೇ ದಿನೇ ಮಹತ್ವದ ಬೆಳವಣಿಗೆಗಳು ನಡೆಯುತ್ತಲೇ ಇವೆ. ಸದ್ಯ ಈ ಕೇಸ್ ಸಂಬಂಧ ಮತ್ತೊಬ್ಬ ಆರೋಪಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಡಾ.ಚಂದನ್ ಬಲ್ಲಾಳ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಮಂಜುಳಾ ಅವರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಈವರೆಗೂ 10 ಜನರು ಅರೆಸ್ಟ್ ಆಗಿದ್ದಾರೆ. ಇನ್ನು ಮತ್ತೊಂದೆಡೆ ಈ ಪ್ರಕರಣವನ್ನು ಅಧಿಕೃತವಾಗಿ ಸಿಐಡಿಗೆ ವರ್ಗಾವಣೆ ಮಾಡಲು ತಯಾರಿ ನಡೆದಿದೆ. https://ainlivenews.com/are-you-thinking-of-buying-a-new-phone-here-are-5g-new-mobiles-available-at-low-prices/ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ನರ್ಸ್ ಮಂಜುಳಾ ಅವರು ಕೆಲಸ ಬಿಟ್ಟಿದ್ದರು. ಬಳಿಕ ಮೈಸೂರಿನ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕೆಲಸಕ್ಕೆ ಸೇರಿದ್ದರು. ಕಳೆದ ಹಲವಾರು ದಿನಗಳಿಂದ ಪೊಲೀಸರು ಮಂಜುಳಾರನ್ನು ಹುಡುಕಾಟ ನಡೆಸುತ್ತಿದ್ದರು. ಸದ್ಯ ಮಂಜುಳಾ ಕೆಲಸ ಮಾಡ್ತಿದ್ದ ಖಾಸಗಿ ಆಸ್ಪತ್ರೆಗೆ ತೆರಳಿ ಬೈಯ್ಯಪ್ಪಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಧಾರವಾಡ: ಧಾರವಾಡ ಬೆಂಗಳೂರು ಇಂಟರ್ ಸಿಟಿ ಸಿದ್ಧಗಂಗಾ ಎಕ್ಸ್ಪ್ರೆಸ್ ಈ ಹಿಂದೆ ಆರಂಭವಾದಗಿನಿಂದ ಡಿಸೇಲ್ ಇಂಜಿನ್‌ದಿಂದ ಓಡಾಟ ನಡೆಸಿಕೊಂಡು ಬಂದಿದ್ದು, ಈಗ ಕಳೆದ ಶುಕ್ರವಾರದಿಂದ ವಿದ್ಯುತ್ ಚಾಲಿತ ಟ್ರೈನ ಆಗಿ ಪರಿವರ್ತನೆಗೊಂಡಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು, ಧಾರವಾಡ ಬೆಂಗಳೂರು ಸಿದ್ಧಗಂಗಾ ಇಂಟರ್ ಸಿಟಿ ರೈಲು ಸಂಪೂರ್ಣ ವಿದ್ಯುತ್ ಚಾಲಿತ ಇಂಜಿನ ಟ್ರೈನ್ ಆಗಿದ್ದು, ಇನ್ಮುಂದೆ ಈ ಹಿಂದಿನಂತೆ ತನ್ನ ಕಾರ್ಯವನ್ನು ಮುಂದುವರೆಸುವುದಾಗಿ ಹೇಳಿ ಸಂತೋಷ ಹಂಚಿಕೊಂಡಿದ್ದಾರೆ. ಧಾರವಾಡ-ಬೆಂಗಳೂರು ರೈಲ್ವೇ ಲೈನನ್ನು 100% ವಿದ್ಯುದೀಕರಣ ಗೊಳಿಸಿದ ಈ ಹಿನ್ನೆಲೆಯಲ್ಲಿ, ಕೇಂದ್ರ ರೈಲ್ವೇ ಸಚಿವರಿಗೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಧನ್ಯವಾದ ತಿಳಿಸಿದ್ದಾರೆ.
ಬಳ್ಳಾರಿ: ಬೆಳೆ ನಷ್ಟಗೊಂಡು ಸಾಲ ತೀರಿಸಲು ಆಗದೆ ರೈತ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ಜರುಗಿದೆ. ದಮ್ಮೂರು ಗ್ರಾಮದ ರೈತ ಮಹಾಂತೇಶ್ (35) ವರ್ಷ ಮೃತ ದುರ್ದೈವಿ ಕುಟುಂಬಸ್ಥರು ಗೌರಿ ಹಬ್ಬದ ನಿಮಿತ್ತ ಗೌರಮ್ಮಗೆ ಆರತಿ ಬೆಳಗಿಕೊಂಡು ಬರಲು ಹೋದ ಸಂದರ್ಭದಲ್ಲಿ ಮನೆಯಲ್ಲಿ ಇರುವ ಪ್ಯಾನ್ ಗೆ ನೇಣು ಹಾಕಿಕೊಂಡು ಮೃತ ಪಟ್ಟಿದ್ದಾನೆ. ಮೃತ ಮಹಾಂತೇಶ್ ಗೆ ಪತ್ನಿ ಸೇರಿ ಮೂರು ಹೆಣ್ಣು ಮಕ್ಕಳು ಮತ್ತು ಒಬ್ಬ ಪುತ್ರನಿದ್ದಾನೆ. ರೈತ ಮಹಾಂತೇಶ್ ತಮ್ಮ ತಾಯಿ ಹೆಸರಿನಲ್ಲಿ ಇರುವ 3 ಎಕರೆ ಹಾಗೂ ತಮ್ಮನ 1.50 ಎಕರೆ ಮತ್ತು ಹೆಂಡತಿಯ 1 ಎಕರೆ ಭೂಮಿಯಲ್ಲಿ ಮೆಣಿಸಿನ ಕಾಯಿ ಬೆಳೆ ಬಿತ್ತನೆ ಮಾಡಿದ್ದು, ಮಳೆ ಇಲ್ಲದೆ ಹಾಗೂ ಬೆಳೆಗೆ ನೀರು ಸಿಗದ ಪರಿಣಾಮ ಬೆಳೆಗಳು ನಷ್ಟಗೊಂಡಿದ್ದರಿಂದ ಬೆಳೆಗೆ ಖರ್ಚುಮಾಡಿದ ಸಾಲ ತೀರಿಸಲು ಆಗದೆ ಮನನೊಂದು ನೇಣು ಬಿಗಿದುಕೊಂಡಿದ್ದಾನೆ. ಬೆಳೆಗೆ ಅಂತ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ,…
ಕಚ್ಚಾ ತೈಲ ಬೆಲೆ ಏರಿಕೆ, ಇಳಿಕೆ ಆಧಾರದ ಮೇಲೆ ಪೆಟ್ರೋಲ್, ಡೀಸೆಲ್ ಬೆಲೆ ವ್ಯತ್ಯಾಸವಾಗುತ್ತದೆ. ದೇಶದ ಹಲವೆಡೆ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಏರಿಕೆ – ಇಳಿಕೆಯಾಗುತ್ತಿದೆ. ಇದೇ ರೀತಿ, ರಾಜ್ಯದಲ್ಲೂ ಬೆಂಗಳೂರು ಹೊರತುಪಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆ ನಗರಗಳಲ್ಲಿ ಪ್ರತಿದಿನ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇನ್ನು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ (Petrol) – ಡೀಸೆಲ್ (Diesel) ಬೆಲೆ ವಿವರ ಹೀಗಿದೆ ನೋಡಿ.. ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು: ಬಾಗಲಕೋಟೆ – ರೂ. 102.68 ಬೆಂಗಳೂರು – ರೂ. 101.94 ಬೆಂಗಳೂರು ಗ್ರಾಮಾಂತರ – ರೂ. 102.01 ಬೆಳಗಾವಿ – ರೂ. 102.13 ಬಳ್ಳಾರಿ – ರೂ. 103.78 ಬೀದರ್ – ರೂ. 102.28 ವಿಜಯಪುರ – ರೂ. 102.12 ಚಾಮರಾಜನಗರ – ರೂ. 102.10 ಚಿಕ್ಕಬಳ್ಳಾಪುರ – ರೂ. 101.94 ಚಿಕ್ಕಮಗಳೂರು – ರೂ. 102.52…
ಬ್ಯಾಂಕಾಕ್: ಧಾರ್ಮಿಕ ಕಾರಣಗಳಿಂದ ವಿಶ್ವದಲ್ಲಿ ಯುದ್ಧಗಳು, ಹತ್ಯೆಗಳು ನಡೆಯುತ್ತಿದೆ. ಮೂಲಭೂತವಾದಿಗಳ ದಾಳಿ, ಧರ್ಮದ ಕಾರಣಕ್ಕಾಗಿ ಭಯೋತ್ಪಾದಕ ದಾಳಿಗಳು ನಿರಂತರವಾಗಿ ನಡೆಯುತ್ತಿದೆ. ಧರ್ಮ ಸಂಘರ್ಷದ ನಡುವೆ ಥಾಯ್ಲೆಂಡ್ ನೂತನ ಪ್ರಧಾನಿ ಸ್ರೆತ್ಥಾ ಥಾವಿಸಿನ್ ನೀಡಿದ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಸದ್ಯ ವಿಶ್ವ ಎದುರಿಸುವ ಅಶಾಂತಿಯ ವಾತಾವರಣ ನಿರ್ಮೂಲನೆಯಾಗಿ ಶಾಂತಿ ನೆಲಸಲು ಮಹತ್ವದ ಸಲಹೆ ನೀಡಿದ್ದಾರೆ. ಹಿಂದೂ ಜೀವನ ಮೌಲ್ಯಗಳಿಂದ ಮಾತ್ರ ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದಿದ್ದಾರೆ. https://ainlivenews.com/ms-dhoni-bought-a-car-worth-3-30-crores-full-viral-on-social-media/ ವಿಶ್ವ ಹಿಂದೂ ಕಾಂಗ್ರೆಸ್ ಸಮ್ಮೇಳನದಲ್ಲಿ ಥಾಯ್ಲೆಂಡ್ ಪ್ರಧಾನಿ ಜಗತ್ತಿಗೆ ಮಹತ್ವದ ಸಂದೇಶ ಸಾರಿದ್ದಾರೆ. ಹಿಂದೂ ಜೀವನ ಮೌಲ್ಯಗಳಾದ ಸತ್ಯ, ನ್ಯಾಯ, ಸಹಿಷ್ಣುತೆ , ಸಹಬಾಳ್ವೆ, ಅಹಿಂಸೆಗಂದ ಮಾತ್ರ ವಿಶ್ವದಲ್ಲಿ ಶಾಂತಿ ನಲೆಸಲಿದೆ. ಹಿಂದೂ ಸಮಾಜ ಅಭಿವೃದ್ಧಿಪರ ಹಾಗೂ ಪ್ರತಿಭಾನ್ವಿತರ ಒಕ್ಕೂಟವಾಗಿದೆ. ಕಾರ್ಯಕ್ರಮದ ಉದ್ಘಾಟನೆಗೆ ಸ್ರೆತ್ಥಾ ಥಾವಿಸನ್ ಆಗಮಿಸಬೇಕಿತ್ತು. ಆದರೆ ಅಂತಿಮ ಹಂತದಲ್ಲಿ ಕಾರಣಾಂತರಗಳಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಆದರೆ ಪ್ರದಾನಿ ಸಂದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಗಿತ್ತು.
ಡಾರ್ಲಿಂಗ್ ಪ್ರಭಾಸ್ (Prabhas) ನಟನೆಯ ಬಹುನಿರೀಕ್ಷಿತ ‘ಸಲಾರ್’ (Salaar) ಟ್ರೈಲರ್ ರಿಲೀಸ್ ಆಗಿದೆ. ಫ್ರೆಂಡ್‌ಶಿಪ್ ಜೊತೆ ಸೇಡಿನ ಕಥೆ ಹೊಂದಿರುವ ಈ ಸಿನಿಮಾದಲ್ಲಿ ರಕ್ತ ಸಿಕ್ತವಾಗಿ ಪ್ರಭಾಸ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. 3 ನಿಮಿಷ 47 ಸೆಕೆಂಡ್ ಇರುವ ಈ ಟ್ರೈಲರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೊಂಬಾಳೆ ಸಂಸ್ಥೆ ನಿರ್ಮಾಣದ ಸಲಾರ್ ಚಿತ್ರದಲ್ಲಿ ಪ್ರಭಾಸ್ ಮತ್ತು ಪೃಥ್ವಿರಾಜ್ ಜುಗಲ್‌ಬಂದಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲೂ ಪ್ರಭಾಸ್ ಖಡಕ್ ಲುಕ್, ಪೃಥ್ವಿರಾಜ್ ರಗಡ್ ಡೈಲಾಗ್ ಎಲ್ಲವೂ ಟ್ರೈಲರ್‌ನ ಹೈಲೈಟ್ ಆಗಿದೆ. ಚಿತ್ರದಲ್ಲಿ ಕನ್ನಡದ ಗುಳ್ಟು ನವೀನ್ ಶಂಕರ್, ಪ್ರಮೋದ್, ಜಗಪತಿ ಬಾಬು, ಶ್ರುತಿ ಹಾಸನ್ ಸೇರಿದಂತೆ ಅನೇಕರು ನಟಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದೇ ಡಿಸೆಂಬರ್ 22ಕ್ಕೆ ಬಹುಭಾಷೆಗಳಲ್ಲಿ ‘ಸಲಾರ್’ ರಿಲೀಸ್ ಆಗುತ್ತಿದೆ. ಸಲಾರ್ ಸಿನಿಮಾದ ಕಥೆಯ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಪ್ರಶಾಂತ್ ನೀಲ್ ಈ ಹಿಂದೆ ಕನ್ನಡದಲ್ಲಿ ಮಾಡಿದ್ದ ಉಗ್ರಂ ಸಿನಿಮಾವನ್ನೇ ಕೊಂಚ ಬದಲಿಸಿಕೊಂಡು ಚಿತ್ರ ಮಾಡಿದ್ದಾರೆ ಎಂದು ಹೇಳಲಾಗಿತ್ತು.…
ಚಾಮರಾಜನಗರ:- ನಗರದಲ್ಲಿ ರಾತ್ರೋರಾತ್ರಿ 7 ಲಕ್ಷ ಹಣ ಕಳ್ಳತನ ನಡೆದಿರುವ ಘಟನೆ ಚಾಮರಾಜನಗರದ ಸಂತೇಮರಳ್ಳಿ ವೃತ್ತದ ಬಳಿ ಇರುವ ನಂದಿನಿ ಹಾಲಿನ ಮುಖ್ಯ ಕೇಂದ್ರದಲ್ಲಿ ಜರುಗಿದೆ. ಶುಕ್ರವಾರ ರಾತ್ರಿ 1.30 ರಲ್ಲಿ ಕಳ್ಳತನ ನಡೆದಿದೆ. ಇಬ್ಬರು ಯುವಕರಿಂದ ಕಳ್ಳತನ ನಡದಿದೆ. ನಗರದ ಚಿಕ್ಕ ಅಂಗಡಿ ಬೀದಿಯಲ್ಲಿರುವ ನಂದಿನಿ ಹಾಲಿನ ಕೇಂದ್ರ. ಒಬ್ಬ ಕಳ್ಳ ಹೊರಗಿದ್ದು ಮತ್ತೊಬ್ಬ ಕಳ್ಳ ಒಳಗೆ ನುಗ್ಗಿ ಕಂತೆ ಕಂತೆ ಹಣ ಲಪಟಾಯಿಸಿದ್ದಾನೆ. ಹಣ ಕಳವು ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಶ್ವಾನ ದಳದೊಂದಿಗೆ ಪೋಲೀಸರು ದೌಡಾಯಿಸಿ ಪರಿಶೀಲನೆ ಮಾಡಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರ ಬಂದಿರುವ ನೀತು ವನಜಾಕ್ಷಿ ಅವರು ಬಿಗ್ ಮನೆಯೊಳಗಿನ ಹಲವಾರು ಸಂಗತಿಗಳನ್ನು ನೇರವಾಗಿ ಹಂಚಿಕೊಂಡಿದ್ದು, ಡ್ರೋನ್ ಪ್ರತಾಪ್ ಇರುವಿಕೆ ಹಾಗೂ ಇರುವ ರೀತಿಯ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಕೂಡ ನನ್ನ ನೆಚ್ಚಿನ ಸ್ಪರ್ಧಿಯೇ ಆಗಿದ್ದರು. ಯಾಕಂದ್ರೆ ಪ್ರತಿಯೊಬ್ಬರು ಅವರದ್ದೇ ಆಟವಾಡುತ್ತಿದ್ದಾರೆ. ಜತೆಗೆ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ. ತುಂಬ ಇಷ್ವವಾದಂತ ವ್ಯಕ್ತಿಗಳು ಅಂದ್ರೆ ಅದು ಡ್ರೋನ್ ಪ್ರತಾಪ್ ಮತ್ತು ವರ್ತೂರು ಸಂತೋಷ್. ಇವರಿಬ್ಬರು ಬಹಳ ಟ್ರೂ ಅನಿಸುತ್ತಿತ್ತು. ಇಬ್ಬರೊಂದಿಗೂ ಸಹ ಉತ್ತಮ ಸಂಬಂಧವಿತ್ತು. ನಾನು ಮನೆಯಿಂದ ಹೊರಬರುವಾಗ ಪ್ರತಾಪ್ ಕಣ್ಣೀರಿಟ್ಟ. ಅವನು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಯೋಚಿಸಿ ತೆಗೆದುಕೊಳ್ಳುತ್ತಾನೆ’ ಎಂದರು. ‘ಪ್ರತಾಪ್ ಮಾತಿನಲ್ಲಿ ಸ್ಪಷ್ಟತೆ ಇದೆ. ಅವನು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಸರಿಯಾಗಿ ಪರಿಗಣಿಸುತ್ತಾನೆ ಎಂದಿದ್ದಾರೆ.
ಚಾಮರಾಜನಗರ:- ಅಪಘಾತದಲ್ಲಿ ಮೆದುಳು ನಿಷ್ಕ್ರೀಯವಾಗಿ ಸಾವಪ್ಪಿದ ಯುವಕ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಘಟನೆ ಜರುಗಿದೆ. ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ವಾಸಿ ದರ್ಶನ್ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ ಎಂದು ಗುರುತಿಸಲಾಗಿದೆ. ದರ್ಶನಗೆ ಅಪಘಾತವಾಗಿ ಮೆದುಳು ಪೆಟ್ಟಾಗಿತ್ತು. ಪೆಟ್ಟಾದ ಹಿನ್ನೆಲೆ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹನೂರು ಪಟ್ಟಣದ ನಿವಾಸಿಗಳಾದ ಶಶಿ ಮತ್ತು ಸುಶೀಲಾ ದಂಪತಿ ಪುತ್ರ ದರ್ಶನ್ ಎನ್ನಲಾಗಿದೆ. ರಸ್ತೆ ಅಪಘಾತವಾದ ಹಿನ್ನಲೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು ಎನ್ನಲಾಗಿದೆ. ನಂತರ ಪೋಷಕರು ತಮ್ಮ ಪುತ್ರನ ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿ ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ದರ್ಶನ್ ತನ್ನ ಸಾವಿನಲ್ಲಿ ಅಂಗಾಂಗ ದಾನ ಮಾಡುವ ಮೂಲಕ ಸಾರ್ಥಕತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ. ಮೈಸೂರಿನ ಅಪೋಲೋ ಆಸ್ಪತ್ರೆಗೆ ದರ್ಶನ್ ಹೃದಯ ಮತ್ತು ಹೃದಯದ ನಾಳ, ಶ್ವಾಸಕೋಸ ನಾಶಗಳು, ಪಿತ್ತಕೋಂಶ(ಲಿವರ್), ಮೂತ್ರಪಿಂಡ(ಕಿಡ್ನಿ), ಕಣ್ಣು, ದಾನ…