ನನ್ನ ಹೃದಯ ಆರ್ಸಿಬಿಯಲ್ಲೇ ಇದೆ ಎಂದು ಮಿಸ್ಟರ್ 360 ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಭವಿಷ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆ ಮರಳಲು ಬಯಸುತ್ತೇನೆ ಎಂದರು. ಆದರೂ ಅವರಿಗೆ ಆರ್ಸಿಬಿ ಬಗ್ಗೆ ವಿಶೇಷವಾದ ಅಭಿಮಾನವಿದೆ. ಹೀಗಾಗಿ ಅವರು ಈ ತಂಡವನ್ನು ಅವರು ಪದೇಪದೇ ಉಲ್ಲೇಖಿಸುತ್ತಾರೆ. ಐಪಿಎಲ್ನಲ್ಲಿ ಎಬಿ ಡಿವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಮತ್ತೆ ಒಂದಾಗುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ಕಾಲ ಕೂಡಿ ಬಂದಿಲ್ಲ. ಅವರು ಆರ್ಸಿಬಿಗೆ ಮಾರ್ಗದರ್ಶಕರಾಗಿ ಸೇರುತ್ತಾರೆ ಎಂಬ ವದಂತಿಗಳಿದ್ದವು. ಅದು ಸುಳ್ಳಾಯಿತು. ಎಬಿ ಡಿವಿಲಿಯರ್ಸ್ ಕಳೆದ ಋತುವಿನಲ್ಲಿ ಅಭಿಮಾನಿಗಳಿಗೆ ವಿದಾಯ ಹೇಳಲು ಬೆಂಗಳೂರಿಗೆ ಬಂದಿದ್ದರು. ಆದಾಗ್ಯೂ, ಅವರು ಮುಂದಿನ ದಿನಗಳಲ್ಲಿ ಆರ್ಸಿಬಿಗೆ ಸೇರಲು ಎದುರು ನೋಡುತ್ತಿದ್ದಾರೆ. ಆರ್ಸಿಬಿ ನನ್ನ ಹೃದಯದಲ್ಲಿದೆ ಎಂದು ಹೇಳುವ ಮೂಲಕ ಅವರ ಈ ಮಾತಿಗೆ ಪುಷ್ಟಿ ಕೊಟ್ಟಿದ್ದಾರೆ.
Author: AIN Author
ಕಲಬುರಗಿ:- ಜಿಲ್ಲೆಯ ಚಿತ್ತಾಪುರ ತಾಲೂಕಿನ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಹಲಕರ್ಟಿಯಲ್ಲಿ ವೀರಭದ್ರೇಶ್ವರ ಜಾತ್ರೆ ಅದ್ದೂರಿಯಾಗಿ ನಡೆಯಿತು. ಕಲ್ಯಾಣ ಕರ್ನಾಟಕದ ಅತ್ಯಂತ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಈ ಹಲಕರ್ಟಿ ಗ್ರಾಮದ ವೀರಭದ್ರೇಶ್ವರ ಸನ್ನಿಧಿಗೆ ಅಪಾರ ಭಕ್ತರು ನಿನ್ನೆಯಿಂದಲೇ ಆಗಮಿಸಿದ್ರು. ಅಗ್ಗಿ ತುಳಿಯುವುದು ರಥೋತ್ಸವ ನಡೆಯುವುದು ಹಾಗು ಪುರವಂತಿಕೆ ಆಡುವುದು ಈ ಜಾತ್ರೆಯ ವೈಶಿಷ್ಟ್ಯ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಜಾತ್ರೆಗೆ ಆಗಮಿಸಿ ಜನ ಹರ ಹರಾ ವೀರಭಧ್ರ ಅಂತ ಘೋಷಣೆ ಕೂಗುತ್ತ ವೀರಭದ್ರೇಶ್ವರನ ಕೃಪೆಗೆ ಪಾತ್ರರಾದರು. ಸತತ ಒಂದು ವಾರಗಳ ಕಾಲ ಜಾತ್ರೆಯ ರಂಗು ಜನರ ಕಣ್ಮನ ಸೆಳೆಯುತ್ತೆ..
ಮಂಗಳೂರು:- ಡಯಾಲಿಸಿಸ್ ಸಮಸ್ಯೆ ನಮ್ಮ ಸರ್ಕಾರದಿಂದ ಆಗಿದ್ದಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು, ಡಯಾಲಿಸಿಸ್ ಸಿಬ್ಬಂದಿಯ ಸಮಸ್ಯೆಯ ಬಗ್ಗೆ ನಮಗೆ ಖಾಳಜಿ ಇದೆ. ಟೆಂಟರ್ ಪ್ರಕ್ರಿಯೆ ಮುಗಿಯಲಿ ಆ ಬಳಿಕ ನಿರ್ಧಾರ ಮಾಡೋಣ ಎಂದರು. ನಾನು ಸಚಿವನಾಗುವ ಮೊದಲೇ ವ್ಯವಸ್ಥೆಯಲ್ಲಿ ಗೊಂದಲ ಇತ್ತು, ಬಿಜೆಪಿ ಸರ್ಕಾರ ಎರಡು ಏಜನ್ಸಿಗಳಿಗೆ ಕೊಟ್ಟಿತ್ತು, ಒಬ್ಬರು ಅರ್ಧದಲ್ಲೇ ಬಿಟ್ಟಿದ್ದರು. ಆ ಏಜನ್ಸಿ ನಿರ್ವಹಣೆ ಸರಿ ಇರಲಿಲ್ಲ, ಹಾಗಾಗಿ ಸಂಬಳ ಸರಿಯಾಗಿ ಕೊಟ್ಟಿರಲಿಲ್ಲ, ಇದೀಗ ಟೆಂಟರ್ ಪ್ರಕ್ರಿಯೆ ಮುಗಿಯಲಿ ಆ ಬಳಿಕ ನಿರ್ಧಾರ ಮಾಡೋಣ ಅಂತ ತಿಳಿಸಿದ್ದಾರೆ.
ಶಿರಸಿ:- ಯಾರನ್ನೂ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಮಾಡಲು ಆಗದು’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಕಡೆಗಣನೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ’30 ವರ್ಷಗಳಿಂದ ರಾಜಕಾರಣದಲ್ಲಿ ಇರುವ ಹರಿಪ್ರಸಾದ್ ಅವರನ್ನು ಕಡೆಗಣನೆ ಮಾಡುವ ಪ್ರಶ್ನೆಯೇ ಇಲ್ಲ. ಅವರೊಂದಿಗೆ ಚರ್ಚಿಸಲಾಗುವುದು’ ಎಂದರು. ಬಹಳಷ್ಟು ಹಿರಿಯ ನಾಯಕರಿಗೆ ಸ್ಥಾನ ನೀಡಿಲ್ಲ. ಅವಕಾಶ ಬಂದಾಗ, ಅವರಿಗೂ ಸ್ಥಾನಮಾನ ಸಿಗಲಿದೆ. 25 ಶಾಸಕರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ನೀಡಲಾಗುವುದು. ಹಂತಹಂತವಾಗಿ ಎಲ್ಲರನ್ನೂ ಸಮಾಧಾನ ಮಾಡಲಾಗುವುದು. ಯಾರೂ ಅಸಮಾಧಾನ ಪಡಬೇಕಿಲ್ಲ’ ಎಂದರು.
ಬೆಂಗಳೂರು:- ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ ಏಳು ಲಕ್ಷ ಕೋಟಿ ರೂ. ಹೂಡಿಕೆ ಗುರಿ ಹೊಂದಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ವಾರ್ಷಿಕ 1.40 ಲಕ್ಷ ಕೋಟಿ ರೂ.ಗಳಂತೆ ಮುಂದಿನ ಐದು ವರ್ಷಗಳಲ್ಲಿ ಒಟ್ಟು ಏಳು ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಗುರಿ ನಿಗದಿಯಾಗಿದೆ. ಹೂಡಿಕೆ ಆಕರ್ಷಣೆಗೆ ಪೂರಕವಾದ ಉಪಕ್ರಮಗಳಿಗೆ ಚಾಲನೆ ನೀಡಲಾಗಿದೆ. ಭವಿಷ್ಯದ ತಂತ್ರಜ್ಞಾನ, ಸುಧಾರಿತ ತಯಾರಿಕೆ ಕ್ಷೇತ್ರದಲ್ಲಿ ಕರ್ನಾಟಕವನ್ನು ಏಷ್ಯಾದಲ್ಲಿಯೇ ಅತ್ಯುತ್ತಮ ಬಂಡವಾಳ ಹೂಡಿಕೆಯ ತಾಣವನ್ನಾಗಿ ಮಾಡುವ ಮಹತ್ವಾಕಾಂಕ್ಷೆ ಹೊಂದಿದೆ. ಸದ್ಯದ ಹೂಡಿಕೆಮಟ್ಟದಲ್ಲಿ ಶೇ.75ರಷ್ಟು ಹೆಚ್ಚಿಸಬೇಕೆಂಬ ಅಭಿಲಾಷೆಯಿದೆ. ರಾಜ್ಯದ ಕೈಗಾರಿಕಾ ಬೆಳವಣಿಗೆ ದರವನ್ನು ಐದು ವರ್ಷಗಳಲ್ಲಿ ಶೇ.15 ರಿಂದ 16ರಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಪ್ರತಿ ವರ್ಷ 80 ಸಾವಿರ ಕೋಟಿ ರೂ. ಮೊತ್ತದ ಹೂಡಿಕೆ ಹರಿದುಬರುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಮಾಹಿತಿ ನೀಡಿದ್ದಾರೆ. ಆದ್ಯತಾ ವಲಯಗಳ ಕಡೆಗೆ ಹೂಡಿಕೆದಾರರನ್ನು ಆಕರ್ಷಿಸಲು, ವಿಶ್ವದರ್ಜೆಯ ಕೈಗಾರಿಕಾ…
ಪುಣೆ:- ಬಿಜೆಪಿ ಜೊತೆ ಕೈಜೋಡಿಸುವ ಪ್ರಶ್ನೆಯೇ ಇಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಜೊತೆಗೆ ಎನ್‌ಸಿಪಿ ಕೈಜೋಡಿಸುವುದಿಲ್ಲ ಎಂಬುದು ಸ್ಪಷ್ಟ. ಇದಕ್ಕೆ ವಿರುದ್ಧವಾದ ಯಾವುದೇ ಸಲಹೆಗೂ ನಮ್ಮ ಸಹಮತ ಇಲ್ಲ’ ಎಂದರು. ಯಾರಾದರೂ ನಾವು ಬಿಜೆಪಿ ಬೆಂಬಲಿಸಬೇಕು ಎಂದು ಸಲಹೆ ನೀಡಿದ್ದರೆ ಅದು ನಮ್ಮ ನಿಲುವಿಗೆ ವಿರುದ್ಧವಾದುದು. ಈ ಸಲಹೆಯನ್ನು ಪಕ್ಷದ ಹಲವರು ಒಪ್ಪುವುದಿಲ್ಲ. ಈ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ’ ಎಂದರು. ‘ಬೆಳಗಿನ ಜಾವ ಪ್ರಮಾಣವಚನ ಸ್ವೀಕರಿಸಿದ್ದ ಯಾರಾದರೂ ಬಿಜೆಪಿ ಬೆಂಬಲಿಸುವುದು ಪಕ್ಷದ ನೀತಿ ಎಂದು ಹೇಳಿರಬಹುದು. ಆ ವ್ಯಕ್ತಿಯನ್ನು ಗಂಭೀರವಾಗಿ ಪರಿಗಣಿಸಬಾರದು’ ಎಂದು ಅಜಿತ್ ಪವಾರ್ ಉಲ್ಲೇಖಿಸಿ ಹೇಳಿದರು.
ಬೆಂಗಳೂರು:- ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ ಇಬ್ಬರನ್ನು ಜೆಪಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ನಿನ್ನೆ ರಾತ್ರಿ ಪಾಕಿಸ್ತಾನಕ್ಕೆ ಜೈ ಎಂದು ಕೂಗಿದರು. ಇದೀಗ ಬಂಧಿಸಲಾಗಿದ್ದು, ಇನಾಯತ್ ಉಲ್ಲಾ ಖಾನ್ ಹಾಗೂ ಸೈಯದ್ ಮುಬಾರಕ್ ಬಂಧಿತರು. ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಡಿಗೇಡಿಗಳು ನಿನ್ನೆ ರಾತ್ರಿ ಪಬ್ ವೊಂದರಲ್ಲಿ ಮದ್ಯಪಾನ ಮಾಡಿ ಘೋಷಣೆ ಕೂಗಿದರು. ಮದ್ಯದ ನಶೆಯಲ್ಲಿ ಕೂಗಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದರು. ಜೆ.ಪಿ ನಗರ ಮೊದಲನೇ ಹಂತದಲ್ಲಿರುವ ಪಬ್ ಇದಾಗಿದ್ದು, ನಿನ್ನೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟಿ೨೦ ಪಂದ್ಯವಿತ್ತು. ಪಬ್ ನಲ್ಲಿ ಪಂದ್ಯ ವೀಕ್ಷಣೆ ಮಾಡುತ್ತಿದ್ದ ಇಬ್ಬರು. ಈ ವೇಳೆ ಪಾಕಿಸ್ತಾನ ಪರವಾಗಿ ಆಸಾಮಿಗಳು ಘೋಷಣೆ ಕೂಗಿದ್ದಾರೆ. ಪಾಕ್ ಪರವಾಗಿ ಘೋಷಣೆ ಕೂಗಿದ್ದಕ್ಕೆ ಇತರರಿಂದ ಆಕ್ಷೇಪ ವ್ಯಕ್ತಪಡಿಸಲಾಗಿದೆ. ನಂತರ ಪಬ್ ನಲ್ಲಿದ್ದವರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇಬ್ಬರನ್ನ ವಶಕ್ಕೆ ಪಡೆ ಜೆ ಪಿ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು:- ರಾಜಧಾನಿ ಬೆಂಗಳೂರಿನ ಕೆಆರ್ ಪುರ ಸಮೀಪದ ಚಿಕ್ಕಬಸವನಪುರದಲ್ಲಿ 5 ಎಕರೆ ಸರ್ಕಾರಿ ಭೂಮಿಯನ್ನು ಖಾಸಗೀ ವ್ಯಕ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಪೂರ್ವ ತಾಲ್ಲೂಕು ವಿಶೇಷ ತಹಶೀಲ್ದಾರ್ ಎಸ್ , ಆರ್ ಮಹೇಶ್ ಅವರಿಗೆ ದೂರು ನೀಡಿ ಒತ್ತುವರಿ ಜಾಗವನ್ನ ತೆರವುಗೊಳ್ಳಿಸುವಂತೆ ಗ್ರಾಮಸ್ಥರು ಮನವಿ ಪತ್ರಸಲ್ಲಿಸಿದ್ದಾರೆ . ಈ ವೇಳೆ ಮಾಧ್ಯಮಗಳ ಜೊತೆ ದೂರುದಾರ ಪ್ರತಾಪ್ ಕುಮಾರ್ ಮಾತನಾಡಿ ಚಿಕ್ಕಬಸವನಪುರದ ಸರ್ವೆ ನಂ. 1. ರಲ್ಲಿ 16 ಎಕರೆ, 18 ಗುಂಟೆ ಸರ್ಕಾರಿ ಜಮೀನಿದ್ದು, ಇದರ ಪೈಕಿ 4 ಎಕರೆ 28 ಗುಂಟೆ ಖರಾಬು ಜಾಗವಾಗಿದ್ದು, ಉಳಿದ 8 ಎಕರೆ 10 ಗುಂಟೆ ಜಾಗದಲ್ಲಿ 3 ಎಕರೆ 10 ಗುಂಟೆ ಭೂಮಿ ಡಿ ರಾಮಯ್ಯರೆಡ್ಡಿ ಎಂಬುವವರಿಗೆ ಮಂಜೂರಾಗಿದೆ . ಉಳಿದ 5 ಎಕರೆ ಸರ್ಕಾರಿ ಭೂಮಿ ಕಬಳಿಸಲು ಅವರ ಅಣ್ಣತಮ್ಮದಿರು ಸರ್ಕಾರಿ ಜಾಗ ನಮ್ಮ ಸ್ವತ್ತು ಎಂದು ನ್ಯಾಯಲಯದ ಮೊರೆ ಹೋಗಿದ್ದು , ನ್ಯಾಯಲಯ ಇದು…
ಬೆಂಗಳೂರು:- ಗುರು ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್, ವಸಿಷ್ಠ ಬ್ಯಾಂಕ್ ಮತ್ತು ಗುರು ಸಾರ್ವಭೌಮ ಬ್ಯಾಂಕ್‌ಗಳ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಲಾಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಸಿದ್ದರಾಮಯ್ಯ, ಸಾವಿರಾರು ಮಂದಿ ಠೇವಣಿದಾರರು ತಮ್ಮ ನಿವೃತ್ತಿ ಜೀವನಕ್ಕೆ ಆಧಾರವಾಗಲೆಂದು, ಮಕ್ಕಳ ಮದುವೆ, ಸ್ವಂತ ಮನೆ ಖರೀದಿ ಮುಂತಾದ ಕನಸುಗಳನ್ನು ಇಟ್ಟುಕೊಂಡು ತಮ್ಮ ಜೀವಮಾನದ ಉಳಿತಾಯವನ್ನೆಲ್ಲ ಬ್ಯಾಂಕಿನಲ್ಲಿ ಹೂಡಿಕೆ ಮಾಡಿದ್ದರು. ಬ್ಯಾಂಕಿನವರ ವಂಚನೆಯಿಂದಾಗಿ ಅವರೆಲ್ಲರೂ ಮುಂದಿನ ತಮ್ಮ ಜೀವನದ ಬಗ್ಗೆ ದಿಕ್ಕು ತೋಚದಂತಾಗಿದ್ದಾರೆ. ವಂಚನೆಗೊಳಗಾದ ಠೇವಣಿದಾರರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಈ ಹಿಂದೆ ಪ್ರತಿಪಕ್ಷ ನಾಯಕನಾಗಿದ್ದ ಸಂದರ್ಭದಲ್ಲಿಯೂ ಸದನದ ಒಳಗೆ ಮತ್ತು ಹೊರಗೆ ಧ್ವನಿಯೆತ್ತಿದ್ದೆ, ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದೆ. ಆಗಲೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬುದು ನಮ್ಮ ಒತ್ತಾಯವಾಗಿತ್ತು. ಠೇವಣಿ ಹಣ ಕಳೆದುಕೊಂಡವರ ಹತಾಶೆ, ಸಂಕಟವನ್ನು ಕಣ್ಣಾರೆ ಕಂಡಿದ್ದೇನೆ. ಈ ಕಾರಣಕ್ಕಾಗಿ ಸೂಕ್ತ ತನಿಖೆ ನಡೆದು, ಎಲ್ಲ ಸಂತ್ರಸ್ತರಿಗೂ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ…
ಬೆಂಗಳೂರು:- ಗ್ರಾಹಕರೇ ಎಚ್ಚರ! ರಾಜ್ಯದಲ್ಲಿ ಪೂರೈಕೆಯಾಗುವ ಹಾಲಿನಲ್ಲಿ ವಿಷಕಾರಿ ರಾಸಾಯನಿಕಗಳು ಪತ್ತೆ ಆಗುತ್ತಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಹಾಲಿನ ಗುಣಮಟ್ಟದ ಬಗ್ಗೆ ಆರೋಪಗಳು ಕೇಳಿ ಬಂದಿದ್ವು. ಈ ಹಿನ್ನೆಲೆ 31 ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ 44 ಬ್ರ್ಯಾಂಡ್‌ಗಳ 259 ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ ಪರೀಕ್ಷೆಗಾಗಿ ಕೆಎಂಎಫ್ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಈ ಎಲ್ಲಾ ಮಾದರಿಗಳನ್ನು ವೈಜ್ಞಾನಿಕವಾಗಿ ಪರೀಕ್ಷಿಸಲಾಗಿದ್ದು, ಫಲಿತಾಂಶ ಆತಂಕಕಾರಿಯಾಗಿದೆ. 259 ಮಾದರಿಗಳಲ್ಲಿ ಮೂರು ಮಾದರಿಗಳು ಕಲಬೆರಕೆಯಾಗಿವೆ. 98 ಮಾದರಿಗಳ ಹಾಲಿನ ಗುಣಮಟ್ಟ ಕಳಪೆಯಾಗಿದೆ. 9 ಮಾದರಿಗಳು ಕಲಬೆರಕೆಯಾಗಿದ್ದು, ಗುಣಮಟ್ಟ ಕಳಪೆಯಾಗಿದೆ. 110 ಮಾದರಿಗಳ ಗುಣಮಟ್ಟ ಫುಡ್ ಸೇಫ್ಟಿ ಆಯಂಡ್ ಸ್ಟ್ಯಾಂಡರ್ಡ್ ರೆಗ್ಯುಲೇಷನ್ (FSSR) ಆಯಕ್ಟ್‌ನ ಮಾನದಂಡಕ್ಕೆ ಅನುಗುಣವಾಗಿಲ್ಲ. 149 ಮಾದರಿಗಳ ಗುಣಮಟ್ಟ ಮಾತ್ರ FSSRನ ಮಾನದಂಡಕ್ಕೆ ಅನುಗುಣವಾಗಿದೆ ಅಂತ FSSAI ತಿಳಿಸಿದೆ. ಇತ್ತ ನಂದಿನಿ ಬ್ರ್ಯಾಂಡ್‌ನ ಹಾಲು ಗುಣಮಟ್ಟದಿಂದ ಕೂಡಿದೆ ಮತ್ತು FSSR ಮಾನದಂಡಕ್ಕೆ ಅನುಗುಣವಾಗಿದೆ ಹಾಗೂ ನಂದಿನಿ ಹಾಲಿನಲ್ಲಿ ಕಲಬೆರಕೆ ಅಂಶ ಪತ್ತೆಯಾಗಿಲ್ಲ