ಹುಬ್ಬಳ್ಳಿ: ಇಲ್ಲಿಯ ಉತ್ತರ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಭಾಭವನದಲ್ಲಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಮೂಲಸೌಕರ್ಯ ಕಲ್ಪಿಸುವ ಕುರಿತು ಚರ್ಚೆ ನಡೆಸಲಾಯಿತು. ಸಂಘದ ಸದಸ್ಯರು ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರಲ್ಲಿ ಮನವಿ ಮಾಡಿದರು. ಕೈಗಾರಿಕಾ ವಸಾಹತು ಪ್ರದೇಶದ ಹಲವು ಘಟಕಗಳು ಮಹಾನಗರ ಪಾಲಿಕೆಗೆ ಬಹಳ ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸಿಲ್ಲ. ಪಾಲಿಕೆಯ ವತಿಯಿಂದ ಅಧಿಕಾರಿಗಳನ್ನು ಕಳುಹಿಸಿ ತೆರಿಗೆ ಸಂಗ್ರಹಣೆ ಮಾಡಲಾಗುವುದು. ಅಗತ್ಯ ಮೂಲಸೌಕರ್ಯಗಳ ಕುರಿತು ಮಾಹಿತಿ ನೀಡಿ. ಕಸ ವಿಲೇವಾರಿಗಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು. ಶಾಸಕ ಮಹೇಶ ಟೆಂಗಿನಕಾಯಿ ಹಾಗೂ ಮೇಯರ್ ವೀಣಾ ಬರದ್ವಾಡ ಮಾತನಾಡಿ ಅತಿ ಶೀಘ್ರದಲ್ಲಿ ಇಲ್ಲಿಯ ಕುಂದು ಕೊರತೆಗಳನ್ನು ನಿವಾರಿಸಲಾಗುವುದು ಎಂದು ಭರವಸೆ ನೀಡಿದರು. ಸಂಘದ ಅಧ್ಯಕ್ಷ ಗಿರೀಶ ನೆಲವಡಿ ಮಾತನಾಡಿ, ಕೈಗಾರಿಕಾ ವಲಯದಲ್ಲಿ ಬೀದೀಪ, ಯುಜಿಡಿ, ಹಾಗೂ ಘನತ್ಯಾಜ್ಯ ವಸ್ತು ಸಂಗ್ರಹಣೆಯಲ್ಲಿ ವ್ಯತ್ಯಯ ಉಂಟಾಗುತ್ತಿದ್ದು…
Author: AIN Author
ಲಂಡನ್: ಕಳೆದ ತಿಂಗಳು ಯುಕೆಯಲ್ಲಿ ನಾಪತ್ತೆಯಾಗಿದ್ದ 23 ವರ್ಷದ ಭಾರತೀಯ ವಿದ್ಯಾರ್ಥಿ ಲಂಡನ್‌ನ (London) ಥೇಮ್ಸ್ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮಿತ್‌ಕುಮಾರ್ ಪಟೇಲ್ ಸೆಪ್ಟೆಂಬರ್‌ನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಯುಕೆಗೆ ಆಗಮಿಸಿದ್ದು, ನವೆಂಬರ್ 17 ರಂದು ನಾಪತ್ತೆಯಾಗಿದ್ದ. ಮೆಟ್ರೋಪಾಲಿಟನ್ ಪೊಲೀಸರು ನವೆಂಬರ್ 21 ರಂದು ಪೂರ್ವ ಲಂಡನ್‌ನ ಕ್ಯಾನರಿ ವಾರ್ಫ್ ಪ್ರದೇಶದ ಬಳಿ ಥೇಮ್ಸ್ ನದಿಯಲ್ಲಿ ಈತನ ದೇಹವನ್ನು ಪತ್ತೆ ಮಾಡಿದ್ದಾರೆ. https://ainlivenews.com/witchcraft-in-the-prestigious-karnataka-university-professors-chamber/ ಪಟೇಲ್ ರೈತ ಕುಟುಂಬಕ್ಕೆ ಸೇರಿದಾತ. ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ. ನವೆಂಬರ್ 17, 2023 ರಿಂದ ನಾಪತ್ತೆಯಾಗಿದ್ದ. ಈಗ ನವೆಂಬರ್ 21 ರಂದು ಪೊಲೀಸರು ಕ್ಯಾನರಿ ವಾರ್ಫ್‌ನಿಂದ ನೀರಿನಲ್ಲಿ ಆತನ ಮೃತದೇಹ ಹೊರತೆಗೆದಿದ್ದಾರೆ. ನಮ್ಮೆಲ್ಲರಿಗೂ ದುಃಖವಾಯಿತು. ಆದ್ದರಿಂದ, ನಾವು ಅವರ ಕುಟುಂಬಕ್ಕೆ ಸಹಾಯ ಮಾಡಲು ಮತ್ತು ಆತನ ದೇಹವನ್ನು ಭಾರತಕ್ಕೆ ಕಳುಹಿಸಲು ನಿಧಿ ಸಂಗ್ರಹಿಸಲು ನಿರ್ಧರಿಸಿದ್ದೇವೆ ಎಂದು ಸಂಬಂಧಿ ಪಾರ್ಥ್ ಪಟೇಲ್ ತಿಳಿಸಿದ್ದಾರೆ. ಈವ್ನಿಂಗ್ ಸ್ಟ್ಯಾಂಡರ್ಡ್ ಪತ್ರಿಕೆಯ ಪ್ರಕಾರ, ವಿದ್ಯಾರ್ಥಿಯು ನವೆಂಬರ್ 20 ರಂದು ಶೆಫೀಲ್ಡ್ ಹಾಲಮ್ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾಭ್ಯಾಸ ಆರಂಭಿಸಿದ್ದ.…
ಕೋಲಾರ:- ರಾಜ್ಯ ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದೆ ಸಂಸದ ಮುನಿಸ್ವಾಮಿ ಆರೋಪ ಮಾಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ಕಳೆದ 5 ತಿಂಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐಸಿಯುನಲ್ಲಿದೆ. ರಾಜ್ಯದಲ್ಲಿ ಅಭಿವೃದ್ಧಿ ಎಂಬುವುದು ಸಂಪೂರ್ಣವಾಗಿ ವಿಫಲವಾಗಿದೆ, ರಾಜ್ಯದಲ್ಲಿ ಭೀಕರ ಬರಗಾಲ ವ್ಯಾಪಿಸಿದ್ದು ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಜಿಲ್ಲೆಯ ಉಸ್ತುವಾರಿ ಸಚಿವರು ಬರ ಅಧ್ಯಯನಕ್ಕೆ ಯಾವೂದೇ ತಾಲೂಕಿಗೂ ಭೇಟಿ ನೀಡಿಲ್ಲ, ಬರಪರಿಹಾರಕ್ಕೆ ನಯಾ ಪೈಸೆ ಬಿಡುಗಡೆ ಮಾಡಿಲ್ಲ ಎಂದರು. ಕಾಂಗ್ರೆಸ್ ಸರ್ಕಾರವು ಹಣ ವಸೂಲಾತಿಯಲ್ಲಿ ತೊಡಗಿದೆ. ಕೆಎಂಎಫ್ ಕಟ್ಟಡಕ್ಕೆ ಹಣ ಬಿಡುಗಡೆ ಮಾಡಿದರೆ ತಮ್ಮ ಕುಟುಂಬದವರನ್ನು ಕರೆದುಕೊಂಡು ವಿದೇಶಗಳಲ್ಲಿ ಮೋಜುಮಸ್ತಿ ಮಾಡಲು ಹೋಗಿದ್ದಾರೆ. ಕೆ.ಎಂ.ಎಫ್ ಆಡಳಿತ ಮಂಡಳಿಯು ಹಾಲು ಉತ್ಪಾದಕರ ಸಮಸ್ಯೆಗಳಿಗೆ ಸ್ಪಂದಿಸದೆ ಹೊಟ್ಟೆಯ ಮೇಲೆ ಬರೆ ಎಳೆದಿದೆ ಎಂದರು. ಕಾಂಗ್ರೆಸ್ ಸರ್ಕಾರ ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುವ ಮೂಲಕ ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದೆ, ಕಳೆದ ಬಿಜೆಪಿ ಆಡಳಿತದಲ್ಲಿನ ಅಭಿವೃದ್ದಿ ಯೋಜನೆಗಳನ್ನು ರಾಜ್ಯ ಸರ್ಕಾರ ತಾನು ಮಾಡಿದಂತೆ ಬಿಂಬಿಸಲು ಜೇಬಿನಲ್ಲಿ ಕತ್ತರಿ ಇಟ್ಟುಕೊಂಡು ಟೇಪುಗಳನ್ನು…
IAF ಅಧಿಕೃತ ಅಧಿಸೂಚನೆಯ ಮೂಲಕ AFCAT ಪ್ರವೇಶ, NCC ವಿಶೇಷ ಪ್ರವೇಶ ಪೋಸ್ಟ್‌ಗಳನ್ನು ಭರ್ತಿ ಮಾಡಲು ಭಾರತೀಯ ವಾಯುಪಡೆಯು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 30-Dec-2023 ರಂದು ಅಥವಾ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. IAF ಹುದ್ದೆಯ ಅಧಿಸೂಚನೆ ಸಂಸ್ಥೆಯ ಹೆಸರು: ಇಂಡಿಯನ್ ಏರ್ ಫೋರ್ಸ್ (IAF) ಹುದ್ದೆಗಳ ಸಂಖ್ಯೆ: 317 ಉದ್ಯೋಗ ಸ್ಥಳ: ಅಖಿಲ ಭಾರತ ಹುದ್ದೆಯ ಹೆಸರು: AFCAT ಪ್ರವೇಶ, NCC ವಿಶೇಷ ಪ್ರವೇಶ ವೇತನ: ರೂ.56100-177500/- ಪ್ರತಿ ತಿಂಗಳು IAF ಹುದ್ದೆಯ ವಿವರಗಳು ಫ್ಲೈಯಿಂಗ್ ಬ್ರಾಂಚ್- 38 ಗ್ರೌಂಡ್ ಡ್ಯೂಟಿ (ತಾಂತ್ರಿಕ)- 165 ಗ್ರೌಂಡ್ ಡ್ಯೂಟಿ (ತಾಂತ್ರಿಕವಲ್ಲದ)- 114 IAF ನೇಮಕಾತಿ 2023 ಅರ್ಹತೆಯ ವಿವರಗಳು ಫ್ಲೈಯಿಂಗ್ ಬ್ರಾಂಚ್: 12ನೇ, B.E ಅಥವಾ B.Tech, ಪದವಿ ಗ್ರೌಂಡ್ ಡ್ಯೂಟಿ (ತಾಂತ್ರಿಕ): 12 ನೇ, ಪದವಿ, ಸ್ನಾತಕೋತ್ತರ ಪದವಿ ಗ್ರೌಂಡ್ ಡ್ಯೂಟಿ…
ಒಗ್ಗರಣೆ ಅಥವಾ ಆಹಾರ ಘಮ ಹೆಚ್ಚಿಸುವ ಕರಿಬೇವನ್ನು ತಿನ್ನುವವರು ತುಂಬಾ ವಿರಳ. ಸಾಮಾನ್ಯ ಮಸಾಲೆಯುಕ್ತ ಎಲ್ಲ ಆಹಾರ ಪದಾರ್ಥಗಳಲ್ಲೂ ಕರಿಬೇವು ಎಲೆಗಳನ್ನು ಬಳಸಲಾಗುತ್ತಿದ್ದರೂ, ಇದನ್ನು ತಿನ್ನದೆ ಮೂಲೆಗೆ ತಳ್ಳುವವರೇ ಹೆಚ್ಚು. ಆದರೆ ಕರಿಬೇವು ಕೇವಲ ಆಹಾರದ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು ಎಂಬುದು ನೆನಪಿಟ್ಟುಕೊಳ್ಳಿ. ನಮ್ಮ ದಿನನಿತ್ಯದ ಆಹಾರದಲ್ಲಿ ಕರಿಬೇವು ಬಳಸುವುದರಿಂದ ಸಿಗುವ ಪ್ರಯೋಜನಗಳಾವುವು ಎಂಬುದನ್ನು ಇಲ್ಲಿ ತಿಳಿಸಲಾಗಿದೆ. ಕರಿಬೇವಿನ ಎಲೆಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ: ಕರಿಬೇವಿನಲ್ಲಿ ಜೀರ್ಣಕ್ರಿಯೆಯನ್ನು ಉತ್ತೇಜಿಸುವ ವಿರೇಚಕ ಗುಣಲಕ್ಷಣಗಳಿವೆ. ಆಯುರ್ವೇದವು ಇದನ್ನು ಕರುಳಿನ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ಪಾನೀಯವೆಂದು ಪರಿಗಣಿಸುತ್ತದೆ. ನೀವು ಕರಿಬೇವಿನ ಎಲೆಯ ಗೊಂಚಲನ್ನು ನಿಂಬೆ ರಸದೊಂದಿಗೆ ಅರೆದು ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು ಅಥವಾ ಒಂದು ಲೋಟ ಲಸ್ಸಿಗೆ ಈ ಎಲೆಗಳನ್ನು ಸೇರಿಸಬಹುದು. ಇದು ಸೋಂಕುಗಳನ್ನು ದೂರವಿಡುತ್ತದೆ: ಕರಿಬೇವಿನ ಎಲೆಗಳು ಕಾರ್ಬಜೋಲ್ ಆಲ್ಕಲಾಯ್ಡ್ಗಳು ಎಂಬ ಸಂಯುಕ್ತವನ್ನು ಹೊಂದಿರುತ್ತವೆ, ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ನಿಮ್ಮ ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ: ಪ್ಲಾಂಟ್…
ಬೆಂಗಳೂರು: ಹೊಸ ರೇಷನ್ ಕಾರ್ಡ್ ಅರ್ಜಿ ಪಡೆಯುವವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಕೊಟ್ಟಿದೆ.ಏನಾಪ್ಪಾ ಅಂದ್ರೆ ಹೊಸ ರೇಷನ್ ಕಾರ್ಡ್ ಅರ್ಜಿಗೆ ಅವಕಾಶ ಕಲ್ಪಿಸಿದ ಆಹಾರ ಇಲಾಖೆ ಇಂದೇ ಕೊನೇ ದಿನವನ್ನು ಹೊಸ ರೇಶನ್ ಕಾರ್ಡ್ ಅರ್ಜಿಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಹೊಸ ರೇಷನ್ ಕಾರ್ಡ್ ಅರ್ಜಿಗೆ ಕೇವಲ ಒಂದು ದಿನವ ಅವಕಾಶ ಕೊಟ್ಟಿದ್ದು ಡಿಸೆಂಬರ್ 3 ಅಂದ್ರೆ ಇಂದೇ ಕೊನೇ ದಿನವಾಗಿದ್ದು ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 2ಗಂಟೆಯವರೆಗೆ ಮಾತ್ರ ಅರ್ಜಿಗೆ ಕಾಲಾವಕಾಶ ನೀಡಲಾಗಿದೆ. ಹೆಚ್ಚಿನ ಅರ್ಜಿ ಸಲ್ಲಿಕೆಯಾಗುವ ಹಿನ್ನೆಲೆ ಕಡಿಮೆ ಸಮಯಾವಕಾಶ ಕೊಟ್ಟ ಆಹಾರ ಇಲಾಖೆ ಎಲ್ಲರಿಗೂ ಭಾನುವಾರ ಅರ್ಜಿ ಕೊಡುವ ಹಿನ್ನೆಲೆ ಅಂದೇ ಹೊಸ ರೇಷನ್ ಮಾಡಿಸಲು ಅವಕಾಶ ನೀಡಲಾಗಿದೆ.
ಸೋಮಶೇಖರ್B.Sc ಜಾತಕ ಬರಹಗಾರರು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು,ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403 ಎಲ್ಲರ ಜೀವನದ ಒಂದು ಪ್ರಮುಖ ಅಂಶ ಮದುವೆ. ವಿವಾಹ ತಡವಾಗಲು ಜನ್ಮಜಾತಕದಲ್ಲಿ ಜನ್ಮ ಲಗ್ನ ಅಥವಾ ಜನ್ಮ ರಾಶಿಯಿಂದ ಎಳನೇ ಮನೆಯಲ್ಲಿ ಶನಿ ಇರುವುದು ಅಥವಾ ಏಳನೇ ಮನೆಯ ಅಧಿಪತಿ ಶನಿ ಆಗಿರುವುದು. ಇಂಥ ಪರಿಸ್ಥಿತಿಗಳಲ್ಲಿ ವಯಸ್ಸು ಮೂವತ್ತು ದಾಟುವ ತನಕ ವಿವಾಹ ಕಷ್ಟಸಾಧ್ಯ ಇಲ್ಲಿ ನಾವು ಶನಿಗ್ರಹ ದೋಷಪರಿಹಾರ ಹೊರತುಪಡಿಸಿ ಇನ್ಯಾವ ಪರಿಹಾರಗಳನ್ನು ಮಾಡಿದರೂ ಫಲ ದುರ್ಲಭ. ಶನೈಶ್ಚರ ದೋಷ ಪರಿಹಾರಕ್ಕಾಗಿ ಶಮೀಸಮಿತ್ತು ಹಾಗು ಕೃಸರಾನ್ನ ದ್ರವ್ಯದಲ್ಲಿ ಶನಿವಾರದಂದು ಶನಿ ಶಾಂತಿ ಹವನ ಮಾಡಿಸುವುದು. ಆದರೆ ಯಾವುದೇ ಕಾರಣಕ್ಕೂ ಸಪ್ತಮಾಧಿಪತಿಮ ರತ್ನವನ್ನು ಧರಿಸಬಾರದು. ಇನ್ನೂ ವಿವಾಹಕ್ಕೆ ವಿಘ್ನ ಮಾಡುವ ಇನ್ನೊಂದು ಪ್ರಮುಖ ಕಾರಣ ಜಾತಕದಲ್ಲಿ ಬರುವ ಸರ್ಪದೋಷ ಸರ್ಪದೋಷಗಳಲ್ಲಿ ಹತ್ತು ಹಲವು ವಿಧಿಗಳಿವೆ. ಆದರೆ ಅವುಗಳಲ್ಲಿ ವಿವಾಹಕ್ಕೆ ವಿಘ್ನ ಮಾಡುವ ಸರ್ಪದೋಷವೇ ಕಾಳ ಸರ್ಪದೋಷ. ಇಲ್ಲಿ ಗಮನಿಸಲೇ ಬೇಕಾದ ಅಂಶ ಎಂದರೆ ಆಶ್ಲೇಷಾ…
“ತಮ್ಮ ಜನ್ಮ ಜಾತಕದಲ್ಲಿ( ಕುಂಡಲಿ) ಸಂತಾನಯೋಗ ಫಲ ಮತ್ತು ಪರಿಹಾರ” ಸೋಮಶೇಖರ್B.Sc ವಂಶಪಾರಂಪರಿತ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು. Mob.9353488403 ಜೀವನದಲ್ಲಿ ಒಂದೇ ಒಂದು ಸಾರಿ ಮದುವೆ ಆಗುತ್ತದೆ. ಮದುವೆ ಕ್ಷಣದಿಂದ ತುಂಬಾ ಉಲ್ಲಾಸ ಜೀವನ ಮಾಡುತ್ತೀರಿ, ನಂತರ ಎರಡು ವರ್ಷ ,ಮೂರು ವರ್ಷ ಕಳೆದು ಹೋಗುತ್ತದೆ. ನಂತರ ನಿಮಗೆ ಮಕ್ಕಳಿಲ್ಲದ ಸಂಕಟ ಪ್ರಾರಂಭವಾಗುತ್ತದೆ. ಆಗ ನೀವು ಆ ದೇವರು ದರ್ಶನ, ವೈದ್ಯರ ಭೇಟಿ ಮಾಡಲು ಪ್ರಾರಂಭಿಸುತ್ತೀರಿ. ವೈದ್ಯರು ಕೆಲವು ವೈದ್ಯಕೀಯ ಪರೀಕ್ಷೆಗಳು ನಡೆಸುತ್ತಾರೆ . ಅದರಲ್ಲಿ ಯಾವುದೇ ತರಹದ ನ್ಯೂನ್ಯತೆ ಕಾಣುವುದಿಲ್ಲ . ಎಲ್ಲ ನಿಮ್ಮ ಆರೋಗ್ಯ ಚೆನ್ನಾಗಿದೆ ಹೌಷಧಿ ತಗೊಳ್ಳಿ ಅಂತ ಸಲಹೆ ನೀಡುತ್ತಾರೆ. ಆದ್ರೂ ನಿರಾಶೆ ಆಗುವ ಸಾಧ್ಯತೆ. ಆಗ ತಮಗೆ ಸಹಾಯಸ್ತ ನೀಡುವುದು ದೈವ ಭಾಗ್ಯ ಅದೇ ಜನ್ಮಜಾತಕ ಅಥವಾ ಜನ್ಮ ಕುಂಡಲಿ. ತಮ್ಮ ಜನ್ಮಕುಂಡಲಿ ಪರೀಕ್ಷಿಸಬೇಕು. ಅದರಲ್ಲಿ ಲಗ್ನದಿಂದ ಪಂಚಮ ಸ್ಥಾನ ನೋಡಿ ಸರಿಯಾಗಿ ಪರೀಕ್ಷಿಸಬೇಕು.ಪಂಚಮ ಸ್ಥಾನಕ್ಕೆ ಯಾರು ಅಧಿಪತಿ ಇದ್ದಾನೆ ,ಶುಭಗ್ರಹಗಳು…
ಸೂರ್ಯೋದಯ: 06.27 AM, ಸೂರ್ಯಾಸ್ತ : 05.52 PM ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ್ ಋತು, ತಿಥಿ: ಇವತ್ತು ಷಷ್ಠಿ 07:27 PM ತನಕ ನಂತರ ಸಪ್ತಮಿ ನಕ್ಷತ್ರ: ಇವತ್ತು ಆಶ್ಲೇಷ 09:36 PM ತನಕ ನಂತರ ಮಖ ಯೋಗ: ಇವತ್ತು ಇಂದ್ರ 08:56 PM ತನಕ ನಂತರ ವೈಧೃತಿ ಕರಣ: ಇವತ್ತು ಗರಜ 06:17 AM ತನಕ ನಂತರ ವಣಿಜ 07:27 PM ತನಕ ನಂತರ ವಿಷ್ಟಿ ರಾಹು ಕಾಲ: 04:30 ನಿಂದ 06:00 ವರೆಗೂ ಯಮಗಂಡ: 12:00 ನಿಂದ 01:30 ವರೆಗೂ ಗುಳಿಕ ಕಾಲ: 03:00 ನಿಂದ 04:30 ವರೆಗೂ ಅಮೃತಕಾಲ: 07.49 PM to 09.36 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:43 ನಿಂದ ಮ.12:27 ವರೆಗೂ ಮೇಷ ರಾಶಿ: ಫ್ರಾಂಚೈಸಿ ಉದ್ಯಮ ಪ್ರಾರಂಭ ಆರ್ಥಿಕ ಸಂಪನ್ಮೂಲ ಕ್ರೂಢೀಕರಣ,ದಂಪತಿಗಳಿಗೆ ಸಂತಾನದ ಯೋಚನೆ,ಮದುವೆ ಕಾರ್ಯಗಳಲ್ಲಿ ಅಡತಡೆ ಸಂಭವ, ವಿದೇಶಕ್ಕೆ…
ಬೆಂಗಳೂರು:- ಆಟೋ ಚಾಲಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜರುಗಿದೆ. ನವೆಂಬರ್ 30 ರಂದು ಮನೆಗೆ ಮರಳಲು ರ್ಯಾಪಿಡೋ ಆಟೋ ವನ್ನು ಏರಿದ್ದರು. ಇಂದಿರಾನಗರದ ಬಾಬ್ಸ್ ಬಾರ್‌ನಿಂದ ಸುಮಾರು 8 ಕಿಮೀ ದೂರದ ಅನ್ನಸಂದ್ರಪಾಳ್ಯ ಪ್ರದೇಶಕ್ಕೆ ಹೋಗಲು ಆಟೋವನ್ನು ಬಾಡಿಗೆಗೆ ಕರೆದಿದ್ದರು. ಆಟೋ ಚಾಲಕ ಯುವತಿಯ ಸ್ಕರ್ಟ್ ಒಳಗೆ ಕೈ ಹಾಕಿ ಅನುಚಿತವಾಗಿ ಸ್ಪರ್ಷಿಸಿದ್ದು, ಯುವತಿ ಕೂಗಿಕೊಂಡಾಗ ಆಕೆಯನ್ನು ಆಟೋದಿಂದ ಹೊರ ದಬ್ಬಿದ್ದಾನೆ, ಇದರಿಂದ ಆಕೆಯ ಕೈಕಾಲುಗಳಿಗೆ ಗಾಯಗಳಾಗಿವೆ. ಸಂತ್ರಸ್ತೆ ಕ್ಯೂಆರ್ ಕೋಡ್ ಮೂಲಕ ರಿಕ್ಷಾ ಚಾಲಕನನ್ನು ಗುರುತಿಸಿದ್ದು, ಆತನ ಹೆಸರು ಇಕ್ಲಾಸುದ್ದೀನ್ ಲಸ್ಕರ್ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣವನ್ನು ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ತನಿಖೆಯಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಆಟೋ ಚಾಲಕ ಹೇಳಿಕೆ ನೀಡಿದ್ದಾನೆ