ಬೆಂಗಳೂರು: ರಾಜಸ್ಥಾನ ಬಿಜೆಪಿ ಚುನಾವಣಾ ಉಸ್ತುವಾರಿ ವಹಿಸಿದ್ದ ಪ್ರಹ್ಲಾದ್ ಜೋಷಿ ಸುದ್ದಿಗೋಷ್ಠಿ ನಡೆಸಿದರು. ಕಾಂಗ್ರೆಸ್ನ ಸುಳ್ಳು ಭರವಸೆಯನ್ನು ಜನರು ತಿರಸ್ಕರಿಸಿದ್ದಾರೆ. ತೆಲಂಗಾಣ ಬಿಟ್ಟು ಉಳಿದ ಕಡೆ ಕಾಂಗ್ರೆಸ್ ಪಕ್ಷ ನೆಲಕಚ್ಚಿದೆ. BRS ದುರಾಡಳಿತದ ಪರಿಣಾಮ ಕಾಂಗ್ರೆಸ್ ಗೆಲ್ಲುವಂತಾಗಿದೆ. https://ainlivenews.com/congress-president-has-called-an-important-meeting-on-december-6/ ರಾಜಸ್ಥಾನದಲ್ಲಿ ಕಾಂಗ್ರೆಸ್ ದುರಾಡಳಿತ ಬಗ್ಗೆ ಜನರಿಗೆ ತಿಳಿಸಿದ್ದೆವು. ಬಿಜೆಪಿಯ ಹಿರಿಯ ನಾಯಕರು ಒಟ್ಟಾಗಿ ಕೆಲಸ ಮಾಡಿದ್ದೆವು. ರಾಜಸ್ಥಾನದಲ್ಲಿ 124ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ತೇವೆ. ಮಧ್ಯಪ್ರದೇಶದಲ್ಲಿ ಡಬಲ್ ಇಂಜಿನ್ ಸರ್ಕಾರ ಕೆಲಸ ಮಾಡಿದೆ ಎಂದರು.
Author: AIN Author
ನವದೆಹಲಿ: ತೆಲಂಗಾಣದಲ್ಲಿ ಬಿಆರ್ಎಸ್ನಿಂದ ಆಪರೇಷನ್ ಭೀತಿ ಹಿನ್ನೆಲೆ ಕರ್ನಾಟಕದಲ್ಲಿ ಕಾಂಗ್ರೆಸ್ನಿಂದ 17 ಜನರನ್ನು ಯಾರು ಕಳಿಸಿದರು? ಎಂದು ದೆಹಲಿಯಲ್ಲಿ ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ. ಸಿದ್ದರಾಮಯ್ಯಗೆ ಕುಮಾರಸ್ವಾಮಿ ಕುಟುಂಬ ಕಂಡರೆ ದ್ವೇಷ ಇದೆ. https://ainlivenews.com/congress-president-has-called-an-important-meeting-on-december-6/ ಈ ಹಿಂದೆ ಕಾಂಗ್ರೆಸ್ನವರೇ ಶಾಸಕರನ್ನು ಕಳುಹಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ನಿಂದ ಜ್ಯೋತಿರಾದಿತ್ಯ ಏಕೆ ಬಂದರು. ಕಾಂಗ್ರೆಸ್ನಲ್ಲೇ ಆಂತರಿಕ ಸಮಸ್ಯೆ ಇದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ 6 ತಿಂಗಳಲ್ಲೇ ಜಗಳವಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿಕಾರಿದರು.
ಬೆಂಗಳೂರು: ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಈ ಹಿಂದೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿತ್ತು. ಈಗ ರಾಜಸ್ಥಾನದಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. https://ainlivenews.com/congress-president-has-called-an-important-meeting-on-december-6/ ಛತ್ತೀಸ್‍ಗಢ ರಾಜ್ಯದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಈ ಫಲಿತಾಂಶ ಕಾಂಗ್ರೆಸ್ ಧೂಳೀಪಟ ಮಾಡುವುದಕ್ಕೆ ನಾಂದಿ ಹಾಡುತ್ತೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ನವದೆಹಲಿ: ದೇಶದಲ್ಲಿ ಬಿಜೆಪಿಯ ಪರ ವಾತಾವರಣ ಇದೆ ಎಂದು ದೆಹಲಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಬೇಕೆಂದು ಜನ ಬಯಸಿದ್ದಾರೆ. ಸುನಾಮಿ ರೀತಿ ಭಾರತೀಯ ಜನತಾ ಪಾರ್ಟಿಯ ಅಲೆ ಎದ್ದಿದೆ. ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಬಹುಮತ ಪಡೆಯುತ್ತೆ. https://ainlivenews.com/israeli-prime-minister-orders-to-find-and-kill-hamas-leaders/ ದೇಶದ ಜನರು ದೇಶದ ರಕ್ಷಣೆಯ ಗ್ಯಾರಂಟಿ ಬಯಸುತ್ತಿದ್ದಾರೆ. ಅಧಿಕಾರವನ್ನು ಕಬಳಿಸುವ ಗ್ಯಾರಂಟಿಯನ್ನು ಜನರು ಬಯಸುತ್ತಿಲ್ಲ. ಗ್ಯಾರಂಟಿ ಆಮಿಷವೊಡ್ಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ.ಇದರಿಂದ ರಾಜ್ಯದ ಜನರು ಪಶ್ಚಾತ್ತಾಪಪಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ ಎಂದರು.
ಶಿವಮೊಗ್ಗ: ನಾಲ್ಕು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲವಿನತ್ತ ಸಾಗಿರುವುದಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಜನತೆ ಮತ್ತೆ ಪ್ರದಾನಿಯಾಗಬೇಕು ಎಂದು ಬಯಸಿದ್ದು, ಮೂರು ರಾಜ್ಯಗಳಲ್ಲಿ ಗೆಲುವಿನ ಗಿಫ್ಟ್ ನೀಡಿದ್ದಾರೆ. ಇದು ದೇಶದ ಎಲ್ಲಾ ಕಾರ್ಯಕರ್ತರಿಗೆ ಸಂತಸ ತಂದಿದೆ. ಇಂತಹ ಸಂತಸ ಪದೇ ಪದೇ ಬರಲಿ ಮಧ್ಯ ಪ್ರದೇಶ ರಾಜಸ್ಥಾನ ಗೆಲ್ಲುತ್ತೇವೆ ಎಂಬ ವಿಶ್ವಾಸ ವಿತ್ತು. ಆದರೆ ಛತ್ತಿಸ್ ಘಡ ಗೆಲ್ಲುತ್ತೇವೆ ಎಂಬ ನಂಬಿಕೆ ಇರಲಿಲ್ಲ. ಕಾಂಗ್ರೇಸ್ ನವರು ಐದು ರಾಜ್ಯಗಳಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದರು. https://ainlivenews.com/israeli-prime-minister-orders-to-find-and-kill-hamas-leaders/ ಕೇವಲ ಒಂಜು ರಾಜ್ಯದಲ್ಲಿ ಅವರು ಗೆದ್ದಿದ್ದಾರೆ. ತೆಲಂಗಾಣದಲ್ಲಿ ಮುಖ್ಯಮಂತ್ರಿಗಳ ಮೇಲೆ ಜನರಿಗಿದ್ದ ಬೇಸರ, ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನತದೆಗೆ ಹೇಗೆ ಮೋಸ ಮಾಡಿದರೋ..ಹಾಗೆಯೇ ಮುಸ್ಲಿಂ ಮತಗಳನ್ನು ಕ್ರೂಡಿಕರಿಸಿ ಗೆಲುವು ಸಾಧಿಸಿದ್ದಾರೆ. ಗ್ಯಾರಂಟಿಗಳ ಮೂಲಕ ತೆಲಂಗಾಣ ಬಡವರಿಗೆ ಕಾಂಗ್ರೇಸ್ ಮೋಸ ಮಾಡಿದೆ. ಮುಂದಿನ ಚುನಾವಣೆಯಲ್ಲಿ ಅವರು ತೆಲಂಗಾಣವನ್ನು ಕೂಡ ಗೆಲ್ಲಲು ಸಾಧ್ಯವಿಲ್ಲ. ಇಂದಿನ ಫಲಿತಾಂಶ ಮುಂದಿನ…
ನವದೆಹಲಿ: ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಈ ನಡುವೆ ಡಿಸೆಂಬರ್ 6 ರಂದು INDIA ಮೈತ್ರಿಕೂಟದ ನಾಯಕರ ಸಭೆ ಕರೆಯಲಾಗಿದೆ. ಡಿಸೆಂಬರ್ 6 ರಂದು ಮುಂದಿನ ಭಾರತ ಮೈತ್ರಿ ಸಭೆಗೆ ಕಾಂಗ್ರೆಸ್ ಪಕ್ಷ ಕರೆ ನೀಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಸಭೆ ನಡೆಸಲಾಗುವುದು ಎಂದು ಮೈತ್ರಿ ಸದಸ್ಯರಿಗೆ ತಿಳಿಸಿದ್ದಾರೆ. https://ainlivenews.com/israeli-prime-minister-orders-to-find-and-kill-hamas-leaders/ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‍ಗಢ, ತೆಲಂಗಾಣ ಈ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. ಈಗಾಗಲೇ ಮೂರು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಇನ್ನು ಮಿಜೋರಾಂ ರಾಜ್ಯದ ಚುನಾವಣಾ ಫಲಿತಾಂಶವು ಸೋಮವಾರ ಪ್ರಕಟವಾಗಲಿದೆ.
ನವದೆಹಲಿ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢದಲ್ಲಿ ಬಿಜೆಪಿ ಜಯ ಸಾಧಿಸಿದೆ. ಉತ್ತರ ಭಾರತದ ಜನತೆ ನರೇಂದ್ರ ಮೋದಿ ಕೈಬಲಪಡಿಸಿದ್ದಾರೆ ಎಂದು ನವದೆಹಲಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದರು. ನರೇಂದ್ರ ಮೋದಿಯನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. https://ainlivenews.com/nia-raid-accused-making-fake-notes-arrested/ 2024ರಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗ್ತಾರೆ. ನರೇಂದ್ರ ಮೋದಿಯವರ ನಾಯಕತ್ವಕ್ಕೆ ಜನಬೆಂಬಲ ಸಿಗುತ್ತಿದೆ. ದಕ್ಷಿಣ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನು ಬಲಪಡಿಸಬೇಕಿದೆ ಎಂದರು. ಛತ್ತೀಸ್‍ಗಢ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 48 ಕ್ಷೇತ್ರಗಳಲ್ಲಿ ಬಿಜೆಪಿ, 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುಂದಿದೆ.
ಭೋಪಾಲ್: ಬಿಜೆಪಿ ಮತ್ತೆ ಅಧಿಕಾರಕ್ಕೆ ಏರಿದೆ. ಹೌದು. ಮಧ್ಯಪ್ರದೇಶದಲ್ಲಿ ಮಹಿಳೆಯರು ಕೈ ಹಿಡಿದ ಪರಿಣಾಮ ಮತ್ತೆ ಅಧಿಕಾರಕ್ಕೆ ಏರಿದೆ. ಕರ್ನಾಟಕದಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ಆರಂಭಿಸಿದ ಬೆನ್ನಲ್ಲೇ ಸಿಎಂ ಶಿವರಾಜ್ ಸಿಂಹ್ ಚೌಹಾಣ್ ಲಾಡ್ಲಿ ಬೆಹನಾ ಹೆಸರಿನ ಯೋಜನೆ ಆರಂಭಿಸಿತ್ತು. ಕಾಂಗ್ರೆಸ್ ಇದು ಚುನಾವಣೆ ಗಿಮಿಕ್ ಎಂದು ಬಣ್ಣಿಸಿದರೆ ಮಧ್ಯಪ್ರದೇಶ ಸರ್ಕಾರ ಘೋಷಣೆ ಮಾತ್ರ ಮಾಡದೇ ಚಾಲನೆ ನೀಡಿತ್ತು. ಬಡ ಮಹಿಳೆಯರಿಗೆ ಪ್ರತಿ ತಿಂಗಳು 1,250 ರೂ. ನೀಡಿದ್ದರೆ ಪಿಎಂ ಉಜ್ವಲಾ ಯೋಜನೆ ಅಡಿ ಸಿಲಿಂಡರ್‌ಗೆ 450 ರೂ. ನೀಡುವುದಾಗಿ ಭರವಸೆ ನೀಡಿತ್ತು. https://ainlivenews.com/nia-raid-accused-making-fake-notes-arrested/ ಕರ್ನಾಟಕ ಚುನಾವಣೆಯಲ್ಲೂ ಮಹಿಳೆಯರು ಪ್ರಧಾನ ಪಾತ್ರ ವಹಿಸಿದ್ದರು. ಇದನ್ನು ಮೊದಲೇ ಗಮನಿಸಿದ್ದ ಮಧ್ಯಪ್ರದೇಶ ಸರ್ಕಾರ ಮಹಿಳಾ ಪರವಾದ ಯೋಜನೆಗಳು ಪ್ರಕಟಿಸಿದ ಪರಿಣಾಮ ಈ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಮಧ್ಯಾಹ್ನ 12 ಗಂಟೆಯ ಟ್ರೆಂಡ್ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿ 157, ಕಾಂಗ್ರೆಸ್ 70, ಇತರರು 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಬೆಂಗಳೂರು: 4 ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಠುಸ್ ಪಟಾಕಿ ಆಗಿದೆ, ಯಾವುದೇ ಪರಿಣಾಮ ಬೀರಿಲ್ಲ. ಅಲ್ಲಿ ಮೋದಿ ಅವರ ಪ್ರಭಾವ ಎದ್ದು ಕಾಣುತ್ತಿದೆ ಎಂದು ವಿರೋಧ ಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿರುವ ಅಶೋಕ್, ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಬಿಜೆಪಿ ಸ್ವೀಪ್ ಆಗಲಿದೆ. https://ainlivenews.com/nia-raid-accused-making-fake-notes-arrested/ ತೆಲಂಗಾಣದಲ್ಲೂ ಬಿಜೆಪಿಗೆ 11 ಸ್ಥಾನ ಈಗ ಬಂದಿದೆ. ಎಲ್ಲ ಕಡೆ ಬಿಜೆಪಿ ತನ್ನ ಸ್ಥಾನ ಹೆಚ್ಚಿಸಿಕೊಳ್ಳುತ್ತಿದೆ. ಮೋದಿಯವರ ಪ್ರಭಾವ ಎಲ್ಲ ಕಡೆ ಕಾಣ್ತಿದೆ. ಛತ್ತಿಸ್‌ಗಢದಲ್ಲೂ ಬಿಜೆಪಿ ಗೆಲ್ಲುವ ಪ್ರಯತ್ನ ಮುಂದುವರಿದಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನವರು ರೆಸಾರ್ಟ್ ರಾಜಕಾರಣ ಮಾಡಲು ಹೊರಟಿದೆ. ದೊಡ್ಡ ಶೋ ಕೊಡಲು ಡಿಕೆಶಿ ತೆಲಂಗಾಣಕ್ಕೆ ಹೋಗಿದ್ದಾರೆ. ಜನರ ಕಷ್ಟ ಮರೆತು ತೆಲಂಗಾಣ ಶಾಸಕರಿಗಾಗಿ ಡಿಕೆಶಿ ಹೋಗಿದ್ದಾರೆ, ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿ ಕಾರಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಶಾಸಕರಿಂದ ರಾಜ್ಯಪಾಲರನ್ನೂ ಭೇಟಿ ಮಾಡಿದರು. ರಾಜಭವನದಲ್ಲಿ ರಾಜ್ಯಪಾಲರನ್ನ ಭೇಟಿಯಾಗಿ ಪಕ್ಷದ ವತಿಯಿಂದ ರಾದ್ಯಾಧ್ಯಂತ ಕೈಗೊಳ್ಳಲಾಗಿದ್ದ ಬರ ಅಧ್ಯಾಯನ ವರದಿ ಹಾಗೂ ಬರ ಪರಿಹಾರ ಕುರಿತಂತೆ ಜೆಡಿಎಸ್ ನಿಯೋಗ ಮನವಿ ಪತ್ರ ಸಲ್ಲಿಸಿದರು. https://ainlivenews.com/nia-raid-accused-making-fake-notes-arrested/ ಕುಮಾರಸ್ವಾಮಿಗೆ ಶಾಸಕರಾದ ಜಿ.ಟಿ.ದೇವೇಗೌಡ,ಹನೂರ್ ಮಂಜುನಾಥ್, ಶರವಣ ಸೇರಿದಂತೆ ಇತರ ಶಾಸಕರು ಸಾಥ್ ನೀಡಿದರು. ಜೆಡಿಎಸ್ ಪಕ್ಷ ಕೈಗೊಂಡಿದ್ದ ಬರ ಅಧ್ಯಯನ ವರದಿಯನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಕುಮಾರಸ್ವಾಮಿ ಅವರು ಇಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರಚಂದ್ ಗೆಹಲೊತ್ ಅವರಿಗೆ ಸಲ್ಲಿಸಿದರು.ಪಕ್ಷದ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು ಜಿಲ್ಲಾಧ್ಯಕ್ಷರು ಉಪಸ್ಥಿತರಿದ್ದರು.