Author: AIN Author

ತುಮಕೂರು:- ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಕೊನೆಯುಸಿರೆಳೆದಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ‌ ಜಡಗೊಂಡನಹಳ್ಳಿ ಬಳಿ ನಡೆದಿದೆ. ಹಿಂಬದಿ ಸವಾರನಿಗೆ ಗಂಭೀರ ಗಾಯವಾಗಿದ್ದು, ಮಧುಗಿರಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ನೀಡಲಾಗುತ್ತಿದೆ. ಶ್ರೀ ರಂಗಪ್ಪ (30)ಮೃತ ದುರ್ದೈವಿ. ಆಂಧ್ರದ ರಾಡಪಲ್ಲಿ ಗ್ರಾಮದ ನಿವಾಸಿಯಾದ ಇವರು, ಮಧುಗಿರಿ ಕಡೆಯಿಂದ ಪಾವಗಡ ಹೋಗುತ್ತಿದ್ದರು. ಪಾವಗಡ ಕಡೆಯಿಂದ ಮಧುಗಿರಿ ಕಡೆ ಬರುತ್ತಿದ್ದ ಲಾರಿ ಚಾಲಕನ‌ ನಿಯಂತ್ರಣ ತಪ್ಪಿ ಬೈಕ್ಗೆ ಡಿಕ್ಕಿ ಹೊಡೆದ ರಭಸಕ್ಕೆ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಮಧುಗಿರಿ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ.

Read More

ಕೋಲಾರ:- ಸಮಾಜದ ನೆಮ್ಮದಿಗಾಗಿ ಹಗಲಿರುಳು ಕೆಲಸ ಮಾಡುವ ಪೊಲೀಸರು ದೈಹಿಕ ಮತ್ತು ಮಾನಸಿಕ ಸದೃಢತೆ ಕಾಯ್ದುಕೊಳ್ಳುವುದು ಅವಶ್ಯವಾಗಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಹೇಳಿದರು. ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಆಯೋಜಿಸಿರುವ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಇಂದು ಗಾಳಿ ಬುರುಡೆ ಹಾಗೂ ಪಾರಿವಾಳ ಹಾರಿಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಬಿಡುವಿಲ್ಲದ ಕಚೇರಿ ಕೆಲಸ ಕಾರ್ಯಗಳಿಂದ ಹಾಗೂ ಒತ್ತಡದಿಂದಾಗಿ ನಾವುಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಗಮನ ನೀಡುತ್ತಿಲ್ಲ. ಇದರಿಂದ ನಮ್ಮ ಆರೋಗ್ಯದಲ್ಲಿ ಏರುಪೇರುಗಳು ಉಂಟಾಗುತ್ತಿವೆ. ಬಿಡುವಿನ ವೇಳೆಯಲ್ಲಿ ನಾವೆಲ್ಲರೂ ಆದಷ್ಟು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಅದರಲ್ಲೂ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಕ್ರೀಡಾ ಚಟುವಟಿಕೆ ಸಹಕಾರಿಯಾಗಿದೆ. ಈ ಕ್ರೀಡಾಕೂಟದಲ್ಲಿ ಅತ್ಯಂತ ಉತ್ಸಾಹ ಹಾಗೂ ಸಂತೋಷದಿಂದ ಭಾಗವಹಿಸಿ ಎಂದು ಶುಭ ಕೋರಿದರು. ಅವರು ಕ್ರೀಡಾಪಟುಗಳಿಗೆ ಕ್ರೀಡಾ ಪ್ರತಿಜ್ಞಾವಿಧಿ ಬೋಧಿಸಿದರು. ಗಮನ ಸೆಳೆದ…

Read More

ಫ್ಯಾನ್ ತಯಾರಿಕೆಯಲ್ಲಿ ಮಂಚೂಣಿಯ ಕಂಪನಿ ವೀ ಗಾರ್ಡ್ ನವರ ಇನ್ಸೈಟ್ – ಸಿ ಫ್ಯಾನ್ ಉತ್ತರ ಕರ್ನಾಟಕದ ಮಾರುಕಟ್ಟೆಗೆ ಬಿಡುಗಡೆ ಇಂದು ಮಾಡಲಾಯಿತು‌‌ ಹುಬ್ಬಳ್ಳಿಯ ನಗರದ ಖಾಸಗಿ ಹೋಟೆಲನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಮಾರುಕಟ್ಟೆಗೆ ಬಿಎಲ್ ಡಿಸಿ ತಾಂತ್ರಿಕತೆಯ ಇನ್ಸೈಟ್ – ಸಿ ಫ್ಯಾನ್ ಬಿಡುಗಡೆ ಮಾಡಲಾಯಿತು. ವೀ ಗಾರ್ಡ್ ಕಂಪನಿಯ ರಾಷ್ಟ್ರೀಯ ಉತ್ಪಾದನಾ ಮುಖ್ಯಸ್ಥ ಜೈಮೊನ್ ಮ್ಯಾಥ್ಯೂ, ಹಾಗೂ ಮಾರುಕಟ್ಟೆ ಉಪಾಧ್ಯಕ್ಷ ಸೂರ್ಯಪ್ರಸಾದ ಉತ್ತರ ಕರ್ನಾಟಕ ಭಾಗದ ವಿತರಕ ಜಾನ್ ವಿಲ್ಸನ್ ಅವರು ಇನ್ಸೈಟ್ – ಸಿ ಫ್ಯಾನ್ ಗಳ 12 ವಿವಿಧ ಬಣ್ಣಗಳ ಮಾದರಿಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ವೀ ಗಾರ್ಡ್ ಕಂಪನಿಯ ರಾಷ್ಟ್ರೀಯ ಉತ್ಪಾದನಾ ಮುಖ್ಯಸ್ಥ ಜೈಮೊನ್ ಮ್ಯಾಥ್ಯೂ ಅವರು ಇನ್ಸೈಟ್ – ಸಿ ಬಿಎಲ್ ಡಿಸಿ ಫ್ಯಾನ್ 12 ಬಣ್ಣಗಳಲ್ಲಿ ದೊರಕಲಿದ್ದು ಗುಜರಾತ, ಮಹಾರಾಷ್ಟ್ರ ಗೋವಾ ರಾಜ್ಯಗಳಲ್ಲಿ ಮಾರುಕಟ್ಟೆ ಪ್ರವೇಶ ಮಾಡಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ₹6590 ರಿಂದ ₹7590…

Read More

ಬಾಗಲಕೋಟೆ:- ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಘಟ್ಟಗಿ ಬಸವೇಶ್ವರ ದೇವಸ್ಥಾನದಲ್ಲಿ ಜಂಗಮ ದೈವ ಮಂಡಳ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಅಧಿಕಾರಗ್ರಹಣ ಸಮಾರಂಭ ನಡೆಯಿತು. ಜಾಯಿಯಿಂದ ಯಾರೂ ಮೇಲು ಮತ್ತು ಕೀಳು ಎಂಬುದಾಗಿಲ್ಲ. ಬದಲಾಗಿ ನಾವು ಕೈಗೊಳ್ಳುವ ಕಲ್ಯಾಣಪರ ಕಾಯಕಗಳು ಮತ್ತು ಅಳವಡಿಸಿಕೊಳ್ಳುವ ಸುಗುಣಗಳಿಂದ ಉಚ್ಛತಮ ವಿಚಾರ-ಆಚಾರಗಳಿಂದ ಗೌರವ ಸ್ಥಾನ ಪಡೆದುಕೊಳ್ಳುತ್ತೇವೆ. ಜಾತಿಯಿಂದ ಜಂಗಮರಾಗದೇ ನೀತಿಯಿಂದ ಜಂಗಮರಾಗಿ ಮೇಲ್ಪಂಕ್ತಿಯ ಬದುಕು ನಡೆಸಬೇಕು. ಜಂಗಮ ಸಮಾಜ ಎಲ್ಲ ಸಮಾಜಗಳೊಡನೆ ಸುಮಧುರ ಬಾಂಧವ್ಯ ಹೊಂದಿರುವ ಸಮುದಾಯವಾಗಿದ್ದರೂ ಸಂಘಟನೆ ಬಲಗೊಳಿಸುವಲ್ಲಿ ಮುಂದಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ನಮ್ಮ ಜಂಗಮ ಪರಂಪರೆಯ ಮೂಲ ಕ್ರೀಯಾವಿಧಿ-ವಿಧಾನಗಳನ್ನು ನೆರವೇರಿಸುತ್ತ ಎಲ್ಲರೊಡನೆ ಸಾಮರಸ್ಯದ ಬದುಕು ನಮ್ಮದಾಗಬೇಕು. ಸಮಾಜಕ್ಕೆ ವ್ಯಸನಮುಕ್ತ ಬಾಂಧವರ ಅಗತ್ಯತೆ ಇಂದು ಹೆಚ್ಚಿದೆ. ನಮ್ಮನ್ನು ಇತರೆ ಸಮಾಜಗಳು ಗೌರವದಿಂದ ಕಾಣಲು ನಮ್ಮಲ್ಲಿನ ಆಚರಣಾ ಮತ್ತು ಕ್ರೀಯಾ ವಿಧಾನಗಳೇ ಕಾರಣವಾಗಿದ್ದು, ನಮ್ಮ ಸಾಮಾಜಿಕ ಬದ್ಧತೆಯ ವೃತ್ತಿಗೆ ಕಪ್ಪುಚುಕ್ಕೆ ಆಗದಂತೆ ಸಮುದಾಯದ ಸರ್ವರನ್ನು ಒಗ್ಗಟ್ಟಿನಿಂದ ನಡೆಸಿಕೊಂಡು ಹೋಗುವುದು ಹಿರಿಯರು ಸೇರಿ…

Read More

ಹುಬ್ಬಳ್ಳಿ; ಅನೇಕ ವಿಕಲಚೇತನರು ಇಂದು ಕ್ರೀಡೆ, ನೃತ್ಯ, ಚಿತ್ರಕಲೆ, ಸಿನೆಮಾ, ಇಂಜಿನೀಯರಿಂಗ್, ವೈದ್ಯಕೀಯ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವಿಶೇಷ ಸಾಧನೆ ಗೈದಿದ್ದಾರೆ. ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕಾರ್ಯಗಳಾಗಬೇಕು ಎಂದು ಶಾಸಕರಾದ ಮಹೇಶ ಟೆಂಗಿನಕಾಯಿ ಹೇಳಿದರು. ಇಂದು ಇಂದಿರಾ ಗಾಜಿನ ಮನೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕಿಮ್ಸ್‌-ಆಶಾಕಿರಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆ ಪ್ರಾಧಿಕಾರ, ವಿಕಲ‌ ಚೇತನ ಹಿರಿಯ ನಾಗರೀಕ ಸಬಲೀಕರಣ ಇಲಾಖೆ, ಇನ್ನರ್ ವೀಲ್‌ ಕ್ಲಬ್ ಪಶ್ಚಿಮ ಜಿಲ್ಲೆ 317 ಸಕ್ಷಮ ಉತ್ತರ ಕರ್ನಾಟಕ ಪ್ರಾಂತ್ರ, ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಜಿಲ್ಲೆ, ಸ್ವಯಂ ಸೇವಾ ಸಂಸ್ಥೆಗಳು, ವಿಕಲಚೇತನರ ಸಂಘ ಸಂಸ್ಥೆಗಳು ವಿ.ಆರ್.ಡಬ್ಲೂ/ ಯು.ಆರ್.ಡಬ್ಲೂ/ಎಮ್.ಆರ್.ಡಬ್ಲೂ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಪ್ರಪಂಚದಾದ್ಯಂತ ವಿಶ್ವ ಅಂಗವಿಲಚೇತನರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ವಿಕಲಚೇತನರನ್ನು…

Read More

ಹುಬ್ಬಳ್ಳಿ: ಕೇಂದ್ರದ ಬಿಜೆಪಿ ಆಡಳಿತದ ಸರ್ಕಾರವು ದಕ್ಷಿಣ ರಾಜ್ಯಗಳ ಮೇಲೆ ಮಲತಾಯಿ ಧೋರಣೆ ತೋರುತ್ತಿದೆ ಎಂಬುದನ್ನು ದಕ್ಷಿಣ ಭಾಗದ ರಾಜ್ಯಗಳ ಜನತೆ ಅರ್ಥಮಾಡಿಕೊಂಡಿದ್ದಾರೆ ಹೀಗಾಗಿ ಮೋದಿ ನಾಯಕತ್ವವನ್ನು ದೇಶದ ದಕ್ಷಿಣ ಭಾಗ ಒಪ್ಪುವುದಿಲ್ಲ ಮತ್ತು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡ್ಡವಾಡ ಪ್ರತಿಕ್ರಿಯಿಸಿದ್ದಾರೆ. ದೇಶಕ್ಕೆ ಗ್ಯಾರಂಟಿ ಮೋದಿ ಎಂಬ ಇವರ ನಾನ್ನುಡಿ ತೆಲಂಗಾಣದಲ್ಲಿ ಕರ್ನಾಟಕದಲ್ಲಿ ಏಕೆ ಕೆಲಸ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.

Read More

ಕಂಪ್ಲಿ :-ಪಂಚರಾಜ್ಯಗಳ ಚುನಾವಣಾ ಫಲಿತಾಂಶ ವಿಚಾರವಾಗಿ ಕಂಪ್ಲಿ ಮಂಡಲ ಅಧ್ಯಕ್ಷ ಅರಳಿ ವೀರೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು, ರಾಜಸ್ಥಾನ ಗೆದ್ದರೆ ಬಹಳ ಸಂತೋಷ ಆಗುತ್ತೆ ಅಂದುಕೊಂಡಿದ್ವಿ. ಇಷ್ಟರಲ್ಲೇ ತೃಪ್ತಿಪಡಬೇಡಿ ದೇಶದ ಜನ ನಿಮ್ಮ ಜೊತೆ ಇದ್ದಾರೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗಬೇಕು ಎಂಬ ದೃಷ್ಟಿಯಿಂದ ರಾಜಸ್ಥಾನ, ಮಧ್ಯಪ್ರದೇಶ ಜೊತೆಗೆ ಛತ್ತೀಸ್ ಘಡವನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ದೊಡ್ಡ ಆನಂದ ದೇಶದ ಜನತೆಗೆ ಆಗಿದೆ ಎಂದರು. ಕಾಂಗ್ರೆಸ್ ನವರು ಐದಕ್ಕೆ ಐದು ಗೆಲ್ಲುತ್ತೀವಿ ಅಂತಿದ್ದರು. ತೆಲಂಗಾಣ ಒಂದು ರಾಜ್ಯದಲ್ಲಿ ಮುಖ್ಯಮಂತ್ರಿ ಮೇಲಿದ್ದ ಬೇಸರದಿಂದ. ಕರ್ನಾಟಕ ರಾಜ್ಯದಲ್ಲಿ ಗ್ಯಾರಂಟಿ ಮೂಲಕ ಮೋಸ ಮಾಡಿದ ರೀತಿ. ಮುಸ್ಲಿಂರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾದರೋ. ಅದೇ ರೀತಿ ಗೆದ್ದಿದ್ದಾರೆ. ಇನ್ನೂ ಮುಂದಿನ ಚುನಾವಣೆಯಲ್ಲಿ ತೆಲಂಗಾಣ ಗೆಲ್ಲಲ್ಲು ಆಗಲ್ಲ. ಈಗ ರಾಜಸ್ಥಾನ, ಮಧ್ಯಪ್ರದೇಶ, ಛತ್ತಿಸ್ ಘಡ ಗೆದ್ದಿದ್ದೇವೆ. ಮುಂದಿನ ಚುನಾವಣೆಯಲ್ಲಿ ದೇಶ ಗೆಲ್ಲುತ್ತೇವೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಆಗ್ತಾರೆ. ಕರ್ನಾಟಕ ಮಾದರಿಯಲ್ಲಿ ಗ್ಯಾರಂಟಿ ಕೊಟ್ಟುತ್ತೇವೆ…

Read More

ಹುಬ್ಬಳ್ಳಿ:‌ ಮಹಿಳೆಯರಲ್ಲಿ ಸ್ತ್ರೀತ್ವ ಶಕ್ತಿಗಿಂತ ಮಾತೃತ್ವ ಶಕ್ತಿ ಜಾಗೃತವಾದಾಗ ಭಾರತದ ವಿಕಾಸಕ್ಕೆ ಪೂರಕ ಎಂದು ಬೆಂಗಳೂರಿನ ಖ್ಯಾತ ನ್ಯಾಯವಾದಿ ಕ್ಷಮಾ ನರಗುಂದ ಹೇಳಿದರು. ನಗರದ ವಾಸವಿ ಮಹಲ್ ನಲ್ಲಿ ಸಂಸ್ಕೃತಿ ಟ್ರಸ್ಟ್ ವತಿಯಿಂದ ನಡೆದ ಧಾರವಾಡ ವಿಭಾಗದ ಶಕ್ತಿ ಸಂಚಯ ಜಾಗೃತ ಮಹಿಳೆಯರ ಸಮಾವೇಶದ ಸಮಾರೋಪದಲ್ಲಿ ಭಾರತದ ವಿಕಾಸದಲ್ಲಿ ಮಹಿಳೆಯರ ಪಾತ್ರ ಕುರಿತು ಅವರು ಮಾತನಾಡಿದರು. ಬೌದ್ಧಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಭಾರತ ವಿಕಾಸವಾಗಬೇಕು. ಪ್ರಾಚೀನ ಇತಿಹಾಸ ಅವಲೋಕಿಸಿದಾಗ ವಿಜ್ಞಾನ‌ ಕ್ಷೇತ್ರದ ಏಳಿಗೆಯಲ್ಲಿ ಅನೇಕ‌ ಮಹಿಳೆಯರ ಕೊಡುಗೆ ಅಪಾರವಾಗಿದೆ. ಕಿತ್ತೂರು ಚೆನ್ನಮ್ಮ, ಕೆಳದಿ ಚೆನ್ನಮ್ಮ ನಮ್ಮ ಶೌರ್ಯ ಪರಂಪರೆಯಲ್ಲಿ ಕಾಣುತ್ತಾರೆ ಜೊತೆಗೆ ರಾಜನೀತಿಯಲ್ಲೂ ಸಹ ಮಹಿಳೆಯರು ತಮ್ಮ ಪಾಂಡಿತ್ಯ ತೋರಿದ್ದಾರೆ ಎಂದರು. ನಮ್ಮದು ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆ. ಸ್ವಯಂ ವ್ಯಕ್ತಿ ನಿರ್ಮಾಣದಲ್ಲಿ ತೊಡಗಿಕೊಳ್ಳುವವರು ನಾವು. ತಥಾಕಥಿತ ಮಹಿಳಾವಾದಿಗಳು ಪುರುಷ ಸಮಾಜದಿಂದ ವಿಮುಕ್ತಿ, ಸ್ವಾತಂತ್ರ್ಯ ಬಯಸುತ್ತಿದ್ದಾರೆ. ಹಾಗಾದರೆ ಯಾವ ಸಮಸ್ಯೆಯೂ ಪರಿಹಾರಗೊಳ್ಳುವುದಿಲ್ಲ. ಸ್ತ್ರೀ ಎಂಬ ಕಲ್ಪನೆ ಅತ್ಯಂತ ವಿಸ್ತಾರವಾದದ್ದು. ಸ್ತ್ರೀ-ಪುರುಷರ ತಾರತಮ್ಯ…

Read More

ವಿಜಯಪುರ:- ಬಿಜೆಪಿ ಗ್ಯಾರಂಟಿಗಳೇ 3 ರಾಜ್ಯಗಳ ಗೆಲುವಿಗೆ ಕಾರಣ ಎಂದು ಸಚಿವ MB ಪಾಟೀಲ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಕೂಡ ಗ್ಯಾರಂಟಿಗಳನ್ನು ಘೋಷಿಸಿತ್ತು. 3 ರಾಜ್ಯಗಳ ಗೆಲುವಿಗೆ ಅದೂ ಕಾರಣವಾಗಿದೆ. ಗ್ಯಾರಂಟಿಗಳನ್ನು ವಿರೋಧ ಮಾಡಿದವರೇ ಗ್ಯಾರಂಟಿ ಘೋಷಿಸಿದರು, ಅದರಿಂದಲೇ ಗೆಲುವಾಗಿರಬಹುದು ಎಂದು ಹೇಳಿದರು. ಪ್ರಜಾಪ್ರಭುತ್ವ ವ್ಯಸವಸ್ಥೆಯಲ್ಲಿ ಮತದಾರರ ತೀರ್ಪು ಒಪ್ಪಲೇಬೇಕು. ಮೂರು ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮತದಾರರ ತೀರ್ಪು ಒಪ್ಪಬೇಕು. ಮಧ್ಯಪ್ರದೇಶ, ಛತ್ತೀಸ್‌ಗಢ ಚುನಾವಣೆಯಲ್ಲಿ ಬಹಳಷ್ಟು ನಿರೀಕ್ಷೆ ಇತ್ತು. ಎಲ್ಲಿ ಎಡವಿದ್ದೀವಿ, ಯಾಕೆ ಈ ರೀತಿಯ ಫಲಿತಾಂಶ ಬಂತು ಎನ್ನುವುದು ಪಕ್ಷದಲ್ಲಿ ಚರ್ಚೆಯಾಗುತ್ತದೆ” ಎಂದರು. ಯಾರು ಗ್ಯಾರಂಟಿಗಳನ್ನು ವಿರೋಧ ಮಾಡಿದರು, ಅವರೇ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ಬಿಜೆಪಿಯವರೂ ಗ್ಯಾರಂಟಿ ಭರವಸೆ ಕೊಟ್ಟಿದ್ದಾರೆ. ಇದೇ ಕಾರಣಗಳಿಂದಾಗಿ ಈ ಫಲಿತಾಂಶ ಬಂದಿರಬಹುದು. ಅಂದರೆ, ಕರ್ನಾಟಕದ ಗ್ಯಾರಂಟಿ ವರ್ಕ್‌ಔಟ್‌ ಆಗಿದೆ ಅಂತ ಆಯಿತಲ್ಲಾ” ಎಂದು ಎಂಬಿ ಪಾಟೀಲ್‌ ಹೇಳಿದರು ಫಲಿತಾಂಶ ಕುರಿತು ಪಕ್ಷದ ವರಿಷ್ಠರು, ಸಿಡಬ್ಲ್ಯೂಸಿಯಲ್ಲಿ…

Read More

ಕಲಬುರ್ಗಿ:- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಲಬುರಗಿ ವಲಯವು ನಗರದ ಮರಾಠಿ ಸಾಹಿತ್ಯ ಮಂಡಲದಲ್ಲಿ ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಹುತಾತ್ಮರಾದ ಸೇನಾ ಯೋಧರನ್ನು ಗೌರವಿಸಲು ಸಂತಾಪ ಸೂಚಕ ಸಭೆಯನ್ನು ಆಯೋಜಿಸಿತು. ಪ್ರಗತಿಪರ ಚಿಂತಕರಾದ ಸಂಜೀವ್ ಸೀರ್ನೂರಕರ್ ಅವರ ಭಾಷಣದೊಂದಿಗೆ ಆರಂಭವಾದ ಸಂತಾಪ ಸಭೆಯು ಹುತಾತ್ಮ ಯೋಧರ ಶೌರ್ಯ ಮತ್ತು ತ್ಯಾಗವನ್ನು ಶ್ಲಾಘಿಸಿದರು. ಮತ್ತು ಅವರು ರಾಜೌರಿ ಜಿಲ್ಲೆಯ ಘಟನೆಯನ್ನು ವಿವರಿಸಿದರು ಮತ್ತು ಅಗಲಿದ ಆತ್ಮಗಳಿಗಾಗಿ ಪ್ರಾರ್ಥಿಸಿದ ಕುಟುಂಬಗಳಿಗೆ ಸಂತಾಪ ಸೂಚಿಸಿದರು, ನಂತರ ಎಕೆಬಿಎಂಎಸ್ ಪದಾಧಿಕಾರಿಗಳು ಮತ್ತು ಇತರ ಸಮುದಾಯದ ಮುಖಂಡರು ಭಾಷಣ ಮಾಡಿದರು. ಸಭೆಯಲ್ಲಿ ಹುತಾತ್ಮ ಯೋಧರ ಗೌರವಾರ್ಥ 2 ನಿಮಿಷಗಳ ಮೌನವನ್ನು ಮಾಡಲಾಯಿತು. ಸಭೆಯು ಸಶಸ್ತ್ರ ಪಡೆಗಳ ಬಗ್ಗೆ ಸಮುದಾಯ ಹೊಂದಿರುವ ಆಳವಾದ ಗೌರವವನ್ನು ಮತ್ತು ಶಾಂತಿ ಮತ್ತು ನ್ಯಾಯಕ್ಕಾಗಿ ಅವರ ಬದ್ಧತೆಯನ್ನು ತೋರಿಸಿದೆ. ಸಭೆಯಲ್ಲಿ ಎಕೆಬಿಎಂಎಸ್ ಪದಾಧಿಕಾರಿಗಳು ಹಾಗೂ ಬ್ರಾಹ್ಮಣ ಸಮಾಜದ ಇತರೆ ಸದಸ್ಯರು ಉಪಸ್ಥಿತರಿದ್ದರು.

Read More