Author: AIN Author

ಕ್ರಿಕೇಟಿಗ ಮಹೇಂದ್ರ ಸಿಂಗ್ ಧೋನಿ ಪ್ರಪಂಚದಾದ್ಯಂತ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಆಗಸ್ಟ್ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌’ಗೆ ವಿದಾಯ ಹೇಳಿದ್ದರೂ, ಇಂದಿಗೂ ಐಪಿಎಲ್ ಪಂದ್ಯ ಆಡಲೆಂದು ಕ್ರೀಡಾಂಗಣಕ್ಕೆ ಬಂದರೆ ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಾರೆ. https://www.instagram.com/reel/C0GF_69i-XP/?utm_source=ig_web_copy_link ಧೋನಿಗೆ ಸಂಬಂಧಿಸಿದ ವೀಡಿಯೊಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇಂತಹದೊಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದು, ಅದರಲ್ಲಿ ಅಭಿಮಾನಿಯೊಬ್ಬರ ಬೈಕ್ ಅನ್ನು ಟೀ ಶರ್ಟ್ ನಿಂದ ಕ್ಲೀನ್ ಮಾಡುವುದನ್ನು ಕಾಣಬಹುದು. ವೈರಲ್​ ಆಗಿರುವ ಈ ವೀಡಿಯೋದಲ್ಲಿ ಅಭಿಮಾನಿಯೊಬ್ಬ ತಮ್ಮ ಬೈಕ್​ ಮೇಲೆ ಆಟೋಗ್ರಾಫ್ ಹಾಕುವಂತೆ ಕೇಳುತ್ತಿರುವುದು ಕಂಡು ಬಂದಿದೆ. ಅಭಿಮಾನಿ ಕೋರಿಕೆಗೆ ಓಕೆ ಎಂದ ಧೋನಿ ಬೈಕ್​ ನೋಡಿ ಖುಷಿಪಟ್ಟು ಸಹಿ ಮಾಡುವ ಮೊದಲು ಸೂಪರ್ ಬೈಕ್ ಅನ್ನು ತಮ್ಮ ಟೀ ಶರ್ಟ್‌’ನಿಂದಲೇ ಕ್ಲೀನ್ ಮಾಡಿ ಬಳಿಕ ಸಹಿ ಮಾಡಿದ್ದಾರೆ.

Read More

ಹಾಸನ: ಮಾಜಿ ಸಚಿವ ಹೆಚ್‌ಡಿ ರೇವಣ್ಣ ಪತ್ನಿ ಹಾಗೂ ಜಿಪಂ ಮಾಜಿ ಸದಸ್ಯೆ ಭವಾನಿ ರೇವಣ್ಣ (Bhavani Revanna) ಅವರ ಕಾರಿಗೆ (Car)  ಬೈಕ್‌  (Bike) ಡಿಕ್ಕಿ ಹೊಡೆದಿರುವ ಘಟನೆ ಮೈಸೂರು (Mysuru) ಜಿಲ್ಲೆಯ ಸಾಲಿಗ್ರಾಮ ಬಳಿ ನಡೆದಿದೆ. ಭವಾನಿ ರೇವಣ್ಣ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಬೈಕ್‌ವೊಂದು ಡಿಕ್ಕಿ ಹೊಡೆದಿದೆ. ಇದರಿಂದ ರೊಚ್ಚಿಗೆದ್ದ ಭವಾನಿ ರೇವಣ್ಣ ಅವರು ಬೈಕ್‌ ಸವಾರನಿಗೆ ಹಿಗ್ಗಾಮುಗ್ಗ ಜಾಡಿಸಿದ್ದಾರೆ. ಕಾರಿನ ಬೋರ್ಡ್‌ಗೆ ಡ್ಯಾಮೇಜ್‌ ಆಗಿದೆ ಎಂದು ಕ್ಲಾಸ್‌ ತೆಗೆದುಕೊಂಡಿರುವ ಘಟನೆ ನಡೆದಿದೆ. ಈ ದೃಶ್ಯದ ವೀಡಿಯೋ ವೈರಲ್‌ ಆಗಿದೆ. ರಸ್ತೆಗಿಳಿದು ಬೈಕ್ ಸವಾರನನ್ನು ಭವಾನಿ ರೇವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟು ದೂರದಿಂದ ಟೈರ್ ಉಜ್ಜಿಕೊಂಡು ಕಂಟ್ರೋಲ್‌ ಮಾಡಿದ್ದೀವಿ. ಬೈಕ್ ಓಡ್ಸೋಕೆ ಇತಿಮಿತಿ ಇಲ್ವಾ? ನಿನಗೆ ರೈಟ್ ಸೈಡ್ ಬರೋಕೆ ರೂಲ್ಸ್ ಎಲ್ಲಿದೆ? ಲೆಫ್ಟ್ ಸೈಡ್ ಬರಬೇಕು ನೀನು ಎಂದು ಕ್ಲಾಸ್‌ ತೆಗೆದುಕೊಂಡಿದ್ದಾರೆ.

Read More

ಸೂರ್ಯೋದಯ: 06.27 AM, ಸೂರ್ಯಾಸ್ತ : 05.52 ಪಿಎಂ ಶಾಲಿವಾಹನ ಶಕೆ1944, ಶುಭಕೃತ ನಾಮ ಸಂವತ್ಸರ, ಸಂವತ್2078, ಕಾರ್ತೀಕ ಮಾಸ, ಕೃಷ್ಣ ಪಕ್ಷ, ದಕ್ಷಿಣಾಯಣ, ಶರತ ಋತು, ತಿಥಿ: ಇವತ್ತು ಸಪ್ತಮಿ 09:59 PM ತನಕ ನಂತರ ಅಷ್ಟಮಿ ನಕ್ಷತ್ರ: ಇವತ್ತು ಪೂರ್ಣ ಮಖ ಯೋಗ: ಇವತ್ತು ವೈಧೃತಿ 09:48 PM ತನಕ ನಂತರ ವಿಷ್ಕುಂಭ ಕರಣ: ಇವತ್ತು ವಿಷ್ಟಿ 08:41 AM ತನಕ ನಂತರ ಬವ 09:59 PM ತನಕ ನಂತರ ಬಾಲವ ರಾಹು ಕಾಲ: 07:30 ನಿಂದ 09:00 ವರೆಗೂ ಯಮಗಂಡ: 10:30 ನಿಂದ 12:00 ವರೆಗೂ ಗುಳಿಕ ಕಾಲ: 03:00 ನಿಂದ 04:30 ವರೆಗೂ ಅಮೃತಕಾಲ: 09.53 PM to 11.41 PM ಅಭಿಜಿತ್ ಮುಹುರ್ತ: ಬೆಳಗ್ಗೆ.11:44 ನಿಂದ ಮ.12:28 ವರೆಗೂ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ. ಸೋಮಶೇಖರ್ ಗುರೂಜಿB.Sc ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.…

Read More

ನವದೆಹಲಿ:- ಈ ಬಾರಿಯ ಅಧಿವೇಶನವು ಬಿರುಗಾಳಿಯ ಅಧಿವೇಶನವಾಗುವ ಸಾಧ್ಯತೆ ಇದೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಈ ಸಂಬಂಧ ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಪ್ರಾರಂಭವಾಗಲಿದ್ದು, ಪ್ರತಿಪಕ್ಷಗಳು ಸಂಸತ್ತಿಗೆ ಅಡ್ಡಿಪಡಿಸಿದರೆ “ಕೆಟ್ಟ ಫಲಿತಾಂಶ” ಎದುರಿಸಬೇಕಾಗುತ್ತದೆ ಎಂದರು. ಪ್ರತಿಪಕ್ಷಗಳು ಸಂಸತ್ತಿಗೆ ಅಡ್ಡಿಪಡಿಸಿದರೆ, ಇಂದು ಬಂದಿರುವುದಕ್ಕಿಂತ ಕೆಟ್ಟ ಫಲಿತಾಂಶವನ್ನು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಡಿಸೆಂಬರ್ 4 ರಿಂದ ಡಿಸೆಂಬರ್ 22 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನವು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಮತ್ತು ಮೂರು ಪ್ರಮುಖರ ವಿರುದ್ಧದ ‘ಪ್ರಶ್ನೆಗೆ ನಗದು’ ಆರೋಪಗಳ ಕುರಿತು ನೈತಿಕ ಸಮಿತಿಯ ವರದಿಗಳ ಮಂಡನೆಗೆ ಸಾಕ್ಷಿಯಾಗುವುದರಿಂದ ಈ ಬಾರಿಯ ಅಧಿವೇಶನವು ಬಿರುಗಾಳಿಯ ಅಧಿವೇಶನವಾಗುವ ಸಾಧ್ಯತೆಯಿದೆ ಎಂದು ಹೇಳಿದರು. ಕೇಂದ್ರ ಸರ್ಕಾರವು “ಎಲ್ಲಾ ವಿಷಯಗಳ” ಬಗ್ಗೆ ಚರ್ಚಿಸಲು ಸಿದ್ಧವಾಗಿದೆ, ಆದರೆ ಅದನ್ನು “ನಿಯಮಗಳು ಮತ್ತು ಕಾರ್ಯವಿಧಾನಗಳನ್ನು” ಅನುಸರಿಸಬೇಕು ಎಂದು ಪ್ರಸ್ತಾಪಿಸಿದರು.

Read More

ಹೊಸಪೇಟೆ:- ತನಿಖಾ ಸಂಸ್ಥೆಗಳ ದುರ್ಬಳಕೆಯಿಂದ ಬಿಜೆಪಿಗೆ ಗೆಲುವು ಸಿಕ್ಕಿದೆ ಎಂದು ಎಚ್.ಸಿ. ಮಹದೇವಪ್ಪ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿದ್ದರಿಂದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ಗೆ ಸೋಲು ಉಂಟಾಗಿದೆ ಎಂದರು. ತೆಲಂಗಾಣದಲ್ಲಿ ಸಹ ಇದೇ ಪ್ರಯತ್ನ ನಡೆದರೂ ಮತದಾರರು ಕಾಂಗ್ರೆಸ್ ಪಕ್ಷವನ್ನು ಕೈಹಿಡಿದರು. ಕರ್ನಾಟಕದಲ್ಲಿ ಜಾರಿಗೆ ಬಂದ ಗ್ಯಾರಂಟಿಗಳ ಪ್ರಭಾವವೂ ತೆಲಂಗಾಣದಲ್ಲಿದೆ ಎಂದರು. ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆ ಇರಲಿಲ್ಲ, ಆದರೂ ಕಾಂಗ್ರೆಸ್ ಸೋಲು ಕಂಡಿರುವುದು ಅಚ್ಚರಿ ತಂದಿದೆ ಎಂದರು. ಈ ವಿಧಾನಸಭೆ ಚುನಾವಣೆ ಫಲಿತಾಂಶ ಲೋಕಸಭಾ ಚುವಾವಣೆಯ ದಿಕ್ಸೂಚಿ ಅಲ್ಲ ಎಂದರು.

Read More

ಬೆಂಗಳೂರು:- ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಕಾರಣ ಏನೆಂಬುವುದನ್ನು ಈಶ್ವರಪ್ಪ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ, ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ನೋಡಿದ ಮೇಲೆ ನಮ್ಮ ದೇಶಕ್ಕೆ ಭವಿಷ್ಯ ಇದೆ ಅನ್ನಿಸಿದೆ. ಆದ್ರೆ ಕರ್ನಾಟಕದ ಮತದಾರರ ವಿಚಾರದಲ್ಲಿ ನಾವು ಮಾಡಿಕೊಂಡ ಮುಟ್ಟಾಳತನದಿಂದ ಅಧಿಕಾರ ಕಳೆದುಕೊಳ್ಳಬೇಕಾಯಿತು. ರಾಜ್ಯದಲ್ಲಿಯೂ ಬಿಜೆಪಿ ಒಟ್ಟಾಗಿ ಹೋಗಿದ್ದರೆ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ ಎಂದು ಅವಲೋಕನ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಒಟ್ಟಾಗಿ ಹೋಗದೇ ಇದ್ದದ್ದು, ನಮ್ಮ ನೇತೃತ್ದದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ವಿಫಲರಾದೆವು. ಈ ನಡುವೆ ಕಾಂಗ್ರೆಸ್ ಬಡವರಿಗೆ ಕೊಟ್ಟ ಗ್ಯಾರಂಟಿಗಳನ್ನ ಅರ್ಥಮಾಡಿಕೊಳ್ಳುವಲ್ಲಿ ವಿಫಲರಾದೆವು. ಇದೆಲ್ಲವೂ ಬಿಜೆಪಿ ಸೋಲಿಗೆ ಕಾರವಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಂತೆ ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣದಲ್ಲೂ ಕಾಂಗ್ರೆಸ್ ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬರಲು ಯೋಚಿಸುತ್ತಿತ್ತು. ಆದರೆ ಅದು ವಿಫಲವಾಗಿದೆ. ಬಿಜೆಪಿ ಇಂದೇ ಪಾಠ ಕಲಿಯಬೇಕು. ಮುಂಬರುವ ಚುನಾವಣೆಯಲ್ಲಿ ಗೆಲ್ಲಲು ಎಲ್ಲರೂ ಒಟ್ಟಾಗಿ…

Read More

ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆರ್‌ಬಿ ತಂಡದ ಆಟಗಾರ ಮಿಸ್ಟರ್‌ 360 ಅಂತಲೇ ಪ್ರಖ್ಯಾತಿ ಪಡೆದಿರುವ ಎಬಿ ಡಿವಿಲಿಯರ್ಸ್ ಹೆಸರು ಕೇಳಿದರೆ ಸಾಕು ಅವರ ಬಗ್ಗೆ ಒಂದು ತಾಸುಗಟ್ಟಲೇ ವಿವರ ಕೊಡುವುದಲ್ಲದೇ, ಆಟದ ಕಾರ್ಯವೈಖರಿಯ ಮಾಹಿತಿಯನ್ನೇ ಬಿಚ್ಚಿಡುತ್ತಾರೆ. ಇನ್ನು ಎಬಿಡಿ ಅವರು ಐಪಿಎಲ್​ನಲ್ಲಿ ತನ್ನ ಜೀವನ ಹೇಗೆ ಬದಲಾವಣೆ ಆಯಿತು ಎನ್ನುವ ಬಗ್ಗೆ ಮನ ಬಿಚ್ಚಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ ಅವರು ಡೆಲ್ಲಿ ಡೇರ್ ​ಡೆವಿಲ್ಸ್ ಹೇಗೆ ಮೋಸ ಮಾಡಿತು ಎಂಬುದರ ಕುರಿತು ಎಳೆ ಎಳೆಯಾಗಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಇಂಟರೆಸ್ಟಿಂಗ್‌ ಮಾಹಿತಿಯನ್ನು ಇಲ್ಲಿ ಗಮನಿಸಿ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪ್ರಖ್ಯಾತ ಆಟಗಾರರಲ್ಲಿ ಒಬ್ಬರಾದ ಎಬಿ ಡಿವಿಲಿಯರ್ಸ್ ಅವರು, ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮೆಕ್‌ಗ್ರಾತ್​​ ಅವರೊಂದಿಗೆ ಕಳೆದ ಕ್ಷಣಗಳ ಕುರಿತು ನೆನೆದಿದ್ದಾರೆ. ನನ್ನ ಐಪಿಎಲ್ ಪ್ರಯಾಣ 2008ರಿಂದಲೇ ಪ್ರಾರಂಭ ಆಯಿತು. ಚೊಚ್ಚಲ ಐಪಿಎಲ್​​ ನನಗೆ ಸೇರಿದಂತೆ ಬಹಳಷ್ಟು ಆಟಗಾರರಿಗೆ ದೊಡ್ಡ ಸಂದರ್ಭ ಆಗಿತ್ತು.…

Read More

ಹುಬ್ಬಳ್ಳಿ, – ಶಿವಾಜಿ ಮಹಾರಾಜರು ಇರದೇ ಇದ್ದರೆ ನನ್ನ ಹೆಸರು ಅರವಿಂದ ಇರದೇ ಬೇರೇನೋ ಇರುತ್ತಿತ್ತು. ಛತ್ರಪತಿ ಶಿವಾಜಿ ಮಹಾರಾಜರ ನೇತೃತ್ವದಲ್ಲಿ ನಡೆದ ಮೊಘಲರ ಹಾಗೂ ಆದಿಲಶಾಹಿಗಳ ವಿರುದ್ದ ಮರಾಠರ ಹೋರಾಟ ಹಾಗೂ ಬಲಿದಾನದಿಂದಾಗಿ ಇವತ್ತು ಹಿಂದೂ ಸಮಾಜ ಉಳಿದಿದೆ. ಸಮಸ್ತ ಹಿಂದೂ ಸಮಾಜ ಇಂದು ಇದರ ಋಣ ತೀರಿಸಬೇಕು ಎಂದು ಶಾಸಕ ಅರವಿಂದ ಬೆಲ್ಲದ ಅವರು ನುಡಿದರು. ಅವರು ಕ್ಷತ್ರಿಯ ಮರಾಠಾ ಸಮಾಜ (96/ ಶಾಂಣ್ಣವ ಕುಳಿ ) ಚಾರಿಟೇಬಲ್ ಟ್ರಸ್ಟ್ (ರಿ), ವತಿಯಿಂದ ಜೀಜಾಮಾತಾ ಮರಾಠಾ ಮಹಿಳಾ ಮಂಡಳ ಮರಾಠಾ ಗಲ್ಲಿ ಇವರ ಸಹಯೋಗದಲ್ಲಿ ಮರಾಠಾ ಶ್ರೀ ಭಾರತಿಮಠ ಟ್ರಸ್ಟ್ ಇವರ ಆಶ್ರಯದಲ್ಲಿ ಹುಬ್ಬಳಿಯಲ್ಲಿಂದು ವಿದ್ಯಾನಗರದ ಮರಾಠಾ ಭಾರತಿಮಠ ಕಲ್ಯಾಣ ಮಂಟಪ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಷತ್ರಿಯ ಮರಾಠಾ ಸಮಾಜದ ವಧು ವರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹುಬ್ಬಳ್ಳಿ ಸೆಂಟ್ರಲ್ ಶಾಸಕ ಮಹೇಶ ಟೆಂಗಿನಕಾಯಿ ಅವರು ಮಾತನಾಡಿ ವಧೂವರರ ಸಮಾವೇಶ ಗಳನ್ನೂ ಆಯೋಜನೆ ಮಾಡುವದರಿಂದ ಪಾಲಕರು…

Read More

ಬೆಂಗಳೂರು:- ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಪಂಚ ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿಗೆ ಹಾಗೂ PM ಮೋದಿಗೆ ಶುಭ ಕೋರಿದ್ದಾರೆ. ಈ ಸಂಬಂಧ X ಮಾಡಿರುವ ಅವರು, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅದ್ಭುತ ಪ್ರದರ್ಶನಕ್ಕಾಗಿ ನನ್ನ ಪಕ್ಷವು ಬಿಜೆಪಿಯ ಉನ್ನತ ನಾಯಕತ್ವವನ್ನು, ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತದೆ ಎಂದಿದ್ದಾರೆ. ಚುನಾವಣಾ ಫಲಿತಾಂಶಗಳ ಬಗ್ಗೆ ಮಾತನಾಡಿದ ದೇವೇಗೌಡ, ನರೇಂದ್ರ ಮೋದಿಯವರ ಅವರ ಅದ್ಭುತ ಪ್ರದರ್ಶನಕ್ಕೆ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢ 2023 ರ ಫಲಿತಾಂಶ ಸಾಕ್ಷಿಯಾಗಿದೆ ಎಂದರು.

Read More

ಬೆಂಗಳೂರು:- ಜನರಿಗೆ ಸುಳ್ಳು ಬಹಳ ಇಂಪಾಗಿ ಕೇಳುತ್ತೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಜನಕ್ಕೆ ಸುಳ್ಳು ಬಹಳ ಇಂಪಾಗಿ ಕೇಳುತ್ತೆದೆ. ಆದ್ದರಿಂದ ಜನ ಅದೇ ರೀತಿ ಯಾಮಾರುತ್ತಾ ಇದ್ದಾರೆ. ಇನ್ನು ಕರ್ನಾಟಕ ಮತ್ತು ತೆಲಂಗಾಣದಲ್ಲಿ ಆಡಳಿತ ವಿರೋಧಿ ಅಲೆಯಿತ್ತು. ಈ ಎರಡು ರಾಜ್ಯಗಳಲ್ಲಿ ನಾವು ಗ್ಯಾರಂಟಿ ಘೋಷಣೆ ಮಾಡದಿದ್ದರೂ ಗೆಲುವು ಸಾಧಿಸುತ್ತಿದ್ದೆವು ಎಂದರು. ಪಂಚರಾಜ್ಯ ಚುನಾವಣೆಯಲ್ಲಿ ನಮಗೆ ಹಿನ್ನೆಡೆ ಎಂದು ಹೇಳೋದಿಲ್ಲ ನಾವು ಜಾರ್ಖಂಡ್ ಸಹ ಗೆಲ್ಲತ್ತೇವೆ ಎಂದು ಕೊಡಿದ್ದೆವು. ಅದು ಅನಿರೀಕ್ಷಿತ ನಮಗೆ ರಾಜಸ್ಥಾನದಲ್ಲಿ‌ ನಮ್ಮಲ್ಲೆ ಆಂತರಿಕ ಕಿತ್ತಟಾ ಬಹಳಷ್ಟು ಇತ್ತು. ಹಾಗಾಗಿ ನಮ್ಗೆ ಗೆಲ್ಲವಂತಹ ವಿಶ್ವಾಸ ಇರಲಿಲ್ಲ. ದೇಶದಲ್ಲಿ ಆಡಳಿತ ಪಕ್ಷ ಇರುವಂತಹ ಬಿಜೆಪಿ ಬಹಳ ಸಂಪನ್ಮೂಲ ಹೊಂದಿದ್ದಾರೆ. ಸುಳ್ಳು ಸಹ ಬಹಳ ಚನ್ನಾಗಿ ಹೇಳುತ್ತಾರೆ ಬಿಜೆಪಿ ಅವ್ರು ಅದನ್ನು ಜನ ನಂಬಿದ್ದಾರೆ. ಜನಕ್ಕೆ ತಲೆಗೆ ಹತ್ತೋ ರೀತಿ ಸುಳ್ಳು ಹೇಳಿ ಹೇಳಿ 9 ವರ್ಷದಿಂದ ಚುನಾವಣೆ ಗೆಲುತ್ತಾ ಇದ್ದಾರೆ. ಜನಕ್ಕೆ…

Read More