ಕೋಲಾರ: ರೈತರು ಯಾವುದೇ ಒಂದು ಬೆಳೆಯನ್ನು ತೆಗೆಯಬೇಕಾದರೆ ಬಹಳಷ್ಟು ಶ್ರಮ ಪಡುತ್ತಾರೆ ಲಕ್ಷಾಂತರ ರೂಪಾಯಿ ಬಂಡವಾಳವನ್ನು ಸಹಾ ಹಾಕುತ್ತಾರೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆ ಬೆಳೆದು ಮಾರುಕಟ್ಟೆಗೆ ತೆಗೆದುಕೊಂಡು ಹೋದಂತಹ ಸಂದರ್ಭದಲ್ಲಿ ಮಾರುಕಟ್ಟೆಗಳಲ್ಲಿ ಬೆಂಬಲ ಬೆಲೆಗೆ ಮಾರಾಟವಾಗದೆ ಬಹಳಷ್ಟು ರೈತರು ಸಾಲಗಳಾಗಿ ಸಾಲಗಳನ್ನು ತಿಳಿಸಲಾಗಿದೆ ಕೆಲ ರೈತರು ಊರು ಬಿಟ್ಟು ಹೋಗಿದ್ದಾರೆ. ಇನ್ನು ಕೆಲ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಒಂದಲ್ಲ ಒಂದು ರೀತಿಯಲ್ಲಿ ರೈತರಿಗೆ ಹೊಡೆತವೇ ಬೀಳುತ್ತಿದ್ದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಭೈರವೇಶ್ವರ ವಿದ್ಯಾನಿಕೇತನದ ಸಮೀಪ ಆಂಧ್ರಪ್ರದೇಶದಿಂದ ಜ್ಯೂಸ್ ಫ್ಯಾಕ್ಟರಿಗೆ ಟೊಮೊಟೊ ಹಣ್ಣು ಸಾಗಟ ಮಾಡುತ್ತಿದ್ದ ಲಾರಿಗೆ ಹಗ್ಗ ಬಿಗಿಯಾಗಿ ಕಟ್ಟದ ಕಾರಣದಿಂದಾಗಿ ಟೊಮೊಟೊ ಹಣ್ಣುಗಳು ಸಂಪೂರ್ಣವಾಗಿ ಮಣ್ಣುಪಾಲಾಗಿವೆ ಕೂಡಲೇ ಸ್ಥಳಕ್ಕೆ ಬೇರೊಂದು ವಾಹನವನ್ನು ಕರೆಸಿಕೊಂಡು ವಾಹನಕ್ಕೆ ಬದಲಾವಣೆ ಮಾಡಿದ್ದಾರೆ ಕಳೆದ ಎರಡು ದಿನಗಳಿಂದ ಸತತವಾಗಿ ಮಳೆ ಬೀಳುತ್ತಿರುವ ಕಾರಣ ಮಣ್ಣು ಪಾಲದಂತಹ ಟೊಮೊಟೊಗಳನ್ನು ಸಂಪೂರ್ಣವಾಗಿ ಅಲ್ಲೇ ಬಿಡಲಾಗಿದ್ದು ರೈತರಿಗೆ ಸಾವಿರಾರು ರೂಪಾಯಿ ನಷ್ಟವಾಗಿದೆ.
Author: AIN Author
ಧಾರವಾಡ: ಧಾರವಾಡದ ಕೊಪ್ಪದಕೇರಿ ಶಿವಾಲಯದ ಬಳಿ ಕೊಲೆಗೀಡಾದ ವೃದ್ಧನ ಹೆಸರು ಹಾಗೂ ವಿಳಾಸ ತಿಳಿದು ಬಂದಿದೆ.ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ನಿಂಗಪ್ಪ ಹಡಪದ (60) ಎಂಬುವವರೇ ಹತ್ಯೆಗೀಡಾದವರು. ಆಸ್ತಿ ವಿಚಾರವಾಗಿ ಈ ವೃದ್ಧನ ಕೊಲೆ ಮಾಡಲಾಗಿದೆ. ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ವೃದ್ಧ ನಿಂಗಪ್ಪನನ್ನು ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿದವರು ಯಾರು ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪ್ರತಿಯೊಬ್ಬರಿಗೂ ತಮ್ಮ ತ್ವಚೆಯನ್ನು ಸದಾ ಕಾಪಾಡಿಕೊಳ್ಳಬೇಕು ಅಂದುಕೊಳ್ಳುತ್ತಾರೆ. ಕೆಲವರು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುತ್ತಾರೆ. ಕೆಲವರು ತಮಗೆ ಗೊತ್ತಿರುವ ಟಿಪ್ಸ್ ಬಳಸಿ ತ್ವಚೆಯನ್ನು ಕಾಪಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರ ತ್ವಚೆಯೂ ವಾತಾವರಣಕ್ಕೆ ತಕ್ಕಂತೆ ಬದಲಾಗುತ್ತಿರುತ್ತದೆ. ಆಗಾಗ ನಾವು ಕೂಡ ನಮ್ಮ ತ್ವಚೆಗೆ ಆರೈಕೆ ಮಾಡಿಕೊಳ್ಳಬೇಕು. ಮೊಸರು ತ್ವಚೆಗೆ ಒಳ್ಳೆಯ ಔಷಧಿಯಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಮೊಸರು ಇರುತ್ತದೆ. ಮೊಸರಿಯಲ್ಲಿರುವ ಅಂಶದಿಂದ ನಮ್ಮ ಆರೋಗ್ಯ ಮತ್ತು ತ್ವಚೆಯನ್ನು ಕಾಪಾಡಿಕೊಳ್ಳಬಹುದು. ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಸಿಡ್ ತ್ವಚೆಯ ಕೋಶಗಳಿಗೆ ಹೊಸ ಚೈತನ್ಯವನ್ನು ನೀಡುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರೊಟೀನ್, ವಿಟಮಿನ್ ಮತ್ತು ಮಿನರಲ್ಗಳು ನಿಮ್ಮ ತ್ವಚೆಯನ್ನು ತಾಜಾ ಆಗಿರಿಸುವ ಅಂಶ ಅದರಲ್ಲಿದೆ. ಸುಂದರ ಮೊಗಕ್ಕೆ ಮೊಸರೆ ಮದ್ದು: * ಎರಡು ಚಮಚ ಮೊಸರಿಗೆ ಚಿಟಿಕೆ ಸಕ್ಕರೆ ಹಾಕಿ ಮಿಕ್ಸ್ ಮಾಡಿ. ಬಳಿಕ ಅದನ್ನ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ. 15 ನಿಮಿಷ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಈ ರೀತಿ ವಾರಕ್ಕೆ 2-3 ಬಾರಿ ಮಾಡಿದರೆ ಮುಖದಲ್ಲಿನ ಧೂಳು ಮತ್ತು ಕೊಳೆ…
ಹೈದರಾಬಾದ್: ಪಂಚರಾಜ್ಯ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ (4 State Election Results) ಹೊರಬಿದ್ದಿದ್ದು, ತೆಲಂಗಾಣದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. 119 ಸ್ಥಾನಗಳ ಪೈಕಿ 69 ಸ್ಥಾನಗಳಲ್ಲಿ ಸ್ಪಷ್ಟ ಬಹುಮತ ಕಾಯ್ದುಕೊಂಡಿದ್ದು, ಅಧಿಕೃತ ಘೋಷಣೆ ಆಗಬೇಕಿದೆ. ಆಡಳಿತಾರೂಢ BRS ಹಿಂದಿಕ್ಕಿ ಅಧಿಕಾರದ ಚುಕ್ಕಾಣಿ ಹಿಡಿಯುವತ್ತ ಕಾಂಗ್ರೆಸ್ ಮುನ್ನಡೆಸಿದ ಶ್ರೇಯ ರೇವಂತ್ ರೆಡ್ಡಿ (Revanth Reddy) ಅವರಿಗೆ ಸಲ್ಲುತ್ತದೆ ಎಂಬುದನ್ನು ‘ಕೈ’ ನಾಯಕರು ಪ್ರತಿಪಾದಿಸಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಸಂಸದೆ ಹಾಗೂ ಸ್ಯಾಂಡಲ್ವುಡ್ ನಟಿ ರಮ್ಯಾ (Actor Ramya), ರೇವಂತ್ ರೆಡ್ಡಿ ಹಾಗೂ ಕಾಂಗ್ರೆಸ್ಗೆ ಅಭಿನಂದನೆ ಸಲ್ಲಿಸಿದ್ದಾರೆ. ಸೋಶಿಯಲ್ ಮೀಡಿಯಾ X ಖಾತೆಯಲ್ಲಿ ರೇವಂತ್ ರೆಡ್ಡಿ ಫೋಟೋ ಹಂಚಿಕೊಂಡಿದ್ದು, ಕಾಂಗ್ರೆಸ್ಗೆ ಸ್ವೀಟೆಸ್ಟ್ ವಿಕ್ಷರಿ (ಅತ್ಯಂತ ಸಿಹಿಯಾದ ಜಯ) ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಅನ್ನು ರೇವಂತಿ ರೆಡ್ಡಿ ಹಾಗೂ ರಾಷ್ಟ್ರೀಯ ಕಾಂಗ್ರೆಸ್ಗೆ ಟ್ಯಾಗ್ ಮಾಡಿದ್ದಾರೆ.
ಹೈದರಾಬಾದ್: ತೆಲಂಗಾಣದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಬಿಆರ್ಎಸ್ ಪಕ್ಷಕ್ಕೆ ನಿರಾಸೆಯಾಗಿದೆ. ಪಕ್ಷದ ಹೀನಾಯ ಸೋಲನ್ನು ಕೆ.ಚಂದ್ರಶೇಖರ್ ರಾವ್ ಅವರ ಪುತ್ರ ಹಾಗೂ ಮಾಜಿ ಸಚಿವ ಕೆ.ಟಿ.ರಾಮ ರಾವ್ ಒಪ್ಪಿಕೊಂಡಿದ್ದಾರೆ. ಅಲ್ಲದೇ ತಮ್ಮದೇ ಟ್ವೀಟ್ಗೆ ಪ್ರತಿಕ್ರಿಯೆ ನೀಡಿ ತಮ್ಮನ್ನು ತಾವೇ ಟ್ರೋಲ್ ಮಾಡಿಕೊಂಡಿದ್ದಾರೆ. ಚುನಾವಣೆ ಫಲಿತಾಂಶಕ್ಕೂ ಮುನ್ನ ಕೆಟಿಆರ್ ಪೋಸ್ಟ್ ಮಾಡಿದ್ದ ಹಳೇ ಟ್ವೀಟ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆ. ಹಳೇ ಟ್ವೀಟ್ನಲ್ಲಿ, ಕ್ಯಾಮೆರಾದ ಕಡೆಗೆ ಗನ್ ತೋರಿಸುತ್ತಿರುವ ಚಿತ್ರವಿದೆ. ಈ ಹಳೆಯ ಪೋಸ್ಟ್ನ ಶೀರ್ಷಿಕೆಯಲ್ಲಿ, “ಹ್ಯಾಟ್ರಿಕ್ ಲೋಡಿಂಗ್ 3.0. ಸಂಭ್ರಮಿಸಲು ಸಿದ್ಧರಾಗಿ” ಎಂದು ಕೆಟಿಆರ್ ಬರೆದುಕೊಂಡಿದ್ದರು. ಆದರೆ ಫಲಿತಾಂಶದ ನಂತರ ಸಚಿವರು ತಮ್ಮದೇ ಪೋಸ್ಟ್ ಅನ್ನು ಮತ್ತೆ ಹಂಚಿಕೊಂಡಿದ್ದಾರೆ. ಅದರಲ್ಲಿ ‘ಇವನಿಗೆ ವಾಯಸ್ಸಾಗಿದೆ. ಗುರಿ ತಪ್ಪಿದೆ’ ಎಂದು ಬರೆದುಕೊಂಡಿದ್ದಾರೆ. ಪಕ್ಷದ ಸೋಲಿಗೆ ತಮ್ಮ ಕಾಲನ್ನು ತಾವೇ ಎಳೆದುಕೊಂಡಿದ್ದಾರೆ. ಸಚಿವರ ಟ್ವೀಟ್ಗೆ ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ‘ಸರ್, ಎಷ್ಟೋ ಮಂದಿ ಸೋಲನ್ನು ಮನೋಹರವಾಗಿ ಸ್ವೀಕರಿಸುವುದಿಲ್ಲ. ಸೋಲಿನ ನಂತರವೂ ನಿಮ್ಮ ಹಾಸ್ಯಪ್ರಜ್ಞೆಯನ್ನು ನೀವು ಉಳಿಸಿಕೊಂಡಿರುವುದು ಒಳ್ಳೆಯದು’ ಎಂದು…
ಮಹಿಳೆಯರು ಸೌಂದರ್ಯಪ್ರಿಯರು ಟ್ಯಾನಿಂಗ್, ಸನ್ ಬರ್ನ್, ಒಣ ಚರ್ಮದಿಂದ ಮುಕ್ತಿ ಪಡೆದು ಮೃದು ಮತ್ತು ಹೊಳೆಯುವ ಚರ್ಮವನ್ನು ಪಡೆಯಲು ಜನರು ವಿವಿಧ ಸೌಂದರ್ಯ ವರ್ಧಕಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲಿಯೇ ಕೆಲವು ಫೇಸ್ ಪ್ಯಾಕ್ಗಳನ್ನು ತಯಾರಿಸಿ ಮುಖಕ್ಕೆ ಹಚ್ಚಿ ತ್ವಚೆಯನ್ನು ಹೊಳೆಯುವಂತೆ ಮಾಡಬಹುದಾಗಿದೆ. * ಎರಡು ಚಮಚ ಸಾಸಿವೆಯನ್ನು ಮೊದಲಿಗೆ ಪುಡಿ ಮಾಡಿಕೊಳ್ಳಿ. ನಂತರ ಪುಡಿಗೆ ಒಂದು ಚಮಚ ಅಲೋವೆರಾ ಜೆಲ್ ಅನ್ನು ಹಾಕಿ ನಂತರ ಎರಡನ್ನು ಹೊಂದಿಕೊಳ್ಳುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಮುಖಕ್ಕೆ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. ಇಪ್ಪತ್ತು ನಿಮಿಷಗಳ ಕಾಲ ಹಾಗೆ ಬಿಡಿ ನಂತರ ಮುಖವನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. * ಸಾಸಿವೆ ಪೌಡರ್ ಗೆ 1 ಚಮಚ ಮೊಸರನ್ನು ಮಿಶ್ರಣ ಮಾಡಿ. ನಂತರ ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ ಹಾಗೂ ಒಣಗಲು ಬಿಡಿ. ಒಣಗಿದ ನಂತರ ಸ್ಕ್ರಬ್ ಮಾಡಿ, 5 ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ. ಇದು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರಿಂದು ಗೃಹ ಕಚೇರಿ ಕೃಷ್ಣಾದಲ್ಲಿ ಇಂಧನ ಇಲಾಖೆಯ (Energy Department) ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ ಸರ್ಕಾರದ ಮೇಲೆ ಹೆಚ್ಚಿನ ಹೊರೆಯಾಗದಂತೆ ಕೃಷಿ ಪಂಪ್ ಸೆಟ್ಗಳಿಗೆ ಪ್ರತಿದಿನ 7 ತಾಸು ವಿದ್ಯುತ್ ನೀಡಲು ನಿರ್ಧರಿಸಲಾಗಿತು. ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್ (K.J George), ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಮಳೆ ಅಭಾವದಿಂದ ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಕಳೆದ ಬಾರಿ ಪ್ರಗತಿ ಪರಿಶೀಲನೆಯ ನಂತರ ರಾಯಚೂರು, ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರಗಳ ಉತ್ಪಾದನೆ ಹೆಚ್ಚಾಗಿದೆ. ಉತ್ತರ ಪ್ರದೇಶ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಿಂದ ವಿದ್ಯುತ್ ಪಡೆಯಲಾಗುತ್ತಿದೆ. ಸೆಕ್ಷನ್-11 ಅಡಿ ಬೇರೆ ರಾಜ್ಯಗಳಿಗೆ ವಿದ್ಯುತ್ ನೀಡದಂತೆ ಆದೇಶ ಹೊರಡಿಸಿ, ವಿದ್ಯುತ್ ಪಡೆಯಲಾಗುತ್ತಿದೆ. ಆ ಮೂಲಕ ವಿದ್ಯುತ್ ವಿತರಣೆ ಸಹಜ ಸ್ಥಿತಿಗೆ ಬಂದಿದೆ. ನೋಡಲ್…
ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರು ಟೀಮ್ ಇಂಡಿಯಾದ ಸರ್ವಶ್ರೇಷ್ಠ ಬ್ಯಾಟರ್ ಎಂದು ಪಾಕಿಸ್ತಾನದ ಮಾಜಿ ವೇಗಿ ಜುನೈದ್ ಖಾನ್ ಬಣ್ಣಿಸಿದ್ದಾರೆ. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿಯ ಅವರ ಪೈಕಿ ಸರ್ವಶ್ರೇಷ್ಠ ಬ್ಯಾಟರ್ ಯಾರು ಎಂದು ಕೇಳಿದ ಪ್ರಶ್ನೆಗೆ ಜುನೈದ್ ಖಾನ್, ಹಿಟ್ ಮ್ಯಾನ್ ರೋಹಿತ್ ಶರ್ಮಾರನ್ನು ಆಯ್ಕೆ ಮಾಡಿದ್ದಾರೆ. ಪಾಕಿಸ್ತಾನದ ಪರ ಜುನೈದ್ ಖಾನ್ 22 ಟೆಸ್ಟ್, 76 ಏಕದಿನ ಹಾಗೂ 9 ಟಿ20-ಐ ಪಂದ್ಯಗಳನ್ನು ಆಡಿದ್ದಾರೆ. ರೋಹಿತ್ ಶರ್ಮಾ ಅವರು ಸಿಡಿಲಬ್ಬರದ ಬ್ಯಾಟಿಂಗ್ ಗೆ ಹೆಸರುವಾಸಿ ಆಗಿರುವುದರಿಂದಲೇ ಅವರನ್ನು ಹಿಟ್ ಮ್ಯಾನ್ ಎಂದು ಕರೆಯುತ್ತಾರೆ. 36ರ ಹರೆಯದ ರೋಹಿತ್ ಶರ್ಮಾ ಏಕದಿನ ಮಾದರಿಯಲ್ಲಿ ಶಾಹಿದ್ ಅಫ್ರಿದಿ ಹಾಗೂ ಸ್ವಘೋಷಿತ ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ ನಂತರ 300 ಸಿಕ್ಸರ್ ಬಾರಿಸಿದ ಬ್ಯಾಟರ್ ಆಗಿದ್ದಾರೆ. “ನನ್ನ ಪ್ರಕಾರ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರೇ ಟೀಮ್ ಇಂಡಿಯಾದ ಸರ್ವಶ್ರೇಷ್ಠ ಬ್ಯಾಟರ್. ಆತ ಬ್ಯಾಟಿಂಗ್ ನಡೆಸುವ ಪರಿ…
ವಿಂಟರ್ ಸೀಸನ್ ಫ್ಯಾಷನ್ (Winter Fashion) ಬಂತು, ರೆಡಿಯಾಗಿ ಎನ್ನುತ್ತಿದ್ದಾರೆ ಫ್ಯಾಷನಿಸ್ಟ್ಗಳು. ಹೌದು. ಈಗಾಗಲೇ ಚಳಿಗಾಲ ಆರಂಭವಾಗಿದೆ. ಇದಕ್ಕೆ ಪೂರಕ ಎಂಬಂತೆ ಲೆಕ್ಕವಿಲ್ಲದಷ್ಟು ಈ ಸೀಸನ್ನ ಲೇಯರ್ ಲುಕ್ ನೀಡುವ ಫ್ಯಾಷನ್ವೇರ್ಗಳು ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿವೆ. ಈ ವರ್ಷದ ಬಣ್ಣ ಮಾರ್ವಲೆಸ್ ಮ್ಯಾಗ್ನೆಟಾ ಇನ್ನೂ ಹಾಗೆಯೇ ಮುಂದುವರೆದಿದೆ. ಈ ಬಾರಿ ಮತ್ತೊಮ್ಮೆ ರಿಚ್ ಬಗ್ರ್ಯಾಂಡಿ, ವೈಬ್ರೆಂಟ್ ಯೆಲ್ಲೋ, ಕ್ಲಾಸಿಕ್ ರೆಡ್, ಲೈಲಾಕ್ ಗ್ರೇ, ನಾನಾ ಪಿಂಕ್ ಶೇಡ್ಸ್ನಂತಹ ಸಾಕಷ್ಟು ಗಾಢ ವರ್ಣಗಳು ಲಗ್ಗೆ ಇಟ್ಟಿವೆ. ಕ್ಲಾಸಿಕ್ ಲುಕ್ ನೀಡುವ ಕಲರ್ಸ್ಗೆ ಆದ್ಯತೆ ಹೆಚ್ಚಾಗಿದೆ. ಪ್ರಯೋಗಾತ್ಮಕ ವರ್ಣಗಳು ಪಾಪ್ಯು ಲರ್ ಆಗಲಿವೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು. ಫ್ಯಾಷನ್ನಲ್ಲಿ ಹೊಸತನ ಸ್ಕಟ್ರ್ಸ್ ಲೇಯರ್ ಓವರ್ ಪ್ಯಾಂಟ್ಸ್, ಗ್ರಾಫಿಕ್ ಸ್ಟ್ರಕ್ಚರ್ಡ್ ಶೋಲ್ಡರ್ಸ್ ಡಿಸೈನ್ಸ್, ನೆಕ್ ಕರ್ಚೀಫ್ ಡಿಸೈನ್, ಶೀರ್ ಲೇಸ್ ವರ್ಕ್ ಬಾಡಿಕಾನ್ ಡ್ರೆಸ್, ಲ್ಯಾಂಡ್ ಸ್ಕೇಪ್ ಔಟ್ಫಿಟ್ಸ್, ಶರ್ಬೆಟ್ ಪಾಸ್ಟೆಲ್ಸ್ ಡ್ರೆಸ್, ಡಬ್ಬಲ್ ಡೆನಿಮ್ಸ್, ಮಿನಿ ಪೊಲ್ಕಾ ಡಾಟ್ಸ್ ಡ್ರೆಸ್, ಪವರ್ ಶೋಲ್ಡರ್ಸ್ ವಿನ್ಯಾಸದ ಕೋಟ್ಸ್ ಜಾಕೆಟ್ಸ್…
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡ ಅಬ್ಬರಿಸಿದೆ. ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಭಾರತ ವಶಪಡಿಸಿಕೊಂಡಿದೆ. ರಾಯ್ಪುರದಲ್ಲಿ ಶುಕ್ರವಾರ ನಡೆದಿದ್ದ ನಾಲ್ಕನೇ ಟಿ20ಯಲ್ಲಿ ಕಾಂಗರೂಗಳ ವಿರುದ್ಧ ಟೀಮ್ ಇಂಡಿಯಾ 20 ರನ್ಗಳಿಂದ ಗೆದ್ದು ಸರಣಿ ಗೆದ್ದು ವಿಶ್ವದಾಖಲೆ ನಿರ್ಮಿಸಿದೆ. ಈ ಪಂದ್ಯದ ಗೆಲುವಿನೊಂದಿಗೆ ಭಾರತ, ಟಿ20ಐ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಭಾರತ ತಂಡ ಇದುವರೆಗೆ 213 ಪಂದ್ಯಗಳನ್ನು ಆಡಿದ್ದು, 136 ಪಂದ್ಯಗಳನ್ನು ಗೆದ್ದಿದೆ. ಇದುವರೆಗೂ ಈ ದಾಖಲೆ ಪಾಕಿಸ್ತಾನ ತಂಡದ ಹೆಸರಿನಲ್ಲಿತ್ತು. ಟಿ20 ಮಾದರಿಯಲ್ಲಿ ಪಾಕಿಸ್ತಾನ 226 ಪಂದ್ಯಗಳನ್ನು ಆಡಿದ್ದು, 135 ಪಂದ್ಯಗಳನ್ನು ಗೆದ್ದಿದೆ. ಆದರೆ, ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟಿ20 ಗೆದ್ದ ನಂತರ ಭಾರತ ಪಾಕಿಸ್ತಾನವನ್ನು ಹಿಂದಿಕ್ಕಿ ಈ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ. ಮತ್ತೊಂದೆಡೆ ಈ ಗೆಲುವಿನೊಂದಿಗೆ ಭಾರತ ತಂಡ ಟಿ20 ಸರಣಿಯನ್ನೂ ಗೆದ್ದುಕೊಂಡಿದೆ. 2019ರಲ್ಲಿ ಭಾರತ ತಂಡ ತವರಿನಲ್ಲಿ ಕೊನೆಯ…