ಬಿಗ್ ಬಾಸ್ ಮನೆಯ (Bigg Boss Kannada 10) ಆಟಕ್ಕೆ 50 ದಿನ ಕಳೆಯುತ್ತಿದ್ದಂತೆ ಅವಿನಾಶ್ ಶೆಟ್ಟಿ- ಪವಿ ಪೂವಪ್ಪ ಎಂಟ್ರಿಯಾಗಿದೆ. ಮೊದಲ ವಾರವೇ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಸುದೀಪ್ ಅವರಿಂದ ಪಾಠ ಹೇಳಿಸಿಕೊಂಡಿದ್ದಾರೆ. ಬಳೆ ವಿಚಾರ ಮಾತೆತ್ತಿದ ಪವಿ ಪೂವಪ್ಪಗೆ(Pavi Poovappa) ಸುದೀಪ್ ಕಡೆಯಿಂದ ಸ್ಪೆಷಲ್ ಕ್ಲಾಸ್ ಆಗಿದೆ. ಪವಿ ಪೂವಪ್ಪ- ಅವಿನಾಶ್ ಶೆಟ್ಟಿ (Avinash Shetty) ಅವರಿಗೆ ಹೊರಗಡೆಯ ಯಾವ ವಿಚಾರವನ್ನೂ ದೊಡ್ಮನೆಯಲ್ಲಿ ಚರ್ಚೆ ಮಾಡುವಂತಿಲ್ಲ ಎಂದು ಬಿಗ್ ಬಾಸ್ ಮೊದಲೇ ತಾಕೀತು ಮಾಡಿದ್ದರು. ಆದರೆ ಪವಿ ಅವರು ಬಾಯಿ ತಪ್ಪಿ ಟ್ರೋಲ್ ಪೇಜ್‌ಗಳಲ್ಲಿ ವಿನಯ್ ಗೌಡ ಬಳೆ ವಿಚಾರ ಚರ್ಚೆ ಆಗಿದ್ದನ್ನು ವಿನಯ್ ಮುಂದೆ ಹೇಳಿದ್ದರು. ರೂಲ್ಸ್ ಮರೆತು ಮನೆಯ ಹೊರಗಿನ ವಿಚಾರವನ್ನ ಪವಿ ರಿವೀಲ್ ಮಾಡಿದ್ದರು. ಈ ವಿಷಯ ತಿಳಿದ ಮೇಲೆ ವಿನಯ್, ನಾನು ಮಾಡಿದ ತಪ್ಪಿನಿಂದ ನನ್ನ ಹೆಂಡತಿ- ಮಗ ಅನುಭವಿಸುವ ಹಾಗಾಯ್ತು ಎಂದು ಬಾತ್‌ರೂಮ್‌ನಲ್ಲಿ ಕಣ್ಣೀರು ಹಾಕಿದರು. ಆನಂತರ ಏನೂ…
Author: AIN Author
ದಕ್ಷಿಣ ಫಿಲಿಪೈನ್ಸ್‌ನ ಮಿಂಡಾನಾವೊ ದ್ವೀಪದಲ್ಲಿ ಶನಿವಾರ 7.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ತಿಳಿಸಿದೆ. ಕಂಪನದ ನಂತರ ಯುಎಸ್ ಸುನಾಮಿ ಎಚ್ಚರಿಕೆ ವ್ಯವಸ್ಥೆಯು ಸುನಾಮಿ ಎಚ್ಚರಿಕೆಯನ್ನು ನೀಡಿದೆ. ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಪರಿಮಾಣ ಮತ್ತು ಸ್ಥಳವನ್ನು ಆಧರಿಸಿ ದಕ್ಷಿಣ ಫಿಲಿಪೈನ್ಸ್ ಮತ್ತು ಇಂಡೋನೇಷ್ಯಾ, ಪಲಾವ್ ಮತ್ತು ಮಲೇಷ್ಯಾದ ಕೆಲವು ಭಾಗಗಳಿಗೆ ಸುನಾಮಿ ಅಲೆಗಳನ್ನು ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಹೇಳಿದೆ. ಮುಂಜಾಗ್ರತಾ ಕ್ರಮವಾಗಿ ಕೆಲವು ಭಾಗಗಳಿಂದ ನಾಗರಿಕರನ್ನು ಸ್ಥಳಾಂತರಿಸಲಾಯಿತು. ಏತನ್ಮಧ್ಯೆ, ಜಪಾನಿನ ಬ್ರಾಡ್‌ಕಾಸ್ಟರ್ NHK ಒಂದು ಮೀಟರ್‌ನಷ್ಟು ಸುನಾಮಿ ಅಲೆಗಳು ಜಪಾನ್‌ನ ನೈಋತ್ಯ ಕರಾವಳಿಯನ್ನು ಭಾನುವಾರದಂದು 1:30 ಕ್ಕೆ ಅಪ್ಪಳಿಸುವ ನಿರೀಕ್ಷೆಯಿದೆ ಎಂದು ಹೇಳಿದರು. ಫಿಲಿಪ್ಪೀನ್ಸ್ ಸರ್ಕಾರಿ ಏಜೆನ್ಸಿಯು ಮಿಂಡನಾವೊದ ಪೂರ್ವ ತೀರದಲ್ಲಿರುವ ಸೂರಿಗಾವೊ ಡೆಲ್ ಸುರ್ ಮತ್ತು ದಾವೊ ಓರಿಯೆಂಟಲ್ ಪ್ರಾಂತ್ಯಗಳ ನಿವಾಸಿಗಳಿಗೆ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಲಹೆ ನೀಡಲಾಗಿದೆ.
ಬೆಂಗಳೂರು: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ ವೇಳೆ ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ನಗರದ ಜೆಪಿ ನಗರ ಡಾಲರ್ಸ್ ಕಾಲೋನಿಯಲ್ಲಿ ನಡೆದಿದೆ. ಕಟ್ಟಡದ ಮೂರನೇ ಮಹಡಿಯಲ್ಲಿ ವುಡ್ ವರ್ಕ್ ನಡೆಯುತ್ತಿದ್ದಾಗ ಬೆಂಕಿ ಅವಘಡ ಕಾಣಿಸಿಕೊಂಡಿದ್ದು ಘಟನೆಯಲ್ಲಿ ಮೂರು ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಬೆಂಕಿಗಾಹುತಿ. ತೆಲುಗು ಚಿತ್ರನಟಿಯೊಬ್ಬರಿಗೆ ಸೇರಿರೋ ಕಟ್ಟಡ ಎನ್ನಲಾಗಿದ್ದು ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರೋ ಶಂಕೆ ವ್ಯಕ್ತಪಡಿಸಲಾಗಿದೆ. ಆರು ಅಗ್ನಿ ಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು ಪೊಲೀಸರು ಸ್ಥಳಕ್ಕೆ ಧಾಚಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರು: ಡಯಾಲಿಸಿಸ್ ಸಮಸ್ಯೆ ನಮ್ಮ ಸರ್ಕಾರದಿಂದ ಆಗಿದ್ದಲ್ಲ, ಶಾಶ್ವತ ಪರಿಹಾರಕ್ಕೆ ನಾವು ಕೆಲಸ ಮಾಡ್ತಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಸದ್ಯಕ್ಕೆ ಡಯಾಲಿಸಿಸ್ ಸೇವೆ ಆಸ್ಪತ್ರೆ ಸಿಬ್ಬಂದಿಗಳಿಂದ ನಿರ್ವಹಿಸಲು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ನಾವು ಸಿಬ್ಬಂದಿಗಳ ಪರವಾಗಿಯೇ ಇದ್ದೇವೆ. ಸರ್ಕಾರ ಮಧ್ಯಪ್ರವೇಶಿಸಿ ಏಜನ್ಸಿಯವರಿಗೆ ಕೆಲವು ಬಾಕಿ ವೇತನ ಕೊಡಿಸಲಾಗಿದೆ ಎಂದರು. https://ainlivenews.com/congress-president-has-called-an-important-meeting-on-december-6/ ಡಯಾಲಿಸಿಸ್ ಆರೋಗ್ಯ ಸೇವೆಯಲ್ಲಿ ಸಮಸ್ಯೆಯಾಗಲು ಮೂಲ ಕಾರಣ ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಕ ಗೊಂಡಿರುವ ಎರಡು ಏಜನ್ಸಿಗಳು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಂಗಳೂರಿನಲ್ಲಿ ಇಂದು ಈ ಕುರಿತು ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ನಾನು ಆರೋಗ್ಯ ಸಚಿವನಾದ ಬಳಿಕ ಡಯಾಲಿಸಿಸ್ ಕೇಂದ್ರಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಿ ಕೆಲಸ ಮಾಡ್ತಿದ್ದೇನೆ ಎಂದು ತಿಳಿಸಿದರು.
ಬೆಂಗಳೂರು : ಮಾನವನ ದೇಹಕ್ಕೆ ಅಮೃತವಾಗಿರುವ ಹಾಲು ಕೂಡ ವಿಷವಾಗುತ್ತಿದೆ. ರಾಸಾಯನಿಕ ಮಿಶ್ರಿತ ಹಾಲು ನಾನಾ ರೋಗಗಳಿಗೆ ಕಾರಣವಾಗುತ್ತಿದ್ದು, ಹಾಲು ಕೂಡ ಪರಿಶುದ್ದತೆ ಕಳೆದುಕೊಳ್ಳುತ್ತಿದೆ. ಇತ್ತೀಚೆಗೆ ಮಾರುಕಟ್ಟೆಗಳು ಹೊಸ ಹೊಸ ಬ್ರ್ಯಾಂಡ್ ಗಳನ್ನು ಪರಿಚಯಿಸುತ್ತಿದೆ. ಉಡುಪಿನಿಂದಿಡಿದು ತಿನ್ನುವ ಆಹಾರ ಪದಾರ್ಥಗಳು ಸಹ ಬ್ರ್ಯಾಂಡ್ ಆಗುತ್ತಿದೆ. ಈ ಮಧ್ಯೆ ಹಾಲು ಕೂಡ ಬ್ರ್ಯಾಂಡೆಡ್ ವಸ್ತುಗಳ ಪಟ್ಟಿ ಸೇರಿಕೊಳ್ಳುತ್ತಿದೆ. ನಿತ್ಯ ಮಾರ್ಕೆಟ್ ನಲ್ಲಿ ಒಂದಿಲ್ಲೊಂದು ಹೊಸ ಬ್ರಾಂಡ್ ನ ಹಾಲು ಲಾಂಚ್ ಆಗುತ್ತಿದೆ. ನಂದಿನಿ ಹಾಲಿಗೆ ಸೆಡ್ಡು ಹೊಡೆಯಲು ವಿವಿಧ ಖಾಸಗಿ ಬ್ರಾಂಡ್ ನ ಹಾಲುಗಳು ಪೈಪೋಟಿ ಮೇಲೆ ಮಾರ್ಕೆಟ್ ಗೆ ಲಗ್ಗೆ ಇಟ್ಟಿವೆ. ಆದರೆ, ‘ಬೆಳ್ಳಗಿರುವುದೆಲ್ಲ ಹಾಲಲ್ಲ’ ಎಂಬಂತೆ ಮಾರ್ಕೆಟ್ನಲ್ಲಿ ಸಿಗುವ ಎಲ್ಲಾ ಹಾಲು ಪರಿಶುದ್ಧ ಹಾಲು ಅಲ್ಲಾ ಎಂಬ ವರದಿ ಬೆಚ್ಚಿ ಬೀಳಿಸಿದೆ. ಹಾಲಿನ ಗುಣಮಟ್ಟ ಶೇ. 37.84 ರಷ್ಟು ಕಳಪೆ ದೇಹಕ್ಕೆ ಶಕ್ತಿ ತುಂಬಾ ಬೇಕಾಗಿದ್ದ ಹಾಲು, ಪ್ಯಾಕೇಟ್ ನಲ್ಲಿ ತುಂಬುವ ಮುನ್ನವೇ ತನ್ನ ಪೌಷ್ಟಿಕಾಂಶವನ್ನು ಕಳೆದುಕೊಳ್ಳುತ್ತಿದೆ. ಹಾಲಿನ ಗುಣಮಟ್ಟದ ಪರೀಕ್ಷೆ ನಡೆಸಿದಾಗ ಅಚ್ಚರಿಯ ಸಂಗತಿ…
ಬೆಂಗಳೂರು : ಶ್ವಾನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ತಮ್ಮ ಶ್ವಾನಗಳಿಗೆ ಅಂತಾನೆ ಲಕ್ಷ ಲಕ್ಷ ಖರ್ಚು ಮಾಡುವುದಕ್ಕೂ ಸಿದ್ದ ಇರ್ತಾರೆ. ಇಂಥ ಶ್ವಾನ ಪ್ರಿಯರಿಗೆ ಸಿಲಿಕಾನ್ ಸಿಟಿಯಲ್ಲಿ ಡಾಗ್ ಷೋ ನಡೆಸಲಾಯಿತು. ಒಂದೆಡೆ ನಾಯಿಗಳ ಜೊತೆ ಮಾಲೀಕರ ವಾಕಿಂಗ್. ಮತ್ತೊಂದೆಡೆ ಮುದ್ದು ಮುದ್ದು ಶ್ವಾನಗಳ ಜೊತೆ ಫೋಟೋಗೆ ಪೋಸ್ ನೀಡುತ್ತಿದ್ದ ಶ್ವಾನ ಪ್ರಿಯರು. ಹೆಬ್ಬಾಳದ ಪಶುವೈದ್ಯಕೀಯ ಕಾಲೇಜ್ ಗ್ರೌಂಡ್ನಲ್ಲಿ ಕಲರ್ ಫುಲ್ ಡಾಗ್ ಷೋ ಮಸ್ತಿ ಶುರುವಾಗಿದೆ. ಸಿಲಿಕಾನ್ ಸಿಟಿ ಕೆನಲ್ ಕ್ಲಬ್ ಹಾಗೂ ಬೆಂಗಳೂರು ಕನೈನ್ ಕ್ಲಬ್ ಆಯೋಜಿಸಿದ ಡಾಗ್ ಷೋ ನಲ್ಲಿ ಸುಮಾರು 50 ತಳಿಯ 400 ರಿಂದ 500 ನಾಯಿಗಳ ಚಾಂಪಿಯನ್ ಶಿಫ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಗೆ ಬೆಂಗಳೂರಿಗರು ತಮ್ಮ ವಿವಿಧ ತಳಿಯ ಶ್ವಾನಗಳ ಜೊತೆ ಬಂದಿದ್ದರು. ಷೋಗೆ ಹಸ್ಕಿ, ಬೆಳ್ಳಿಯನ್ ಕೆಪರ್ಡ್ ನಾಯಿ, ಜರ್ಮನ್ ಶೆಪರ್ಡ್, ಡಾಬರ್‌ಮನ್, ಲ್ಯಾಬ್ರಡಾರ್, ರಿಟ್ರೈವರ್, ಸೈರಿಯಲ್, ಚುವಾವೋ, ರೊಡಿಷನ್ ರಿಜ್ ಬ್ಯಾಕ್, ಗೋಲ್ಡನ್ ಶಿಳ್ಳೆವರ್, ಬಾಕ್ಸರ್,…
ಬೆಳಗಾವಿ: ಇಂದಿನಿಂದ ವಿಧಾನಮಂಡಲ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗಲಿದೆ. ಈಗಾಗಲೇ ಚಳಿಗಾಲದ ಅಧಿವೇಶನ ರಂಗೇರಲಿದ್ದು, ಹೊರಗಡೆ ಚಳಿಯಿದ್ದರೆ, ಸದನದ ಒಳಗೆ ಬಿಸಿ ಕಾವು ಹೆಚ್ಚಾಗಲಿದೆ. ಚಳಿಗಾಲದ ಕದನಕ್ಕೆ ಆಡಳಿತ, ವಿಪಕ್ಷಗಳು ಸಜ್ಜಾಗಿವೆ. ಪಂಚರಾಜ್ಯ ಚುನಾವಣೆಯಲ್ಲಿ ಮೂರು ಕಡೆ ಗೆದ್ದು, ಭರ್ಜರಿ ಫಾರ್ಮ್‌ನೊಂದಿಗೆ ಎಂಟ್ರಿ ಕೊಡಲು ಬಿಜೆಪಿ ನಾಯಕರು ಸಜ್ಜಾಗಿದ್ರೆ, ಮೈತ್ರಿ ಧರ್ಮಯುದ್ಧ ಸಾರಲು ಹೆಚ್ ಡಿಕೆ ಅಣಿಯಾಗಿದ್ದಾರೆ. ಸದನದಲ್ಲಿ ಡಿಕೆಶಿಯನ್ನು ಟಾರ್ಗೆಟ್ ಮಾಡಲು ಬಿಜೆಪಿ, ಜೆಡಿಎಸ್ ದೋಸ್ತಿಗಳು ಪ್ಲ್ಯಾನ್ ಮಾಡಿದ್ದಾರೆ. ಡಿಕೆಶಿ ವಿರುದ್ಧ ಸಿಬಿಐ ತನಿಖೆಯನ್ನು ಹಿಂಪಡೆದುಕೊಂಡಿರೋದನ್ನೇ ಪ್ರಬಲ ಅಸ್ತ್ರವಾಗಿ ಪ್ರಯೋಗಿಸಲು ಹೊರಟಿದ್ದಾರೆ. ಈ ಬಗ್ಗೆ ಮೊನ್ನೆ ಹೆಚ್‌ಡಿಕೆ ಹಾಗೂ ಆರ್.ಅಶೋಕ್ ಕೂಡ ಗಂಭೀರ ಚರ್ಚೆ ನಡೆಸಿದ್ದು, ಸದನದಲ್ಲಿ ಒಕ್ಕಲಿಗ ನಾಯಕರ ನಡುವೆ ಮಹಾಯುದ್ಧವೇ ನಡೆಯುವ ಸಾಧ್ಯತೆ ಇದೆ.
ಐಜ್ವಾಲ್: ಪಂಚರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯ ಫಲಿತಾಂಶ ಹೊರಬಿದ್ದಿದ್ದು,ಇಂದು ಮಿಜೋರಾಂ ಚುನಾವಣೆಯ ಮತ ಏಣಿಕೆ ರಾಜ್ಯದಾದ್ಯಂತ 13 ಕೇಂದ್ರಗಳಲ್ಲಿ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ.ಮಿಜೋರಾಂನ ವಿಧಾನಸಭೆಯ 40 ಸ್ಥಾನಗಳಿಗೆ ನವೆಂಬರ್ 8 ರಂದು ನಡೆದಿದ್ದ ಚುನಾವಣೆಯಲ್ಲಿ ಶೇಕಡ 80.43 ರಷ್ಟು ಮತದಾನವಾಗಿದೆ. ಶೇಕಡ 79.61ರಷ್ಟು ಪುರುಷರು ಮತ ಚಲಾಯಿಸಿದ್ದರೆ, ಶೇಕಡ 81.21 ರಷ್ಟು ಮಹಿಳೆಯರು ಮತ ಚಲಾಯಿಸಿದ್ದಾರೆ. 2018ರ ಚುನಾವಣೆಯಲ್ಲಿ ಶೇಕಡ 81.61ರಷ್ಟು ಮತದಾನವಾಗಿತ್ತು. ಡಿ.3ರಂದು ಮತ ಎಣಿಕೆ ನಡೆಯಲಿದೆ. 8.57 ಲಕ್ಷ ಮತದಾರರನ್ನು ಹೊಂದಿರುವ ರಾಜ್ಯದಲ್ಲಿ ಎಂಎನ್‌ಎಫ್, ಝಡ್‌ಪಿಎಂ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದೆ. ಮಿಜೋರಾಮ್‌ನಲ್ಲಿ ಆಡಳಿತಾರೂಢ ಮಿಜೋ ನ್ಯಾಷನಲ್ ಫ್ರಂಟ್ (MNF), ಪ್ರಮುಖ ವಿರೋಧ ಪಕ್ಷ ಝೋರಾಂ ಪೀಪಲ್ಸ್ ಮೂವ್ಮೆಂಟ್ (ZPM) ಮತ್ತು ಕಾಂಗ್ರೆಸ್ (Congress Party) ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಮತದಾರರು ಆಡಳಿತಾರೂಢ ಎಂಎನ್‌ಎಫ್ ಪರವಾಗಿ ತಮ್ಮ ಒಲವು ತೋರಿಸಿದ್ದಾರೆ ಎಂದು ಎಕ್ಸಿಟ್ ಪೋಲ್‌ಗಳು ಹೇಳುತ್ತಿವೆ. ಇಷ್ಟಾಗಿಯೂ ಕೆಲವು ಸಮೀಕ್ಷೆಗಳು ಅತಂತ್ರ ವಿಧಾನಸಭೆಯನ್ನು…
ಮಂಡ್ಯ: ಬಿಜೆಪಿ-ಜೆಡಿಎಸ್ ಪಕ್ಷಗಳ ಮೈತ್ರಿ ಹಿನ್ನಲೆಯಲ್ಲಿ ಪಕ್ಷಾಂತರ ಆಲೋಚನೆಯಿಂದ ಹಿಂದೆ ಸರಿದ್ರಾ ಮಂಡ್ಯದ ಮಾಜಿ ಶಾಸಕರು!?. ಮೈತ್ರಿ ಬೆನ್ನಲ್ಲೆ ಕೃಷಿ ಸಚಿವರಿಗೆ ಕೈ ಕೊಟ್ರಾ ಅನ್ಯ ಪಕ್ಷದ ನಾಯಕರು.? ಮುಂದಿನ ದಿನದಲ್ಲಿ ಜಿಲ್ಲೆಯ ಜೆಡಿಎಸ್ ನ ಮಾಜಿ ಸಚಿವರು, ಮಾಜಿ ಶಾಸಕರು ಕಾಂಗ್ರೆಸ್ ಸೇರ್ತಾರೆ ಶೀಘ್ರ ಅದರ ಬಗ್ಗೆ ಮಾಹಿತಿ ಕೊಡ್ತೇನೆ ಎಂದಿದ್ದ ಸಚಿವ ಚಲುವರಾಯಸ್ವಾಮಿ. ಸಚಿವರ ಹೇಳಿಕೆಯಿಂದ ಚರ್ಚೆಗೆ ಕಾರಣವಾಗಿದ್ದ ಮಾಜಿ ಸಚಿವ ಪುಟ್ಟರಾಜು ಪಕ್ಷ ಹಾಗೂ ನಾಯಕರಿಂದ ಅಂತರ ಕಾಯ್ದುಕೊಂಡಿದ್ದ ಪುಟ್ಟರಾಜು ಅದೇ ಹಿನ್ನಲೆ ಶುರುವಾಗಿತ್ತು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರೋದು ಫಿಕ್ಸ್ ಅನ್ನೋ ಮಾತು. ಆದ್ರೆ ಬಿಜೆಪಿ-ಜೆಡಿಎಸ್ ಮೈತ್ರಿ ಖಚಿತವಾದ ಬೆನ್ನಲ್ಲೆ ಜೆಡಿಎಸ್ ನಲ್ಲಿಯೇ ಉಳಿಯಲು ಪುಟ್ಟರಾಜು ನಿರ್ಧಾರ ಅಲ್ಲದೇ ಲೋಕಸಭೆಯ ಮೈತ್ರಿ ಅಭ್ಯರ್ಥಿಯಾಗಲು ಪುಟ್ಟರಾಜು ತಯಾರಿ ಇದರ ನಡುವೆ ಬಹಳ ದಿನಗಳ ನಂತರ ಚಲುವರಾಯಸ್ವಾಮಿ, ಪುಟ್ಟರಾಜು ಮುಖಾಮುಖಿ ಪತ್ರಕರ್ತರ ಸಂಘದ ಕಾರ್ಯಕ್ರಮದಲ್ಲಿ ಹಾಲಿ-ಮಾಜಿ ಸಚಿವರ ಸುಮಾಗಮ ಅದೇ ವೇದಿಕೆಯಲ್ಲಿ ಕಾಂಗ್ರೆಸ್ ಸೇರಲ್ಲ ಎಂದು ಸಂದೇಶ ರವಾನಿಸಿದ…
ಚಿತ್ರದುರ್ಗ: ಮನೆ ಮುಂದೆ ಆಟವಾಡುತ್ತಿದ್ದ 6 ವರ್ಷದ ಬಾಲಕನ (Boy) ಮೇಲೆ ನಾಯಿಯೊಂದು (Dog) ಎರಗಿ ಕೈಕಾಲುಗಳಿಗೆ ಸೇರಿ 11 ಕಡೆ ಕಚ್ಚಿ ಗಾಯಗೊಳಿಸಿರುವ ಘಟನೆ ಚಿತ್ರದುರ್ಗದ (Chitradurga) ಜೆಸಿಆರ್ ಬಡಾವಣೆಯಲ್ಲಿ ನಡೆದಿದೆ. ಜೆಸಿಆರ್ ಬಡಾವಣೆಯ 6ನೇ ಅಡ್ಡರಸ್ತೆಯ ಜ್ಯೋತಿ-ನಾಗರಾಜ್ ದಂಪತಿಯ ಪುತ್ರ ಸಾಯಿ ಚರಣ್ (6) ನಿನ್ನೆ ಸಂಜೆ ವೇಳೆ ಮನೆ ಮುಂದೆ ತನ್ನ ಅಕ್ಕನೊಂದಿಗೆ ಆಟವಾಡುತ್ತಿದ್ದ. ಆಗ ಏಕಾಏಕಿ ಬಾಲಕನ ಮೇಲೆ ದಾಳಿ ನಡೆಸಿರೋ 2 ನಾಯಿಗಳು, 11 ಕಡೆ ಕಚ್ಚಿ ಗಾಯಗೊಳಿಸಿವೆ. ಈ ವೇಳೆ ಅಲ್ಲಿನ ಸ್ಥಳೀಯರು ನಾಯಿಗಳಿಂದ ಬಾಲಕನ ರಕ್ಷಣೆಗೆ ಹರಸಾಹಸಪಟ್ಟಿದ್ದಾರೆ. ಒಂದು ನಾಯಿ ಜನರ ಬೆದರಿಕೆಗೆ ಹೆದರಿ ಓಡಿ ಹೋದರು ಸಹ ಮತ್ತೊಂದು ನಾಯಿ, ಜನರ ಆವಾಜ್‌ಗೆ ಡೋಂಟ್ ಕೇರ್ ಎಂದಿದೆ. ಪದೇ ಪದೇ ಬಾಲಕನ ಮೇಲೆ ದಾಳಿ ನಡೆಸಿದೆ. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾನೆ. ಸದ್ಯ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾನೆ