Author: AIN Author

ಮಂಡ್ಯ :- ಕೆ.ಎಸ್.ಆರ್.ಟಿ.ಸಿ ಬಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 30 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗೊಂಡಿರುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ಸೋಮವಾರ ಬೆಳಿಗ್ಗೆ ಜರುಗಿದೆ. https://ainlivenews.com/kiccha-sudeep-who-said-goodbye-to-bigg-boss-whats-in-the-emotional-post/ ಮದ್ದೂರು ತಾಲೂಕಿನ ರುದ್ರಾಕ್ಷಿಪುರ ಗ್ರಾಮದ ಬೆಂಗಳೂರು – ಮೈಸೂರು ರಾಷ್ಟ್ರಿಯ ಹೆದ್ದಾರಿಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದ್ದು, ಪ್ರಯಾಣಿಕರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಬೆಂಗಳೂರಿನಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ KA- 10-F0520 ಬಸ್ ರುದ್ರಾಕ್ಷಿಪುರ ಗ್ರಾಮದ ಬಳಿ 8.45 ರ ವೇಳೆ ತೆರಳುತ್ತಿದ್ದಾಗ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ತಕ್ಷಣವೇ ಗಾಯಾಳುಗಳನ್ನು ಸ್ಥಳೀಯರು ಹಾಗೂ ವಾಹನ ಸವಾರರು ಮದ್ದೂರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ವರದಿ : ಗಿರೀಶ್ ರಾಜ್ ಮಂಡ್ಯ

Read More

ಮುಂದಿನ ಭಾನುವಾರ ಬಿಗ್‌ಬಾಸ್‌ 11 ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಸುದೀಪ್‌ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿದ್ದಾರೆ. https://ainlivenews.com/attention-metro-passengers-ticket-price-hike-fixed-from-next-week/ ಕಳೆದ 11 ಸೀಸನ್‌ಗಳಿಂದ ನಾನು ಬಿಗ್‌ಬಾಸ್‌ ಅನ್ನು ತುಂಬಾ ಇಷ್ಟಪಟ್ಟಿದ್ದೇನೆ. ನೀವು ತೋರಿಸಿದ ಪ್ರೀತಿಗೆ ಧನ್ಯವಾದಗಳು. ಮುಂಬರುವ ಫೈನಲ್ ನನ್ನ ಕೊನೆಯ ನಿರೂಪಣೆ. ನಿಮ್ಮನ್ನು ಮನರಂಜಿಸಲು ನಾನು ಪ್ರಯತ್ನಿಸುತ್ತೇನೆ. ಬಿಗ್ ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು. ಇದನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದೇನೆ ಎಂಬ ಸಂತೋಷ ನನಗಿದೆ. ಈ ಅವಕಾಶ ಕೊಟ್ಟ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ ಮತ್ತು ಗೌರವವಿದೆ ಎಂದು ಕಿಚ್ಚ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಶೋ ನಡೆಯುವ ಮೊದಲು ದೊಡ್ಮನೆ ಆಟ ಸೀಸನ್ 11 ನಡೆಸಿಕೊಡುವುದಿಲ್ಲ ಎಂದು ನೇರವಾಗಿ ತಿಳಿಸಿದ್ದರು. ಆದರೆ ವಾಹಿನಿ ಮತ್ತು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಶೋ ನಡೆಸಲು ಒಪ್ಪಿಗೆ ನೀಡಿದ್ದರು.

Read More

ಬೆಂಗಳೂರು:- ಮೆಟ್ರೋ ಟಿಕೆಟ್ ದರ ಏರಿಕೆ ಮುಂದಿನ ವಾರದಿಂದ ಬಹುತೇಕ ಖಚಿತ ಎನ್ನಲಾಗಿದೆ. https://ainlivenews.com/bigg-boss-contestant-rajat-got-a-big-shock-ex-girlfriends-photo-went-viral-the-woman-went-to-the-police-station/ ಮೆಟ್ರೋ ಟಿಕೆಟ್ ದರವನ್ನು ಶೇ 43ರಷ್ಟು ಹೆಚ್ಚಿಸಲು ಚಿಂತನೆ ನಡೆಸಿರುವುದಾಗಿ ಬಿಎಂಆರ್‌ಸಿಎಲ್‌ ಈಗಾಗಲೇ ಪ್ರಕಟಿಸಿದ್ದು, ಪ್ರಯಾಣಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆದರೆ, ದರ ಹೆಚ್ಚಳ ಸಂಬಂಧ ಈವರೆಗೆ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಟಿಕೆಟ್ ದರ ಹೆಚ್ಚಳದ ಸಂಬಂದ ಬಿಎಂಆರ್‌ಸಿಎಲ್‌ ಶುಕ್ರವಾರ ಸಭೆ ನಡೆಸಿತ್ತು. ನಂತರ, ದರ ಹೆಚ್ಚಳಕ್ಕೆ ತೀರ್ಮಾನಿಸಿರುವುದಾಗಿ ಶನಿವಾರ ಹೇಳಿತ್ತು. ಆದರೆ, ಅಧಿಕೃತ ಆದೇಶ ಹೊರಡಿಸಿಲ್ಲ. ಮೆಟ್ರೋ ಟಿಕೆಟ್ ದರ ಏರಿಕೆ ಸಂಬಂಧ ಈವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಮುಂದಿನ ವಾರದಲ್ಲಿ ನಿರ್ಧಾರ ಪ್ರಕಟವಾಗಬಹುದು ಮತ್ತು ತಕ್ಷಣದಿಂದಲೇ ಜಾರಿಗೆ ಬರಬಹುದು. ಶೇ 40 ರಿಂದ 43 ರಷ್ಟು ದರ ಹೆಚ್ಚಳಕ್ಕೆ ಜನರಿಂದ ತೀವ್ರ ವಿರೋಧ ವ್ಯಕ್ತ ವಾಗಿದ್ದರಿಂದ ಹಚ್ಚಳದ ಪ್ರಮಾಣವನ್ನು ಪರಿಷ್ಕರಿಸಲಾಗುವುದು ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

Read More

ಬೆಂಗಳೂರು:- ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದ್ದು, ಕಪ್ ಯಾರು ಹಿಡಿಯಲಿದ್ದಾರೆ ಎಂಬ ಕುತೂಹಲ ಮೂಡಿದೆ. ಅಲ್ಲದೇ ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಇಬ್ಬರು ಸ್ಪರ್ಧಿಗಳು ಫಿನಾಲೆ ಹಂತ ತಲುಪಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ಒಂದು ರೀತಿ ಇದು ದಾಖಲೆ ಆಗಿದೆ. https://ainlivenews.com/it-went-on-without-a-sound-neeraj-chopra-marriage/ ಈ ಮಧ್ಯೆಯಲ್ಲೇ ಬಿಗ್ ಬಾಸ್ ಸೀಸನ್ 11 ರಲ್ಲಿ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿ ಕೊಟ್ಟಿರುವ ರಜತ್ ಅವರು ಉಳಿದ ಸ್ಪರ್ಧಿಗಳಿಗೆ ಟಫ್ ಕಂಟಸ್ಟಂಟ್ ಆಗಿದ್ದಾರೆ. ಅಲ್ಲದೇ ತಮ್ಮ ಅಮೋಘ ಆಟದಿಂದಲೇ ವೀಕ್ಷಕರ ಮನ ಗೆದ್ದಿದ್ದಾರೆ. ಮತ್ತೊಂದೆಡೆ ಬಿಗ್‌ಬಾಸ್ ಸ್ಪರ್ಧಿ ರಜತ್ ಕುಟುಂಬಕ್ಕೆ ಟ್ರೋಲ್ ಪೇಜ್‌ಗಳ ಕಾಟ ಹೆಚ್ಚಾಗಿದ್ದು ರಜತ್ ಮಾಜಿ ಗೆಳತಿ ಜೊತೆಗಿನ ಫೋಟೋ ವೈರಲ್ ಆಗಿದೆ. ಟ್ರೋಲ್ ಪೇಜ್‌ಗಳು ಇಬ್ಬರು ಜೊತೆಗಿರುವ ಫೋಟೋವನ್ನು ಅಪ್ಲೋಡ್ ಮಾಡಿವೆ. ಬಳಿಕ ಫೋಟೋ ಡಿಲೀಟ್ ಮಾಡಲು ರಜತ್ ಪತ್ನಿ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಅಪರಿಚಿತರು ನೀಡಿದ…

Read More

ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ, ಹಿಮಾನಿ ಮೋರ್ ಅವರನ್ನು ವಿವಾಹವಾಗಿದ್ದಾರೆ. ಮದುವೆಯ ಫೋಟೋಗಳನ್ನು ಸೋಷಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿರುವ ಚೋಪ್ರಾ, ʻನನ್ನ ಕುಟುಂಬದೊಂದಿಗೆ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಿದೆ. ಈ ಕ್ಷಣದಲ್ಲಿ ಪ್ರತಿಯೊಬ್ಬರ ಆಶೀರ್ವಾದಕ್ಕೂ ಕೃತಜ್ಞನಾಗಿದ್ದೇನೆʼ ಅಂತ ಬರೆದುಕೊಂಡಿದ್ದಾರೆ. https://ainlivenews.com/i-dont-want-your-company-sudeep-directly-told-bigg-boss-contestants/ ಸದ್ಯ ನೀರಜ್ ಚೋಪ್ರಾ ಹಂಚಿಕೊಂಡಿರುವ ಫೋಟೋದಲ್ಲಿ ಎರಡೂ ಕುಟುಂಬಗಳ ಪ್ರಮುಖರು ಕಾಣಿಸಿಕೊಂಡಿದ್ದಾರೆ. ರಹಸ್ಯ ಸ್ಥಳದಲ್ಲಿ ಖಾಸಗಿಯಾಗಿ ಮದುವೆ ಆಗಿದ್ದಾರೆ ಈ ಮಧ್ಯೆ ಮದುವೆ 2 ದಿನಗಳ ಹಿಂದೆಯೇ ನಡೆದಿದೆ. ನವ ದಂಪತಿಗಳು ಹನಿಮೂನ್‌ಗೆ ತೆರಳಿದ್ದಾರೆ. ಎಲ್ಲಿಗೆ ಹೋಗಿದ್ದಾರೆ ಎಂಬುದು ನನಗೂ ತಿಳಿದಿಲ್ಲ ಎಂದು ನೀರಜ್ ಚೋಪ್ರಾ ಚಿಕ್ಕಪ್ಪ ಭೀಮ್ ಪ್ರತಿಕ್ರಿಯಿಸಿರುವುದು ವರದಿಯಾಗಿದೆ. ನೀರಜ್ ಚೋಪ್ರಾ ಪತ್ನಿ ಹಿಮಾನಿ ಮೋರ್ ಸೋನಿಪತ್ ಮೂಲದವರಾಗಿದ್ದು ಟೆನ್ನಿಸ್‌ ಆಟಗಾರ್ತಿ ಆಗಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಫ್ರಾಂಕ್ಲಿನ್ ಪಿಯರ್ಸ್ ವಿಶ್ವವಿದ್ಯಾಲಯದಲ್ಲಿ ಟೆನ್ನಿಸ್‌ನಲ್ಲಿ ಅರೆಕಾಲಿಕ ಸಹಾಯಕ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ.

Read More

ನಿಮ್ಮ ಸಹವಾಸ ಸಾಕಾಗಿದೆ ಎಂದು ಹೇಳುವ ಮೂಲಕ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ನೇರವಾಗಿ ಹೇಳಿದ್ದಾರೆ. https://ainlivenews.com/southern-hinterland-of-karnataka-chance-of-rain-in-many-places-today/ ಭಾನುವಾರದ ಎಪಿಸೋಡ್​ನಲ್ಲಿ ಸುದೀಪ್ ಫನ್ ಮೂಡ್​ನಲ್ಲಿ ಇರುತ್ತಾರೆ. ಏನೇ ಹೇಳಿದರೂ ಅದನ್ನು ಫನ್ ಆಗಿ ತೆಗೆದುಕೊಳ್ಳುತ್ತಾರೆ. ಅದೇ ರೀತಿ ಯಾರು ಹೊರ ಹೋಗುತ್ತಾರೆ ಎಂದು ಕೇಳುತ್ತಾ ಬರಲಾಯಿತು. ಆಗ ಎಲ್ಲರೂ ಫನ್ ಆಗಿ ಉತ್ತರ ಕೊಟ್ಟರು. ರಜತ್ ಅವರು ಸುದೀಪ್​ನ ಹೊಗಳಿದರು. ಇದಕ್ಕೆ ಸುದೀಪ್ ಅವರು ನೇರ ಮಾತುಗಳಲ್ಲಿ ಕೌಂಟರ್ ಕೊಟ್ಟಿದ್ದಾರೆ. ಯಾವ ಸೀಸನ್​ನಲ್ಲೂ ಇಲ್ಲದಿರೋ ಕಳೆ ನಿಮಗೆ ಈ ಸೀಸನ್​ನಲ್ಲಿ ಬಂದಿದೆ’ ಎಂದು ರಜತ್ ಅವರು ಸುದೀಪ್ ಬಳಿ ಹೇಳಿದರು. ಇದಕ್ಕೆ ಉತ್ತರಿಸಿದ ಸುದೀಪ್ ಅವರು, ‘ಯಾವ ಸೀಸನ್​ನಲ್ಲೂ ಇಲ್ಲದಿರೋ ಕಳೆ ಈಗ ಯಾಕೆ ಬಂತು ಎಂದರೆ, ಈ ಸೀಸನ್ ಇನ್ನೊಂದು ವಾರ ಇದೆಯಲ್ಲ. ಅದಕ್ಕೆ ಕಳೆ ಬಂದಿದೆ. ನಿಮ್ಮ ಸಹವಾಸ ಸಾಕಾಗಿದೆ’ ಎಂದು ಸುದೀಪ್ ಹೇಳಿದ್ದಾರೆ. ಈಗಾಗಲೇ ಸುದೀಪ್ ಅವರು ಬಿಗ್ ಬಾಸ್ ತೊರೆಯುವ ನಿರ್ಧಾರ ಮಾಡಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ…

Read More

ಬೆಂಗಳೂರು:- ಕರ್ನಾಟಕದ ದಕ್ಷಿಣ ಒಳನಾಡಿನ ಬಹುತೇಕ ಕಡೆ ಇಂದು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. https://ainlivenews.com/caste-census-fake-fir-filed-against-opposition-leader-rahul-gandhi/ ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಇಂದು ಮಳೆಯಾಗಲಿದೆ. ವಿಜಯನಗರ, ಶಿವಮೊಗ್ಗ, ಬಳ್ಳಾರಿ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಉಡುಪಿಯಲ್ಲಿ ಒಣಹವೆ ಮುಂದುವರೆಯಲಿದೆ. ರಾಜ್ಯಾದ್ಯಂತ ಮೋಡಕವಿದ ವಾತಾವರಣವಿದ್ದ ಕಾರಣ ಚಳಿಯ ಪ್ರಮಾಣ ಕಡಿಮೆಯಾಗಿದೆ. ಬೀದರ್​ನಲ್ಲಿ 12.0 ಡಿಗ್ರಿ ಸೆಲ್ಸಿಯಸ್ ಅತ್ಯಂತ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದೆ, ಹಗುರ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವದಲ್ಲಿ ಕೆಲವೆಡೆ ಮಂಜು ಕವಿದ ವಾತಾವರಣವಿತ್ತು. ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್​, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಭಾನುವಾರ ಬೆಂಗಳೂರಿನಲ್ಲಿ…

Read More

ನವದೆಹಲಿ:- ಜಾತಿ ಗಣತಿ ನಕಲಿ ಎಂದ ರಾಗಾ ವಿರುದ್ಧ ಮುಗಿಬಿದ್ದ ಎನ್‌ಡಿಎ ಬಿಹಾರದಲ್ಲಿ ನಿತೀಶ್ ಕುಮಾರ್ ಸರ್ಕಾರ ನಡೆಸಿದ್ದ ಜಾತಿ ಗಣತಿಯನ್ನು ನಕಲಿ ಎಂದ ರಾಹುಲ್ ಗಾಂಧಿ ವಿರುದ್ಧ ಎನ್‌ಡಿಎ ಮುಗಿಬಿದ್ದಿದೆ. ಮೊನ್ನೆವರೆಗೂ ಬಿಹಾರ ಜಾತಿಗಣತಿಯನ್ನು ಮೆಚ್ಚಿದ್ದ ರಾಹುಲ್ ಗಾಂಧಿ ಈಗ ಅದನ್ನು ನಕಲಿ ಎನ್ನುತ್ತಿರುವುದು ಅಚ್ಚರಿ ಮೂಡಿಸಿದೆ ಎಂದಿದೆ. https://ainlivenews.com/shocking-incident-18-year-old-student-dies-of-heart-attack/ ನಿತೀಶ್ ಈ ಹಿಂದೆ ಇಂಡಿ ಕೂಟದಲ್ಲಿ ಜಾತಿಗಣತಿ ಬಗ್ಗೆ ಪ್ರಸ್ತಾಪಿಸ್ತಿದೆ ರಾಹುಲ್ ಮೌನ ವಹಿಸ್ತಿದ್ರು ಎಂದು ಜೆಡಿಯು ಆರೋಪಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಏಕೆ ಜಾತಿ ಗಣತಿ ವರದಿಯನ್ನು ಬಹಿರಂಗ ಮಾಡ್ತಿಲ್ಲ. ಈ ಬಗ್ಗೆ ರಾಹುಲ್ ಏಕೆ ಮಾತಾಡಲ್ಲ. ಇದು ಅವರ ದ್ವಂದ್ವ ನಿಲುವಲ್ಲವೇ ಎಂದು ಕೇಳಿದೆ. ಇನ್ನು, ಬಿಹಾರದಲ್ಲಿ ಜಾತಿಗಣತಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು ಎಂಬುದನ್ನು ಸಚಿವ ವಿಜಯ್ ಕುಮಾರ್ ಚೌಧರಿ ನೆನಪಿಸಿದ್ದಾರೆ. ಸಮೀಕ್ಷೆಯ ಲೋಪಗಳನ್ನು ಸ್ಪಷ್ಟವಾದ ಆಧಾರಗಳೊಂದಿಗೆ ತೋರಿಸಿದ್ರೆ ಅದನ್ನು ಸರಿಪಡಿಸಿಕೊಳ್ಳಲು ಸಿದ್ಧ ಎಂದಿದ್ದಾರೆ.

Read More

ತುಮಕೂರು:- ಹೃದಯಾಘಾತದಿಂದ 18ರ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ತುಮಕೂರಿನ ಪಾವಗಡ ಪಟ್ಟಣದಲ್ಲಿ ಘಟನೆ ಜರುಗಿದೆ. https://ainlivenews.com/a-husband-who-ran-away-with-a-married-woman-the-woman-is-crying-in-front-of-the-police-station/ ಮೈಥಿಲಿ ಮೃತ ವಿದ್ಯಾರ್ಥಿನಿ. ಮಧುಗಿರಿ ತಾಲ್ಲೂಕು ಮಿಡಿಗೇಶಿಯ ವೈಥಿಲಿ ಪಾವಗಡದ ಕಾಲೇಜಿನಲ್ಲಿ ಓದುತ್ತಿದ್ದಳು. ತರಗತಿ ಮುಗಿಸಿಕೊಂಡು ಹೊರಟಿದ್ದ ಆಕೆ ಚಳ್ಳಕೆರೆ ಕ್ರಾಸ್ ಬಳಿ ಕುಸಿದು ಬಿದ್ದಿದ್ದಾಳೆ. ಕೂಡಲೇ ವಿದ್ಯಾರ್ಥಿನಿಯನ್ನು ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾಳೆ.

Read More

ಬೆಳಗಾವಿ:- ವಿವಾಹಿತ ಸ್ತ್ರೀ ಜೊತೆ ಗಂಡ ಓಡಿ ಹೋದ ಹಿನ್ನೆಲೆ, ಠಾಣೆ ಮುಂದೆ ಮಹಿಳೆ ಕಣ್ಣೀರು ಹಾಕ್ತಿರುವ ಘಟನೆ, ಬೆಳಗಾವಿ ತಾಲೂಕಿನ ಮಾರಿಹಾಳದಲ್ಲಿ ಜರುಗಿದೆ. https://ainlivenews.com/such-an-act-a-man-killed-a-dog-with-a-stone-and-tied-it-to-an-auto/ ಪರಸ್ತ್ರೀ ಜತೆ ಬಸವರಾಜ ಸೀತಾಮನಿ ಓಡಿಹೋಗಿರುವ ಸದಸ್ಯೆ ವಾಣಿಶ್ರೀ ಪತಿ. ಮಾರಿಹಾಳ ಠಾಣೆಗೆ ದೂರು ನೀಡಲು ಬಂದರೆ ಪೊಲೀಸರು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. 25 ದಿನಗಳ ಹಿಂದೆ ವಿವಾಹಿತೆ ಮಾಸಾಬಿ ಜೊತೆ ಓಡಿಹೋಗಿರುವ ಆರೋಪ ಮಾಡಲಾಗಿದೆ. ನನ್ನ ಜೀವನ ಹಾಳುಮಾಡಿ ಬೇರೆಯವಳ ಜೊತೆ ಇರಲು ನಾನು ಬಿಡಲ್ಲ. ನನಗೆ ಪತಿ, ಮಕ್ಕಳು ಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯೆ ವಾಣಿಶ್ರೀ ಪಟ್ಟುಹಿಡಿದಿದ್ದಾರೆ ಆಕೆ ಗಂಡನನ್ನು ಬಿಟ್ಟು ನಿಂತಿದ್ದಾಳೆ ಎಂದು ನಾನು ಹಾಗೆಯೇ ನಿಲ್ಲಬೇಕಾ? ಮಾಸಾಬಿಗೆ ನನ್ನ ಪತಿ ಬಸವರಾಜ ಸೀತಾಮನಿ ಬಿಟ್ಟುಕೊಡುವುದಿಲ್ಲ. ನಿನ್ನೆ ನನಗೆ ಕರೆ ಮಾಡಿ ನಿನ್ನ ಗಂಡನನ್ನು ಬಿಡಲ್ಲವೆಂದು ಹೇಳಿದ್ದಾಳೆ. ಹಾಗಾಗಿ ಪೊಲೀಸರೇ ನ್ಯಾಯ ಕೊಡಿಸಬೇಕೆಂದು ವಾಣಿಶ್ರೀ ಒತ್ತಾಯಿಸಿದ್ದಾರೆ.

Read More