Author: AIN Author

ಉದ್ಯೋಗ ಕರ್ನಾಟಕದಲ್ಲಿ ಕನ್ನಡಿಗರಿಗೆ ಕಡ್ಡಾಯ ನೀಡಬೇಕು ಎಂದು ರಾಜಸಭೆಯಲ್ಲಿ ಮಾತನಾಡಿರುವ ಜಗ್ಗೇಶ್, ಮೋದಿ ಅವರ ಸಮರ್ಥ ನಾಯಕತ್ವ ಸರಕಾರ ಪ್ರಾದೇಶಿಕ ಭಾಷೆಗಳಲ್ಲಿ ಪ್ರೋತ್ಸಾಹಿಸುತ್ತಿದೆ. ಗೌರವಾನ್ವಿತ ಹಣಕಾಸು ಸಚಿವರು ಸ್ಥಳೀಯ ಭಾಷೆಯ ಮಾತನಾಡುವ ಸಾಕಷ್ಟು ಸಿಬ್ಬಂದಿಯನ್ನು ಫ್ರಂಟ್ ಡೆಸ್ಕ್ (Front Desk) ಕೆಲಸಗಳಿ ನೇಮಿಸುವಂತೆ ಬ್ಯಾಂಕ್ ಗಳಿಗೆ ಸೂಚಿಸಿ ಎಂದು ಕೇಳಿದ್ದಾರೆ. https://ainlivenews.com/good-news-for-rakibhai-fans-next-movie-title-announced-on-december-8/ ಎಂ.ಎನ್.ಸಿ ಕಂಪೆನಿಗಳು, ಸಾರ್ವಜನಿಕ ವಲಯದ ಸಂಸ್ಥೆಗಳು  ಮತ್ತು ಬ್ಯಾಂಕ್ ಗಳು ಸ್ಥಳೀಯ ಭಾಷೆ ಮಾತನಾಡದ ಜನರನ್ನು ಮುಂಬೆಂಚಿನ ಉದ್ಯೋಗಗಳಿಗೆ ನೇಮಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಜನರೊಂದಿಗೆ ಸಂವಹನ ಕಷ್ಟವಾಗುತ್ತಿದೆ. ಈ ಸಮಸ್ಯೆಗಳು ರಾಜ್ಯಗಳ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು. ಹಾಗಾಗಿ ಫ್ರೆಂಟ್ ಡೆಸ್ಕ್ ಉದ್ಯೋಗವನ್ನು ಸ್ಥಳೀಯ ಭಾಷಿಕರಿಗೆ ನೀಡುವಂತೆ ಮನವಿ ಮಾಡಿದ್ದಾರೆ.

Read More

ಶಿವಮೊಗ್ಗ: ಶಿವಮೊಗ್ಗದ ಶರಾವತಿ ನಗರದಲ್ಲಿರುವ ಆದಿಚುಂಚನಗಿರಿ ಕಾಲೇಜು ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದ್ವಿತೀಯ ಪಿಯುಸಿ ಓದುತ್ತಿದ್ದ ಮೇಘಶ್ರೀ (18) ಮೃತ ವಿದ್ಯಾರ್ಥಿನಿ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿನಿ ಮೇಘಶ್ರೀ ಹೋಮ್​ ಸಿಕ್​​ಗೆ‌ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. https://ainlivenews.com/good-news-for-rakibhai-fans-next-movie-title-announced-on-december-8/ ಮೃತ ಮೇಘಶ್ರೀ ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಚೆನ್ನಾಪುರ ಗ್ರಾಮದ ನಿವಾಸಿ ಓಂಕಾರಯ್ಯ ಎಂಬುವರ ಪುತ್ರಿ. ಕಾಲೇಜಿನ ಹಾಸ್ಟೆಲ್​ನಲ್ಲಿದ್ದು ವಿದ್ಯಾಭ್ಯಾಸ ನಡೆಸುತ್ತಿದ್ದಳು.  ಬಯಾಲಾಜಿ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಿದ್ದಳು. ಪರೀಕ್ಷೆ ನಡುವೆ ವಾಶ್​ ರೂಂಗೆ ಹೋಗುವುದಾಗಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಮೇಘಶ್ರಿ ಅವರ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More

ಬೆಳಗಾವಿ: ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮೈಸೂರು ದಸರಾ ಖ್ಯಾತಿಯ ಅರ್ಜುನ ಆನೆ ಬಲಿಯಾಗಿರುವುದಕ್ಕೆ ಅರಣ್ಯ ಇಲಾಖೆ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಗರಂ ಆಗಿದ್ದಾರೆ. ಪರಿಷತ್‌ ಕಲಾಪದ ವೇಳೆ ಮಾತನಾಡಿದ ಅವರು, 60 ವರ್ಷ ಮೀರಿದ ಅನೆಯನ್ನ ಕಾರ್ಯಾಚರಣೆಗೆ ಬಳಕೆ ಮಾಡಬಾರದು ಅಂತ ನಿಯಮ ಇತ್ತು. ಈಗ ಅರ್ಜುನ ಆನೆಗೆ 64 ವರ್ಷ. ಕಾಡಾನೆ ಸೆರೆ ಹಿಡಿಯಲು ಯಾಕೆ ಉಪಯೋಗ ಮಾಡಿದ್ರು ಎಂದು ಪ್ರಶ್ನಿಸಿದ್ದಾರೆ. ಇದೊಂದು ಆತಂಕದ ವಿಚಾರ. ಸರ್ಕಾರ ಅರ್ಜುನ ಸಾವಿನ ಬಗ್ಗೆ ತನಿಖೆ ಮಾಡಬೇಕು. ಅರವಳಿಕೆ ಪುಂಡಾನೆಗೆ ಬದಲು ಅರ್ಜುನಿಗೆ ಬಿತ್ತು ಅಂತ ಆರೋಪ ಇದೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ. https://ainlivenews.com/good-news-for-rakibhai-fans-next-movie-title-announced-on-december-8/ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಸಳೂರು ಬಳಿ ಕಾಡಾನೆ ಸೆರೆಗೆ ಸೋಮವಾರ ನಡೆದ ಕಾರ್ಯಾಚರಣೆಯಲ್ಲಿ ಕಾಡಾನೆ ದಾಳಿಯಿಂದ ಅರ್ಜುನ ಆನೆ ಮೃತಪಟ್ಟಿತು. ನಾಲ್ಕು ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ವೈದ್ಯರು ಕಾರ್ಯಾಚರಣೆ ಆರಂಭಿಸಿದ್ದರು. ಕಾಡಾನೆಗೆ ಅರವಳಿಕೆ ಚುಚ್ಚುಮದ್ದು…

Read More

ಹಿಂದಿ ಜನಪ್ರಿಯ ಧಾರಾವಾಹಿ ಸಿಐಡಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ಸಿಐಡಿ (CID) ನಟ ಎಂದೇ ಖ್ಯಾತರಾಗಿದ್ದ ದಿನೇಶ್ ಫಡ್ನಿಸ್ (Dinesh Phadnis) ಅವರು ನಿಧನ (passed away) ಹೊಂದಿದ್ದಾರೆ. ಈ ಮಾಹಿತಿಯನ್ನು ಸಹ ನಟ ದಯಾನಂದ್ ಶೆಟ್ಟಿ ಅವರು ಖಚಿತ ಪಡಿಸಿದ್ದಾರೆ. ಡಿಸೆಂಬರ್ 1ರಂದು ಅವರಿಗೆ ಹೃದಯಾಘಾತವಾಗಿತ್ತು. ಕೂಡಲೇ ಅವರನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. https://ainlivenews.com/good-news-for-rakibhai-fans-next-movie-title-announced-on-december-8/ ನಾಲ್ಕು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದಿನೇಶ್ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಸಿಐಡಿಯಲ್ಲಿ ದಯಾ ಪಾತ್ರವನ್ನು ನಿರ್ವಹಿಸುತ್ತಿದ್ದ ದಯಾನಂದ್ ಶೆಟ್ಟಿ  ಮಾಹಿತಿ ನೀಡಿದ್ದಾರೆ. ಹಲವಾರು ಟಿವಿ ಕಾರ್ಯಕ್ರಮದಲ್ಲಿ ದಿನೇಶ್ ಭಾಗಿಯಾಗಿದ್ದರೂ, ಹತ್ತಾರು ಧಾರಾವಾಹಿಗಳಲ್ಲಿ ನಟಿಸಿದ್ದರೂ, ಸಿಐಡಿ ಧಾರಾವಾಹಿ ಇವರಿಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಈ ಧಾರಾವಾಹಿಯಲ್ಲಿ ಅವರು ಫ್ರೆಡೆರಿಕ್ಸ್ (Fredericks) ಪಾತ್ರವನ್ನು ನಿರ್ವಹಿಸುತ್ತಿದ್ದರು. 20 ವರ್ಷಗಳ ಕಾಲ ಅವರು ಈ ತಂಡದೊಂದಿಗೆ ಸಕ್ರೀಯರಾಗಿದ್ದರು.

Read More

  ಬಳ್ಳಾರಿ: ಕಂಪ್ಲಿಯಲ್ಲಿ ಮುಂದುವರೆದ ಲೊಕಾಯುಕ್ತ ದಾಳಿ ಮುಂದುವರೆಸಿದ್ದಾರೆ. ಗಂಗಾವತಿ ಅರಣ್ಯಾಧಿಕಾರಿ ಮಾರುತಿ ಮನೆ ಮೇಲೆ ಲೋಕಾ ದಾಳಿ ನಡೆಸಿದ್ದು, ಕಂಪ್ಲಿಯ ಮಾರುತಿ ನಿವಾಸದಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಸತತ ಮೂರು ಗಂಟೆಯಿಂದ 6 ಜನ ಲೋಕಾಯುಕ್ತ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರ ಹಾಗೂ ಅಪಾರ ಆಸ್ತಿ ಗಳಿಕೆ ದೂರು ಹಿನ್ನೆಲೆ ಲೋಕಾ ಅಧಿಕಾರಿಗಳು ಮಾರುತಿ ಆದಾಯದ ಬಗ್ಗೆ ಸಂಬಂಧಿಕರಿಂದಲೂ ಮಾಹಿತಿ ಕಲೆಹಾಕ್ತಿದ್ದಾರೆ.

Read More

ಹಾವೇರಿ: ರಾಣೇಬೆನ್ನೂರಿನ ಈಶ್ವರ ನಗರದ ಹೆಸ್ಕಾಂ ನಿವೃತ್ತ ಕಿರಿಯ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಇಂದು ನಶುಕಿನ 6ಗಂಟೆಯಿಂದ ಲೋಕಾ ಅಧಿಕಾರಿಗಳ ಪರಿಶೀಲನೆ ನಡೆಸುತ್ತಿದ್ದು, ಧಾರವಾಡ ಹೆಸ್ಕಾಂನಲ್ಲಿ ಕಿರಿಯ ಇಂಜಿನಿಯರಾಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಮಳೇಮಠ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿರುವ ಧಾರವಾಡ ಲೋಕಾಯುಕ್ತ ಎಸ್ ಪಿ ಸತೀಶ ಚೀಟಗುಬ್ಬಿ, ಡಿವೈಎಸ್ ಪಿ ವೆಂಕನಗೌಡ ಪಾಟೀಲ, ಸಿಪಿಐ ಸಂತೋಷ ಸೇರಿದಂತೆ ಒಟ್ಟು 12ಜನರ ಅಧಿಕಾರಿಗಳ ತಂಡದಿಂದ  ಕಳೆದ ನಾಲ್ಕು ತಿಂಗಳ ಹಿಂದೆ ಸೇವೆಯಿಂದ ನಿವೃತ್ತಿ ಹೊಂದಿದ್ದ ಬಸವರಾಜ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ.

Read More

ಬೆಳಗಾವಿ: ಶಾಸಕ ರಮೇಶ್ ಜಾರಕಿಹೊಳಿ ಆಪ್ತ, ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನುಕ್ರಮ ಕೈಗೊಳ್ಳುತ್ತಾರೆ. ಏನೇ ಇದ್ದರೂ ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಗೃಹ ಸಚಿವ ಡಾ.ಪರಮೇಶ್ವರ್ ಹೇಳಿದ್ದಾರೆ. ಬೆಳಗಾವಿ ಖಾಸಗಿ ಹೊಟೆಲ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೃಥ್ವಿ ಸಿಂಗ್ ಹಿನ್ನೆಲೆ ಏನು, ಚಾಕು ಇರಿತ ಯಾಕಾಗಿದೆ ಅನ್ನುವುದು ತನಿಖೆ ಮೂಲಕ ಗೊತ್ತಾಗಬೇಕಿದೆ. ಈ ಕೇಸ್‌ನಲ್ಲಿ ಬೇರೆ ಯಾರು ಇನ್ವಾಲ್ವ್ ಆಗಿದ್ದಾರೆ ನೋಡಬೇಕು. ಕೇಸ್ ವೇರಿಫಾಯ್ ಮಾಡೊಣ. ಈಗಾಗಲೇ ಪೋಲಿಸರು ವೇರಿಫಾಯ್ ಮಾಡುತ್ತಿದ್ದಾರೆ. ಸಂಪೂರ್ಣ ಮಾಹಿತಿ ಬಂದ ಮೇಲೆ ಮಾಧ್ಯಮಕ್ಕೆ ರಿಯಾಕ್ಷನ್ ಕೊಡ್ತಿನಿ ಎಂದು ಹೇಳಿದರು. ಇನ್ನೂ ಪೋಲಿಸರ ಮೇಲೆ ನಂಬಿಕೆ ಇಲ್ಲ ವಿಜಯೇಂದ್ರ ಹೇಳಿಕೆಗೆ ಜಿ.ಪರಮೇಶ್ವರ್ ತಿರುಗೇಟು ನೀಡಿದರು. ಪೋಲಿಸರ ಮೇಲೆ ನಂಬಿಕೆ ಇಲ್ಲದಿದ್ದರೆ ಇವರು ಯಾರ ಮೇಲೆ ನಂಬಿಕೆ ಇಡುತ್ತಾರೆ. ಅವರಿಗೆ ಬೇಕಾದಾಗ ನಂಬಿಕೆ ಇರುತ್ತೆ, ಬೇಡವಾದಾಗ ನಂಬಿಕೆ ಇರಲ್ಲ, ಎಲ್ಲರಿಗೂ ನ್ಯಾಯವನ್ನ ಒದಗಿಸುವ ಕಾರ್ಯ ಮಾಡುತ್ತಿದೆ ಅವರ ಮೇಲೆ ನಂಬಿಕೆ ಇಡಬೇಕಾಗುತ್ತದೆ ಎಂದು…

Read More

ಬೆಳಗಾವಿ: ಶಾಸಕ ರಮೇಶ್ ಜಾರಕಿಹೊಳಿ ಆಪ್ತ, ಬಿಜೆಪಿ ಮುಖಂಡ ಪೃಥ್ವಿಸಿಂಗ್​ಗೆ ಚಾಕು ಇರಿತ ಪ್ರಕರಣ ರಾಜಕೀಯ ಪ್ರೇರಿತವೋ ಅಥವಾ ಷಡ್ಯಂತ್ರವೋ ಗೊತ್ತಾಗಬೇಕು. ಪೃಥ್ವಿ ಸಿಂಗ್ ಮೋಸ್ಟ್ ಬೋಗಸ್ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು, ತಮ್ಮ, ಮಗ ಸೇರಿದಂತೆ ನಾವೆಲ್ಲರೂ ಶಾಂತಿ ಪ್ರಿಯರು. ತನಿಖೆ ಆಗಬೇಕು ಎಂದು ಎಸ್​ಪಿ ಜೊತೆ ಮಾತನಾಡಿದ್ದೇನೆ. https://ainlivenews.com/not-only-nutmeg-greens-also-have-many-medicinal-properties/ ಪ್ರಕರಣದ ಬಗ್ಗೆ 24 ಗಂಟೆಯೊಳಗೆ ಸತ್ಯಾಸತ್ಯತೆ ಗೊತ್ತಾಗಬೇಕು ಎಂದಿದ್ದಾರೆ. ಚಾಕು ಇರಿತದ ಹಿಂದೆ ಯಾರಿದ್ದಾರೆ ಎಂದು ಗೊತ್ತಾಗಬೇಕು. ಅವನು ಯಾರ ಆಪ್ತ ಅನ್ನೋದಕ್ಕಿಂತ ನಮ್ಮ ಹೆಸರು ಬಂದಿದೆ. ಬಗ್ಗೆ ವಿಚಾರ ಮಾಡಿದ್ದೇನೆ. ಬಿಜೆಪಿ ಮುಖಂಡ ಪೃಥ್ವಿ ಸಿಂಗ್​ನನ್ನೇ ವಿಚಾರಣೆ ಮಾಡಬೇಕು. ಪೃಥ್ವಿ ಹೆಸರು ಬರೆದಿಟ್ಟು ಹುಡುಗರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.

Read More

ಮೈಸೂರು: ಸುಮಾರು 22 ವರ್ಷಗಳ ಕಾಲ ಮೈಸೂರು ದಸರಾದಲ್ಲಿ ಭಾಗವಹಿಸಿದ್ದ ಅರ್ಜುನ ಸಾವನ್ನಪ್ಪಿರುವುದು ಅತ್ಯಂತ ಗಂಭೀರವಾದ ಪರಿಸ್ಥಿತಿ ಅರ್ಜುನನ ಸಾವಿಗೆ ಕಾರಣ ಯಾರು ಅರಣ್ಯ ಇಲಾಖೆಯವರು ಈ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಮಾಡಬೇಕಾಗಿದೆ. https://ainlivenews.com/not-only-nutmeg-greens-also-have-many-medicinal-properties/ ಅರ್ಜುನ ಸಾವಿನಿಂದ ಕೋಟಿ ಕೋಟಿ ಜನರ ಮನಸ್ಸು ನೋವಾಗಿದೆ ಅರ್ಜುನ ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ ಕಾಡಾನೆಗಳ ದಾಳಿಯಿಂದ ಅರ್ಜುನನ ಸಾವು ನಿಜಕ್ಕೂ ನೋವಾಗಿದೆ ತನಿಖೆ ಆಗದಿದ್ದರೆ ಕನ್ನಡ ಚಳುವಳಿ ವಾಟಾಳ್ ಪಕ್ಷ ತೀವ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುತ್ತೇನೆ ಎಂದರು.

Read More

ಬೆಂಗಳೂರು: ಸದ್ಯ ಪ್ರಕರಣದಲ್ಲಿ ಹೈಕೋರ್ಟ್‍ನ ಆದೇಶದಿಂದ ಸಿಬಿಐ ನಿರಾಳವಾಗಿದೆ. ಹಾಗಾದ್ರೆ ಡಿಕೆ ಶಿವಕುಮಾರ್ (DK Shivakumar) ಪ್ರಕರಣದಲ್ಲಿ ಸಿಬಿಐ ಮುಂದೇನು ಮಾಡಬಹುದು ಎನ್ನುವ ಕುತೂಹಲವೂ ಇದೆ. ಡಿಕೆಶಿಗೆ ಸಿಬಿಐ ನೋಟಿಸ್ ಕೊಡಲು ಅವಕಾಶ ಇದೆ. ಹೌದು ರಾಜಕೀಯ ಪಕ್ಷಗಳು ಬರುತ್ತವೆ. ಅಧಿಕಾರಕ್ಕೆ ಬರುವ ಸರ್ಕಾರಗಳು ಬೇರೆ ಬೇರೆ ತೀರ್ಮಾನಗಳನ್ನು ಕೈಗೊಳ್ಳುತ್ತವೆ. ಅದರ ಬಗ್ಗೆ ನಾವೇನೂ ಹೇಳಲ್ಲ. ನಾವು ಗಮನಿಸಿರುವ ಹಾಗೆ ಕೇವಲ ಮೇಲ್ಮನವಿ ಅರ್ಜಿಯನ್ನು ಹಿಂಪಡೆಯುವ ಬಗ್ಗೆಯಷ್ಟೇ ತೀರ್ಮಾನ ಕೈಗೊಂಡಿದ್ದೇವೆ. https://ainlivenews.com/not-only-nutmeg-greens-also-have-many-medicinal-properties/ ಆದರೆ ಎಫ್‍ಐಆರ್ ವಿಚಾರದಲ್ಲಿ ಮೈಲಿಗಳಷ್ಟು ದೂರು ಉಳಿಯುತ್ತೇವೆ. ಇದು ಮೇಲ್ಮನವಿ ಹಿಂಪಡೆಯುವ ವಿಚಾರವಷ್ಟೇ. ಅದನ್ನು ಹೊರತು ಪಡಿಸಿ ವಿಶೇಷವಾಗಿ ಯಾವ ಅಂಶವನ್ನು ಪರಿಗಣಿಸಿಲ್ಲ ಎನ್ನುವ ಮೂಲಕ ಕೋರ್ಟ್ ಕೇವಲ ಮೇಲ್ಮನವಿ ವಾಪಸ್ಸಾತಿ ವಿಚಾರವನ್ನು ಮಾತ್ರ ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ನಡೆಸಬಹುದಾಗಿದೆ. ಸದ್ಯ ಪ್ರಕರಣದಲ್ಲಿ ಹೈಕೋರ್ಟ್‍ನ ಆದೇಶದಿಂದ ಸಿಬಿಐ ನಿರಾಳವಾಗಿದೆ. ಹಾಗಾದ್ರೆ ಡಿಕೆ ಶಿವಕುಮಾರ್ (DK Shivakumar) ಪ್ರಕರಣದಲ್ಲಿ ಸಿಬಿಐ ಮುಂದೇನು ಮಾಡಬಹುದು ಎನ್ನುವ…

Read More