ಬೆಳಗಾವಿ:- ಬೆಳಗಾವಿ ತಾಲೂಕಿನ ದೇವಗಿರಿ-ಬಂಬರಗಾ ಕ್ರಾಸ್ ಬಳಿ ಟಿಪ್ಪರ್ ಮತ್ತು ಕಾರಿನ ಮಧ್ಯೆ ಅಪಘಾತದಲ್ಲಿ ಟಿಪ್ಪರ್ನ ಡೀಸೆಲ್ ಟ್ಯಾಂಕರ್ ಸ್ಫೋಟಿಸಿ ಹೊತ್ತಿಕೊಂಡ ಬೆಂಕಿಯಿಂದ ಇಬ್ಬರು ಸಜೀವ ದಹನವಾಗಿರುವ ಘಟನೆ ಜರುಗಿದೆ. ಮೋಹನ್ ಮಾರುತಿ ಬೆಳ್ಗಾಂವಕರ್ (24), ಮಚ್ಚೆ ಗ್ರಾಮದ ಬಾಲಕಿ ಸಮಿಕ್ಷಾ ಡಿಯೇಕರ್ (12) ಎಂದು ಗುರುತಿಸಲಾಗಿದೆ. ಸಂಬಂಧಿಕರ ಮದುವೆ ಮುಗಿಸಿಕೊಂಡು ರಾತ್ರಿ ಬಂಬರಗಾ ಗ್ರಾಮಕ್ಕೆ ಬರುವಾಗ ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದೆ. ಬಂಬರಗಾ ಕ್ರಾಸ್ ಬಳಿ ಅಡ್ಡ ಬಂದ ಟಿಪ್ಪರ್‌ಗೆ ಕಾರು ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಟಿಪ್ಪರ್ನ ಡಿಸೇಲ್ ಟ್ಯಾಂಕ್ ಒಡೆದು ಬೆಂಕಿ ಹೊತ್ತಿ ಉರಿದಿದೆ. ಈ ವೇಳೆ ಕಾರಿನಲ್ಲಿದ್ದ ನಾಲ್ವರ ಪೈಕಿ ಇಬ್ಬರು ಸಜೀವ ದಹನವಾಗಿದ್ದಾರೆ. ಇನ್ನು ಗಂಭೀರವಾಗಿ ಗಾಯಗೊಂಡ ಮತ್ತಿಬ್ಬರನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಗಾಯಾಳುಗಳಾದ ಮಹೇಶ್ ಬೆಳಗಾಂವಕರ್ ಮತ್ತು ಸ್ನೇಹಾ ಬೆಳಗುಂದಕರ್ ಸದ್ಯ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ…
Author: AIN Author
ಬೆಂಗಳೂರು :- ನಗರದ ಜೆಪಿ ಭವನದಲ್ಲಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಡಿ.9ರಂದು ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಹೆಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದ್ದು, ಪಕ್ಷದ ಶಾಸಕರು, ಸಂಸದರು ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರಿಗೂ ಆಹ್ವಾನ ನೀಡಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ.ಇಬ್ರಾಹಿಂ ಅವರನ್ನು ಪಕ್ಷದಿಂದ ಅಮಾನತು ಮಾಡಿದ ನಂತರ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಇದಾಗಿದೆ. ಕೆಲವು ಮಹತ್ವದ ನಿರ್ಣಯಗಳನ್ನು ಪಕ್ಷ ಕೈಗೊಳ್ಳಲಿದೆ. ಮುಂದಿನ ಲೋಕಸಭೆ ಚುನಾವಣೆ, ಬಿಬಿಎಂಪಿ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಿದ್ಧತೆ, ಪಕ್ಷದ ವಿವಿಧ ಘಟಕಗಳ ಪುನಾರಚನೆ, ಎನ್.ಡಿ.ಎ ಮೈತ್ರಿಕೂಟ ಸೇರ್ಪಡೆ, ಪಕ್ಷ ಸಂಘಟನೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಎನ್‍ಡಿಎ ಮೈತ್ರಿಕೂಟ ಸೇರ್ಪಡೆಯಾಗುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಂ. ಇಬ್ರಾಹಿಂ ವಿರೋಧ ವ್ಯಕ್ತಪಡಿಸಿ ಪ್ರತ್ಯೇಕ ಸಭೆ ನಡೆಸಿದ್ದರು. ಪಕ್ಷ…
ಬೆಂಗಳೂರು:- ದಂಪತಿಗಳ ವಿಚ್ಚೇದನದಲ್ಲಿ ನಿಯಮ ಪಾಲಿಸದೇ ಇರಲಾಗದು ಎಂದು ಬೆಂಗಳೂರು ಹೈಕೋರ್ಟ್ ಹೇಳಿದೆ. ದಂಪತಿ ವಿಚ್ಚೇದನ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಮಾಡಿರುವ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ವಿಭಾಗೀಯಪೀಠ ದಂಪತಿಗೆ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರಕ್ಕೆ ತೆರಳುವಂತೆ ನಿರ್ದೇಶನ ನೀಡಿತು. ಇದರ ಜತೆಗೆ ಮಧ್ಯಸ್ಥಿಕೆ ಕೇಂದ್ರವು ವಿಚಾರಣಾ ನ್ಯಾಯಾಲಯಕ್ಕೆ ಮಧ್ಯಸ್ಥಿಕೆ ವರದಿಯನ್ನು ಸಲ್ಲಿಸಬೇಕು. ಆ ವರದಿ ಆಧರಿಸಿ ವಿಚಾರಣಾ ನ್ಯಾಯಾಲಯ ಕಾನೂನು ಪ್ರಕಾರ ವಿಚ್ಚೇದನ ಅರ್ಜಿಯನ್ನು ಇತ್ಯರ್ಥಪಡಿಸಬಹುದು ಎಂದು ತಿಳಿಸಿದೆ. ಅಲ್ಲದೆ, ಪಕ್ಷಗಾರರ ಮನವಿ ಇಲ್ಲದೆ ವಿಚಾರಣಾ ನ್ಯಾಯಾಲಯ ತನ್ನಷ್ಟಕ್ಕೆ ತಾನೇ ಅರ್ಜಿ ವಜಾಗೊಳಿಸಬಾರದು ಎನ್ನುವುದನ್ನೂ ಸಹ ಪೀಠ ಹೇಳಿದೆ. ಆದರೆ, ಈ ಪ್ರಕರಣದಲ್ಲಿ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಕೇವಲ 9 ತಿಂಗಳಿಗೆ ವಜಾಗೊಳಿಸಿದೆ. ನಿಗದಿಯಂತೆ ಪ್ರಕರಣದ ಇತ್ಯರ್ಥಕ್ಕೆ 18 ತಿಂಗಳು ಕಾಲಾವಕಾಶ ಇದೆ. ಆದರೆ ಅದಕ್ಕೂ ಮುನ್ನ ವಿಚಾರಣಾ ನ್ಯಾಯಾಲಯ ಸೆಕ್ಷನ್ 13 ಬಿ(2) ಅನ್ನು ಪಾಲನೆ ಮಾಡಿಲ್ಲ. ಹಾಗಾಗಿ ವಿಚಾರಣಾ…
ಬೆಳಗಾವಿ:- ಒತ್ತುವರಿಯಾದ ಸರಕಾರಿ ಭೂಮಿ ವಶಕ್ಕೆ ಪಡೆಯಲು ಪ್ರತ್ಯೇಕ ಕೋಶ ರಚನೆಗೆ ಚಿಂತನೆ ನಡೆಸಲಾಗಿದೆ ಎಂದು ಸಚಿವ ಕೃಷ್ಣ ಭೈರೇಗೌಡರು ಹೇಳಿದ್ದಾರೆ. ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಒತ್ತುವರಿ ಕುರಿತಂತೆ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಒತ್ತುವರಿಯಾಗಿರುವ ಭೂ ತೆರವಿನ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕಳೆದ ಆರು ತಿಂಗಳಲ್ಲಿ ನೂರಾರು ಕೋಟಿ ಮೌಲ್ಯದ ಸರ್ಕಾರ ಭೂ ಒತ್ತುವರಿಯನ್ನು ತೆರವು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಒತ್ತುವರಿ ತೆರವಿಗೆ ಪ್ರತ್ಯೇಕ ಕೋಶ ರಚಿಸಲಾಗುವುದು, ಅಲ್ಲದೆ, ಸರಕಾರಿ ಆಸ್ತಿಗಳನ್ನು ರಕ್ಷಿಸಲಾಗುವುದು ಎಂದು ಹೇಳಿದ್ದಾರೆ,
ಕಲಬುರಗಿ:- ACC ಸಿಮೆಂಟ್ ಕಂಪೆನಿಯ ಪ್ಯಾಕಿಂಗ್ ವಿಭಾಗದ ಇಂಜಿನಿಯರ್ ಆತ್ಮಹತ್ಯೆಗೆ ಶರಣಾಗಿರೋ ಘಟನೆ ಕಲಬುರಗಿಯಲ್ಲಿ ನಡೆದಿದೆ. ಚಿತ್ತಾಪುರ ತಾಲೂಕಿನ ವಾಡಿಯಲ್ಲಿರುವ ACC ಸಿಮೆಂಟ್ ಕಂಪೆನಿಯ ಇಂಜಿನಿಯರ್ ರಮೇಶ್ ಪವಾರ್ ಆತ್ಮಹತ್ಯೆಗೆ ಶರಣಾಗಿರೋ ದುರ್ದೈವಿ. ಚಿತ್ತಾಪುರ ಮಾಜಿ ಶಾಸಕ ವಾಲ್ಮೀಕಿ ನಾಯಕ್ ಅಳಿಯ ಆಗಿರೋ ರಮೇಶ್ ಕಳೆದ 26 ವರ್ಷಗಳಿಂದ ಕೆಲಸ ಮಾಡುತ್ತಿದ್ರು. ಆದ್ರೆ ಇತ್ತೀಚಿಗೆ ನಿಮ್ಮ ಫರ್ಮಾಮೆನ್ಸ್ ಸರಿಯಿಲ್ಲ ಕೆಲಸದಿಂದ ಟರ್ಮಿನೇಟ್ ಮಾಡ್ತಿದ್ದೇವೆ ಅಂತ ಹೇಳಿ ನನ್ನನ್ನ ವಿನಾಕಾರಣ ಟಾರ್ಗೆಟ್ ಮಾಡಿದ್ರು. ಹೀಗಂತ ಖುದ್ದು ರಮೇಶ್ ಪವಾರ್ ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡಿ ನೇಣಿಗೆ ಕೊರಳೊಡ್ಡಿದ್ದಾರೆ..ಈ ಬಗ್ಗೆ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು:- ಸೈಟ್ ಕೊಡಿಸುವ ನೆಪದಲ್ಲಿ ಬೆಂಗಳೂರಿನಲ್ಲಿರುವ ವಿದೇಶಿ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಅನಿವಾಸಿ ಭಾರತೀಯ ಟ್ವೀಟ್ ಮೂಲಕ ದೂರು ನೀಡಿದ್ದಾರೆ. ಜಾಹಿರಾತು ಮುಖಾಂತರ ರಾಘವೇಂದ್ರ ಪ್ರಸಾದ್ ಎಂಬವರನ್ನು ಜೆಪಿ ನಗರದ ರಿಯಲ್ ಎಸ್ಟೇಟ್ ಕಂಪನಿ ಪರಿಚಯಿಸಿಕೊಂಡಿದೆ. ನಂತರ ಹೂಡಿಕೆ ಮಾಡಿಸಿಕೊಂಡು ಸೈಟ್ ಬುಕ್ ಮಾಡಿದ್ದಾರೆ. ಈಗಾಗಲೇ ವಿವಿಧ ಹಂತಗಳಲ್ಲಿ 30 ಲಕ್ಷ ಹಣ ಜಮೆ ಮಾಡಿಸಿಕೊಂಡಿದೆ. ಹಣ ಜಮೆಯಾದ ಬಳಿಕ ಬುಕ್ ಮಾಡಿದ್ದ ಸೈಟ್ ಬೇರೆಯವರಿಗೆ ಮಾರಾಟ ಮಾಡಲಾಗಿದೆ. ಈ ವಿಚಾರ ತಿಳಿದ ರಾಘವೇಂದ್ರ ಪ್ರಸಾದ್ ಅವರು ಕಂಪನಿಯನ್ನು ಪ್ರಶ್ನಿಸಿದಾಗ ಬೇರೆ ಸೈಟ್ ನೀಡುವುದಾಗಿ ತಿಳಿಸಿದೆ. ಈ ವೇಳೆ ಹೂಡಿಕೆ ಹಣ ವಾಪಾಸ್ ನೀಡುವಂತೆ ರಾಘವೇಂದ್ರ ಅವರು ಕಂಪನಿಗೆ ಮನವಿ ಮಾಡಿದ್ದಾರೆ.
ಸುವರ್ಣಸೌಧ:- ಬಿಜೆಪಿ ಮುಖಂಡರಾದ ಮಣಿಕಂಠ ರಾಥೋಡ್, ವಿಜಯೇಂದ್ರ ವಿರುದ್ಧ ಮಾನನಷ್ಟ ಕೇಸ್ ಹಾಕುವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಅವರ ಮೇಲೆ ನಾನು ಹಲ್ಲೆ ನಡೆಸಿದ್ದೇನೆ ಎಂದು ಆರೋಪಿಸಿದ ಮಣಿಕಂಠ ರಾಥೋಡ್ ಹಾಗೂ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿ ಹಲವು ಬಿಜೆಪಿ ನಾಯಕರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಂದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಣಿಕಂಠ ರಾಥೋಡ್ ಅವರು ಕಳೆದ ನ.19ರಂದು ತಮ್ಮ ಮೇಲೆ ಹಲ್ಲೆಯಾಗಿದೆ, ಅದಕ್ಕೆ ಸರ್ಕಾರದ ಅಧಿಕಾರಗಳು ಹಾಗೂ ರಾಜಕೀಯ ವಿರೋಧಿಗಳು ಕಾರಣ ಎಂದು ಆರೋಪಿಸಿ ದೂರು ನೀಡಿದ್ದರು. ಆದರೆ, ಈಗ ಅದರ ವಿಧಿವಿಜ್ಞಾನ ವರದಿ ಬಂದಿದ್ದು, ಮಣಿಕಂಠ ರಾಥೋಡ್ ಅವರು ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೀಡಾದಾಗ ಅವರಿಗೆ ಗಾಯಗಳಾಗಿವೆ. ಅವರ ಮೇಲೆ ಯಾರೂ ಹಲ್ಲೆ ಮಾಡಿಲ್ಲ ಎಂದು ತಿಳಿದುಬಂದಿದೆ. ಆದರೆ, ಅವರ ಮೇಲೆ ನಾನು ಹಲ್ಲೆ ಮಾಡಿದ್ದೇನೆ ಎಂದು ಮಣಿಕಂಠ ರಾಥೋಡ್,…
ಆಂಧ್ರ:- ಸೈಕ್ಲೋನ್ ಪ್ರಭಾವ ತಿರುಪತಿ ತಿರುಮಲ ಭಕ್ತರ ಮೇಲೂ ಕೂಡ ಆಗಿದೆ. ಚಂಡಮಾರುತದ ಪ್ರಭಾವದಿಂದ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಶನಿವಾರದಿಂದ ತಿರುಪತಿಯಲ್ಲಿ ಮಿಚಾಂಗ್ ಚಂಡಮಾರುತದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯು ಮಂಗಳವಾರವೇ ಹತೋಟಿಗೆ ಬಂದಿದ್ದು, ತೀವ್ರ ಚಂಡಮಾರುತವು ಬಾಪಟ್ಲಾ ಬಳಿ ಭೂಕುಸಿತವನ್ನು ಮಾಡಿದ ನಂತರ. ತಿರುಪತಿಯು ಚಂಡಮಾರುತದ ಪ್ರಭಾವ ಅನುಭವಿಸುವ ಮುನ್ಸೂಚನೆ ಇದ್ದ ಕಾರಣ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ದೇಶಾದ್ಯಂತದ ವಿವಿಧ ಸ್ಥಳಗಳಿಂದ ತಿರುಪತಿಗೆ ತೆರಳುವ ಬಸ್‌ಗಳು, ರೈಲುಗಳು ಮತ್ತು ವಿಮಾನಗಳ ರದ್ದತಿಯು ಕೂಡ ತಿರುಮಲದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದೆ. ತಿರುಮಲ ತಿರುಪತಿ ದೇವಸ್ಥಾನದ ಅಧಿಕೃತ ದಾಖಲೆಗಳ ಪ್ರಕಾರ, ಮಂಗಳವಾರ ಕೇವಲ 44,547 ಭಕ್ತರು ತಿರುಮಲ ದೇವಸ್ಥಾನ ದರ್ಶನ ಪಡೆದಿದ್ದಾರೆ, ಇದು ದಾಖಲೆಯ ಕಡಿಮೆ ಮತ್ತು ದೈನಂದಿನ ಸರಾಸರಿ ಯಾತ್ರಿಕರ ಪಾದಯಾತ್ರೆಯ ಅರ್ಧದಷ್ಟು ಎಂದು ಹೇಳಲಾಗಿದೆ. ಭಕ್ತರ ಸಂಖ್ಯೆ ಇಳಿಮುಖವಾಗಿದ್ದು, ತಿರುಮಲ ದೇವಸ್ಥಾನದ ಹುಂಡಿ ಸಂಗ್ರಹವೂ ಮಂಗಳವಾರ 3.25 ಕೋಟಿ ರೂ.ಗೆ ಕುಸಿತ ಕಂಡಿದೆ.…
ಸಾಮಾನ್ಯವಾಗಿ ಗೆಣಸು ಎಲ್ಲ ಋತುಗಳಲ್ಲಿಯೂ ದೊರೆಯುತ್ತದೆ. ಆದರೆ ಸಿಹಿ ಗೆಣಸು ಹೆಚ್ಚಾಗಿ ಸಿಗುವುದು ಚಳಿಗಾಲದಲ್ಲಿ ಮಾತ್ರ. ಮಣ್ಣಿನಲ್ಲಿ ಅಡಿಯಲ್ಲಿ ಬೆಳೆಯುವ ಸಿಹಿ ಗೆಣಸು ಆರೋಗ್ಯಕ್ಕೆ ಒಳ್ಳೆಯದು. ಇದು ತುಂಬಾ ಟೇಸ್ಟಿ ಮತ್ತು ಪೌಷ್ಟಿಕಾಂಶವನ್ನು ತುಂಬಿಕೊಂಡಿದೆ. ಸಿಹಿ ಗೆಣಸು ಚಳಿಗಾಲದಲ್ಲಿ ತಿನ್ನಲು ಒಳ್ಳೆಯದು. ಇದರ ಸೇವನೆಯಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ನಾವೀಗ ನೋಡೋಣ. ಚರ್ಮದ ಆರೋಗ್ಯಕ್ಕೆ ಒಳ್ಳೆಯದು ಚಳಿಗಾಲದಲ್ಲಿ ನಮ್ಮ ತ್ವಚೆಯನ್ನು ಸುರಕ್ಷಿತವಾಗಿಡುವುದು ಬಹಳ ಮುಖ್ಯ. ಏಕೆಂದರೆ ಚಳಿಗಾಲದಲ್ಲಿ ಚರ್ಮ ಬೇಗ ಒಣಗುತ್ತದೆ. ಈ ರೀತಿ ಆದಾಗ ನಮ್ಮ ಚರ್ಮಕ್ಕೆ ಹಾನಿಯಾಗುತ್ತದೆ. ಹೀಗಾಗಿ ಸಿಹಿ ಗೆಣಸು ತಿನ್ನುವುದು ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನೀವು ಸುಕ್ಕುಗಟ್ಟಿದ, ವಯಸ್ಸಾದ ಚರ್ಮದ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಸ್ವತಂತ್ರ ರಾಡಿಕಲ್ ವಿರುದ್ಧ ಹೋರಾಡುವ ಮತ್ತು ಚರ್ಮವನ್ನು ರಕ್ಷಿಸುವ ಸಿಹಿ ಗೆಣಸು ತಿನ್ನಬೇಕು. ಇದು ಚರ್ಮವನ್ನು ಮೃದುಗೊಳಿಸುತ್ತದೆ. ಮೆಗ್ನೀಸಿಯಮ್ ಹೇರಳ ಈ ಚಳಿಗಾಲವು ದೇಹದಲ್ಲಿ ಮಾತ್ರವಲ್ಲದೆ ಮನಸ್ಸಿನಲ್ಲಿಯೂ ಅನೇಕ ಬದಲಾವಣೆಗಳನ್ನು ತರುತ್ತದೆ. ತಣ್ಣನೆಯ ಗಾಳಿ ಬೀಸಿದಾಗ ಮನೆಯಿಂದ ಹೊರಗೆ ಬರದ…
ಬೆಳಗಾವಿ: ಸಂಬಂಧಿಕರ ಮದುವೆ ಮುಗಿಸಿಕೊಂಡು ವಾಪಸ್ ಮನೆಗೆ ಹೋಗುತ್ತಿದ್ದಾಗ ಟಿಪ್ಪರ್ ಮತ್ತು ಕಾರಿನ ಮಧ್ಯೆ ನಡೆದ ಬೀಕರ ರಸ್ತೆ ಅಪಘಾತದಲ್ಲಿ ಇಬ್ಬರ ಸಜೀವ ಧಹನವಾಗಿರುವ ಘಟನೆ ದೇವಗಿರಿ ಬಂಬರಗಾ ಕ್ರಾಸ್ ಬಳಿ ದುರ್ಘಟನೆ ನಡೆದಿದೆ ಬೆಳಗಾವಿ ತಾಲೂಕಿನ ಬಂಬರಗಾ ಗ್ರಾಮದ ಮೋಹನ್ ಮಾರುತಿ ಬೆಳ್ಗಾಂವಕರ್(24), ಮಚ್ಚೆ ಗ್ರಾಮದ ಬಾಲಕಿ ಸಮಿಕ್ಷಾ ಡಿಯೇಕರ್(12) ಮೃತ ದುರ್ದೈವಿಗಳು. ಸಂಬಂಧಿಕರ ಮದುವೆ ಮುಗಿಸಿಕೊಂಡು ರಾತ್ರಿ ಬಂಬರಗಾ ಗ್ರಾಮಕ್ಕೆ ಬರುವಾಗ ಕಾರು ಮತ್ತು ಟಿಪ್ಪರ್ ನಡುವೆ ಅಪಘಾತ ಆಗಿದೆ. ಬಂಬರಗಾ ಕ್ರಾಸ್ ಬಳಿ ಅಡ್ಡ ಬಂದ ಟಿಪ್ಪರ್‌ಗೆ ಕಾರು ಡಿಕ್ಕಿಯಾಗಿದ್ದು ಅಪಘಾತದ ರಭಸಕ್ಕೆ ಟಿಪ್ಪರ್ ನ ಡಿಸೇಲ್ ಟ್ಯಾಂಕ್ ಒಡೆದು ಹೊತ್ತಿ ಉರಿದಿದ್ದು ಈ ವೇಳೆ ಕಾರಿನಲ್ಲಿದ್ದ ನಾಲ್ವರು ಪೈಕಿ ಇಬ್ಬರು ಸಜೀವ ದಹನ ಆಗಿದ್ದು ಗಂಭೀರ ಗಾಯಗೊಂಡ ಮತ್ತಿಬ್ಬರನ್ನ ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮಹೇಶ್ ಬೆಳ್ಗಾಂವಕರ್ ಮತ್ತು ಸ್ನೇಹಾ ಬೆಳ್ಗುಂದ್ಕರ್ ಗಂಭೀರ ಗಾಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮಾಹಿತಿ ತಿಳಿದು…